Tuesday, 28 February 2017

28-02-2017 ಚಾಮರಾಜನಗರ ಸುದ್ದಿಗಳು ( ಬರ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ : ಶಾಸಕರಾದ ಎಸ್ ಜಯಣ್ಣ, ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ)

///////////////////////////////////////////////////////////////////////////////////////////////////////////////////////////////////////////////////////////////////////////////// ಬರ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ : ಶಾಸಕರಾದ ಎಸ್ ಜಯಣ್ಣ ಚಾಮರಾಜನಗರ, ಫೆ. 28- ಜಿಲ್ಲೆಯಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನತೆ ಜಿಲ್ಲಾ ಹಾಗೂ ತಾಲುಕು ಆಡಳಿತದೊಂದಿಗೆ ಸಹಕರಿಸಬೇಕೆಂದು ಶಾಸಕರಾದ ಎಸ್. ಜಯಣ್ಣ ತಿಳಿಸಿದರು. ತಾಲೂಕಿನ ಸಂತೆಮರಹಳ್ಳಿಯಲ್ಲಿ ಇಂದು ಜನರ ಕುಂದುಕೊರತೆ ಆಲಿಸುವ ಸಲುವಾಗಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬರಪರಿಹಾರ ಕಾಮಗಾರಿ ಕೈಗೊಳ್ಳಲು ಹಣದ ಕೊರತೆಯಿಲ್ಲ. ಆದರೆ ಮೇವು ಕೊರತೆ ಕಾಡುತ್ತಿದೆ. ಆದರೂ ಹೊರಭಾಗಗಳಿಂದ ಮೇವು ಖರೀದಿಸಿ ಪರಿಸ್ಥಿತಿ ಪರಿಹರಿಸಲು ಕ್ರಮ ವಹಿಸಲಾಗುತ್ತದೆ. ಇನ್ನು ಎರಡೂವರೆ ತಿಂಗಳು ಬರ ಪರಿಸ್ಥಿತಿಯನ್ನು ಅತ್ಯಂತ ಅವಶ್ಯಕ ಕ್ರಮಗಳೊಂದಿಗೆ ನಿಭಾಯಿಸುವ ಹೊಣೆಗಾರಿಕೆ ಇದೆ ಎಂದರು. ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಪ್ರಗತಿಯಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಾರ್ಚ್ 10ರ ವೇಳೆಗೆ ರಾ ವಾಟರ್ ಪೂರೈಕೆ ಮಾಡಲೇಬೇಕು. ತಾಲೂಕಿನ 194 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಯನ್ನು 3 ಹಂತದಲ್ಲಿ ಎಷ್ಟು ಶೀಘÀ್ರವೋ ಅಷ್ಟು ಅವಧಿಯೊಳಗೆ ನೀರು ತಲುಪಿಸುವ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಹಗಲಿರುಳು ಶ್ರಮ ವಹಿಸಿದರೆ ಬರಗಾಲದಲ್ಲಿ ನೀರಿನ ಬವಣೆ ತಪ್ಪಿಸಬಹುದು. ಹೀಗಾಗಿ ಜಿಲ್ಲಾಧಿಕಾರಿ ಇತರೆ ಅಧಿಕಾರಿಗಳೊಂದಿಗೆ ತಾವು ಸಮಾಲೋಚಿಸಿ ಸೂಚನೆ ನೀಡಿರುವುದಾಗಿ ಶಾಸಕರು ತಿಳಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಅನುಕೂಲವಾಗುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಈ ಯೋಜನೆಯಡಿ ಜನರಿಗೆ ಉದ್ಯೋಗ ದೊರಕುವ ಹಾಗೆ ಕ್ರಮ ವಹಿಸಬೇಕು. ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಯಶಸ್ವಿಯಾಗಿ ನಿರ್ವಹಿಸುವಂತೆ ಜಯಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರು ಪೂರೈಸುವ ಕೆಲಸಕ್ಕೆ ಆದ್ಯತೆ ಕೊಟ್ಟಿದ್ದು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಜಾನುವಾರುಗಳಿಗೆ ಮೇವು ಅಭಾವ ನೀಗಿಸುವ ಸಲುವಾಗಿ ಗೋಶಾಲೆಯನ್ನು ಮತ್ತಷ್ಟು ತೆರೆಯಬೇಕೆಂಬ ಬೇಡಿಕೆ ಬಂದಿದೆ. ಆದರೆ ಮೇವು ಲಭ್ಯತೆಯ ಅನುಗುಣವಾಗಿ ಗೋಶಾಲೆ ತೆರೆಯಬೇಕಿದೆ. ಉಮ್ಮತ್ತೂರಿನಲ್ಲಿ ಮತ್ತೊಂದು ಗೋಶಾಲೆ ತೆರೆಯಲು ಪರಿಶೀಲನೆ ನಡೆಸಲಾಗಿದೆ. ಶೀಘ್ರವೇ ಗೋಶಾಲೆ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತದÉ ಎಂದರು. ಜಿಲ್ಲಾಡಳಿತ ಮಳವಳ್ಳಿ, ಟಿ. ನರಸೀಪುರ ಸೇರಿದಂತೆ ಹೊರ ಜಿಲ್ಲೆಗಳಿಂದ ಮೇವು ಖರೀದಿಸಿ ಪೂರೈಸುತ್ತಿದೆ. ಪಕ್ಕದ ಜಿಲ್ಲೆಗಳಲ್ಲೂ ಪ್ರಸ್ತುತ ಮೇವು ಲಭ್ಯವಾಗುತ್ತಿಲ್ಲ. ಹೀಗಾಗಿ ಹೊಸಪೇಟೆಯಿಂದ ಮೇವು ಖರೀದಿಸಿ ತರಲಾಗುತ್ತಿದೆ. ಬರಪರಿಹಾರ ಕೆಲಸಗಳಿಗೆ ಹಣ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಸಂತೆಮರಹಳ್ಳಿ ಭಾಗದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಜನರು ಮುಂದಿಟ್ಟಿರುವ ಸಮಸ್ಯೆ ಬೇಡಿಕೆಗಳ ಬಗ್ಗೆ ಶೀಘ್ರವೇ ಅಗತ್ಯ ಕ್ರಮ ವಹಿಸುತ್ತೇನೆ. ಇನ್ನು 40 ದಿನಗಳಲ್ಲಿ 8 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಠಿ ಮಾಡುವ ಗುರಿ ನೀಡಲಾಗಿದೆ. ಈ ಬಗ್ಗೆ ಯೋಜನಾ ಬದ್ಧವಾಗಿ ಕಾರ್ಯಕ್ರಮ ಪೂರ್ಣಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು. ಸಭೆಯ ಆರಂಭದಲ್ಲಿ ಕುಡಿಯುವ ನೀರು, ಮೇವು, ಶೌಚಾಲಯ ನಿರ್ಮಾಣಕ್ಕೆ ಎದುರಾಗಿರುವ ಮರಳಿನ ಸಮಸ್ಯೆ ಸೇರಿದಂತೆ ಹಲವು ಅಹವಾಲುಗಳನ್ನು ಸ್ಥಳೀಯ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ನಾಗರಿಕರು ಮುಂದಿಟ್ಟರು. ಸಭೆಯಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ಶಾಸಕರು, ಇತರೆ ಜನಪ್ರತಿನಿಧಿಗಳು ವಿತರಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಜನಸಂಪರ್ಕ ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಶೀಲ, ಯೋಗೇಶ್, ತಾಲೂಕು ಪಂಚಾಯತ್ ಸದಸ್ಯರಾದ ಸುಧಾಮಲ್ಲಣ್ಣ, ಮಹದೇವಸ್ವಾಮಿ, ಯಶೋಧ, ಕೆ. ರವೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭ, ಜಡೆಸ್ವಾಮಿ, ಪ್ರಭಾಮಣಿ, ಶೀಲ, ಶೋಭ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. ////////////////////////////////////////////////////////////////////////////////////////////////////////////////// ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 28 - ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 28 ಹಾಗೂ ಮಾರ್ಚ್ 1ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರವರಿ 28ರಂದು ರಾತ್ರಿ ಚಾಮರಾಜನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡಿ ಬಳಿಕ ಮಾರ್ಚ್ 1ರಂದು ಬೆಳಿಗ್ಗೆ 10 ಗಂಟೆಗೆ ಯಳಂದೂರಿನಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ. //////////////////////////////////////////////////////////////////////////////// ವಿವಿಧ ಕೌಶಲ ತರಬೇತಿಗೆ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 28:- ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತರ ಯುವಜನರಿಗೆ ವಿವಿಧ ತರಬೇತಿಗಳನ್ನು ನೀಡಲು ಅರ್ಜಿ ಆಹ್ವಾನಿಸಿದೆ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಉಳ್ಳವರಿಗೆ ಬ್ಯೂಟಿ ಥೆರಪಿಸ್ಟ್ ಮತ್ತು ಹೇರ್ ಸ್ಟೈಲಿಂಗ್ ಲೆವೆಲï, ಅಸಿಸ್ಟೆಂಟ್ ಫೈರ್ ಆಪರೇಟರ್, ಪೈಲ್ ಅಂಡ್ ರೆಸ್ಕ್ಯೂ ಆಪರೇಟರ್, ಅಕೌಂಟ್ಸ್ ಟ್ಯಾಲಿ, ಡಿಟಿಪಿ ಮತ್ತು ಪ್ರಿಂಟಿಂಗ್ ಪಬ್ಲಿಷಿಂಗ್ ಅಸಿಸ್ಟೆಂಟ್, ಕಂಪ್ಯೂಟರ್ ಹಾರ್ಡ್‍ವೇರ್, ನೆಟ್ ವರ್ಕ್ ಅಸಿಸ್ಟೆಂಟ್, ಬಿಪಿಓ ನಾನ್ ವಾಯ್ಸ್ ತರಬೇತಿ ನೀಡಲಾಗುತ್ತದೆ. 8ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸೋಲಾರ್ ಪಿವಿ ಟೆಕ್ನೀಷಿಯನ್, ಸೋಲಾರ್ ಹಾಟ್ ವಾಟರ್ ಸಿಸ್ಟಂ ಇನ್‍ಸ್ಟಾಲೇಷನ್, ಬೇಸಿಕ್ ಇನ್ ವೆಲ್ಡಿಂಗ್ ಟೆಕ್ನಾಲಜಿ, ಆರ್ಕ್ ವೆಲ್ಡಿಂಗ್, ಟಿಐಜಿ ವೆಲ್ಡರ್, ರಿಪೇರಿ ಮತ್ತು ನಿರ್ವಹಣೆ, ಪೈಪ್ ವೆಲ್ಡರ್ ತರಬೇತಿ ನೀಡಲಾಗುತ್ತದೆ. 5ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಟೈಲರಿಂಗ್, ಜರ್ದೋಸಿ ತರಬೇತಿ ಕೊಡಲಾಗುತ್ತದೆ. ಸ್ಪೋಕನ್ ಇಂಗ್ಲೀಷ್, ಕಮ್ಯುನಿಕೇಷನ್ ಸ್ಕಿಲ್, ಸಾಪ್ಟ್ ಸ್ಕಿಲ್ ತರಬೇತಿ ಸಹ ಅಭ್ಯರ್ಥಿಗಳು ಪಡೆಯಬಹುದಾಗಿದೆ. ಆಸಕ್ತರು ನಿಗಧಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯಿಂದ ಉಚಿತವಾಗಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 4ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. /////////////////////////////////////////////////////////////////////////////////////////////////////////////////////////// ಕೊಳ್ಳೇಗಾಲ: ಮಹಿಳಾ ಬೀದಿಬದಿ ವ್ಯಾಪಾರಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 28 - ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2016-17ನೇ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವವರ ಆರ್ಥಿಕ ಸಬಲೀಕರಣಕ್ಕಾಗಿ ತಲಾ 10 ಸಾವಿರ ರೂ.ಗಳ ಪ್ರೋತ್ಸಾಹಧನ ಒದಗಿಸಲು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 60ರ ವಯೋಮಿತಿಯವರು ಅರ್ಹರು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ಬೀದಿಬದಿ ವ್ಯಾಪಾರಿ ಎಂದು ನೋಂದಣಿ ಮಾಡಿಸಿರುವ ಗುರುತಿನ ಚೀಟಿ ಹೊಂದಿರಬೇಕು. ಗ್ರಾಮೀಣ ಪ್ರದೇಶದ ವ್ಯಾಪ್ರಿಯಲ್ಲಿ ಪಿಡಿಓ ಅವರಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆ ಪಡೆದಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ್, ಬಿಪಿಎಲ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು. ಕೊಳ್ಳೇಗಾಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್ 5ರೊಳಗೆ ಕಚೇರಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ನಿಗದಿಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ವಿವರಗಳಿಗೆ ಕೊಳ್ಳೇಗಾಲ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ದೂರವಾಣಿ ಸಂಖ್ಯೆ 08224-262367 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ. ////////////////////////////////////////////////////////////////////////////////////////////////////////////// ಮಾರ್ಚ್1ರಂದು ನಗರದಲ್ಲಿ ‘ಟಾರ್ಗೆಟ್-60’ ಕೈಪಿಡಿ ಬಿಡುಗಡೆ ಚಾಮರಾಜನಗರ, ಫೆ. 28 :- ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸುವ ಸಲುವಾಗಿ ಸಿದ್ದಪಡಿಸಲಾಗಿರುವ ‘ಟಾರ್ಗೆಟ್-60’ ಕೈಪಿಡಿ ಬಿಡುಗಡೆ ಸಮಾರಂಭವನ್ನು ನಗರದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದರು. /////////////////////////////////////////////////////////////////////////////////////////////////////////// ಮಾರ್ಚ್1ರಂದು ನಗರದಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಚಾಮರಾಜನಗರ, ಫೆ. 28 - ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದೊಂದಿಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 1ರಂದು ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ. ಎಂ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಧ ಸುಹೇಲ್ ಅಲಿಖಾನ್, ನಗರ ಸಭೆಯ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬ¸ವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದÀ ಪಿ.ಎನ್ ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಜಿ.ಜೆ ಕಾವೇರಿಯಪ್ಪ, ಮೈಸೂರಿನ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ಲಿಂಗರಾಜು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.. ///////////////////////////////////////////////////////////////////////////////////////////////////////////////////////

Monday, 27 February 2017

26-02-2017 ಚಾಮರಾಜನಗರ ಪ್ರಮುಖ ಸುದ್ದಿಗಳು ( ಹೆಚ್ಚುವರಿ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಗಂಭೀರ ಕ್ರಮ : ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ,ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಕಠಿಣ ಸಜೆ)

//////////////////////////////////////////////////////////////////////////////////////////////////////////// ಹೆಚ್ಚುವರಿ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಗಂಭೀರ ಕ್ರಮ : ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ ಚಾಮರಾಜನಗರ, ಫೆ. 27 - ಜಿಲ್ಲೆಯ ಯಾವುದೇ ಖಾಸಗಿ ಅನುದಾನರಹಿತ ಅನುದಾನಿತ ಶಾಲೆಗಳು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ ಪೋಷಕರಿಂದ ಶುಲ್ಕ ಪಡೆದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ಎಚ್ಚರಿಕೆ ನೀಡಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವಾ ಮನೋಭಾವನೆಯಿಂದ ಶಾಲೆಗಳನ್ನು ತೆರೆಯಲಾಗಿದೆ. ಆ ಉದ್ದೇಶವನ್ನೇ ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ನಡೆಸಬೇಕು. ಸರ್ಕಾರ ನಿಗದಿಮಾಡಿರುವ ಶುಲ್ಕಕ್ಮಿಂತ ಒಂದು ಪೈಸೆ ಸಹ ಹೆಚ್ಚುವರಿಯಾಗಿ ಪಡೆಯುವಂತಿಲ್ಲ. ಹೆಚ್ಚುವರಿ ಶುಲ್ಕ ಪಡೆದಿರುವ ದಾಖಲೆಗಳೊಂದಿಗೆ ದೂರು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ಗಂಭೀರವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಮು ಅವರು ಕಟ್ಟುನಿಟ್ಟಾಗಿ ತಿಳಿಸಿದರು. ಶಾಲೆಗಳು ಬೇರೆ ಯಾವುದೇ ಕಾರಣ ಇಟ್ಟುಕೊಂಡು ಪೋಷಕರಿಂದ ಹಣ ವಸೂಲಿ ಮಾಡುವಂತಿಲ್ಲ. ಅಭಿವೃದ್ಧಿ, ಕಟ್ಟಡ ಶುಲ್ಕ ಇನ್ನಿತರ ಎಂದು ಕಾರಣ ಹೇಳಿ ಡೊನೇಷನ್, ವಂತಿಕೆ ಪಡೆಯುವಂತಿಲ್ಲ. ಹೀಗೆ ಮಾಡಿದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಶಾಲಾ ಮಂಡಳಿ ಪೋಷಕರಿಂದ ಯಾವುದೇ ಕಾರಣ ನೀಡಿ ನಿಯಮ ಉಲ್ಲಂಘಿಸಿ ಶುಲ್ಕ ಪಡೆಯುವುದು ಕಂಡುಬಂದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲಾ ಮಂಡಳಿಗಳು ಪ್ರವೇಶ ಸಂಬಂಧ ಅನುಸರಿಸಬೇಕಿರುವ ನಿಯಮ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಈ ಪ್ರಕಾರವೇ ಪ್ರವೇಶ ಪ್ರಕ್ರಿಯೆ ನಡೆಸಿ ನಿಯಮಬದ್ಧವಾಗಿ ನಿಗದಿ ಮಾಡಲಾಗಿರುವ ಶುಲ್ಕವನ್ನು ಪಡೆಯಲು ಮಾತ್ರ ಅವಕಾಶವಿದೆ. ಏನಾದರೂ ಲೋಪ ಎಸಗಿದರೆ ಆಯಾ ಶಾಲೆಯ ಮುಖ್ಯ ಶಿಕ್ಷಕರು, ಶಾಲಾ ಮಂಡಳಿಯ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ. ಇವರ ವಿರುದ್ದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಶಿಸ್ತು ಕ್ರಮ ಜರುಗಿಸಲಿದೆ ಎಂದರು. ಕಳೆದ ಬಾರಿ ನಡೆದ ಸಭೆಯಲ್ಲಿ ಜಿಲ್ಲೆಯ ಕೆಲ ಶಾಲೆಗಳು ಹೆಚ್ಚುವರಿಯಾಗಿ ಶುಲ್ಕ ಪಡೆದಿರುವ ಬಗ್ಗೆ ಮುಖಂಡರು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳು ಈ ಶೈಕ್ಷಣಿಕ ಸಾಲಿನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸಿ ಪ್ರಸಕ್ತ ಸಾಲಿನ ನಿಗದಿತ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗುವುದೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಕಾನೂನಾತ್ಮಕವಾಗಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ರೀತಿಯ ಅವಕಾಶಗಳಿವೆ. ಆದರೆ ನಿಗದಿಮಾಡಿದ್ದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶವಿಲ್ಲ. ಕಳೆದ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿರುವಂತೆ ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ವಂತಿಕೆ ಡೊನೇಷನ್ ಪಡೆಯುವ ಸಂಬಂಧ ದೂರುಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬಹುದು ಎಂದರು. ಮುಖಂಡರಾದ ಅರಕಲವಾಡಿ ನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ನಿಜಧ್ವನಿ ಗೋವಿಂದರಾಜು, ಕೆ.ಎಂ. ನಾಗರಾಜು, ಸಿ.ಕೆ. ಮಂಜುನಾಥ್ ಸೇರಿದಂತೆ ಇನ್ನಿತರ ಮುಖಂಡರು ಕಳೆದ ಸಲ ನಡೆದ ಸಭೆಯಲ್ಲಿನ ನಡಾವಳಿ ಅನುಪಾಲನಾ ವರದಿ ಮಂಡನೆಯಾಗಬೇಕು. ಹಿಂದಿನ ಸಭೆಯಲ್ಲಿ ಮುಂದಿಟ್ಟ ಸಮಸ್ಯೆಗಳಿಗೆ ಯಾವ ಪರಿಹಾರ ದೊರೆತಿದೇ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕೆಂದು ಒತ್ತಾಯಿಸಿದರು. ಅಂಬರೀಶ್, ರಾಜಶೇಖರ್, ಆಲೂರು ನಾಗೇಂದ್ರ, ಯಳಂದೂರಿನ ಶಿವಣ್ಣ, ಇತರೆ ಮುಖಂಡರು ಮಾತನಾಡಿ ಪೋಷಕರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮತ್ತು ಶಾಲೆಗಳು ನಿಯಮಬಾಹಿರವಾಗಿ ವಸೂಲಿ ಮಾಡುತ್ತಿರುವ ಶುಲ್ಕ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುತ್ತಿರುವ ಕನಿಷ್ಟ ವೇತನ, ಶಿಕ್ಷಣದ ಗುಣಮಟ್ಟ ಇನ್ನಿತರ ವಿಷಯಗಳನ್ನು ಸಭೆಯ ಗಮನಕ್ಕೆ ತಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಜಿನಾ ಮೆಲಾಕಿ, ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. /////////////////////////////////////////////////////////////////// ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಕಠಿಣ ಸಜೆ ಚಾಮರಾಜನಗರ, ಫೆ. 27- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷಗಳ ಕಠಿಣ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೊಳ್ಳೇಗಾಲ ತಾಲೂಕು ರಾಮಾಪುರದ ಪೆದ್ದನಪಾಳ್ಯ ಗ್ರಾಮದ ಪೆರಿಯಸ್ವಾಮಿ ಅಲಿಯಾಸ್ ಸೇಟು ಎಂಬಾತ 2015ರ ಮೇ 30ರಂದು ಅಪ್ತಾಪ್ತ ಬಾಲಕಿಯನ್ನು ತನ್ನ ಮೋಟಾರು ಬೈಕಿನಲ್ಲಿ ಅಪಹರಿಸಿ ತಮಿಳುನಾಡು ರಾಜ್ಯದ ವೆಳ್ಳಂಪಟ್ಟಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಪ್ರಕರಣ ವಿಚಾರಣೆ ನಡೆದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 366, 343, 376 ಹಾಗೂ ಪೋಕ್ಸೋ ಕಾಯಿದೆಯಡಿ 7 ವರ್ಷಗಳ ಕಠಿಣ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸಮಿತಿಗೆ ಪರಿಹಾರ ನೀಡಲು ಜಿಲ್ಲಾ ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ) ಎಸ್. ನಾಗರಾಜು ಅವರು ವಾದ ಮಂಡಿಸಿದ್ದರು. //////////////////////////////////////////////////////////////////////////////////////////////// ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡಿಸಿ: ಡಿಸಿ ಚಾಮರಾಜನಗರ, ಫೆ. 26 :- ಜಿಲ್ಲೆಯಲ್ಲಿ ಯುಐಡಿ ಆಧಾರ್ ಸಂಖ್ಯೆಯನ್ನು ಪಡಿತರಚೀಟಿಗಳಿಗೆ ಲಿಂಕ್ ಮಾಡಿಲ್ಲದ ಪಡಿತರ ಚೀಟಿದಾರರು ಮತ್ತು ಲಿಂಕ್ ಮಾಡಲು ಕೈಬಿಟ್ಟ ಹೋಗಿರುವ ಪಡಿತರ ಚೀಟಿಗಳ ಕುಟುಂಬದ ಸದಸ್ಯರ ಹೆಸರುಗಳನ್ನು ಕೂಡಲೇ ಪಡಿತರ ಚೀಟಿಗಳಿಗೆ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಬಿ.ರಾಮುರವರು ತಿಳಿಸಿದ್ದಾರೆ. ಯುಐಡಿ ಆಧಾರ್ ಸಂಖ್ಯೆಯನ್ನು ಜೋಡಿಣೆ ಮಾಡಿಲ್ಲದ ಪಡಿತರಚೀಟಿಗಳಿಗೆ ಪಡಿತರ ಪದಾರ್ಥಗಳು ಸ್ಥಗಿತಗೊಳ್ಳುವ ಸಂಭವವಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಆಹಾರ ನಿರೀಕ್ಷಕರ ಲಾಗಿನ್ ಮೂಲಕ ಪಡಿತರ ಚೀಟಿಗಳಿಗೆ ಯುಐಡಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು(ಲಿಂಕ್) ಅವಕಾಶ ಕಲ್ಪಿಸಲಾಗಿದೆ. ಯುಐಡಿ ಆಧಾರ್ ಸಂಖ್ಯೆ ಜೋಡಣೆ ಆಗಿಲ್ಲದ ಪಡಿತರ ಚೀಟಿಗಳಿಗೆ ಲಿಂಕ್ ಮಾಡಲು ಕೈಬಿಟ್ಟುಹೋಗಿರುವ ಪಡಿತರಚೀಟಿಗಳಲ್ಲಿನ ಕುಟುಂಬದ ಸದಸ್ಯರುಗಳಿಗೆ ಫೆಬ್ರವರಿ ಮಾಹೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಪಡಿತರ ಚೀಟಿದಾರರ ಪಟ್ಟಿಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಪಡಿತರ ಚೀಟಿದಾರರು ಪೂರ್ಣ ಪ್ರಮಾಣದ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಆಯಾಯ ತಾಲ್ಲೂಕು ಕಚೇರಿ ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////////////////////////////////////////////////////////////////////////////// ವಿಳಾಸ, ವಾಸಸ್ಥಳ ಬದಲು ಮಾಹಿತಿ ನೀಡಲು ಸೂಚನೆ : ಚಾಮರಾಜನಗರ, ಫೆ. 26- ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ವಾಸಸ್ಥಳ ಅಥವಾ ವಿಳಾಸ ಬದಲಾವಣೆಯಾಗಿದ್ದಲ್ಲಿ ಆಯಾಯ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ವಿಳಾಸದ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನೇರ ಹಣದ ಸಂದಾಯದ ಯೋಜನೆಯಡಿ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ ಬ್ಯಾಂಕ್ ಇಲ್ಲವೆ ಅಂಚೆ ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ವಾಸಸ್ಥಳ ಬದಲಾವಣೆಯಾಗಿದ್ದಲ್ಲಿ ಅದರ ವಿವರ, ಆಧಾರ್, ಬ್ಯಾಂಕ್, ಅಂಚೆ ಖಾತೆ ವಿವರ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೋಡಣೆಯ ಒಪ್ಪಿಗೆ ಪತ್ರದೊಂದಿಗೆ ಆಯಾಯ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಫೆಬ್ರವರಿ 28ರೊಳಗೆ ಖುದ್ದಾಗಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. //////////////////////////////////////////////////////////////////////////////////// ವಸ್ತು ಪ್ರದರ್ಶನ, ಮಾರಾಟ ಮೇಳ: ಮಹಿಳಾ ಉದ್ದಿಮೆದಾರರು ಸ್ವಸಹಾಯ ಗುಂಪಿನ ಸದಸ್ಯರಿಗೆ ಉಚಿತ ಮಳಿಗೆ ಚಾಮರಾಜನಗರ, ಫೆ. 26- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಉದ್ದಿಮೆದಾರರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ್ಥ ಆಯಾಯ ತಾಲ್ಲೂಕು ಮಟ್ಟದಲ್ಲಿ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ. ಚಾಮರಾಜನಗರ ತಾಲ್ಲೂಕಿನ ವಸ್ತುಪ್ರದರ್ಶನ ಮಾರಾಟ ಮೇಳವು ಚಾಮರಾಜನಗರದ ವಾಸವಿ ಮಹಲ್‍ನಲ್ಲಿ ಮಾರ್ಚಿ 10ರಿಂದ 12ರವರೆಗೆ ನಡೆಯಲಿದೆ. ಕೊಳ್ಳೇಗಾಲ ತಾಲ್ಲೂಕಿನ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವು ಕೊಳ್ಳೇಗಾಲ ಪಟ್ಟಣದ ಡಾ.ರಾಜುಕುಮಾರ್ ರಸ್ತೆಯಲ್ಲಿ ಕಲಾಮಂಟಪದಲ್ಲಿ ಮಾರ್ಚಿ 13ರಿಂದ 15ರವರೆಗೆ ನಡೆಯಲಿದೆ. ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳಾ ಉದ್ದಿಮೆದಾರರು, ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುತ್ತದೆ. ಆಸಕ್ತರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಾರ್ಚಿ 3ರೊಳಗೆ ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08226-222445, ಮೊ. 7338697341 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ////////////////////////////////////////////////////////////////////////////////////////////////////// ಫೆ. 28ರಂದುಸಂತೆಮರಹಳ್ಳಿಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಫೆ. 27 - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದÀ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರ ಸಮ್ಮುಖದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ಫೆಬ್ರವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಸಂತೆಮರಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ನಡೆಯಲಿದೆ. ನಾಗರಿಕರು ಕುಂದುಕೊರತೆ ಅಹವಾಲು ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿಲಾಗಿದೆ. ////////////////////////////////////////////////////////////// ಫೆ. 28ರಂದು ಸಂತೆಮರಹಳ್ಳಿಯಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಫೆ. 27 - ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ಫೆಬ್ರವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಸಂತೆಮರಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ನಡೆಯಲಿದೆ. ನಾಗರಿಕರು ಕುಂದುಕೊರತೆ ಅಹವಾಲು ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಪುರಂಧರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. /////////////////////////////////////////////////////////////////// ಮಾರ್ಚ್1ರಂದು ನಗರದಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಚಾಮರಾಜನಗರ, ಫೆ. 27 :- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದೊಂದಿಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 1ರಂದು ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ. ಎಂ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಧ ಸುಹೇಲ್ ಅಲಿಖಾನ್, ನಗರ ಸಭೆಯ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬ¸ವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದÀ ಪಿ.ಎನ್ ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಜಿ.ಜೆ ಕಾವೇರಿಯಪ್ಪ, ಮೈಸೂರಿನ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ಲಿಂಗರಾಜು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.. ////////////////////////////////////////////////////////////////////

Saturday, 25 February 2017

ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! ಹರೀಶ್ ಯೋಜನೆ ಮಾನವೀಯತೆ ಮೆರೆದ ಶಾಸಕ .ಇಂತಿ… ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! .

… ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾಗಿ ಈ ಸುದ್ದಿ ಪ್ರಕಟಿಸುತ್ತಿಲ್ಲ. ಇದರಲ್ಲಿ ನನ್ನ ಸ್ವಾರ್ಥವೂ ಇದೆ ಅದಕ್ಕಾಗಿ ಇದನ್ನು ಪ್ರಕಟಿಸಬೇಕಾಗಿದೆ. ಪೆಬ್ರವರಿ 19 ರಂದು ನಾನು ಪ್ರೀಡಂ ಪಾರ್ಕ್ ಅಲ್ಲಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದ್ದೆ ಅದರಲ್ಲಿ ಹರೀಶ್ ಯೋಜನೆ ಒಂದಾಗಿದೆ. ಇದನ್ನು ಪ್ರಕಟಿಸಿ ನನ್ನ ಸ್ವಾರ್ಥ ಎಂದರೂ ಪರವಾಗಿಲ್ಲ ಎಂದು ನಾನೇ ಹೇಳಿಕೊಂಡು ಬರೆಯುತ್ತಿದ್ದೇನೆ. ಕಾರಣವಿಷ್ಟೇ ಎಷ್ಟೋ ಅರೆಬರೆ ಪತ್ರಕರ್ತರು ಕಾಸಿಗಾಗಿ ಸುದ್ದಿ ಮಾಡಿ ರಾಜಕಾರಣಿಗಳ ಅಭಿವೃದ್ದಿ ಬಗ್ಗೆ ಗಮನ ಸೆಳೆಯುತ್ತಾರೆ.ಆದರೆ ಇವೆಲ್ಲವನ್ನು ಬರೆಯುವ ನಿಟ್ಟಿನಲ್ಲಿ ಅವರೊಬ್ಬರಲ್ಲಿ ನನ್ನನ್ನು ಕಾಣಬೇಡಿ.. ಎಂಬುದಷ್ಟೇ ಸತ್ಯ ಘಟನೆ: - ಇಂದು (25) ಸರಿಸುಮಾರು 2 ರ ಸಮಯದಲ್ಲಿ ದೊಡ್ಡರಾಯಪೇಟೆ ಆಲೂರು ಮಾರ್ಗದತ್ತ ಆಟೋ ಸ್ಕೂಟರ್ ನಡುವೆ ಅಪಘಾತವಾಗಿ ನಡೆಯಿತು. ಆಗ ವಾಹನದಲ್ಲ್ಲಿದ್ದ ಗಾಯಾಳುಗಳು ನರಳಾಡುತ್ತಿದ್ದರೂ ಯಾರು ಇತ್ತ ಬರಲಿಲ್ಲ. ಅದೇ ಸಂದರ್ಭದಲ್ಲಿ ನಮ್ಮೂರ ಶಾಸಕರು (ಪುಟ್ಟರಂಗಶೆಟ್ಟಿ) ಅವರು ಅದೇ ಮಾರ್ಗದಲ್ಲಿ ತಮ್ಮ ಊರಿನತ್ತ ಹೋಗುತ್ತಿದ್ದಾಗ ಸ್ವತಃ ಅವರ ಹೋಗುವ ವಾಹನದಲ್ಲೇ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿಸಿ ಸ್ವಲ್ಪ ಹಣವನ್ನೂ ನೀಡಿ ತಮ್ಮ ಮುಂದಿ ನ ಕಾಯಕದತ್ತ ಹೊರಟರು. ಇದರಲ್ಲಿ ಒಂದು ತಿಳಿಯಿರಿ ಸರ್ಕಾರ ಕೋಟಿ ಹಣ ಖರ್ಚು ಮಾಡಿ ಹರೀಶ್ ಯೋಜನೆ ಬಗ್ಗೆ ತಿಳಿಸಿದರೂ ಎಷ್ಟೋ ಜನರು ಸೆಲ್ಪಿ ಗೀಳಿಗಾಗಿ ಮಾನವೀಯತೆ ಮರೆಯುತ್ತಿರುವ ಈ ಕಾಲದಲ್ಲಿ ನಮ್ಮೂರ ಶಾಸಕರು (ಪುಟ್ಟರಂಗಶೆಟ್ಟಿ) ಸ್ವಲ್ಪ ಮಾನವೀಯತೆ ಮೆರೆದು ಯೋಜನೆ ಬಗ್ಗೆ ಗೌರವ ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು….ಇಷ್ಟ ಆದರೆ ಶೇರ್ ಮಾಡಿ………………….ಇಂತಿ… ರಾಮಸಮುದ್ರ ಎಸ್.ವೀರಭದ್ರಸ್ವಾಮಿ

23/24-02-2015 .ಚಾಮರಾಜನಗರ -(ಪತ್ನಿ ಸಾವಿಗೆ ಕಾರಣರಾದ ಪತಿ, ಭಾವನಿಗೆ ಸಜೆ,ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಲು ಕರೆ : ಎಂ ರಾಮಚಂದ್ರ)

ಪತ್ನಿ ಸಾವಿಗೆ ಕಾರಣರಾದ ಪತಿ, ಭಾವನಿಗೆ ಸಜೆ ಚಾಮರಾಜನಗರ, ಫೆ. 23 - ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಆಕೆ ಆತ್ನಹತ್ಯೆ ಮಾಡಿಕೊಳ್ಳಲು ಕಾರಣರಾದ ಪತಿ ಹಾಗೂ ಆಕೆಯ ಭಾವನಿಗೆ ಸಜೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಗ್ರಾಮದ ಜ್ಯೋತಿ ಎಂಬುವರನ್ನು ಗುಂಡ್ಲುಪೇಟೆ ತಾಲೂಕು ಕುಂದಗೆರೆ ಗ್ರಾಮದ ಶಿವಶಂಕರಪ್ಪ ಎಂಬುವರೊಂದಿಗೆ 2003ರ ಜೂನ್ 20ರಂದು ವಿವಾಹ ಮಾಡಿಕೊಡಲಾಗಿತ್ತು. ಶಿವಶಂಕರಪ್ಪ ಹಾಗೂ ಈತನ ಅಣ್ಣ ಈಶ್ವರಪ್ಪ ಅವರು ಜ್ಯೋತಿ ಅವರಿಗೆ ತಂದೆ ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅಪ್ಪನ ಮನೆಗೆ ಹೋಗುವಂತೆ ಹೊಡೆದು ಬೈದು ಹಿಂಸೆ ನೀಡುತ್ತಿದ್ದರು. 2011ರ ಮೇ 10ರಂದು ಸಂಜೆ 5 ಗಂಟೆ ಸಮಯದಲ್ಲಿ ಜ್ಯೋತಿ ಅವರ ಗಂಡ ಮತ್ತು ಭಾವ ಗಲಾಟೆ ಮಾಡಿದ್ದರಿಂದ ಅದೇ ದಿನ ಸಂಜೆ 6 ಗಂಟೆ ವೇಳೆಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಜ್ಯೋತಿ ಬೆಂಕಿ ಹಚ್ಚಿಕೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ 2011ರ ಮೇ 11ರಂದು ಮೃತಪಟ್ಟಿದ್ದರು. ಈ ಪ್ರಕರಣ ವಿಚಾರಣೆ ನಡೆದು ಜ್ಯೋತಿ ಅವರ ಪತಿ ಶಿವಶಂಕರಪ್ಪ ಹಾಗೂ ಭಾವ ಈಶ್ವರಪ್ಪ ಆಕೆಗೆ ದೈಹಿಕ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಶಿವಶಂಕರಪ್ಪನಿಗೆ 4 ವರ್ಷಗಳ ಸಜೆ ಹಾಗೂ ಒಂದು ಸಾವಿರದ ಐದುನೂರು ರೂ. ದಂಡ ಮತ್ತು ಈಶ್ವರಪ್ಪನಿಗೆ ಎರಡೂವರೆ ವರ್ಷಗಳ ಸಜೆ ಹಾಗೂ 1500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ----------------------------------------------------- ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಲು ಕರೆ : ಎಂ ರಾಮಚಂದ್ರ ದಿ ಹಿಂದೂ ಪತ್ರಿಕೆ ವತಿಯಿಂದ ಎಸೆಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರ ಚಾಮರಾಜನಗರ: ಫೆ-25 : ವಿದ್ಯಾರ್ಥಿಗಳ ಜೀವನದಲ್ಲಿ ಎಸ್‍ಎಲ್‍ಸಿ ತರಗತಿ ಪ್ರಮುಖವಾದ ಮೈಲಿಗಲ್ಲು. ಇದರಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳಿಸಿದರೆ ಮಾತ್ರ ಉನ್ನತ ವ್ಯಾಸಾಂಗ ಮಾಡಬಹುದು. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು ಕ್ರೀಯಾಶೀಲರಾಗಬೇಕೆಂದು ಜಿಲ್ಲಾ ಪಂಚಾಯತಿ ಅದ್ಯಕ್ಷ ಎಂ.ರಾಮಚಂದ್ರು ಕರೆ ನೀಡಿದರು. ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದಿ ಹಿಂದೂ ಪತ್ರಿಕೆ ಹಾಗು ಮಂಗಳೂರಿನ ವಿಕಾಸ್ ಫ್ರೀ ಯೂನಿರ್ವಸಿಟಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದÀ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದೆ. ಯಾವುದೆ ಉನ್ನತ ವ್ಯಾಸಂಗ ಹಾಗು ಉನ್ನತ ಹುದ್ದೆಗೆ ಹೊಗಲು ಹೆಚ್ಚು ಅಂಕಗಳಿಕೆ ಮಾನದಂಡವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಪರಿಕ್ಷೇಯಲ್ಲಿ ಯಶಸ್ಸು ಕಾಣಬೇಕೆಂದು ಸಲಹೆ ನೀಡಿದರು. ಪ್ರತಿಷ್ಟಿತ ದಿ ಹಿಂದೂ ರಾಷ್ಟೀಯ ದಿನಪತ್ರಿಕೆ ಹಲವು ಒತ್ತಡಗಳ ನಡುವೆಯೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಇಂತಹ ಕಾರ್ಯಾಗಾರ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಗಲಾಡಿಸಲು ವಿದ್ಯಾರ್ಥಿಗಳು ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು. ದಿ ಹಿಂದೂ ಪತ್ರಿಕೆಯ ರೀಜಿನಲ್ ಮ್ಯಾನೇಜರ್ ಜಿ.ಆರ್.ವೆಂಕಟೇಶ್ ಮಾತನಾಡಿ 1878 ರಲ್ಲಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕೆಂಬ ಉದ್ದೇಶದಿಂದ ಆರು ಜನರಿಂದ ಪ್ರಾರಂಭಗೊಂಡ ಈ ಪತ್ರಿಕೆ ಬೃಹದಾಕಾರವಾಗಿ ಬೆಳೆದು 3 ಸಾವಿರ ಸಿಬ್ಬಂದಿಗಳು ಹೊಂದಿದೆ. ಈ ಪತ್ರಿಕೆ ವಿವಿಧ ಕ್ಷೇತ್ರಗಳ ಸಮಗ್ರ ವರದಿಯನ್ನು ನೀಡುತ್ತಾ ಬಂದಿದ್ದು ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಧನ್ಯತೆ ನೀಡಿ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಅತ್ಯುತ್ತಮ ಲೇ ಖನಗಳನ್ನು ನೀಡುತ್ತಾ ಬಂದಿದೆ ಎಂದರು. ದೃಶ್ಯ ಮಾಧ್ಯಮ, ಇಂಟರ್‍ನೆಟ್, ಮೋಬೈಲ್ ಇನ್ನಿತರ ಆಧುನಿಕ ತಂತ್ರಜಾÐನ ಬೆಳೆದಿದ್ದರು ಕೂಡಾ ಅದು ಕಣ್ಣಿಗೆ ಮಾತ್ರ ಕೆಲಸ ನೀಡುತ್ತಿದ್ದು ಮೆದುಳಿಗೆ ಕೆಲಸ ನೀಡುತ್ತಿಲ್ಲ. ಪತ್ರಿಕೆಗಳು ಹಾಗು ಪುಸ್ತಕಗಳು ಮನುಷ್ಯನ ಜಾÐಪಕ ಶಕ್ತಿ, ಜಾÐನ, ಮತ್ತು ವಿಮರ್ಶೆ ಮಾಡಲು ವಿಫಲವಾದ ಅವಕಾಶಗಳಿವೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕೆಂದು ತಿಳಿಸಿದರು. ಕಾರ್ಯಾಗಾರದ ಅದ್ಯಕ್ಷತೆ ವಹಿಸಿದ್ದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ರಮೇಶ್ ಮಾತನಾಡಿ ವಿದ್ಯಾರ್ಥಿಗಳು ಪತ್ರಿಕೆಯನ್ನು ಓದುವುದನ್ನು ಕಲಿಯಬೇಕು. ಏಕೆಂದರೆ ನೆರೆಯ ಕೇರಳ ಹಾಗು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಪತ್ರಿಕೆ ಓದುವುದರಿಂದ ಉನ್ನತ ವ್ಯಾಸಾಂಗ ಹಾಗು ಉನ್ನತ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಆ ರಾಜ್ಯಗಳಲ್ಲಿ ಪಿಸಿಎಂಬಿ ಗೆ 200 ಅಂಕಗಳಿದ್ದರೆ ನಮ್ಮ ರಾಜ್ಯದಲ್ಲಿ 70 ರಿಂದ 80 ಅಂಕಗಳಿವೆ ಇದರಿಂದ ಕರ್ನಾಟಕದ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಇಂಗ್ಲೀಷ್ ಅಥವ ಕನ್ನಡದಲ್ಲಿ ಗುರಿ ತಲುಪಲು ಸಾದ್ಯವಾಗದೆ ಭವಿಷ್ಯ ಡೋಲಾಯಮಾನವಾಗಿದೆ ಎಂದು ಎಚ್ಚರಿಸಿದರು. ಹಿಂದೂ ಪತ್ರಿಕೆ ಸಂಸ್ಥೆಯವರು ಕೈಗೊಂಡಿರುವ ಈ ಕಾರ್ಯಾಗಾರವನ್ನು ವಿದ್ಯಾರ್ಥೀಗಳು ಸಧ್ಭಳಕೆ ಮಾಡಕೊಂಡು ಹೆಚ್ಚು ಅಂಕಗಳಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಮಂಗಳೂರು ವಿಕಾಸ ಕಾಲೇಜಿನ ವೆಲ್‍ಫೇರ್ ಆಫೀಸರ್ ಶ್ರುತಿ ಭಂಡಾರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಅಲ್ಲದೆ ಸಿಗ್ಮಾ ಇಂಡಿಯಾ ಬೆಂಗಳೂರು ಸಂಸ್ಥೆಯ ತರಬೇತುದಾರ ಹರಾಮ್ ಫರಾಜ್ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಉತ್ತಮ ಕೇಳಿದ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ---------------------------------------- ಫೆ. 24ರಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ ಚಾಮರಾಜನಗರ, ಫೆ. 23 :- ಕನ್ನಡ ಪುಸ್ತಕರ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ ಅವರು ಫೆಬ್ರವರಿ 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಆಗಮಿಸುವರು. ನಂತರ ಮಲೆಮಹದೇಶ್ವರ ಬೆಟ್ಟದ ಸಂಸ್ಥೆಯ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದವರು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡುವರು. ಫೆಬ್ರವರಿ 25ರಂದು ಬೆಳಿಗ್ಗೆ 10.30 ಗಂಟೆಗೆ ಚಿತ್ರದುರ್ಗಕ್ಕೆ ತೆರಳುವರು ಎಂದು ಪ್ರಾಧಿಕಾರದ ಆಡಳಿತಾಧಿಕಾರಿಯವರು ತಿಳಿಸಿದ್ದಾರÉ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಚಾಮರಾಜನಗರ, ಫೆ. 23- ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕದಲ್ಲಿ ಪೋಲ್ ಸೆಟ್ ಎಸಿಪಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ, ದೇಹದಾಡ್ರ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳಲ್ಲಿ ಅರ್ಹರಾದ 25 ಜನ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನಗರÀದ ಜಿಲ್ಲಾ ಪೊಲೀಸ್ ಕಚೇರಿಯ ಪ್ರಕಟಣಾ ಫಲಕದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 25, 26ರಂದು ಮಹದೇಶ್ವರ ಬೆಟ್ಟದಲ್ಲಿ ಜನಪರ ಉತ್ಸವ ಚಾಮರಾಜನಗರ, ಫೆ. 23:- ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಫೆಬ್ರವರಿ 25 ಹಾಗೂ 26ರಂದು ಜನಪರ ಉತ್ಸವ ಕಾರ್ಯಕ್ರಮವನ್ನು ಕೊಳ್ಳೇಗಾಲ ತಾಲೂಕಿನ ಮಹದೇಶ್ವರಬೆಟ್ಟದಲ್ಲಿ ಹಮ್ಮಿಕೊಂಡಿದೆ. ಫೆಬ್ರವರಿ 25ರಂದು ಸಂಜೆ 4 ಗಂಟೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಜನಪರ ಉತ್ಸವಕ್ಕೆ ಚಾಲನೆ ನೀಡುವರು. ಹನೂರು ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸಲಿದ್ದು ಸಾಲೂರು ಬೃಹನ್ಮಠ ಅಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೊಳ್ಳೇಗಾಲ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಸ್. ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಮಾರ್ಟಳ್ಳಿ ಜಿ.ಪಂ. ಸದಸ್ಯರಾದ ಇಶ್ರತ್ ಬಾನು, ಮಹದೇಶ್ವರ ಬೆಟ್ಟ ತಾ.ಪಂ. ಸದಸ್ಯರಾದ ಹಲಗತಂಬಡಿ, ಮಹದೇಶ್ವರ ಬೆಟ್ಟ ಗ್ರಾ.ಪಂ. ಅಧ್ಯಕ್ಷರಾದ ರುಕ್ಮಿಣಿ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಾದ ಕೆ.ಎ. ದಯಾನಂದ, ಜಂಟಿ ನಿರ್ದೇಶಕ (ಆಡಳಿತ)ರಾದ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಫೆಬ್ರವರಿ 25ರ ಕಾರ್ಯಕ್ರಮಗಳು- ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡ - ಸುಗಮ ಸಂಗೀತ, ರಾಮಸಮುದ್ರದ ಜಿ. ರಾಜಪ್ಪ ಮತ್ತು ತಂಡ – ಜನಪದ ಗೀತೆ, ಮಂಗಲದ ಶ್ರೀ ಶಂಕರೇಶ್ವರ ನಾಟಕ ಕಲಾತಂಡ – ರಂಗಗೀತೆ, ಸೋಮಹಳ್ಳಿಯ ಎಸ್.ಬಿ. ನಾಗರಾಜು ಮತ್ತು ತಂಡ – ಭಕ್ತಿಗೀತೆಗಳು, ಕಲಕಲ ಮಾದಹಳ್ಳಿಯ ಬಸವರಾಜಯ್ಯ ಮತ್ತು ತಂಡ – ತಂಬೂರಿ ಪದ, ಯಳಂದೂರಿನ ಶಾಂತರಾಜು ಮತ್ತು ತಂಡ – ಜನಪದ ಹಾಡು, ಹೊಂಗನೂರಿನ ಕೆಂಪರಾಜು ಮತ್ತು ತಂಡ – ಸಂಗೀತ ಸಂಜೆ, ಯಳಂದೂರಿನ ಬಸವರಾಜಯ್ಯ ಮತ್ತು ತಂಡ – ಭಜನೆ, ಗಾಳಿಪುರದ ಮಹದೇವಮ್ಮ ಮತ್ತು ತಂಡ ಹಾಗೂ ಯರಿಯೂರಿನ ಮಾಳಗರಸಮ್ಮ ಮತ್ತು ತಂಡ - ಸೋಬಾನೆ ಪದ, ನಂಜುಂಡಸ್ವಾಮಿ, ರಾಮಣ್ಣ, ನಾಗರಾಜು, ನಾಗರಾಜು, ವೆಂಕಟರಮಣಸ್ವಾಮಿ, ಆರ್.ಎಂ. ಚೆಲ್ಲಪ್ಪ - ಪೌರಾಣಿಕ ನಾಟಕ ಪದಗಳು, ಚಾಮರಾಜನಗರದ ಮಹದೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ದಕ್ಷಯಜ್ಞ ಪೌರಾಣಿಕ ನಾಟಕ, ಹರದನಹಳ್ಳಿಯ ಮರಿಯಮ್ಮ ಮತ್ತು ತಂಡದಿಂದ ಜನಪದ ಹಾಡು ಏರ್ಪಟ್ಟಿದೆ. ಫೆಬ್ರವರಿ 26ರ ಕಾರ್ಯಕ್ರಮಗಳು- ಯಳಂದೂರಿನ ಆರ್. ಮಹೇಂದ್ರ ಮತ್ತು ತಂಡ, ಸಿದ್ದಯ್ಯನಪುರದ ಎಸ್.ಜಿ. ಮಹಾಲಿಂಗಸ್ವಾಮಿ ಮತ್ತು ತಂಡ – ಸುಗಮ ಸಂಗೀತ, ರಾಮಸಮುದ್ರದ ಪಿ.ಮಹೇಶ್ ಮತ್ತು ತಂಡ, ಕೆಸ್ತೂರಿನ ನಾಗರಾಜು ಮತ್ತು ತಂಡ – ಜನಪದ ಗೀತೆ, ಜ್ಯೋತಿಗೌಡನಪುರದ ಜಿ.ಬಿ. ಮಹೇಶ್ ಮತ್ತು ತಂಡ – ಭಕ್ತಿಗೀತೆಗಳು, ವೈಕೆ ಮೋಳೆಯ ದೊಡ್ಡರಂಗಯ್ಯ ಮತ್ತು ತಂಡ – ತತ್ವಪದ, ಬಾಚಹಳ್ಳಿಯ ಮಾದೇಶ್ ಮತ್ತು ತಂಡ - ಹರಿಕಥೆ, ಯಾಚೇನಹಳ್ಳಿಯ ಚನ್ನಾಜಮ್ಮ ಮತ್ತು ತಂಡ – ರಾಗಿಕಲ್ಲಿನ ಪದ, ದೊಡ್ಡರಾಯಪೇಟೆಯ ಪಿ. ಮಹದೇವಮ್ಮ ಮತ್ತು ತಂಡ - ಸೋಬಾನೆ ಪದ, ಯಳಂದೂರಿನ ಮಲೆಮಹದೇಶ್ವರ ಸೋಬಾನೆ ಕಲಾತಂಡದಿಂದ ಮಹದೇಶ್ವರ ಹಾಡು, ಅಂಬಳೆ ಸಿದ್ದರಾಜು, ನಾಗಮಹದೇವ, ನಾರಾಯಣಿ, ಯಡಿಯೂರು ಮಹದೇವ, ಶಿವಣ್ಣ, ಪ್ರಕಾಶ್, ಎಸ್. ಮಂಜು ಇವರಿಂದ ಜನಪದ ಗೀತೆಗಳು, ಕೊಳ್ಳೇಗಾಲದ ಲೋಕೇಶ್ ಮತ್ತು ತಂಡದಿಂದ ಸಂಗೀತ ಸಂಜೆ, ಕಮಲಾಪುರದ ಮಹದೇವಸ್ವಾಮಿ ಮತ್ತು ತಂಡದಿಂದ ಜನಪದ ಹಾಡು, ಕೆ. ಬಸವಾಪುರದ ಬಿ.ಎಂ. ಲಿಂಗರಾಜು ಮತ್ತು ತಂಡದಿಂದ ತಮಟೆ ವಾದನ, ಕೊಳ್ಳೇಗಾಲದ ಕೃಷ್ಣಮೂರ್ತಿ ಮತ್ತು ತಂಡದಿಂದ ಜನಪದ ಗೀತೆ ಹಾಗೂ ಅರಳೀಪುರದ ಪುಟ್ಟಸಿದ್ದಮ್ಮ ಮತ್ತು ತಂಡದಿಂದ ರಾಗಿಕಲ್ಲಿನ ಪದ ಗಾಯನ ಕಾರ್ಯಕ್ರಮ ನಡೆಯಲಿದೆ. ಫೆ. 25ರಂದು ನೇರ ಫೋನ್ ಇನ್ ಕಾರ್ಯಕ್ರಮ ಚಾಮರಾಜನಗರ, ಫೆ. 23- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 25ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಜಿಲ್ಲಾ ಸೈನಿಕ ಮಂಡಳಿ ಸಭೆ : ಕುಂದುಕೊರತೆ ಅರ್ಜಿ ಸ್ವೀಕಾರ ಚಾಮರಾಜನಗರ, ಫೆ. 23- ಜಿಲ್ಲಾ ಸೈನಿಕ ಮಂಡಳಿ ಸಭೆಯು ಸಧ್ಯದಲ್ಲೇ ಮೈಸೂರಿನಲ್ಲಿ ಅಲ್ಲಿನ ಜಿಲ್ಲಾಧಿಕಾರಿಯವರು ನಡೆಸಲಿದ್ದು ಕುಂದುಕೊರತೆಗಳಿದ್ದಲ್ಲಿ ಆ ಸಂಬಂಧ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾಜಿ ಸೈನಿಕರು ಹಾಗೂ ಅವಲಂಬಿತರು ಅಂದಿನ ಸಭೆಯಲ್ಲಿ ಚರ್ಚಿಸಲು ಇಚ್ಚಿಸುವ ಕುಂದುಕೊರತೆ ಅರ್ಜಿಯನ್ನು ದ್ವಿಪ್ರತಿಯಲ್ಲಿ ಫೆಬ್ರವರಿ 28ರೊಳಗೆ ಮೈಸೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಫೆ. 27ರಂದು ಚಾ.ನಗರ ಆಯವ್ಯಯ ಸಭೆ ಚಾಮರಾಜನಗರ, ಫೆ. 23- ಚಾಮರಾಜನಗರ ನಗರಸಭೆಯ 2016-17ನೇ ಸಾಲಿನ ಪರಿಷ್ಕøತ ಹಾಗೂ 2017-18ನೇ ಸಾಲಿನ ಅಂದಾಜು ಆಯವ್ಯಯ ಸಭೆಯನ್ನು ನಗರಸಭಾ ಅಧ್ಯಕ್ಷರಾದ ಎಸ್.ಎನ್. ರೇಣುಕ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 27ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ. ಯಳಂದೂರು : ವಿವಿಧ ಕೌಶಲ ತರಬೇತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 23- ಯಳಂದೂರು ಪಟ್ಟಣ ಪಂಚಾಯಿತಿಯು ನಲ್ಮ್ ಯೋಜನೆಯಡಿ ವಿವಿಧ ಕೌಶಲ್ಯ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸ್ಪೋಕನ್ ಇಂಗ್ಲೀಷ್ ಮತ್ತು ಸಾಫ್ಟ್ ಸ್ಕಿಲ್, ಕಮ್ಯುನಿಕೇಷನ್ ಸ್ಕಿಲ್, ಬೇಸಿಕ್ ಎಂಬೇಡೆಡ್ ಸಿಸ್ಟಂ ಕೋರ್ಸ್, ಅಡ್ವಾನ್ಸ್‍ಡ್ ಎಂಬೇಡೆಡ್ ಸಿಸ್ಟಂ ಕೋರ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೇಟೆನೆನ್ಸ್ ಆಫ್ ಮೊಬೈಲ್ ಫೋನ್ ತರಬೇತಿಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಳಗಿರಬೇಕು. ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿದ್ದು 18 ರಿಂದ 35ರ ವಯೋಮಿತಿಯೊಳಗಿರಬೇಕು. ಬಿಪಿಎಲ್ ಕುಟುಂಬಕ್ಕೆ ಸೇರಿದವರಾಗಿರಬೇಕು. ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಫೆಬ್ರವರಿ 28ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಚೇರಿಯ ಸಂಬಂಧಪಟ್ಟ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೋತ್ಸಾಹಧನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಾಮರಾಜನಗರ, ಫೆ. 23- 2015-16ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಜನವರಿ 25 ಕಡೆಯ ದಿನವೆಂದು ತಿಳಿಸಲಾಗಿತ್ತು. ಆದರೆ ಹಲವಾರು ವಿಶ್ವವಿದ್ಯಾಲಯಗಳ ಫಲಿತಾಂಶ ಇನ್ನೂ ಪ್ರಕಟವಾಗದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಫೆಬ್ರವರಿ 28ರವರೆಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನೋಡುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ. ಇಬ್ಬರು ಬಾಲಕಿಯರು ಕಾಣೆ : ಸುಳಿವು ನೀಡಲು ಮನವಿ ಚಾಮರಾಜನಗರ, ಫೆ. 23 ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಬಾಲಮಂದಿರದಲ್ಲಿ ಇದ್ದ ಪ್ರಿಯಾ ಹಾಗೂ ಗೌರಿ ಎಂಬ ಇಬ್ಬರು ಬಾಲಕಿಯರು ನಗರದ ಪಿಡಬ್ಲ್ಯೂಡಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಜನವರಿ 22ರಂದು ಬೆಳಿಗ್ಗೆ 9.45ಕ್ಕೆ ಶಾಲೆಗೆ ಕಚೇರಿ ಸಿಬ್ಬಂದಿ ಬಿಟ್ಟುಬಂದಿದ್ದರು. ಆದರೆ ಶಾಲೆ ಪ್ರಾರಂಭವಾಗುವ ಮೊದಲೇ ಈ ಇಬ್ಬರೂ ಬಾಲಕಿಯರು ಕಾಣೆಯಾಗಿದ್ದಾರೆಂದು ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ. 14 ವರ್ಷದ ಪ್ರಿಯಾ ಕಪ್ಪು ಬಣ್ಣ, ಗುಂಡುಮುಖ ಹೊಂದಿದ್ದು ಕೆಂಪುಬಣ್ಣದ ಚೂಡಿದಾರ್ ಧರಿಸಿದ್ದಾರೆ. 13 ವರ್ಷದ ಗೌರಿ ಕಪ್ಪು ಬಣ್ಣ ದುಂಡುಮುಖ ಹೊಂದಿದ್ದು ಆಕಾಶನೀಲಿ ಬಣ್ಣದ ಷರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ. ಈ ಬಾಲಕಿಯರ ಬಗ್ಗೆ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆ ಇಲ್ಲವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಹಾಗೂ ಪರಿವೀಕ್ಷಣಾಧಿಕಾರಿ (ದೂ.ಸಂ. 08226-225711)ಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಫೆ. 26ರಂದು ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಚಿಕಿತ್ಸೆ ಶಿಬಿರ ಚಾಮರಾಜನಗರ, ಫೆ. 23- ತಾಲೂಕಿನ ಹೊಂಡರಬಾಳುವಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಫೆಬ್ರವರಿ 26ರಂದು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ ಏರ್ಪಾಡು ಮಾಡಲಾಗಿದೆ. ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ಯಾರ್ಥಿಗಳೇ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಶಿಬಿರದಲ್ಲಿ ನವೋದಯ ವಿದ್ಯಾಲಯ ವಿದ್ಯಾರ್ಥಿಗಳ ಜತೆಗೆ ಹೊಂಡರಬಾಳು, ನಲ್ಲೂರು, ನಾಗವಳ್ಳಿ, ಜ್ಯೋತಿಗೌಡನಪುರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಹಾಗೂ ನವೋದಯ ಬಳಿ ಇರುವ ಸೋಲಿಗ ಮಕ್ಕಳ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಆರೋಗ್ಯ ಚಿಕಿತ್ಸಾ ಶಿಬಿರ ಸೌಲಭ್ಯ ದೊರೆಯಲಿದೆ. ಪೋಷಕರು ಶಿಕ್ಷಕರು ಬಂದು ಶಿಬಿರದ ಪ್ರಯೋಜನ ಪಡೆಯಬಹುದು. ಎಲುಬು ಕೀಲುಗಳ ವೈದ್ಯರು, ಮಹಿಳೆಯರ ಸಮಸ್ಯೆ, ಚರ್ಮರೋಗ, ಫಿಜಿಸಿಯನ್ ಸೇರಿದಂತೆ ಇನ್ನಿತರ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು ಅಗತ್ಯವೆನಿಸಿದಲ್ಲಿ ಔಷಧಿ ಕೂಡ ಉಚಿತವಾಗಿ ವಿತರಿಸುವರೆಂದು ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಡೇನಿಯಲ್ ರತ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಒಂದು ಮನವಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ 1450 ಚದರ ಕಿಮೀ ಮತ್ತು ಮೈಸೂರು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ 2791 ಚದರ ಕಿಮೀ ಇರುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಿ.ಆರ್.ಟಿ. ಹುಲಿ ರಕ್ಷಿತಾ ಪ್ರದೇಶ, ಬಂಡಿಪುರ ಹುಲಿ ರಕ್ಷಿತಾ ಪ್ರದೇಶ, ಕಾವೇರಿ ವನ್ಯಜೀವಿ ವಿಭಾಗ ಮತ್ತು ಮಲೈಮಹಾದೇಶ್ವರ ವನ್ಯಜೀವಿ ವಿಭಾಗಗಳು ಒಳಗೊಂಡು ಅರಣ್ಯದಿಂದ ಈ ಜಿಲ್ಲೆ ಸಂಪತ್‍ಭರಿತವಾಗಿದೆ. ಭಾರತ ದೇಶದಲ್ಲೇ ಅತೀ ಹೆಚ್ಚು ಹುಲಿಯನ್ನು ಹೊಂದಿರುವ ಕೀರ್ತಿ ನಮ್ಮ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಇರುತ್ತದೆ. ಈ ಅರಣ್ಯ ಸಂಪತ್ತನ್ನು, ಅರಣ್ಯದಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಗಳನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಕೈಯಲ್ಲಿ ಇರುತ್ತದೆ. ಆದರೆ ಇತ್ತೀಚೆಗೆ ಬಂಡೀಪುರ ಅರಣ್ಯ ಪ್ರದೇಶ ಮತ್ತು ಬಿ.ಆರ್.ಟಿ. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿದೆ ಅನೇಕ ಪ್ರಾಣಿ-ಪಕ್ಷಿಗಳು-ಜಂತುಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೇ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿದ್ದ ಅರಣ್ಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಅನೇಕ ಸಿಬ್ಬಂದಿಗಳು ಬೆಂಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಡಿಗೆ ಬೆಂಕಿ ಬೀಳಲು ಕಾರಣವನ್ನು ಹುಡಿಕಿದ ಸಂದರ್ಭದಲ್ಲಿ, ಕಿಡಿಗೇಡಿಗಳು ಈ ಕೃತ್ಯವನ್ನು ಮಾಡಿರುವ ಬಗ್ಗೆ ಶಂಕೆ ಇರುತ್ತದೆ. ಅಲ್ಲದೇ ಅರಣ್ಯ ಇಲಾಖಾಧಿಕಾರಿಗಳ ಮೇಲಿನ ವೈಷಮ್ಯದಿಂದ ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಇಡುವುದರ ಮೂಲಕ ನಮ್ಮ ಜಿಲ್ಲೆಯ ಅರಣ್ಯ ಸಂಪತ್ತನ್ನು ಮತ್ತು ಮೂಕ ಪ್ರಾಣಿ-ಪಕ್ಷಿ-ಜಂತುಗಳನ್ನು ನಾಶಮಾಡುತ್ತಿರುವುದು ವಿಶಾದನೀಯ. ಬೆಂಕಿ ನಂದಿಸುವ ಕಾರ್ಯವನ್ನು ಹಗಲಿರುಳೂ ಬಹಳ ಶ್ರಮದಿಂದ ಮಾಡುತ್ತಿದ್ದರೂ ಸಹಾ ಇನ್ನೂ ನಿಯಂತ್ರಣಕ್ಕೆ ಬಂದಿರುವುದಿಲ್ಲ. ಸಾರ್ವಜನಿಕರಿಗೆ ಉತ್ತಮ ಪರಿಸರ, ಮಳೆ, ಹವ ಇತ್ಯಾದಿಗಳ ಪೂರೈಕೆಗೆ ಕಾರಣವಾದ ಅರಣ್ಯವನ್ನೇ ಈ ರೀತಿ ನಾಶ ಮಾಡಿದರೆ ಮುಂದಿನ ಪೀಳಿಗೆಯವರು ಯಾವ ರೀತಿ ಸಂಕಷ್ಟದಲ್ಲಿ ಬದುಕಬಹುದು ಎಂದು ಊಹಿಸಬಹುದಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಹಗಲಿರುಳು ಶ್ರಮಪಡುತ್ತಿರುವ ಅರಣ್ಯ ಇಲಾಖಾ ಅಧಿಕಾರಿಗಳ/ಸಿಬ್ಬಂದಿಗಳ ಸೇವಾ ಮನೋಭಾವಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅರಣ್ಯ ಇಲಾಖೆಗೆ ಅಗತ್ಯ ಸಿಬ್ಬಂದಿಗಳನ್ನು ತುಂಬುವ ಕಾರ್ಯಕ್ಕೆ ಸರ್ಕಾರಕ್ಕೆ ಒತ್ತಡ ತರುತ್ತೇನೆ. ನಮ್ಮ ಆಸ್ತಿಯಾದ ಅರಣ್ಯ ಸಂಪತ್ತನ್ನು/ಪ್ರಾಣಿ-ಪಕ್ಷಿ-ಜಂತುಗಳ ಸಂಪತ್ತನ್ನು ನಾಶಮಾಡದೇ, ಅವುಗಳನ್ನು ಉಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಅರಣ್ಯ ಇಲಾಖೆಯವರೊಂದಿಗೆ ಕೈಜೋಡಿಸಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಸಹಿ/- (ಆರ್.ಧ್ರುವನಾರಾಯಣ) ಲೋಕಸಭಾ ಸದಸ್ಯರು

Thursday, 23 February 2017

ನ್ಯೂಸ್ ಇನ್ ಚಾಮರಾಜನಗರ: ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದೇಕೆ ಗೊತ್ತಾ.! ...

ನ್ಯೂಸ್ ಇನ್ ಚಾಮರಾಜನಗರ: ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದೇಕೆ ಗೊತ್ತಾ.! ...: ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದೇಕೆ ಗೊತ್ತಾ.! ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಸಮಾಜದಲ್ಲಿ ಯಾರಾದರೂ ಏನಾದರೂ ಕೆಟ್ಟದ್ದು ಮಾಡುತ್ತಾರೆ ...

ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.!, ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದೇಕೆ ಗೊತ್ತಾ.! ................REPORTED BY VSS

ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.!

ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ್ಯಾತಿಗೆ ಪಾತ್ರರಾಗಿರುವ ಚಾಮರಾಜೇಶ್ವರ ರಥೋತ್ಸವ ಈ ಬಾರಿ ನಡೆಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

1) ಇಲ್ಲಿನ ಐತಿಹಾಸಿಕ ರಥಕ್ಕೆ ಬೆಂಕಿ ಬಿದ್ದು ಹಾನಿ
.2) ಪುನರ್ ನಿರ್ಮಾಣ ಕಾರ್ಯಕ್ಕೆ ಇನ್ನೂ ಚಾಲನೆ ನೀಡಲಾಗಿಲ್ಲ. 

3)ಐತಿಹಾಸಿಕ ಚಾಮರಾಜೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಭರದಿಂದ ಸಾಗಿದೆ.

 ರಾಜ್ಯ ಸರ್ಕಾರ 2.10 ಕೋಟಿ ರು. ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಪ್ರಾಚ್ಯ ವಸ್ತು ಇಲಾಖೆಯ ಮೇಲುಸ್ತುವಾರಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 40 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಸಂಪೂರ್ಣವಾಗಬೇಕಾದರೆ  ವರ್ಷಗಳೆ ಕಾಯಬೇಕಾಗಿದೆ.
 ರಥೋತ್ಸವದ ಮಹತ್ವ: ಚಾಮರಾಜನಗರ ಜನಮನ ಸೆಳೆಯುವುದೇ ಆಷಾಢದ ಚಾಮರಾಜೇಶ್ವರ ರಥೋತ್ಸವದಿಂದ. ಈ ರಥೋತ್ಸವದಲ್ಲಿ ನೂತನವಾಗಿ ವಿವಾಹವಾದ ನವದಂಪತಿಗಳು ಹಣ್ಣು ಜವನ ಎಸೆದು ದಾಂಪತ್ಯ ಸುಖಮಯವಾಗಿರುವಂತೆ ಬೇಡಿಕೊಳ್ಳುತ್ತಾರೆ. ರಾಜ್ಯದ ಏಕೈಕ ಆಷಾಢ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದ ರಥಕ್ಕೆ ಕಳೆದ ಆರು ತಿಂಗಳ ಹಿಂದೆ ಬೆಂಕಿಬಿದ್ದು ಹಾನಿಯಾಗಿದ್ದು, ರಥವನ್ನು ದುರಸ್ತಿ ಮಾಡಲಾಗದಷ್ಟು ಹಾಳಾಗಿರುವುದರಿಂದ ನೂತನ ರಥವನ್ನೇ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಆದರೆ ಇನ್ನು ಚಾಮರಾಜೇಶ್ವರನ ರಥೋತ್ಸವಕ್ಕೆ ತಿಂಗಳಷ್ಟೆ ಬಾಕಿಯಿರುವುದರಿಂದ ನೂತನ ರಥ ನಿರ್ಮಾಣವೂ ಸಾಧ್ಯವಿಲ್ಲ. ಹೀಗಾಗಿ ಈ ಬಾರಿ ರಥೋತ್ಸವ ನಡೆಯುತ್ತಿಲ್ಲ. ಇದು ಭಕ್ತರಿಗೆ ನಿರಾಸೆ ತಂದಿದೆ.

ರಥಕ್ಕೆ ಬೆಂಕಿ ಯಾಕೆ, ಯಾರು ಹಾಕಿದರು.? ಆರೋಪಿಯನ್ನು ಬಂದಿಸುವಲ್ಲಿ ಪೊಲೀಸರ ಪಾತ್ರ






ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದೇಕೆ ಗೊತ್ತಾ.! ರಾಮಸಮುದ್ರ ಎಸ್.ವೀರಭದ್ರಸ್ವಾಮಿ
 ಚಾಮರಾಜನಗರ: ಸಮಾಜದಲ್ಲಿ ಯಾರಾದರೂ ಏನಾದರೂ ಕೆಟ್ಟದ್ದು ಮಾಡುತ್ತಾರೆ ಎಂದರೆ ಅದರ ಹಿಂದೆ ಏನಾದರೂ ಹಿನ್ನಲೆ ಇದ್ದೇ ಇರುತ್ತದೆ ಎಂದು ಭಾವಿಸಬೇಕು ಹಾಗಿಯೇಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದಕ್ಕೆ ಕಾರಣ ಹುಡುಕಿದರೆ ನಿಜಕ್ಕೂ ಆಶ್ಚರ್ಯವೇ ಸರಿ ಆದರೆ ಸತ್ಯ. ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದರ ಬಗ್ಗೆ ವಿವರಣೆ ಕೊಡಲು ಪೋಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಜೈನ್ ಹಾಗೂ ಡಿವೈಸ್ಪಿ ಗಂಗಾದರಸ್ವಾಮಿ ಅವರು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಸತ್ಯ ತಿಳಿದುಬಂದಿತು. ಪರ್ತಕರ್ತರು ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಜೈನ್ ಅವರನ್ನು ಬ್ರಹ್ಮರಥಕ್ಕೆ ಬೆಂಕಿ ಹಾಕಲು ಕಾರಣ ಏನಿರಬಹುದು ಎಂದಾಗ ಆರೋಪಿ ಹೇಳಿಕೆಯಂತೆ ಚಾಮರಾಜೇಶ್ವರ ದೇವಾಲಯ ಹಳೆಯದಾಗಿದ್ದು ಜೀರ್ಣೋದ್ದಾರ ನಡೆಯುತ್ತಿದೆ ಹಾಗಿಯೇ ಸುಮಾರು ವರ್ಷಗಳ ಹಳೆಯದಾದ ಈ ರಥ ಪ್ರತಿ ವರ್ಷವೂ ದುರಸ್ಥಿ ಮಾಢುತ್ತಿರುತ್ತಾರೆ ನೂತನ ರಥವಾಗಲೀ ಎಂಬ ಆóಶಯದಿಂದ ಬೆಂಕಿ ಹಾಕಿದ್ದಾಗಿ ಒಪ್ಪಿಕೊಂಢಿದ್ದಾರೆ ಎಂದರು. ಇದೇ 19 ರಂದು 1.10 ರ ಸಮಯದಲ್ಲಿ ಬೆಂಕಿ ಹಾಕಿ ಪರಾರಿಯಾಗಿದ್ದ ಕಿಡಿಗೇಡಿ ಬಂಧಿಸಬೇಕು ಎಂದು ಆಗ್ರಹಿಸಿ 20 ರಂದು ಬಂದ್ ಗೆ ಕರೆ ನೀಡಿ ಯಶಸ್ವಿಯಾಗಿತ್ತು. ಮೂರು ತಂಡ ರಚಿಸಿದ ಎಸ್ಪಿ ಅವರು ಆರೋಪಿಗಾಗಿ ಶೋಧ ನಡೆಸಿ ಕೊನೆಗೆ ಸಫಲರಾಗಿದ್ದಾರೆ. ******************************************************------------------------------------------ ಚಾಮರಾಜನಗರ: ಚಾಮರಾಜೇಶ್ವರ ರಥಕ್ಕೆ ಬೆಂಕಿ ಇಟ್ಟ ಪ್ರಕರಣ,ಆರೋಪಿ ಬಂದನ, ವರದಿ-ಚಾಮರಾಜನಗರ ಪ್ರತಿನಿಧಿ:ರಾಮಸಮುದ್ರ, ಎಸ್.ವೀರಭದ್ರಸ್ವಾಮಿ ಚಾಮರಾಜನಗರ, ಫೆಬ್ರವರಿ 23: ಭಾನುವಾರ ಮುಂಜಾನೆ ಚಾಮರಾಜನಗರದ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಬೆಂಕಿ ಹಾಕಿ ಇಡೀ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪಟ್ಟಣದ ಉಪ್ಪಾರ ಬಡಾವಣೆಯ ಮೋಹನ್ ಕುಮಾರ್ (35 ) ಬಂಧಿತ ಆರೋಪಿ. ಪ್ರಕರಣದಲ್ಲಿ ಈತ ಮಾತ್ರವಲ್ಲದೆ ಇನ್ನಿತರರು ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಭಾನುವಾರ ಬೆಳಗಿನ ಜಾವ ದೇವಾಲಯ ಆವರಣದಲ್ಲಿ ನಿಲ್ಲಿಸಿದ್ದ ಚಾಮರಾಜೇಶ್ವರ ಬ್ರಹ್ಮರಥ ಬೆಂಕಿ ಹೊತ್ತಿ ಉರಿಯತೊಡಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದರು. ಆದರೂ ರಥ ಭಾಗಶಃ ಸುಟ್ಟು ಹೋಗಿತ್ತು. ಈ ಘಟನೆಯಿಂದ ಚಾಮರಾಜನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿ ಬಂದ್ ಹಾಗೂ ಪ್ರತಿಭಟನೆಗಳು ನಡೆದಿದ್ದವು. ಹಿಂದೂಪರ ಸಂಘಟನೆಗಳು ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದವು. ಘಟನೆ ನಡೆದ ಕ್ಷಣದಿಂದಲೇ ಚಾಮರಾಜನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚನೆಯಾಗಿ, ತನಿಖೆ ಚುರುಕುಗೊಂಡಿತ್ತು. ಈ ಮಧ್ಯೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರು. ಸಚಿವರ ಆದೇಶದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮೋಹನ್ ಕುಮಾರ್ ನಗರಸಭೆಯ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ತಮ್ಮದೇ ಸಮುದಾಯದ ವ್ಯಕ್ತಿ ಕೃತ್ಯ ಎಸಗಿದ್ದು, ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಇರಿಸು ಮುರಿಸು ತಂದೊಡ್ಡಿದೆ. ಆರೋಪಿ ರಥಕ್ಕೆ ಬೆಂಕಿ ಹಚ್ಚಲು ಕಾರಣವೇನು, ಆತನೊಂದಿಗೆ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ

Wednesday, 22 February 2017

22-02-2017 ಚಾಮರಾಜನಗರ ಪ್ರಮುಖ ಸುದ್ದಿಗಳು ( ಗಾಂಜಾ ಬೆಳೆದ ವ್ಯಕ್ತಿಗೆ ಶಿಕ್ಷೆ ,ಕೇಂದ್ರಸ್ಥಾನದಲ್ಲಿ ಉಳಿಯಲು ಅಧಿಕಾರಿಗಳಿಗೆ ಸೂಚನೆ, ನರೇಗ ಅವ್ಯವಹಾರ : ತನಿಖೆಗೆ ಸಿಇಓ ಸೂಚನೆ)

