ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಒಳ್ಳೆಯವರಲ್ಲ, ( ತಪ್ಪು ಮಾಡಿದವರ ಪಾಲಿಗೆ), ಪೋನ್ ಟ್ಯ್ರಾಪ್ ಮಾಢುತ್ತಿದ್ದು ಕಳ್ಳಾಟ ಆಡುತ್ತಿದ್ದವರದ್ದೋ ಹೊರತು ಪ್ರಾಮಾಣಿಕರದ್ದಲ್ಲ.!
ಚಾಮರಾಜನಗರದಿಂದ ವಿಜಯಪುರಕ್ಕೆ ತೆರಳಿದ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವರ ಬಗ್ಗೆ ನನ್ನ
ಮನದಾಳದ ಮಾತು…………ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಸುಮಾರು ವರ್ಷಗಳ ಕಾಲ ಮೊಕ್ಕಂ ಹೂಡಿದ್ದ ಚಾಲಕರ ವರ್ಗಾವಣೆ, ಅದಿಕಾರಿಗಳ ವರ್ಗಾವಣೆ ನಡೆಯಿತು. ಬಹುಶಃ ಇದು ಜನಸಾಮಾನ್ಯರಿಗೆ ಗೊತ್ತಾಗದ ವಿಚಾರ ಯಾಕೆಂದ್ರೆ ಯಾರು ಆ ಕಡೆ ಹೋಗುವುದಿಲ್ಲ. ಯಾರು ಅತ್ತ ಸುತ್ತಾಡುತ್ತಾರೋ ಅವರಿಗೆ ಮಾತ್ರ ಇದೆಲ್ಲವೂ ಗೊತ್ತಾಗುತ್ತದೆ. ಇದೂ ಕೂಡ ಎಸ್ಪಿ ಸರಿಯಿಲ್ಲ ಎನ್ನುವುದಕ್ಕೆ ಕಾರಣವಾಯಿತು.
ಆಡಳಿತದಲ್ಲಿ ಸುದಾರಣೆ ತರುವುದಕ್ಕೆ ಅದೆಷ್ಟೋ ಸಿಬ್ಬಂಧಿಗಳು ಎಲ್ಲಲ್ಲಿ ಜಗಳವಾಡಿದರು ಏನೇನೂ ಎಂಬುದು ಮಾತ್ರ ಅಮಾನತುಗೊಂಡ ಸಿಬ್ಬಂದಿಗಳಿಗೆ ಗೊತ್ತು ಇವರು ಕೆಟ್ಟವರು ಎಂಬುದು.
ವರ್ಗಾವಣೆ ರದ್ದು ಮಾಡೋಕೆ ಅಮ್ಮನ ಕಳಿಸಿದಾ ಪುಣ್ಯವಂತರು: ಅದೇಷ್ಟೋ ಪೇದೆಗಳು ವರ್ಗಾವಣೆಯಾದನ್ನು ಸಹಿಸಿಕೊಳ್ಳದೆ ಅದನ್ನು ರದ್ದು ಮಾಡಿಕೊಳ್ಳಲು ತಾಯಿಯ ಅನಾರೋಗ್ಯ ಉದಾಹರಣೆ ಕೊಟ್ಟು ಕಳುಸಹಿಸಿದರು. ಅಲ್ಲಿಗೆ ನನ್ನ ದೂರಿಗೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಹೋಗಿದ್ದೆ ಆವಾಗ ಆ ತಾಯಿಯೂ ಬಂದರು….. ಏನು ಹೇಳಿ ಅಮ್ಮ ಎಂದು ಪ್ರೀತಿಯಿಂದಲೋ ತಾಯಿಯ ಮೇಲಿನ ಗೌರವದಿಂದಲೋ ಪ್ರಶ್ನೆ ಕೇಳಿದರು. ಆಕೆ ಸ್ವಾಮಿ ನನಗೂ ಉಷಾರಿಲ್ಲ, ನನ್ನ ಮಗನಿಗೂ ಉಷಾರಿಲ್ಲ ಅವನ್ನ ಬೇರೆ ಕಡೆ ಹಾಕಿದ್ದೀರಂತೆ ಹೋಗಿ ಬರಲು ದೂರ ಆಗುತ್ತದೆ ಎಂದರು. ಅದಕ್ಕೆ ಎಸ್ಪಿ ನನ್ನಿಂದ ಏನು ಆಗಬೇಕು ಹೇಳಿ ಅಮ್ಮ ಎಂದರು.
ಅಮ್ಮ ಏನು ಇಲ್ಲ ಅವರನ್ನು ಮತ್ತೆ ಅಲ್ಲಿಗೆ ಹಾಕಿ ಎಂದರು.ಕೆಲಸ ಮಾಢೋಕೆ ಎಲ್ಲಿ ಆದರೆ ಏನಂತೆ, ಮಗ ಬರುವುದು ಬಿಟ್ಟು ನಿಮ್ಮನ್ನ ಕಳುಹಿಸಿದ್ದನಾ, ಏನಾಗಿದೆ ಬರಲು ಎಂದರು ಆಕೆ ಮಗನಿಗೆ ಉಷಾರಿಲ್ಲ ಎಂದುದ್ದಕ್ಕೆ ಆಸ್ಪತ್ರೆಗೆ ತೋರಿಸಿ ಆತನನ್ನ ಬರಲು ಹೇಳಿ ಎಂದರಷ್ಟೇ ಆಕೆ ಕೈ ಮುಗಿದು ಹೋದರು ಇದು ಇಂತಹವರ ಪಾಲಿಗೆ ಕೆಟ್ಟವರೂ ಆದರು ಆಗಲೇಬೇಕಾಗಿದೆ.
ಇದು ಕೇವಲ ಆ ತಾಯಿಯ ಕಥೆಯಷ್ಟೇ ಅಲ್ಲ ರಾಜಕೀಯದವರು ಕೊಟ್ಟ ಒತ್ತಡ ಪತ್ರವನ್ನು ಪೇದೆಯೋರ್ವರ ಸಮ್ಮುಖದಲ್ಲೇ ಹರಿದು ಹಾಕಿದ ಬೈಯ್ದು ಕಳುಹಿಸಿದ ಘಟನೆಯೂ ಮರೆಯುವಂತಿಲ್ಲ.
ಅದಿಕಾರಿಗಳನ್ನು ಉತ್ತಮರು ಕೆಲಸಗಾರರು ಎಂಬುದನ್ನು ಕೆಲಸ ಮಾಡಿ ತೋರಿಸಿದಾಗ ಅವರನ್ನು ಹೊಗಳಬೇಕು ಅದು ಬಿಟ್ಟು ಕೆಲಸ ಗೊತ್ತಿಲ್ಲದ , ಕಾಗುಣಿತ ಗೊತ್ತಿಲ್ಲದ ಇವರಿಂದ ಉಪಯೊಗವಾದ ಪತ್ರಕರ್ತರು ಇವರು ಸರಿಯಿಲ್ಲ ಎಂದರು. ದುರಂತ ಎಂದರೆ. ಅವರ ಬಗ್ಗೆ ಮಾನದಂಡ ಪತ್ರ ನೀಡಲು ಪತ್ರಕರ್ತರು ಯಾರು, ಇವರು ಆಕಾಶದಿಂದ ಇಳಿದು ಬಂಧವರೇ? ಎಂಬುದು ಅವರಿಗೆ ಗೊತ್ತಿಲ್ಲ
ಸ್ವಲ್ಪ ಇಂಟರೆಸ್ಟಿಂಗ್ ಕಥೆ..------------
ಎಸ್ಪಿ ಜೈನ್ ಅವರು ಎಲ್ಲಾ ಪೇದೆಗಳ ನಂಬರ್ ಅನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಲಾರಂಬಿಸಿದರು. ಆದರೆ ಇಲಾಖಾ ಮಾಹಿತಿ ಸೋರಿಕೆಯಾಗಂತೆ , ಇಲಾಖಾ ಮಾಹಿತಿ ಯಾರು ಹೊರಗಡೆಗೆ ಕೊಡುತ್ತಿದ್ದಾರೆ. ಇಲಾಖೆಯಲ್ಲಿನ ಸಿಬ್ಬಂದಿಗಳು ಅಕ್ರಮ ದಂದಗೆ ಸಾಥ್ ನೀಢುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ರಣ ತಂತ್ರವನ್ನೆ ಹೆಣದಿದ್ದರು ಎಂದರೆ ತಪ್ಪಾಗಲಾರದು. ಸಹಕಾರ ಕೊಡಬೇಕಾದ ಕೆಲ ಮಾದ್ಯಮದವರು ಇವರನ್ನು ವಿರೋದಿಯಾಗಿ ಕಾಣಲಾರಂಬಿಸಿದರು.
ವಯೋವೃದ್ದರು ದೂರುಗಳಿಗೆ ಮೊದಲ ಮನ್ನಣೆ: ಹೌದು ಬಹಿರಂಗ ಸವಾಲು ಎಂದರೆ ಸರಿಯೇ ನಾನೇ ಹೇಳುತ್ತೇನೆ. ಠಾಣೆಗಳಿಗೆ ಹೋಗಬೇಕಾದ ಅದೇಷ್ಟೋ ದೂರುದಾರರು ಜಿಲ್ಲಾ ಎಸ್ಪಿ ಅವರನ್ನೆ ನೋಡಿ ದೂರು ಕೊಡಲಾರಂಬಿಸಿದರು. ಅದರಲ್ಲೂ ವಯೋವೃದ್ದು ಜಾಸ್ತಿ ಆಗುತ್ತಿದ್ದು ಮಾತ್ರ ವಿಪರ್ಯಾಸವೇ ಸರಿ. ಅವರಿಗೆ ಅಲ್ಲಿ ಗೊತ್ತಾಗಿದ್ದು ಜನರೊಂದಿಗೆ ಆರಕ್ಷಕರು ಯಾವ ತರಹ ಇದ್ದಾರೆ ಎಂಬುದು. ಪ್ರತಿ ಸಭೆಯಲ್ಲೂ ಅವರಿಗೆ ಆದ ಮಾರ್ಗದರ್ಶನ ನೀಡುತ್ತಿದ್ದರು. ತಾಳ್ಮೆಯಿಂದ ಸೌಜನ್ಯದಿಂದ ವರ್ತಿಸಿ ಸ್ಪಂದಿಸಿ ಎನ್ನುತ್ತಿದ್ದರು.
ಎಸ್ಪಿ ಕಚೇರಿಯಲ್ಲಿರುವ ಸಂದರ್ಶಕರ ಪುಸ್ತಕ ಒಮ್ಮೆ ನೋಡಿದರೆ ಸಾಕು ಬೆಚ್ಚಿ ಬೀಳ್ತೀರಾ, ಯಾವ ಘಟನೆಗೆ, ಯಾರ ವಿರುದ್ದ, ಯಾಕೆ ದೂರು ಕೊಡೊಕೆ ಹೋಗಿದ್ದರು ಎಂಬ ಮಾಹಿತಿ ಆಯಾ ದಿನದ ವಿವಿದ ಪುಸ್ತಕದಲ್ಲಿ ನೊಂದಾಯಿಸುತ್ತಿದ್ದರು. ಇದನ್ನು ಬಹುಶಃ ಯಾರು ಮಾಡಲಿಕ್ಕೆ ಸಾದ್ಯವಿಲ್ಲ ಎಂದರೆ ತಪ್ಪಾಗಲಾರದು.
ಅರೇ ಇಷ್ಟೇಲ್ಲ ಎಸ್ಪಿ ಅವರನ್ನು ಹೊಗೊಳೋಕೆ ಏನೋ ಬೆನಿಫಿಟ್ ಪಡೆದುಕೊಂಡಿರಬೇಕು ಅದಕ್ಕೆ ಇದೆಲ್ಲಾ ಅಂದುಕೊಂಡಿದ್ದರೆ ನಿಮ್ಮಂತಹ ಶತಮೂರ್ಖರು ಬೇರೆ ಯಾರು ಇಲ್ಲ. ಮೇಲಿನವರಂತೆ ನೋಡಿದರೆ ನನಗೂ ಒಳ್ಳೆಯವರೇ ಅಲ್ಲ. ಆದರೆ ನಾನು ಮೂರ್ಖನಾಗುವುದಿಲ್ಲ ಕಾರಣ ನ್ಯಾಯಾಲಯದಲ್ಲಿ ಸಮರ ಸಾರಿದ್ದೇನೆ… ನನ್ನ ಕಥೆ ಹೇಳಲೇ ಬೇಕು…ಕೇಳಿಯೇ ಬಿಡಿ..ಅನಿವಾರ್ಯ………………..
ಒಮ್ಮೆ ಚೆಕ್ ಪೋಸ್ಟ್ ಅಲ್ಲಿ ಪೇದೆಯೋಬ್ಬ…… ಮಹತ್ಕಾರ್ಯ ಮಾಢುತ್ತಿದ್ದ ಇದರಿಂದ ಪ್ರಶ್ನೆಗೆ ಪ್ರಶ್ನೆ ಬೆಳೆದು ಇಬ್ಬರಿಗೂ ಗಲಾಟೆ ಆಗಿ ಒಂದು ಹಂತ ತಲುಪಿತು. ( ಈಗ ಪ್ರಕರಣ ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ನಡೆಯುತ್ತಿದೆ.) ಆ ಪೇದೆ ಹೇಳಿದ್ದು ಒಂದೆ ಮಾತು ಪತ್ರಕರ್ತರ ಬಂಡವಾಳ ಗೊತ್ತಿಲ್ಲವಾ ಅಷ್ಟು ಇಷ್ಟುಕ್ಕೆ ನಿಂತ್ಕೋತೀರಾ ಅಂತ.. ನನಗೆ ಅದರ ಬಗ್ಗೆ ಏನು ಅನಿಸಲಿಲ್ಲ. ಯಾಕೆಂದ್ರೆ ಅದು ಸತ್ಯವಾದ ಮಾತಾಗಿತ್ತು. ಕೆಲವರು ಎರಡಂಕಿ ದಾಟದ ಹಣವನ್ನು ಅದಿಕಾರಿಗಳಿಂದ ಪಡೆಯೋ ವಿಚಾರ ನೇರವಾಗಿ ಹೇಳುತ್ತಿದ್ದಾರೆ. ನನಗೆ ಬೇಡವಾದ ವಿಚಾರ ನನ್ನ ಕೆಲಸ ನಾನು ಮುಗಿಸಬೇಕು ಎಂದು ನನ್ನ ದಾರಿ ಹಿಡಿದೆ.
ಆ ಘಟನೆ ವೇಳೆಯಲ್ಲಿ ನಷ್ಟದ ಮೊತ್ತವನ್ನು ಭರಿಸಿಕೊಡಿ ಎಸ್ಪಿ ಸಾಹೇಬ್ರೆ ಅಂದ್ರೆ ಹೇಗೆ ಬರುತ್ತೆ.? ನಿಮಗೆ ಗೊತ್ತಿದಿಯಲ್ಲ. ಯಾವುದರಿಂದ ಕೊಡೋದು ಅಂತ ಅರ್ಜಿ ಪಕ್ಕಕ್ಕೆ ಇಟ್ಟರು. ದೈರ್ಯಗುಂದಲಿಲ್ಲ. ಹಾಗಾಂತ ಕೆಟ್ಟವರು ಎಂದುಕೊಳ್ಳಲಿಲ್ಲ.ನಾನು ಕಾನೂನು ಸಮರ ಮೊದಲೇ ಸಾರಿದ್ದೇ ಅದರ ಮೂಲಕ ಹೋರಾಟ ಮಾಡೋಣ ಅಂತ ನಿಂತೆ. ಆದರೆ ದೇವರು ತಪ್ಪು ಮಾಡಿದ ಪೇದೆಗಳಿಗೆ ಕಣ್ಣೇದುರೇ ಇಲಾಖೆ ಶಿಕ್ಷೆ ವಿದಿಸಿತ್ತು. ಪರಿಹಾರ ಮರೀಚಿಕೆ ಆಯ್ತು.
ಬಹುತೇಕ ಎಲ್ಲರೂ ನನ್ನನ್ನು ಪೋಲಿಸ್ ವಿರೋದಿ ಎನ್ನುತ್ತಿದ್ದೀರಲ್ಲ. ಒಮ್ಮೆ ಯೋಚಿಸಿ. ನನ್ನ ಎಲ್ಲಾ ವಾಹನದ ದಾಖಲೆಗಳು ಸರಿಯಿದ್ದರೂ ಇಲ್ಲ ಎಂದು ದಂಡ ಹಾಕಿದರಿ. ಹೋಗಲಿ ತಪ್ಪಿದೆ ಒಪ್ಪಿಕೊಳ್ಳುತ್ತೇನೆ. ಹಾಗಾಂತ ಕೆಟ್ಟದಾಗಿ ಪದ ಬಳಕೆ ಮಾತನಾಡುವ ಅದಿಕಾರ ಕೊಟ್ಟವರ್ಯಾರು.? ಹೋಗಲಿ ನೀವು ನಿಮ್ಮಲ್ಲಿರುವ ವಾಹನದ ಬಗ್ಗೆ ಕೇಳಿದರೆ ನೀವು ಸಮರ್ಪಕ ದಾಖಲೆ ನನಗೆ ಬೇಡ ನಿಮ್ಮ ಮೇಲಾದಿಕಾರಿ ಅದೂ ಎಸ್ಪಿ ಅವರ ಮುಂದೆ ಇಡುವ ಶಕ್ತಿ ನಿಮಗೆ ಇದಿಯೇ? ಯೋಚಿಸಿ.
ಪೋಲೀಸ್ ಪೇದೆ ಸಿದ್ದಪ್ಪಾಜಿ ಮೇಲೆ ಅಂದು ಹಲ್ಲೆ ನಡೆದಾಗ ಅವರ ರಕ್ಷಣೆಗೆ ಯಾವ ಪೇದೆಗಳು, ಸಿಬ್ಬಂದಿಗಳು ನಿಂತುಕೊಂಡಿರಾ.? ( ಓರ್ವ ಸಬ್ ಇನ್ಸ್‍ಪೆಕ್ಟ್‍ರ್ ಅವರನ್ನು ಬಿಟ್ಟು) ನಾನು ಹಾಕಿದ ಸುದ್ದಿಯನ್ನು ಸುಳ್ಳಾಗಿಸಲು ಹೋದ ಅದೇಷ್ಟೋ ನಾಚಿಕೆಗೆಟ್ಟ ಮಾದ್ಯಮಗಳು, ನಿಮ್ಮ ಇಲಾಖೆಯಲ್ಲಿನ ಹಿರಿಯ ಅದಿಕಾರಿಗಳು. ನಾನು ಆ ಪೇದೆಯ ಪರವಾಗಿ ಹೋರಾಡಿದ್ದೇ ತಪ್ಪಾಯಿತು ಎಂದನಿಸಿದೆ ಬಹುಶಃ ಇನ್ನು ಇಂತಹ ಪ್ರಕರಣ ಕಣ್ಣೆದುರೇ ನಡೆಯುತ್ತಿದೆ ಎಂಬುದು ಮರೆಯದಿರಿ..ಆಗಲೂ ನಾನು ನಿಮ್ಮ ವಿರೋದಿಯಲ್ಲವೆ ನಿಮಗೆ ಒಳ್ಳೆಯದು ಮಾಡಿದರೆ ಸಾಕು ಬೇರೆಯವರಿಗೆ ಏನಾದರೂ ಆಗಲಿ ಎನ್ನುವ ನೀನು ಇತ್ತೀಚೆಗೆ ನಡೆದ ಪ್ರಕರಣದಲ್ಲಿ ಪೇದೆ ಶಂಕರ್ ಪ್ರಕರಣದಲ್ಲಿ ಏನು ಬೆಂಬಲ ಕೊಟ್ಟೀರಿ.?
ನಾನು ಮೂಗಿನ ನೇರವಾಗಿ ಮಾತಾಡಿಯೇ ನಿಮ್ಮ ಎದುರು ಕೆಟ್ಟವನಾಗಿದ್ದೇನೆ ಅದರಂತೆ ಎಸ್ಪಿ ಅವರು ನೇರವಾಗಿ ಮಾತಾಡಿ ಕೆಟ್ಟವರಾಗಿದ್ದಾರೆ. ಅದರಂತೆ ನಿನಗೆ ನೀವು ಅಂದುಕೊಂಡಂತೆ ನಡೆದುಕೊಂಡರೆ ಒಳ್ಳೆವರು ಇಲ್ಲವಾದರೆ ಕೆಟ್ಟವರು ಎನ್ನುವ ನಿಮಗೆ ಒಂದು ನಂಬಲಾಗದ ಮಾಹಿತಿ ಹೇಳುತ್ತೇನೆ ಕೇಳಿ. ಅದು ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಇದು ಕೇವಲ ಒಂದಿಬ್ಬರು ಪೇದೆಗಳಿಗೆ ಮಾತ್ರ ಗೊತ್ತು..
ಇತ್ತೀಚೆಗೆ ಸಂಬಳ ಆಗಿಲ್ಲ ತಿಂಗಳ ಕಳೆದು 15 ದಿನ ಆಗಿದೆ ಎಂದು ಹೇಳುತ್ತಿದ್ದರೆ ಹೊರತು ಮೇಲಾದಿಕಾರಿ ಗಮನಕ್ಕೆ ಯಾರು ತರಲಿಲ್ಲ. ಕೇಳಿದರೆ ಅವರಿಗೇನು ಗೊತ್ತಿಲ್ಲವೇ ಎನ್ನುತ್ತಿದ್ದವರೆಷ್ಟೋ? ಬಹುಶಃ ನಿಮಗಿದು ತಿಳಿದಿರಲಿ. ಆ ಸಮಯದಲ್ಲಿ ಚುನಾವಣೆ ಕಾವು, ಬೇರೆ ಕೆಲಸಗಳ ಒತ್ತಡದಲ್ಲಿ ಇದು ಯಾವುದನ್ನು ನೋಡಿರಲಿಲ್ಲ. ಹೇಗೋ ನಮ್ಮ ಕೆಲಸ ಮಾಡಬೇಕಲ್ಲ. ಮಾಡಲು ಮುಂದಾದೆನು. ಅವರಿಗೆ ಅದರ ಬಗ್ಗೆ “ ಸರ್ ನಿಮ್ಮ ಕಚೇರಿಯಲ್ಲಿನ ಸಿಬ್ಬಂದಿಗಳಿಗೆ ಸಂಬಳ ಮಾಡಿದ್ದೀರಿ, ಇತರ ಸಿಬ್ಬಂದಿಗಳಿಗೆ ಸಂಬಳ ಯಾಕೆ ವಿಳಂಬವಾಗುತ್ತಿದೆ ಎಂದು ಮಾಹಿತಿ ಕೇಳಿ ಪೊನ್ ಕಟ್ ಮಾಡಿದೆ ಅಷ್ಟೇ..
ಕೇಳಿ 5 ನಿಮಿಷವೂ ಆಗಿಲ್ಲ ಅತ್ತ ಎಸ್ಪಿ ಅವರು ಕರೆ ಮಾಡಿ ಒಂದೇ ಪದ ಹೇಳಿದ್ದು, “ಹೋ ಆಗೀದಿಯಪ್ಪಾ” ಅಂತಷ್ಟೇ ಹೇಳಿ ಕಟ್ ಮಾಡಿದರು. ಸಂಜೆ ವೇಳೆಗೆ ಆರಕ್ಷಕ ಸ್ನೇಹಿತರು ಸರ್ ಆಯಿತು ಥ್ಯಾಂಕ್ಯು ಸರ್ ಎಂದರು, ಅದು ಸಲ್ಲಬೇಕಾದ್ದು ನನಗಲ್ಲ ಎಎಸ್ಪಿ ಅವರಿಗೆ, ಇದರಲ್ಲಿ ನನ್ನ ಪಾತ್ರ ಇಲ್ಲ. ಎಲ್ಲವೂ ಅವರದ್ದು ಎಂದಷ್ಟೇ? ಇಲ್ಲಿಯೂ ಯಾರೋ ಮಾಡಿದ ತಪ್ಪಿಗೆ ಅವರು ಎಲ್ಲರಿಂದಲೂ ಕೆಟ್ಟ ಮಾತು ಕೇಳಬೇಕಾಯಿತು.
ಕೊನೆಯಲ್ಲಿ ವಿನಮ್ರವಾಗಿ ಕೇಳಿಕೊಳ್ಳೋದು ಒಂದೆ, ಶಿಕ್ಷಕರು ಉತ್ತಮ ಬದುಕು ಜೀವನ ನಡೆಸಲು ಶಿಕ್ಷಣ ನೀಡುತ್ತಾರೆ ಅದನ್ನು ಕಲಿಯದೇ ಇದ್ದಲ್ಲಿ ಅವರಿಗೆ ಶಿಕ್ಷೆಯನ್ನೂ ನೀಡಬೇಕಾಗುತ್ತದೆ ಅದು ಎಲ್ಲರಿಗೂ ತಿಳಿದ ವಿಚಾರ ಹಾಗಿಯೇ ತಪ್ಪು ಮಾಡಿದ ಅದೇಷ್ಟೋ ಸಿಬ್ಬಂದಿಗಳು ಕೆಟ್ಟದ್ದಾಗಿ ಮಾತನಾಡೋದು ಬಿಟ್ಟು ಉತ್ತಮವಾಗಿ ಕೆಲಸ ಮಾಡಿ ನಮ್ಮ ತನ, ತಮ್ಮ ಜನ ಎಂದು ಬಾಳೋಣ…..
ಕ್ಷಮೆಯಿರಲಿ….( ನೋವಾಗುವ ಪದಗಳು ನಿಮಗೂ ಕಾಣಿಸುತ್ತವೆ)
.ತಪ್ಪು ಮಾಢದವನು ಯಾರು ಇಲ್ಲ, ಮಾಡದೇ ಇರುವವನು ಯಾರು ಇಲ್ಲ.!
***************************************************************************
No comments:
Post a Comment