08-02-2017 ಚಾಮರಾಜನಗರ- ಯಶಸ್ವಿಯಾಗಿ ನಡೆಯುತ್ತಿರುವ ರುಬೆಲ್ಲಾ ಲಸಿಕಾ ಕಾರ್ಯಕ್ರಮ.
iv dir="ltr" style="text-align: left;" trbidi="on">
ಯಶಸ್ವಿಯಾಗಿ ನಡೆಯುತ್ತಿರುವ ರುಬೆಲ್ಲಾ ಲಸಿಕಾ ಕಾರ್ಯಕ್ರಮ.
ವರದಿ- ವರದಿ.ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ- ಕೆಲ ವದಂತಿಗೆ ಬೆಚ್ಚಿ ಬಿದ್ದ ಹಿನ್ನಲೆಯಲ್ಲಿ ಅರ್ದಕ್ಕೆ ನಿಂತ ಲಸಿಕಾ ವಿತರಣಾ ಕಾರ್ಯಕ್ರಮ ಇಂದು ಬಿರುಸಾಗಿ ನಡೆಯಿತು. ಮಕ್ಕಳಿಗೆ ದಡಾರ ಲಸಿಕೆ ಹಾಕಿದಾಗ ಏನೋ ಆಗುತ್ತದೆಯಂತೆ ಎಂದು ಗಾಬರಿಗೊಂಡು ಶಾಲೆಗೆ ದೌಡಾಯಿಸಿ ಮಕ್ಕಳನ್ನು ವಾಪಸ್ ಕರೆದೊಯ್ದಿದ್ದರು ಇದರಿಂದ ಅನಿವಾರ್ಯವಾಗಿ ಲಸಿಕಾ ಕಾರ್ಯಕ್ರಮ ನಿಲ್ಲಿಸಬೇಕಾಗಿತ್ತು. ಮಗುವಿಗೆ ಏನು ಆಗುವುದಿಲ್ಲ . ದಯಮಾಡಿ ಮಕ್ಕಳ ಉಜ್ವಲ ಭವಿಷ್ಯದ ಹಿತಾದೃಷ್ಟಿಯಿಂದ ಮಕ್ಕಳ ಪೋಷಕರು ಸಹಕರಿಸಬೇಕಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಇಂದು ಎಲ್ಲಾ ಶಾಲೆಗಳಲ್ಲೂ ಪೋಷಕರೊಡಗೂಡಿ ತಾವೇ ಖುದ್ದು ಇದ್ದು ಲಸಿಕಾ ಹಾಕಿಸಿಕೊಂಡು ಹೋದರು. ಚಾಮರಾಜನಗರದಲ್ಲಿ ಮೊದಲ ದಿನ ೧೮೪೦೦ ಮಕ್ಕಳಿಗೆ ಲಸಿಕಾ ಹಾಕಲಾಗಿದ್ದು ವದಂತಿ ಎನ್ನ ಹಿನ್ನಲೆಯಲ್ಲಿ ಬಹುತೇಕ ಹೆಚ್ಚಾಗುವ ಸಾದ್ಯತೆ ಇದೆ
***************************************************************************************************************************************************
ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಚಾಮರಾಜನಗರ, ಫೆ. 08 -ಜಿಲ್ಲಾ ಪೋಲಿಸ್ ಘಟಕದಲ್ಲಿನ ಸಿಪಿಸಿ, ಮಪಿಸಿ ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಲಾದ ಲಿಖಿತ ಪರೀಕ್ಷೆ ದೇಹದಾಢ್ರ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಗಳಲ್ಲಿ ಅರ್ಹರಾದ 60 ಪುರುಷ ಹಾಗೂ 14 ಮಹಿಳಾ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
************************************************************************************************************************************
ಆಧಾರ್, ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಸೂಚನೆ
ಚಾಮರಾಜನಗರ, ಫೆ. 08 - ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು, ಹೊಸದಾಗಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವವರು ಆಧಾರ್, ಬ್ಯಾಂಕ್, ಅಂಚೆ ಖಾತೆ ವಿವರಗಳನ್ನು ಸಲ್ಲಿಸುವಂತೆ ಚಾಮರಾಜನಗರ ತಾಲೂಕು ತಹಸೀಲ್ದಾರ್ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಕಂದಾಯ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಹಾಗೂ ಹೊಸದಾಗಿ ಸೌಲಭ್ಯ ಕೋರಿ ಬರುವ ಅರ್ಜಿದಾರರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕಿದೆ.
ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿದ್ದು ಈಗಾಗಲೇ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಬ್ಯಾಂಕ್, ಅಂಚೆ ಖಾತೆ ವಿವರಗಳನ್ನು ಸಹ ನೀಡುವಂತೆ ತಹಸೀಲ್ದಾರ್ ಪುರಂಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***************************************************************************************************************************************
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
ಚಾಮರಾಜನಗರ, ಫೆ. 08 - ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಫೆಬ್ರವರಿ 11 ಹಾಗೂ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಫೆಬ್ರವರಿ 11ರಂದು ಮಧ್ಯಾಹ್ನ 3 ಗಂಟೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಅಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಸಂತ ಪರಂಪರೆ ಮತ್ತು ಸಾಮಾಜಿಕ ಬದಲಾವಣೆ ಕುರಿತ ಕಮ್ಮಟದಲ್ಲಿ ಭಾಗವಹಿಸುವರು. ರಾತ್ರಿ ಮಲೆಮಹದೇಶ್ವರ ಬೆಟ್ಟದಲ್ಲೇ ವಾಸ್ತವ್ಯ ಹೂಡುವರು.
ಫೆಬ್ರವರಿ 12ರಂದು ಮಧ್ಯಾಹ್ನ 12 ಗಂಟೆಗೆ ಹಾರೋಹಳ್ಳಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
*********************************************************************************************************************************************
ಫೆ. 13ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾರ್ವಜನಿಕರ ಕುಂದುಕೊರತೆ ಆಲಿಕೆ
ಚಾಮರಾಜನಗರ, ಫೆ. 08 :- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 13ರಂದು ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅವರ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವರು.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಚಿವರಿಗೆ ಅಹವಾಲುಗಳನ್ನು ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
**************************************************************************
No comments:
Post a Comment