Wednesday, 1 February 2017

01-02-2017 ಫೆ. 4 ರಂದು ಬೇಡರಪುರದಲ್ಲಿ ಬಿದಿರು ಬೇಸಾಯ ಬಳಗ ಸಭೆ, NEWS ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ ಬಿಂಬಿಸುವ ವಿನೂತನ ಕಾರ್ಯಕ್ರಮ

ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ ಬಿಂಬಿಸುವ ವಿನೂತನ ಕಾರ್ಯಕ್ರಮ ಫೆ. 4ರಂದು ನಗರದಲ್ಲಿ ಭಾರತ ಭಾಗ್ಯ ವಿಧಾತ : ಧ್ವನಿ - ಬೆಳಕು; ದೃಶ್ಯ ವೈಭವಗಳ ರೂಪಕ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ವರ್ಷವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಧ್ವನಿ-ಬೆಳಕು ಕಾರ್ಯಕ್ರಮವನ್ನು ಭಾರತ ಭಾಗ್ಯ ವಿಧಾತ ಎಂಬ ಹೆಸರಿನಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಫೆಬ್ರವರಿ 4ರಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ. “ಭಾರತ ಭಾಗ್ಯ ವಿಧಾತ” – ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮುಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಭಾರತ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವಗಾಥೆ. ನಮ್ಮ ಭಾರತ ದೇಶ ಹಲವಾರು ಮಹನೀಯರುಗಳ ಕರ್ಮ ಭೂಮಿ. ಸತ್ಯ, ಶಾಂತಿ, ಅಹಿಂಸೆಯೆಂಬ ಮಹಾ ಮೌಲ್ಯಗಳ ಮೂಲಕ ನಮ್ಮ ನಾಡಿಗೆ ಸ್ವಾತಂತ್ರ್ಯ ದೊರಕಿಸಿ, ಭಾರತದ ರಾಷ್ಟ್ರಪಿತನೆಂಬ ಮಹಾಗೌರವಕ್ಕೆ ಪಾತ್ರರಾದವರು ಮಹಾತ್ಮ ಗಾಂಧೀಜಿ. ಹಾಗೆಯೇ ನಮ್ಮ ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದವರು ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್. ಡಾ. ಬಿ.ಆರ್. ಅಂಬೇಡ್ಕರ್ ಭಾರತದ ತಳ ಸಮುದಾಯದ ಸ್ಫೂರ್ತಿಯ ಸೆಲೆ, ನೊಂದವರ ಎದೆಯಾಳದ ಆತ್ಮಸ್ಥೈರ್ಯದ ಹಾಡು, ದಮನಿತ ಸಮುದಾಯದ ಚೈತನ್ಯ ಶಕ್ತಿ, ಭಾರತ ಸಂವಿಧಾನದ ಮಹಾಶಿಲ್ಪಿ. ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಭಾರತದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಪವಿತ್ರ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ಸಾಂವಿಧಾನಿಕ ತಜ್ಞರು. ಮಹಾರಾಷ್ಟ್ರದ ಮೆಹರ್ ಎಂಬ ತಳಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ಅಪಮಾನಗಳ ನಡುವೆಯೇ ಬಾಳಿ ಬದುಕಿ ಭಾರತದ ಮಹಾನ್ ಚೇತನವಾಗಿ ಬೆಳಗಿದ ಕಥೆ ಬೆರಗುಗೊಳಿಸುವಂತಹುದು. ಶಾಲಾ ಬಾಲಕನಾಗಿದ್ದಾಗ ತನ್ನದೇ ನಾಡಿನಲ್ಲಿ ಮೇಲ್ವರ್ಗದವರಿಂದ ಅವಮಾನಿತರಾಗಿ ಗಾಡಿಯಿಂದ ಕೆಳಗೆ ದೂಡಿಸಿಕೊಂಡು ಅಪಮಾನ ಅನುಭವಿಸಿದ ಘಟನೆ ಹಾಗೂ ಗಾಂಧೀಜಿಯವರು ದಕ್ಷಿಣ ಆಫ್ರಿಕದ ಡರ್ಬಾನ್‍ನಲ್ಲಿ ಬಿಳಿ ವರ್ಣೀಯರಿಂದ ರೈಲಿನಲ್ಲಿ ಕೆಳಗೆ ದೂಡಿಸಿಕೊಂಡ ಘಟನೆಗಳೆರಡೂ ಈ ಇಬ್ಬರೂ ಮಹಾನ್ ಚೇತನಗಳ ಬದುಕಿನಲ್ಲಿ ಮಹತ್ತರ ಘಟನೆಗಳಾಗಿವೆ. ಈ ಎರಡೂ ಘಟನೆಗಳ ನಂತರವೇ ಈ ಇಬ್ಬರೂ ತಾವು ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಸಮುದಾಯದವರು ಅನುಭವಿಸಬಾರದೆಂದು ದೃಢ ಸಂಕಲ್ಪ ತಳೆದು ತಮ್ಮ ಬದುಕನ್ನೇ ಈ ಅಸಮಾನತೆಯ ನಿವಾರಣೆಗಾಗಿ ಮುಡುಪಾಗಿಟ್ಟಿದ್ದು ಈಗ ಇತಿಹಾಸ. ಏಪ್ರಿಲ್ 14, 1891 ಭಾರತೀಯ ತಳ ಸಮುದಾಯಗಳ ಚರಿತ್ರೆಯಲ್ಲಿ ಐತಿಹಾಸಿಕ ದಿನ. ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಜನಿಸಿದ ಸ್ಮರಣೀಯ ದಿನ. ಪ್ರತಿ ವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ರಾಷ್ಟ್ರಾದ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಅಂತೆಯೇ 2016ರ ಏಪ್ರಿಲ್ 14 ರಿಂದ ಆರಂಭಿಸಿ 1 ವರ್ಷ ಕಾಲ ಅಂಬೇಡ್ಕರ್‍ರವರ 125ನೇ ಜನ್ಮ ದಿನಾಚರಣೆಯ ವರ್ಷವನ್ನಾಗಿ ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಂದರ್ಭದಲ್ಲಿ ಅಂಬೇಡ್ಕರ್‍ರವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ “ಧ್ವನಿ-ಬೆಳಕು” ಕಾರ್ಯಕ್ರಮವನ್ನು “ಭಾರತ ಭಾಗ್ಯ ವಿಧಾತ” ಎನ್ನುವ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏರ್ಪಡಿಸುತ್ತಿದೆ. ಈ ದಿಸೆಯಲ್ಲಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಫೆಬ್ರವರಿ 4ರಂದು ಸಂಜೆ 6 ಗಂಟೆಗೆ ಭಾರತ ಭಾಗ್ಯವಿಧಾತ ಧ್ವನಿಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಪರಿಕಲ್ಪನೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರದ್ದಾಗಿದೆ. ಬಿ.ಎಂ. ಗಿರಿರಾಜ್ ನಿರ್ದೇಶನ ಮತ್ತು ಸಾಹಿತ್ಯ ನೀಡಿದ್ದಾರೆ. ಡಾ. ಕೆ.ವೈ. ನಾರಾಯಣಸ್ವಾಮಿ ಹಾಗೂ ಬಿ.ಎಂ. ಗಿರಿರಾಜ್ ಗೀತ ರಚನೆ ಮಾಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪದ್ಮಿನಿ ಅಚ್ಚಿ ನೃತ್ಯ ಸಂಯೋಜಿಸಿದ್ದಾರೆ. ನಂದಕಿಶೋರ್ ಬೆಳಕು, ಪ್ರಮೋದ್ ಶಿಗ್ಗಾವ್ ವಸ್ತ್ರಾಲಂಕಾರ, ರಾಮಕೃಷ್ಣ ಬೆಳ್ತೂರು ಪ್ರಸಾಧನ ಹಾಗೂ ಎಂ.ಪಿ.ಎಂ ವೀರೇಶ್ ಸಹ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಜಿಲ್ಲೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಫೆ. 4 ರಂದು ಬೇಡರಪುರದಲ್ಲಿ ಬಿದಿರು ಬೇಸಾಯ ಬಳಗ ಸಭೆ ಚಾಮರಾಜನಗರ, ಫೆ. 1- ತಾಲೂಕಿನ ಬೇಡರಪುರ ಸಮೀಪದ ರವಿ ಅವರ ತೋಟದಲ್ಲಿ ಫೆ. 4 ರಂದು ಬೆಳಗ್ಗೆ 11 ಗಂಟೆಗೆ ಬಿದಿರು ಬೇಸಾಯ ಬಳಗ ಹಾಗೂ ಚಾ.ನಗರ ರೋಟರಿ ಸಿಲ್ಕ್ ಸಿಟಿ ವತಿಯಿಂದ ರೈತರ ಚಿಂತನಾ ಮಂಥನ ಸಭೆಯನ್ನು ಏರ್ಪಡಿಸಲಾಗಿದೆ. ಬಿದಿರು ಬೇಸಾಯ ಬಳಗ. ಇದೊಂದು ಪ್ರಯೋಗಶೀಲ, ಪರಿಸರ ಸ್ನೇಹಿ ರೈತ ಮಿತ್ರರ ಗುಂಪು ಮತ್ತು ಸಮಾನ ಮನಸ್ಕ ಗೆಳೆಯರ ಒಕ್ಕೂಟ. ಬೆಳಕಿನ ಬೇಸಾಯ ಕುರಿತು ಪರಸ್ಪರ ಕೃಷಿ ಅನುಭವ ಹಂಚಿಕೊಳ್ಳುವುದು ಬಳಗದ ಉದ್ದೇಶವಾಗಿದೆ. ಬೇಡರಪುರ ಗ್ರಾಮದ ಯುವ ಕೃಷಿಕರಾದ ರವಿ ಮತ್ತು ಗಿರೀಶ್ ತಮ್ಮ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಈ ಬಗ್ಗೆ ಅವರು ಸ್ವಂತ ಅನುಭವನ್ನು ಹಂಚಿಕೊಳ್ಳಲಿದ್ದಾರೆ. ಹಾಗು ಒಣ ಭೂಮಿ ಬೇಸಾಯ ತಜ್ಞ ಹೆಗ್ಗವಾಡಿಪುರ ಶಿವಕುಮಾರ್ ತಮ್ಮ ಒಣಭೂಮಿ ಯಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಯುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ರೈತರ ಚಿಂತನ ಮಂಥನ ಸಭೆಯಲ್ಲಿ ನಂಜನಗೂಡು ತಾಲೂಕಿನ ಆಕಳ ಗ್ರಾಮದಲ್ಲಿ ಬಾಳೆ ಬೆಳೆಯಲ್ಲಿ ಇಸ್ರೇಲ್ ತಾಂತ್ರಿಕತೆಯನ್ನು ಅಳವಡಿಸಿ ಅತ್ಯುತ್ತಮ ಸಾಧನೆ ಮಾಡಿರುವ ಪ್ರಶಾಂತ್ ಅನುಭವನ್ನು ತಿಳಿಸಲಿದ್ದು, ಸಭೆಯನ್ನು ಸಾವಯವ ಕೃಷಿಕ ಮತ್ತು ಅಂಕಣಕಾರ ಚಿನ್ನಸ್ವಾಮಿ ವಡ್ಡಗೆರೆ ಸಭೆಯ ನೇತೃತ್ವ ವಹಿಸಲಿದ್ದಾರೆ. ಅದ್ದರಿಂದ ಆಸಕ್ತ ರೈತರು ಭಾಗವಹಿಸಲು ಕಡ್ಡಾಯವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಆದರೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ರೋಟರಿ ಸಿಲ್ಕ್ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9538533818, 9480587718 ಅವರನ್ನು ಸಂಪರ್ಕಿಸಬಹುದಾಗಿದೆ. ಫೆ. 4 ರಂದು ಬೇಡರಪುರದಲ್ಲಿ ಬಿದಿರು ಬೇಸಾಯ ಬಳಗ ಸಭೆ ಚಾಮರಾಜನಗರ, ಫೆ. 1- ತಾಲೂಕಿನ ಬೇಡರಪುರ ಸಮೀಪದ ರವಿ ಅವರ ತೋಟದಲ್ಲಿ ಫೆ. 4 ರಂದು ಬೆಳಗ್ಗೆ 11 ಗಂಟೆಗೆ ಬಿದಿರು ಬೇಸಾಯ ಬಳಗ ಹಾಗೂ ಚಾ.ನಗರ ರೋಟರಿ ಸಿಲ್ಕ್ ಸಿಟಿ ವತಿಯಿಂದ ರೈತರ ಚಿಂತನಾ ಮಂಥನ ಸಭೆಯನ್ನು ಏರ್ಪಡಿಸಲಾಗಿದೆ. ಬಿದಿರು ಬೇಸಾಯ ಬಳಗ. ಇದೊಂದು ಪ್ರಯೋಗಶೀಲ, ಪರಿಸರ ಸ್ನೇಹಿ ರೈತ ಮಿತ್ರರ ಗುಂಪು ಮತ್ತು ಸಮಾನ ಮನಸ್ಕ ಗೆಳೆಯರ ಒಕ್ಕೂಟ. ಬೆಳಕಿನ ಬೇಸಾಯ ಕುರಿತು ಪರಸ್ಪರ ಕೃಷಿ ಅನುಭವ ಹಂಚಿಕೊಳ್ಳುವುದು ಬಳಗದ ಉದ್ದೇಶವಾಗಿದೆ. ಬೇಡರಪುರ ಗ್ರಾಮದ ಯುವ ಕೃಷಿಕರಾದ ರವಿ ಮತ್ತು ಗಿರೀಶ್ ತಮ್ಮ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಈ ಬಗ್ಗೆ ಅವರು ಸ್ವಂತ ಅನುಭವನ್ನು ಹಂಚಿಕೊಳ್ಳಲಿದ್ದಾರೆ. ಹಾಗು ಒಣ ಭೂಮಿ ಬೇಸಾಯ ತಜ್ಞ ಹೆಗ್ಗವಾಡಿಪುರ ಶಿವಕುಮಾರ್ ತಮ್ಮ ಒಣಭೂಮಿ ಯಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಯುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ರೈತರ ಚಿಂತನ ಮಂಥನ ಸಭೆಯಲ್ಲಿ ನಂಜನಗೂಡು ತಾಲೂಕಿನ ಆಕಳ ಗ್ರಾಮದಲ್ಲಿ ಬಾಳೆ ಬೆಳೆಯಲ್ಲಿ ಇಸ್ರೇಲ್ ತಾಂತ್ರಿಕತೆಯನ್ನು ಅಳವಡಿಸಿ ಅತ್ಯುತ್ತಮ ಸಾಧನೆ ಮಾಡಿರುವ ಪ್ರಶಾಂತ್ ಅನುಭವನ್ನು ತಿಳಿಸಲಿದ್ದು, ಸಭೆಯನ್ನು ಸಾವಯವ ಕೃಷಿಕ ಮತ್ತು ಅಂಕಣಕಾರ ಚಿನ್ನಸ್ವಾಮಿ ವಡ್ಡಗೆರೆ ಸಭೆಯ ನೇತೃತ್ವ ವಹಿಸಲಿದ್ದಾರೆ. ಅದ್ದರಿಂದ ಆಸಕ್ತ ರೈತರು ಭಾಗವಹಿಸಲು ಕಡ್ಡಾಯವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಆದರೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ರೋಟರಿ ಸಿಲ್ಕ್ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9538533818, 9480587718 ಅವರನ್ನು ಸಂಪರ್ಕಿಸಬಹುದಾಗಿದೆ. ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಫೆಬ್ರವರಿ 6 ರಿಂದ 28ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು. ಫೆಬ್ರವರಿ 6ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, ಫೆಬ್ರವರಿ 14ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು. ಫೆಬ್ರವರಿ 20ರಂದು ಯಳಂದೂರು, 25ರಂದು ಕೊಳ್ಳೇಗಾಲ ಹಾಗೂ ಫೆಬ್ರವರಿ 28ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು. ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ. ಸಾಕ್ಷ್ಯಚಿತ್ರ ನಿರ್ಮಾಣ : ನುರಿತ ನಿರ್ದೇಶಕರಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):- ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2016-17ನೇ ಸಾಲಿನಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಜಿಲ್ಲೆಯ ಹಿರಿಯ ಕಲಾವಿದರು, ಸಾಹಿತಿಗಳ ಜೀವನ ಸಾಧನೆ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲು ನುರಿತ ನಿರ್ದೇಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಕೆಲವು ಲೋಪದೋಷಗಳು ಕಂಡುಬಂದಿದ್ದು ತಿರಸ್ಕøತಗೊಂಡಿವೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನುರಿತ ನಿರ್ದೇಶಕರು ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಿದೆ. ಇಲಾಖೆ ನೀಡುವ ಸಾಹಿತಿ, ಕಲಾವಿದರ ಕುರಿತು ಜೀವನ ಸಾಧನೆಗೆ ಸಂಬಂಧಿಸಿದ ಸ್ಥಳ, ವ್ಯಕ್ತಿಗಳ ಸಂದರ್ಶನ ಒಳಗೊಂಡಂತೆ ಸಾಧಕರನ್ನು ಸಂದರ್ಶಿಸಿ ವಿವರಗಳೊಂದಿಗೆ 20 ನಿಮಿಷಗಳ ಮಿತಿಯಲ್ಲಿ ಹೆಚ್.ಡಿ. ಕ್ಯಾಮರಾ ಬಳಸಿ ಸಾಕ್ಷ್ಯಚಿತ್ರ ತಯಾರಿಸಿದ 5 ಡಿವಿಡಿಗಳನ್ನು ನೀಡಬೇಕಿದೆ. ಈಗಾಗಲೇ ಮಾಡಿರುವ ಸಾಕ್ಷ್ಯಚಿತ್ರಗಳ ದಾಖಲೆಯೊಂದಿಗೆ ಅರ್ಜಿಯನ್ನು ಫÉಬ್ರವರಿ 6ರ ಸಂಜೆ 5 ಗಂಟೆಯೊಳಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ನಿರ್ದೇಶಕರಿಗೆ (ಅರ್ಹತೆ ಆಧರಿಸಿ) ಆದ್ಯತೆ ನೀಡಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಪ.ಜಾ. ನಿರುದ್ಯೋಗಿ ವಿದ್ಯಾವಂತರಿಂದ ವಿವಿಧ ಕೌಶಲ ತರಬೇತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುವ ವಿವಿಧ ಕೌಶಲ ಅಭಿವೃದ್ಧಿ ತರಬೇತಿಗೆ ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. 8ನೇ ತರಗತಿ ವಿದ್ಯಾರ್ಹತೆ ಹೊಂದಿದ 18 ರಿಂದ 45ರ ವಯೋಮಿತಿಯವರಿಗೆ ಪೇಪರ್ ಕವರ್, ಪೇಪರ್ ಬ್ಯಾಗ್, ಎನ್ವಲಪ್, ಫೈಲ್ ಮೇಕಿಂಗ್ ತರಬೇತಿಗೆ (10 ದಿವಸ), ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್ ಮತ್ತು ಪಂಪ್ ಸೆಟ್ ಮೇಂಟೆನೆನ್ಸ್, ಟ್ರಾಕ್ಟ್ರ್ ಸರ್ವೀಸಿಂಗ್ ಮೇಂಟೆನೆನ್ಸ್ ರಿಪೇರಿ (ಒಂದು ತಿಂಗಳು) ತರಬೇತಿಗೆ ಅರ್ಜಿ ಸಲ್ಲಿಸಬಹುದು. 10ನೇ ತರಗತಿ ವಿದ್ಯಾರ್ಹತೆ ಹೊಂದಿದ 18 ರಿಂದ 45ರ ವಯೋಮಿತಿಯವರಿಗೆ ಒಂದು ತಿಂಗಳ ಅವಧಿಗೆ ಕಂಪ್ಯೂಟರ್ ಟ್ಯಾಲಿ, ಕಂಪ್ಯೂಟರ್ ಫೈನಾನ್ಸಿಯಲ್ ಅಕೌಂಟ್ ತರಬೇತಿ ನೀಡಲಾಗುವುದು. ಬೇಸಿಕ್ ಕಂಪ್ಯೂಟರ್ ತರಬೇತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. 8 ಹಾಗೂ 10ನೇ ತರಗತಿ ವಿದ್ಯಾರ್ಹತೆ ಹೊಂದಿದ 18 ರಿಂದ 35ರ ವಯೋಮಿತಿಯವರಿಗೆ ಒಂದು ತಿಂಗಳ ಅವಧಿಯ ಬಾರಿ ವಾಹನ ಚಾಲನೆ ತರಬೇತಿ ನೀಡಲಾಗುವುದು. ಎಲ್‍ಎಂವಿ ಪಡೆದು ಒಂದು ವರ್ಷವಾಗಿರುವ ಅಥವಾ ಟ್ರಾಕ್ಟರ್ ಪರವಾನಗಿ ಪಡೆದು 2 ವರ್ಷ ಆಗಿರುವವರು ಅರ್ಹರು. ಹೈನುಗಾರಿಕೆ ಮತ್ತು ವರ್ಕ್ ಕಂಪೋಸ್ಟಿಂಗ್‍ಗೆ ಸಂಬಂಧಿಸಿದಂತೆ ಒಂದು ತಿಂಗಳ ತರಬೇತಿ ಲಭಿಸಲಿದೆ. ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ ಸಂಖ್ಯೆ 08226-244133 ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅಸಾಧಾರಣ ಸಾಧಕರಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಲೆ, ಕ್ರೀಡೆ, ಸಾಂಸ್ಕøತಿಕ, ಸಮಾಜಸೇವೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ 9 ರಿಂದ 16 ವರ್ಷದೊಳಗಿನ ಮಕ್ಕಳಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿದ ವಯೋಮಿತಿ ಪತ್ರ ಸಲ್ಲಿಸಬೇಕು. ಆಸಕ್ತ ಮಕ್ಕಳು ನಿಗದಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವ್ಯಕ್ತಿ ಪತ್ತೆಗೆ ಮನವಿ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):– ಚಾಮರಾಜನಗರ ಪಟ್ಟಣದ ಹೊಸಬಡಾವಣೆಯಿಂದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಕಯ್ಯ ಎಂಬಾತ ಮನೆಯಿಂದ ವಾಕಿಂಗ್ ಹೋಗಿ ಬರುವುದಾಗಿ ತಿಳಿಸಿ ಹೋದವರು ಇದುವರೆವಿಗೂ ಹಿಂತಿರುಗಿ ಬಂದಿರುವುದಿಲ್ಲ ಎಂದು ಪತ್ನಿ ಸಿದ್ದಮ್ಮಣ್ಣಿ ಅವರು ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. 53 ವರ್ಷದ ಅಂಕಯ್ಯ ಕೂಲಿ ಕೆಲಸ ಮಾಡುತ್ತಿದ್ದು ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೋಲು ಮುಖ, ಗೋದಿ ಮೈಬಣ್ಣ ಹೊಂದಿದ್ದು 4.9 ಅಡಿ ಎತ್ತರವಿದ್ದಾರೆ. ದಪ್ಪ ಮೀಸೆ ಬಿಟ್ಟಿದ್ದು ಬಲಗೈನ ಕಿರುಬೆರಳು ಇರುವುದಿಲ್ಲ. ಆಕಾಶ ನೀಲಿ ಬಣ್ಣದ ಗೆರೆಗಳುಳ್ಳ ಶರ್ಟ್, ಲಬ್ಬೆ ಪಂಚೆ ಹಾಗೂ ಟವಲ್ ಧರಿಸಿರುತ್ತಾರೆ. ಇವರ ಮಾಹಿತಿ ದೊರೆತಲ್ಲಿ ನಗರದ ಪಟ್ಟಣ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 2ರಂದು ಚಾ.ನಗರ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಚಾಮರಾಜನಗರ, ಫೆ. 01 (ಕರ್ನಾಟಕ ವಾರ್ತೆ):– ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲು ಫೆಬ್ರವರಿ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾ ಆಹ್ವಾನ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ ಅವರು ಫೆಬ್ರವರಿ 2ರಂದು ಬೆಳಿಗ್ಗೆ ರಾಮಸಮುದ್ರದಲ್ಲಿ ಒಳಚರಂಡಿ ಕಾಮಗಾರಿ ಪರಿಶೀಲಿಸಿ ಪ್ರಾಯೋಗಿಕವಾಗಿ ಸಂಪರ್ಕ ಕಲ್ಪಿಸುವ ಉದ್ದೇಶಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬೂದಿತಿಟ್ಟಿನಲ್ಲಿರುವ ಟ್ರೀಟ್‍ಮೆಂಟ್ ಪ್ಲಾನ್‍ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಗಣದಲ್ಲಿ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಕುರಿತು ವಿವರಿಸಲು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಭೇಟಿ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಗೆ ಮಾಧ್ಯಮ ಪ್ರತಿನಿಧಿಗಳು ಆಗಮಿಸುವಂತೆ ಕೋರಿದೆ. ಒಳಚರಂಡಿ ಕಾಮಗಾರಿ ಭೇಟಿಗೆ ಬೆಳಿಗ್ಗೆ 8.10 ಗಂಟೆಗೆ ನಗರದ ವಾರ್ತಾ ಭವನದಿಂದ ವಾಹನ ಹೊರಡಲಿದೆ.

1 comment:

  1. ಫೆ. 4 ರಂದು ಬೇಡರಪುರದಲ್ಲಿ ಬಿದಿರು ಬೇಸಾಯ ಬಳಗ ಸಭೆ,

    ReplyDelete

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು