ಶಶಿಕುಮಾರ್‍ನಿಗೆ ಮತ್ತೆ ಒಲಿದು ಬಂದ ಶೌರ್ಯಪ್ರಶಸ್ತಿ
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ (ಯಳಂದೂರು) ಜೂ 22 :- ಜಿಲ್ಲೆಯ ಯಳಂದೂರು ತಾಲ್ಲೂಕಿನ ಸಮೀಪದ ಗೂಳಿಪುರ ಗ್ರಾಮದ ನಿವಾಸಿ ನಾ.ಮಂಜುನಾಥಸ್ವಾಮಿ ಹಾಗೂ ಗಾಯತ್ರಿ ಎಂಬ ದಂಪತಿಗಳ ಪುತ್ರ ಜಿ.ಎಂ.ಶಶಿಕುಮಾರ್‍ನಿಗೆ ಖಾಸಗೀವಾಹಿನಿಯು ಕೊಡುತ್ತಿರುವÀ 2017 ನೇ ಸಾಲಿನ ಶೌರ್ಯಪ್ರಶಸ್ತಿ ಈ ಬಾರಿಯೂ ಲಭಿಸಿದೆ.2016-17ನೇ ಸಾಲಿನಲ್ಲಿ ತನ್ನ ಸಹಪಾಠಿಗಳೊಂದಿಗೆ ಶಾಲಾಬಸ್‍ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮಕ್ಕಳನ್ನು ರಕ್ಷಿಸಲು ತೋರಿದ ಧೈರ್ಯ, ಸಾಹಸ, ಸಮಯ ಪ್ರಜ್ಞೆಗಾಗಿ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಳೆದ ಬಾರಿ ಶಶಿಕುಮಾರ್ ಭಾಜನನಾಗಿದ್ದರು ಆದರೆ ಈಗ 2017/18 ನೇ ಸಾಲಿನಲ್ಲಿ ಜೀವದÀ ಹಂಗು ತೊರೆದು ಜೀವ ಉಳಿಸಿದವರಿಗೆ ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆಯ ಮಾಧ್ಯಮ ಸಂಸ್ಥೆಯು ಜಂಟಿಯಾಗಿ ನೀಡುತ್ತಿರುವ 2017 ನೇ ಸಾಲಿನ ಶೌರ್ಯಪ್ರಶಸ್ತಿಗೆ ಮತ್ತ್ಮೆ ಜಿ.ಎಂ.ಶಶಿಕುಮಾರ್‍ನ ಹೆಸರು ಆಯ್ಕೆಯಾಗಿದ್ದು ಜಿಲ್ಲೆಯ ಜನರಲ್ಲಿ ಸಂತಸ ಮನೆ ಮಾಡಿದೆ.
ಪ್ರಸ್ತುತ ಮೈಸೂರಿನ ಬೇಸ್‍ನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಶಶಿಕುಮಾರ್ ಕಳೆದ ವರ್ಷ ಬನ್ನೂರು ರಸ್ತೆಯಲ್ಲಿರುವ ನವಕೀಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಕಳೆದ ವರ್ಷ 2016 ನೇ ಜೂನ್ 6ರಂದು ನಾಡನಹಳ್ಳಿ ಬಳಿ ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ತನ್ನ ಶಾಲೆಯ ಬಸ್ ಬೆಂಕಿ ಅವಘಡದಲ್ಲಿ ಸಿಲುಕಿತು. ಈ ಸಂದರ್ಭದಲ್ಲಿ ಶಶಿಕುಮಾರನು ತನ್ನ ಸಹಪಾಠಿಗಳೊಂದಿಗೆ ಕುಳಿತ್ತಿದ್ದ. ತನ್ನ ಶಾಲಾ ಬಸ್‍ನಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ವಾಹನದ ಇಂಜಿನ್‍ನಲ್ಲಿ ಕಾಣಿಸಿಕೊಂಡ ಹೊಗೆ ಕ್ಷಣಾರ್ಧದಲ್ಲಿ ವಾಹನವನ್ನೆಲ್ಲಾ ಆವರಿಸಿತು.
ಬಸ್‍ನಲ್ಲಿದ್ದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಿ ಅಳುತ್ತಿದ್ದರು. ಈ ಸಂದರ್ಭದಲ್ಲಿ ಅಪಾಯದ ಮುನ್ಸೂಚನೆಯನ್ನು ಅರಿತ ಶಶಿಕುಮಾರನು ತನ್ನ ಸಹಪಾಠಿಗಳೊಡಗೂಡಿ ಸಮಯ ಪ್ರಜ್ಞೆ ಮೆರೆದು, ತುರ್ತು ನಿರ್ಗಮನದ ಬಾಗಿಲನ್ನು ತಕ್ಷಣ ತೆರೆಯುವುದರ ಮೂಲಕ ಅಳುತ್ತಿದ್ದ ಮಕ್ಕಳನ್ನು ಕೆಳಗಿಳಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದ ಘಟನೆ ನಂತರ ನಂತರ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ ಸಂದರ್ಭದಲ್ಲಿ ಶಶಿಕುಮಾರನು ತೋರಿದ ಸಮಯ ಪ್ರಜ್ಞೆ ದೈರ್ಯದಿಂದಾಗಿ ಯಾವುದೇ ಮಕ್ಕಳಿಗೆ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಸಾಧನೆಯನ್ನು ಮನಗಂಡು ಕಳೆದ ಬಾರಿ ರಾಜ್ಯ ಸರ್ಕಾರ ಜಿ.ಎಂ. ಶಶಿಕುಮಾರ್‍ನನ್ನು ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಪ್ರತಿ ವರ್ಷ ನವೆಂಬರ್ 14ರಂದು ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ, 10 ಸಾವಿರರೂ ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದ್ದರು.
ಈಗ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆಯುವ ಖಾಸಗೀ ವಾಹಿನಿ-ಕನ್ನಡ ಪ್ರಭ ಮಾಧ್ಯಮ ಸಂಸ್ಥೆಯು ನಡೆಸುವ ಬೃಹತ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಬ್ಬರ ಪ್ರಾಣ ರಕ್ಷಿಸಿದ ಸಾಹಸಿಗರಿಗೆ ಕೊಡಮಾಡುವ ಶೌರ್ಯಪ್ರಶಸ್ತಿಗೆ ಶಶಿಕುಮಾರ್‍ನನ್ನು ಆಯ್ಕೆಮಾಡಲಾಗಿದ್ದು, ಇಂದು (23ರಂದು) ಬೃಹತ್ ಸಮಾರಂಭದಲ್ಲಿ ಶಶಿಕುಮಾರ್‍ನನ್ನು ಸನ್ಮಾನಿಸಲಾಗುತ್ತದೆ.
No comments:
Post a Comment