

ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ: -ಸಿ.ಎಸ್.ಹೊನ್ನೇಗೌಡ
ಕೊಳ್ಳೇಗಾಲ:- 10 (ಚಾಮರಾಜನಗರ ಜಿಲ್ಲೆ) –ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ ಎಂಧು ಗುಂಡ್ಲುಪೇಟೆ ಜೆಎಸ್‍ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಿ.ಎಸ್.ಹೊನ್ನೇಗೌಡ -ಸಿ.ಎಸ್.ಹೊನ್ನೇಗೌಡ ಅವರು ಹೇಳಿದರು
ಅವರು ಕೊಳ್ಳೇಗಾಲ ಜೆಎಸ್‍ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಥನಾಡಿದರು
ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಅ ಗುರಿಯನ್ನು ನೀವು ಮುಟ್ಟಬೇಕು. ಮುಂದಿನ ದಿನಗಳಲ್ಲಿ ನೀವು ಏನಾಗಬೇಕು ಎಂಬುದನ್ನು ನೀವು ಈಗಾಗಲೇ ನಿರ್ಧರಿಸಿ ಮುನ್ನಡೆಯಿರಿ. ನಿಮ್ಮ ಬದುಕಿಗೆ ಭದ್ರವಾದ ಬುನಾದಿ ಹಾಕಿರಿ. ನಿಮ್ಮ ಕನಸು ನನಸಾಗಬೇಕಾದರೇ ನೀವು ಶ್ರಮ ಪಟ್ಟರೆ ಮಾತ್ರ ಸಾಧ್ಯ. ಶ್ರಮಪಟ್ಟು ಸತತವಾಗಿ ಅಧ್ಯಯನ ಮಾಡಿದರೆ ಏನಾದರೂ ಸಾಧಿಸಬಹುದೆಂದರು.
ವಿದ್ಯಾರ್ಥಿಗಳಿಗೆ ಯೋಜನೆ, ಅಭ್ಯಾಸ, ಪರಿಪೂರ್ಣತೆ ಅತ್ಯಂತ ಮುಖ್ಯ ಅದು ಇದ್ದಾಗ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಸಮಾಜದಲ್ಲಿ ತಂದೆ-ತಾಯಿ ನಿಮ್ಮ ಗುರುಗಳಿಗೆ ಹೆಸರು ತರುವಂತಹ ಕೆಲಸ ಮಾಡಿ. ಭವ್ಯ ಭಾರತವನ್ನು ಕಟ್ಟುವ ಹಾಗೂ ಕನಸನ್ನು ನನಸಾಗಿಸುವ ಸಮುದಾಯ ನೀವಾಗಿದ್ದೀರಿ. ಬುದಕಿನಲ್ಲಿ ಯಾವುದು ಅಸಾಧ್ಯವಿಲ್ಲ. ಎಲ್ಲವೂ ಸಾಧ್ಯ ಅದಕ್ಕೆ ಬದುಕಿನಲ್ಲಿ ಛಲ ಎಂಬುದಿರಬೇಕೆಂದು ತಿಳಿಸಿದರು.
ಹನೂರಿನ ವಿವೇಕನಂದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಧುಸೂಧನ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಬೇಕಾದ ಶಿಸ್ತು, ಅಧ್ಯಯನ ಸಮಯ, ಸಾಂಸ್ಕøತಿಕ ಹಾಗೂ ಪರಂಪರೆಯ ಮಹತ್ವನ್ನು ತಿಳಿಸುತ್ತಾ ವಿದ್ಯಾರ್ಥಿಗಳ ಶತ್ರು ಅಲಸ್ಯ ಹಾಗೂ ಕಿಳಿರಮೆ ಇವುಗಳನ್ನು ತೊರೆದು ಕಲಿಯುವ ಹಾಗೂ ಕೇಳುವ ಹಂಬಲ ವಿದ್ಯಾರ್ಥಿಗಳಲ್ಲಿ ಇರಬೇಕು. ವಿದ್ಯಾರ್ಥಿಗಳಿಗೆ ಕಲಿಯುವ ಮನಸ್ಸು ಛಲ, ಗುರಿ, ಕನಸು, ಬದ್ದತೆ ಆತ್ಮ ವಿಶ್ವಾಸವನ್ನು ಹೊಂದಿರಬೇಕೆಂದು ತಿಳಿಸುತ್ತಾ ನೀವು ಮುಂದೆ ಸಮಾಜ ಹಾಗೂ ಕುಟುಂಬದ ನಂದಾದೀಪಗಳಾಗಿ ಎಂದು ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಎನ್ ಮಹದೇವಸ್ವಾಮಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ಆದರ್ಶ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡು ನೆಮ್ಮದಿಯ ಬದುಕನ್ನು ನಡೆಸಿ ಸಮಾಜದಿಂದ ಎಲ್ಲವನ್ನು ಪಡೆದಿರುವ ನೀವು ಮುಂದೆ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ ಹಾಗೂ ಆದರ್ಶ ವ್ಯಕ್ತಿಗಳಾದರೇ ಅದೇ ನೀವು ಸಂಸ್ಥೆ ನೀಡುವ ಕೊಡುಗೆಯಾಗಿದೆ ಎಂದರು ಸಮಾರಂಭದಲ್ಲಿ ಕಾಲೇಜಿನ ಅಧ್ಯಾಪಕರು, ಅದ್ಯಾಪಕೇತರರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
No comments:
Post a Comment