Wednesday, 1 February 2017
FLASHING NEWS ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆಗೆ ಭಂಗ:ಆರೋಪಿಗಳ ಬಂದನ
ಎಸ್.ವೀರಭಧ್ರಸ್ವಾಮಿ
ಚಾಮರಾಜನಗರ ಜಿಲ್ಲೆ,-ದಿನಾಂಕ:13-01-2017 ರಂದು ಕೊಳ್ಳೇಗಾಲ ಪಟ್ಟಣದ ಕಾವೇರಿ ರಸ್ತೆಯಲ್ಲಿ ಭೀಮನಗರದ ಕಮಾನುಗೇಟು ಮುಖ್ಯದ್ವಾರದಲ್ಲಿ ಯಾರೋ ದುಷ್ಕರ್ಮಿಗಳು ಕಮಾನುಗೇಟಿನ ಎರಡು ಕಡೆ ಇರುವ ಹುಕ್‍ಗಳಿಗೆ ಎರಡೆರಡು ಚಪ್ಪಲಿಗಳನ್ನು ಜೋಡಿಸಿ ನೇತು ಹಾಕಿರುವುದು ಕಂಡುಬಂದಿದ್ದು, ರಾಷ್ಟ್ರನಾಯಕರಾದ ಡಾ. ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರವಿರುವ ಹೆಬ್ಬಾಗಿಲಿಗೆ ಚಪ್ಪಲಿಗಳನ್ನು ಹಾಕಿ ಅವಮಾನ ಮಾಡಿರುತ್ತಾರೆ. ಸದರಿ ಪ್ರಕರಣವನ್ನು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ಮೊ.ನಂ.09/2017 ಕಲಂ:295 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಈ ವಿಚಾರವಾಗಿ ಕೆಲವು ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿರುತ್ತಾರೆ.
ರಾಷ್ಟ್ರನಾಯಕರಿಗೆ ಆದ ಅಗೌರವದ ಪ್ರಕರಣವನ್ನು ಪೊಲೀಸ್ ಇಲಾಖೆಯು ಅತೀ ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಭೇದಿಸಲು ಕೊಳ್ಳೇಗಾಲ ಉಪ-ವಿಭಾಗದ 03 ತಂಡಗಳನ್ನು ಡಿವೈ.ಎಸ್.ಪಿ. ಕೊಳ್ಳೇಗಾಲದ ನೇತೃತ್ವದಲ್ಲಿ ಈ ಕೆಳಕಂಡಂತೆ ರಚಿಸಲಾಗಿತ್ತು.
(1) ಶ್ರೀ ಅಮರನಾರಾಯಣ, ಸಿಪಿಐ, ಕೊಳ್ಳೇಗಾಲ ವೃತ್ತ ಮತ್ತು ಸಿಬ್ಬಂದಿಗಳಾದ ವಿರೇಂದ್ರ, ಚಿನ್ನಪ್ಪ, ಸುರೇಶ್‍ಬಾಬು, ಸತ್ಯನಾರಾಯಣರಾಜೇ ಅರಸು, ಮಹದೇವ ಪ್ರಸಾದ್, ಅನಿಲ್‍ಕುಮಾರ್, ನೂರ್ ಫರೀಜ್.
(2) ಶ್ರೀ ಎಂ. ನಾಯಕ್, ಪಿ.ಎಸ್.ಐ., ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಉಮೇಶ, ರಘು, ಜಡೇಸ್ವಾಮಿ. ಶ್ರೀನಿವಾಸ, ನಾಗರಾಜು, ಜಯಪ್ಪÀ.
(3) ಶ್ರೀ ಮಂಜು ಪಿ.ಎಸ್.ಐ., ಯಳಂದೂರು ಪೊಲೀಸ್ ಠಾಣೆ ಮತ್ತು ಶ್ರೀ ವನರಾಜು ಪಿಎಸ್‍ಐ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಗಳಾದ ಗೋವಿಂದ ನಾಗೇಶ, ರವಿ, ರಾಮಚಂದ್ರ, ಸೂರ್ಯಪ್ರಕಾಶ್, ಮಹಿಳಾ ಮುಖ್ಯಪೇದೆ ವಸಂತ ರÀವರುಗಳನ್ನು ಒಳಗೊಂಡ ತಂಡವನ್ನು ರಚಿಸಿ ಪ್ರಕರಣವನ್ನು ಭೇದಿಸಲು ಮಾರ್ಗದರ್ಶನವನ್ನು ನೀಡಲಾಯಿತು.
ತನಿಖಾತಂಡಕ್ಕೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಅನುಮಾನಿತ ವ್ಯಕ್ತಿ “ಸ್ಟಾಲೀನ್”ನÀನ್ನು ದಿನಾಂಕ: 01-02-2017 ರಂದು ಬೆಳಗಿನ ಜಾವ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ವಿಚಾರಣೆ ವೇಳೆಯಲ್ಲಿ ಈ ಕೆಳಕಂಡವರ ಜೊತೆ ಸೇರಿ ಕೃತ್ಯ ಎಸಗಿರುವ ಬಗ್ಗೆ ತಿಳಿಸಿರುತ್ತಾನೆ.
1. ಸ್ಟಾಲೀನ್ ಬಿನ್ ಸ್ಯಾಮುಯಲ್, ಸುಮಾರು 27 ವರ್ಷ, ಪರಿಶಿಷ್ಟಜನಾಂಗ ಪೇಂಟಿಂಗ್ ಕೆಲಸ, ಮನೆ ನಂ 04/21, ಕಲ್ಲುಬಾವಿ ಬೀದಿ, ಭೀಮನಗರ, ಹಾಲಿ ವಾಸ: ಆಶ್ರಯ ಬಡಾವಣೆ, ಕೊಳ್ಳೇಗಾಲ ಟೌನ್.
2. ಶರತ್‍ಕುಮಾರ್ @ ಶರತ್ ಬಿನ್ ಬಸವರಾಜು, 21 ವರ್ಷ, ಕೂಲಿಕೆಲಸ, ಪನ್ನಾಬೀದಿ, ಭೀಮನಗರ, ಕೊಳ್ಳೇಗಾಲ ಟೌನ್.
3. ಶಿವಸ್ವಾಮಿ @ ಶಿವು ಬಿನ್ ಶಿವಮೂರ್ತಿ, 22 ವರ್ಷ, ಪರಿಶಿಷ್ಟ ಜನಾಂಗ, ಆಟೋ ಚಾಲಕ, # 4/7ಸಿ ಕಲ್ಲುಭಾವಿ ಬೀದಿ, ಭೀಮನಗರ, ಕೊಳ್ಳೇಗಾಲ ಟೌನ್.
4. (ಆರೋಪಿ 04 ರವರು ತಲೆ ಮರೆಸಿಕೊಂಡಿರುತ್ತಾನೆ)
5. ಅನಿಲ್ ಕುಮಾರ್ @ ಅನಿಲ ಬಿನ್ ಲೇಟ್ ಲಿಂಗರಾಜು, ಸುಮಾರು 21 ವರ್ಷ, ಪರಿಶಿಷ್ಟಜಾತಿ, ಆಟೋಚಾಲಕ. ಹಾಲಿ ವಾಸ ¨ಸ್ತೀಪುರ ರಸ್ತೆ, ಕೊಳ್ಳೇಗಾಲ ಟೌನ್. ಸ್ವಂತಊರು ಲಕ್ಕರಸನಪಾಳ್ಯ ಕೊಳ್ಳೇಗಾಲ ಟೌನ್
6. ನವೀನ @ ಪಿಂಕಾ ಬಿನ್ ದೊಡ್ಡಲಿಂಗಯ್ಯ 29 ವರ್ಷ, ಪರಿಶಿಷ್ಟ ಜನಾಂಗ, ಡ್ರೈವರ್ ಕೆಲಸ, #4/26 ಕಲ್ಲುಬಾವಿ ಬೀದಿ, ಭೀಮನಗರ, ಕೊಳ್ಳೇಗಾಲ ಟೌನ್.
ಮೇಲ್ಕಂಡವರುಗಳು ಸದರಿ ಕೃತ್ಯವನ್ನು ಎಸಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿಸಿದ್ದು ಆರೋಪಿ ಸ್ಟಾಲೀನ್‍ನ ಮಾಹಿತಿಯ ಮೇರೆಗೆ ಈ ಮೇಲ್ಕಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಾವು ಮಾಡಿರುವ ದುಶ್ಕøತ್ಯದ ಬಗ್ಗೆ ಒಪ್ಪಿಕೊಂಡಿರುತ್ತಾರೆ.
ಸದರಿ ಆರೊಪಿಗಳು ಅನ್ಯ ಗುಂಪಿನೊಂದಿಗೆ ಗಲಭೆ ಎಬ್ಬಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ಈ ಮೂಲಕ ತಮ್ಮ ಗುಂಪಿನ ಪ್ರಾಬಲ್ಯವನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.
ಸದರಿ ಪ್ರಕರಣವು ಅತೀ ಸೂಕ್ಷ್ಮ ಪ್ರಕರಣವಾಗಿದ್ದರಿಂದ ಸದರಿ ಪ್ರಕರಣವನ್ನು ಭೇದಿಸಿದ ತಂಡಗಳಿಗೆ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸೈಬರ್ ಸೆಲ್‍ನ ಸಿಬ್ಬಂದಿಗಳಾದ ಶ್ರೀ ವೆಂಕಟೇಶ್, ಸಿಹೆಚ್‍ಸಿ, ಶ್ರೀ ಎಲ್. ಮಹೇಶ್, ಎಪಿಸಿ ರವರುಗಳನ್ನು ಇಲಾಖೆಯ ವತಿಯಿಂದ ಪ್ರಶಂಸಿಸಲಾಗಿದೆ.
(ಕುಲ್‍ದೀಪ್ ಕುಮಾರ್ ಆರ್. ಜೈನ್, ಐಪಿಎಸ್.,)
ಪೊಲೀಸ್ ಅಧೀಕ್ಷಕರು,
ಚಾಮರಾಜನಗರ ಜಿಲ್ಲೆ.
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment