Tuesday, 7 February 2017

ಚಾಮರಾಜನಗರ, ಫೆ. 07 - ದಡಾರ ರುಬೆಲ್ಲಾ ಲಸಿಕೆ : ಆತಂಕ ಬೇಡ – ಡೀಸಿ ಮನವಿ (07-02-2017)

ಪೋಷಕರೆ ಗಾಬರಿಯಾಗದಿರಿ ...ವದಂತಿಗೆ ಕಿವಿಗೊಡಬೇಡಿ. * ವಿಎಸ್ಎಸ್ * ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕಿದಾಗ ಮಗುವಿಗೆ ಏನು ಆಗುವುದಿಲ್ಲ. ಕೆಲವರು ಏನೋ ಆಯ್ತಂತೆ,ಇಲ್ಲಿ ಆಯ್ತಂತೆ ಎಂಬ ಊಹಾಪೊಹ ಸುದ್ದಿಗೆ ಕಿವುಕೊಟ್ಟು ಮಕ್ಕಳನ್ನ ಶಾಲೆಯಿಂದ ಲಸಿಕೆ ಹಾಕಿಸದೆ ವಾಪಸ್ ಕರೆದೊಯ್ದಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡರೆ ಏನು ಆಗುವುದಿಲ್ಲ.ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪೋಷಕರೆ ಗಾಬರಿಯಾಗದಿರಿ ...ವದಂತಿಗೆ ಕಿವಿಗೊಡಬೇಡಿ. * ವಿಎಸ್ಎಸ್ * ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕಿದಾಗ ಮಗುವಿಗೆ ಏನು ಆಗುವುದಿಲ್ಲ. ಕೆಲವರು ಏನೋ ಆಯ್ತಂತೆ,ಇಲ್ಲಿ ಆಯ್ತಂತೆ ಎಂಬ ಊಹಾಪೊಹ ಸುದ್ದಿಗೆ ಕಿವುಕೊಟ್ಟು ಮಕ್ಕಳನ್ನ ಶಾಲೆಯಿಂದ ಲಸಿಕೆ ಹಾಕಿಸದೆ ವಾಪಸ್ ಕರೆದೊಯ್ದಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡರೆ ಏನು ಆಗುವುದಿಲ್ಲ.ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದಡಾರ ರುಬೆಲ್ಲಾ ಲಸಿಕೆ : ಆತಂಕ ಬೇಡ – ಡೀಸಿ ಮನವಿ ಚಾಮರಾಜನಗರ, ಫೆ. 07 - ದೇಶವನ್ನು ದಡಾರ, ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಇಂದಿನಿಂದ ವ್ಯಾಪಕವಾಗಿ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು ಈ ಬಗ್ಗೆ ಅನಗತ್ಯವಾಗಿ ಹರಡುವ ವದಂತಿಗಳಿಗೆ ನಾಗರಿಕರು ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ. ದಡಾರ ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುವ ಸಲುವಾಗಿ ವಿಶೇಷ ಅಭಿಯಾನದ ಮೂಲಕ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎಂಆರ್ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ. ಆದರೆ ಕೆಲವೆಡೆ ಚುಚ್ಚುಮದ್ದು ನೀಡಿದ್ದರಿಂದ ತೊಂದರೆ ಉಂಟಾಗಿದೆ ಎಂಬ ಗಾಳಿಸುದ್ದಿ ಹರಡಲಾಗಿದ್ದು ಈ ಬಗ್ಗೆ ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಲಸಿಕೆ ನೀಡುವುದರಿಂದ ಯಾವುದೇ ತೀವ್ರ ತರಹದ ಅಡ್ಡಪರಿಣಾಮ ಉಂಟಾಗುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ದಡಾರ ರುಬೆಲ್ಲಾ ಲಸಿಕೆಯನ್ನು ಯಾವುದೇ ಹಿಂಜರಿಕೆ ಇಲ್ಲದೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದ್ದಾರೆ. ದಡಾರ ರುಬೆಲ್ಲಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ಚಾಮರಾಜನಗರ, ಫೆ. 07- ದಡಾರ ಮತ್ತು ರುಬೆಲ್ಲಾ ರೋಗ ತಡೆಗೆ ಆರಂಬಿಸಲಾಗಿರುವ ಲಸಿಕಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು. ನಗರದ ಚೆನ್ನೀಪುರದಮೋಳೆಯ ಹೂವಿನೂರಿನ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ದಡಾರ ರುಬೆಲ್ಲಾ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಪಲ್ಸ್ ಪೋಲಿಯೋ ಮಾದರಿಯಲ್ಲಿಯೇ 2020ರೊಳಗೆ ಯಶಸ್ವಿಯಾಗಿ ಅಭಿಯಾನವನ್ನು ಪೂರ್ಣಗೊಳಿಸಬೇಕಿದೆ. 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಚುಚ್ಚುಮದ್ದು ನೀಡುವ ಮೂಲಕ ಪೋಷಕರು ಸಹಕರಿಸಬೇಕು ಎಂದರು. ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ ಅವರು ಎಇಎಫ್‍ಐ ಕಿಟ್ ಬಿಡುಗಡೆ ಮಾಡಿ ಮಾತನಾಡಿ ದಡಾರ ರುಬೆಲ್ಲಾ ಲಸಿಕೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಲಸಿಕೆ ಪಡೆಯುವುದರಿಂದ ಮಕ್ಕಳಿಗೆ ರೋಗದಿಂದ ರಕ್ಷಣೆ ಉಂಟಾಗುತ್ತದೆ. ಹೀಗಾಗಿ ಪೋಷಕರಿಗೆ ಕಾರ್ಯಕ್ರಮದ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು. ಶೇಕಡ 100ರಷ್ಟು ಅಭಿಯಾನ ಯಶಸ್ವಿಯಾಗಲು ಎಲ್ಲರೂ ಪೋಷಕರಿಗೆ ಹಾಗೂ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದರು. ಆರ್ ಸಿ ಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದಡಾರ ರುಬೆಲ್ಲಾ ಲಸಿಕೆಯನ್ನು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ನೀಡುವ ಗುರಿ ಹೊಂದಲಾಗಿದ್ದು ಇದಕ್ಕಾಗಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಅನುಷ್ಠಾನ ಮಾಡುತ್ತಿದ್ದೇವೆ. ಪೋಷಕರಿಗೆ ಮತ್ತು ಮಕ್ಕಳಿಗೆ ಲಸಿಕೆಯಿಂದ ಉಂಟಾಗುವ ಪ್ರಯೋಜನ ತಿಳಿಸಬೇಕು ಹಾಗೂ ಈ ಬಗ್ಗೆ ಅನಗತ್ಯವಾಗಿ ಇರಬಹುದಾದ ಸಂದೇಹಗಳನ್ನು ದೂರ ಮಾಡಬೇಕು ಎಂದರು. ಲಸಿಕೆ ನೀಡುವ ಕಾರ್ಯಕ್ರಮಕ್ಕಾಗಿ ಒಂದು ತಂಡದಲ್ಲಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಲಸಿಕೆ ನೀಡುವುದರಿಂದ ಆರೋಗ್ಯದಲ್ಲಿ ಏನಾದರೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದರೂ ಅದಕ್ಕೆ ತಕ್ಷಣವೇ ಚಿಕಿತ್ಸೆ ನೀಡಲು ಬೇಕಾದ ಎಇಎಫ್‍ಐ ಕಿಟ್ ಲಭ್ಯವಿದೆ. ಹೀಗಾಗಿ ಪೋಷಕರು ಅನಗತ್ಯವಾಗಿ ಆತಂಕಗೊಳ್ಳಬಾರದು ಎಂದು ಡಾ. ವಿಶ್ವೇಶ್ವರಯ್ಯ ಸ್ಪಷ್ಟಪಡಿಸಿದರು. ಜಿಲ್ಲಾ ಸರ್ಜನ್ ಡಾ. ರಘುರಾಂ ಅವರು ವ್ಯಾಕ್ಸಿನ್ ಕಿಟ್ ಬಿಡುಗಡೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಮಹೇಶ್, ಲಯನ್ಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎನ್. ಮಹದೇವ್, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಡಾ. ಶ್ವೇತಾ ಶಶಿಧರ್, ಡಾ. ಶಶಿಧರ್, ಶಾಲೆಯ ಎಸ್‍ಡಿಎಂಸಿ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು, ಇತರರು ಉಪಸ್ಥಿತರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು