ಎರಡು ವರ್ಷದಲ್ಲಿ 19 ಸಿಬ್ಬಂದಿ ಅಮಾನತು ಮಾಡಿದ ಎಸ್ಪಿ
ವರದಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: *ಹಿಂದಿನ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವದಿಯಲ್ಲಿ ಬರೊಬ್ಬರಿ 19 ಮಂದಿ ಸಿಬ್ಬಂದಿಗಳನ್ನ ಅಮಾನತು ಮಾಡಿದ್ದಾರೆ. *ಕರ್ತವ್ಯಲೋಪದಡಿ 2015 ಮೇ ಅವದಿಯಿಂದ 2012 ರ ಡಿಸೆಂಬರ್ ವರೆಗೆ 5 ಮಂದಿ ,2016 ರಲ್ಲಿ 8 ಮಂದಿ, 2017 ಮೇ ವರೆಗೆ 6 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದ್ದಾರೆ. *ಓರ್ವ ಸಿಪಿಐ, ಮೂರು ಪಿಎಸ್ ಐ,ಒಂದು ಎಎಸ್ ಐ,ಒಂದು ಎಆರ್ ಎಸ್ಐ,ಉಳಿದಂತೆ ಎಪಿಸಿ,ಸಿಪಿಸಿ,ಸಿಎಚ್ ಸಿ,ಸೇರಿರುತ್ತಾರೆ. *ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಟಾದಿಕಾರಿ ಕಛೇರಿಯಲ್ಲಿ ಎರಡು ಆಪ್ತ ಸಹಾಯಕ ಹುದ್ದೆಯಿದ್ದು ಇದರಲ್ಲಿ ಒಂದು ಹುದ್ದೆ ಖಾಲಿ ಇದೆ ಎಂದು ಮಾ.ಹ.ಕಾರ್ಯಕರ್ತ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಪ್ರ.ದ.ಸಹಾಯಕ ಉತ್ತರ ನೀಡಿದ್ದಾರೆ
.ಜೂ. 15ರಂದು ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ವಿತರಣೆ ಅಭಿಯಾನ
ವಿಎಸ್ಎಸ್
ಚಾಮರಾಜನಗರ, ಜೂ. 14– ಸ್ವಚ್ಚಭಾರತ್ ಮಿಷನ್ ಅಡಿ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಪಂಚಾಯತ್‍ಗಳಲ್ಲಿ ಜೂನ್ 15ರಂದು ಏಕಕಾಲಕ್ಕೆ ಕಾರ್ಯಾದೇಶ ವಿತರಿಸುವ ಅಭಿಯಾನವನ್ನು ಜಿಲ್ಲಾ ಪಂಚಾಯತ್ ಏರ್ಪಡಿಸಿದೆ.ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದಡಿ ಶೇ. 100ರಷ್ಟು ಗುರಿ ಸಾಧಿಸುವ ಸಲುವಾಗಿ ಜೂನ್ 15ರಂದು ಬೆಳಿಗ್ಗೆ 6.30 ಗಂಟೆಯಿಂದ ಶೌಚಾಲಯ ನಿರ್ಮಾಣಕ್ಕಾಗಿ ಕಾರ್ಯಾದೇಶ ವಿತರಿಸಲಾಗುತ್ತದೆ.
ಫಲಾನುಭವಿಗಳು ಆಯಾ ಗ್ರಾಮದಲ್ಲೇ ಆಧಾರ್ ಕಾರ್ಡ್, ಪಡಿತರ ಚೀಟ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಿ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಪಡೆಯಬಹುದು.
ಅಭಿಯಾನದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿ ಹಾಜರಿದ್ದು ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ವಹಿಸಲಿದ್ದಾರೆಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ : ನಿಷೇದಾಜ್ಞೆ
ವಿಎಸ್ಎಸ್
ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಆದೇಶ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶ ಹೊರಡಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾಗಿರುವ ಸಿಬ್ಬಂದಿವರ್ಗಕ್ಕೆ ನಿಷೇದಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಕೆ ಓ ಎಸ್ ಪರೀಕ್ಷೆ : ನಿಷೇದಾಜ್ಞೆ ಜಾರಿ
ವಿಎಸ್ಎಸ್
ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಆದೇಶ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮಧ್ಯಾಹ್ನ 1 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶ ಹೊರಡಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮತ್ತು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾಗಿರುವ ಸಿಬ್ಬಂದಿವರ್ಗಕ್ಕೆ ನಿಷೇದಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜೂ. 15ರಂದು ಜಿಲ್ಲೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ
ಚಾಮರಾಜನಗರ, ಜೂ. 14 - ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀಬಾಯಿ ಅವರು ಜೂನ್ 15ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಧ್ಯಾಹ್ನ 1.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಭೇಟಿ ನೀಡಿ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡುವರು. ಮಧ್ಯಾಹ್ನ 3 ಗಂಟೆಗೆ ಗುಂಡ್ಲುಪೇಟೆಗೆ ತೆರಳುವರು. ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
ಜೂ. 22ರಂದು ರಫ್ತು ಜಾಗೃತಿ ಶಿಬಿರ
ಚಾಮರಾಜನಗರ, ಜೂ. 14 :- ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಗ್ರಾನೈಟ್ ಉದ್ಯಮಿಗಳ ಸಂಘ ಮತ್ತು ವರ್ತಕರ ಸಂಘದ ಆಶ್ರಯದಲ್ಲಿ ಕೈಗಾರಿಕೋದ್ಯಮಿ ಹಾಗೂ ವಾಣೀಜ್ಯೋದ್ಯಮಿಗಳಿಗಾಗಿ ರಫ್ತು ಉತ್ತೇಜನ ಕುರಿತು ರಫ್ತು ಜಾಗೃತಿ ಶಿಬಿರವನ್ನು ಜೂನ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ವರ್ತಕರ ಭವನದಲ್ಲಿ ಆಯೋಜಿಸಲಾಗಿದೆ.ಆಸಕ್ತ ಉದ್ದಿಮೆದಾರರು ಶಿಬಿರದ ಪ್ರಯೋಜನ ಪಡೆಯುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲಸೌಲಭ್ಯ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 14 (– ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಲ್ಲಿ ಸಾಲಸೌಲಭ್ಯ ನೀಡುವ ಸಲುವಾಗಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಸ್ವಯಂ ಉದ್ಯೋಗ ಯೋಜನೆ, ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಕಿರು (ಮೈಕ್ರೋ) ಸಾಲ ಮತ್ತು ಸಹಾಯಧನ, ಗಂಗಾಕಲ್ಯಾಣ, ಭೂ ಖರೀದಿ, ಪಶುಸಂಗೋಪನೆ, ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಗೆ ಸಾಲ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸಾಲ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಸಾಲಸೌಲಭ್ಯ ಲಭಿಸಲಿದೆ.
ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಹಾಗೂ ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 81 ಸಾವಿರ ರೂ., ನಗರ ಪ್ರದೇಶದವರಾಗಿದ್ದಲ್ಲಿ 1,03,000 ರೂ. ಮೀರಿರಬಾರದು. (ಅರಿವು ಯೋಜನೆಗೆ ಹೊರತುಪಡಿಸಿ). ಅರ್ಜಿದಾರರು 18 ರಿಂದ 55ರ ವಯೋಮಿತಿಯೊಳಗಿರಬೇಕು.
ವಿಳಾಸ ದೃಢೀಕರಣಕ್ಕಾಗಿ ಆಧಾರ್ ಪ್ರತಿ ಸಲ್ಲಿಸಬೇಕು. ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್ ಹೊಂದಾಣಿಕೆ ಮಾಡಿರಬೇಕು. ಅರ್ಜಿ ನಮೂನೆಯನ್ನು ನಿಗಮದ ವೆಬ್ ಸೈಟ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ ಹಾಗೂ hಣಣಠಿ:/ಞmಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ಕೊಠಡಿ ಸಂಖ್ಯೆ 305)ಗೆ ಜುಲೈ 31ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜೂ. 15ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 14:- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜೂನ್ 15ರಂದು ಗುಂಡ್ಲುಪೇಟೆ ವಿದ್ಯುತ್ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಂಡಿದೆ.ಈ ಹಿನ್ನೆಲೆಯಲ್ಲಿ ಬೊಮ್ಮಲಾಪುರ, ತೆರಕಣಾಂಬಿ, ಹರವೆ, ಹಂಗಳ, ಬೇಗೂರು, ಕಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಬಾಲನ್ಯಾಯ ಮಂಡಳಿ ಸಭೆ
ಚಾಮರಾಜನಗರ, ಜೂ. 14 :- ಬಾಲನ್ಯಾಯ ಮಂಡಳಿಯ ವ್ಯವಹರಣೆ ಹಾಗೂ ಸಭೆ ಕಾರ್ಯಕಲಾಪವು ಜೂನ್ 16ರಿಂದ ಪ್ರತೀ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಬಿ.ಆರ್. ಅಂಬೇಡ್ಕರ್ ಪಾರ್ಕ್ ಹತ್ತಿರವಿರುವ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ನಡೆಯಲಿದೆ.
ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಹಾಗೂ ಬಾಲನ್ಯಾಯ ಮಾದರಿ ನಿಯಮ 2016ರನ್ವಯ 18 ವರ್ಷದೊಳಗಿನ ರಕ್ಷಣೆ ಮತ್ತು ಪೋಷಣೆಗೆ ಅಗತ್ಯವಿರುವ ಮಕ್ಕಳು, ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಹಾಗೂ ಕಾನೂನು ಸಂಪರ್ಕಕ್ಕೆ ಒಳಪಟ್ಟ ಮಕ್ಕಳ ಪುನರ್ವಸತಿಗಾಗಿ ಬಾಲನ್ಯಾಯ ವ್ಯವಸ್ಥೆಯಲ್ಲಿ ಬಾಲನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಬಾಲನ್ಯಾಯ ಮಂಡಳಿಯ ವ್ಯವಹರಣೆ ಹಾಗೂ ಸಭೆ ಕಾರ್ಯಕಲಾಪಗಳನ್ನು ನ್ಯಾಯಾಲಯ ಅಥವಾ ಜೈಲು ಆವರಣವನ್ನು ಹೊರತುಪಡಿಸಿ ಪ್ರತ್ಯೇಕವಾಗಿ ವೀಕ್ಷಣಾಲಯ ಅಥವಾ ಸೂಕ್ತ ಸ್ಥಳಾವಕಾಶವಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಂಡು ನಡೆಸಬೇಕಾಗಿರುವುದು ನಿಯಮಾನುಸಾರ ಅತ್ಯವಶ್ಯಕವಾಗಿದೆ.
ಈ ಸಂಬಂಧ ಸೂಕ್ತ ಸ್ಥಳಾವಕಾಶಕ್ಕಾಗಿ ಬಾಲಕಿಯರ ಸರ್ಕಾರಿ ಬಾಲ ಮಂದಿರ ಹಾಗೂ ಬಾಲಕರ ಸರ್ಕಾರಿ ಬಾಲಮಂದಿರಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸಭೆ ಕಲಾಪಗಳನ್ನು ನಗರದ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕಕ್ಷಿದಾರರು, ವಕೀಲರು, ಪೋಷಕರು ಹಾಗೂ ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಬಾಲನ್ಯಾಯ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment