Sunday, 4 June 2017

ಜೂನ್ 5 ರಂದು ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ,ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ವಾಟಾಳ್‍ನಾಗರಾಜ್ ಧರಣಿ ಸತ್ಯಾಗ್ರಹ (04-06-2017)


ಜೂನ್ 5 ರಂದು ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ 

ಚಾಮರಾಜನಗರ, ಜೂ. 04 :- ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಪರಿಸರ ದಿನ ಆಚರಣೆಯನ್ನು ಜೂನ್ 5ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಬಳಿ ಪರಿಸರ ಜಾಗೃತಿ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ.ನಂದೀಶ್‍ರವರು ಚಾಲನೆ ನೀಡುವರು.  ಬೆಳಿಗ್ಗೆ 10.30ಗಂಟೆಗೆ ಜಿಲ್ಲಾಡಳಿತ ಭವನದ ಆವರಣದ ಬಳಿ ಸಸಿ ನೆಡುವ ಕಾರ್ಯಕ್ರಮವಿದೆ.  ಬೆಳಿಗ್ಗೆ 11 ಗಂಟೆಗೆ  ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು ಜಿಲ್ಲಾಧಿಕಾರಿ ಬಿ.ರಾಮು ಅವರು ಉದ್ಘಾಟಿಸುವರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್‍ಕುಮಾರ್ ಅಧ್ಯಕ್ಷತೆ ವಹಿಸುವರು. ಹಿರಿಯ ಅರಣ್ಯ ಅಧಿಕಾರಿಗಳಾದ ಎಸ್.ಎಸ್.ಲಿಂಗರಾಜು, ನಾಗರಾಜು, ಡಿ.ಡಿ.ಪಿ.ಐ ಮಂಜುಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಡಾ. ಆನಂದ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ವಿ.ಎಂ.ರಾಮಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಪಿ.ರಾಘವೇಂದ್ರ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ. 

ಚಿತ್ರಕಲಾ ಸ್ಪರ್ಧೆ ವಿಜೇತರ ವಿವರ  

ಚಾಮರಾಜನಗರ, ಜೂ. 04 - ವಿಶ್ವಪರಿಸರ ದಿನ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್ 2ರಂದು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಹೀಗಿದೆ.ಕಿರಿಯ ಪ್ರಾಥಮಿಕ ವಿಭಾಗ:- ಗೌತಮ್ ಜಿ(ಪ್ರಥಮ), ಯೂನಿರ ಹರಂ(ದ್ವಿತೀಯ), ಸಿ.ಕೆ.ನಂದೀಶ್(ತೃತೀಯ), ಎಸ್.ಸಿಂಚನ (ಸಮಾಧಾನಕರ).ಹಿರಿಯ ಪ್ರಾಥಮಿಕ ವಿಭಾಗ:- ಬಿಂಬಸಾರ (ಪ್ರಥಮ), ಎಂ.ಅರುಣ್‍ಕುಮಾರ್(ದ್ವಿತೀಯ), ಐಶ್ವರ್ಯ ವಿನಾಯಕ್ (ತೃತೀಯ), ಎಸ್.ಸ್ನೇಹ (ಸಮಾಧಾನಕರ).ಪ್ರೌಢಶಾಲಾ ವಿಭಾಗ:- ಎನ್.ಸಂತೋಷ್ (ಪ್ರಥಮ), ಹೆಚ್.ಎಸ್.ನಿತಿನ್(ದ್ವಿತೀಯ), ನಿಂಗನಗೌಡ(ತೃತೀಯ), ಕ್ಷಿತಿಜ್ ಸೋಸಲೆ (ಸಮಾಧಾನಕರ) ವಿಜೇತರಿಗೆ ಜೂನ್ 5ರಂದು ಬೆಳಿಗ್ಗೆ 11ಗಂಟೆಗೆ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ   

ಚಾಮರಾಜನಗರ, ಜೂ. 04 - ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎನ್.ಸಿ.ವಿ.ಟಿ ವೃತ್ತಿಯಲ್ಲಿ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ಸ್ ಮೆಕಾನಿಕ್) ಕೋಪಾ ವಿಷಯದಲ್ಲಿ ತರಬೇತಿ ಪಡೆಯಬಹುದು ಅರ್ಜಿ ಸಲ್ಲಿಸಲು ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ಜೂನ್ 12 ಕಡೆಯ ದಿನವಾಗಿದೆ.  ವಿವರಗಳಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರನ್ನು (ದೂರವಾಣಿ ಸಂಖ್ಯೆ:08229-222853, ಮೊ.9900251218, 9538778562 ಮತ್ತು 8453875110) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 




ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ವಾಟಾಳ್‍ನಾಗರಾಜ್ ಧರಣಿ ಸತ್ಯಾಗ್ರಹ

  ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜು.04 :- ಚಿಕ್ಕಹೊಳೆ-ಸುವರ್ಣಾವತಿ ಜಲಾಶಯಗಳಿಗೆ ಬರುವ ನೀರನ್ನು ತಡೆಯಲು ತಾಳವಾಡಿ ತಾಲ್ಲೂಕಿನ ಚಿಕ್ಕಹಳ್ಳಿಯಲ್ಲಿ ಜಲಾಶಯ ನಿರ್ಮಿಸಲು ತಿರ್ಮಾನಿಸಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಮತ್ತು ಬಯಲುಸೀಮೆಗಳಿಗೆ ಕುಡಿಯುವ ನೀರು, ಮಹದಾಯಿ. ಕಳಸ-ಬಂಡೂರಿ ಯೋಜನೆ, ಮೇಕೆದಾಟು ಯೋಜನೆ, ರೈತರ ಸಾಲ ಮನ್ನಾ, ಚಾಮರಾಜನಗರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ಬಿ.ಇ.ಎಂ.ಎಲ್. ಕಾರ್ಖಾನೆ ಸೇರಿದಂತೆ. ಕೇಂದ್ರದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಕೊಡಬಾರದು ಎಂದು. ಅಲ್ಲದೆ ಸಮಗ್ರ ಅಭಿವೃದ್ಧಿ ಬಗ್ಗೆ ಒತ್ತಾಯಿಸಿ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‍ನಾಗರಾಜ್ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರು.
ಇಂದು ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ವಾಟಾಳ್‍ನಾಗರಾಜ್ ನಾಯಕತ್ವದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಕಾರ್ಯರ್ತರು ಜಮಾಯಿಸಿ ಪ್ರತಿಭಟಿಸುತ್ತಿದ್ದ, ವಾಟಾಳ್ ನಾಗರಾಜ್ ಸೇರಿದಂತೆ ಪ್ರತಿಭಟನಾಕಾರರನ್ನು  ಪೊಲೀಸರು ಬಂಧಿಸಿದರು.
ನಂತರ ಸುದ್ದಿಗರರೊಂದಿಗೆ ಮಾತನಾಡಿದ ವಾಟಾಳ್‍ನಾಗರಾಜ್‍ಅವರು, ಸುವರ್ಣಾವತಿ ಜಲಾಶಯಕ್ಕೆ ಬರುವ ನೀರನ್ನು ತರಡೆಯಲು ತಮಿಳುನಾಡು ಸರ್ಕಾರ ಜಲಾಶಯ ನಿರ್ಮಿಸಲು ಉದ್ದೇಶಿಸಿರುವ ಯೋಜನೆಯನ್ನು ತಕ್ಷಣದಲ್ಲೇ ತಮಿಳುನಾಡು ಸರ್ಕಾರ ಕೂಡಲೇ ಕೈಬಿಡಬೇಕು. ಈ ಜಲಾಶಯಗಳಿಂದ ಹರದನಹಳ್ಳಿ, ಚಂದಕವಾಡಿ ಹೋಬಳಿ ಸೇರಿದಂತೆ ಸುಮಾರು 2 ಲಕ್ಷ ಜನರಿಗೆ ಕುಡಿಯುವ ನೀರು ಹಾಗೂ ವ್ಯಸಾಯಕ್ಕೆ ತೊಂದರೆಯಾಗುತ್ತದೆ. ತಮಿಳುನಾಡು ಸರ್ಕಾgದವರೆ ನಿಮಗೆ ಮಾನ ಮರ್ಯದೆ ಇದ್ದೆ ತಕ್ಷಣದಲ್ಲೇ ಈ ಯೋಜನೆಯನ್ನು ಕೈ ಬಿಡಬೇಕು ಇಲ್ಲದಿದ್ದರೆ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಎಂದು ತಿಳಿಸಿದ ವಾಟಾಳ್, ಈ ಕೂಡಲೇ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ತಮಿಳುನಾಡು ಮುಖ್ಯಮಂತ್ರಿಯ ಜೊತೆ ಮಾತನಾಡಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಬೇಕೆಂದು ವಾಟಾಳ್ ತಿಳಿಸಿದರು.
ಕಳಸ ಬಂಡೂರಿ ಮತ್ತು ಮಹಾದಾಯಿ ಯೋಜನೆ ಅನುಷ್ಠಾನದ ಬಗ್ಗೆ ಪ್ರಧಾನಿ ನರೇಂದ್ರ ಮೋಧಿಯವರು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ. ಇದೆ ಜೂನ್ 12ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ  ವಾಟಾಳ್‍ನಾಗರಾಜ್ ತಿಳಿಸಿದರು.
ಇದೇ 12ರಂದು ಕರೆನೀಡಿರುವ ಬಂದ್‍ಗೆ ಚಾಮರಾಜನಗರದ ಬಸ್  ಮಾಲೀಕರು ಮತ್ತು ಚಾಲಕರು ಸಂಗ, ವರ್ತಕರ ಸಂಘ, ಚಲನಚಿತ್ರ ಮಂದಿರಗಳು, ಪೆಟ್ರೋಲ್ ಬಂಕ್‍ಗಳು, ಎಲ್ಲ ಮಸೀದಿಯ ಯಜಮಾನರುಗಳು, ಕನ್ನಡಪರ ಸಂಘಟನೆಗಳು, ಲಾರಿ ಮಾಲೀಕರಸಂಗ, ಆಟೋ ಮಾಲೀಕರ-ಚಾಲಕರ ಸಂಘ, ಸರ್ಕಾರಿ ನೌಕರರ ಸಂಘ, ಕೆ.ಎಸ್.ಆರ್.ಟಿ.ಸಿ ನೌಕರರ ಸಂಘ, ನಿವೃತ್ತಿ ನೌಕರರ ಸಂಘ  ಎಲ್ಲಾ ಕೋಮಿನ ಸಂಘಟನೆಗಳು ಸೇರಿದಂತೆ ಇತರೆ ಎಲ್ಲಾ ಸಂಘಟನೆಗಳು  ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಇದಲ್ಲದೆ ಚಾಮರಾಜನಗರದಿಂದ ಬೀದರ್, ಕೋಲಾರದಿಂದ-ಮಂಗಳೂರು ರಾಜ್ಯದ ಉದ್ದಗಲದಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಎಲ್ಲಾ ಸಂಘಟನೆಗಳು ಬೆಂಬಳ ಸೂಚಿಸಿವೆ ಎಂದು ವಾಟಾಳ್ ತಿಳಿಸಿದರು.
ಕಲಸ ಬಂಡೂರಿ ಮತ್ತು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ತರುವಂತೆ ಕಳೆದ ಎರಡು ವರ್ಷದಿಂದ ಉತ್ತರ ಕರ್ನಾಟಕ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಇಬ್ಬರು ರೈತರು ಹೋರಾಟದಲ್ಲಿ ಪ್ರಾನ ಕಲೆದುಕೊಂಡಿದ್ದಾರೆ. ನಮ್ಮ ರಾಜ್ಯ ಬಿ.ಜೆ.ಪಿ ಸಂಸದರು ಮನುಸ್ಸು ಮಾಡಿದ್ದರೆ. ಪ್ರಧಾನಿಗಳ ಜೊತೆ ಮಾತುಕತೆನಡೆಸಿ ಈ ಸಮಸ್ಯೆಯನ್ನು ಎಂದೋ ಬಗೆಹರಿಸಬಹುದಾಗಿತ್ತು ಆದರೆ ಅವರು ಮನಸ್ಸು ಮಾಡಲಿಲ್ಲ ಎಂದು ವಾಟಾಳ್ ಬೇಸರ ವ್ಯಕ್ತಪಡಿಸಿದರು.
ಈ ವಿಷಯ ಸೇರಿದಂತೆ ರಾಜ್ಯದ ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಮ್ಮ ರಾಜ್ಯದ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ವಾಟಾಳರು ರಾಜ್ಯ ಮತ್ತು ಕೇಂದ್ರ ಸರ್ಕಾರ ಇದರ ಪರಿಹಾರ ಕಂಡುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಗೋವಾ ಕರ್ನಾಟಕ, ಮಹಾರಾಷ್ಟ್ರ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಅವರು ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಾಟಾಳ್ ಆಗ್ರಹಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇದೇ ಜೂನ್ 6ರಂದು ರಾಜ್ಯ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಮೇಕೆದಾಟಿನವರೆಗೆ ಬೃಹತ್ ರ್ಯಾಲಿ ಹಮ್ಮಿ ಕೊಳ್ಳಲಾಗಿದೆ. ಎಂದು ವಾಟಾಳ್ ತಿಳಿಸಿದರು.
ಬಯಲು ಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ರಾಮನಗರ, ಬೆಂಗಳೂರು ನಗರ ಜಿಲ್ಲೆಗಳಿಗೆ ಸಾಶ್ವತ ಕುಡಿಯುವ ನೀರಿಗೆ ಆಗ್ರಹಿಸಿ ನಿರಂತರವಾಗಿ ಈ ಭಾಗದ ರೈತರು ಪ್ರತಿಭಟಣೆ ಮಾಡುತ್ತಿದ್ದಾರೆ ಆದರೆ ರಾಜ್ಯ ಸರ್ಕಾರ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಸ್ಪಷ್ಟತೆ ನೀಡಿಲ್ಲ ಹಾಗೂ ರಾಜ್ಯದ ಆನೇಕ ಸಮಸ್ಯೆಗಳ ಏನೇನು ಕ್ರಮ ಕೈಗೊಂಡಿದ್ದರಿ ನಾಡಿನ ಸಮಗ್ರ ಅಭಿವೃದ್ಧಿ  ಯೋಜನೆಯ ಬಗ್ಗೆ ನಾಳೆ ನಡೆಯುವ ಶಾಸನ ಸಭೆ ಅಧಿವೇಶನದಲ್ಲಿ  ಶ್ವೇತ ಪತ್ರ ಹೊರಡಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಾಗರಾಜಮೂರ್ತಿ, ಶಿವನಂಜಪ್ಪ, ದಳಪತಿವಿರತಪ್ಪ,  ಕಾರ್ ನಾಗೇಶ್, ಹುಂಡಿ ಬಸವಣ್ಣ, ಸುರೇಶ್‍ನಾಗ್, ನಿಂಗಶೆಟ್ಟಿ,  ಸುಬ್ಬಶೆಟ್ಟಿ, ಬಂಡೀಗೆರೆ ಶಿವಸ್ವಾಮಿ,  ಶಿವಲಿಂಗಮೂರ್ತಿ, ವರದರಾಜು,  ಭೋಗಪುರ ಮಲ್ಲಿಕಾರ್ಜುನ, ಪುರುಷೋತ್ತಮ, ವಡ್ಡರಳ್ಳಿ ಮಹೇಶ್, ಶ್ರೀನಿವಾಸ್ ಗೌಡ, ಲೋಕೇಶ್, ವರದನಾಯಕ, ಪ್ರಕಾಶ್,  ನಿಂಗಣ್ಣನಾಯ್ಕ,  ಪ್ರಕಾಶ್, ಶಿವಸ್ವಾಮಿ, ಮರಿಸ್ವಾಮಿ, ಸಿ.ಕೆ ರಾಜಣ್ಣ, ವಡ್ಡಹಳ್ಳಿ ಬಸವಣ್ಣ, ಮಹದೇವಸ್ವಾಮಿ, ª ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು