Sunday, 12 February 2017
11-02-2017 ಚಾಮರಾಜನಗರ ಸುದ್ದಿಗಳು( ಚಂದಕವಾಡಿಯಲ್ಲಿ ಶಾಸಕರಿಂದ ಮೇವು ನಿಧಿ ಕೇಂದ್ರ ಉದ್ಘಾಟನೆ,ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ 233.97 ಕೋಟಿ ಅನುದಾನ : ಸಿ. ಪುಟ್ಟರಂಗಶೆಟ್ಟಿ)
ಚಂದಕವಾಡಿಯಲ್ಲಿ ಶಾಸಕರಿಂದ ಮೇವು ನಿಧಿ ಕೇಂದ್ರ ಉದ್ಘಾಟನೆ
ಚಾಮರಾಜನಗರ,ಫೆ,11 - ಬರಗಾಲ ಸಂದರ್ಭದಲ್ಲಿ ಜಾನುವಾರುಗಳ ಮೇವು ಅಭಾವ ಪರಿಸ್ಥಿತಿಯನ್ನು ಪರಿಹರಿಸುವ ಸಲುವಾಗಿ ತಾಲ್ಲೂಕು ಆಡಳಿತ ಇಂದು ಚಂದಕವಾಡಿಯಲ್ಲಿ 4ನೇ ಮೇವು ನಿಧಿ ಕೇಂದ್ರವನ್ನು ಆರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಜಾನುವಾರು ಮಾಲೀಕರಿಗೆ ಮೇವು ವಿತರಿಸುವ ಮೂಲಕ ಮೇವು ನಿಧಿ ಕೇಂದ್ರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ತಾಲ್ಲೂಕಿನಲ್ಲಿ ಮೂರು ಮೇವು ನಿಧಿ ಕೇಂದ್ರವನ್ನು ಆರಂಭಿಸಲಾಗಿದೆ. ಹರವೆ, ಚಂದಕವಾಡಿ, ಕಸಬಾ ಹೋಬಳಿ ವ್ಯಾಪ್ತಿಯ ಜನರಿಗೆ ನೆರವಾಗುವ ಉದ್ಧೇಶದಿಂದ ಮೇವು ನಿಧಿ ಕೇಂದ್ರವನ್ನು ತೆರೆಯಲಾಗಿದೆ. ಪ್ರಸ್ತುತ ಚಂದಕವಾಡಿ ಭಾಗದಲ್ಲಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂದಿನಿಂದ ಮೇವು ನಿಧಿ ಕೇಂದ್ರ ಪ್ರಾರಂಭ ಮಾಡಲಾಗಿದೆ ಎಂದರು.
ಪ್ರತಿ ರಾಸುವಿಗೆ 5 ಕೆ.ಜಿ. ಯಂತೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲಾಗುತ್ತಿದೆ. ಪ್ರಸ್ತುತ 10 ದಿನಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ. ಮೇವು ಸಂಗ್ರಹಣೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮೇವು ಬರಲಿದೆ ಇದರಿಂದ ಮೇವು ಅಭಾವ ಪರಿಸ್ಥಿತಿ ನೀಗುವ ವಿಶ್ವಾಸವಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲ್ಲೂಕಿನಲ್ಲಿ ಗೋಶಾಲೆ ತೆರೆಯಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಹೀಗಾಗಿ ಮೇವು ನಿಧಿ ಕೇಂದ್ರಗಳನ್ನು ಹೆಚ್ಚು ತೆರೆಯಲಾಗುತ್ತಿದೆ. ಕುಡಿಯುವ ನೀರಿನ ಬವಣೆಯು ತಾಲ್ಲೂಕಿನಲ್ಲಿ ಇದ್ದು ಇದರ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಪುಟ್ಟರಂಗಶೆಟ್ಟಿಯವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಆರ್. ಬಾಲರಾಜು, ತಾ.ಪಂ. ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಗ್ರಾ.ಪಂ. ಅಧ್ಯಕ್ಷರಾದ ಸಿದ್ದಪ್ಪಾಜಿ, ತಹಶೀಲ್ದಾರ್ ಕೆ. ಪುರಂದರ, ಇತರರು ಹಾಜರಿದ್ದರು.
-----------------------------------------------------------------------------------
ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ 233.97 ಕೋಟಿ ಅನುದಾನ : ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ,ಫೆ,11 ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಮಾದರಿ ನಗರವನ್ನಾಗಿಸಲು 233.97 ಕೋಟಿ. ರೂ. ಅನುದಾನ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಚಂದಕವಾಡಿಯಲ್ಲಿ ಮೇವು ನಿಧಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಮಾದ್ಯಮ ಪ್ರತಿನಿಧಿಗಳಿಗೆ ಶಾಸಕರು ಈ ಮಾಹಿತಿಯನ್ನು ನೀಡಿದರು.
ರಾಜ್ಯದ ಒಟ್ಟು 270 ಸ್ಥಳೀಯ ಸಂಸ್ಥೆಗಳಲ್ಲಿ 10 ನಗರ ಸ್ಥಳೀಯ ಸಂಸ್ಥೆಗಳನ್ನು ಮಾದರ ನಗರವನ್ನಾಗಿಸಲು ಮುಖ್ಯಮಂತ್ರಿಯವರು ಆಯ್ಕೆ ಮಾಡಿದ್ದಾರೆ. ಈ ಪೈಕಿ ಚಾಮರಾಜನಗರವೂ ಸಹ ಸೇರಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪುಟ್ಟರಂಗಶೆಟ್ಟಿ ತಿಳಿಸಿದರು.
ಮಾದರಿ ನಗರವನ್ನಾಗಿಸಲು ಚಾಮರಾಜನಗರವನ್ನು ಆಯ್ಕೆ ಮಾಡಿದ್ದು ಇದರಿಂದ ನಾಗರಿಕರಿಗೆ ಮೂಲ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ, ಉದ್ಯಾನವನ, ಆಟದ ಮೈದಾನ ಸೌಲಭ್ಯ ಕಲ್ಪಿಸಲು ಅನುಕೂಲವಾಗಿದೆ. ಸ್ಮಶಾನ ಅಭಿವೃದ್ಧಿಯೂ ಸಹ ಕೈಗೊಳ್ಳಲಾಗುತ್ತದೆ ಎಂದರು.
ಒಟ್ಟು 233.97 ಕೋಟಿ. ರೂ. ಅನುದಾನವು ಮಾದರಿ ನಗರ ಯೋಜನೆಗೆ ಬಿಡುಗಡೆಯಾಗಲಿದೆ. ಈ ಪೈಕಿ 24ಘಿ7 ಕುಡಿಯುವ ನೀರು ಸರಬರಾಜು ಯೋಜನೆಗೆ 70.54 ಕೋಟಿ ರೂ. 2ನೇ ಹಂತದ ಒಳಚರಂಡಿಗೆ 20 ಕೋಟಿ ರೂ. 91 ಕಿ.ಮೀ. ರಸ್ತೆ ಅಭಿವೃದ್ಧಿಗೆ 91.13 ಕೋಟಿ ರೂ. ಮಳೆ ನೀರು ಚರಂಡಿ ನಿರ್ಮಾಣಕ್ಕೆ 16.80 ಕೋಟಿ. ರೂ. ವಿದ್ಯುತ್ ದೀಪ, ಪಾರ್ಕ್, ಆಟದ ಮೈದಾನ, ಸ್ಮಶಾನ ಅಭಿವೃದ್ಧಿಗೆ 35.50 ಕೋಟಿ. ರೂ. ವೆಚ್ಚ ಮಾಡಲು ಅವಕಾಶವಿದೆ ಎಂದರು.
ಅನುದಾನ ಬಿಡುಗಡೆಗೆ ಈಗಾಗಲೇ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನಗರಕ್ಕೆ ಅವಶ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಯೋಜನಾ ವರದಿ ಸಿದ್ದಪಡಿಸಲು ತಿಳಿಸಲಾಗಿದೆ. ಚಾಮರಾಜನಗರ ಪಟ್ಟಣವನ್ನು ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
-------------------------------------------------------------------------------
ಪುಣಜನೂರು ಅಂಗನವಾಡಿಗೆ ಶಾಸಕರ ಭೇಟಿ : ಪೌಷ್ಠಿಕ ಆಹಾರ ಅಸಮರ್ಪಕ ವಿತರಣೆಗೆ ಅಸಮಾಧಾನ
ಚಾಮರಾಜನಗರ,ಫೆ,11 – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಾಲ್ಲೂಕಿನ ಪುಣಜನೂರು ಅಂಗನವಾಡಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ವೇಳೆ ಸೋಲಿಗರಿಗೆ ನೀಡಬೇಕಿದ್ದ ಪೌಷ್ಠಿಕ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚಂದಕವಾಡಿ ಮೇವು ನೀಧಿ ಕೇಂದ್ರ ಉದ್ಘಾಟಿಸಿದ ಬಳಿಕ ಪುಣಜನೂರಿಗೆ ತೆರಳಿದ ಶಾಸಕರು ಅಲ್ಲಿನ ಅಂಗನವಾಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಮ್ಮ ಅಂಗನವಾಡಿ ಮೂಲಕ ಸೋಲಿಗರಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಪದಾರ್ಥಗಳಾದ ಹುರಳಿ, ರಾಗಿ, ಬೆಲ್ಲ, ನಂದಿನಿ ತುಪ್ಪ, ಹೆಸರು ಕಾಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡದೆ ವಂಚಿಸಲಾಗುತ್ತಿದೆ ಎಂದು ಗಮನಕ್ಕೆ ತಂದರು.
ಕೂಡಲೇ ಅಲ್ಲಿಯೇ ಇದ್ದ ಅಂಗನವಾಡಿ ಸಿಬ್ಬಂದಿಯಿಂದ ಮಾಹಿತಿ ಪಡೆದ ಶಾಸಕರು ಅಂಗನವಾಡಿಯಲ್ಲಿ ದಾಸ್ತಾನು ಮಾಡಿರುವ ಪೌಷ್ಠಿಕ ಆಹಾರ ಪೊಟ್ಟಣಗಳನ್ನು ಪರಿಶೀಲಿಸಿದರು. ಪೌಷ್ಠಿಕ ಸಾಮಗ್ರಿಗಳನ್ನು ಯಾವ ಪ್ರಮಾಣದಲ್ಲಿ ತೂಕ ಮಾಡಿ ಪ್ಯಾಕ್ ಮಾಡಲಾಗಿದೆ ಎಂಬುದನ್ನು ವೀಕ್ಷಿಸಿದರು.
ಸ್ಥಳೀಯ ಜನರು ಸಹ ನಿಗಧಿತ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ನೀಡುತ್ತಿಲ್ಲ. ಮಳೆಗಾಲ ಸಂದರ್ಭದಲ್ಲಿ ಅರಣ್ಯ ವಾಸಿಗಳಿಗೆ ನೆರವಾಗುವ ಸದುದ್ದೇಶದಿಂದ ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರದಲ್ಲಿ ಅಧಿಕಾರಿಗಳು ತೂಕ ಅಳತೆಯಲ್ಲಿ ವ್ಯತ್ಯಾಸ ಮಾಡಿ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಪುಟ್ಟರಂಗಶೆಟ್ಟಿಯವರು ಪೌಷ್ಠಿಕ ಆಹಾರ ವಿತರಣೆಯಲ್ಲಿ ಸಮರ್ಪಕವಾಗಿ ತೂಕ ಅಳತೆ ಪ್ರಮಾಣವನ್ನು ಪಾಲಿಸದೇ ಇರುವ ಬಗ್ಗೆ ದೂರುಗಳು ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಖುದ್ದು ನಿಂತು ಸರಿಯಾದ ರೀತಿಯಲ್ಲಿ ಜನರಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆಯೇ ಎಂದು ಗಮನ ಹರಿಸಬೇಕಿದೆ ಎಂದು ತೀವ್ರ ಅಸಮಾಧಾನ ತೋರಿದರು.
-------------------------------------------------------
ಗ್ರಾ.ಪಂ ಉಪಚುನಾವಣೆ:ಶೇಕಡ 59.48 ಮತದಾನ
ಚಾಮರಾಜನಗರ, ಫೆ. 12:- ವಿವಿಧ ಕಾರಣಗಳಿಂದ ತೆರವಾಗಿದ್ದ ಜಿಲ್ಲೆಯ 5 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಇಂದು ನಡೆದ ಉಪ ಚುನಾವಣೆಯಲ್ಲಿ ಶೇ. 59.48 ರಷ್ಟು ಮತದಾನ ನಡೆದಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ (ಹೊಂಗನೂರು) ನಡೆದ ಚುನಾವಣೆಯಲ್ಲಿ ಶೇ. 52.99 ರಷ್ಟು ಕೊಳ್ಳೇಗಾಲ ತಾಲ್ಲೂಕಿನ (ದೊಡ್ಡಾಲತ್ತೂರು ಹಾಗೂ ಮಾರ್ಟಳ್ಳಿ) ಚುನಾವಣೆಯಲ್ಲಿ ಶೇ. 55.10 ರಷ್ಟು ಮತದಾನವಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ (ಕೊತನೂರು) ಶೇ. 74.70 ಹಾಗೂ ಯಳಂದೂರು ತಾಲ್ಲೂಕಿನಲ್ಲಿ (ಬಿಳಿಗಿರಿರಂಗನಬೆಟ್ಟ) ಶೇ. 63.51ರಷ್ಟು ಮತದಾನವಾಗಿದೆಯೆಂದು ಜಿಲ್ಲಾ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
---------------------------------------------------------------------
ಕೆ.ಡಿ.ಪಿ.ಸಭೆ ಮುಂದೂಡಿಕೆ
ಚಾಮರಾಜನಗರ, ಫೆ. 11 ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಂದು ನಗರದಲ್ಲಿ ನಿಗದಿಯಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ.
ಕರ್ನಾಟಕ ವಿಧಾನ ಮಂಡಲ ಅಧಿವೇಶನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13 ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಕೆ.ಡಿ.ಪಿ ಸಭೆ ಮುಂದೂಡಿಕೆಯಾಗಿದೆ. ಅಲ್ಲದೆ ಅಂದು ಸಚಿವರು ಕೈಗೊಳ್ಳಲಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಕಾರ್ಯಕ್ರಮವನ್ನು ಸಹ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
-----------------------------------------------
ಫೆ. 12ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 11 ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಫೆಬ್ರವರಿ 12ರಂದು ಜಿಲ್ಲೆಗೆ ಭೇಟಿ ನೀಡುವರು.
ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ, ಅಲ್ಲಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮದ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರೆಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ.
ಫೆ. 12ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 11 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮದ್ಯಾಹ್ನ 3 ಗಂಟೆಗೆ ನಗರದಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಭಾಗವಹಿಸುವವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 12ರಂದು ವಸತಿ ಖಾತೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಫೆ. 11 ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಕೃಷ್ಣಪ್ಪ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 13ರಂದು ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ
ಚಾಮರಾಜನಗರ, ಫೆ. 11):- ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಎಪಿಎಂಸಿ ಕಾರ್ಯಾಲಯದ ಆವರಣದಲ್ಲಿ ಶಾಸಕರಾದ ಜಯಣ್ಣ ಅವರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಸಾರ್ವಜನಿಕರು ಮೇವು ಬ್ಯಾಂಕ್ ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------------------------------
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment