Friday, 10 February 2017
10-02-2017 ಕೇಂದ್ರ ಬರ ಅಧ್ಯಯನ ತಂಡದಿಂದ ಜಿಲ್ಲೆಯ ಪರಿಸ್ಥಿತಿ ವೀಕ್ಷಣೆ (ಚಾಮರಾಜನಗರ)
ಕೇಂದ್ರ ಬರ ಅಧ್ಯಯನ ತಂಡದಿಂದ ಜಿಲ್ಲೆಯ ಪರಿಸ್ಥಿತಿ ವೀಕ್ಷಣೆ
ಚಾಮರಾಜನಗರ ಫೆ.10 : ಹಿಂಗಾರು ಅವಧಿಯಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಸಲುವಾಗಿ ನೇಮಕವಾಗಿರುವ ಕೇಂದ್ರ ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್‍ಶ್ರೀವಾಸ್ತವ, ನೀತಿ ಆಯೋಗದ ಸಂಶೋಧನ ಅಧಿಕಾರಿ ಬಿ.ಅನುರಾಧ, ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ವಿ.ಮೋಹನ್ ಮುರುಳಿ ಅವರನ್ನೊಳಗೊಂಡ ತಂಡ ಇಂದು ಕೊಳ್ಳೇಗಾಲದ ಮೂಲಕ ಜಿಲ್ಲೆಯನ್ನು ಪ್ರವೇಶಿಸಿತು.
ಚಾಮರಾಜನಗರ ತಾಲ್ಲೂಕಿನ ಮಂಗಲದಲ್ಲಿ ತೆರೆಯಲಾಗಿರುವ ಗೋಶಾಲೆಗೆ ಭೇಟಿ ನೀಡಿತು. ಅಲ್ಲಿ ಗೋವುಗಳಿಗಾಗಿ ಕಲ್ಪಿಸಿರುವ ಮೇವು, ಕುಡಿಯುವ ನೀರು, ಔಷಧೋಪಚಾರ ಇನ್ನಿತರ ವ್ಯವಸ್ಥೆಯನ್ನು ಪರಿಶೀಲಿಸಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಕೇಂದ್ರ ಬರ ಅಧ್ಯಯನ ತಂಡದವರನ್ನು ಭೇಟಿ ಮಾಡಿ ಅಭಾವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ನಾಗರಿಕರು, ಜಾನುವಾರು ಮಾಲೀಕರು ಜಿಲ್ಲೆಯಲ್ಲಿ ಬರಗಾಲದಿಂದ ಎದುರಿಸುತ್ತಿರುವ ಸಂಕಷ್ಟವನ್ನು ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ತೋಡಿಕೊಂಡರು. ಒಂದು ಸಾವಿರ ಅಡಿ ಆಳ ಕೊಳವೆ ಬಾವಿ ಕೊರೆದರು ನೀರು ಲಭಿಸುತ್ತಿಲ್ಲ. ಅಂರ್ತಜಲ ಮಟ್ಟ ಕುಸಿದಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳನ್ನು ಪೋಷಣೆ ಮಾಡುವುದು ಕಷ್ಟವಾಗಿದೆ. ಇದನ್ನು ಅರಿತು ಜಿಲ್ಲಾಡಳಿತ ಗೋಶಾಲೆ ತೆರೆದಿರುವುದು ನಮಗೆ ಅನುಕೂಲವಾಗಿದೆ. ಇನ್ನೂ ಸೌಲಭ್ಯಗಳನ್ನು ಹೆಚ್ಚಿಸಿ ನೆರವಾಗಬೇಕೆಂದು ಮನವಿ ಮಾಡಿದರು.
ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ಆಗಮಿಸಿ ಬರ ನಿರ್ವಹಣೆ ಸಂಬಂಧ ಜಿಲ್ಲೆಯ ಅಧಿಕಾರಿಗಳೊಂದಿಗೆ ಅಧ್ಯಯನ ತಂಡ ಸಭೆ ನಡೆಸಿತು. ಜಿಲ್ಲಾಧಿಕಾರಿ ಬಿ.ರಾಮು ಅವರು ಹಿಂಗಾರು ಅವಧಿಯಲ್ಲಿ ಆಗಿರುವ ಮಳೆ ಪ್ರಮಾಣ, ಬೆಳೆ ನಷ್ಟ, ಕುಡಿಯುವ ನೀರು, ಮೇವು, ಬೆಳೆ ಪರಿಹಾರ ಸಂಬಂಧ ಮಾಹಿತಿಯನ್ನು ಪವರ್‍ಪಾಯಿಂಟ್ ಮೂಲಕ ವಿವರವಾಗಿ ಒದಗಿಸಿದರು. ಕೇಂದ್ರ ಬರ ಅಧ್ಯಯನ ತಂಡವು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರತಿ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಿತು.
ತದನಂತರ ತಾಲ್ಲೂಕಿನ ಉತ್ತುವಳ್ಳಿಗೆ ತೆರಳಿದ ಬರ ಅಧ್ಯಯನ ತಂಡಕ್ಕೆ ಅಲ್ಲಿನ ಗ್ರಾಮಸ್ಥರು ಕುಡಿಯುವ ನೀರಿನ ಬವಣೆ ಕುರಿತು ವಿವರಿಸಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ಸರತಿಸಾಲಿನಲ್ಲಿ ನಿಂತು ನೀರು ಹಿಡಿಯುತ್ತಿದ್ದ ಮಹಿಳೆಯರು ಹಾಗೂ ಇತರರನ್ನು ಕಂಡು ಮನವಿಯನ್ನು ಅಧಿಕಾರಿಗಳು ಆಲಿಸಿದರು. ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ. ತಾತ್ಕಾಲಿಕವಾಗಿ ಪರಿಹಾರ ನೀಡಿದರಷ್ಟೆ ಸಾಲದು. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಬೆಳೆ ಪರಿಹಾರ ಶೀಘ್ರವೇ ಕೈಸೇರುವಂತೆ ಮಾಡಿದ್ದಲ್ಲಿ ಅನುಕೂಲವಾಗುತ್ತದೆಂದು ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಮನವಿ ಮಾಡಿದರು.
ಬಳಿಕ ಕಟ್ನಾವಾಡಿಗೆ ತೆರಳಿ ಅಲ್ಲಿ ಒಣಗಿರುವ ಬೆಳೆಯನ್ನು ಅಧ್ಯಯನ ತಂಡ ವೀಕ್ಷಿಸಿತು. ಅಲ್ಲಿಯೂ ಸ್ಥಳೀಯ ಗ್ರಾಮಸ್ಥರು ಬೆಳೆ ನಷ್ಟ, ಪರಿಹಾರ ಇನ್ನಿತರ ಸಂಬಂಧ ತಂಡದ ಅಧಿಕಾರಿಗಳಿಗೆ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥರಾದ ಜಲಜ್‍ಶ್ರೀವಾಸ್ತವ ಅವರು ಇಂದಿನಿಂದ ಮೂರು ದಿನಗಳ ಕಾಲ ಮೂರು ತಂಡವು ರಾಜ್ಯದಲ್ಲಿ ಬರ ಅಧ್ಯಯನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಮೂವರು ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಅಭಾವ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ವಾಸ್ತವ ಪರಿಸ್ಥಿತಿಯನ್ನು ತಿಳಿಯುತ್ತಿದ್ದೇವೆ. ಅನೇಕ ಮಂದಿ ಇಲ್ಲಿನ ಪ್ರಸ್ತುತ ಎದುರುಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಬೇರೆ ಜಿಲ್ಲೆಗಳಿಗೂ ತೆರಳಿ ಮೂರು ದಿನಗಳ ಬಳಿಕ ದೆಹಲಿ ತಲುಪಲಿದ್ದೇವೆ. ಅಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲಿದ್ದೇವೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಉಪವಿಭಾಗಾಧಿಕಾರಿ ನಳಿನ್ ಅತುಲ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಡಾ.ಬಾಲಸುಂದರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ದೇವರಾಜು ಇನ್ನಿತರ ಅಧಿಕಾರಿಗಳು ಹಾಜರಿದ್ದರು.
------------------------------------------------------------------------------------------------------
ದ್ವಿದಸ, ಆಹಾರ ನಾಗರಿಕ ಸರಬರಾಜು ನಿಗಮದ ಕಿರಿಯ ಸಹಾಯಕ ಹುದ್ದೆಯ ಸ್ಪಧಾತ್ಮಕ ಪರೀಕ್ಷೆ : ನಿಷೇದಾಜ್ಞೆ ಜಾರಿ
ಚಾಮರಾಜನಗರ, ಫೆ. 10 :- ಕರ್ನಾಟಕ ಲೋಕಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ಹಾಗೂ ಆಹಾರ ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ 17 ಉಪ ಪರೀಕ್ಷಾ ಕೇಂದ್ರದಲ್ಲಿ ಹಾಗೂ ಕೊಳ್ಳೇಗಾಲ ಟೌನ್ ವ್ಯಾಪ್ತಿಯಲ್ಲಿ 3 ಒಟ್ಟು 20 ಉಪಪರೀಕ್ಷಾ ಕೇಂದ್ರಗಳಲ್ಲಿ ಫೆಬ್ರವರಿ 11 ಹಾಗೂ 12ರಂದು ನಡೆಸಲಿದ್ದು ಈ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಪವಿತ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಹಾಗೂ ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯಲೆಂಬ ಸದುದ್ದೇಶದಿಂದ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಫೆಬ್ರವರಿ 11 ಹಾಗೂ 12ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ನಿಷೇಧಿತ ಸ್ಥಳವೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ನಿಷೇದಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.
-------------------------------------------------------------------------------------------------
ಫೆ. 11ರಂದು ಚಂದಕವಾಡಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ
ಚಾಮರಾಜನಗರ, ಫೆ. 10 :- ಚಾಮರಾಜನಗರ ತಾಲೂಕು ಚಂದಕವಾಡಿ ಹೋಬಳಿ ಉಪತಹಸೀಲ್ದಾರ್ ಅವರ ಕಾರ್ಯಾಲಯ ನಾಡ ಕಚೇರಿ ಎದುರು ಆವರಣದಲ್ಲಿ ಶಾಸಕರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 11ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಾಗುವುದು.
ಸಾರ್ವಜನಿಕರು ಮೇವು ಬ್ಯಾಂಕ್‍ನ್ನು ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------------------------------------------------------------------------
ಫೆ. 12ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 10 - ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಫೆಬ್ರವರಿ 12ರಂದು ಜಿಲ್ಲೆಗೆ ಭೇಟಿ ನೀಡುವರು.
ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ, ಅಲ್ಲಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮದ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರೆಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ.
ಫೆ. 12ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 10 ):- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮದ್ಯಾಹ್ನ 3 ಗಂಟೆಗೆ ನಗರದಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಭಾಗವಹಿಸುವವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------------------------------------------------------
ಫೆ. 12ರಂದು ವಸತಿ ಖಾತೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 10- ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಕೃಷ್ಣಪ್ಪ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------------------------------------------------
ಫೆ. 13ರಂದು ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ
ಚಾಮರಾಜನಗರ, ಫೆ. 10- ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಎಪಿಎಂಸಿ ಕಾರ್ಯಾಲಯದ ಆವರಣದಲ್ಲಿ ಶಾಸಕರಾದ ಜಯಣ್ಣ ಅವರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಸಾರ್ವಜನಿಕರು ಮೇವು ಬ್ಯಾಂಕ್ ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment