Tuesday, 13 June 2017

ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆಗೆ ನೊಂದಾಯಿಸಲು ಮನವಿ.-ಓದಿದ ಮೇಲ್ ಶೇರ್ ಮಾಢಿ ರೈತರಿಗೆ ಅನುಕೂಲವಾಗುತ್ತದೆ

ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆಗೆ ನೊಂದಾಯಿಸಲು ಮನವಿ.

*ಎಸ್.ವೀರಭದ್ರಸ್ವಾಮಿ*


ಚಾಮರಾಜನಗರ. ಜೂನ್-13  -2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ 4 ತಾಲ್ಲೂಕಿನ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಿದ್ದು, ನಿರ್ಧರಿತ ಬೆಳೆಗಳಿಗೆ ಬೆಳೆ ವಿಮೆ ನೊಂದಾಯಿಸಿಕೊಳ್ಳಲು ಕೃಷಿ ಇಲಾಕೆ ಮನವಿ ಮಾಡಿದೆ.

ಮಳೆ ಆಶ್ರಿತ ಉದ್ದು, ಹೆಸರು, ಎಳ್ಳು ಬೆಳೆಗೆ ನೊಂದಾಯಿಸಿಕೊಳ್ಳಲು ಜೂನ್ 30 ಕಡೆಯ ದಿನವಾಗಿದೆ.

ನೀರಾವರಿ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಆಲೂಗೆಡ್ಡೆ, ಈರುಳ್ಳಿ, ಸೂರ್ಯಕಾಂತಿ, ಟೊಮೆಟೋ, ಮಳೆ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ನೆಲಗಡಲೆ (ಶೇಂಗ), ಅಲಸಂದೆ ಬೆಳೆಗೆ ಮತ್ತು ಬದನೆ, ಬೀನ್ಸ್ ಬೆಳೆಗೆ ನೊಂದಾಯಿಸಿಕೊಳ್ಳಲು ಜುಲೈ 15 ಕಡೆಯ ದಿನವಾಗಿದೆ.

ಮಳೆ ಆಶ್ರಿತ ತೊಗರಿ, ಹುರುಳಿ, ಹರಳು ಮತ್ತು ಅರಿಶಿನ ಬೆಳೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕಡೆಯ ದಿನವಾಗಿದೆ.

ನೀರಾವರಿ ಮತ್ತು ಮಳೆ ಆಶ್ರಿತ ಭತ್ತ, ರಾಗಿ ಹಾಗೂ ಮಳೆ ಆಶ್ರಿತ ಹತ್ತಿ, ಅವರೆ ಬೆಳೆಗೆ ನೊಂದಾಯಿಸಿಕೊಳ್ಳಲು ಆಗಸ್ಟ್ 14 ಕಡೆಯ ದಿನವಾಗಿದೆ.

2017ರ ಮುಂಗಾರು ಹಂಗಾಮಿನಲ್ಲಿ ¨ಳೆÉ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಇಲ್ಲವೇ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು