Saturday, 1 July 2017

ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆಯಡಿ ಈ ಬಾರಿ 508 ಘಟಕಗಳಿಗೆ ನರವು (30-6-2017)


ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆಯಡಿ ಈ ಬಾರಿ 508 ಘಟಕಗಳಿಗೆ ನರವು

ಎಸ್.ವಿ.ಎಸ್
ಚಾಮರಾಜನಗರ, ಜೂ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪಶುಭಾಗ್ಯ ಯೋಜನೆಯಡಿ ಪ್ರಸಕ್ತ ಸಾಲಿಗೆ ಜಿಲ್ಲೆಗೆ ಒಟ್ಟು 508 ಘಟಕಗಳ ಗುರಿ ನಿಗದಿಯಾಗಿದೆ.
ಭೂರಹಿತ, ಸಣ್ಣ ಅತಿಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕ ಸ್ಥಾಪನೆಗಾಗಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್ ನೀಡುವ ಮಿಶ್ರತಳಿ ಘಟಕಗಳಿಗೆ 1.2 ಲಕ್ಷ ರೂ., ಕುರಿ ಮೇಕೆ ಘಟಕಗಳಿಗೆ 67400 ರೂ, ಹಂದಿ ಘಟಕಕ್ಕೆ 94000, ಕೋಳಿ ಘಟಕಕ್ಕೆ 85000 ರೂ. ಸಾಲಕ್ಕೆ ಸಹಾಯಧನ ಲಭಿಸಲಿದೆ.
ಜಿಲ್ಲೆಯಲ್ಲಿ 166 ಹೈನುಗಾರಿಕೆ ಘಟಕ, 23 ಕುರಿ ಮೇಕೆ ಘಟಕಗಳು, 8 ಕೋಳಿ ಘಟಕಗಳು, 9 ಹಂದಿ ಘಟಕಗಳು, 34 ಅಮೃತಹಸು ಘಟಕಗಳು, ಮಹಿಳೆಯರಿಗಾಗಿಯೇ ಅಮೃತ ಯೋಜನೆಯಡಿ ಕುರಿ ಮೇಕೆಗಳ 268 ಘಟಕಗಳು ಸೇರಿದಂತೆ ಒಟ್ಟು 508 ಘಟಕಗಳ ಸ್ಥಾಪನೆಗೆ ಪಶುಭಾಗ್ಯ ಯೋಜನೆಯಡಿ ನೆರವು ನೀಡಲಾಗುತ್ತದೆ.
ಚಾಮರಾಜನಗರ ತಾಲೂಕಿನಲ್ಲಿ 165, ಗುಂಡ್ಲುಪೇಟೆ ತಾಲೂಕಿನಲ್ಲಿ 109, ಕೊಳ್ಳೇಗಾಲ ತಾಲೂಕಿನಲ್ಲಿ 169 ಹಾಗೂ ಯಳಂದೂರು ತಾಲೂಕಿನಲ್ಲಿ 97 ಘಟಕಗಳ ಆರಂಭಕ್ಕೆ ನೆರವು ಲಭಿಸಲಿದೆ.
ಸಾಮಾನ್ಯ ವರ್ಗದವರಿಗೆ ಶೇ. 25ರಷ್ಟು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ. 50ರಷ್ಟು ಸಹಾಯಧನ ಸಿಗಲಿದೆ. ಪಶುಭಾಗ್ಯ ಯೋಜನೆಯಡಿ ಕಾಲಕಾಲಕ್ಕೆ ಘಟಕವೆಚ್ಚವನ್ನು ಅನುಮೋದಿಸುವ ಅಧಿಕಾರವನ್ನು ಪಶುಸಂಗೋಪನ ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ರಚಿಸಲಾಗಿರುವ ರಾಜ್ಯಮಟ್ಟದ ಮಂಜೂರು ಮತ್ತು ಪರಿವೀಕ್ಷಣಾ ಸಮಿತಿಗೆ ನೀಡಲಾಗಿದೆ.
.ಯೋಜನೆಯಡಿ ಹೈನುಗಾರಿಕೆಗೆ ಸಂಬಂಧಪಟ್ಟಂತೆ ಮಂಜೂರು ಪಡೆಯುವ ಎಲ್ಲ ಫಲಾನುಭವಿಗಳು ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ರಚಿಸಿರುವ ಹಾಲು ಉತ್ಪಾದಕರ ಸಂಘದ ಮಿಲ್ಕ್ ರೂಟ್ಸ್ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಬರಬೇಕಿದೆ.
ಪಶುಭಾಗ್ಯ ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿದ್ದು ಇಲಾಖೆಯಲ್ಲಿ ಇರುವ ಅನುದಾನ ನೆರವಿನಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಂತೆ ಸೂಚಿಸಲಾಗಿದೆ. ಅಮೃತ ಯೋಜನೆಯನ್ನು ಪಶುಭಾಗ್ಯ ಯೋಜನೆಯಡಿ ವಿಲೀನಗೊಳಿಸಲಾಗಿದೆ. ಅಮೃತ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ವಿಧವೆಯರು, ದೇವದಾಸಿಯರು ಹಾಗೂ ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಅರ್ಹ ಫಲಾನುಭವಿಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ತಾಲೂಕು ಮಟ್ಟದ ಆಯ್ಕೆ ಸಮಿತಿಯ ಮುಖಾಂತರ ಆಯ್ಕೆ ಮಾಡಲಾಗುತ್ತದೆ.
ಜಿಲ್ಲೆಯ ಆಸಕ್ತ ಮತ್ತು ಅರ್ಹ ರೈತರು ಯೋಜನೆಯ ಪ್ರಯೋಜನ ಪಡೆಯಲು ಆಯಾ ತಾಲೂಕಿನ ಪಶುಲಾಪನಾ ಸಹಾಯಕ ನಿರ್ದೇಶಕರಿಂದ ಅರ್ಜಿ ಪಡೆದು ಜುಲೈ 22ರೊಳಗೆ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕಿದೆ. ಅರ್ಜಿದಾರರು ಮಾಹಿತಿಯನ್ನು ಚಾಮರಾಜನಗರ ತಾಲೂಕಿನವರು ದೂ.ಸಂ. 08226-222757, ಗುಂಡ್ಲುಪೇಟೆ ತಾಲೂಕಿನವರು 08229-222346, ಕೊಳ್ಳೇಗಾಲ ತಾಲೂಕಿನವರು 08224-252215 ಹಾಗೂ ಯಳಂದೂರು ತಾಲೂಕಿನವರು 08226-240128 ಸಂಪರ್ಕಿಸಿ ವಿವರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗಬೇಕೆಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಬಿ. ಬಾಲಸುಂದರ್ ಮನವಿ ಮಾಡಿದ್ದಾರೆ.


ಜು. 1ರಂದು ಜಾಗೃತಿ ಆಂದೋಲನ ಕಾರ್ಯಕ್ರಮ 

ಚಾಮರಾಜನಗರ,  ಜೂ. 30:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಧನ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 1ರಂದು ಬೆಳಿಗ್ಗೆ 10 ಗಂಟೆಗೆ ನಗರದ ನ್ಯಾಯಾಲಯದ ಆವರಣದಲ್ಲಿ ಬಾಲ್ಯ ವಿವಾಹ ಜಾಗೃತಿ ಹಾಗೂ ಶಾಲೆ ಕಡೆ ನನ್ನ ನಡೆ ಕುರಿತು ಜಾಗೃತಿ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಅಧ್ಯಕ್ಷತೆ ವತಿಸುವರು.
ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿರುಮಲೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶೀಲ, ಸಾಧನ ಸಂಸ್ಥೆ ಅಧ್ಯಕ್ಷರಾದ ಟಿ.ಜೆ. ಸುರೇಶ್, ಕಾರ್ಮಿಕ ಇಲಾಖೆ ಯೋಜನಾಧಿಕಾರಿ ಮಹೇಶ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್. ಜೆ. ಭವಾನಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದÉ.

ಯಳಂದೂರು : ಮನೆ ನಿರ್ಮಾಣ ನೆರವಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 30-ಯಳಂದೂರು ಪಟ್ಟಣ ಪಂಚಾಯಿತಿಯು 2017-18ನೇ ಸಾಲಿಗೆ ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಲಿದ್ದು ಅರ್ಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಮಹಿಳೆಯರಾಗಿರಬೇಕು. ಅಂಗವಿಕಲರು, ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು. ವಾರ್ಷಿಕ ಆದಾಯ 87600 ರೂ.ಗಿಂತ ಕಡಿಮೆ ಇರಬೇಕು. ಸ್ವಂತ ನಿವೇಶನಕ್ಕೆ ಸಂಬಂಧಿಸಿದಂತೆ ಖಾತಾ ನಕಲು ಹಕ್ಕುಪತ್ರ (ಮೂಲ ಹಕ್ಕುಪತ್ರ), ಬಿಪಿಎಲ್ ಪಡಿತರ ಚೀಟಿ,  ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಇತರೆ   ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಜುಲೈ 14 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಜೂ. 30 -ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೆಗ್ಗವಾಡಿ ಎನ್ ಜೆ ವೈ ಮಾರ್ಗಕ್ಕೆ ಲಿಂಕ್ ಲೈನ್ ಮಾಡುವ ಕಾರ್ಯವನ್ನು ಜುಲೈ 7ರವರೆಗೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೆಗ್ಗವಾಡಿ ಎನ್‍ಜೆವೈ ಮಾರ್ಗದ ಹರವೆ, ಮುಕ್ಕಡÀಹಳ್ಳಿ, ಮೂಡ್ನಾಕೂಡು, ಕುಲಗಾಣ ಹಾಗೂ ಮಲೆಯೂರು ಪಂಚಾಯಿತಿ ವ್ಯಾಪ್ತಿಯ ಮಾರ್ಗಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೊಳ್ಳೇಗಾಲ : ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 30:- ಕೊಳ್ಳೇಗಾಲ ನಗರಸಭೆಯು 2017-18ನೇ ಸಾಲಿಗೆ ಎಸ್ ಎಫ್ ಸಿ ಮತ್ತು ಮುಕ್ತನಿಧಿ ಅನುದಾನದಡಿ ವಿವಿಧ ಸೌಲಭ್ಯಗಳನ್ನು ನೀಡಲಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ವಿಕಲಚೇತನರಿಂದ ಅರ್ಜಿ ಆಹ್ವಾನಿಸಿದೆ.
ಪ್ರಸಕ್ತ ಸಾಲಿಗೆ ಶೇ.24.10, ಶೇ.7.25 ಹಾಗೂ ಶೇ.3ರ ಅನುದಾನದಡಿ ಫಲಾನುಭವಿಗಳಿಗೆ ಸೌಲಭ್ಯ ನೀಡಲಿದ್ದು ಕೊಳ್ಳೇಗಾಲ ನಗರಸಭಾ ಪಟ್ಟಣ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಪಡೆಯಲು ಜುಲೈ 20 ಕಡೆಯ ದಿನ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಜುಲೈ 22 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನಗರಸಭೆ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜೀವ ರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 30 -ರಸ್ತೆ ಅಪಘಾತದ ಸಂಕಷ್ಟ ಪರಿಸ್ಥಿತಿಯಲ್ಲಿ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ನೆರವಾದವರಿಗೆ ನೀಡುವ ಜೀವರಕ್ಷಕ ಪ್ರಶಸ್ತಿಗೆ ಆರೋಗ್ಯ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅಪಘಾತದ ಸಂದರ್ಭ ಸ್ಥಳದಲ್ಲಿರುವ ವ್ಯಕ್ತಿಗಳು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ನೆರವಾಗಲು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಸ್ವಯಂ ರೂಪದಲ್ಲಿ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದಾಗಿದೆ.
ಅರ್ಜಿಯನ್ನು ಪಡೆದು ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊ.ಸಂ. 222, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿಗೆ ಜುಲೈ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರಾದ ಪುಟ್ಟೇಗೌಡ ಅವರ ಮೊಬೈಲ್ 7259003402 ಅಥವಾ 7259003426 ಹಾಗೂ ತಾಲೂಕು ಆರೋಗ್ಯ ಮಿತ್ರರನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು