Friday, 3 February 2017

ಚಾಮರಾಜನಗರ ಜಿಲ್ಲಾ ಪೊಲೀಸ್ ಪ್ರಕಟಣೆ

ಚಾಮರಾಜನಗರ ಜಿಲ್ಲಾ ಪೊಲೀಸ್ ಪ್ರಕಟಣೆ ದಿನಾಂಕ : 13-01-2017 ರಂದು ಚಾಮರಾಜನಗರ ಜಿಲ್ಲೆಯ, ಕೊಳ್ಳೇಗಾಲ ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಭಾವ ಚಿತ್ರವಿರುವ ಕಮಾನಿಗೆ ಕಿಡಿಗೇಡಿಗಳು ಚಪ್ಪಲಿಗಳನ್ನು ಕಟ್ಟಿದ್ದು, ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣಾ ಮೊಕದ್ದಮೆ ಸಂಖ್ಯೆ: 09/2017, ಕಲಂ 295 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಪೊಲೀಸ್ ಇಲಾಖೆಯು ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವ ವಿಷಯವು ತಮಗೆಲ್ಲರಿಗೂ ತಿಳಿದಿರುತ್ತದೆ. ಮಾನ್ಯ ಬಾಬಾಸಾಹೇಬ್ ಡಾ||ಬಿ.ಆರ್ ಅಂಬೇಡ್ಕರ್ ರವರಂತಹ ಮಹಾನ್ ಚೇತನವನ್ನು ಪದೇ ಪದೇ ಸಮಾಜಘಾತುಕ ಶಕ್ತಿಗಳು ದುರುಪಯೋಗ ಪಡಿಸಿಕೊಂಡು, ತಮ್ಮ ಸ್ವಾರ್ಥ ಈಡೇರಿಕೆಗೆ ಬಳಸಿಕೊಳ್ಳುತ್ತಿರುವುದು ಅಪಾರವಾದ ನೋವುಂಟು ಮಾಡಿರುತ್ತದೆ. ಮೇಲ್ಕಂಡ ಅಹಿತಕರ ಘಟನೆಗೆ ಮೂಲ ಕಾರಣ, ಸಮಾಜದ ಹಾಗೂ ಬೇರೆ ಬೇರೆ ಕೋಮುಗಳ ನಡುವೆ ಶಾಂತಿಯನ್ನು ಕದಡಿ, ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವುದಾಗಿರುತ್ತದೆ. ಒಂದು ವೇಳೆ ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿದ್ದಲ್ಲಿ, ಸಮಾಜಘಾತುಕ ಶಕ್ತಿಗಳು ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳುವಲ್ಲಿ ಸಫಲವಾಗುತ್ತಿದ್ದವು. ಆದರೆ ಈ ಸಂಬಂಧ ಜಿಲ್ಲೆಯ ಮಾದ್ಯಮಗಳು, ವಿವಿಧ ರಾಜಕೀಯ ಪಕ್ಷಗಳು, ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಯಾವುದೇ ಪ್ರಚೋದಿತವಾದ ಗಾಳಿಸುದ್ದಿಗೆ ಕಿವಿಗೊಡದೆ, ಭಾವೋದ್ವೇಗಗೊಳ್ಳದೆ, ಶಾಂತರೀತಿಯಿಂದ ವರ್ತಿಸಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನೀಡಿದ ಎಲ್ಲಾ ಮನವಿ ಹಾಗೂ ಆದೇಶಗಳಿಗೂ ಸಹಕರಿಸಿ, ನಿಜವಾದ ಅಪರಾಧಿಗಳ ಪತ್ತೆಗೆ ಅನುವು ಮಾಡಿಕೊಟ್ಟ ನಡೆ ಇಡೀ ರಾಷ್ಟ್ರಕ್ಕೆ ಅನುಕರಣೀಯ ಮತ್ತು ಆದರ್ಶಪ್ರಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಎಲ್ಲರಿಗೂ ಆಬಾರಿಯಾಗಿರುತ್ತವೆ. ಇದೇ ರೀತಿಯಲ್ಲಿ ಮುಂದೆಯೂ ಸಹ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಸಾರ್ವಜನಿಕ ಶಾಂತಿಯನ್ನು ಕಾಪಾಡಲು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಮ್ರವಾಗಿ ಪ್ರಾರ್ಥಿಸುತ್ತೇನೆ. (ಕುಲ್‍ದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್) ಪೊಲೀಸ್ ಅಧೀಕ್ಷಕರು, ಚಾಮರಾಜನಗರ ಜಿಲ್ಲೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು