ಪ್ರಾಮಾಣಿಕ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಎಸ್.ವಿ.ಎಸ್.
ಚಾಮರಾಜನಗರ, ಜೂ.27:-ಅರೆ ಇದೇನಿದು,ಪ್ರಾಮಾಣಿಕ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ ಅಂತೀರಾ.? ಗಾಬರಿಯಾಗಬೇಡಿ ಓರ್ವ ಪತ್ರಕರ್ತ ಆದವನಿಗೆ ಏನೇ ಇರಲಿ ವೃತ್ತಿ ಬದ್ದತೆ, ಶಿಸ್ತು ಬದ್ದರೆ, ಇರಬೇಕು ಆದರೆ ಅನರ್ಹರೂ ಏನು ಗೊತ್ತಿಲ್ಲದವರಿಗೂ ಏನೇನೋ ಪ್ರಶಸ್ತಿ ಪಡೆಯುವವವರಿಗೆ ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘ ಕೆಲವು ನಿಬಂದನೆಗಳನ್ನು ಹಾಕಿ ಪ್ರಶಸ್ತಿ ನೀಡುತ್ತಿದೆ. ನಿಜಕ್ಕೂ ಅಬಿನಂದಸಿಲೇ ಬೇಕು.. ಅರ್ಹತೆ ನೋಡಿದರೆ ನಿಮಗೆ ಇದೆಲ್ಲವೂ ಪ್ರಾಮಾಣಿಕ ಪತ್ರಕರ್ತರಿಗೆ ಇದೀಯೇ ಎಂದು ಕೇಳಬೇಕಿದೆ. ಇರಲಿ ಪತ್ರಿಕಾ ಪ್ರಕಟನೆ ಓದೋಣ.......................ಜುಲೈ 1 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಹಾಗೂ ಪ್ರಾಮಾಣಿಕ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವರ್ಷದಿಂದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದಲ್ಲಿ ಜಿಲ್ಲೆಯ ಅಭಿವೃದ್ದಿ ಹಾಗೂ ಸಮಾಜ ಸೇವೆಯ ಬಗ್ಗೆ ವರದಿ ಪ್ರಕಟಿಸಿರಬೇಕು, ಯಾವುದೇ ಅಪರಾಧಕ್ಕೆ ಒಳಗಾಗಿರಬಾರದು ಮತ್ತು ಅವರ ಮೇಲೆ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆ ಇರಬಾರದು, ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗಳನ್ನು ಪಡೆದು ಸಮಾಜ ಸೇವೆಗೆ ಶ್ರಮಿಸುತ್ತಿರುವ ನೈಜ ಹಾಗೂ ಪ್ರಾಮಾಣಿಕ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು. ಸಂಘದ ಸದಸ್ಯರನ್ನು ಹೊರತು ಪಡಿಸಿ, ಉಳಿದ ಪತ್ರಕರ್ತರನ್ನು ಪ್ರಸಸ್ತಿಗೆ ಆಯ್ಕೆ ಮಾಡಲಾಗುವುದು. ಹಿರಿಯ ಪತ್ರಕರ್ತರ ಸಮಿತಿಯೊಂದನ್ನು ರಚಿಸಲಾಗಿದ್ದು, ಏಕಪಕ್ಷೀಯವಾಗಿ ನಿರ್ಧರಿಸದೇ, ಪ್ರಶಸ್ತಿಗೆ ಯೋಗ್ಯವಾದ ಪತ್ರಕರ್ತರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪತ್ರಿಕಾ ಪ್ರತಿನಿಧಿಗಳ ಮಕ್ಕಳಿಗೆ 2017ರ ‘ವಿದ್ಯಾರ್ಥಿ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತರು ಜುಲೈ 15ರೊಳಗಾಗಿ ನಗರದ ರಥದ ಬೀದಿಯಲ್ಲಿರುವ ಕೆಸಿಬಿ ಕಾಂಪ್ಲೆಕ್ಸ್‍ನ ನೆಲಮಳಿಗೆಯಲ್ಲಿರುವ ಸಂಘದ ಕಛೇರಿಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತರು, ಪತ್ರಿಕಾ ಹಾಗೂ ವಿದ್ಯುನ್ಮಾನ ಛಾಯಾಗ್ರಾಹಕರು ಮತ್ತು ಸಂಪಾದಕರಿಗೂ ಸನ್ಮಾನಿಸಲಾಗುವುದು.
ನಮ್ಮ ಸಂಘ ಯಾವುದೇ ಒಂದು ರಾಜಕೀಯ ಪಕ್ಷ ಹಾಗೂ ಜನಾಂಗಕ್ಕೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ವಿವಿಧ ಪ್ರಗತಿಪರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಜಹೀರ್‍ಅಹಮದ್-9964405554 ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.
ಜುಲೈ ಅಂತ್ಯದ ವೇಳೆಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು ಧ್ರುವನಾರಾಯಣ ಸೂಚನೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27 - ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ನದೀ ಮೂಲದಿಂದ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜುಲೈ 31ರೊಳಗೆ ಯಾವುದೇ ಕಾಮಗಾರಿ ಬಾಕಿ ಇರದಂತೆ ಸಂಪೂರ್ಣಗೊಳಿಸುವಂತೆ ಸೂಚಿಸಲÁಗಿದೆ ಎಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ತಿಳಿಸಿದರು.
ಚಾಮರಾಜನಗರ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಸ್ಥಳಗಳಾದ ತಾಯೂರು ಹಾಗೂ ಉಮ್ಮತ್ತೂರಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಧ್ರುವನಾರಾಯಣ ಅವರು ಈ ಮಾಹಿತಿ ನೀಡಿದರು.ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಯೋಜನೆ ಅವಧಿ ವಿಸ್ತಾರಗೊಂಡಿದೆ. ಯೋಜನೆ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ 15 ತಿಂಗಳು ತೆಗೆದುಕೊಳ್ಳಲಾಗಿದೆ. ಬಹುತೇಕ ಪ್ರಮುಖ ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸಗಳನ್ನು ಯಾವುದೇ ಸಬೂಬು ನೀಡದೆ ಜುಲೈ ಅಂತ್ಯದೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲÁಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನಲ್ಲಿಯೂ ಸಹ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ಇಂದೂ ಸಹ ಚಾಮರಾಜನಗರ ತಾಲೂಕಿಗೆ ನೀರು ಪೂರೈಕೆಯಾಗುವ ತಾಯೂರಿನ ಕಬಿನಿ ನದಿ ಬಳಿ ಇರುವ ಜಾಕ್‍ವೆಲ್, ಪ್ಯಾನಲ್ ರೂಂ, ಉಮ್ಮತ್ತೂರು ಜಲಸಂಗ್ರಹಾಗಾರ, ಶುದ್ಧೀಕರಣ ಘಟಕ ಸೇರಿದಂತೆ ಬಹುಮುಖ್ಯ ಕಾಮಗಾರಿ ವೀಕ್ಷಿಸಿ ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ನೀರು ಪೂರೈಸುವ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದ್ದು ಅದರಂತೆಯೇ ಗ್ರಾಮಗಳಲ್ಲಿ ನೀರು ತಲುಪಿಸುವ ಕೆಲಸ ಆಗಲಿದೆ. ಈಗಾಗಲೇ ಪೈಪ್ ಲೈನ್ ಕಾಮಗಾರಿ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಲ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ರಾ ವಾಟರ್ ಪೂರೈಸಲಾಗುತ್ತಿದ್ದು ಹಂತಹಂತವಾಗಿ ಉಳಿದ ಗ್ರಾಮಗಳಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ ಎಂದು ಧ್ರುವನಾರಾಯಣ ವಿವರಿಸಿದರು.
ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದುಕೊಂಡಿದೆ. ಸಂತೆಮರಹಳ್ಳಿ, ಬಸವಟ್ಟಿ, ಕಾವುದವಾಡಿ, ದೇಶವಳ್ಳಿ, ಹೆಗ್ಗವಾಡಿಪುರ ಭಾಗ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸೇರ್ಪಡೆಯಾಗಿರಲಿಲ್ಲ. ಸ್ಥಳೀಯ ಶಾಸಕರು ಈ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದ್ದರಿಂದ ಈ ಐದೂ ಗ್ರಾಮಗಳ ವ್ಯಾಪ್ತಿಯಲ್ಲಿ ಜುಲೈ 31ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಲÁಗಿದೆ ಎಂದರು.
ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ಗ್ರಾಮಗಳಿಗೂ ಶುದ್ಧ ನೀರು ಪೂರೈಕೆಯಾಗಲಿದೆಯೇ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಆಗಸ್ಟ್ ಮೊದಲ ವಾರ ಅಥವಾ 2ನೇ ವಾರದಲ್ಲಿ ಮುಖ್ಯಮಂತ್ರಿಯವರನ್ನು ಆಹ್ವಾನಿಸಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಸೇವೆಯನ್ನು ನಾಗರಿಕರ ಬಳಕೆಗೆ ಸಮರ್ಪಿಸಲಾಗುವುದು ಎಂದು ಧ್ರುವನಾರಾಯಣ ತಿಳಿಸಿದರು.
ಶಾಸಕರಾÀದ ಜಯಣ್ಣ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ,ssssss ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸದಸ್ಯರಾದ ಯೋಗೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ.ಪಿ. ಪುಟ್ಟಬುದ್ದಿ, ಮರಿಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನÉೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೇವರಾಜು, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಾ.ನಗರ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಅಂಗಡಿ, ಹೊಟೆಲ್, ಉದ್ದಿಮೆದಾರರಿಗೆ ಸೂಚನೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27 :- ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಹೋಟೆಲ್, ವೈನ್ ಶಾಪ್, ಬೇಕರಿ, ತಂಪುಪಾನೀಯ, ಫಾಸ್ಟ್ ಫುಡ್, ಹಣ್ಣು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಚಾಮರಾಜನಗರ ಸಭೆ ಸೂಚನೆ ನೀಡಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಡೆಂಗೆ, ಚಿಕನ್ ಗುನ್ಯಾ ಇತರೆ ಸಾಂಕ್ರಾಮಿಕ ರೋಗ ಪ್ರಕರಣಗಳು ಕಂಡುಬರುತ್ತಿದ್ದು ಇದರ ಪರಿಣಾಮಕಾರಿ ತಡೆಗೆ ಉದ್ದಿಮೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಹೋಟೆಲ್, ಫಾಸ್ಟ್ ಫುಡ್, ಬೇಕರಿ ಎಲ್ಲ ಕಡೆ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ನೀರು ನೀಡಬೇಕು. ಉದ್ಯಮ ಸ್ಥಳದ ಒಳ ಹೊರ ಆವರಣ ಸ್ವಚ್ಚವಾಗಿರಬೇಕು. ಊಟ ಉಪಾಹಾರ ಸೇವಿಸುವ ತಟ್ಟೆ ಲೋಟ ಇತರೆ ಪರಿಕರಗಳನ್ನು ಸೋಪ್ ಹಾಗೂ ಬಿಸಿನೀರು ಬಳಸಿ ಸ್ವಚ್ಚ ಮಾಡಬೇಕು.
ನೀರು ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ಸಾಂಕ್ರಾಮಿಕ ರೋಗ ಪ್ರಕರಣಗಳು ನಿಯಂತ್ರಣಕ್ಕೆ ಬರುವ ತನಕ ರಸ್ತೆ ಬದಿ ಪಾನಿಪುರಿ ಉದ್ದಿಮೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನಗರಸಭೆ ವಾಹನಗಳಿಗೆ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಮಾಂಸ ಮಾರಾಟಗಾರರು ಮಾಂಸವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು.
ಹಂದಿಗಳು ಇತರ ಪ್ರಾಣಿಗಳ ಓಡಾಟ ಜಾಸ್ತಿಯಾಗಿದ್ದು ಇವುಗಳನ್ನು ಪಟ್ಟಣದಿಂದ 5 ಕಿ.ಮೀ. ದೂರ ಇಡಬೇಕು. ತಪ್ಪಿದಲ್ಲಿ ನಗರಸಭೆ ವತಿಯಿಂದಲೇ ಸೆರೆಹಿಡಿದು ಮೈಸೂರಿನ ಪಿಂಜರಾಪೋಲ್‍ಗೆ ಕಳುಹಿಸಲಾಗುವುದು. ಪಟ್ಟಣದ ಎಲ್ಲಾ ಅಂಗಡಿ ಉದ್ದಿಮೆ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಹಳೆಯ ಟೈರ್, ತೆಂಗಿನ ಚಿಪ್ಪು, ಹೂವಿನ ಕುಂಡ ಇತರೆಡೆ ನೀರು ಶೇಖರಣೆಯಾಗದಂತೆ ಹಾಗೂ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳಬೇಕು. ಉದ್ದಿಮೆ ಸ್ಥಳದಲ್ಲಿ ಸ್ವಚ್ಚತೆ ಲೋಪಗಳು ಕಂಡುಬಂದಲ್ಲಿ ಉದ್ದಿಮೆ ಬಂದ್ ಮಾಡಿಸಿ ಅಗತ್ಯ ಕ್ರಮ ಜರುಗಿಸಲಾಗುವುದು. ನಾಗರಿಕರ ಆರೋಗ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಂಗಡಿ ಮುಂಗಟ್ಟು ಉದ್ದಿಮೆಗಳನ್ನು ನಿರ್ವಹಣೆ ಮಾಡುವ ಮೂಲಕ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪ್ರಭಾರ ಅಧ್ಯಕ್ಷರಾದ ಆರ್.ಎಂ. ರಾಜಪ್ಪ ಹಾಗೂ ಪೌರಾಯುಕ್ತ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಿಯುಸಿ ಪೂರಕ ಪರೀಕ್ಷೆ : ಕೇಂದ್ರಗಳ ಸುತ್ತ ನಿಷೇದಾಜ್ಞೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27- ಜಿಲ್ಲೆಯಲ್ಲಿ ಜೂನ್ 28 ರಿಂದ ಜುಲೈ 8ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಸುತ್ತಲೂ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಚಾಮರಾಜನಗರ ತಾಲೂಕು ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಿಗದಿಯಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪೂರಕ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2.30ರವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜು. 3ಕ್ಕೆ ಅಡುಗೆಯವರ ಹುದ್ದೆ, ಜು. 4ಕ್ಕೆ ಅಡುಗೆ ಸಹಾಯಕರ ಹುದ್ದೆ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ
ಚಾಮರಾಜನಗರ, ಜೂ. 26 – ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಖಾಲಿ ಇರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿದ್ದ ಪ್ರಾಯೋಗಿಕ ಪರೀಕ್ಷೆ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿ ಮರು ದಿನಾಂಕವನ್ನು ನಿಗದಿಗೊಳಿಸಿದೆ.ಜೂನ್ 28ಕ್ಕೆ ನಿಗದಿಯಾಗಿದ್ದ ಅಡುಗೆಯವರ ಹುದ್ದೆ ಪ್ರಾಯೋಗಿಕ ಪರೀಕ್ಷೆಯನ್ನು ಜುಲೈ 3ರಂದು ಬೆಳಿಗ್ಗೆ 9.00 ಗಂಟೆಗೆ ಹಾಗೂ ಜೂನ್ 29 ರಂದು ನಿಗದಿಯಾಗಿದ್ದ ಅಡುಗೆ ಸಹಾಯಕರ ಹುದ್ದೆ ಪ್ರಾಯೋಗಿಕ ಪರೀಕ್ಷೆಯನ್ನು ಜುಲೈ 4ರಂದು ಬೆಳಿಗ್ಗೆ 9 ಗಂಟೆಗೆ ನಡೆಸಲು ನಿಗದಿಗೊಳಿಸಿದೆ.
ದಾಖಲಾತಿ ಪರಿಶೀಲನೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್ ತಿತಿತಿ.hಣಣಠಿ://ಛಿhಚಿmಡಿಚಿರಿಟಿಚಿgಚಿಡಿ.ಟಿiಛಿ.iಟಿ ಹೊರಡಿಸಲಾಗುವುದು. ಅದರಂತೆ ಅಭ್ಯರ್ಥಿಗಳು ಕಾಲ್ ಲೆಟರನ್ನು ಕಚೇರಿಯಲ್ಲಿ ಪಡೆದುಕೊಂಡು ಹಾಜರಾಗುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 28ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 27 ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೆಗ್ಗವಾಡಿ ಎನ್ ಜೆ ವೈ ಮಾರ್ಗಕ್ಕೆ ಲಿಂಕ್ ಲೈನ್ ಮಾಡುವ ಕಾರ್ಯವನ್ನು ಜೂನ್ 28ರಂದು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೆಗ್ಗವಾಡಿ ಎನ್‍ಜೆವೈ ಮಾರ್ಗದ ಹರವೆ, ಮುಕ್ಕಡÀಹಳ್ಳಿ, ಮೂಡ್ನಾಕೂಡು, ಕುಲಗಾಣ ಹಾಗೂ ಮಲೆಯೂರು ಪಂಚಾಯಿತಿ ವ್ಯಾಪ್ತಿಯ ಮಾರ್ಗಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment