Friday, 3 February 2017

04-02-2017 ಚಾಮರಾಜನಗರ. ಲೋಕಸಭಾ ಸದಸ್ಯರ ಕಾರ್ಯಾಲಯ, ಚಾಮರಾಜನಗರ ಕ್ಷೇತ್ರ,

ಲೋಕಸಭಾ ಸದಸ್ಯರ ಕಾರ್ಯಾಲಯ, ಚಾಮರಾಜನಗರ ಕ್ಷೇತ್ರ, ಚಾಮರಾಜನಗರ. ವಿಷಯ: ಚಾಮರಾಜನಗರ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರು/ಮಕ್ಕಳಿಗೆ ಒಂದೇ ಸೂರಿನಡಿ ವ್ಯದ್ಯಕೀಯ ಚಿಕಿತ್ಸೆ/ಪೋಲೀಸು ನೆರವು, ಕಾನೂನು ಸಲಹೆ ಮತ್ತು ಆಪ್ತ ಸಮಾಲೋಚನೆ ನೀಡಲು “ಒನ್ ಸ್ಟಾಪ್ ಸೆಂಟರ್” (ಸಖಿ) ಯೋಜನೆ ಮಂಜೂರಾಗಿರುವ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಬಗ್ಗೆ. ನನ್ನ ಪ್ರಾಮಾಣಿಕ ಪ್ರಯತ್ನದಿಂದ (ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಒತ್ತಾಯಪೂರ್ವಕವಾಗಿ ಮನವಿ ಮಾಡಿಕೊಂಡು ಒತ್ತಡ ತಂದ ಮೇರೆಗೆ) ಸಂಕಷ್ಟದಲ್ಲಿರುವ ಮಹಿಳೆಯರು/ಮಕ್ಕಳಿಗೆ ಒಂದೇ ಸೂರಿನಡಿ ವ್ಯದ್ಯಕೀಯ ಚಿಕಿತ್ಸೆ/ಪೋಲೀಸು ನೆರವು, ಕಾನೂನು ಸಲಹೆ ಮತ್ತು ಆಪ್ತ ಸಮಾಲೋಚನೆ ನೀಡಲು “ಒನ್ ಸ್ಟಾಪ್ ಸೆಂಟರ್” (ಸಖಿ) ಯೋಜನೆ ಮಂಜೂರಾಗಿರುತ್ತದೆ ಎಂದು ತಮ್ಮ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ. 1)ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಸಲುವಾಗಿ ನಿರ್ಭಯ ಕೇಂದ್ರಗಳನ್ನು ತೆರೆಯುವ ಬಗ್ಗೆ ಮಾನ್ಯ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಶ್ರೀಮತಿ ಮೇನಕಾ ಗಾಂಧಿಯವರು ನನಗೆ ದಿ: 26-6-2014ರಲ್ಲಿ ಪತ್ರ ಬರೆದು, ಈ ಕೇಂದ್ರ ಸ್ಥಾಪನೆಗೆ 300 ಚದರ ಅಡಿ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳಲು ಮತ್ತು ರಾಷ್ಟ್ರದಲ್ಲಿ ಪ್ರಥಮ ಹಂತದಲ್ಲಿ ಆಸಕ್ತಿ ಇರುವ 50 ಕೇಂದ್ರಗಳಿಗೆ ಮಾತ್ರ ಅನುಮೋದನೆ ನೀಡಲಾಗುತ್ತದೆ ಎಂದು ತಿಳಿಸಿರುತ್ತಾರೆ. 2) ಮೇಲ್ಕಂಡ ಪತ್ರಕ್ಕೆ ನಾನು ದಿನಾಂಕ: 20-7-2014ರಂದು ಮಾನ್ಯ ಸಚಿವರಿಗೆ ಪತ್ರ ಬರೆದು, ಈ ಕೇಂದ್ರ ಸ್ಥಾಪನೆಗೆ ನಾನು ಶ್ರಮವಹಿಸಿ ಅಗತ್ಯ ಭೂಮಿಯನ್ನು ಮಂಜೂರು ಮಾಡಿಸುವ ಪ್ರಯತ್ನದಲ್ಲಿ ಇರುವುದರಿಂದ ತಾವುಗಳು ರಾಷ್ಟ್ರದಲ್ಲಿ ಮೊದಲನೇ ಹಂತದಲ್ಲಿ ಮಂಜೂರು ಮಾಡುವ 50 ಕೇಂದ್ರಗಳ ಪೈಕಿ ಚಾಮರಾಜನಗರ ಜಿಲ್ಲೆಯನ್ನೂ ಸಹಾ ಆಧ್ಯತೆ ಮೇಲೆ ಸೇರ್ಪಡೆ ಮಾಡಿಕೊಂಡು ಮಂಜೂರಾತಿ ನೀಡಲು ಕೋರಿಕೊಂಡೆನು. --- - 3) ಇದರ ಜೊತೆಗೆ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ದಿನಂಕ: 6-8-2014 ಮತ್ತು 2-12-2014ರಂದು ಪತ್ರವನ್ನು ಬರೆದು, ಅಗತ್ಯ ಭೂಮಿಯನ್ನು ಮಂಜೂರು ಮಾಡುವಂತೆ ಒತ್ತಡ ತಂದಿರುತ್ತೇನೆ. 