Sunday, 18 June 2017

ಜೂ. 20,21ರಂದು ನಗರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ : ಅರಣ್ಯವಾಸಿಗಳ ಸಾಂಪ್ರದಾಯಿಕ ಕಲೆ ಪ್ರಕಾರಗಳ ಅನಾವರಣ 18-06-2017

ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಕೂಟಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಚಾಲನೆ: (ಚಿತ್ರಗಳು ಮಾತ್ರ)
************************************************

 ಜೂ. 20,21ರಂದು ನಗರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ : ಅರಣ್ಯವಾಸಿಗಳ ಸಾಂಪ್ರದಾಯಿಕ ಕಲೆ ಪ್ರಕಾರಗಳ ಅನಾವರಣ

*ವಿಎಸ್ಎಸ್*

ಚಾಮರಾಜನಗರ, ಜೂ. 18:- ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲಬಾರಿಗೆ ರಾಜ್ಯ ಮಟ್ಟದ ಎರಡು ದಿನಗಳ ಬುಡಕಟ್ಟು ಉತ್ಸವ ಆಯೋಜಿಸಲಾಗಿದ್ದು ಜೂನ್20 ಹಾಗೂ 21ರಂದು ಜಿಲ್ಲಾಡಳಿತ ಭsವನದಲ್ಲಿರುವÀÀ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಬುಡಕಟ್ಟು ಜನರ ಸಂಸ್ಕ್ರತಿ, ಸಂಪ್ರದಾಯ, ಪರಂಪರೆ, ಕಲಾಪ್ರಕಾರಗಳನ್ನು ಉತ್ತೇಜಿಸಿ ಅಭಿವ್ಯಕ್ತಿಸಲು ವೇದಿಕೆ ಒದಗಿಸುವ ಉದ್ದೇಶದೊಂದಿಗೆ ಎರಡು ದಿನಗಳ ಬುಡಕಟ್ಟು ಉತ್ಸವ ನಗರದಲ್ಲಿ ಏರ್ಪಾಡಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ,ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋದನಾ ಸಂಸ್ಥೆ, ಜಿಲ್ಲಾಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉತ್ಸವ ನಡೆಯಲಿದೆ.
ಬುಡಕಟ್ಟು ಜನರ  ಶ್ರೀಮಂತ ಸಂಸ್ಕ್ರತಿ, ವೈವಿದ್ಯಮಯ ಚಟುವಟಿಕೆಗಳು, ಹಬ್ಬ ಆಚರಣೆಯನ್ನು ಅವರದ್ದೇ ಆದ ಪರಿಸರ ನಿರ್ಮಿಸಿ ನಗರ ಜನತೆಗೂ ಪರಿಚಯಿಸುವ ಉದ್ದೇಶವೂ ಬುಡಕಟ್ಟು ಉತ್ಸವ ಹೊಂದಿದೆ.
ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬುಡಕಟ್ಟು ಜನರು ತಮ್ಮ ಸಂಸ್ಕ್ರತಿ ಕಲೆ ಪ್ರದರ್ಶನವನ್ನು ಪೂರ್ವಭಾವಿಯಾಗಿ ರಾಜ್ಯ ಮಟ್ಟದ ವೇದಿಕೆಯಲ್ಲಿ ಸಾಬೀತು ಪಡಿಸಲು ವೇದಿಕೆಯಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋದನಾ ಸಂಸ್ಥೆ ಹಾಗೂ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅವಕಾಶ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಅರಣ್ಯದಲ್ಲಿ ವಾಸಿಸುವ 50 ಪರಿಶಿಷ್ಟ ವರ್ಗ ಬುಡಕಟ್ಟು ಸಮುದಾಯಗಳಿª.É ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಡಕಟ್ಟು ಜನರು ನೆಲೆಸಿದ್ದಾರೆ. ಇವರ ಸಾಂಪ್ರದಾಯಿಕ ಕಲೆ ಪ್ರಕಾರಗಳ ಅನಾವರಣ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬುಡಕಟ್ಟು ಉತ್ಸವದಲ್ಲಿ ನಡಯಲಿದೆ.
ರಾಜ್ಯದ ನಾನಾ ಭಾಗಗಳಿಂದ 45 ಬುಡಕಟ್ಟು ತಂಡಗಳು ತಮ್ಮ ಸಾಂಪ್ರದಾಯಿಕ ನೃತ್ಯ ಇನ್ನಿತರ ಕಲೆ ಪರಂಪರೆಯನ್ನು ಪ್ರಸ್ತುತ ಪಡಿಸಲಿವೆ. ಇದೇ ವೇಳೆ ಬುಡಕಟ್ಟು ಸಂಶೋದನಾ ಸಂಸ್ಥೆಯು ಬುಡಕಟ್ಟು ಜನರ ಜೀವನ ಶೈಲಿ, ಅಭಿವೃಧ್ದಿ ಹಾಗೂ ವೈವಿದ್ಯಮಯ ಸಂಸ್ಕ್ರತಿಯನ್ನು ಚಿತ್ರಿಸಿರುವ ಸಾಕ್ಷ್ಯಚಿತ್ರ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ ಮಾರಾಟ ಮಳಿಗೆ ಕೂಡ ಏರ್ಪಾಡು ಮಾಡಿದೆ.


ಜೂನ್ 20ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಬುಡಕಟ್ಟು ಉತ್ಸವ ಉದ್ಫಾಟಿಸುವರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಬುಡಕಟ್ಟು ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಫಾಟಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಅವರು ಯರವ ಬುಡಕಟ್ಟು ಭಾಷಾ ಶಬ್ಧಕೋಶ ಬಿಡುಗಡೆ ಮಾಡುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ , ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.



ಜೂ. 19ರಂದು ಕಾಮಗೆರೆಯಲ್ಲ್ಲಿ ಉದ್ಯಮಶೀಲತಾ ತರಬೇತಿ 

*ವಿಎಸ್ಎಸ್*

ಚಾಮರಾಜನಗರ, ಜೂ. 18:- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಇವುಗಳ ಆಶ್ರಯದಲ್ಲಿ ಭಾವಿ ಉದ್ಯಮಿಶೀಲರು ಹಾಗೂ ನಿರುದ್ಯೋಗಿ ಯುವ ಜನರಿಗೆ ಉದ್ಯಮ ಶೀಲತ ತರಬೇತಿ ಕಾರ್ಯಕ್ರಮದಲ್ಲಿ ಜೂನ್.19ರಿಂದ 30ರ ವರಗೆ ಕೊಳ್ಳೆಗಾಲ ತಾಲ್ಲೂಕಿನ ಕಾಮಗೆರೆಯ ಮೈರಾಡ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. 18ರಿಂದ 35ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ವಿಷೇಷ ಆದ್ಯತೆ ನೀಡಲಾಗುವುದು. ಕಾರ್ಯಾಗಾರದಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಮಾರುಕಟ್ಟೆ ಅವಕಾಶಗಳು, ಉದ್ಯಮಗಳ ಆಯ್ಕೆ, ಮಾರುಕಟ್ಟೆ ,ಹಣಕಾಸು ನಿರ್ವಹಣೆ, ಯೋಜನ ವರದಿ ತಯಾರಿಕೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಬ್ಯಾಂಕಿನಿಂದ ದೊರೆಯುವ ಹಣಕಾಸು ಸೌಲಭ್ಯಗಳು ಹಾಗೂ ಸ್ವಂತ ಉದ್ಯೋಗವನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು.
ಉಚಿತ ಪ್ರವೇಶಾವಕಾಶವಿದ್ದು ಆಸಕ್ತರು ನೇರವಾಗಿ ಜೂನ್ 19ರಂದು ತರಬೇತಿ ಸ್ಥಳದಲ್ಲಿ ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ (ಸಿಡಾಕ್)ದ  ಉಪನಿರ್ದೇಶಕರನ್ನು (ಕಚೇರಿ ದೂ.ಸಂಖ್ಯೆ 08226-226348, ಮೊಬೈಲ್  7760145784) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು