Thursday, 1 June 2017

01-06-2017 ವಯೋನಿವೃತ್ತಿ ಹೊಂದಿದ ವಾಹನಚಾಲಕರಿಗೆ ಆತ್ಮೀಯ ಬಿಳ್ಕೊಡುಗೆ

ವಯೋನಿವೃತ್ತಿ ಹೊಂದಿದ ವಾಹನಚಾಲಕರಿಗೆ ಆತ್ಮೀಯ ಬಿಳ್ಕೊಡುಗೆ


      ಚಾಮರಾಜನಗರ, ಜೂ. 01 - ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘ ಜಿಲ್ಲಾ ಘಟಕದವತಿಯಿಂದ ನಿನ್ನೆ ವಯೋನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಾಹನಚಾಲಕರಾದ ಕೆ. ಮಣಿ ಹಾಗೂ ರೇಷ್ಮೇ ಇಲಾಖೆಯ ವಿ. ರಾಜನ್ ಅವರನ್ನು ಜಿಲ್ಲಾಡಳಿತ ಭವನದಲ್ಲಿರುವ ವಾಹನ ಚಾಲಕರ ವಿಶ್ರಾಂತಿ ಗೃಹದಲ್ಲಿಂದು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡುಗೆ ನೀಡಲಾಯಿತು.
     ವಾಹನಚಾಲಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಆರ್. ಶ್ರೀನಿವಾಸ್ ಅವರು ಮಾತನಾಡಿ ನಿವೃತ್ತರಾದ ಈ ಇಬ್ಬರು ನೌಕರರು 33 ವರ್ಷಗಳ ಸೇವೆ ಸಲ್ಲಿಸಿದ್ದು, üಯಾವುದೇ ಕಪ್ಪು ಚುಕ್ಕೆ ಇಲ್ಲದ ರೀತಿ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಇಲಾಖೆಯ ಅಧಿಕಾರಿ, ಸಹೋದ್ಯೋಗಿಗಳೊಂದಿಗೆ ಅನ್ಯೋನ್ಯತೆ, ಉತ್ತಮ ಬಾಂಧವ್ಯ ಹೊಂದಿದ್ದರು. ಇವರುಗಳು ಇತರೆ ವಾಹನ ಚಾಲಕರಿಗೂ ಮಾದರಿಯಾಗಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
     ಸಂಘದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸಂಘದ ಪದಾಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ವಾಹನ ಚಾಲಕರು ಇದೇ ಸಂದರ್ಭದಲ್ಲಿ ಹಾಜರಿದ್ದರು.

ಜೂ. 17ಕ್ಕೆ ದೇವರ ದಾಸಿಮಯ್ಯ ಜಯಂತಿ ಆಚರಣೆ ಮುಂದೂಡಿಕೆ

ಚಾಮರಾಜನಗರ, ಮೇ. 31 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜೂನ್ 3ರಂದು ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಜೂನ್ 17ರಂದು ಆಚರಿಸಲು ತೀರ್ಮಾನಿಸಲÁಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು