Thursday, 29 June 2017
ಶ್ರೀಚಾಮರಾಜೇಶ್ವರ ದೇವಸ್ಥಾನದ ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣ ದೋಚಿದ್ದ ವ್ಯಕ್ತಿ ಬಂದನ
ಶ್ರೀಚಾಮರಾಜೇಶ್ವರ ದೇವಸ್ಥಾನದ ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣ ದೋಚಿದ್ದ ವ್ಯಕ್ತಿ ಬಂದನ, ಯೋಜನೆ ರೂಪಿಸಲು ಅಂಕಿಅಂಶಗಳು ಅಗತ್ಯ : ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್, (29-06-2017)
ಶ್ರೀಚಾಮರಾಜೇಶ್ವರ ದೇವಸ್ಥಾನದ ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣ ದೋಚಿದ್ದ ವ್ಯಕ್ತಿ ಬಂದನ
**********************************
ಯೋಜನೆ ರೂಪಿಸಲು ಅಂಕಿಅಂಶಗಳು ಅಗತ್ಯ : ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್ ಎಸ್.ವಿ.ಎಸ್
ಚಾಮರಾಜನಗರ, ಜೂ. 29 - ರಾಷ್ಟ್ರದ ಜನಪರ ಯೋಜನೆ ಕಾರ್ಯಕ್ರಮಗಳನ್ನು ರೂಪಿಸಲು ಅಂಕಿಅಂಶಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗೆÀ ಜವಾಬ್ದಾರಿಯುತÀ ಹೊಣೆಗಾರಿಕೆ ಇದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಇಂದು ಸಾಂಖ್ಯಿಕ ತಜ್ಞ ಪ್ರೊ. ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಖ್ಯಿಕ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳನ್ನು ರೂಪಿಸಲು ಅಂಕಿಅಂಶಗಳು ಅಗತ್ಯವಾಗಿರುವುದು ವಾಸ್ತವ ಸಂಗತಿಯಾಗಿದೆ. ಅಂಕಿಅಂಶಗಳಿರದೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಯೋಜನೆಯ ಸಾಧಕಬಾಧಕಗಳ ವಿಶ್ಲೇಷಣೆಗೆ ಅಂಕಿಅಂಶಗಳನ್ನು ಆಧಾರವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.
ಯೋಜನೆ ತಯಾರಿಸಿ ಪ್ರಗತಿ ಕಾರ್ಯಕ್ರಮಗಳು ಅನುಷ್ಠಾನವಾಗುವುದರಿಂದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗೆ ಗುರುತರವಾದ ಜವಾಬ್ದಾರಿ ಹಾಗೂ ಮಹತ್ವ ಇದೆ. ಇಲಾಖೆಯು ಸಹ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದೆ ಎಂದು ಹರೀಶ್ ಕುಮಾರ್ ಪ್ರಶಂಶಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ಅಂಕಿಅಂಶಗಳ ಲೆಕ್ಕಾಚಾರ ಕುಟುಂಬದಿಂದ ಆರಂಭವಾಗಿ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಯೋಜನೆ ವೆಚ್ಚ ಖರ್ಚು ಇನ್ನಿತರ ಎಲ್ಲಾ ಬಹುಮುಖ್ಯ ಕಾರ್ಯಕ್ರಮಗಳಿಗೂ ಅಂಕಿಅಂಶವನ್ನೇ ಗಣನೆಗೆ ಇಟ್ಟುಕೊಳ್ಳಬೇಕಾಗುತ್ತದೆ. ಹುಟ್ಟು ಸಾವಿನ ಸಂಖ್ಯೆಗಳನ್ನು ಸಹ ದಾಖಲಿಸಲಾಗುತ್ತದೆ. ಹೀಗಾಗಿ ಅಂಕಿಅಂಶಗಳನ್ನು ಹೊರತುಪಡಿಸಿದ ಯೋಜನೆ ಕಾರ್ಯಕ್ರಮಗಳು ಇಲ್ಲದೇ ಇರುವದನ್ನು ಗಮನಿಸಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ. ಮಾದೇಶು ಅವರು ಮಾತನಾಡಿ ಭಾರತೀಯ ಸಾಂಖ್ಯಿಕ ಸಂಸ್ಥೆಯನ್ನು ಸ್ಥಾಪಿಸಿ ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಕ್ಕೆ ಪ್ರಶಾಂತಚಂದ್ರ ಮಹಾಲಾನೋಬಿಸ್ ಅಪಾರ ಕೊಡುಗೆ ನೀಡಿದ್ದಾರೆ. ಬೆಳೆ ಇಳುವರಿ ಕಂಡುಹಿಡಿಯುವ ಸಂಖ್ಯಾಶಾಸ್ತ್ರದ ಮಾದರಿ ಸಮೀಕ್ಷೆಗಳನ್ನು ಪ್ರಾರಂಭಿಸಿದರು. ಭಾಷಾ ಶಾಸ್ತ್ರದ ಬಗ್ಗೆ ಕೂಡ ಆಸಕ್ತಿವಹಿಸಿ ಅನೇಕ ಉಪಯುಕ್ತ ಕೊಡುಗೆಗಳನ್ನು ನೀಡಿದರು ಎಂದರು.
ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಟಿ. ರವೀಂದ್ರ ನಾಯ್ಕ ಅವರು ವಿಶೇಷ ಉಪನ್ಯಾಸ ನೀಡಿದರು.
ಇದೇವೇಳೆ ಆಡಳಿತದಲ್ಲಿ ಅಂಕಿಅಂಶ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ವತಿಯಿಂದ ಬಾಲಮಂದಿರದ ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗ್, ನೋಟ್ ಬುಕ್ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಯೋಜನಾ ನಿರ್ದೆಶಕರಾದ ಪ್ರಕಾಶ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ತೋಟಗಾರಿಕೆ ಉಪನಿರ್ದೇಶಕರಾದ ನಾಗರಾಜು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ, ಆರ್. ರೇವತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜು. 6ರಂದು ಡಾ. ಬಾಬು ಜಗಜೀವನರಾಮ್ ಪುಣ್ಯಸ್ಮರಣೆ
ಚಾಮರಾಜನಗರ, ಜೂ. 29 :- ಜಿಲ್ಲಾಡಳಿತದ ವತಿಯಿಂದ ಹಸಿರುಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪಪ್ರÀಧಾನಿ ಡಾ. ಬಾಬು ಜಗಜೀವನರಾಮ್ ಅವರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜುಲೈ 6ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮುಖಾತರ ಗೌರವ ನಮನ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಸಂಘಸಂಸ್ಥೆಗಳ ಸಮುದಾಯಗಳ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು, ನಾಗರಿಕರು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಕೋರಿದ್ದಾರೆ.
ಹರವೆಯಲ್ಲಿ ಯಶಸ್ವಿಯಾಗಿ ನಡೆದ ಡೆಂಗೆ ಜಾಗೃತಿ ಕಾರ್ಯಕ್ರಮ
ಎಸ್.ವಿ.ಎಸ್
ಚಾಮರಾಜನಗರ, ಜೂ. 29 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಹರವೆಯಲ್ಲಿ ಇಂದು ಡೆಂಗೆ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜನರ ಅರಿವಿಗಾಗಿ ಏರ್ಪಡಿಸಲಾಗಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆರೆಹಳ್ಳಿ ನವೀನ್ ಅವರು ಡೆಂಗೆ ಸೇರಿದಂತೆ ಜ್ವರ ಸಂಬಂಧಿ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ತಡೆಯಲು ಜನರಿಗೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.ರೋಗ ನಿಯಂತ್ರಣಕ್ಕೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳು, ಶುಚಿತ್ವ ಸುತ್ತಮುತ್ತಲ ಪರಿಸರ ನೈರ್ಮಲ್ಯ ಕಾಪಾಡುವಿಕೆ ಮಹತ್ವವನ್ನು ತಿಳಿಸಿಕೊಡಬೇಕಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಮತ್ತು ನಾಗರಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ನವೀನ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಮಾತನಾಡಿ ಯಾವುದೇ ಜ್ವರ ಬಂದರೂ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮನೆಯ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಸೊಳ್ಳೆಗಳ ನಿಯಂತ್ರಣ ಮಾಡಬೇಕು. ವೈಯಕ್ತಿಕ ಶುಚಿತ್ವದ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು ಎಂದರು.
ಯಾವುದೇ ಆರೋಗ್ಯ ಸಮಸ್ಯೆಗಳಿರಲಿ ಆರೋಗ್ಯ ಇಲಾಖೆ ಸ್ಪಂದಿಸಿ ಪರಿಹರಿಸುವ ಯತ್ನ ಮಾಡುತ್ತಿದೆ. ಜ್ವರ ಸಂಬಂಧಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡುತ್ತಿದೆ. ಆರೋಗ್ಯ ಇಲಾಖೆ ಸೇವೆಯನ್ನು ಪಡೆದುಕೊಂಡು ಸಹಕರಿಸುವಂತೆ ಡಾ. ಕೆ.ಎಚ್. ಪ್ರಸಾದ್ ಇದೇವೇಳೆ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸ್ಸಯರಾದ ರೇವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಟ್ಟಮ್ಮ, ಉಪಾಧ್ಯಕ್ಷರಾದ ಜಯಶೀಲ, ಸದಸ್ಯರಾದ ಮಹದೇವಸ್ವಾಮಿ, ನಂಜುಂಡಸ್ವಾಮಿ, ಸುಬ್ಬಶೆಟ್ಟಿ, ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಎಂ. ನಾಗರಾಜು, ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಎನ್. ಮೋಹನ್ ಕುಮಾರ್, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜು. 1ರಂದು ಶಾಸಕರ ಅಧ್ಯಕ್ಷತೆಯಲ್ಲಿ ತಾ.ಪಂ. ಕೆಡಿಪಿ ಸಭೆ
ಚಾಮರಾಜನಗರ, ಜೂ. 29 - ಚಾಮರಾಜನಗರ ತಾಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕರ್ನಾಕಟ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜುಲೈ 1ರಂದು ಬೆಳಿಗ್ಗೆ 10.30 ಗಂಟೆÉಗೆ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೊರಾರ್ಜಿ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 29 – ಗುಂಡ್ಲುಪೇಟೆ ತಾಲ್ಲೂಕಿನ ಯಡವನ ಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ವಿಜ್ಞಾನ ಕಾಲೇಜಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಉನ್ನತೀಕರಿಸಿ 2017-18ನೇ ಸಾಲಿಗೆ ವಿಜ್ಞಾನ ಪದವಿಪೂರ್ವ ತರಗತಿ ಆರಂಭಿಸಲಾಗಿದೆ. ವಿಜ್ಞಾನ ವಿಷಯಗಳಾದ ಪಿಸಿಎಂಬಿ ಹಾಗೂ ಪಿಸಿಎಂಸಿ ವಿಷಯಗಳಿಗೆ ಪ್ರಥಮ ಪಿಯುಸಿಗೆ ಪ್ರವೇಶ ನೀಡಲಾಗುತ್ತದೆ.
ಅರ್ಜಿಯನ್ನು ಜಿಲ್ಲೆಯ ಯಾವುದೇ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜುಲೈ 6ರೊಳಗೆ ಯಡವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವಸತಿ ಶಾಲೆಯ ಪ್ರಾಂಶುಪಾಲರು ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******************************************************************************
ಹೈನುಗಾರಿಕೆ ಹಾಗೂ ಎರೆಹುಳು ಸಾಕಣಿಕೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ:
ಚಾಮರಾಜನಗರ, ಜೂ. 29 -
(ಎಸ್.ವಿ.ಎಸ್)
ಜಿಲ್ಲಾ ಪಂಚಾಯತ್, ಚಾಮರಾಜನಗರ ಜಿಲ್ಲೆ, ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಗುಂಡ್ಲುಪೇಟೆ ತಾಲ್ಲೂಕು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ 10 ದಿನಗಳ ಹೈನುಗಾರಿಕೆ ಹಾಗೂ ಎರೆಹುಳು ಸಾಕಣಿಕೆ ತರಬೇತಿ ಕಾರ್ಯಕ್ರಮವನ್ನು ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯಲ್ಲಿ ಪ್ರಾರಂಭಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಡಾ. ಹರೀಶ್ ಕುಮಾರ್.ಕೆ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಚಾಮರಾಜನಗರ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಯುವಜನತೆ ನಗರ ಪ್ರದೇಶಗಳಿಗೆ ವಲಸೆಹೋಗುವುದನ್ನ ತಪ್ಪಿಸಲು, ಸ್ವಯಂ ಉದ್ಯೋಗವನ್ನು ಕೈಗೊಂಡು ಕುಟುಂಬದ ಆರ್ಥಿಕಾಭಿವೃದ್ಧಿಯನ್ನು ಕಾಣಲು, ಈಗಾಗಲೇ ಮಾಡುವ ಕೆಲಸದ ಜೊತೆಗೆ ಉಪಕಸುಬನ್ನು ಹೊಂದಿ ಉದ್ಯೋಗವನ್ನು ಕೈಗೊಳ್ಳಲು ಈ ರಾಜೀವ್ ಗಾಂಧಿ ಚೈತನ್ಯ ಯೋಜನೆಯನ್ನು ಸರ್ಕಾರವು ಪ್ರಾರಂಭಿಸಿರುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪಡೆದು ಬ್ಯಾಂಕಿನಿಂದ ಸಾಲವನ್ನು ಪಡೆದು ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸಿರಿ ಎಂಬುದಾಗಿ ತಿಳಿಸಿದರು. ಅಲ್ಲದೆ ಪ್ರತಿಯೊಬ್ಬ ಮನುಷ್ಯನು ದುಡಿಮೆಯ ಮೂಲಕ ಸಂಪಾದನೆಯನ್ನು ಮಾಡಿ ತನ್ನ ಸಂಸಾರವನ್ನು ನಡೆಸಿಕೊಂಡು ಹೊಗುವುದು ಸೂಕ್ತ. ಪರಿಶ್ರಮವಿಲ್ಲದೆ ದೊರಕುವ ಪದವಿ ಅಥವಾ ಅಧಿಕಾರ ಶಾಶ್ವತವಲ್ಲ ಎಂಬುದಾಗಿ ತಿಳಿಸಿದರು. ಅಲ್ಲದೆ ರುಡ್‍ಸೆಟ್ ಸಂಸ್ಥೆಯು ಸರ್ಕಾರದೊಡನೆ ಕೈಗೂಡಿಸಿ ಯಶಸ್ವಿಯಾಗಿ ವಿವಿಧ ಕೌಶಲ್ಯ ತರಬೇತಿಗಳನ್ನು ನಡೆಸಿ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕಾರಣಕರ್ತರಾಗಿರುತ್ತಾರೆ. ಅಂತಿಮವಾಗಿ ಸ್ವ-ಉದ್ಯೋಗವನ್ನು ಪ್ರಾತಂಭಿಸಿ ಅದರಿಂದ ಆದಾಯವನ್ನು ಪಡೆದು ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಿರಿ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀಯುತ ಶ್ರೀಧರ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಹಾಗೂ ಶ್ರೀಯುತ ಶ್ರೀನಿವಾಸ್, ಸಹಾಯಕ ಯೋಜನಾ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಚಾ ನಗರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಯೋಜನಾಧಿಕಾರಿಗಳಾದ ಶ್ರೀ ಬಿ.ಎಂ.ಚಂದ್ರಶೇಖರ್ ಸಂಸ್ಥೆಯ ಪರಿಚಯ ತಿಳಿಸಿದರು. ಸಂಯೋಜಕರಾದ ಶ್ರೀ ಬಿ.ಚಿನ್ನಸ್ವಾಮಿಯವರು ನೇರೆದಿದ್ದ ಗಣ್ಯರು ಹಾಗೂ ಶಿಬಿರಾರ್ಥಿಗಳಿಗೆ ಸ್ವಾಗತ ಹಾಗೂ ವಂದನಾರ್ಪಣೆ ತಿಳಿಸಿದರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Wednesday, 28 June 2017
ಯುವರಂಗಕರ್ಮಿ ರೂಬಿನ್ಸಂಜಯ್ ಅವರಿಗೆ ಸಿಜಿಕೆ ರಂಗಪ್ರಶಸ್ತಿ ಪ್ರದಾನ ,28=06=2017
ಮಹದೇಶ್ವರಬೆಟ್ಟ: ಹುಂಡಿ ಪರ್ಕಾವಣೆ : ತೊಂಭತ್ತೈದು ಲಕ್ಷದ ನಲವತ್ತೇಳು ಸಾವಿರದ ಒಂದು ನೂರ ಎಂಭತ್ತೇಳು ರೂಗಳು , ಚಿನ್ನದ ಪದಾರ್ಥಗಳು 0. 048 ( ನಲವತ್ತೆಂಟು ಗ್ರಾಂ) ಮತ್ತು ಬೆಳ್ಳಿ ಪದಾರ್ಥಗಳು 1.085(ಒಂದು ಕೆ.ಜಿ. ಎಂಭತ್ತೈದು ಗ್ರಾಂ)
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:- ದಿನಾಂಕ:28-06-2017ರಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ, ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು,
ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ. 95,47,187/- ( ತೊಂಭತ್ತೈದು ಲಕ್ಷದ ನಲವತ್ತೇಳು ಸಾವಿರದ ಒಂದು ನೂರ ಎಂಭತ್ತೇಳು ರೂಗಳು ಮಾತ್ರ) ಬಂದಿರುತ್ತದೆ. ಇದಲ್ಲದೇ ಚಿನ್ನದ ಪದಾರ್ಥಗಳು 0. 048 ( ನಲವತ್ತೆಂಟು ಗ್ರಾಂ) ಮತ್ತು ಬೆಳ್ಳಿ ಪದಾರ್ಥಗಳು 1.085(ಒಂದು ಕೆ.ಜಿ. ಎಂಭತ್ತೈದು ಗ್ರಾಂ) ದೊರೆತಿರುತ್ತದೆ.
ಸದರಿ ಹುಂಡಿಗಳ ಪರ್ಕಾವಣೆಯಲ್ಲಿ ಶ್ರೀ ಮ.ಮ. ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ, ಕಛೇರಿಯ ಅಧೀಕ್ಷಕರಾದ ಶ್ರೀ ಬಿ.ಮಾದರಾಜು ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀ ಷಣ್ಮುಗ ವರ್ಮ, ಆರಕ್ಷಕ ನಿರೀಕ್ಷಕರು, ಮಹದೇಶ್ವರಬೆಟ್ಟ ಹಾಗೂ ಆರಕ್ಷಕ ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್ & ಸಿಬ್ಬಂದಿ ವರ್ಗದವರು ಹಾಜರಿದ್ದರು.
ಯುವರಂಗ ನಿರ್ದೇಶಕ ರೂಬಿನ್ ಸಂಜಯ್‍ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ
ಪ್ರಶಸ್ತಿ ವಿಜೇತರ ಕಿರು ಪರಿಚಯ
ಶ್ರೀಯುತ ರೂಬಿನ್ ಸಂಜಯ್ ರವರು ಚಾಮರಾಜನಗರ ತಾಲ್ಲೂಕು ಮಾದಾಪುರ ಗ್ರಾಮದವರಾಗಿದ್ದು ಡೇವಿಡ್ ಹಾಗೂ ಪ್ರೇಮಲತ ರವರ ಪುತ್ರ, ಎಂ ಎ ಹಾಗೂ ಸ್ನಾತಕೋತ್ತರ ಪತ್ರಿಕ ಡಿಪ್ಲೊಮಾ ಪದವಿದರರಾಗಿದ್ದು , ರಂಗವಾಹಿನಿಯ ಸಂಸ್ಥೆಯ ಮಂಟೇಸ್ವಾಮಿ ನಾಟಕದ ಮೂಲಕ ರಂಗಪ್ರವೇಶ ಮಾಡಿದ್ದು, ನಿರಂತರವಾಗಿ ಹನ್ನೊಂದು ವಷ೯ಗಳಿಂದಲು ರಂಗಭೂಮಿಯಲ್ಲಿ ಕಾರ್ಯ ನಿವ೯ಹಿಸುತ್ತಿದ್ದಾರೆ, ಕನಾ೯ಟಕ ಸಕಾ೯ರದ, ಮಲೆಗಳಲ್ಲಿ ಮದುಮಗಳು, ಮನುಷ್ಯ ಜಾತಿ ತಾನೊಂದೆ ವಲಂ, ದೃಶ್ಯ ನಾಟಕದಲ್ಲಿ ಸಹಾಯ ನಿದೇ೯ಶಕರಾಗಿ ಕಾರ್ಯ ನಿವ೯ಹಿಸಿದ್ದಾರೆ, ದೇವನಾಂಪ್ರಿಯ ಅಶೋಕ, ೪೦ ಪ್ರದಶ೯ನ ಕಂಡಿದೆ, ಅಂಗುಲಿ ಮಾಲ, ಅನ್ನದಾತ,ಕಸಿ ಗಿಡದ ಹೂವು, ಮಹಾಪೌಣಿ೯ಮೆ,ಕಿಸಾಗೋತಮಿ,ಅಂಬೇಡ್ಕರ್, ವಿಚಾರಕ್ರಾಂತಿ, ಎರಡು ನಾಯಿಗಳು ನಾಟಕಕ್ಕೆ ಸಹ ನಿದೇ೯ಶನವನ್ನು ನೀಡಿದ್ದು, ಮಧ್ಯಮ ವ್ಯಾಯೋಗ, ಹಾಗು ಬೆಲ್ಲದ ದೋಣಿ ಎಂಬ ನಾಟಕವನ್ನು ನಿದೇ೯ಶನ ಮಾಡಿದ್ದು, ೨೫ ನಾಟಕಗಳಿಗೂ ಹೆಚ್ಚು ನಟನೆ ಮಾಡಿದ್ದು, ಹೀಗೆ ೩೪ ನಾಟಕ ಗಳಿಗೆ, ವಸ್ತ್ರವಿನ್ಯಾಸ , ರಂಗ ಪರಿಕರ, ನೃತ್ಯ, ಮಾಡಿದ್ದು, ೧೦೦೦ಕ್ಕೂ ಹೆಚ್ಚು ಬೀದಿ ನಾಟಕಗಳು, ರಾಜ್ಯದ ಹಲವಾರು ತಂಡಗಳಲ್ಲಿ, ಕಾರ್ಯ ನಿವ೯ಹಿಸಿದ್ದು, ಉತ್ತರ ಪ್ರದೇಶ,ಆಂದ್ರ ರಾಜ್ಯಗಲ್ಲೂ ನಾಟಕ ಪ್ರದಶ೯ ಮಾಡಿದ್ದಾರೆ, ಸಿ,ಬಸವಲಿಂಗಯ್ಯ, ಮಾಲ್ತೇಶ್ ಬಡಿಗೇರ,ಸುನಿಲ್ ಹುಡುಗಿ,ಸುಮತಿ,ಗಂಠಿ, ಇಸ್ಮಾಯಿಲ್ ಗೋನಾಳ್, ಹೆಚ್,ಎಂ ರಂಗಯ್ಯ, ಶಿವಲಿಂಗಯ್ಯ ಎನ್, ಸಿ.ಎಂ,ನರಸಿಂಹ ಮೂತಿ೯,ಪ್ರಕಾಶ್ ಗರುಡ,ಸಾಂಬಶಿವ ದಳವಾಯಿ, ನಿದೇ೯ಶಕರಗಳ ಜೊತೆಯಲ್ಲಿ ಕಾಯ೯ ನಿವ೯ಹಿಸಿದ್ದಾರೆ, )
*********************************
ಡಾ|| ರಾಜ್‍ಕುಮಾರ್ ಕೊಡುಗೆ ನೀಡಿದ ಚಾಮರಾಜನಗರ ಜಿಲ್ಲೆ ರಂಗಭೂಮಿಯ ತವರು
ಚಾಮರಾಜನಗರ. ಜೂನ್ 27 ಕನ್ನಡದ ಮೇರುನಟ ಡಾ|| ರಾಜ್‍ಕುಮಾರ್‍ರಂತಹ ಸಾಂಸ್ಕøತಿಕ ರಾಯಭಾರಿಯನ್ನು ಕೊಡುಗೆ ಕೊಟ್ಟ ‘ಚಾಮರಾಜನಗರ ಜಿಲ್ಲೆ ರಂಗಭೂಮಿಯ ತವರು’ ಎಂದು ಲೋಕಸಭಾ ಸದಸ್ಯ ಆರ್.ಧೃವನಾರಾಯಣ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ರೋಟರಿ ಭವನದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ, ಬೆಂಗಳೂರು ಆರ್ಟ್ ಫೌಂಡೇಷನ್, ರಂಗವಾಹಿನಿ ಮತ್ತು ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ಧ ಯುವರಂಗಕರ್ಮಿ ರೂಬಿನ್ಸಂಜಯ್ ಅವರಿಗೆ ಸಿಜಿಕೆ ರಂಗಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ರಂಗಭೂಮಿಯು ಮಾನವೀಯ ಜೀವನ ಮೌಲ್ಯಗಳನ್ನು ವೃದ್ಧಿಸಬಲ್ಲುದು. ಸಾಮಾಜಿಕ ನ್ಯಾಯದ ಅಡಿಯಲ್ಲಿ ರಂಗಭೂಮಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದ ಪ್ರೊ.ಸಿ.ಜಿ.ಕೃಷ್ಣಸ್ವಾಮಿ, ಕನ್ನಡ ರಂಗಭೂಮಿಗೆ ಹೊಸ ಬಗೆಯ ನಾಟಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರನ್ನು ದೇವನೂರು ಮಹದೇವ ಅವರ ಒಡಲಾಳ ನಾಟಕದ ಮೂಲಕ ಕನ್ನಡ ರಂಗಭೂಮಿಗೆ ಕೊಡುಗೆ ನೀಡಿದ ಕೀರ್ತಿ ಸಿಜಿಕೆ ಅವರದ್ದು. ಸಿಜಿಕೆ ಅವರ ಜನ್ಮದಿನವನ್ನು ಬೀದಿರಂಗ ದಿನವನ್ನಾಗಿ ಆಚರಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಜಿಲ್ಲೆಯಲ್ಲಿ ನಡೆಯುವ ರಂಗಭೂಮಿಯ ಚಟುವಟಿಕೆಗಳಿಗೆ ಎಲ್ಲಾ ರೀತಿಯ ನೆರವು ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಿಜಿಕೆ ಕುರಿತು ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಸಿ.ಜಿ.ಕೃಷ್ಣಸ್ವಾಮಿಯವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಜೊತೆಗೆ 70ರ ದಶಕದಲ್ಲಿ ಕೈಲಾಸಂ, ಪರ್ವತವಾಣಿ, ಬಿ.ವಿ.ಕಾರಂತರ ನಂತರ ರಂಗಭೂಮಿಯಲ್ಲಿ ಅಗಾಧವಾದ ಕ್ರಾಂತಿ ಮಾಡಿದರು ಎಂದರು.
ಎಡಪಂಥೀಯ ಧೋರಣೆ ಹೊಂದಿದ್ದ ಸಿಜಿಕೆ, ಬೀದಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಸುಮಾರು 20 ರಿಂದ 30 ವರ್ಷಗಳ ಕಾಲ ಕನ್ನಡ ರಂಗಭೂಮಿಯನ್ನು ಉತ್ಕøಷ್ಟ ಪರಂಪರೆಯತ್ತ ಕೊಂಡೊಯ್ದರು. ವೃತ್ತಿಯಲ್ಲಿದ್ದುಕೊಂಡೇ ರಂಗಭೂಮಿಯನ್ನು ಬೆಳೆಸಿದ ನಾಟಕಕಾರರಲ್ಲಿ ಸಿ.ಜಿ.ಕೃಷ್ಣಸ್ವಾಮಿಯೂ ಒಬ್ಬರು. ರಂಗಭೂಮಿಯ ಜೊತೆಗೆ ಕನ್ನಡದ ಹಲವು ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದು ಕೆಲ ಧಾರಾವಾಹಿಗಳಲ್ಲೂ ನಟನೆ ಮಾಡಿದ್ದಾರೆ. ಕನ್ನಡ ರಂಗಭೂಮಿಯ ಅಸ್ತಿತ್ವ ಮತ್ತು ಜೀವಂತಿಕೆಗೆ ಸಿಜಿಕೆ ಅವರ ಕೊಡುಗೆ ಅಸಾಮಾನ್ಯವಾದುದು ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಶೋಷಣೆ ವಿರುದ್ಧ ಧ್ವನಿ ಎತ್ತುತ್ತಿದ್ದ ಸಿಜಿಕೆ, ಕನ್ನಡ ರಂಗಭೂಮಿಯ ಧೀಮಂತ ಶಕ್ತಿ. ನಮ್ಮಂಥ ಯುವಕರಿಗೆ ಸ್ಪೂರ್ತಿದಾಯಕರಾಗಿದ್ದರು. ಬಹಳಷ್ಟು ಯುವಕ-ಯುವತಿಯರನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಅವರೆಲ್ಲರೂ ರಂಗಭೂಮಿಯಲ್ಲೀಗ ಹೆಸರು ಮಾಡಿದ್ದಾರೆ. ಸಿಜಿಕೆ ಹೆಸರು ಅಜರಾಮರವಾಗಿಸಲು ಸ್ನೇಹಿತರೆಲ್ಲರೂ ಸೇರಿ ಕರ್ನಾಟಕದ 30 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸಿಜಿಕೆ ಹೆಸರಿನಲ್ಲಿ ಬೀದಿರಂಗದಿನವನ್ನಾಗಿ ಆಚರಿಸಿ, ರಂಗ ಪ್ರತಿಭಾನ್ವಿತರಿಗೆ ಸಿಜಿಕೆ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ ಎಂದರು.
ರಂಗಭೂಮಿ ಒಂದು ಜೀವಂತ ಕಲೆ, ಸೃಜನಶೀಲತೆ ರಂಗಭೂಮಿಯ ತಾಯಿ ಬೇರು, ರಂಗ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ರಂಗಮಂದಿರ ಅವಶ್ಯಕವಾಗಿದೆ. ಇಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಿದೆ. ಆದರೂ ಅದು ಉಪಯೋಗವಾಗುತ್ತಿಲ್ಲ. ದಯಮಾಡಿ ಆದಷ್ಟು ಬೇಗ ರಂಗ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಸಂಸದರು ಮುಂದಾಗಬೇಕು ಎಂದು ನರಸಿಂಹಮೂರ್ತಿ ಮನವಿ ಮಾಡಿದರು.
***************************************************************************
ಕೆಲಸದಲ್ಲಿ ವಿಳಂಬ ಧೋರಣೆ ತೋರಿದ ಪಿ.ಡಿ.ಓ ವರ್ಗಾವಣೆ
ಚಾಮರಾಜನಗರ, ಜೂ. 28 :- ಸರ್ಕಾರಿ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರದೆ ವಿಳಂಬ ಧೋರಣೆ ತೋರಿದ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಮೂಲ ಚಿಕ್ಕಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಟಿ.ಶಿವಕುಮಾರ್ ಅವರನ್ನು ಗುಂಡ್ಲುಪೇಟೆ ತಾಲ್ಲೂಕು ಶಿವಪುರ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ.
ಟಿ.ಶಿವಕುಮಾರ್ ರವರು ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿ ಆದೇಶಿಸಿದ್ದರು ಸಹ ನಿರ್ಲಕ್ಷ್ಯ ಧೊರಣೆ ಅನುಸರಿಸುತ್ತಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಟಿ.ಶಿವಕುಮಾರ್ ಅವರನ್ನು ಗುಂಡ್ಲುಪೇಟೆ ತಾಲ್ಲೂಕು ಶಿವಪುರ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಡಾ.ಕೆ.ಹರೀಶ್‍ಕುಮಾರ್ ರವರು ಆದೇಶ ಹೊರಡಿಸಿದ್ದಾರೆ.
ಜೂ. 29 ರಂದು ಸಾಂಖ್ಯಿಕ ದಿನಾಚರಣೆ
ಚಾಮರಾಜನಗರ, ಜೂ. 28 - ಸಾಂಖ್ಯಿಕ ತಜ್ಞರಾದ ಪ್ರೊ. ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ವತಿಯಿಂದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 29 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಾದೇಶು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಟಿ. ರವೀಂದ್ರ ನಾಯ್ಕ ಅವರು ಆಡಳಿತ ಅಂಕಿಅಂಶಗಳು ವಿಷಯ ಕುರಿತು ಉಪನ್ಯಾಸ ನೀಡುವರು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 30ರಂದು ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ
ಚಾಮರಾಜನಗರ, ಜೂ. 28- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಚಂಚಹಳ್ಳಿಯ ಪಾರ್ವತಿ ಮಹಿಳಾ ಸಮಾಖ್ಯ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 30ರಂದು ಬೆಳಿಗ್ಗೆ 11 ಗಂಟೆÉಗೆ ಯಳಂದೂರಿನ ಚಂದನ ಮಹಿಳಾ ಅಭಿವೃದ್ಧಿ ಸಂಘದ ಆವರಣದಲ್ಲಿ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಎಂ. ಸುಂದರ್ ಕಾರ್ಯಕ್ರಮ ಉದ್ಘಾಟಿಸುವರು. ಚಂದನ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪುಟ್ಟಲಿಂಗಮ್ಮ ಅಧ್ಯಕ್ಷತೆ ವಹಿಸುವರು.
