ಕೆ.ಗುಡಿಯಲ್ಲಿ ಅಪಘಾತ, ಸ್ಥಳದಲ್ಲೆ ಬೈಕ್ ಸವಾರ ಸಾವು
ಪ್ರಶಾಂತ್ |
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಸರ್ಕಾರಿ ಬಸ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳ(ಮೂರು ಕಿ.ಮಿ.ಸಮೀಪ) ದಲ್ಲೆ ಸಾವನ್ನಪ್ಪಿದ್ದಾನೆ.ಸಾವನ್ನಪ್ಪಿದ ದುರ್ದೈವಿ ಪ್ರಶಾಂತ್ ಎಂದು ತಿಳಿದು ಬಂದಿದ್ದು. ಈತ ಹೌಸಿಂಗ್ ಬೋರ್ಡ್ ನಿವಾಸಿ, ಕ್ರಿಸ್ತರಾಜ ಬಾಲರಪಟ್ಟಣ ಶಾಲೆಯ ಶಿಕ್ಷಕ ಮೂರ್ತಿ ಅವರ ಮಗನಾಗಿದ್ದಾನೆಚಾಮರಾಜನಗರ ಇಂದ ಕೆ.ಗುಡಿ ಗೆ ತೆರಳುತ್ತಿದ್ದ 10.15 ರ ಬಸ್ ಗೆ ವಾಹನ ಸವಾರರು ವಾಪಸ್ ಬರುತ್ತಿದ್ದಾಗ ಸರಿ ಸುಮಾರು 10.40 ರ ಸಮಯದಲ್ಲಿ ಬೈಕ್ ಡಿಕ್ಕಿ ಗೆಹೊಡೆದಿದೆ.ಬೈಕ್ ಸವಾರ ಪ್ರಶಾಂತ್ ಸ್ಥಳದಲ್ಲೆ ಸಾವನ್ನಪ್ಪಿದರೆ. ಅಚಿತ್ ಜೈನ್ ಎಂಬುವರಿಗೆ ಗಾಯವಾಗಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
*ಬಂದಾದ ಪೆಟ್ರೊಲ್ ಬಂಕ್, ಗ್ರಾಹಕರ ಪರದಾಟ*
ವರದಿ : *ರಾಮಸಮುದ್ರ ಎಸ್ ವೀರಭದ್ರಸ್ವಾಮಿ*
ಮುಂಜಾನೆಯಿಂದಲೆ ಪೆಟ್ರೊಲ್ ಡಿಸೇಲ್ ಹಾಕಿಸಲು ಬಂದವರಿಗೆ ಬಂದ್ ಬೋರ್ಡ್ ಹಾಕಿದ್ದನ್ನು ನೋಡಿ ದಂಗಾಗಿ ಬೆಸ್ತುಬಿದ್ದಿದ್ದಾರೆ. ಮಾದ್ಯಮಗಳಲ್ಲಿ ಹಿಂದಿನ ದಿನವೇ ಕೆಲವರು ಮಾಹಿತಿ ತಿಳಿದಿದ್ದರಿಂದ ಕಡಿಮೆ ಪ್ರಮಾಣದಲ್ಲಿ ಗ್ರಾಹಕರು ಬರುವುದು ಕಡಿಮೆಯಾಗಿತ್ತು ಎಂದರೆ ತಪ್ಪಾಗಲಾರದು. ಚಾಮರಾಜನಗರ ದ ಪೆಟ್ರೊಲ್ ಬಂಕ್ ಮಾಲೀಕ ಮಾತನಾಡಿ, ಕೇಂದ್ರ ಸರ್ಕಾರ ಆವಾಗಾವಾಗ ತರುವ ಯೋಜನಾ ನೀತಿಗಳು ಮಾಲೀಕರ ಮೇಲೆ ಎನ್ನುವುದಕ್ಕಿಂತ ಗ್ರಾಹಕರ ಮೇಲೆ ಜಾಸ್ತಿ, ಪ್ರತಿನಿತ್ಯ ಗ್ರಾಹಕರೊಡನೆ ಜಗಳವಾಡುತ್ತಾ ನಿಲ್ಲಲಾಗುವುದಿಲ್ಲ ಎಂದರಲ್ಲದೆ ಈ ನೀತಿಯನ್ನ ಕೈ ಬಿಡಬೇಕು ಎಂದು ಆಗ್ರಹಿಸಿದರು.
ವಾಹನ ಸವಾರನೋವರ ವಿನಯ್ ಮಾತನಾಡಿ ಇವರು ಮಾತನಾಡಿ ಏಕಾಏಕಿ ಹಿಂದಿನ ದಿನ ಹೇಳಿದರೆ ನಾವೇನು ಮಾಡೊದು.ಎರಡು ದಿನವಾದರೂ ಮುಂಚಿತವಾಗಿ ತಿಳಿಸಬಾರದಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆ ರಿಲಯನ್ಸ್ ಬಂಕ್ ತೆರೆದಿದ್ದು ಸಿಕ್ಕಾಪಟ್ಟೆ ಜನರ ಸ್ತೋಮವೇ ಸಾಲು ಸಾಲಾಗಿ ನಿಂತಿದೆ
*ಖಾಸಗೀ ಆಸ್ಪತ್ರೆ ವೈದ್ಯರ ಮುಷ್ಕರ, ರೋಗಿಗಳ ಪರದಾಟ*
*ವರದಿ*: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ಕೇಂದ್ರ ಜಾರಿ ತಂದಿರುವ ಖಾಸಗೀ ಆಸ್ಪತ್ರೆ ವೈದ್ಯರ ತಿದ್ದುಪಡಿ ಕಾಯ್ದೆ ೨೦೧೭ ವಿರೋದಿಸಿ ಇಂದು ಚಾಮರಾಜನಗರ ದಲ್ಲಿ ಪ್ರತಿಭಟಿಸಿದರು. ಖಾಸಗೀ ಆಸ್ಪತ್ರೆಗಳನ್ನು ಸುಲಿಗೆ ಕೇಂದ್ರಗಳು, ವೈದ್ಯರನ್ನ ಸುಲಿಗೆಕೋದರು ಎಂದಿರುವುದು ಸರಿಯಲ್ಲ ಎಂದು ಆರೋಪಿಸಿದರು. ಖಾಸಗೀ ಆಸ್ಪತ್ರೆಗಳ ಮೇಲೆ ಸರ್ಕಾರ ಹಿಡಿತ ಸಾದಿಸಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಹುತೇಕ ಸಾರ್ವಜನಿಕರು ಈ ಯೋಜನೆ ನೀತಿ ಬಗ್ಗೆ ದನಾತ್ಮಕ ಅಬಿಪ್ರಾಯ ಹೊಂದಿದ್ದು ಎಲ್ಲಾ ಆಸ್ಪತ್ರೆಗಳಲ್ಲೂ ವೆಚ್ಚದ ವಿವರ ಆಸ್ಪತ್ರೆಗಳಲ್ಲು ನಾಮಪಲಕ ಅಳವಡಿಸುವುದರಿಂದ ಏಕರೂಪ ಶುಲ್ಕ ಹಾಗೂ ಪಾರದರ್ಶಕತೆ ಇರುತ್ತದೆ ಎಂಬ ಅಬಿಪ್ರಾಯ ವ್ಯಕ್ತಪಡಿಸಿದ್ದಾರೆತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಎಸ್ ವೀರಭದ್ರಸ್ವಾಮಿ*
ಜೂನ್ 20ರಂದು ಕೊಳ್ಳೇಗಾಲ, 21ರಂದು ಯಳಂದೂರು, 22ರಂದು ಚಾಮರಾಜನಗರ ಹಾಗೂ 23ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜೂ. 17ರಂದು ನಗರದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ
ಎಸ್ ವೀರಭದ್ರಸ್ವಾಮಿ*
ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಜಾನಪದ ಕಲಾತಂಡಗಳೊಡನೆ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಫಾಟಿಸುವರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು. ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ್‍ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕೊಳ್ಳೇಗಾಲದ ಇಂದ್ವಾಡಿ ಶಿವಣ್ಣ ಅವರು ಮುಖ್ಯ ಭಾಷಣ ಮಾಡುವರು. ದೊಡ್ಡಿಂದುವಾಡಿಯ ವಿದ್ವಾನ್ ಮಹಾಂತಯ್ಯ ಮತ್ತು ತಂಡದಿಂದ ವಚನ ಗಾಯನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆ. 25ರೊಳಗೆ ವಾರ್ಷಿಕ ಮಹಾಸಭೆ ನಡೆಸಲು ಸಹಕಾರ ಸಂಘಗಳಿಗೆ ಸೂಚನೆ
ಎಸ್ ವೀರಭದ್ರಸ್ವಾಮಿ*
ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ನಿಯಮಗಳು 1960ರ ನಿಯಮ 14 (ಎಜೆ) ಪ್ರಕಾರ 2016-17ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಬೇಕು. ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಬೇಕು.
ಇಲ್ಲವಾದಲ್ಲಿ ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಾದ ಪಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ತಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಶಿಕ್ಷೆ
ಎಸ್ ವೀರಭದ್ರಸ್ವಾಮಿ*
ಕೊಳ್ಳೇಗಾಲ ತಾಲೂಕಿನ ಮರಿಯಾಪುರ ಗ್ರಾಮದ ಮಹೇಶ ಅಲಿಯಾಸ್ ಸಾಲ್ಡು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಕಳೆದ 2015ರ ಅಕ್ಟೋಬರ್ 2ರಂದು ಸುಮಾರು ರಾತ್ರಿ 7.15ರ ಸಮಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹೇಶ ಅಲಿಯಾಸ್ ಸಾಲ್ಡುಗೆ ಐಪಿಸಿ ಕಲಂ 354(ಎ) ಮತ್ತು ಪೋಕ್ಸೋ ಕಾಯಿದೆ ಕಲಂ 8ರ ಅಡಿಯಲ್ಲಿ 2 ವರ್ಷಗಳ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್.ನಾಗರಾಜು ಕಾಮಗೆರೆ ವಾದ ಮಂಡಿಸಿದ್ದರು.
ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿಗೆ ಸಜೆ
ಎಸ್ ವೀರಭದ್ರಸ್ವಾಮಿ*
ಹನೂರು ಭಾಗದ ಗುಂಡಿಮಾಳ ಗ್ರಾಮದ ಸದಾಶಿವ ಶಿಕ್ಷೆಗೆ ಗುರಿಯಾದವರು. ಈತ ತನ್ನ ಜಮೀನಿನಲ್ಲಿ ಜೋಳದ ಫಸಲಿನ ಜತೆ ಸುಮಾರು 15 ಕೆಜಿ ತೂಕವುಳ್ಳ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದು 2013ರ ನವೆಂಬರ್ 11ರಂದು ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಸದಾಶಿವನಿಗೆ 2 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ಜಮೀನಿನ ವಿದ್ಯುತ್ ತಂತಿಗೆ ಸಿಲುಕಿ ಆನೆ ಸಾವು : ಇಬ್ಬರಿಗೆ ಸಜೆ
ಎಸ್ ವೀರಭದ್ರಸ್ವಾಮಿ*
ಹನೂರು ಭಾಗದ ಯರಗಾಬಾಳು ಗ್ರಾಮದ ತಮ್ಮ ಜಮೀನಿನಲ್ಲಿ ಸಿದ್ದಮರಿ ಹಾಗೂ ಸಿದ್ದಲಿಂಗು ಎಂಬುವರು ತಮ್ಮ ಜಮೀನಿನ ಬೆಳೆ ರಕ್ಷಣೆಗಾಗಿ ಮರದ ಗೂಟಗಳನ್ನು ನೆಟ್ಟು ಜಿಂಕ್ ವೈರ್ ಸುತ್ತಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಗಂಡಾನೆಯೊಂದು ಈ ಜಮೀನಿನ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿದ್ದಮರಿ ಹಾಗೂ ಸಿದ್ದಲಿಂಗುವಿಗೆ 3 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನÀ
ಎಸ್ ವೀರಭದ್ರಸ್ವಾಮಿ*
ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಪ್ರವರ್ಗ-1, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ 2.5 ಲಕ್ಷ ರೂ. ಆಗಿದೆ. ಪ್ರವರ್ಗ 2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂ. ಆಗಿದೆ.
ವೆಬ್ ಸೈಟ್ ತಿತಿತಿ.bಚಿಛಿಞಛಿಟಚಿsses.ಞಚಿಡಿ.ಟಿiಛಿ ನಲ್ಲಿ ಅರ್ಜಿ ಸಲ್ಲಿಕೆ ಹಾಗೂ ವಿದ್ಯಾರ್ಥಿನಿಲಯಗಳ ವಿವರ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಜುಲೈ 12 ಕಡೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bಛಿತಿhosಣeಟಚಿಜಜmissioಟಿ@gmಚಿiಟ.ಛಿom ಗೆ ಇ ಮೇಲ್ ಮುಖಾಂತರ ಅಥವಾ ಜಿಲ್ಲಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅವರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ 08226-223180 ಹಾಗೂ 080-65970006 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜೂ. 19ರಂದು ವಿಶೇಷ ಚೇತನರ ಕುಂದುಕೊರತೆ ಸಭೆ
ಎಸ್ ವೀರಭದ್ರಸ್ವಾಮಿ*
ಕುಂದುಕೊರತೆಗಳಿದ್ದಲ್ಲಿ ಸಭೆಯಲ್ಲಿಯೇ ನೇರವಾಗಿ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬಹುದು. ತಾಲೂಕಿನ ವಿಶೇಷಚೇತನರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಮಾಹಿತಿಗೆ ರಾಜೇಶ್ ಮೊಬೈಲ್ 8105720709 ಮತ್ತು 08226-222603 ಮತ್ತು 223688 ಸಂಪರ್ಕಿಸುವಂತೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಪ್ರಕಟಣೆಲ್ಲಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಕ್ಕೆ ಅಡುಗೆಯವರು, ಅಡುಗೆ ಸಹಾಯಕರ ಹುದ್ದೆ ಅಭ್ಯರ್ಥಿಗಳಿಗೆ ದಾಖಲಾತಿ ಹಾಗೂ ಪ್ರಾಯೋಗಿಕ ಪರೀಕ್ಷೆ
ಎಸ್ ವೀರಭದ್ರಸ್ವಾಮಿ*
ಅಡುಗೆಯವರ ಹುದ್ದೆಗೆ ಜೂನ್ 22ರಂದು ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಜೂನ್ 23ರಂದು ದಾಖಲಾತಿ ಪರಿಶೀಲನೆ ನಡೆಸಲಾಗುವುದು. ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಯನ್ನು ಅಡುಗೆಯವರಿಗೆ ಜೂನ್ 28ರಂದು ಹಾಗೂ ಸಹಾಯಕರಿಗೆ ಜೂನ್ 29ರಂದು ನಡೆಸಲಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 3ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳಿಗೆ ಸಮಜಾಯಿಸಿ ನೀಡಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಜುಲೈ 18ರಂದು ಹೊರಡಿಸಲಾಗುವುದು.
ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದಂತೆ 1:5 ಅನುಪಾತದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ ತಿತಿತಿ.hಣಣಠಿ://ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ನಲ್ಲಿ ದಾಖಲಾತಿ ಪರಿಶೀಲನೆಗೆ ಕಾಲ್‍ಲೆಟರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. 08226-222180 ಸಂಪರ್ಕಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.
No comments:
Post a Comment