4) ಇದರ ಫಲವಾಗಿ ಚಾಮರಾಜನಗರದ ಜಿಲ್ಲಾಧಿಕಾರಿಗಳು ದಿ: 8-12-2014ರ ಆದೇಶದಲ್ಲಿ ಚಾಮರಾಜನಗರ ಕಸಬಾ ಹೋ: ಸರ್ವೆ ನಂ.329ರ ಪೂರ್ವ ಭಾಗದಲ್ಲಿ 0.04 ಗುಂಟೆ ಜಮೀನನ್ನು “ನಿರ್ಭಯ ಕೇಂದ್ರ” ಸ್ಥಾಪನೆಗೆ ಮಂಜೂರು ಮಾಡಿರುತ್ತಾರೆ. 5) ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ “ನಿರ್ಭಯ ಕೇಂದ್ರ”ವನ್ನು ಸ್ಥಾಪನೆ ಮಾಡಲು ಸಂಸತ್ ಅಧಿವೇಶನದಲ್ಲಿ ಮ್ಯಾಟರ್ ಅಂಡರ್ ರೂಲ್ 377 ಅಡಿ ಸದನವನ್ನು ಒತ್ತಾಯಿಸಿರುತ್ತೇನೆ. 6) ಮಾನ್ಯ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಶ್ರೀಮತಿ ಮೇನಕಾ ಗಾಂಧಿಯವರು ದಿ: 29-12-2015ರಂದು ನನಗೆ ಪತ್ರವನ್ನು ಬರೆದು, ಈ ಕೇಂದ್ರಗಳ ಸ್ಥಾಪನೆಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯರ್ದಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿರುತ್ತಾರೆ. 7)ಚಾಮರಾಜನಗರದ ಜಿಲ್ಲಾಧಿಕಾರಿಗಳ ಮೂಲಕ ಇಲಾಖಾ ನಿರ್ದೇಶಕರಿಗೆ ದಿ: 21-7-2016ರಂದು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. 8) ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಮಂತ್ರಾಲಯಕ್ಕೆ ಶಿಫಾರಸ್ಸಿನೊಂದಿಗೆ ಕಳುಹಿಸಿಕೊಡಲು ನಾನು ದಿ: 8-8-2016ರಂದು ಇಲಾಖಾ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿರುತ್ತೇನೆ. 9) ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ಮಂಜೂರಾತಿ ಪಡೆಯಲು ನವದೆಹಲಿಯಲ್ಲಿ ಖುದ್ದಾಗಿ ಮನವಿ ಮಾಡಿಕೊಂಡಿರುತ್ತೇನೆ. 10) ಇದರ ಫಲವಾಗಿ ದಿ: 1-2-2017ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕರು ಜಿಲ್ಲೆಯಲ್ಲಿ “ಒನ್ ಸ್ಟಾಫ ಸೆಂಟರ್” (ಸಖಿ) ಮಂಜೂರಾಗಿರುವ ಬಗ್ಗೆ ತಿಳಿಸಿರುತ್ತಾರೆ. ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ, ಸಹಿ/- (ಆರ್.ಧ್ರುವನಾರಾಯಣ)

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು