Saturday, 4 February 2017

27 ರಂದು ಕರ್ನಾಟಕ ಬಂದ್

27 ರಂದು ಕರ್ನಾಟಕ ಬಂದ್ ಚಾಮರಾಜನಗರ, ಫೆ.04 :- ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಬೇಕು ಹಾಗೂ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಮೇವು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಹರದನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆ ಸತ್ಯಾಗ್ರಹ ಮಾಡುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರವರನ್ನು ಪೊಲೀಸರು ಬಂಧಿಸಿದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ವಾಟಾಳ್‍ನಾಗರಾಜ್‍ರವರು ತಮ್ಮ ಬೆಂಬಲಿಗರೊಂದಿಗೆ ತೆರೆದ ವಾಹನಗಳಲ್ಲಿ ಮೆರವಣಿಗೆ ಪ್ರಾರಂಭಿಸಿ ಮೆರವಣಿಗೆಯು ತ್ಯಾಗರಾಜ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ಲಾರಿ ನಿಲ್ದಾಣದ ರಸ್ತೆ, ಸುಲ್ತಾನ್ ಷರೀಫ್ ವೃತ್ತ, ಸತ್ಯಮಂಗಲ ರಸ್ತೆ, ಮಾರ್ಗವಾಗಿ ಹರದನಹಳ್ಳಿ ತಲುಪಿ. ಹರದನಹಳ್ಳಿಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 209 ತಡೆದು ಸತ್ಯಾಗ್ರಹ ಮಾಡಿದರು. ಇದರಿಂದ ವಾಹನ ಸಂಚಾರ ಅಸ್ತ-ವ್ಯಸ್ತ ಉಂಟಾದ ಕಾರಣ ವಾಟಾಳ್‍ನಾಗರಾಜ್‍ರವರನ್ನು ಹಾಗೂ ಪ್ರತಿಭಟಿಸುತ್ತಿದ್ದ ಮುಖಂಡರನ್ನು ಪೊಲೀಸರು ಬಂಧಿಸಿ ಚಾಮರಾಜನಗರಕ್ಕೆ ಕರೆತಂದು ನಂತರ ಬಿಡುಗಡೆಗೊಳಿಸಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್‍ನಾಗರಾಜ್ ಜಿಲ್ಲೆಯ ಹಾಗೂ ತಾಲ್ಲೂಕಿನ ಕೆರೆಗಳಲ್ಲಿ ನೀರಿಲ್ಲದೆ. ಕೊಳವೆ ಬಾವಿಗಳಲ್ಲಿ ಅಂತರ ಜಲ ಕುಸಿದಿದ್ದು ಮಹಿಳೆಯರು ನೀರಿಗಾಗಿ ಪರಿತಪಿಸುತ್ತಾ ಕಣ್ಣೀರಿಡುತ್ತಿದ್ದಾರೆ ಸುಮಾರು 2-3 ಕಿ.ಮೀ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಬಂದೊದಗದೆ ಆದ್ದರಿಂದ, ಕೊತ್ತಲವಾಡಿ ಕೆರೆ, ಸುವರ್ಣನಗರಕೆರೆ, ಅರಕಲವಾಡಿಕೆರೆ, ಎಣ್ಣೆಹೊಳೆಕೆರೆ, ಬಂಡಿಗೆರೆ, ಮರಗದಕೆರೆ. ನಗರದಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಸಿಂಡನಕೆರೆ, ಕೋಡಿಮೋಳೆಕೆರೆ, ದೊಡ್ಡರಾಯಪೇಟೆಕೆರೆ, ಮಾಲಗೆರೆ ಸೇರಿದಂತೆ ತಾಲ್ಲೂಕಿನ ಇನ್ನಿತರ ಕೆರೆಗಳಿಗೆ ನೀರು ತುಂಬಿಸಬೇಕು 15 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ತಿಂಗಳು ಮಾರ್ಚ್- 1 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು. ಪ್ರತಿ ಹಳ್ಳಿಗಳಿಂದ ರೈತರು, ಬಡವರು ಕೂಲಿಗಾಗಿ ಹೊರ ರಾಜ್ಯಕ್ಕೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ತಾಂಡÀವಾಡುತ್ತಿದೆ ಕೂಡಲೆ ಬರ ಪರಿಹಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಅಲ್ಲದೆ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ರಾಜ್ಯ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಇದೇ 27 ರಂದು ಕರ್ನಾಟಕ ಬಂದ್‍ಗೆ ಕರೆನೀಡಿದ್ದೇನೆ ಎಂದು ವಾಟಾಳ್ ತಿಳಿಸಿದರು. ಚಾಮರಾಜನಗರ ಧೂಳಿನ ನಗರವಾಗಿದೆ ಅಂಗಡಿಬೀದಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿ ಧೂಳಿನಿಂದ ಕೂಡಿದೆ. ಕೂಡಲೇ ಧೂಳು ಮುಕ್ತ ನಗರ ಮತ್ತು ಬೀದಿಯನ್ನಾಗಿ ಮಾಡಬೇಕು ಎಂದು ವಾಟಾಳ್‍ನಾಗರಾಜ್ ತಿಳಿಸಿದರು.

1 comment:

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು