ಜೂ. 14ರಂದು ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ನೇರ ಸಂದರ್ಶನ
ಎಸ್.ವಿ.ಎಸ್
ಚಾಮರಾಜನಗರ, ಜೂ. 13 – ಖಾಸಗಿ ಕಂಪನಿ ರಾಕ್ ಅಂಡ್ ಟೆಕ್ನಾಲಜಿ ಅವರು ತರಬೇತಿ ಮತ್ತು ಉದ್ಯೋಗ ನೀಡುವ ಸಲುವಾಗಿ ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಲಿದ್ದಾರೆ.ಯಾವುದೇ ಟ್ರೇಡ್‍ನಲ್ಲಿ ಐಟಿಐ ವ್ಯಾಸಂಗ ಮಾಡಿರುವ 18 ರಿಂದ 35ರ ವಯೋಮಿತಿಯೊಳಗಿನ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ದೂರವಾಣಿ ಸಂಖ್ಯೆ 08226-224430 ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.ಪಂ., ಗ್ರಾ..ಪಂ. ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ
ಎಸ್.ವಿ.ಎಸ್
ಚಾಮರಾಜನಗರ ತಾಲೂಕಿನ ಬೋಗಾಪುರ, ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ, ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮ ಪಂಚಾಯಿತಿಯ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಜೂನ್ 17 ರಂದು ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅವಧಿ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಜೂನ್ 20 ಕಡೆಯ ದಿನವಾಗಿದೆ. ಜೂನ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಜೂನ್ 23 ಕಡೆಯ ದಿನವಾಗಿದೆ. ಜುಲೈ 2ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ (ಅವಶ್ಯವಿದ್ದಲ್ಲಿ) ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಜುಲೈ 4ರಂದು ನಡೆಸಲಾಗುತ್ತದೆ. ಜುಲೈ 5ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಜುಲೈ 5ರಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 308 ಎಸಿರಂತೆ ಚುನಾವಣಾ ನೀತಿಸಂಹಿತೆಯು ಚುನಾವಣೆ ನಡೆಯುವ ತಾಲೂಕು ಪಂಚಾಯಿತಿ ಕ್ಷೇತ್ರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್ 17ರಿಂದ ಜುಲೈ 5ರವರೆಗೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಪ್ರತಿಭಾ ಅನ್ವೇಷಣ ಪರೀಕ್ಷೆಯಲ್ಲಿ ಆದರ್ಶ ವಿದ್ಯಾರ್ಥಿಗಳ ಸಾಧನೆ
ಚಾಮರಾಜನಗರ, ಜೂ. 13 - ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವಿತ ಅನ್ವೇಷಣಾ ಪರೀಕ್ಷೆಯಲ್ಲಿ ನಗರದ ಆದರ್ಶ ಶಾಲೆಯ 23 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ ಒಟ್ಟು 44 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಪೈಕಿ ಆದರ್ಶ ಶಾಲೆಯ 23 ವಿದ್ಯಾರ್ಥಿಗಳು ಇರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಆದರ್ಶ ವಿದ್ಯಾಲಯದ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ ಎಂದು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವಿಜ್ಞಾನ ಸಹಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರ ನೇಮಕ
ಎಸ್.ವಿ.ಎಸ್
ಬಿಎಸ್ಸಿ, ಬಿಎಡ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 3 ದಿನಗಳ ಒಳಗೆ ಶಾಲಾ ಕಚೇರಿಯನ್ನು ಸಂಪರ್ಕಿಸಬೇಕು. ವಿವರಗಳಿಗೆ ಮೊಬೈಲ್ ಸಂ. 9448167272 ಸಂಪರ್ಕಿಸುವಂತೆ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜದ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ : ಜಿ.ಪಂ. ಅಧ್ಯಕ್ಷರ ಅಭಿಮತ
ಎಸ್.ವಿ.ಎಸ್
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸುವ ಮುಖೇನ ಸಮಾಜದ ಸಮಸ್ಯೆ ಪರಿಹಾರಕ್ಕೆ ಹಲವು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ದಲಿತ ವಚನಕಾರರು ನೀಡಿದ್ದಾರೆ. ಅವರ ವಚನಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಮೌಲ್ಯಗಳನ್ನು ಒಳಗೊಂಡಿದೆ ಎಂದರು.
ದಲಿತ ವಚನಕಾರರಿಗೆ ಬಸವಣ್ಣ ಅವರು ವೇದಿಕೆ ಕಲ್ಪಿಸಿಕೊಡುವ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದರು. ವಚನಕಾರರಲ್ಲಿ ಮಹಿಳೆಯರೂ ಇದ್ದಾರೆ. ಇಂತಹವರನ್ನು ಗುರುತಿಸುವ ಕೆಲಸ ಆಗಬೇಕಿದೆ. ಈ ದಿಸೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕಿದೆ ಎಂದು ರಾಮಚಂದ್ರ ಹೇಳಿದರು.
ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಸೇರಿದಂತೆ ಹಲವಾರು ದಲಿತ ವಚನಕಾರರು ರಚಿಸಿದ ವಚನಗಳ ಆದರ್ಶವನ್ನು ಪಾಲಿಸಬೇಕಿದೆ. ದಲಿತ ವಚನಕಾರರ ಸಾಹಿತ್ಯವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ರಾಮಚಂದ್ರ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಜಾತಿ, ವರ್ಗ, ಅಂತಸ್ತು ಸಂಘರ್ಷದ ಪರಾಕಾಷ್ಠೆ ಅವಧಿಯಲ್ಲಿ ವಚನಕಾರರು ಮಿಂಚಿನಂತೆ ತಮ್ಮದೇ ಆದ ದಾಟಿಯಲ್ಲಿ ಬೆಳಕು ಚೆಲ್ಲಿದರು. ಈ ಅರಿವು ಇಂದಿನ ಪೀಳಿಗೆಗೂ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದ ವಚನಕಾರರ ಜಯಂತಿ ಕಾರ್ಯಕ್ರಮ ಆಚರಣೆಯಾಗುತ್ತಿದೆ. ವಚನಕಾರರ ಸಂದೇಶ, ಆದರ್ಶ ಪ್ರಸ್ತುತ ಸಂದರ್ಭಕ್ಕೂ ಅವಶ್ಯವಾಗಿದೆ ಎಂದರು.
ಶ್ರಮವೇ ದೇವರು, ಕಾಯಕವೇ ಕೈಲಾಸ ಎಂಬ ಮಹತ್ವದ ವಿಚಾರ ತಳಸಮುದಾಯದ ವಚನಕಾರರ ವಚನಗಳಲ್ಲಿ ಬಿಂಬಿತವಾಗಿದೆ. ದುಡಿಮೆಯನ್ನು ಪ್ರೀತಿಸಬೇಕು ಎಂಬ ಪ್ರತಿಪಾದನೆಯ ಮೂಲಕ ವೃತ್ತಿ ಶ್ರೇಷ್ಠತೆಯನ್ನು ಜಗತ್ತಿಗೆ ವಚನಕಾರರು ತೋರಿಸಿಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮು ನುಡಿದರು.
ಮುಖ್ಯ ಉಪನ್ಯಾಸ ನೀಡಿದ ಮೈಸೂರಿನ ಸಿದ್ದಾರ್ಥನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಡಿ. ಪುರುಷೊತ್ತಮ್ ಅವರು ದಲಿತ ವಚನಕಾರರು ದಮನಿತ ವರ್ಗಗಳ ಪ್ರತಿನಿಧಿಗಳಾಗಿ ಅವರ ಘನತೆ ಶ್ರೇಷ್ಠತೆಯನ್ನು ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಇನ್ನೂ ಹಲವಾರು ದಲಿತ ವಚನಕಾರರ ಬಗೆಗೆ ಹೆಚ್ಚು ವಿಚಾರಗಳು ಹೊರಬರಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಂತಿ ಅವರು ಮಾತನಾಡಿ ದಲಿತ ವಚನಕಾರರು ಸಮಾಜದ ಮುನ್ನಡೆಗೆ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ. ಅಜ್ಞಾನ ಹೋಗಲಾಡಿಸಿ ಅರಿವು ಉಂಟುಮಾಡುವ ಕಾರ್ಯವನ್ನು ಸಹ ನಿರ್ವಹಿಸಿದ್ದಾರೆ. ವಚನಗಳ ಅಧ್ಯಯನದಿಂದ ಜ್ಞಾನ ಲಭಿಸಲಿದೆ ಎಂದರು.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ನಮ್ಮ ಹೆಮ್ಮೆಯ ವಚನಕಾರರು ಎಂಬ ಮಡಿಕೆ ಪತ್ರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ಸಹಕರಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
**************************************************************************
ಸಾರ್ವಜನಿಕರಿಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಓ.ಆರ್.ಎಸ್.ಮತ್ತು ಝಿಂಕ್ ಮಾತ್ರೆ ವಿತರಣೆ
ಎಸ್.ವಿ.ಎಸ್
ಚಾಮರಾಜನಗರ ಜೂನ್13-ಅತಿಸಾರ ಭೇದಿಯನ್ನು ತಡೆಯಲು ಓ.ಆರ್.ಎಸ್ ಪೌಡರ್ ಅನ್ನು ನೀರಿನಲ್ಲಿ ಕಲಕಿ ಕುಡಿಯುವುದರಿಂದ ಸಾಧ್ಯವಾಗುತ್ತದೆ. ಎಲ್ಲಾ ಮಕ್ಕಳಿಗೂ ಓ.ಆರ್.ಎಸ್ ದ್ರವ್ಯ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸದಾಶಿವಮೂರ್ತಿ ತಿಳಿಸಿದರು.ನಗರದ ಗಾಳಿಪುರ ಬಡಾವಣೆಯ ಟಿಪ್ಪು ಮಸಿದೀ ಸಮೀಪ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರ ಅರೋಗ್ಯದ ದೃಷ್ಠಿಯಿಂದ ಅತಿಸಾರ ಭೇದಿಯನ್ನು ತಡೆಗಟ್ಟಲು ಬಡಾವಣೆಯ ನಿವಾಸಿಗಳಿಗೆ ಓ.ಆರ್.ಎಸ್ ಪೌಡರ್ ಮತ್ತು ಝಿಂಕ್ ಮಾತ್ರೆಗಳನ್ನು ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಸುತ್ತಮುತ್ತ ಸ್ವಚತೆಯಿಂದ ನೊಡಿಕೊಳ್ಳಬೇಕು ಸ್ವಚತೆಯಿಂದ ಕಾಯಿಲೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಅತಿಸಾರ ಬೇಧಿ ಮಕ್ಕಳಿಗೆ ಉಂಟಾದಾಗ ಓ.ಆರ್.ಎಸ್ ದ್ರಾವಣವನ್ನು ನೀಡಬೇಕು ಅತಿಬೇಧಿ ಇಲಾಖೆ ಸಮಿಕ್ಷೆ ಪ್ರಕಾರ ಜಿಲ್ಲೆಯಲ್ಲಿ 3% ಇದೆ ಇದನ್ನು ತಡೆಯಲು ಆರೋಗ್ಯ ಇಲಾಖೆ ಜಿಲ್ಲಾದ್ಯ್ಯಂತ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅತಿಸಾರಬೇಧಿಯಿಂದ ರಾಜ್ಯದಲ್ಲಿ ಎಷ್ಟೊ ಮಕ್ಕಳು ಮೃತಪಟ್ಟಿವೆ ಇದನ್ನು ತಡೆಯಲು ರಾಜ್ಯ ಸರ್ಕಾರ ಜಾಗ್ರತೆ ವಹಿಸಿ ಆರೋಗ್ಯ ಇಲಾಖೆ ವತಿಯಿಂದ ಇಂತಹ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಅತಿಸಾರಬೇದಿಯು ಮಕ್ಕಳಲ್ಲಿ ನೀರಿನ ಅಂಶವು ಕಡಿಮೆ ಇದ್ದರೆ ಬರಲು ಸಾಧ್ಯ ಮಕ್ಕಳಿಗೆ ಶುದ್ದ ನೀರನ್ನು ನೀಡುವುದರಿಂದ ಇಂತಹ ರೋಗಗಳಿಂದ ತಡೆಯಬಹುದು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪ್ರಸಾದ್, ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಿಗೆ ಭೇಧಿ ಉಂಟಾದಾಗ ಮಗುವಿನ ಮಲದ ರೂಪದಲ್ಲಿ ಬದಲಾಣೆಯಾದಾಗ ಹಾಗೂ ಸಾಮಾನ್ಯಕಿಂತ ಹೆಚ್ಚು ತಿಳಿಯಾಗಿ ನೀರಿನಂತೆ ಆಗುವ ಭೇಧಿಯನ್ನು ಅತಿಸಾರ ಭೇಧಿ ಎಂದು ಹೇಳಲಾಗುವುದು. ಓ.ಆರ್.ಎಸ್ ದ್ರವ್ಯ ಶರೀರದಲ್ಲಿ ಉಪ್ಪಿನ ಪೋಷಕಾಂಶಗಳನ್ನು ಪೂರೈಸುತ್ತದೆ. ವಾಂತಿ,ಭೇಧಿಯನ್ನು ಕಡಿಮೆ ಮಾಡುತ್ತದೆ ಶರೀರದಲ್ಲಿ ನೀರಿನ ಅಭಾವವನ್ನು ಕಡಿಮೆಯಾಗಿಸಿ ಅತಿಸಾರಭೇಧಿಯನ್ನು ಬೇಗನೇ ಗುಣಮುಖವಾಗಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರ್.ಹೆಚ್.ಒ.ಡಾ.ವಿಶೇಶ್ವರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ನಗರ ಆರೋಗ್ಯ ಘಟಕದ ಡಾ.ಮಮತಾ, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ, ಶಾಂತಮ್ಮ, ಮಹದೇವು ಹಾಗೂ ಇನ್ನು ಮುಂತಾದವರು ಹಾಜರಿದ್ದರು.
ಬಡಾವಣೆಯ ನಿವಾಸಿಗಳಿಗೆ ಮನೆಮನೆಗೆ ತೆರಳಿ ಓ.ಆರ್.ಎಸ್.ಮತ್ತು ಝಿಂಕ್ ಮಾತ್ರೆ ವಿತರಣೆ ಮಾಡಲಾಯಿತು.
No comments:
Post a Comment