ಧ್ವನಿ ಮಹಿಳಾ ಅಭಿವೃದ್ಧಿ ಸಂಘದ ಸಂಯೋಜಕರಾದ ಲೀನಾಕುಮಾರಿ ಅತಿಥಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ಜು. 2ರಂದು ತಾ.ಪಂ., ಗ್ರಾ..ಪಂ. ಉಪಚುನಾವಣೆ : ಸಂತೆ, ಜಾತ್ರೆ ನಿಷೇಧ
ಚಾಮರಾಜನಗರ, ಜೂ. 28 :– ವಿವಿಧ ಕಾರಣದಿಂದ ತೆರವಾಗಿರುವ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಣಗಳ್ಳಿ ತಾಲೂಕು ಪಂಚಾಯಿತಿ ಹಾಗೂ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಜುಲೈ 2ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಮಣಗಳ್ಳಿ ಕ್ಷೇತ್ರ ವ್ಯಾಪ್ತಿ ಹಾಗೂ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಸಂತೆ, ಎಲ್ಲ ತರಹದ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ನಾಗರಿಕರು ಮತ ಹಾಕಲು ಅನುಕೂಲವಾಗುವಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸಂತೆ ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ಜು. 1 ರಿಂದ ಮತದಾರರ ಪಟ್ಟಿಗೆ ಯುವ ಮತದಾರರ ಸೇರ್ಪಡೆಗೆ ವಿಶೇಷ ಆಂದೋಲನ
ಚಾಮರಾಜನಗರ, ಜೂ. 28:– ಮತದಾರರ ಪಟ್ಟಿಯಿಂದ ಹೊರಗುಳಿದಿರುವ 18 ರಿಂದ 21ರ ವಯೋಮಾನದ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಜುಲೈ 1 ರಿಂದ 31ರವರೆಗೆ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿಯೂ ಸಹ ಈ ಕಾರ್ಯಕ್ರಮ ನಡೆಯಲಿದೆ.
ಮತಗಟ್ಟೆ ಅಧಿಕಾರಿಗಳು ಜಿಲ್ಲೆಯಲ್ಲಿ ಮನೆಮನೆಗೆ ಭೇಟಿ ಮಾಡಿ 18 ರಿಂದ 21ರ ವಯೋಮಾನದ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ರಮ ವಹಿಸಲಿದ್ದಾರೆ. ಜಿಲ್ಲೆಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಮತಗಟ್ಟೆಗಳಲ್ಲಿ ಜುಲೈ 9 ಹಾಗೂ 23ರಂದು ವಿಶೇಷ ದಿನಗಳೆಂದು ಪರಿಗಣಿಸಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಹಾಜರಿದ್ದು ಯುವ ಮತದಾರರಿಂದ ನಮೂನೆ 6ನ್ನು ಪಡೆಯಲಿದ್ದಾರೆ.
ಈ ವಿಶೇಷ ದಿನಗಳಂದು ಮತಗಟ್ಟೆ ಮಟ್ಟದ ಅಧಿಕಾರಿಗಳು 2017ರ ಮತದಾರರ ಪಟ್ಟಿ ಹಾಗೂ ಪೂಟಕ ಪಟ್ಟಿಯನ್ನು ಓದಿ ನಾಗರಿಕರಿಗೆ ಪ್ರಚುರಪಡಿಸಲಿದ್ದಾರೆ.
ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವ ವಿಶೇಷ ಆಂದೋಲನವನ್ನು ಸರ್ಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳು, ಐಟಿಐ, ಬಿಎಡ್, ನರ್ಸಿಂಗ್ ಕಾಲೇಜುಗಳಲ್ಲಿಯೂ ಸಹ ನಡೆಸಿ 18 ರಿಂದ 21ರ ವಯೋಮಾನದ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಅಗತ್ಯವಿರುವ ನಮೂನೆ 6ನ್ನು ವಿದ್ಯಾಸಂಸ್ಥೆಗಳಿಗೆ ನೀಡಲಾಗುತ್ತದೆ. ಆನ್ ಲೈನ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಜುಲೈ 1 ರಿಂದ 31ರವರೆಗಿನ ಅವಧಿಯಲ್ಲಿ ಸೇವಾ ಮತದಾರರು ಮತ್ತು ಅನಿವಾಸಿ ಭಾರತೀಯರು ತಮ್ಮ ಹೆಸರನ್ನು hಣಣಠಿ://eಛಿisveeಠಿ.ಟಿiಛಿ.iಟಿ ಮತ್ತು hಣಣಠಿ://seಡಿviಛಿevoಣeಡಿ.ಟಿiಛಿ.iಟಿ ನಲ್ಲಿ ಆನ್ ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಏಜೆಂಟರನ್ನು ನೇಮಕ ಮಾಡಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರÀುವ ವಿಶೇಷ ಆಂದೋಲನಕ್ಕೆ ಮತಗಟ್ಟೆ ಅಧಿಕಾರಿಗಳಿಗೆ ಸಹಕರಿಸುವಂತೆ ಮಂಗಳವಾರ ನಡೆದ ರಾಜಕೀಯ ಪಕ್ಷಗಳ ಸಭೆಯಲ್ಲಿ ಮನವಿ ಮಾಡಲಾಗಿದೆ.
ಜುಲೈ 1 ರಿಂದ 31ರವರೆಗಿನ ವಿಶೇಷ ಆಂದೋಲನ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು. ಈ ಮೂಲಕ ಉದ್ದೇಶಿತ ಆಂದೋಲನ ಯಶಸ್ವಿಯಾಗಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು, ತಹಸೀಲ್ದಾರ್, ಉಪತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನೆರವು
ಚಾಮರಾಜನಗರ, ಜೂ. 28 - ತೋಟಗಾರಿಕೆ ಇಲಾಖೆಯು 2017-18ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ತಾಲೂಕುಗಳಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ ಬೆಳೆ ವಿಮೆ ಯೋಜನೆಯನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನ ಮಾಡಲಾಗುತ್ತದೆ.
ಚಾಮರಾಜನಗರ ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ, ಚಂದಕವಾಡಿ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ ಮತ್ತು ಬದನೆ, ಹರದನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ, ಆಲೂಗೆಡ್ಡೆ ಹಾಗೂ ಹರವೆ ಮತ್ತು ಸಂತೆಮರಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ ಬೆಳೆ ವಿಮೆ ವ್ಯಾಪ್ತಿಗೆ ಸೇರಿವೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ ಮತ್ತು ಬೀನ್ಸ್, ಬದನೆ, ಹಾಗೂ ಬೇಗೂರು, ಹಂಗಳ, ತೆರಕಣಾಂಬಿ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ ವಿಮೆ ವ್ಯಾಪ್ತಿಗೆ ಒಳಪಡಲಿವೆ.
ಕೊಳ್ಳೇಗಾಲ ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ, ಪಾಳ್ಯ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೇಟೋ, ಅರಿಶಿನ, ಈರುಳ್ಳಿ ಹಾಗೂ ಬೀನ್ಸ್ ವಿಮೆ ವ್ಯಾಪ್ತಿಗೆ ಸೇರಿವೆ. ಹನೂರಿಗೆ ಭಾಗಕ್ಕೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ, ಲೊಕ್ಕನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಈರುಳ್ಳಿ, ಆಲೂಗೆಡ್ಡೆ ಹಾಗೂ ರಾಮಾಪುರ ಹೋಬಳಿಗೆ ಸಂಬಂಧಿಸಿದಂತೆ ನೀರಾವರಿ ಆಶ್ರಿತ ಅರಿಶಿನ, ಈರುಳ್ಳಿ ಬೆಳೆ ವಿಮೆ ವ್ಯಾಪ್ತಿಗೆ ಸೇರಿವೆ.
ಟೊಮೆಟೋಗೆ ವಿಮಾ ಮೊತ್ತವು ಪ್ರತಿ ಹೆಕ್ಟೇರ್‍ಗೆ 115000 ರೂ, ನೀರಾವರಿ ಆಶ್ರಿತ ಆಲೂಗೆಡ್ಡೆಗೆ 139000 ರೂ, ಬದನೆಗೆ 56000 ರೂ, ನೀರಾವರಿ ಆಶ್ರಿತ ಈರುಳ್ಳಿಗೆ 74.000 ರೂ, ಬೀನ್ಸ್‍ಗೆ 66,000 ರೂ, ಅರಿಶಿನಕ್ಕೆ 131000 ರೂ. ನಿಗದಿಯಾಗಿದೆ.
ಟೊಮೆಟೋಗೆ ಪ್ರತಿ ಎಕರೆಗೆ ರೈತರು ವಿಮಾ ಮೊತ್ತವಾಗಿ 2327 ರೂ, ನೀರಾವರಿ ಆಶ್ರಿತ ಆಲೂಗೆಡ್ಡೆಗೆ 2813 ರೂ, ಬದನೆಗೆ 462 ರೂ, ನೀರಾವರಿ ಆಶ್ರಿತ ಈರುಳ್ಳಿಗೆ 1497 ರೂ, ಬೀನ್ಸ್‍ಗೆ 678 ರೂ, ಅರಿಶಿನಕ್ಕೆ 2651 ಪಾವತಿಸಬೇಕಿದೆ. ವಿಮಾ ಕಂತು ಪಾವತಿಸಲು ಅರಿಶಿನ ಹೊರತುಪಡಿಸಿ ಉಳಿದೆಲ್ಲಾ ಬೆಳೆಗಳಿಗೆ ಜುಲೈ 15 ಕಡೆಯ ದಿನವಾಗಿದೆ. ಅರಿಶಿನ ಬೆಲೆಗೆ ವಿಮಾ ಕಂತು ಪಾವತಿಸಲು ಜುಲೈ 31 ಕಡೆಯ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಸೇರ್ಪಡೆಯಾಗಲು ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಸಂಖ್ಯೆ, ಸ್ವಯಂ ಘೋಷಿತ ಬೆಳೆ ವಿವರಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಮಾಡಿ ಸಂರಕ್ಷಣೆ ಪೋರ್ಟಲ್‍ನಲ್ಲಿ ಅಳವಡಿಸಿದ ನಂತರ ಅರ್ಜಿಯನ್ನು ಹತ್ತಿರದ ಬ್ಯಾಂಕ್ (ಆರ್ಥಿಕ ಸಂಸ್ಥೆ)ಗೆ ಹಾಜರುಪಡಿಸಿ ವಿಮಾ ಕಂತು ಪಾವತಿಸಬೇಕು. ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
ಸಂಪೂರ್ಣ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು (ದೂ.ಸಂ. 08226-225022), ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಚಾಮರಾಜನಗರ (ದೂ.ಸಂ. 08226-223049), ಗುಂಡ್ಲುಪೇಟೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ದೂ.ಸಂ. 08229-222851), ಕೊಳ್ಳೇಗಾಲ (08224-253449), ಯಳಂದೂರು (08226-240600) ಹಾಗೂ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ (08226-222085) ಹಾಗೂ ಸ್ಥಳೀಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ತಾಲೂಕಿನ ವಿವಿಧೆಡೆ ಡೆಂಗೆ ಜಾಗೃತಿ ಕಾರ್ಯಕ್ರಮ
ಚಾಮರಾಜನಗರ, ಜೂ. 28 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಲೂಕು ಹಾಗೂ ಚಾಮರಾಜನಗರ ಪಟ್ಟಣದ ವಿವಿಧೆಡೆ ಡೆಂಗ್ಯೂ ಜಾಗೃತಿ ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಿತು.
ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ಅರಿವು ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮಾದಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜುರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದೇವೇಳೆ ಮಾತನಾಡಿದ ಅವರು ಯಾವುದೇ ಜ್ವರ ಬಂದರೂ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸಾಂಕ್ರಾಮಿಕ ರೋಗಗಳಿಂದ ದೂರವಿರಬೇಕೆಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗಸುಂದರಮ್ಮ, ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಸ್ವಾಮಿ, ಇತರರು ಪಾಲ್ಗೊಂಡರು.
ಬಳಿಕ ನಡುಕಲ ಮೋಳೆ ಗ್ರಾಮದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕೆ.ಹೆಚ್, ಪ್ರಸಾದ್‍ರವರು ಡೆಂಗ್ಯೂ ಜ್ವರದ ರೋಗ ಲಕ್ಷಣ, ಚಿಕಿತ್ಸೆ, ಹರಡುವಿಕೆ, ಮುಂಜಾಗ್ರತಾ ಕ್ರಮ, ತ್ಯಾಜ್ಯ ವಸ್ತು ವಿಲೇವಾರಿ, ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕರೆ ನೀಡಿದರು.
ಜಿಲ್ಲಾ ಮಲೇರಿಯಾಧಿಕಾರಿಗಳಾದ ಡಾ, ಅನಿಲ್ ಕುಮಾರ್‍ರವರು ಮಾತನಾಡಿ ಮನೆಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ, ನೀರಿನ ಸಂಗ್ರಹಗಳನ್ನು ಭದ್ರವಾಗಿ ಮುಚ್ಚಿಟ್ಟು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಲು ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಎಂ. ನಾಗರಾಜುರವರು ಮಾತನಾಡಿ Wನತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ಗ್ರಾಮ ಪಂಚಾಯಿತಿಯವರು ನೀಡುವ ಸೂಕ್ತ ಮಾರ್ಗದರ್ಶನದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ತಿಳಿಸಿದರು.
ಕೆಂಪನಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇವೇಳೆ ಜಿಲ್ಲಾ ಮಲೇರಿಯಾಧಿಕಾರಿಗಳಾದ ಡಾ, ಅನಿಲ್ ಕುಮಾರ್‍ರವರು ಮಾತನಾಡುತ್ತ ಡೆಂಗ್ಯೂ ನಿಯಂತ್ರಣದಲ್ಲಿ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಬಹು ಮುಖ್ಯ ಪಾತ್ರ ವಹಿಸಬೇಕಾಗಿದ್ದು, ಅವುಗಳಲ್ಲಿ ಮುಖ್ಯವಾಗಿ ಘನ ತ್ಯಾಜ್ಯ ಸೂಕ್ತ ವಿಲೇವಾರಿ, ಚರಂಡಿಯಲ್ಲಿ ನಿಂತ ನೀರು ನಿಲ್ಲದಂತೆ ಸರಾಗವಾಗಿ ಹರಿದುಹೋಗುವಂತೆ ಕ್ರಮ ವಹಿಸುವುದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಗುಂಡಿ ಇರುವ ಕಡೆ ಮಣ್ಣಿನಿಂದ ಮುಚ್ಚಿ ಸೊಳ್ಳೆ ಉತ್ಪತ್ತಿ ಆಗದಂತೆ ತಡೆಗಟ್ಟುವ ಕ್ರಮ ವಹಿಸುವ ಬಗ್ಗೆ ತಿಳಿಸಿದರು.
ದೊಡ್ಡರಾಯಪೇಟೆ ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣವನ್ನು (ಈoggiಟಿg) ಮಾಡಲಾಯಿತು.
ಚಾಮರಾನಗರದ ಕೆ.ಪಿ.ಮೊಹಲ್ಲಾದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೆ.ಪಿ.ಮೊಹಲ್ಲಾದ ನಿವಾಸಿಗಳು, ನಗರ ಸಭಾ ಸದಸ್ಯರು, ಆರೋಗ್ಯ ಸಿಬ್ಬಂದಿ ಹಾಜರಿದ್ದರು. ನಗರ ಸಭಾ ಸದಸ್ಯರಾದ ಸೈಯದ್ ಆರೀಫ್‍ರವರು ಮಾತನಾಡುತ್ತ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಡೆಂಗ್ಯೂ ಜ್ವರ ನಿಯಂತ್ರಣ ಮಾಡಲು ಸಾಧ್ಯ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕೆ.ಹೆಚ್. ಪ್ರಸಾದ್, ವೈದ್ಯಾಧಿಕಾರಿಗಳಾದ ಡಾ. ಅಭಯ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೂಡ್ಲೂರು ಗ್ರಾಮದಲ್ಲಿ ಡೆಂಗ್ಯೂ ಕುರಿತು ಜಾಗೃತಿ ಜಾಥ
ಚಾಮರಾಜನಗರ, ಜೂ.28:- ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಡೆಂಗ್ಯೂ ಮತ್ತು ಚಿಕನ್ ಗೂನ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಥ ನಡೆಸಿತು.
ಜಿ.ಪಂ ಸದಸ್ಯ ಬಾಲರಾಜು ಡೆಂಗ್ಯೂ ಕುರಿತು ಏರ್ಪಡಿಸಿದ್ದ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಡೆಂಗ್ಯೂ ಜ್ವರ ಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಎಂದು ತಿಳಿಸಿದರು.
ನಂತರ ಮಾತನಾಡಿದ ಡಿಹೆಚ್‍ಒ ಡಾ.ಪ್ರಸಾದ್, ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಾಮುತ್ತ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಪರಿಸರ ಚೆನ್ನಾಗಿದ್ದರೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು. ಡೆಂಗ್ಯೂ ಜ್ವರವೂ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಒಂದು ವೈರಸ್ ಖಾಯಿಲೆ, ಈ ಸೊಳ್ಳೆಗಳು ಮನೆಯ ಒಳಗಿನ ಮತ್ತು ಹೊರಗಿನ ಸುತ್ತಾಮುತ್ತ ನಿಂತ ನೀರಿನಿಂದ ಖಾಯಿಲೆ ಹರಡುತ್ತದೆ. ಆದ್ದರಿಂದ ಜನರು ಸ್ವಚ್ಚತೆಗೆ ಹೆಚ್ಚಿನ ಗಮನಹರಿಸಿ ನಿಮ್ಮ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಇದುವೆರೆಗೂ ಜಿಲ್ಲೆಯಾದ್ಯಂತ 35 ಸಾವಿರ ಮನೆಗಳಿಗೆ ಭೇಟಿ ನೀಡಿ ಆಶಾ ಕಾರ್ಯಕರ್ತರೊಂದಿಗೆ ಡೆಂಗ್ಯೂ ಜ್ವರ ಮತ್ತು ಚಿಕನ್ ಗೂನ್ಯ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಡೆಂಗ್ಯೂ ಜ್ವರ ಕಾಣಿಸಿಕೊಂಡಲ್ಲಿ ನಿಯಂತ್ರಣ ಹೇಗೆ: ಮನೆಯೊಳಗೆ ಮತ್ತು ಮೇಲ್ಚಾವಣಿಯ ನೀರಿನ ತೊಟ್ಟಿಗಳನ್ನು ಆಗಾಗ ಸ್ವಚ್ಚಗೊಳಿಸಿ, ನಂತರ ಹೊಸ ನೀರನ್ನು ತುಂಬಿಸಿ ಮುಚ್ಚಿಡಬೇಕು, ಏರ್ ಕೂಲರ್‍ನಲ್ಲಿ ಆಗಾಗ ನೀರನ್ನು ಬದಲಾಯಿಸಬೇಕು, ಒಡೆದ ಬಾಟಲ್, ಟಿನ್, ಟೈರ್ ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಿ, ಡೆಂಗಿ ಸೊಳ್ಳೆಗಳು ಕಚ್ಚುವುದನ್ನು ತಡೆಯಲು ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವ ಮಕ್ಕಳಿಗೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು, ಸೊಳ್ಳೆ ನಿರೋಧಕಗಳಾದ ಸೊಳ್ಳೆ ಬತ್ತಿ ಉಪಯೊಗಿಸಬಹುದು ಎಂದು ಹೇಳಿದರು.
ಹೆಚ್ಚಿನ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ಜಾಥದಲ್ಲಿ ಕೂಡ್ಲೂರು ಗ್ರಾ.ಪಂ ನ ಅಧ್ಯಕ್ಷ ಮಹದೇವಸ್ವಾಮಿ, ಗ್ರಾ.ಪಂ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Tuesday, 27 June 2017
ಪ್ರಾಮಾಣಿಕ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ (27-06-2017) ಜುಲೈ ಅಂತ್ಯದ ವೇಳೆಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು ಧ್ರುವನಾರಾಯಣ ಸೂಚನೆ
ಪ್ರಾಮಾಣಿಕ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಎಸ್.ವಿ.ಎಸ್.
ಚಾಮರಾಜನಗರ, ಜೂ.27:-ಅರೆ ಇದೇನಿದು,ಪ್ರಾಮಾಣಿಕ ಪತ್ರಕರ್ತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ ಅಂತೀರಾ.? ಗಾಬರಿಯಾಗಬೇಡಿ ಓರ್ವ ಪತ್ರಕರ್ತ ಆದವನಿಗೆ ಏನೇ ಇರಲಿ ವೃತ್ತಿ ಬದ್ದತೆ, ಶಿಸ್ತು ಬದ್ದರೆ, ಇರಬೇಕು ಆದರೆ ಅನರ್ಹರೂ ಏನು ಗೊತ್ತಿಲ್ಲದವರಿಗೂ ಏನೇನೋ ಪ್ರಶಸ್ತಿ ಪಡೆಯುವವವರಿಗೆ ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘ ಕೆಲವು ನಿಬಂದನೆಗಳನ್ನು ಹಾಕಿ ಪ್ರಶಸ್ತಿ ನೀಡುತ್ತಿದೆ. ನಿಜಕ್ಕೂ ಅಬಿನಂದಸಿಲೇ ಬೇಕು.. ಅರ್ಹತೆ ನೋಡಿದರೆ ನಿಮಗೆ ಇದೆಲ್ಲವೂ ಪ್ರಾಮಾಣಿಕ ಪತ್ರಕರ್ತರಿಗೆ ಇದೀಯೇ ಎಂದು ಕೇಳಬೇಕಿದೆ. ಇರಲಿ ಪತ್ರಿಕಾ ಪ್ರಕಟನೆ ಓದೋಣ.......................ಜುಲೈ 1 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಹಾಗೂ ಪ್ರಾಮಾಣಿಕ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವರ್ಷದಿಂದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದಲ್ಲಿ ಜಿಲ್ಲೆಯ ಅಭಿವೃದ್ದಿ ಹಾಗೂ ಸಮಾಜ ಸೇವೆಯ ಬಗ್ಗೆ ವರದಿ ಪ್ರಕಟಿಸಿರಬೇಕು, ಯಾವುದೇ ಅಪರಾಧಕ್ಕೆ ಒಳಗಾಗಿರಬಾರದು ಮತ್ತು ಅವರ ಮೇಲೆ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆ ಇರಬಾರದು, ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗಳನ್ನು ಪಡೆದು ಸಮಾಜ ಸೇವೆಗೆ ಶ್ರಮಿಸುತ್ತಿರುವ ನೈಜ ಹಾಗೂ ಪ್ರಾಮಾಣಿಕ ಪತ್ರಕರ್ತರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು. ಸಂಘದ ಸದಸ್ಯರನ್ನು ಹೊರತು ಪಡಿಸಿ, ಉಳಿದ ಪತ್ರಕರ್ತರನ್ನು ಪ್ರಸಸ್ತಿಗೆ ಆಯ್ಕೆ ಮಾಡಲಾಗುವುದು. ಹಿರಿಯ ಪತ್ರಕರ್ತರ ಸಮಿತಿಯೊಂದನ್ನು ರಚಿಸಲಾಗಿದ್ದು, ಏಕಪಕ್ಷೀಯವಾಗಿ ನಿರ್ಧರಿಸದೇ, ಪ್ರಶಸ್ತಿಗೆ ಯೋಗ್ಯವಾದ ಪತ್ರಕರ್ತರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪತ್ರಿಕಾ ಪ್ರತಿನಿಧಿಗಳ ಮಕ್ಕಳಿಗೆ 2017ರ ‘ವಿದ್ಯಾರ್ಥಿ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತರು ಜುಲೈ 15ರೊಳಗಾಗಿ ನಗರದ ರಥದ ಬೀದಿಯಲ್ಲಿರುವ ಕೆಸಿಬಿ ಕಾಂಪ್ಲೆಕ್ಸ್‍ನ ನೆಲಮಳಿಗೆಯಲ್ಲಿರುವ ಸಂಘದ ಕಛೇರಿಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತರು, ಪತ್ರಿಕಾ ಹಾಗೂ ವಿದ್ಯುನ್ಮಾನ ಛಾಯಾಗ್ರಾಹಕರು ಮತ್ತು ಸಂಪಾದಕರಿಗೂ ಸನ್ಮಾನಿಸಲಾಗುವುದು.
ನಮ್ಮ ಸಂಘ ಯಾವುದೇ ಒಂದು ರಾಜಕೀಯ ಪಕ್ಷ ಹಾಗೂ ಜನಾಂಗಕ್ಕೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ವಿವಿಧ ಪ್ರಗತಿಪರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಜಹೀರ್‍ಅಹಮದ್-9964405554 ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.
ಜುಲೈ ಅಂತ್ಯದ ವೇಳೆಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು ಧ್ರುವನಾರಾಯಣ ಸೂಚನೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27 - ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ನದೀ ಮೂಲದಿಂದ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜುಲೈ 31ರೊಳಗೆ ಯಾವುದೇ ಕಾಮಗಾರಿ ಬಾಕಿ ಇರದಂತೆ ಸಂಪೂರ್ಣಗೊಳಿಸುವಂತೆ ಸೂಚಿಸಲÁಗಿದೆ ಎಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ತಿಳಿಸಿದರು.
ಚಾಮರಾಜನಗರ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಸ್ಥಳಗಳಾದ ತಾಯೂರು ಹಾಗೂ ಉಮ್ಮತ್ತೂರಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಧ್ರುವನಾರಾಯಣ ಅವರು ಈ ಮಾಹಿತಿ ನೀಡಿದರು.ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಯೋಜನೆ ಅವಧಿ ವಿಸ್ತಾರಗೊಂಡಿದೆ. ಯೋಜನೆ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ 15 ತಿಂಗಳು ತೆಗೆದುಕೊಳ್ಳಲಾಗಿದೆ. ಬಹುತೇಕ ಪ್ರಮುಖ ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸಗಳನ್ನು ಯಾವುದೇ ಸಬೂಬು ನೀಡದೆ ಜುಲೈ ಅಂತ್ಯದೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲÁಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನಲ್ಲಿಯೂ ಸಹ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ಇಂದೂ ಸಹ ಚಾಮರಾಜನಗರ ತಾಲೂಕಿಗೆ ನೀರು ಪೂರೈಕೆಯಾಗುವ ತಾಯೂರಿನ ಕಬಿನಿ ನದಿ ಬಳಿ ಇರುವ ಜಾಕ್‍ವೆಲ್, ಪ್ಯಾನಲ್ ರೂಂ, ಉಮ್ಮತ್ತೂರು ಜಲಸಂಗ್ರಹಾಗಾರ, ಶುದ್ಧೀಕರಣ ಘಟಕ ಸೇರಿದಂತೆ ಬಹುಮುಖ್ಯ ಕಾಮಗಾರಿ ವೀಕ್ಷಿಸಿ ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ನೀರು ಪೂರೈಸುವ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದ್ದು ಅದರಂತೆಯೇ ಗ್ರಾಮಗಳಲ್ಲಿ ನೀರು ತಲುಪಿಸುವ ಕೆಲಸ ಆಗಲಿದೆ. ಈಗಾಗಲೇ ಪೈಪ್ ಲೈನ್ ಕಾಮಗಾರಿ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಲ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ರಾ ವಾಟರ್ ಪೂರೈಸಲಾಗುತ್ತಿದ್ದು ಹಂತಹಂತವಾಗಿ ಉಳಿದ ಗ್ರಾಮಗಳಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ ಎಂದು ಧ್ರುವನಾರಾಯಣ ವಿವರಿಸಿದರು.
ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದುಕೊಂಡಿದೆ. ಸಂತೆಮರಹಳ್ಳಿ, ಬಸವಟ್ಟಿ, ಕಾವುದವಾಡಿ, ದೇಶವಳ್ಳಿ, ಹೆಗ್ಗವಾಡಿಪುರ ಭಾಗ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸೇರ್ಪಡೆಯಾಗಿರಲಿಲ್ಲ. ಸ್ಥಳೀಯ ಶಾಸಕರು ಈ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದ್ದರಿಂದ ಈ ಐದೂ ಗ್ರಾಮಗಳ ವ್ಯಾಪ್ತಿಯಲ್ಲಿ ಜುಲೈ 31ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಲÁಗಿದೆ ಎಂದರು.
ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ಗ್ರಾಮಗಳಿಗೂ ಶುದ್ಧ ನೀರು ಪೂರೈಕೆಯಾಗಲಿದೆಯೇ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಆಗಸ್ಟ್ ಮೊದಲ ವಾರ ಅಥವಾ 2ನೇ ವಾರದಲ್ಲಿ ಮುಖ್ಯಮಂತ್ರಿಯವರನ್ನು ಆಹ್ವಾನಿಸಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಸೇವೆಯನ್ನು ನಾಗರಿಕರ ಬಳಕೆಗೆ ಸಮರ್ಪಿಸಲಾಗುವುದು ಎಂದು ಧ್ರುವನಾರಾಯಣ ತಿಳಿಸಿದರು.
ಶಾಸಕರಾÀದ ಜಯಣ್ಣ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ,ssssss ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸದಸ್ಯರಾದ ಯೋಗೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ.ಪಿ. ಪುಟ್ಟಬುದ್ದಿ, ಮರಿಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನÉೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೇವರಾಜು, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಾ.ನಗರ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಅಂಗಡಿ, ಹೊಟೆಲ್, ಉದ್ದಿಮೆದಾರರಿಗೆ ಸೂಚನೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27 :- ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಹೋಟೆಲ್, ವೈನ್ ಶಾಪ್, ಬೇಕರಿ, ತಂಪುಪಾನೀಯ, ಫಾಸ್ಟ್ ಫುಡ್, ಹಣ್ಣು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಚಾಮರಾಜನಗರ ಸಭೆ ಸೂಚನೆ ನೀಡಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಡೆಂಗೆ, ಚಿಕನ್ ಗುನ್ಯಾ ಇತರೆ ಸಾಂಕ್ರಾಮಿಕ ರೋಗ ಪ್ರಕರಣಗಳು ಕಂಡುಬರುತ್ತಿದ್ದು ಇದರ ಪರಿಣಾಮಕಾರಿ ತಡೆಗೆ ಉದ್ದಿಮೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಹೋಟೆಲ್, ಫಾಸ್ಟ್ ಫುಡ್, ಬೇಕರಿ ಎಲ್ಲ ಕಡೆ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ನೀರು ನೀಡಬೇಕು. ಉದ್ಯಮ ಸ್ಥಳದ ಒಳ ಹೊರ ಆವರಣ ಸ್ವಚ್ಚವಾಗಿರಬೇಕು. ಊಟ ಉಪಾಹಾರ ಸೇವಿಸುವ ತಟ್ಟೆ ಲೋಟ ಇತರೆ ಪರಿಕರಗಳನ್ನು ಸೋಪ್ ಹಾಗೂ ಬಿಸಿನೀರು ಬಳಸಿ ಸ್ವಚ್ಚ ಮಾಡಬೇಕು.
ನೀರು ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ಸಾಂಕ್ರಾಮಿಕ ರೋಗ ಪ್ರಕರಣಗಳು ನಿಯಂತ್ರಣಕ್ಕೆ ಬರುವ ತನಕ ರಸ್ತೆ ಬದಿ ಪಾನಿಪುರಿ ಉದ್ದಿಮೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ನಗರಸಭೆ ವಾಹನಗಳಿಗೆ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಮಾಂಸ ಮಾರಾಟಗಾರರು ಮಾಂಸವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು.
ಹಂದಿಗಳು ಇತರ ಪ್ರಾಣಿಗಳ ಓಡಾಟ ಜಾಸ್ತಿಯಾಗಿದ್ದು ಇವುಗಳನ್ನು ಪಟ್ಟಣದಿಂದ 5 ಕಿ.ಮೀ. ದೂರ ಇಡಬೇಕು. ತಪ್ಪಿದಲ್ಲಿ ನಗರಸಭೆ ವತಿಯಿಂದಲೇ ಸೆರೆಹಿಡಿದು ಮೈಸೂರಿನ ಪಿಂಜರಾಪೋಲ್‍ಗೆ ಕಳುಹಿಸಲಾಗುವುದು. ಪಟ್ಟಣದ ಎಲ್ಲಾ ಅಂಗಡಿ ಉದ್ದಿಮೆ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಹಳೆಯ ಟೈರ್, ತೆಂಗಿನ ಚಿಪ್ಪು, ಹೂವಿನ ಕುಂಡ ಇತರೆಡೆ ನೀರು ಶೇಖರಣೆಯಾಗದಂತೆ ಹಾಗೂ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳಬೇಕು. ಉದ್ದಿಮೆ ಸ್ಥಳದಲ್ಲಿ ಸ್ವಚ್ಚತೆ ಲೋಪಗಳು ಕಂಡುಬಂದಲ್ಲಿ ಉದ್ದಿಮೆ ಬಂದ್ ಮಾಡಿಸಿ ಅಗತ್ಯ ಕ್ರಮ ಜರುಗಿಸಲಾಗುವುದು. ನಾಗರಿಕರ ಆರೋಗ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಂಗಡಿ ಮುಂಗಟ್ಟು ಉದ್ದಿಮೆಗಳನ್ನು ನಿರ್ವಹಣೆ ಮಾಡುವ ಮೂಲಕ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪ್ರಭಾರ ಅಧ್ಯಕ್ಷರಾದ ಆರ್.ಎಂ. ರಾಜಪ್ಪ ಹಾಗೂ ಪೌರಾಯುಕ್ತ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಿಯುಸಿ ಪೂರಕ ಪರೀಕ್ಷೆ : ಕೇಂದ್ರಗಳ ಸುತ್ತ ನಿಷೇದಾಜ್ಞೆ
ಎಸ್.ವಿ.ಎಸ್
ಚಾಮರಾಜನಗರ, ಜೂ. 27- ಜಿಲ್ಲೆಯಲ್ಲಿ ಜೂನ್ 28 ರಿಂದ ಜುಲೈ 8ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಸುತ್ತಲೂ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಚಾಮರಾಜನಗರ ತಾಲೂಕು ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಿಗದಿಯಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪೂರಕ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2.30ರವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜು. 3ಕ್ಕೆ ಅಡುಗೆಯವರ ಹುದ್ದೆ, ಜು. 4ಕ್ಕೆ ಅಡುಗೆ ಸಹಾಯಕರ ಹುದ್ದೆ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ
ಚಾಮರಾಜನಗರ, ಜೂ. 26 – ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಖಾಲಿ ಇರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾಗಿದ್ದ ಪ್ರಾಯೋಗಿಕ ಪರೀಕ್ಷೆ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿ ಮರು ದಿನಾಂಕವನ್ನು ನಿಗದಿಗೊಳಿಸಿದೆ.ಜೂನ್ 28ಕ್ಕೆ ನಿಗದಿಯಾಗಿದ್ದ ಅಡುಗೆಯವರ ಹುದ್ದೆ ಪ್ರಾಯೋಗಿಕ ಪರೀಕ್ಷೆಯನ್ನು ಜುಲೈ 3ರಂದು ಬೆಳಿಗ್ಗೆ 9.00 ಗಂಟೆಗೆ ಹಾಗೂ ಜೂನ್ 29 ರಂದು ನಿಗದಿಯಾಗಿದ್ದ ಅಡುಗೆ ಸಹಾಯಕರ ಹುದ್ದೆ ಪ್ರಾಯೋಗಿಕ ಪರೀಕ್ಷೆಯನ್ನು ಜುಲೈ 4ರಂದು ಬೆಳಿಗ್ಗೆ 9 ಗಂಟೆಗೆ ನಡೆಸಲು ನಿಗದಿಗೊಳಿಸಿದೆ.
ದಾಖಲಾತಿ ಪರಿಶೀಲನೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್ ತಿತಿತಿ.hಣಣಠಿ://ಛಿhಚಿmಡಿಚಿರಿಟಿಚಿgಚಿಡಿ.ಟಿiಛಿ.iಟಿ ಹೊರಡಿಸಲಾಗುವುದು. ಅದರಂತೆ ಅಭ್ಯರ್ಥಿಗಳು ಕಾಲ್ ಲೆಟರನ್ನು ಕಚೇರಿಯಲ್ಲಿ ಪಡೆದುಕೊಂಡು ಹಾಜರಾಗುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 28ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 27 ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೆಗ್ಗವಾಡಿ ಎನ್ ಜೆ ವೈ ಮಾರ್ಗಕ್ಕೆ ಲಿಂಕ್ ಲೈನ್ ಮಾಡುವ ಕಾರ್ಯವನ್ನು ಜೂನ್ 28ರಂದು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೆಗ್ಗವಾಡಿ ಎನ್‍ಜೆವೈ ಮಾರ್ಗದ ಹರವೆ, ಮುಕ್ಕಡÀಹಳ್ಳಿ, ಮೂಡ್ನಾಕೂಡು, ಕುಲಗಾಣ ಹಾಗೂ ಮಲೆಯೂರು ಪಂಚಾಯಿತಿ ವ್ಯಾಪ್ತಿಯ ಮಾರ್ಗಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Saturday, 24 June 2017
ನೇರ ಫೋನ್ ಇನ್ ಕಾರ್ಯಕ್ರಮ : 32 ದೂರುಗಳು ದಾಖಲು (24-06-2017)
ನೇರ ಫೋನ್ ಇನ್ ಕಾರ್ಯಕ್ರಮ : 32 ದೂರುಗಳು ದಾಖಲು
ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜೂ. 24 - ನಾಗರಿಕರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 32 ದೂರುಗಳು ದಾಖಲಾದವು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸಿನ ಕಾರ್ಯಕ್ರಮದಲ್ಲಿ ನಿರಂತರವಾಗಿ ಸಮಸ್ಯೆಗಳು, ದೂರುಗಳು ಜಿಲ್ಲೆಯ ವಿವಿಧ ಭಾಗಗಳಿಂದ ಕೇಳಿಬಂದವು.
ಚಾಮರಾಜನಗರ ಪಟ್ಟಣ ಸೇರಿದಂತೆ ಜಿಲ್ಲೆಯ ಕೆಲ ಭಾಗಗಳಿಂದ ಸ್ವಚ್ಚತೆ ಕೆಲಸ ಸಮರ್ಪಕವಾಗಿ ನಿರ್ವಹಿಸಬೇಕು, ಸೊಳ್ಳೆಗಳ ಹಾವಳಿ ನಿಯಂತ್ರಿಸಬೇಕೆಂಬ ಮನವಿಗಳು ಸಹ ಕೇಳಿಬಂದವು.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಯಳಂದೂರು ಹಾಗೂ ಚಾಮರಾಜನಗರ ನಾಗರಿಕರು ಜಿಲ್ಲಾಧಿಕಾರಿಯವರಿಗೆ ಕೇಳಿಕೊಂಡರು. ನಗರದಲ್ಲಿ ಕೆಲವೆಡೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಮಾಡಲಾಗುತ್ತಿಲ್ಲ, ಫಾಗಿಂಗ್ ಸಮಯವನ್ನು ಸಹ ನಿಗದಿ ಮಾಡಬೇಕು ಎಂಬ ಸಲಹೆ ಕೇಳಿಬಂದವು.
ಕುಡಿಯುವ ನೀರು, ಚರಂಡಿ ಸ್ವಚ್ಚತೆ ಮಾಡಬೇಕೆಂದು ಕೆಲವು ಭಾಗದಿಂದ ನಾಗರಿಕರು ಗಮನ ಸೆಳೆದರು.
ಕೌದಳ್ಳಿ ಭಾಗದ ನಾಗರಿಕರೊಬ್ಬರು ಕರೆ ಮಾಡಿ ಪರಿಶಿಷ್ಟ ವರ್ಗಕ್ಕೆ ಸೇರಿದ್ದೇವೆಂದು ಸ್ಥಳೀಯರೊಬ್ಬರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಗಂಗಾಕಲ್ಯಾಣ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಗಂಭೀರ ದೂರು ಸಲ್ಲಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು, ಬಸ್ ಸೌಲಭ್ಯ ಸೇರಿದಂತೆ ಇತರೆ ವಿಷಯಗಳನ್ನು ಪ್ರಸ್ತಾಪಿಸಿದ ನಾಗರಿಕರು ಅಗತ್ಯ ಕ್ರಮ ತೆಗೆದುಕೊಂಡು ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಕೆಲಸವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಜನರ ಆರೋಗ್ಯ ಕಾಳಜಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಯಾವುದೇ ಅನಾಹುತವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಳೆ ನಿರೀಕ್ಷಿತ ಸಮಯದಲ್ಲಿ ಬಾರದೇ ಇದ್ದಲ್ಲಿ ಮತ್ತಷ್ಟು ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಚರಂಡಿ ಸ್ವಚ್ಚತೆ, ಸೊಳ್ಳೆಗಳ ಸಂಪೂರ್ಣ ನಿಯಂತ್ರಣಕ್ಕೆ ವ್ಯಾಪಕವಾಗಿ ಕಾರ್ಯ ನಿರ್ವಹಿಸಬೇಕು. ಸ್ವಚ್ಚತೆ ಕೆಲಸಕ್ಕೆ ಹೆಚ್ಚು ಜನರನ್ನು ನಿಯೋಜಿಸಿ ಯಾವುದೇ ತೊಂದರೆಯಾಗದಂತೆ ನೈರ್ಮಲ್ಯ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಸ್, ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಕೇಳಿ ಬಂದಿರುವ ದೂರುಗಳಿಗೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ನಾಗರಿಕರ ದೂರುಗಳಿಗೆ ಪರಿಹಾರ ಸಿಗಬೇಕು. ಮುಂದಿನ ಫೋನ್ ಇನ್ ಕಾರ್ಯಕ್ರಮದ ವೇಳೆಗೆ ಈ ಹಿಂದಿನ ಎಲ್ಲಾ ಸಮಸ್ಯೆ ದೂರುಗಳು ಇತ್ಯರ್ಥವಾಗಬೇಕು ಎಂದು ಜಿಲ್ಲಾಧಿಕಾರಿ ರಾಮು ತಾಕೀತು ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಗರದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮ
ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜೂ. 24 - ಜಿಲ್ಲೆಯಲ್ಲಿ ಜ್ವರ ಸಂಬಂಧಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ ನಡೆಸಲಾಯಿತು.ಮೊದಲಿಗೆ ಡೆಂಗ್ಯು ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ವಿಷಯದ ಬಗ್ಗೆ ಭಿತ್ತಿಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ತದನಂತರ ಸಿದ್ದಾರ್ಥ ಕಾಲೇಜಿನ ಆವರಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ವಿಧಾನ ಅದನ್ನು ತಡೆಗಟ್ಟುವ ಕ್ರಮ ಹಾಗೂ ಜನರ ಸಹಕಾರದ ಬಗ್ಗೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಸಲಹೆ ಮಾಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಎಂ. ಅನಿಲ್ ಕುಮಾರ್ ಮಾತನಾಡಿ ಸೊಳ್ಳೆಗಳಿಂದ ರೋಗ ಹರಡುವಿಕೆಗೆ ಕಾರಣವಾಗುತ್ತಿದೆ. ಹೀಗಾಗಿ ನಾಗರಿಕರು ಸೊಳ್ಳೆಗಳ ಉತ್ಪತ್ತಿ ತಾಣಗಳು ಮನೆಯ ಪರಿಸರ ಸುತ್ತಮುತ್ತಲ ಇರದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳಿಂದ ರಕ್ಷಿಸಕೊಳ್ಳÀಲು ಇರುವ ವಿಧಾನಗಳನ್ನು ಅನುಸರಿಸಬೇಕು ಎಂದರು.
ಅನುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿಯೂ ಸಹ ಬಹಳ ದಿನಗಳ ಕಾಲ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬಹುಕಾಲ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಆಗಾಗ್ಗೆ ನೀರು ಖಾಲಿ ಮಾಡಿ ಒಣಗಿದ ಬಳಿಕ ಪುನ: ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ತಾಣವನ್ನು ನಿರ್ಮೂಲನೆ ಮಾಡಬಹುದು ಎಂದು ಅನಿಲ್ ಕುಮಾರ್ ಸಲಹೆ ಮಾಡಿದರು.
ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ. ಎಂ. ನಾಗರಾಜು ಮಾತನಾಡಿ ನಾಗರಿಕರು ವೈಯುಕ್ತಿಕ ಸ್ವಚ್ಚತೆಗೂ ಗಮನ ಕೊಡಬೇಕು. ಆರೋಗ್ಯ ಪೂರಕ ಕ್ರಮಗಳಿಗೆ ಆದ್ಯತೆ ನೀಡಬೇಕು. ಜ್ವರ ಬಂದಾಗ ಹತ್ತಿರದ ಆಸ್ಪತ್ರೆಗೆ ಭೇಟಿ ಕೊಟ್ಟು ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ನಾಗರಿಕರ ಸೇವೆಗೆ ಸಿದ್ಧರಿದ್ದಾರೆ. ಯಾವುದೇ ತೊಂದರೆ ಇದ್ದರೂ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬೇಕೆಂದರು.
ವೈದ್ಯಾಧಿಕಾರಿ ಡಾ. ಮಮತ, ಕಾಲೇಜು ಪ್ರಾಂಶುಪಾಲರು, ಬೋಧಕರು, ಇತರೆ ಸಿಬ್ಬಂದಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.
Friday, 23 June 2017
ಕೌಟುಂಬಿಕ ಕಲಹ,ನೇಣುಬಿಗಿದ ಪತಿರಾಯ! ,ಕರ್ತವ್ಯ ಲೋಪ: ಪಿಡಿಓ ಅಮಾನತು,23-06-2017
ಕೌಟುಂಬಿಕ ಕಲಹ,ನೇಣುಬಿಗಿದ ಪತಿರಾಯ!
ಚಾಮರಾಜನಗರ: ಕುಟುಂಬದಲ್ಲಿ ಆಗಾಗ ನಡೆಯುತ್ತಿದ್ದ ಕೌಟುಂಬಿಕ ಕಲಹ ಇಂದು ಅಂತಿಮ ಘಟ್ಟ ತಲುಪಿರುವ ಘಟನೆ ಗ್ರಾಮಾಂತರ ಠಾಣಾ ವಲಯದಲ್ಲಿ ನಡದಿದೆ
ಸರಿಸುಮಾರು 9 ರ ಸಮಯದಲ್ಲಿ ಪತಿ ಮಹಾಶಯ ಪತ್ನಿಯ ಕಪಾಲಕ್ಕೆ ಹೊಡೆದು ನೇಣು ಹಾಕಿ ಏನು ಗೊತ್ತಿಲ್ಲದ ರೀತಿ ಇದ್ದು ನಂತರ ಪೊಲೀಸರ ಹೊಡೆತಕ್ಕೆ ಎದುರಿ ಸತ್ಯ ಬಾಯಿ ಬಿಟ್ಟಿದ್ದಾನೆ. ಮೂಲತಃ ಕೆಲ್ಲಂಬಳ್ಳಿ ಗ್ರಾಮದ ಶಿವಕುಮಾರ್, ಮನೆಯಲ್ಲಿ ಪತ್ನಿ ಮಮತಾಗೆ ಟೀ ಮಾಡಿ ಕೊಡುವಂತೆ ಹೇಳಿದ್ದಾನೆ ,ಪತ್ನಿ ಟೀ ತಂದು ಕೊಟ್ಟ ಮೇಲೆ ಟೀ ಸರಿಯಾಗಿ ಮಾಡಲಿಲ್ಲ ಎಂದು ಬಿಸಿಯಾದ ಟೀ ಎರಚಿ ಪತಿ ಕಪಾಲಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ಕಪಾಲಕ್ಕೆ ಹೊಡೆದ ರಭಸಕ್ಕೆ ಸಾವನ್ನಪ್ಪಿದ್ದು ನಂತರ ನೇಣು ಹಾಕಿ ಆತ್ಮಹತ್ಯೆಯ ನಾಟಕವಾಡಲು ಹೋಗಿ ಪೊಲೀಸರ ಹೊಡೆತಕ್ಕೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ
*********************************************************************************
ಕರ್ತವ್ಯ ಲೋಪ: ಪಿಡಿಓ ಅಮಾನತು
ಚಾಮರಾಜನಗರ, ಜೂ. 23 :-ಮುಖ್ಯಮಂತ್ರಿಯವರು ಘೋಷಿಸಿರುವಂತೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿಯೂ ಸಹ ಕಾರ್ಯಕ್ರಮ ಅನುಷ್ಟಾನಗೊಳಿಸುವ ದಿಸೆಯಲ್ಲಿ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಯನ್ನು ಪಾಲಿಸಲು ಹಿಂದೇಟು ಹಾಕಿದ ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ ಹಾಗೂ ಕೂತನೂರು (ಪ್ರಭಾರ) ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರಾದ ಡಾ. ಕೆ.ಹರೀಶ್‍ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.ಬಿ.ಕೆ.ಶ್ರೀನಿವಾಸ್ ಅಮಾನುತುಗೊಂಡ ಪಂಚಾಯತಿ ಅಭಿವೃದ್ಧಿ ಅಧಿಕಾರಿ. ಜೂನ್ 22ರಂದು ಜಿಲ್ಲಾ ಪಂಚಾಂiÀiತ್ ಉಪಕಾರ್ಯದರ್ಶಿ ಹಾಗೂ ಮುಖ್ಯ ಯೋಜನಾಧಿಕಾರಿಗಳು ಶೌಚಾಲಯ ನಿರ್ಮಾಣ ಸಂಬಂಧ ಪ್ರಗತಿ ಪರಿಶೀಲಿಸಿದ ವೇಳೆ ಕಣ್ಣೇಗಾಲ ಹಾಗೂ ಕೂತನೂರು ಗ್ರಾಮಪಂಚಾಯಿತಿಯು ಗುರಿ ಸಾಧನೆಯಲ್ಲಿ ಕುಂಠಿತವಾಗಿರುವುದು ಕಂಡುಬಂತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮದ ಗುರಿ ಸಾಧಿಸಲು ನೀಡಲಾಗಿದ್ದ ಸೂಚನೆಗಳನ್ನು ಪಾಲಿಸದೆ ಇರುವುದು ಕಂಡುಬಂದಿದ್ದು, ಕರ್ತವ್ಯಲೋಪವಾಗಿದೆ ಎಂಬ ಅಂಶ ಗಮನಕ್ಕೆ ಬಂತು.
ಈ ಸಂದರ್ಭದಲ್ಲಿ ಬಿ.ಕೆ.ಶ್ರೀನಿವಾಸ್ ಗುರಿ ಸಾಧಿಸಲು ನಮಗೆ ಸಿಬ್ಬಂದಿ ಇಲ್ಲ ಹೀಗಾಗಿ ಗುರಿ ಸಾಧಿಸಲು ಸಾಧ್ಯವಿಲ್ಲ ಈ ರೀತಿಯಾದಲ್ಲಿ ಧೀರ್ಘಾವಧಿ ರಜೆಯ ಮೇಲೆ ತಾವು ಹೋಗುವುದಾಗಿ ಸಭೆಯಲ್ಲಿ ತಿಳಿಸಿದರು.
ಈ ವರ್ತನೆ ಕಾರ್ಯಕ್ರಮದ ಆಶಯದ ವಿರುದ್ದವಾಗಿ ಇದ್ದು ಸರ್ಕಾರಿ ನೌಕರರಿಗೆ ಈ ಬಗೆಯ ವರ್ತನೆ ತರವಲ್ಲವೆಂದು ಭಾವಿಸಿದ್ದು, ಕರ್ತವ್ಯಲೋಪ ಹಿನ್ನೆಲೆಯಲ್ಲಿ ಬಿ.ಕೆ.ಶ್ರೀನಿವಾಸ್ ಅವರನ್ನು ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ರವರು ತಿಳಿಸಿದ್ದಾರೆ.
ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿಗೆ ಸಜೆ
ಚಾಮರಾಜನಗರ, ಜೂ. 23 - ಮನೆಯ ಬಳಿ ಇರುವ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿಗೆ 2 ವರ್ಷಗಳ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಹನೂರು ಭಾಗದ ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚೆನ್ನೂರು ಗ್ರಾಮದ ಪುಟ್ಟಮಾದಶೆಟ್ಟಿ ಅಲಿಯಾಸ್ ತಮ್ಮಯ್ಯ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಮನೆಯ ಹಿತ್ತಲಿನಲ್ಲಿ 80 ಕೆಜಿಯಷ್ಟು ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದು 2014ರ ನವೆಂಬರ್ 13ರಂದು ರಾಮಾಪುರ ಠಾಣೆಯ ವೃತ್ತ ನಿರೀಕ್ಷಕರಾದ ರಾಜಣ್ಣ ದಾಳಿ ಮಾಡಿದ್ದರು. ಸದರಿ ಪ್ರಕರಣದ ವಿಚಾರಣೆ ನಡೆದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಪುಟ್ಟಮಾದಶೆಟ್ಟಿ ಅಲಿಯಾಸ್ ತಮ್ಮಯ್ಯನಿಗೆ 2 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ವಿದ್ಯಾರ್ಥಿನಿಲಯಕ್ಕೆ ಬಾಡಿಗೆಗೆ ಕೊಠಡಿ : ಆಸಕ್ತರಿಂದ ವಿವರ ಆಹ್ವಾನ
ಚಾಮರಾಜನಗರ, ಜೂ. 23 :– ಕೊಳ್ಳೇಗಾಲ ಪಟ್ಟಣದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕಾಗಿ 50 ರಿಂದ 100 ವಿದ್ಯಾರ್ಥಿನಿಯರ ವಾಸಕ್ಕೆ ಅನುಕೂಲವಾಗುವ ಕೊಠಡಿಗಳು, ಊಟದ ಹಾಲ್, ಅಡುಗೆ ಮನೆ, ಶೌಚಾಲಯವುಳ್ಳ ಕಟ್ಟಡವು ಬಾಡಿಗೆಗೆ ಬೇಕಾಗಿದ್ದು ಆಸಕ್ತ ಮಾಲೀಕರು ದಾಖಲಾತಿಗಳೊಡನೆ ವಿವರ ಸಲ್ಲಿಸಬಹುದಾಗಿದೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾರ್ಥಿನಿಲಯ ನಿರ್ವಹಣೆ ಮಾಡಲಿದೆ. ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ನೀಡಲಾಗುವುದು. ಕಟ್ಟಡ ಮಾಲೀಕರು ಅಗತ್ಯ ದಾಖಲಾತಿಗಳೊಂದಿಗೆ ಕೊಳ್ಳೇಗಾಲ ಪಟ್ಟಣದ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲï. ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 28ರಂದು ಅಡುಗೆ ಸಹಾಯಕರ ಹುದ್ದೆಗಳಿಗೆ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಜೂ. 23:- ಸಮಾಜ ಕಲ್ಯಾಣ ಇಲಾಖೆಯ ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಡಿ ವೃಂದದ ಅಡುಗೆ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಜೂನ್ 21ರಂದು ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ಜೂನ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ.ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವೆಬ್ ಸೈಟ್ ತಿತಿತಿ.hಣಣಠಿ://ಛಿhಚಿmಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ನಲ್ಲಿ ಹಾಜರಾತಿ ಸೂಚನಾ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಅದರಲ್ಲಿರುವ ಮಾಹಿತಿಯಂತೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದ ಮೇಲೆ 1:5ರ ಅನುಪಾತದಲ್ಲಿ ದಾಖಲಾತಿ ಪರಿಶೀಲನೆಯನ್ನು ಸರ್ಕಾರದ ಆದೇಶದಂತೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ದೂ.ಸಂ. 08226-222855 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜೂ. 28ರಂದು ಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ
ಚಾಮರಾಜನಗರ, ಜೂ. 23 :- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಜೂನ್ 28ರಂದು ಬೆಳಿಗ್ಗೆ ನಡೆಯಲಿದೆ.ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಎಣಿಕೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ್ಲ ತಿಳಿಸಿದ್ದಾರೆ.
ವಿವಿಧ ದತ್ತಿ ಪ್ರಶಸ್ತಿಗಳಿಗೆ ಪುಸ್ತಕ ಆಹ್ವಾನ
ಚಾಮರಾಜನಗರ, ಜೂ. 23 - ಕನ್ನಡ ಸಾಹಿತ್ಯ ಪರಿಷತ್ತು 2016ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.ಮಲ್ಲಿಕಾ ದತ್ತಿ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ, ಶಾರದಾ ರಾಮಲಿಂಗಪ್ಪ ದತ್ತಿ, ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ, ನೀಲಗಂಗ ದತ್ತಿ, ಕೆ ಎಸ್ ಭಾರತಿ ರಾಜಾರಾಂ ಮಧ್ಯಸ್ಥ ದತ್ತಿ, ಶಾರದಾ ಆರ್ ರಾವ್ ದತ್ತಿ, ಗೌರಮ್ಮ ಹಾರ್ನಳ್ಳಿ ಕೆ ಮಂಜಪ್ಪ ದತ್ತಿ, ದಿವಂಗತ ಎಚ್. ಕರಿಯಣ್ಣ ದತ್ತಿ, ಡಾ. ಎಚ್. ನರಸಿಂಹಯ್ಯ ದತ್ತಿ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ್ ದತ್ತಿ, ಜಿ ಪಿ ರಾಜರತ್ನಂ ಸಂಸ್ಕರಣ ದತ್ತಿ (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ), ದಿವಂಗತ ಕೆ ವಿ ರತ್ನಮ್ಮ ದತ್ತಿ, ರತ್ನಾಕರ ವರ್ಣಿ ಮುದ್ದಣ್ಣ ಅನಾಮಿಕ ದತ್ತಿ, ಪಿ. ಶಾಂತಿಲಾಲ್ ದತ್ತಿ, ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ, ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ, ಕಂಬಾಸ ಪ್ರಶಸ್ತಿ ದತ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ದತ್ತಿ, ಜಿ.ಆರ್. ರೇವಯ್ಯ ದತ್ತಿ, ಸಿಶು ಸಂಗಮೇಶ ದತ್ತಿ, ಪಂಪಮ್ಮ ಶರಣಗೌಡ ವಿರೂಪಾಪುರ ದತ್ತಿ, ಕೆ. ವಾಸುದೇವಾಚಾರ್ ದತ್ತಿ, ಡಾ. ಆರ್.ಜೆ. ಗಲಗಲಿ ದತ್ತಿ, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ ಮದನಕೇಸರಿ ಜೈನ ದತ್ತಿ, ಬಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ 7ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದನೆನಪಿನ ದತ್ತಿ (ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ ಅವಕಾಶ), ಬಸುದೇವ ಭೂಪಾಲಂ ದತ್ತಿ, ದಿ. ಡಿ. ಮಾಣಿಕರಾದ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ, ದಿ. ಕಾಕೋಳು ಸರೋಜಮ್ಮ ದತ್ತಿ, ದಿ. ಡಾ. ಎಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ, ನಾ.ಕು. ಗಣೇಶ್ ದತ್ತಿ, 17,18 ಡಿಸೆಂಬರ್ 2011ರಂದು ಬೀಳಗಿಯಲ್ಲಿ ನಡೆದ ಬೀಳಗಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸವಿನೆನಪು ದತ್ತಿ (ಬಾಗಲಕೋಟೆಯ ಬೀಳಗಿ ತಾಲೂಕಿನ ಬರಹಗಾರರಿಗೆ ಮಾತ್ರ ಅವಕಾಶ), ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿನಿಧಿ, ಪಳಕಳ ಸೀತಾರಾಮಭಟ್ಟ ದತ್ತಿನಿಧಿ, ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೀಳಗಿ ಘಟಕ ದತ್ತಿ ಪ್ರಶಸ್ತಿ (ಬಾಗಲಕೋಟೆ ಜಿಲ್ಲೆಯ ಬರಹಗಾರರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು), ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ,ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿನ ದತ್ತಿ (ಎಲ್. ಬಸವರಾಜು ದತ್ತಿ), ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ, ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ, ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ, ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ, ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ, ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ, ದಿವಂಗತ ಶ್ರೀ ಹೇಮರಾಜ್ ಜಿ.ಎಸ್. ಕುಶಾಲನಗರ ದತ್ತಿ ಪ್ರಶಸ್ತಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ ಶೀರ್ಷಿಕೆ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಸದರು ಹಾಗೂ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ, ಜಿಲ್ಲಾಧಿಕಾರಿ ಬಿ.ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಇತರೆ ಅಧಿಕಾರಿಗಳು ಹಾಜರಿದ್ದರು.
Thursday, 22 June 2017
ಜಿಲ್ಲೆಯ ಶಶಿಕುಮಾರ್‍ನಿಗೆ ಮತ್ತೆ ಒಲಿದು ಬಂದ ಶೌರ್ಯಪ್ರಶಸ್ತಿ... ಹ್ಯಾಟ್ಸ್ ಆಫ್ ಟು ಯು ಮೈ ಡಿಯರ್ ಬಾಯ್.... ಎಸ್.ವಿ.ಎಸ್
ಶಶಿಕುಮಾರ್‍ನಿಗೆ ಮತ್ತೆ ಒಲಿದು ಬಂದ ಶೌರ್ಯಪ್ರಶಸ್ತಿ
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ (ಯಳಂದೂರು) ಜೂ 22 :- ಜಿಲ್ಲೆಯ ಯಳಂದೂರು ತಾಲ್ಲೂಕಿನ ಸಮೀಪದ ಗೂಳಿಪುರ ಗ್ರಾಮದ ನಿವಾಸಿ ನಾ.ಮಂಜುನಾಥಸ್ವಾಮಿ ಹಾಗೂ ಗಾಯತ್ರಿ ಎಂಬ ದಂಪತಿಗಳ ಪುತ್ರ ಜಿ.ಎಂ.ಶಶಿಕುಮಾರ್‍ನಿಗೆ ಖಾಸಗೀವಾಹಿನಿಯು ಕೊಡುತ್ತಿರುವÀ 2017 ನೇ ಸಾಲಿನ ಶೌರ್ಯಪ್ರಶಸ್ತಿ ಈ ಬಾರಿಯೂ ಲಭಿಸಿದೆ.2016-17ನೇ ಸಾಲಿನಲ್ಲಿ ತನ್ನ ಸಹಪಾಠಿಗಳೊಂದಿಗೆ ಶಾಲಾಬಸ್‍ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮಕ್ಕಳನ್ನು ರಕ್ಷಿಸಲು ತೋರಿದ ಧೈರ್ಯ, ಸಾಹಸ, ಸಮಯ ಪ್ರಜ್ಞೆಗಾಗಿ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಳೆದ ಬಾರಿ ಶಶಿಕುಮಾರ್ ಭಾಜನನಾಗಿದ್ದರು ಆದರೆ ಈಗ 2017/18 ನೇ ಸಾಲಿನಲ್ಲಿ ಜೀವದÀ ಹಂಗು ತೊರೆದು ಜೀವ ಉಳಿಸಿದವರಿಗೆ ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆಯ ಮಾಧ್ಯಮ ಸಂಸ್ಥೆಯು ಜಂಟಿಯಾಗಿ ನೀಡುತ್ತಿರುವ 2017 ನೇ ಸಾಲಿನ ಶೌರ್ಯಪ್ರಶಸ್ತಿಗೆ ಮತ್ತ್ಮೆ ಜಿ.ಎಂ.ಶಶಿಕುಮಾರ್‍ನ ಹೆಸರು ಆಯ್ಕೆಯಾಗಿದ್ದು ಜಿಲ್ಲೆಯ ಜನರಲ್ಲಿ ಸಂತಸ ಮನೆ ಮಾಡಿದೆ.
ಪ್ರಸ್ತುತ ಮೈಸೂರಿನ ಬೇಸ್‍ನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಶಶಿಕುಮಾರ್ ಕಳೆದ ವರ್ಷ ಬನ್ನೂರು ರಸ್ತೆಯಲ್ಲಿರುವ ನವಕೀಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಕಳೆದ ವರ್ಷ 2016 ನೇ ಜೂನ್ 6ರಂದು ನಾಡನಹಳ್ಳಿ ಬಳಿ ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ತನ್ನ ಶಾಲೆಯ ಬಸ್ ಬೆಂಕಿ ಅವಘಡದಲ್ಲಿ ಸಿಲುಕಿತು. ಈ ಸಂದರ್ಭದಲ್ಲಿ ಶಶಿಕುಮಾರನು ತನ್ನ ಸಹಪಾಠಿಗಳೊಂದಿಗೆ ಕುಳಿತ್ತಿದ್ದ. ತನ್ನ ಶಾಲಾ ಬಸ್‍ನಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ವಾಹನದ ಇಂಜಿನ್‍ನಲ್ಲಿ ಕಾಣಿಸಿಕೊಂಡ ಹೊಗೆ ಕ್ಷಣಾರ್ಧದಲ್ಲಿ ವಾಹನವನ್ನೆಲ್ಲಾ ಆವರಿಸಿತು.
ಬಸ್‍ನಲ್ಲಿದ್ದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಿ ಅಳುತ್ತಿದ್ದರು. ಈ ಸಂದರ್ಭದಲ್ಲಿ ಅಪಾಯದ ಮುನ್ಸೂಚನೆಯನ್ನು ಅರಿತ ಶಶಿಕುಮಾರನು ತನ್ನ ಸಹಪಾಠಿಗಳೊಡಗೂಡಿ ಸಮಯ ಪ್ರಜ್ಞೆ ಮೆರೆದು, ತುರ್ತು ನಿರ್ಗಮನದ ಬಾಗಿಲನ್ನು ತಕ್ಷಣ ತೆರೆಯುವುದರ ಮೂಲಕ ಅಳುತ್ತಿದ್ದ ಮಕ್ಕಳನ್ನು ಕೆಳಗಿಳಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದ ಘಟನೆ ನಂತರ ನಂತರ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ ಸಂದರ್ಭದಲ್ಲಿ ಶಶಿಕುಮಾರನು ತೋರಿದ ಸಮಯ ಪ್ರಜ್ಞೆ ದೈರ್ಯದಿಂದಾಗಿ ಯಾವುದೇ ಮಕ್ಕಳಿಗೆ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಸಾಧನೆಯನ್ನು ಮನಗಂಡು ಕಳೆದ ಬಾರಿ ರಾಜ್ಯ ಸರ್ಕಾರ ಜಿ.ಎಂ. ಶಶಿಕುಮಾರ್‍ನನ್ನು ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಪ್ರತಿ ವರ್ಷ ನವೆಂಬರ್ 14ರಂದು ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಿ, 10 ಸಾವಿರರೂ ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದ್ದರು.
ಈಗ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆಯುವ ಖಾಸಗೀ ವಾಹಿನಿ-ಕನ್ನಡ ಪ್ರಭ ಮಾಧ್ಯಮ ಸಂಸ್ಥೆಯು ನಡೆಸುವ ಬೃಹತ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಬ್ಬರ ಪ್ರಾಣ ರಕ್ಷಿಸಿದ ಸಾಹಸಿಗರಿಗೆ ಕೊಡಮಾಡುವ ಶೌರ್ಯಪ್ರಶಸ್ತಿಗೆ ಶಶಿಕುಮಾರ್‍ನನ್ನು ಆಯ್ಕೆಮಾಡಲಾಗಿದ್ದು, ಇಂದು (23ರಂದು) ಬೃಹತ್ ಸಮಾರಂಭದಲ್ಲಿ ಶಶಿಕುಮಾರ್‍ನನ್ನು ಸನ್ಮಾನಿಸಲಾಗುತ್ತದೆ.
ಯಳಂದೂರು ಪ್ರತಿನಿದಿ ನಂದೀಶ್ ಸಂದರ್ಶನ ಮಾಡಿದಾಗ ಹೇಳಿದ್ದು ಹೀಗೆ
- ಪ್ರಸಕ್ತ 2017/18ನೇ ಸಾಲಿನಲ್ಲಿ ಜೀವದ ಹಂಗು ತೊರೆದು ಜೀವ ಉಳಿಸಿದವರಿಗೆ ಕೊಡಮಾಡುವ ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆಯು ಕೊಡಮಾಡುವ 2017 ನೇ ಸಾಲಿನ ಶೌರ್ಯಪ್ರಶಸ್ತಿ ನನಗೆ ಲಭಿಸಿರುವುದು ತುಂಬಾ ಖುಷಿ ತಂದಿದೆ. ಕಳೆದ ಬಾರಿ ಮಕ್ಕಳ ದಿನಾಚರಣೆ ಅಂಗವಾಗಿ ಸರ್ಕಾರ ನೀಡುವ ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ನನಗೆ ಲಭಿಸಿತ್ತು ಈ ಬಾರಿ ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆಯು ಕೊಡಮಾಡುವ 2017/18ನೇ ಸಾಲಿನ ಶೌರ್ಯಪ್ರಶಸ್ತಿ ನನಗೆ ಲಭಿಸುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಪ್ರಶಸ್ತಿ ನನ್ನ ದೈರ್ಯ ಹಾಗೂ ಸಮಯ ಪ್ರಜ್ಞೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎನ್ನುವ ಶಶಿಕುಮಾರನು ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬುವವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಸರ್ಕಾರ ಜರುಗಿಸುವುದರ ಜೊತೆಗೆ ಅಪಾಯಕ್ಕೆ ಶಾಲಾ ವಾಹನಗಳು ಸಿಲುಕಿದಾU ಹಾಗೂ ಇನ್ನಿತರ ಘಟನಾವಳಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾಣಾಪಾಯಕ್ಕೆ ಸಿಲುಕಿದಾಗ ತಕ್ಷಣ ಪಾರಾಗುವ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ಸಂಬಂಧಸಿದ ಸಂಪನ್ಮುಲ ವ್ಯಕ್ತಿಗಳಿಂದ ಸರಿಯಾದ ತರಬೇತಿಯನ್ನು ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುತ್ತದೆ ಎನ್ನುತ್ತಾನೆ.ಚಾ.ನಗರ ನಗರಸಭಾ ಆಯುಕ್ತ ವಿರುದ್ಧ ಲೋಕಾಯುಕ್ತಕ್ಕೆ ದೂರು, ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನ: 22-06-2017
ಚಾ.ನಗರ ನಗರಸಭಾ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಎಸ್.ವಿ.ಎಸ್.
ಚಾಮರಾಜನಗರ,ಜೂ.22-ನಗರಸಭಾ ಮಾಜಿ ಅಧ್ಯಕ್ಷೆ ರೇಣುಕಾ ಅವರು ನಗರಸಭಾ ಆಯುಕ್ತ ರಾಜಣ್ಣ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.ಏಪ್ರಿಲ್ 3 ರಿಂದ 26 ರವರೆಗೆ ನಗರಸಭಾ ಅಧ್ಯಕ್ಷರು ಇಲ್ಲದಿರುವ ಸಮಯದಲ್ಲಿ 1.25 ಕೋಟಿ ಮೊತ್ತದ ಬಿಲ್ ಗಳನ್ನು ಸ್ವ ನಿರ್ಧಾರದ ಮೇಲೆ ಪಾವತಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಕಡತಗಳಿಗೆ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಅವರ ಸಹಿ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತರು ರಾಜಣ್ಣ, ನನಗೆ ಅದರ ಬಗ್ಗೆ ಗೊತ್ತಿಲ್ಲ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.
*************************************************************
ಕ್ರೈಂ ಡಿಟೇಲ್ಸ್
ಎಸ್.ವಿ.ಎಸ್.
ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನರಾಜ್ಯ, (ಚಾಮರಾಜನಗರ) ಜೂ.22: ಫೇಸ್ ಬುಕ್ ನಲ್ಲಿ ವ್ಯಕ್ತಿಯೋರ್ವ ಹಾಕಿದ್ದ ಅವಹೇಳನಕಾರಿ ಪೋಸ್ಟ್ ನಿಂದಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ನಾಗೇಶ್ ಎಂಬಾತನೇ ಆರೋಪಿ. ಫೇಸ್ ಬುಕ್ ನಲ್ಲಿ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಹಿನ್ನೆಲೆ ವ್ಯಕ್ತಿ ಜೈಲು ಪಾಲಾಗಿದ್ದಾನೆ.
ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ ಪೆಕ್ಟರ್ ಮಹದೇವಯ್ಯ ಅವರು ಎಸ್ಪಿ ಅವರ ಆದೇಶದ ಮೇರೆಗೆ ಬಂಧಿಸಿದ್ದಾರೆ.
ದರೋಡೆ ಪ್ರಕರಣ: ಓರ್ವನ ಬಂಧನ
ಎಸ್.ವಿ.ಎಸ್.
ಎಸ್.ವಿ.ಎಸ್.
ರಾಜ್ಯ, (ಚಾಮರಾಜನಗರ) ಜೂ.22: ಯುವತಿಯೋರ್ವಳನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾಗಿದ್ದವನನ್ನು ಸಂತೆಮರಳ್ಳಿ ಪೊಲೀಸರು ಬಂಧಿಸಿದ್ದಾರೆ.ಮೇಗಲಹುಂಡಿಯಿಂದ ಸಪ್ಪಯ್ಯನಪುರ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯನ್ನು ಅಡ್ಡ ಹಾಕಿ ಮೊಬೈಲ್ ಕಸಿದು ಪರಾರಿಯಾಗಿದ್ದನು. ಈ ಪ್ರಕರಣ ಕಳೆದ ತಿಂಗಳ 30 ರಂದು ನಡೆದಿದ್ದು, ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ರಾಜೇಂದ್ರ ಅವರು ಆರೋಪಿಗಾಗಿ ವ್ಯಾಪಕ ಜಾಲ ಬೀಸಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಸಬ್ ಇನ್ಸ್ ಪೆಕ್ಟರ್ ಬಸವರಾಜು, ಪೊಲೀಸ್ ಪೇದೆ ಬಾಬು ಸೇರಿದಂತೆ ತಂಡವು ಶ್ರಮವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ವಾಹನವೂ ಸಹ ಕಳ್ಳತನದ್ದಾಗಿದ್ದು, ಈಗ ಎರಡು ಬೈಕ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
******************************************************************************
ಜೂ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜೂ. 22 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜೂನ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೆ. 25ರೊಳಗೆ ವಾರ್ಷಿಕ ಮಹಾಸಭೆ ನಡೆಸಲು ಸಹಕಾರ ಸಂಘಗಳಿಗೆ ಸೂಚನೆ
ಚಾಮರಾಜನಗರ, ಜೂ. 22 – ನಗರ ಉಪವಿಭಾಗದಲ್ಲಿರುವ ಎಲ್ಲ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ನಿಯಮಗಳು 1960ರ ನಿಯಮ 14 (ಎಜೆ) ಪ್ರಕಾರ 2016-17ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಿ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪರಿಶೀಲನಾ ವರದಿಯನ್ನು ಮಂಡಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.ಇಲ್ಲವಾದಲ್ಲಿ ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ವಿ. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 23ರಂದು ಜಿಲ್ಲೆಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾಮಗಾರಿ ಪರಿಶೀಲನಾ ಸಮಿತಿ ಅಧ್ಯಕ್ಷರು, ಸದಸ್ಯರ ಭೇಟಿ
ಚಾಮರಾಜನಗರ, ಜೂ. 22 :- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯಮಠ ಹಾಗೂ ಸಮಿತಿಯ ಸದಸ್ಯರು ಜೂನ್ 23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 10.30 ಗಂಟೆಗೆ ನಗರಕ್ಕೆ ಆಗಮಿಸಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಪರಿಶೀಲನೆ ನಡೆಸುವರು ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡುವರು. ಬಳಿಕ ಬಿಳಿಗಿರಿ ರಂಗನ ಬೆಟ್ಟದ ಗ್ರಾಮ ಪಂಚಾಯತ್‍ಗೆ ಭೇಟಿ ನೀಡುವರೆಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಿಸರ್ಗ ಪಪದವಿಪೂರ್ವ ಕಾಲೇಜು ಜಿಲ್ಲೆಗೆ ಮೊದಲ ಸ್ಥಾನ
ಚಾಮರಾಜನಗರ, ಜೂ. 22):- ಕಳೆದ ಮಾರ್ಚ್ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಳ್ಳೇಗಾಲದ ನಿಸರ್ಗ ಪದವಿಪೂರ್ವ ಕಾಲೇಜು ಶೇ. 89ರಷ್ಟು ಫಲಿತಾಂಶವನ್ನು ಪಡೆದು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.ಕೊಳ್ಳೇಗಾಲದ ಲಯನ್ಸ್ ಪದವಿಪೂರ್ವ ಕಾಲೇಜು ನೀಡಿದ ಮಾಹಿತಿ ಅನ್ವಯ ಸದರಿ ಲಯನ್ಸ್ ಪದವಿಪೂರ್ವ ಕಾಲೇಜು ಶೇ.89.25ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಸದರಿ ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಫಲಿತಾಂಶದ ಬಗ್ಗೆ ಪರಿಶೀಲಿಸಿದಾಗ ಇಲಾಖೆಗೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂತು. ಲಯನ್ಸ್ ಪದವಿಪೂರ್ವ ಕಾಲೇಜು ಶೇ. 86.99ರಷ್ಟು ಫಲಿತಾಂಶ ಪಡೆದಿದ್ದು ಜಿಲ್ಲೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನ ಪಡೆದಿದೆ ಎಂದು ಪ್ರಕಟಿಸಲಾಗಿದ್ದ ಕೊಳ್ಳೇಗಾಲದ ನಿಸರ್ಗ ಪದವಿಪೂರ್ವ ಕಾಲೇಜು ಶೇ.89ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದೆ.
ಪ್ರಥಮಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿ ಬೋಧಕ ಬೋಧಕೇತರ ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಪಿ ಮಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 :- ಜಿಲ್ಲೆಯಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ, ಭೂಗೋಳ ಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಶೇ.55ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜತೆಗೆ ಬಿಎಡ್ ಪದವಿಯನ್ನು (ವಾಣಿಜ್ಯಶಾಸ್ತ್ರ ವಿಷಯ ಹೊರತುಪಡಿಸಿ) ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಜೂನ್ 30ರೊಳಗೆ ಸಲ್ಲಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಪಿ ಮಲಾಕಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ಶುಲ್ಕ ಮರುಪಾವತಿ ಸೌಲಭ್ಯಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 - 2017-18ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯ ಲಭಿಸಲಿದ್ದು ಅರ್ಜಿ ಆಹ್ವಾನಿಸಲಾಗಿದೆ.1ನೇ ತರಗತಿಯಿಂದ ವಿಶ್ವವಿದ್ಯಾನಿಲಯದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಎಸ್ ಎಸ್ ಎಲ್ ಸಿ ಹಾಗೂ ನಂತರದ ಪಬ್ಲಿಕ್ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೊಡಲಾಗುತ್ತದೆ. ಅಲ್ಲದೆ ಎಸ್ ಎಸ್ ಎಲ್ ಸಿ ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಆಯಾ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅಥವಾ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಬಳಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ (ದೂ.ಸಂ. 08226-223688/224688)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜೂ. 24ರಂದು ಗುಂಡ್ಲುಪೇಟೆ, ಬೇಗೂರಿನಲ್ಲಿ ವಿದ್ಯುತ್ ಕುಂದುಕೊರತೆ ಸಭೆ
ಚಾಮರಾಜನಗರ, ಜೂ. 22- ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಗುಂಡ್ಲುಪೇಟೆ ಉಪವಿಭಾಗ ಕಚೇರಿಯಲ್ಲಿ ಜೂನ್ 24ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಬೇಗೂರು ಉಪವಿಭಾಗ ಕಚೇರಿ ಆವರಣದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಅಧೀಕ್ಷಕ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.ಗುಂಡ್ಲುಪೇಟೆ ಮತ್ತು ಬೇಗೂರು ವ್ಯಾಪ್ತಿಯ ವಿದ್ಯುತ್ ಗ್ರಾಹಕರು, ನಾಗರಿಕರು ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆ ದೂರುಗಳಿದ್ದಲ್ಲಿ ಸಭೆಗೆ ಹಾಜರಾಗಿ ಗಮನಕ್ಕೆ ತರುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ವಿದ್ಯಾಲಯದಲ್ಲಿ 7 ರಿಂದ 10ನೇ ತರಗತಿ ಪ್ರವೇಶಕ್ಕೆ ಕೆಲ ಸೀಟುಗಳು ಲಭ್ಯ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 - ನಗರದ ಆದರ್ಶ ವಿದ್ಯಾಲಯದಲ್ಲಿ 7 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಲು ಕೆಲ ಸೀಟುಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.7ನೇ ತರಗತಿಗೆ 18, 8ನೇ ತರಗತಿಗೆ 15, 9ನೇ ತರಗತಿಗೆ 12 ಹಾಗೂ 10ನೇ ತರಗತಿಗೆ 10 ಸೀಟುಗಳು ಲಭ್ಯವಿದೆ. ಈ ಹಿಂದೆ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಪರೀಕ್ಷೆ ಬರೆದಿದ್ದು ಪ್ರವೇಶಪತ್ರ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಜೂನ್ 24 ಕಡೆಯ ದಿನವಾಗಿದೆ. ಇದೇವೇಳೆ 17-18ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಕೆಲವು ವಿದ್ಯಾರ್ಥಿಗಳು ದಾಖಲಾಗದೆ ಇರುವುದರಿಂದ ವರ್ಗವಾರು ಖಾಲಿ ಇರುವ 37 ವಿದ್ಯಾರ್ಥಿಗಳ 2ನೇ ಪಟ್ಟಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Tuesday, 20 June 2017
ಯಶಸ್ವಿಯಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ,ಸಮರೋಪಾದಿಯಲ್ಲಿ ಸ್ವಚ್ಚತೆ, ಆರೋಗ್ಯ ಪೂರಕ ಕಾರ್ಯಕ್ರಮ ಅನುಷ್ಠಾನ ಮಾಡಲು ಜಿಲ್ಲಾಧಿಕಾರಿ ತಾಕೀತು- 21-06-2017 ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ವಿಶ್ವ ಯೋಗ ದಿನಾಚರಣೆ - ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ವಿಶ್ವ ಯೋಗ ದಿನಾಚರಣೆ - ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಇಂದು ಕೇಂದ್ರ ಸರ್ಕಾರದ ಆಯುಷ್ ಮಂತ್ರಾ ಲಯ, ರಾಜ್ಯ ಆಯುಷ್ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಪತಂಜಲಿ ಯೋಗ ಫೌಂಡೇಷನ್ ಸಹಯೋಗದಲ್ಲಿ ೩ನೇ ಅಂತ ರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ೩ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ೨೦೦೦ಕ್ಕೂ ಹೆಚ್ಚು ವಿವಿಧ ಶಾಲೆಯ ಮಕ್ಕಳು, ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಣೆ ಮಾಡಿದರು.ಜಿಲ್ಲಾಧಿಕಾರಿ ಬಿ.ರಾಮು, ಎಡಿಸಿ ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಸಿಇಒ ಹರೀಶ್ ಕುಮಾರ್, ಎಸ್ಪಿ ಧರ್ಮೇಂದ್ರಕುಮಾರ್, ಎಎಸ್ಪಿ ಎಂ.ಎಸ್.ಗೀತಾ, ಡಿವೈಎಸ್ಪಿ ಗಂಗಾಧರಸ್ವಾಮಿ, ಪಾಲ್ಗೊಂಡಿದ್ದರು.
**********************************************************************************
ಜೂ. 23ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 21 - ಕಡಕೊಳ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಜೂನ್ 23ರಂದು ಬಸ್ ಷಟ್ ಡೌನ್ ಇರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಆಗುವ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
******************************************************
ಯಶಸ್ವಿಯಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಚಾಮರಾಜನಗರ, ಜೂ. 21 :- ಶಾಂತಿ ಮತ್ತು ಐಕ್ಯತೆಗಾಗಿ ಯೋಗ ಎಂಬ ಘೋಷವಾಕ್ಯದಡಿ 3ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ನಗರದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಯೋಗ ದಿನ ಆಚರಣೆ ಅಂಗವಾಗಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಪ್ರತಿನಿಧಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ನಾಗರಿಕರು, ಯೋಗ ಆಸಕ್ತರು ಪಾಲ್ಗೊಂಡರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಯೋಗ ದಿನ ಆಚರಣೆ ಅಂಗವಾಗಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳು, ಸಂಘಸಂಸ್ಥೆಗಳು ಪ್ರತಿನಿಧಿಗಳು, ಜನಪ್ರತಿನಿಧಿಗಳು, ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ನಾಗರಿಕರು, ಯೋಗ ಆಸಕ್ತರು ಪಾಲ್ಗೊಂಡರು.
ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಅವರು ಮೈದಾನದಲ್ಲಿ ನಿಂತು ಎಲ್ಲರೊಡನೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ವಿಶೇಷ ಗಮನ ಸೆಳೆಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ತಂಡೋಪತಂಡವಾಗಿ ವಿದ್ಯಾರ್ಥಿಗಳು, ಯೋಗ ಆಸಕ್ತರು ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಸಮಾವೇಶಗೊಂಡರು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಯೋಗ ಪ್ರದರ್ಶನ ನಡೆಯಿತು. ಅತ್ಯಂತ ವ್ಯವಸ್ಥಿತವಾಗಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು.
ಬೆಳಿಗ್ಗೆ 6 ಗಂಟೆಯಿಂದಲೇ ತಂಡೋಪತಂಡವಾಗಿ ವಿದ್ಯಾರ್ಥಿಗಳು, ಯೋಗ ಆಸಕ್ತರು ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಸಮಾವೇಶಗೊಂಡರು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಯೋಗ ಪ್ರದರ್ಶನ ನಡೆಯಿತು. ಅತ್ಯಂತ ವ್ಯವಸ್ಥಿತವಾಗಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು.
ಯೋಗ ಪ್ರದರ್ಶನದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಜ್ಞಾನ ಬಲದಿಂದ ಅಜ್ಞಾನ ದೂರವಾಗುತ್ತದೆ ಎಂಬ ಮಾತನ್ನು ಉಲ್ಲೇಖಿಸಿ ಯೋಗದ ಬಲದಿಂದ ಅನಾರೋಗ್ಯ ಇಲ್ಲವಾಗುತ್ತದೆ. ಹೀಗಾಗಿ ದೀರ್ಘ ಆಯಸ್ಸು, ಸಂತೋಷಕರ ಜೀವನಕ್ಕೆ ಯೋಗ ಪ್ರತಿಯೊಬ್ಬರಿಗೂ ಅಗತ್ಯವಿದೆ. ಜೀವನದುದ್ದಕ್ಕೂ ಉಲ್ಲಾಸಕರವಾಗಿ ಇರಬೇಕಾದರೆ ಯೋಗ ಅಭ್ಯಾಸ ಮಾಡಬೇಕೆಂದರು.
ವಿದ್ಯಾರ್ಥಿಗಳಿಗೆ ವಿಶೇಷವಾಗಿ ಏಕಾಗ್ರತೆ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಅಧÀ್ಯಯನಶೀಲರಾಗುವ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿಸಲು ಹಾಗೂ ಮನಸ್ಸನ್ನು ಚಂಚಲತೆಯಿಂದ ದೂರಮಾಡಿ ಗ್ರಹಿಕೆ ಸಾಮಥ್ರ್ಯ ಹೆಚ್ಚಾಗಲು ಯೋಗ ಅನುಕೂಲಕರವಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಅಭ್ಯಾಸವನ್ನು ಮಾಡುವುದು ಒಳಿತು ಎಂದ ಜಿಲ್ಲಾಧಿಕಾರಿ ರಾಮು ಅವರು ತಾವೂ ಸಹ ವಿದ್ಯಾರ್ಥಿ ಜೀವನದಲ್ಲೇ ಯೋಗ ಕಲಿತ ಬಗ್ಗೆ ನೆನಪುಗಳನ್ನು ಬಿಚ್ಚಿಟ್ಟರು.
ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿರುವ ಯೋಗ ಅಭ್ಯಾಸವನ್ನು ಒಂದು ದಿನದ ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಯೋಗ ಅಭ್ಯಾಸವನ್ನು ನಿರಂತರವಾಗಿ ಮುಂದುವರೆಸಬೇಕು. ಯೋಗದ ಮಹತ್ವವನ್ನು ವ್ಯಾಪಕವಾಗಿ ತಿಳಿಸುವ ಉದ್ದೇಶದಿಂದಲೇ ಈ ಬಾರಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿನ ಕಾಳಜಿ ವಹಿಸಿ ಎಲ್ಲಾ ಭಾಗಗಳಲ್ಲಿ ಯೋಗ ದಿನ ಆಚರಿಸಲು ತಿಳಿಸಲಾಗಿತ್ತು. ಅದರಂತೆ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿಯೂ ಸಾವಿರಾರು ವಿದ್ಯಾರ್ಥಿಗಳು ಯೋಗ ಆಸಕ್ತರು ಸಾಮೂಹಿಕ ಯೋಗ ಪ್ರದರ್ಶನ ನೀಡಿದ್ದಾರೆ ಎಂದು ರಾಮು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು ಅವರು ಮಾತನಾಡಿ ಪ್ರಾಚೀನ ಕಾಲದಲ್ಲೇ ಯೋಗಕ್ಕೆ ವಿಶೇಷ ಮಹತ್ವ ಇತ್ತು. ಇಂದು ವಿದೇಶಿಗರು ಸಹ ಯೋಗದ ಉತ್ತಮ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಂಡಿದ್ದಾರೆ. ಯೋಗ ಅಭ್ಯಾಸವನ್ನು ವಿದೇಶಗಳ ವಿವಿಧ ರಂಗಗಳ ಸಾಧಕರು ನಡೆಸುತ್ತಿದ್ದಾರೆ. ಯಾವುದೇ ಸಾಧನ ಸಲಕರಣೆಗಳಿಲ್ಲದೇ ಎಲ್ಲರೂ ಸರಳವಾಗಿ ಯೋಗ ಕಲಿತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ತಿಳಿಸಿದರು.
ಪತಂಜಲಿ ಯೋಗ ಫೌಂಡೇಶನ್ ಅಧ್ಯಕ್ಷರಾದ ಕುಮಾರಸ್ವಾಮಿ ಅವರು ಅಂತರಾಷ್ಟ್ರೀಯ ಯೋಗ ದಿನ ಆಚರಣೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹೆಚ್ಚು ಆಸಕ್ತಿ ವಹಿಸಿ ಯಶಸ್ಸುಗೊಳಿಸಿರುವ ಕುರಿತು ಶ್ಲಾಘಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಬಿ. ಪುನೀತ್ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಜಿನಾ ಮೆಲಾಕಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
**********************************************************************
**********************************************************************
ಸಮರೋಪಾದಿಯಲ್ಲಿ ಸ್ವಚ್ಚತೆ, ಆರೋಗ್ಯ ಪೂರಕ ಕಾರ್ಯಕ್ರಮ ಅನುಷ್ಠಾನ ಮಾಡಲು ಜಿಲ್ಲಾಧಿಕಾರಿ ತಾಕೀತು
ಚಾಮರಾಜನಗರ, ಜೂ. 21 - ಡೆಂಗೆ ಸೇರಿದಂತೆ ಇತರೆ ಜ್ವರ ಸಂಬಂಧಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸ್ವಚ್ಚತೆ ಹಾಗೂ ಆರೋಗ್ಯಪೂರಕ ಜಾಗೃತಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಾಂಕ್ರಾಮಿಕ ರೋಗಗಳ ಸ್ಥಿತಿಗತಿ ಪರಾಮರ್ಶೆ ಹಾಗೂ ಇತರೆ ಆರೋಗ್ಯ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಗೆ ಇತರೆ ಜ್ವರ ಸಂಬಂಧ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಹೀಗಾಗಿ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಬೇಕು. ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ನೈರ್ಮಲ್ಯಪೂರಕ ಕ್ರಮಗಳನ್ನು ತಕ್ಷಣದಿಂದಲೇ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ವ್ಯಾಪಕವಾಗಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ, ಕಸ ವಿಲೇವಾರಿ, ಸೊಳ್ಳೆಗಳ ನಿರ್ಮೂಲನೆ, ಇತರೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೂಡಲೇ ತಹಸೀಲ್ದಾರ್ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿ ಸಿಬ್ಬಂದಿಯನ್ನು ಒಳಗೊಂಡ ಸಭೆಯನ್ನು ಕರೆಯಬೇಕು. ಅಗತ್ಯವಾಗಿ ಚಾಲನೆ ನೀಡಬೇಕಿರುವ ಆರೋಗ್ಯ ಸಂಬಂಧಿ ಕೆಲಸಗಳಿಗೆ ಕಾರ್ಯೋನ್ಮುಖರಾಗಲು ಸೂಚಿಸಬೇಕೆಂದು ರಾಮು ತಿಳಿಸಿದರು.
ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿ, ಅನುಪಯುಕ್ತ ಸ್ಥಳಗಳಲ್ಲಿ ನೀರು ನಿಲ್ಲದಂತೆ ವಿಲೇವಾರಿ ಮಾಡಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಇರದಂತೆ ವಹಿಸಬೇಕಿರುವ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಚತೆ ಹಾಗೂ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸಗಳು ಜತೆಜತೆಯಲ್ಲಿಯೇ ಸಾಗಬೇಕು. ಹೊಟೆಲ್, ರೆಸ್ಟೂರೆಂಟ್, ಬೇಕರಿ, ಬೀದಿಬದಿಯ ಅಂಗಡಿಗಳಲ್ಲಿ ನೈರ್ಮಲ್ಯ ಕ್ರಮಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಆರೋಗ್ಯಕರ ವಿದಾನಗಳನ್ನು ಅನುಸರಿಸದೇ ಇರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲ ಹಾಡಿಗಳಲ್ಲೂ ಸಹ ಆರೋಗ್ಯ ತಪಾಸಣೆಯನ್ನು ನಡೆಸಬೇಕು. ಸಂಚಾರಿ ಚಿಕಿತ್ಸಾ ವಾಹನಗಳ ಸೌಲಭ್ಯ ಲಭಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವವರು ಕಂಡುಬಂದರೆ ಅವರ ರಕ್ತ ಮಾದರಿಯನ್ನು ಪರೀಕ್ಷಿಸಿ ಅವಶ್ಯವಿರುವ ಚಿಕಿತ್ಸೆಯನ್ನು ನೀಡಬೇಕು. ಗಂಭೀರತೆ ಅಂಶಗಳು ಕಂಡುಬಂದರೆ ಪಟ್ಟಣದ ಆಸ್ಪತ್ರೆಗಳಿಗೆ ದಾಖಲು ಮಾಡಬೇಕು. ವಿಶೇಷ ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಯಾವುದೇ ಭಾಗದಲ್ಲಿ ಶಂಕಿತ ಜ್ವರ ಪ್ರಕರಣಳಿಂದ ಸಾವನ್ನಪ್ಪುವುದು ಕಂಡುಬಂದರೆ ಆಯಾ ಭಾಗದ ಹಿರಿಯ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ಎಚ್ಚರಿಕೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ವ್ಯಾಪಕವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಜ್ವರ ಸಂಬಂಧಿ ಪ್ರಕರಣಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಪ್ರತಿನಿತ್ಯದ ಕಾರ್ಯನಿರ್ವಹಣೆಯ ವರದಿಗಳು ಬರಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಎಂ. ಅನಿಲ್ ಕುಮಾರ್, ಜಿಲ್ಲಾ ಕಣ್ಗಾವಲು ಘಟಕ ಅಧಿಕಾರಿ ಡಾ. ಎಂ. ನಾಗರಾಜು, ತಹಸೀಲ್ದಾರರಾದ ಪುರಂಧರ, ಚಂದ್ರಮೌಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮಕುಮಾರ್, ನಗರಸಭೆ ಆಯುಕ್ತರಾದ ರಾಜಣ್ಣ, ರಮೇಶ್, ಇನ್ನಿತರ ಸ್ಥಳೀಯ ಸಂಸ್ಥೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೂ. 23ರಂದು ಜಿಲ್ಲೆಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾಮಗಾರಿ ಪರಿಶೀಲನಾ ಸಮಿತಿ ಅಧ್ಯಕ್ಷರು, ಸದಸ್ಯರ ಭೇಟಿ
ಚಾಮರಾಜನಗರ, ಜೂ. 21 - ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯಮಠ ಹಾಗೂ ಸಮಿತಿಯ ಸದಸ್ಯರು ಜೂನ್ 23ರಂದು ಬೆಳಿಗ್ಗೆ 10.30 ಗಂಟೆಗೆ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು.
ಇದೇವೇಳೆ ಕ್ಷೇತ್ರಗಳಿಗೆ ಭೇಟಿ ನೀಡುವರು. ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಸಂಬಂಧ ಪರಾಮರ್ಶೆ ನಡೆಸುವರೆಂದು ಜಿಲ್ಲಾ ಪಂಚಾಯತ್ ತಿಳಿಸಿದೆ.
ಜೂ. 22ರಂದು ರಫ್ತು ಜಾಗೃತಿ ಶಿಬಿರ
ಚಾಮರಾಜನಗರ, ಜೂ. 21 - ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಗ್ರಾನೈಟ್ ಉದ್ಯಮಿಗಳ ಸಂಘ ಮತ್ತು ವರ್ತಕರ ಸಂಘದ ಆಶ್ರಯದಲ್ಲಿ ಕೈಗಾರಿಕೋದ್ಯಮಿ ಹಾಗೂ ವಾಣೀಜ್ಯೋದ್ಯಮಿಗಳಿಗಾಗಿ ರಫ್ತು ಉತ್ತೇಜನ ಕುರಿತು ರಫ್ತು ಜಾಗೃತಿ ಶಿಬಿರವನ್ನು ಜೂನ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ವರ್ತಕರ ಭವನದಲ್ಲಿ ಆಯೋಜಿಸಲಾಗಿದೆ.ಆಸಕ್ತ ಉದ್ದಿಮೆದಾರರು ಶಿಬಿರದ ಪ್ರಯೋಜನ ಪಡೆಯುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆಗೆ ನೊಂದಾಯಿಸಲು ಮನವಿ
ಚಾಮರಾಜನಗರ. ಜೂ. 21 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ 4 ತಾಲ್ಲೂಕಿನ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಿದ್ದು, ನಿರ್ಧರಿತ ಬೆಳೆಗಳಿಗೆ ಬೆಳೆ ವಿಮೆ ನೊಂದಾಯಿಸಿಕೊಳ್ಳಲು ಕೃಷಿ ಇಲಾಕೆ ಮನವಿ ಮಾಡಿದೆ.ಮಳೆ ಆಶ್ರಿತ ಉದ್ದು, ಹೆಸರು, ಎಳ್ಳು ಬೆಳೆಗೆ ನೊಂದಾಯಿಸಿಕೊಳ್ಳಲು ಜೂನ್ 30 ಕಡೆಯ ದಿನವಾಗಿದೆ.
ನೀರಾವರಿ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಆಲೂಗೆಡ್ಡೆ, ಈರುಳ್ಳಿ, ಸೂರ್ಯಕಾಂತಿ, ಟೊಮೆಟೋ, ಮಳೆ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ನೆಲಗಡಲೆ (ಶೇಂಗ), ಅಲಸಂದೆ ಬೆಳೆಗೆ ಮತ್ತು ಬದನೆ, ಬೀನ್ಸ್ ಬೆಳೆಗೆ ನೊಂದಾಯಿಸಿಕೊಳ್ಳಲು ಜುಲೈ 15 ಕಡೆಯ ದಿನವಾಗಿದೆ.
ಮಳೆ ಆಶ್ರಿತ ತೊಗರಿ, ಹುರುಳಿ, ಹರಳು ಮತ್ತು ಅರಿಶಿನ ಬೆಳೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕಡೆಯ ದಿನವಾಗಿದೆ.
ನೀರಾವರಿ ಮತ್ತು ಮಳೆ ಆಶ್ರಿತ ಭತ್ತ, ರಾಗಿ ಹಾಗೂ ಮಳೆ ಆಶ್ರಿತ ಹತ್ತಿ, ಅವರೆ ಬೆಳೆಗೆ ನೊಂದಾಯಿಸಿಕೊಳ್ಳಲು ಆಗಸ್ಟ್ 14 ಕಡೆಯ ದಿನವಾಗಿದೆ.
2017ರ ಮುಂಗಾರು ಹಂಗಾಮಿನಲ್ಲಿ ಬೆಳೆÉ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಇಲ್ಲವೇ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಕ್ಕೆ ಅಡುಗೆಯವರು, ಅಡುಗೆ ಸಹಾಯಕರ ಹುದ್ದೆ ಅಭ್ಯರ್ಥಿಗಳಿಗೆ ದಾಖಲಾತಿ ಹಾಗೂ ಪ್ರಾಯೋಗಿಕ ಪರೀಕ್ಷೆ
ಚಾಮರಾಜನಗರ, ಜೂ. 21- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಡಿ ವೃಂದದ ಅಡುಗೆಯವರು ಮತ್ತು ಅಡುಗೆ ಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.ಅಡುಗೆಯವರ ಹುದ್ದೆಗೆ ಜೂನ್ 22ರಂದು ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಜೂನ್ 23ರಂದು ದಾಖಲಾತಿ ಪರಿಶೀಲನೆ ನಡೆಸಲಾಗುವುದು. ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಯನ್ನು ಅಡುಗೆಯವರಿಗೆ ಜೂನ್ 28ರಂದು ಹಾಗೂ ಸಹಾಯಕರಿಗೆ ಜೂನ್ 29ರಂದು ನಡೆಸಲಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 3ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳಿಗೆ ಸಮಜಾಯಿಸಿ ನೀಡಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಜುಲೈ 18ರಂದು ಹೊರಡಿಸಲಾಗುವುದು.
ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದಂತೆ 1:5 ಅನುಪಾತದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ ತಿತಿತಿ.hಣಣಠಿ://ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ನಲ್ಲಿ ದಾಖಲಾತಿ ಪರಿಶೀಲನೆಗೆ ಕಾಲ್‍ಲೆಟರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. 08226-222180 ಸಂಪರ್ಕಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.
Subscribe to:
Posts (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...