ಗಾಂಜಾ ಬೆಳೆದ ವ್ಯಕ್ತಿಗೆ ಶಿಕ್ಷೆ ಚಾಮರಾಜನಗರ, ಫೆ. 22 - ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹೂಗಿಡಗಳ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಗೆ 2 ವರ್ಷಗಳ ಸಜೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಹನೂರು ತಾಲೂಕು ಪಿ.ಜಿ. ಪಾಳ್ಯ ಗ್ರಾಮದ ಮೋಹನ ಅಲಿಯಾಸ್ ಮೋಹನ್ ಕುಮಾರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ತಮ್ಮ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹೂಗಿಡಗಳ ಮಧ್ಯೆ 12 ಕೆಜಿ ತೂಕವುಳ್ಳ 8 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಸದರಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಅಪರಾಧಿಗೆ 2 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ------------------------------------------------------------------------------------------------------------ ಕೇಂದ್ರಸ್ಥಾನದಲ್ಲಿ ಉಳಿಯಲು ಅಧಿಕಾರಿಗಳಿಗೆ ಸೂಚನೆ ಚಾಮರಾಜನಗರ, ಫೆ. 22 :- ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರವರ ಕೇಂದ್ರಸ್ಥಾನದಲ್ಲಿದ್ದು ಜನರ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ್ದಾರೆ. ಅಧಿಕಾರಿಗಳು ಕಚೇರಿ ವಾಹನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ರಾತ್ರಿ 8 ಗಂಟೆಯೊಳಗೆ ಪ್ರವಾಸ ಮುಕ್ತಾಯಗೊಳಿಸಿ ತಮ್ಮ ವಾಹನಗಳನ್ನು ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ಇರುವಂತೆ ಕ್ರಮ ತೆಗೆದುಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸಹ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ವಾಹನಗಳು ಇರುವಂತೆ ಕ್ರಮ ವಹಿಸಬೇಕೆಂದು ತಿಳಿಸಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ, ಅನುಮೋದನೆ ಪಡೆಯಲೇಬೇಕು. ತಪ್ಪಿದಲ್ಲಿ ಕೇಂದ್ರಸ್ಥಾನದಲ್ಲಿರದ ಅಧಿಕಾರಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಡಾ. ಕೆ. ಹರೀಶ್ ಕುಮಾರ್ ್ಲ ತಿಳಿಸಿದ್ದಾರÉ. -------------------------------------------------------- ನರೇಗ ಅವ್ಯವಹಾರ : ತನಿಖೆಗೆ ಸಿಇಓ ಸೂಚನೆ ಚಾಮರಾಜನಗರ, ಫೆ. 22- ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕೃಷಿ ಹೊಂಡ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಗುಂಡ್ಲುಪೇಟೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ಅಧಿಕಾರಿ ಅವ್ಯವಹಾರ ನಡೆಸಿರುವ ಸಂಬಂಧ ನೀಡಿರುವ ದೂರಿನ ಮೇರೆಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯವರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಕುಮಾರ್ ಅವರು ಸೂಚಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರಾದ ಸಿದ್ದೇಗೌಡ ಹಾಗೂ ಸಹಾಯಕ ಕೃಷಿ ಅಧಿಕಾರಿ ಮಹದೇವ ಅವರ ಬಗ್ಗೆ ಕಳೆದ ಫೆಬ್ರವರಿ 18ರಂದು ಗುಂಡ್ಲುಪೇಟೆ ತಾಲೂಕಿನಲ್ಲಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಪುರಸ್ಕøತ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಧ್ರುವನಾರಾಯಣ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ 10 ದಿನದಲ್ಲಿ ತನಿಖೆ ಕೈಗೊಂಡು ವಿವರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಕುಮಾರ್ ಅವರು ಸೂಚನೆ ನೀಡಿದ್ದಾರ. --------------------------------------------- ಜಿ.ಪಂ.ಗೆ ಛತ್ತಿಸ್‍ಘಡ್ ಜನಪ್ರತಿನಿಧಿಗಳ ಭೇಟಿ: ಸಂವಾದ ಚಾಮರಾಜನಗರ ಫೆ-22 ಚಾಮರಾಜನಗರ ಜಿಲ್ಲಾ ಪಂಚಾಯಿತಿಗೆ ಇಂದು ಛತ್ತಿಸ್‍ಘಡ್ ರಾಜ್ಯದ ಸುಕುಮಾ, ಕೊರಬಾ, ರಾಯಘಡ್ ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ 30 ಜನ ಪ್ರತಿನಿಧಿಗಳು ಭೇಟಿ ನೀಡಿ, ಇಲ್ಲಿನ ಜನ ಪ್ರತಿನಿಧಿಗಳ ಜತೆ ಸಂವಾದ ನಡೆಸಿದರು. ಚಾಮರಾಜನಗರ ಜಿಲ್ಲೆಯ ಸ್ಥೂಲ ಪರಿಚಯವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ ಅವರು ಪವರ್ ಪಾಯಿಂಟ್ ಮೂಲಕ ನೀಡಿದರು. ಬಳಿಕ ಸಂವಾದ ಪ್ರಾರಂಭಿಸಿದ ಜನ ಪ್ರತಿನಿಧಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ, ಶಿಕ್ಷಣ ಇಲಾಖೆಯ ಪ್ರಗತಿ, ಜನಪ್ರತಿನಿಧಿಗಳಿಗೆ ಅನುದಾನದ ಮೂಲ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಕೇಳಿ ತಿಳಿದುಕೊಂಡರು. ತಮ್ಮ ರಾಜ್ಯದಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಪರಾಮರ್ಶೆ ಮಾಡಿದರು. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನು ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಶಾಲೆ ದುರಸ್ತಿ, ಅಂಗನವಾಡಿ ನಿರ್ಮಾಣ ಮುಂತಾದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಮಟ್ಟದಲ್ಲಿ ಗ್ರಾಮಸಭೆಗಳ ಮೂಲಕ, ಜನರ ಮಧ್ಯದಲ್ಲಿಯೇ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ಬೊಮ್ಮಯ್ಯ, ಛತ್ತಿಸ್‍ಘಡ್ ರಾಜ್ಯದ ಸುಕುಮಾ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹರೀಶ್ ಕವಾಶಿ, ರಾಯಘಡ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ಟಿ.ಎಸ್.ಅಗರವಾಲ್, ಕೊರಬಾ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಕಿರಣ್ ಮರಕಮ್, ಚಾಮರಾಜನಗರ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಎಂ.ಮಾದೇಶು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ತರಬೇತಿ ಸಂಯೋಜಕ ಟಿ.ಎಂ.ಅಬುಬ್ಕರ್, ಜಿಲ್ಲಾ ಪಂಚಾಯಿತಿ ಸದಸ್ಯರು ಸಂವಾದದಲ್ಲಿ ಹಾಜರಿದ್ದರು. ------------------------------------------------------------------------------------------------------- ಫೆ. 24ರಂದು ಮಾಂಸ ಮಾರಾಟ ನಿಷೇಧ ಚಾಮರಾಜನಗರ, ಫೆ. 22:- ನಗರಸಭಾ ವ್ಯಾಪ್ತಿಯಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಅಂದು ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಗಡಿ ಹಾಗೂ ಸಂಬಂಧಪಟ್ಟವರ ಉದ್ದಿಮೆಯನ್ನು ಬಂದ್ ಮಾಡಿ ಪರವಾನಗಿ ರದ್ದುಪಡಿಸುವುದರ ಜತೆಗೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆ ತಿಳಿಸಿದ್ದಾರೆ. ------------------------------------------------------------------------------- ನ್ಯಾಯಾಂಗ ಇಲಾಖೆ ಹುದ್ದೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಾಮರಾಜನಗರ, ಫೆ. 22:- ಚಾಮರಾಜನಗರದ ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶ್ರೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಚ್ಚು-ನಕಲುಗಾರರು, ಆದೇಶ ಜಾರಿಕಾರರು ಮತ್ತು ಸೇವಕರ ಹುದ್ದೆಗಳಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 17ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಈ ಹಿಂದೆ ಫೆಬ್ರವರಿ 13ರಂದು ಕಡೆಯ ದಿನಾಂಕವೆಂದು ನಿಗದಿ ಮಾಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಮಾರ್ಚ್ 17ರವರೆಗೆ ವಿಸ್ರರಿಸಲಾಗಿದೆ. ಅರ್ಜಿ ಸಲ್ಲಿಕೆ ವಿವರಗಳಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ. ಮಾ. 2ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ ಚಾಮರಾಜನಗರ, ಫೆ. 22 :- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಡಲಾಗಿರುವ ಗೋಲಕಗಳ ಹಣ ಎಣಿಕೆ ಕಾರ್ಯವು ಮಾರ್ಚ್ 2ರಂದು ಬೆಳಿಗ್ಗೆ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಕಾರದೊಂದಿಗೆ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಹಣ ಎಣಿಕೆ ಕಾರ್ಯ ನಡೆಸಲಾಗುತ್ತದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------------------------------------------------------------------------------- ಫೆ. 25ರಂದು ನೇರ ಫೋನ್ ಇನ್ ಕಾರ್ಯಕ್ರಮ ಚಾಮರಾಜನಗರ, ಫೆ. 22 :- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 25ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ---------------------------------------------------------------------------------- ಶಿವಾಜಿ ಮಹಾರಾಜರು ದಕ್ಷ ಆಡಳಿತಗಾರರು : ಸಿ. ಪುಟ್ಟರಂಗಶೆಟ್ಟಿ ಚಾಮರಾಜನಗರ, ಫೆ. 22:- ಛತ್ರಪತಿ ಶಿವಾಜಿ ಅವರು ಉತ್ತಮ ಆಳ್ವಿಕೆ ನಡೆಸಿ ದಕ್ಷ ಆಡಳಿತಗಾರರೆಂದೇ ಹೆಸರಾದವರೆಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಾಜಿ ಜಯಂತಿ ಆಚರಣೆ ಕಾಂiÀರ್iಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವಾಜಿ ಅವರು ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದರು. ಅವರ ಆಳ್ವಿಕೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ನೀಡಲಾಗುತ್ತಿತ್ತು. ಅಪಾರ ಜನಪರ ಕಾಳಜಿ ಉಳ್ಳವರಾಗಿದ್ದರು ಎಂದು ಪುಟ್ಟರಂಗಶೆಟ್ಟಿ ಅವರು ಸ್ಮರಿಸಿದರು. ಶಿವಾಜಿ ಅವರು ಯುದ್ಧ ಕಲೆಯಲ್ಲಿ ನೈಪುಣ್ಯತೆ ಹೊಂದಿದ್ದರು. ವಿಶೇಷವಾಗಿ ಬೆಟ್ಟ ಗುಡ್ಡಗಾಡು ಪ್ರದೇಶಗಳಲ್ಲಿ ನಿಂತು ಹೋರಾಡುವ ಸಮರ ಕಲೆಯನ್ನು ಬಲ್ಲವರಾಗಿದ್ದರು. ಕತ್ತಿವರಸೆ, ಕುದುರೆ ಸವಾರಿ, ಇತರೆ ಸಾಹಸ ಪ್ರವೃತ್ತಿ ಶಿವಾಜಿ ಅವರಲ್ಲಿತ್ತು ಪುಟ್ಟರಂಗಶೆಟ್ಟಿ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ ಅವರು ಶಿವಾಜಿ ಅವರು ಚಿಕ್ಕವಯಸ್ಸಿನಲ್ಲಿಯೇ ಅವರ ತಾಯಿಯಿಂದ ಅನೇಕ ಉತ್ತಮ ಮೌಲ್ಯ ವಿಚಾರಗಳನ್ನು ತಿಳಿದುಕೊಂಡಿದ್ದರು. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಶಿವಾಜಿ ಅವರ ಸಾಧನೆ ಶೌರ್ಯ ಇನ್ನಿತರ ಆದರ್ಶ ಗುಣಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು. ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ ಮಾತನಾಡಿ ಇತಿಹಾಸ ಪುರುಷರು ಸಮಾಜ ಸುಧಾರಕರು ಸೇರಿದಂತೆ ಮಹಾನ್ ವ್ಯಕ್ತಿಗಳನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಿ ಅವರ ಜಯಂತಿ ಆಚರಣೆ ಕಾರ್ಯಕ್ರಮ ಮಾಡುವುದು ನೋವಿನ ಸಂಗತಿ. ಎಲ್ಲಾ ಮಹಾನ್ ವ್ಯಕ್ತಿಗಳು ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದಾರೆ. ಹೀಗಾಗಿ ಎಲ್ಲರೂ ಎಲ್ಲಾ ದೇಶನಾಯಕರ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕೆಂದು ಆಶಿಸಿದರು. ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲರಾದ ಎಂ.ಡಿ. ಪುಷ್ಪಲತಾ ಅವರು ಶಿವಾಜಿ ಅವರು ಆಡಳಿತ ಅವಧಿಯಲ್ಲಿ ಅಷ್ಟಪ್ರಧಾನ ವ್ಯವಸ್ಥೆಯನ್ನು ಜಾರಿಗೆ ತಂದರು. ಅರ್ಹತೆ ಆಧಾರದ ಮೇಲೆ ಮಂತ್ರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ನೇಮಕ ಪ್ರಕ್ರಿಯೆಯಲ್ಲಿ ಯಾವುದೇ ಧರ್ಮ, ಬೇಧಭಾವ ಮಾಡುತ್ತಿರಲಿಲ್ಲ. ಅರ್ಹತೆಯೇ ಮುಖ್ಯವೆಂದು ಪರಿಗಣಿಸುತ್ತಿದ್ದರು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಮರಾಠ ಸಮಾಜದ ಮುಖಂಡರಾದ ವೆಂಕಟರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದ ಬಳಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆದ ಶಿವಾಜಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚÀಂದ್ರ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. -------------------------------------------------------------------------------------------

Monday, 20 February 2017

20-02-2017 ರಥಕ್ಕೆ ಬೆಂಕಿ ಪ್ರಕರಣ : ವಿಶೇಷ ತಂಡ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

dಚಾಮರಾಜನಗರ, ಫೆ. 19:- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಫೆಬವರಿ 20 ರಂದು ನಗರದಲ್ಲಿ ನಿಗದಿಯಾಗಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾಂiÀರ್iಕ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ನಾಗವೇಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------------------------------------------------------------------------------------ ರಥಕ್ಕೆ ಬೆಂಕಿ ಪ್ರಕರಣ : ವಿಶೇಷ ತಂಡ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಚಾಮರಾಜನಗರ, ಫೆ. 20:- ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿಯ ರಥಕ್ಕೆ ಬೆಂಕಿ ಬಿದ್ದ ಪ್ರಕರಣವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಖಂಡಿಸಿದ್ದಾರೆ. ಮೆಕ್ಕಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು ರಥಕ್ಕೆ ಬೆಂಕಿ ಬಿದ್ದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು ಪ್ರಕರಣದ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚಿಸಿದ್ದೇನೆ. ಪ್ರಕರಣ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸುವಂತೆ ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಮೆಕ್ಕಾ ಪ್ರವಾಸದಿಂದ ತಾವು ಹಿಂದಿರುಗಿದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿರುವ ಸಚಿವರು ಬೆಂಕಿ ಬಿದ್ದ ಕೃತ್ಯ ನಡೆಯಲು ಏನೇ ಕಾರಣವಿರಲಿ ಅದನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಾಂತ ರೀತಿಯಿಂದ ಇದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಕರಣ ತನಿಖೆಗೆ ಸಹಕರಿಸಬೇಕೆಂದು ಉಸ್ತುವಾರಿ ಸಚಿವರು ಮನವಿ ಮಾಡಿದ್ದಾರೆ. ------------------------------------------------------------------ ಚಾಮರಾಜನಗರ ಜಿಲ್ಲಾ ಪೊಲೀಸ್ ಪ್ರಕಟಣೆ ದಿನಾಂಕ : 18-02-2017 ರಂದು ರಾತ್ರಿ ಚಾಮರಾಜನಗರ ಪಟ್ಟಣದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿದ್ದ ರಥಕ್ಕೆ ಬೆಂಕಿ ತಗುಲಿ, ನಡೆದ ಅಗ್ನಿ ಅವಘಡದ ಹಿನ್ನಲೆಯಲ್ಲಿ ಚಾಮರಾಜನಗರ ಪಟ್ಟಣ ಠಾಣಾ ಮೊಕದ್ದಮೆ ಸಂಖ್ಯೆ 17/2017, ಕಲಂ 435 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಈ ಬಗ್ಗೆ ಪೂರ್ಣ ತನಿಖೆಯ ನಂತರವೇ ಸ್ಪಷ್ಠ ಚಿತ್ರಣ ದೊರೆಯಲಿದ್ದು, ಈ ಸಂಬಂಧ ಘಟನೆ ಖಂಡಿಸಿ ದಿನಾಂಕ : 20-02-2017 ರಂದು ಹಲವು ಸಂಘಟನೆಗಳು ಚಾಮರಾಜನಗರ ಪಟ್ಟಣ ಬಂದ್‍ಗೆ ಕರೆನೀಡಿರುವುದಾಗಿ ತಿಳಿದು ಬಂದಿರುತ್ತದೆ. ಬಂದ್/ಪ್ರತಿಭಟನೆಯನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಪಡಿಸಿಕೊಂಡು, ತಮ್ಮ ಸ್ವಾರ್ಥ ಈಡೇರಿಕೆಗೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಪಟ್ಟಣ ಬಂದ್‍ನಿಂದ ಸಾರ್ವಜನಿಕ ತೊಂದರೆಯಾಗುವ ಜೊತೆಗೆ, ತನಿಖೆಗೂ ಸಹ ಹಿನ್ನಡೆಯಾಗಲಿದೆ. ಈ ಹಿನ್ನಲೆಯಲ್ಲಿ ವ್ಯಾಪಕವಾದ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರಿಗೆ ಯಾವ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿರುತ್ತದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ತೊಂದರೆಯಾಗುವಂತೆ ಅಥವಾ ಒತ್ತಾಯ ಪೂರ್ವಕವಾದ ಬಂದ್ ನಡೆಸಲು ಅವಕಾಶವಿರುವುದಿಲ್ಲ. ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಯಾವುದೇ ಪ್ರಚೋದಿತವಾದ ಗಾಳಿಸುದ್ದಿಗೆ ಕಿವಿಗೊಡದೆ, ಭಾವೋದ್ವೇಗಗೊಳ್ಳದೆ, ಶಾಂತರೀತಿಯಿಂದ ವರ್ತಿಸಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನೀಡುವ ಎಲ್ಲಾ ಆದೇಶಗಳಿಗೂ ಸಹಕರಿಸಿ, ನಿಜವಾದ ಅಪರಾಧಿಗಳ ಪತ್ತೆಗೆ ಅನುವು ಮಾಡಿಕೊಟ್ಟು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಸಾರ್ವಜನಿಕ ಶಾಂತಿಯನ್ನು ಕಾಪಾಡಲು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ. (ಕುಲ್‍ದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್) ಪೊಲೀಸ್ ಅಧೀಕ್ಷಕರು , ಚಾಮರಾಜನಗರ ಜಿಲ್ಲೆ. ------------------------------------------------------------------------ ಸಂತಕವಿ ಸರ್ವಜ್ಞ ಜಯಂತಿ ಮುಂದೂಡಿಕೆ ಫೆ. 23ರಿಂದ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಚಾಮರಾಜನಗರ, ಫೆ. 20 - ಇತಿಹಾಸ ಪ್ರಸಿದ್ದ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 23 ರಿಂದ 27ರವರೆಗೆ ಮಹಾಶಿವರಾತ್ರಿ ಹಾಗೂ ಮಾರ್ಚ್ 25 ರಿಂದ 29ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ. ಫೆಬ್ರವರಿ 23ರಂದು ಮಹಾಶಿವರಾತ್ರಿ ಜಾತ್ರೆ ಮಹೋತ್ಸವ ಆರಂಭಗೊಳ್ಳಲಿದೆ. 24ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ, ವಿಶೇಷ ಸೇವೆ ಉತ್ಸವ ಹಾಗೂ ಜಾಗರಣೆ ಉತ್ಸವ, 25ರಂದು ಶ್ರೀಸ್ವಾಮಿಗೆ ವಿಶೇಷ ಸೇವೆ ಮತ್ತು ಉತ್ಸವ, 26ರಂದು ಅಮಾವಾಸ್ಯೆ ಉತ್ಸವಾದಿಗಳು ಜರುಗಲಿವೆ. 27ರಂದು ಬೆಳಿಗ್ಗೆ 9.40 ರಿಂದ 10.30 ಗಂಟೆಯವರೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ ಪೂಜೆ ಕೈಂಕರ್ಯಗಳು ನೆರವೇರಿದ ಬಳಿಕ ಕೊಂಡೋತ್ಸವ ನಡೆಯಲಿದೆ. ಮಾರ್ಚ್ 25ರಂದು ಯುಗಾದಿ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. 26ರಂದು ಎಣ್ಣೆ ಮಜ್ಜನ ಹಾಗೂ ವಿಶೇಷ ಸೇವೆ, 27ರಂದು ಶ್ರೀಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು, 28ರಂದು ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ. 29ರಂದು ಚಾಂದ್ರಮಾನ ಯುಗಾದಿ ಹಾಗೂ ಮಹಾರಥೋತ್ಸವವು ಬೆಳಿಗ್ಗೆ 10.30 ರಿಂದ 11.05 ಗಂಟೆಯವರೆಗೆ ನಡೆಯಲಿದೆ. ವಿಶೇಷ ಸೇವೆ, ಉತ್ಸವಗಳು ಶ್ರೀ ಸಾಲೂರು ಬೃಹನಠದ ಅಧ್ಯಕ್ಷರಾದ ಶ್ರೀ ಪಟ್ಟದ ಶ್ರೀ ಶ್ರೀ ಗುರುಸ್ವಾಮಿಗಳು ಹಾಗೂ ಪ್ರಣವ ಶ್ರೀ ಪಟ್ಟದ ಶ್ರೀ ಶ್ರೀ ಇಮ್ಮುಡಿ ಮಹದೇವಸ್ವಾಮಿಗಳ ನೇತೃತ್ವದಲ್ಲಿ ಜರುಗಲಿದೆ ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------------------------------------ ಫೆ. 22ರಂದು ನಗರದಲ್ಲಿ ಶಿವಾಜಿ ಜಯಂತಿ ಚಾಮರಾಜನಗರ, ಫೆ. 20 :- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಫೆಬವರಿ 22ರಂದು ಬೆಳಿಗ್ಗೆ 11 ಗಂಟೆಗೆ ಶಿವಾಜಿ ಜಯಂತಿ ಕಾಂiÀರ್iಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದÀ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದÉ್ತಂ.ಡಿ. ಪುಷ್ಪಲತಾ ಮುಖ್ಯ ಭಾಷಣ ಮಾಡುವರು. ರಾಮಸಮುದ್ರದ ಮಂಜುನಾಥ್ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.30 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶಿವಾಜಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚÀಂದ್ರ ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ. ------------------------------------------------------------------- ಫೆ. 21ರಂದು ಕಾನೂನು ಅರಿವು ನೆರವು- ಕಾರ್ಯಕ್ರಮ ಚಾಮರಾಜನಗರ, ಫೆ. 20 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 21ರಂದು ಮಧ್ಯಾಹ್ನ 2 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಇರುವ ಹಕ್ಕುಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಶಿವಬಸವಯ್ಯ ಅಧ್ಯಕ್ಷತೆ ವತಿಸುವರು. ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಕೀಲರಾದ ಅರುಣ್ ಕುಮಾರ್ ಮತ್ತು ಎ.ಎಸ್. ನಂಜುಂಡಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದÉ. --------------------------------------------------------------------------- ರಥಕ್ಕೆ ಬೆಂಕಿ ಪ್ರಕರಣ : ವಿಶೇಷ ತಂಡ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಚಾಮರಾಜನಗರ, ಫೆ. 20:- ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿಯ ರಥಕ್ಕೆ ಬೆಂಕಿ ಬಿದ್ದ ಪ್ರಕರಣವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಖಂಡಿಸಿದ್ದಾರೆ. ಮೆಕ್ಕಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು ರಥಕ್ಕೆ ಬೆಂಕಿ ಬಿದ್ದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು ಪ್ರಕರಣದ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚಿಸಿದ್ದೇನೆ. ಪ್ರಕರಣ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸುವಂತೆ ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಮೆಕ್ಕಾ ಪ್ರವಾಸದಿಂದ ತಾವು ಹಿಂದಿರುಗಿದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿರುವ ಸಚಿವರು ಬೆಂಕಿ ಬಿದ್ದ ಕೃತ್ಯ ನಡೆಯಲು ಏನೇ ಕಾರಣವಿರಲಿ ಅದನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಾಂತ ರೀತಿಯಿಂದ ಇದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಕರಣ ತನಿಖೆಗೆ ಸಹಕರಿಸಬೇಕೆಂದು ಉಸ್ತುವಾರಿ ಸಚಿವರು ಮನವಿ ಮಾಡಿದ್ದಾರೆ. -------------------------------------------------------------------------- ಸಾಹಸ ಚಾರಣ ಕ್ರೀಡೆಗೆ ಯುವಕ ಯುವತಿಯರಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 20 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ರಾಕ್ ಕ್ಲೈಮಿಂಗ್, ರಿವರ್ ಕ್ರಾಸ್ ಸಾಹಸ ಚಾರಣ ಕ್ರೀಡೆಯನ್ನು ಮಾರ್ಚ್ 3 ರಿಂದ 5ರವರೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಏರ್ಪಡಿಸಲಾಗುವುದು. 15 ರಿಂದ 35ರ ವಯೋಮಿತಿಯ ಜಿಲ್ಲೆಯ ಯುವಜನರು, ನೊಂದಾಯಿತ ಸಂಘಗಳ ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದ್ದು ದಿನಭತ್ಯೆ ಹಾಗೂ ಪ್ರಯಾಣ ಭತ್ಯೆಯನ್ನು ಇಲಾಖಾ ವತಿಯಿಂದ ನೀಡಲಾಗುತ್ತದೆ. ಆಸಕ್ತರು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಜಿ ಪಡೆದು ಫೆಬ್ರವರಿ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. 08226-224932, ಮೊ. 9482718278 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. _----------------------------------------------------------------------------------- ಫೆ. 25ರಂದು ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಹುದ್ದೆಗಳಿಗೆ ನೇರ ಸಂದರ್ಶನ >ಚಾಮರಾಜನಗರ, ಫೆ. 20 (ಕರ್ನಾಟಕ ವಾರ್ತೆ):- ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಫೆಬ್ರವರಿ 25ರಂದು ಬೆಳಿಗ್ಗೆ 9 ಗಂಟೆಗೆ ಶಾಲಾ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು, ಸಂಗೀತ (ಪಿಆರ್‍ಟಿ), ಇಂಗ್ಲೀಷ್, ಹಿಂದಿ, ಸಂಸ್ಕøತ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಕರು, ವರ್ಕ್ ಎಕ್ಸ್‍ಪೀರಿಯನ್ಸ್, ಕನ್ನಡ (ಪಾರ್ಟ್ ಟೈಂ) ಟ್ರೈನ್ಡ್ ಗ್ರಾಜುಯೇಟ್ ಟೀಚರ್, ಯೋಗ ತರಬೇತುದಾರರು (ಪಾರ್ಟ್ ಟೈಂ), ಗಣಕಯಂತ್ರ ತರಬೇತುದಾರರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ. ಅಭ್ಯರ್ಥಿಗಳು ಸ್ವವಿವರ, ಅಂಕಪಟ್ಟಿಯೊಂದಿಗೆ ಎಲ್ಲಾ ದಾಖಲೆಗಳ ಒಂದು ಪ್ರತಿ ಜೆರಾಕ್ಸ್ ಅನ್ನು ತರಬೇಕು. ವಿದ್ಯಾರ್ಹತೆ, ವೇತನ, ಇನ್ನಿತರ ಸಂಪೂರ್ಣ ಮಾಹಿತಿಗೆ ಞvsಚಿಟಿgಚಿಣhಚಿಟಿ.ಟಿiಛಿ.iಟಿ ಮತ್ತು ಞvಛಿhಚಿmಚಿಡಿಚಿರಿಚಿಟಿಚಿgಡಿಚಿ.ಚಿಛಿ.iಟಿ ನೋಡುವಂತೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ. ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ----------------------------------------------------------------------------------------- ಚಾಮರಾಜನಗರ, ಫೆ. 20:- ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಒಂದು ವರ್ಷದ ಅವಧಿಗೆ ಗೌರವಧನದ ಆಧಾರದ ಮೇಲೆ ಲೆಕ್ಕಾಧಿಕಾರಿ ಕಂ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಬಿಕಾಂ ಪದವಿ ಹೊಂದಿರಬೇಕು. ಅಕೌಂಟೆಂಟ್ ಹುದ್ದೆಯಲ್ಲಿ 3 ವರ್ಷಗಳ ಅನುಭವವಿರಬೇಕು. ಕಂಪ್ಯೂಟರ್ ಅನುಭವ ಹೊಂದಿದ್ದು ಟ್ಯಾಲಿ ಸಾಪ್ಟ್‍ವೇರನ್ನು ಉಪಯೋಗಿಸುವ ಜ್ಞಾನ ಕೌಶಲ್ಯ ಇರಬೇಕು. ಕಚೇರಿ ಪತ್ರ ವ್ಯವಹಾರವನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿಗೆ ಕಳುಹಿಸುವ ಪರಿಣತಿ ಹೊಂದಿರಬೇಕು. 40 ವರ್ಷದ ಒಳಗಿರಬೇಕು. ಅರ್ಹ ಅಭ್ಯರ್ಥಿಗಳು ಸ್ವವಿವರವುಳ್ಳ ಮಾಹಿತಿ, ವಿದ್ಯಾರ್ಹತೆ, ಅನುಭವ, ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಚಾಮರಾಜನಗರ ಇವರಿಗೆ ನಮೂದಿಸಿ ಯೋಜನಾ ನಿರ್ದೆಶಕರ ಕಚೇರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ರೂ. ನಂ. 222, ಜಿಲ್ಲಾಡಳಿತ ಭವನ, ಚಾಮರಾಜನಗರ ಇವರಿಗೆ ಫೆಬ್ರವರಿ 28ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರ ಕಚೇರಿಯ ದೂ.ಸಂ. 08226-222195 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. iv dir="ltr" style="text-align: left;" trbidi="on">

Saturday, 18 February 2017

18-02-2017 ಚಾಮರಾಜನಗರ ಸುದ್ದಿಗಳು (ಗಿರಿಜನರ ಸಂಸ್ಕøತಿ ಪರಂಪರೆಗೆ ಸರ್ಕಾರದಿಂದ ಉತ್ತೇಜನ : ಸಿ.ಪುಟ್ಟರಂಗಶೆಟ್ಟಿ)

ಫೆ. 20ರಂದು ಕಾನೂನು ಅರಿವು ನೆರವು ಕಾರ್ಯಕ್ರಮ ಚಾಮರಾಜನಗರ, ಫೆ. 18 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 20ರಂದು ಮಧ್ಯಾಹ್ನ 2 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಇರುವ ಹಕ್ಕುಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ.ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು. ವಕೀಲರ ಸಂಘದ ಅಧ್ಯಕ್ಷರಾದ ಆರ್.ವಿರೂಪಾಕ್ಷ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಕೀಲರಾದ ಅರುಣ್ ಕುಮಾರ್ ಮತ್ತು ಎ.ಎಸ್.ನಂಜುಂಡಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು -------------------------------------------------------------------------- ಗಿರಿಜನರ ಸಂಸ್ಕøತಿ ಪರಂಪರೆಗೆ ಸರ್ಕಾರದಿಂದ ಉತ್ತೇಜನ : ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಫೆ.18 : ರಾಜ್ಯ ಸರ್ಕಾರ ಕಲೆ, ಸಂಸ್ಕøತಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಪರಿಣಾಮ ಅರಣ್ಯ ವಾಸಿಗಳ ಸೇರಿದಂತೆ ಬಹುತೇಕ ಸಮುದಾಯಗಳ ಮೂಲ ಪರಂಪರೆಗೆ ಹೆಚ್ಚಿನ ಪೋಷಣೆ ದೊರೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ಪುಣಜನೂರು ವಲಯದ ಶ್ರೀನಿವಾಸಪುರ ಕಾಲೋನಿಯಲ್ಲಿ ಇಂದು ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿರಿಜನ ಬುಡಕಟ್ಟು ಸಾಂಸ್ಕøತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆದಿವಾಸಿಗಳು, ಅರಣ್ಯ ವಾಸಿಗಳ ಕಲೆ, ಸಂಸ್ಕøತಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಇದನ್ನು ಮುಂದುವರಿಸುವ ಸಲುವಾಗಿ ಸರ್ಕಾರ ಬುಡಕಟ್ಟು ಸಾಂಸ್ಕøತಿಕ ಉತ್ಸವಕ್ಕೆ ನೆರವು ನೀಡಿದೆ. ಇದರಿಂದ ಪುರಾತನ ಕಲೆ, ಅಭಿವ್ಯಕ್ತಿಗೆ ಅವಕಾಶವಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು. ಜಿಲ್ಲೆ ಜಾನಪದ ಕಲೆಗೆ ಹೆಸರಾಗಿದೆ. ಈ ಪೈಕಿ ಅತಿ ಹೆಚ್ಚು ಪೋಡುಗಳು ಇರುವ ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ವಾಸಿಗಳು ತಮ್ಮದೇ ಆದ ನೃತ್ಯ, ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಹಾಡು-ಕುಣಿತದ ಮೂಲಕ ತಮ್ಮ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಇಂತಹ ಅಪರೂಪದ ಸಂಸ್ಕøತಿಗೆ ನಿರಂತರ ಉತ್ತೇಜನ ನೀಡುವುದು ಮುಖ್ಯವಾಗಿದೆ ಎಂದು ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಕೊಂಚ ಸರಳವಾಗಿ ಕಾರ್ಯಕ್ರಮ ಆಯೋಜನೆ ಆಗಿದೆ. ಮುಂದೆ ಮಳೆ-ಬೆಳೆಯಾಗಿ ಸಮೃದ್ದಿಯಾದರೇ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ಸಲಹೆ ಮಾಡಿದರು. ಆದಿವಾಸಿ ನಾಯಕ ಬಿರ್ಸಾಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಅವರು ಗಿರಿಜನರ ಮೂಲ ಕಲೆ-ಸಂಸ್ಕøತಿ ಸೇರಿದಂತೆ ಯಾವುದೇ ಜಾನಪದ ಪರಂಪರೆ ನಶಿಸಿ ಹೋಗದಂತೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲಾರ ಮೇಲಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವು ಸಹ ಮುಖ್ಯವಾಗಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್.ಬಾಲರಾಜು ಮಾತನಾಡಿ ಆದಿವಾಸಿಗಳು ಗಿರಿಜನರ ಸಂಸ್ಕøತಿಯನ್ನು ಪೋಷಿಸುವ ಸಲುವಾಗಿ ಅವರಿಗಾಗಿಯೇ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಾಡಿ-ಪೋಡುಗಳಲ್ಲಿ ಹಮ್ಮಿಕೊಳ್ಳುವುದು ಶ್ಲಾಘನೀಯವಾಗಿದೆ. ಇಂತಹ ವೇದಿಕೆಗಳಲ್ಲಿ ಸ್ಥಳೀಯರು ತಮ್ಮ ಪ್ರತಿಭೆ ಆನಾವರಣ ಮಾಡುವ ಮೂಲಕ ರಾಜ್ಯಮಟ್ಟದಲ್ಲಿಯೂ ಅವಕಾಶ ಪಡೆಯುವಂತಾಗಬೇಕೆಂದು ಹಾರೈಸಿದರು. ತಾಲ್ಲೂಕು ಪಂಚಾಯತ್ ಸದಸ್ಯರಾದ ಕುಮಾರನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತಮ್ಮ, ಉಪಾಧ್ಯಕ್ಷರಾದ ಶಿವನಾಯಕ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ನಾಗವೇಣಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ---------------------------------------------------------------- ಬರ ಪರಿಹಾರ ಕಾಮಗಾರಿಗೆ ಆದ್ಯತೆ : ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಫೆ.18 : ತಾಲ್ಲೂಕಿನಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಪರಿಹಾರ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಆದ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. ತಾಲ್ಲೂಕಿನ ಅರಕಲವಾಡಿ ಗ್ರಾಮದಲ್ಲಿಂದು ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ಹಾಗೂ ಸಾಗುವಳಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದು ಸೇರದಂತೆ ಇನ್ನಿತರ ಸಂಕಷ್ಟ ಪರಿಸ್ಥಿತಿಯನ್ನು ಪರಿಹರಿಸಲು ಸಾಕಾಷ್ಟು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಂತರ್ಜಲ ಬತ್ತಿಹೋಗಿರುವ ಹಿನ್ನೆಲೆಯಲ್ಲಿ ಕೆಲವೆಡೆ ತುಂಬಾ ಆಳವಾಗಿ ಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಆದರೂ ಪರ್ಯಾಯವಾಗಿ ಕುಡಿಯುವ ನೀರು ವ್ಯವಸ್ಥೆ ಮಾಡಲು ಮುಂದಾಗಿದ್ದೇವೆ ಎಂದರು. ಜಾನುವಾರುಗಳಿಗೆ ಮೇವು ಅಭಾವ ಉಂಟಾಗಿರುವ ಬಗ್ಗೆ ಮನವರಿಕೆಯಾಗಿದೆ. ಈಗಾಗಲೇ ಕೆಲವೆಡೆ ಮೇವು ಬ್ಯಾಂಕ್‍ಗಳನ್ನು ತೆರೆಯಲಾಗಿದೆ. ಈ ಭಾಗದಲ್ಲಿ ಗೋಶಾಲೆ ತೆರೆಯುವ ಉದ್ದೇಶವಿದ್ದು, ಕುಡಿಯುವ ನೀರು ಸ್ಥಳ ಲಭ್ಯತೆ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ಗೋಶಾಲೆ ಆರಂಭಿಸಲು ನಿರ್ಧಾರ ಕೈಗೊಂಡು ಜನರಿಗೆ ನೆರವಾಗಲಿದ್ದೇವೆ ಎಂದರು. ಸ್ಥಳೀಯವಾಗಿ ಪಡಿತರ ಪಡೆಯಲು ಇರುವ ತೊಂದರೆಗಳ ಬಗ್ಗೆ ಜನರು ಮನವಿ ಮಾಡಿದ್ದಾರೆ. ಈ ಕುರಿತು ಸಹ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸೂಚಿಸಲಾಗಿದ್ದು, ಪರಿಹಾರಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು. ಇಂದು ಹಲವು ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆಯು ನಡೆಯುತ್ತಿದ್ದು, ಅರ್ಹರೆಲ್ಲರಿಗೂ ಸರ್ಕಾರದ ಸವಲತ್ತು ತಲುಪಿಸಲಾಗುವುದು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಾಗುವಳಿ ಹಕ್ಕು ಪತ್ರವನ್ನು ವಿತರಿಸಲಾಯಿತು. ಸಭೆಯ ಆರಂಭದಲ್ಲೇ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ತಾಲ್ಲೂಕು ಪಂಚಾಯತ್ ಸದಸ್ಯರಾದ ರತ್ನಮ್ಮ, ದೊಡ್ಡಮ್ಮ, ದೊಡ್ಡತಾಯಮ್ಮ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹದೇವಯ್ಯ, ಉಪಾಧ್ಯಕ್ಷರಾದ ಕೆಂಪಣ್ಣ, ಬಗರ್‍ಹುಕಂ ಸಮಿತಿಯ ಸದಸ್ಯರಾದ ಸೋಮಲಿಂಗಪ್ಪ, ತಹಶೀಲ್ದಾರ್ ಪುರಂದರ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. -------------------------------------------------------------------------------- ಫೆ. 20ರಂದು ಸಂತಕವಿ ಸರ್ವಜ್ಞ ಜಯಂತಿ ಚಾಮರಾಜನಗರ, ಫೆ. 18:- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಫೆಬವರಿ 20 ರಂದು ಸಂತಕವಿ ಸರ್ವಜ್ಞ ಜಯಂತಿ ಕಾಂiÀರ್iಕ್ರಮವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ಚಾಮರಾಜೇಶ್ವರ ದೇವಾಲಯದಲ್ಲಿ ಕವಿ ಸರ್ವಜ್ಞ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವೆಂಕಟಯ್ಯನ ಛತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಹೇಶ್ ಹರವೆ ಮುಖ್ಯ ಭಾಷಣ ಮಾಡುವರು. ನಗರದ ಮಹಿಳಾ ಕದಳಿ ವೇದಿಕೆ ತಂಡದವರಿಂದ ವಚನ ಗಾಯನ ಏರ್ಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ. ------------------------------------------------------------------- ಫೆ. 22ರಂದು ನಗರದಲ್ಲಿ ಶಿವಾಜಿ ಜಯಂತಿ ಚಾಮರಾಜನಗರ, ಫೆ. 18 - ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಫೆಬವರಿ 20 ರಂದು ಶಿವಾಜಿ ಜಯಂತಿ ಕಾಂiÀರ್iಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ಚಾಮರಾಜೇಶ್ವರ ದೇವಾಲಯದಲ್ಲಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದÀ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ.ಡಿ. ಪುಷ್ಪಲತಾ ಮುಖ್ಯ ಭಾಷಣ ಮಾಡುವರು. ರಾಮಸಮುದ್ರದ ಮಂಜುನಾಥ್ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ

question paper leak

<ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಹಗರಣದ ಪ್ರಮುಖ ಆರೋಪಿಗಳಾದ ಕಿರಣ್ ಮತ್ತು ಶಿವಕುಮಾರಸ್ವಾಮಿಯನ್ನು ಬಂಧಿಸಲಾಗಿದೆ. ಗಂಗಬೈರಯ್ಯ ಸೇರಿ ಇದುವರೆಗೂ ಈ ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ. 2016ರ ಮಾರ್ಚ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಮಾರ್ಚ್ 21 ರಂದು ನಡೆದ ರಸಾಯನಶಾಸ್ತ್ರ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದು ಮಾಡಲಾಗಿತ್ತು. ಮಾರ್ಚ್ 31 ರಂದು ಮರು ಪರೀಕ್ಷೆ ನಡೆಯಬೇಕಿತ್ತು. ಆದರೆ, ಅಂದು ಬೆಳಗ್ಗೆ ಪತ್ರಿಕೆ ಪುನಃ ಸೋರಿಕೆಯಾಗಿತ್ತು. ಈ ಹಗರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಾನಗಲ್ ಉಪ ಖಜಾನೆಯಿಂದ ಸೋರಿಕೆಯಾಗಿತ್ತು' ಆರೋಪಿಗಳಾದ ರುದ್ರಪ್ಪ, ರಂಗನಾಥ್, ಓಬಳರಾಜು ಮತ್ತು ಮಂಜುನಾಥ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿಗಳಾದ ಟ್ಯುಟೋರಿಯಲ್ ಮುಖ್ಯಸ್ಥ ಮುರಳೀಧರ್ ಮತ್ತು ಸತೀಶ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ

Friday, 17 February 2017

17-02-2017 ಚಾಮರಾಜನಗರ ಸುದ್ದಿಗಳು (ನೂತನ ಸಿಇಓ ಅಧಿಕಾರ ಸ್ವೀಕಾರ,ದೇಶದ ಸಂಸ್ಕøತಿ ಪರಂಪರೆಗೆ ಶೋಷಿತರ ಕೊಡುಗೆ ಅಪಾರ : ವಿ.ಎಸ್.ಉಗ್ರಪ್ಪ)

ನೂತನ ಸಿಇಓ ಅಧಿಕಾರ ಸ್ವೀಕಾರ ಚಾಮರಾಜನಗರ ಫೆ.17 -ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ. ಕೆ.ಹರೀಶ್‍ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ ನೂತನ ಸಿಇಓ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಎಂ.ಮಾದೇಶು, ಮುಖ್ಯ ಲೆಕ್ಕಾಧಿಕಾರಿ ಸಿ.ಬಸವರಾಜು, ಯೋಜನಾ ನಿರ್ದೇಶಕ ಶ್ರೀಧರ್, ಸಹಾಯಕ ಕಾರ್ಯದರ್ಶಿ ಎಚ್.ಸಿ. ನಾಗೇಂದ್ರಪ್ಪ, ಸಹಾಯಕ ಯೋಜನಾಧಿಕಾರಿ ಶ್ರೀನಿವಾಸ್ ಹಾಜರಿದ್ದರು. ಡಾ.ಹರೀಶ್ ಕುಮಾರ್ ಅವರು ಬೆಂಗಳೂರಿನ ಕಂದಾಯ ಇಲಾಖೆಯ ಭೂಮಾಪನ ದಾಖಲೆಗಳ ಆಧುನೀಕರಣ ಹಾಗೂ “ಭೂಮಿ” ನಿರ್ವಹಣಾ ಘಟಕದಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. --------------------------------------- ದೇಶದ ಸಂಸ್ಕøತಿ ಪರಂಪರೆಗೆ ಶೋಷಿತರ ಕೊಡುಗೆ ಅಪಾರ : ವಿ.ಎಸ್.ಉಗ್ರಪ್ಪ ಚಾಮರಾಜನಗರ ಫೆ.17: ದೇಶದ ಸಂಸ್ಕøತಿ ಹಾಗೂ ಪರಂಪರೆಗೆ ಮೂಲ ನಿವಾಸಿಗಳು ಹಾಗೂ ಶೋಷಿತರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷರಾದ ವಿ.ಎಸ್.ಉಗ್ರಪ್ಪ ತಿಳಿಸಿದರು. ನಗರದ ನಿಜಗುಣ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪತ್ರಕರ್ತರ ಎರಡನೇ ದಿನದ ಕಾರ್ಯಾಗಾರದಲ್ಲಿ ಪ್ರಧಾನ ಭಾಷಣಾಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ದೇಶದ ಸಂಸ್ಕøತಿ ಪರಂಪರೆಯನ್ನು ಅವಲೋಕಿಸಿದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಶೋಷಿತರು, ಮೂಲ ನಿವಾಸಿಗಳು ನೀಡಿರುವ ಕೊಡುಗೆಯು ಸಾಕಷ್ಟಿದೆ. ಮಹಾಗ್ರಂಥ ಎನಿಸಿದ ರಾಮಾಯಣ ರಚಿಸಿದವರು ಮಹರ್ಷಿ ವಾಲ್ಮೀಕಿ, ಮಹಾಭಾರತವನ್ನು ಬರೆದವರು ವ್ಯಾಸ ಮಹರ್ಷಿಗಳು ಶೋಷಿತ ವರ್ಗದವರೇ ಆಗಿದ್ದಾರೆ. ಸಂಸ್ಕøತದಲ್ಲಿ ಅಪಾರ ಹೆಸರು ಗಳಿಸಿದ್ದ ಕಾಳಿದಾಸ ಕವಿ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಉಗ್ರಪ್ಪ ತಿಳಿಸಿದರು. ವಿಶ್ವದಲ್ಲಿ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ರಚಿಸಿಕೊಟ್ಟ ಕಿರ್ತಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಹಬಾಳು ಎಂಬುದು ಸಂವಿಧಾನದ ಮೂಲ ಆಶಯವಾಗಿದೆ. ಇಂತಹ ಉನ್ನತ ಪರಿಕಲ್ಪನೆ ನೀಡಿದವರು ಶೋಷಿತ ವರ್ಗಕ್ಕೆ ಸೇರಿದವರೆಂದು ಉಗ್ರಪ್ಪ ಅವರು ಸ್ಮರಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವನ್ನು ನಾಲ್ಕನೇಯ ಅಂಗವೆಂದು ಕರೆಯಲಾಗುತ್ತಿದೆ. ಸಮಾಜದ ಆದಾರ ಸ್ಥಂಭವಾಗಿರುವ ಮಾಧ್ಯಮಗಳು ವಸ್ತುನಿಷ್ಠ ವರದಿಗಳಿಗೆ ಆದ್ಯತೆ ನೀಡಬೇಕಿದೆ. ಸಮಾಜವನ್ನು ಎಚ್ಚರಿಸುವ ಕೆಲಸಕ್ಕೆ ಪ್ರಾಮುಖ್ಯತೆ ನೀಡಬೇಕೆ ವಿನಃ ರಂಜನೆ ವಿಷಯಗಳಿಗೆ ಹೆಚ್ಚು ಪ್ರಚಾರ ಕೊಡುವುದು ಸರಿಯಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ 2013 ರಿಂದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಹಣ ನಿಗಧಿ ಮಾಡುತ್ತಿದೆ. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ತೊಡಗಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಉದ್ದೇಶ ಸಫಲವಾಗುವುದಿಲ್ಲ ಎಂದು ಉಗ್ರಪ್ಪ ತಿಳಿಸಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಮಾಧ್ಯಮ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯತೊಡಗಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ವರದಿಗಳು ಬರಬೇಕಿದೆ. ಸಮಾಜವನ್ನು ತಿದ್ದುವ ಹಾಗೂ ಅಂಕು-ಡೊಂಕುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುವ ಮಹತ್ತರ ಹೊಣೆಗಾರಿಕೆಯು ಮಾಧ್ಯಮಗಳ ಮೇಲಿದೆ ಎಂದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ದರಾಜು, ಸದಸ್ಯರಾದ ರಂಗಣ್ಣ, ಕೆ.ಶಿವಕುಮಾರ್, ಮುತ್ತುನಾಯ್ಕರ್, ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಆಸಕ್ತರಿಗೆ ಉತ್ತೇಜನ ಅಗತ್ಯ : ಆರ್.ಧ್ರುವನಾರಾಯಣ ಚಾಮರಾಜನಗರ ಫೆ.17: ಪತ್ರಿಕಾ ರಂಗಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಪೀಳಿಗೆಗೆ ಹಿರಿಯ ಪತ್ರಕರ್ತರು ಮತ್ತು ಪತ್ರಿಕಾ ಅಕಾಡೆಮಿ ಉತ್ತೇಜನ ನೀಡುವ ಕೆಲಸವನ್ನು ನಿರಂತರವಾಗಿ ಮಾಡಬೇಕಿದೆ ಎಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಸಲಹೆ ಮಾಡಿದರು. ನಗರದ ನಿಜಗುಣ ಹೋಟೆಲ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪತ್ರಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರಕ್ಕೆ ಇಂದು ಅನೇಕ ಯುವ ಜನರು ಕಾಲಿಡುತ್ತಿದ್ದಾರೆ. ಇತರೆ ವರ್ಗಗಳಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಮಾಧ್ಯಮ ರಂಗಕ್ಕೆ ಬರುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಕ್ಕೆ ಸೇರಿದವರಿಗೂ ಹಿರಿಯ ಪತ್ರಕರ್ತರು ಹಾಗೂ ಅಕಾಡೆಮಿಯು ಪ್ರೋತ್ಸಾಹ ನೀಡಬೇಕೆಂದು ಧ್ರುವನಾರಾಯಣ ಆಶಿಸಿದರು. ಯಾವುದೇ ರಂಗದಲ್ಲಿ ಯಶಸ್ವಿಯಾಗಬೇಕಾದರೆ ಪರಿಶ್ರಮ ಪಡಲೆಬೇಕು. ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ದೆ, ಬದ್ದತೆ ತೋರಬೇಕು. ಸನ್ಮಾರ್ಗದಲ್ಲಿ ನಡೆದು ವೃತ್ತಿಯಲ್ಲಿ ಯಶಸ್ಸು ಪಡೆಯಬೇಕು ಎಂದು ಧ್ರುವನಾರಾಯಣ ಕಿವಿಮಾತು ಹೇಳಿದರು. ಪತ್ರಕರ್ತರಿಗೆ ಅಭದ್ರತೆ ಭಾವನೆ ಇದೆ, ಅವರ ವೃತ್ತಿಗೆ ಭದ್ರತೆ ಇಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಪತ್ರಕರ್ತರಿಗೆ ಸರ್ಕಾರದಿಂದ ಲಭಿಸಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ತಾವು ಸಹ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ ಧ್ರುವನಾರಾಯಣ ಅವರು ಪತ್ರಿಕೆಗಳ ಅಭಿವೃದ್ದಿಗೆ ಸಂಬಂಧಿಸಿದ ಬೇಡಿಕೆಗೆ ತಾವು ಸಹ ಸ್ಪಂದಿಸಲು ಸಿದ್ದರಿರುವುದಾಗಿ ತಿಳಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪತ್ರಿಕಾಗಳ ಸಂಪಾದಕರ ಸಂಘಗಳ ಉಪಾಧ್ಯಕ್ಷರಾದ ನಾಗರಾಜು ಅವರು ಮಾತನಾಡಿ ಪತ್ರಕರ್ತರು ಬದ್ದತೆಯಿಂದ ಕೆಲಸ ಮಾಡಬೇಕು, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಪ್ರಶಸ್ತಿ ಪುರಸ್ಕøತರಾದ ಸುದ್ದಿಸಂಜೆ ಪತ್ರಿಕೆ ಸಂಪಾದಕರಾದ ಡಿ.ಶಶಿಧರ ಅವರನ್ನು ರಂಗವಾಹಿನಿ ಸಂಸ್ಥೆಯ ಪರವಾಗಿ ಆರ್.ಧ್ರುವನಾರಾಯಣ, ಸಿ.ಎಂ.ನರಸಿಂಹಮೂರ್ತಿ ಹಾಗೂ ಇತರೆ ಗಣ್ಯರು ಸನ್ಮಾನಿಸಿದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ದರಾಜು, ಸದಸ್ಯರಾದ ಮುತ್ತುನಾಯ್ಕರ್, ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ------------------------------------------ ಫೆ.18 ರಂದು ಶ್ರೀನಿವಾಸಪುರ ಕಾಲೋನಿಯಲ್ಲಿ ಗಿರಿಜನ ಬುಡಕಟ್ಟು ಸಾಂಸ್ಕøತಿಕ ಉತ್ಸವ ಚಾಮರಾಜನಗರ ಫೆ.17: ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಗಿರಿಜನ ಬುಡಕಟ್ಟು ಸಾಂಸ್ಕøತಿಕ ಉತ್ಸವವನ್ನು ಚಾಮರಾಜನಗರ ತಾಲ್ಲೂಕಿನ ಪುಣಜನೂರು ವಲಯದ ಶ್ರೀನಿವಾಸಪುರ ಕಾಲೋನಿಯಲ್ಲಿ ಫೆಬ್ರವರಿ 18 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಆಹಾರ ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಉಮಾಶ್ರೀ ಮೆರವಣಿಗೆ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಮತ್ತು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಬಿರ್ಸಾಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ವಿಧಾನ ಪರಿಷತ್ ಉಪ ಸಭಾಪತಿಯವರಾದ ಮರಿತಿಬ್ಬೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ, ಕೆ.ಟಿ.ಶ್ರೀಕಂಠೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಚಿನ್ನಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಸದಸ್ಯರಾದ ಕುಮಾರನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತಮ್ಮ, ಉಪಾಧ್ಯಕ್ಷರಾದ ಶಿವನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಕೆ.ಎ.ದಂiÀiನಂದ, ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ. ----------------------------------------- ಫೆ.18 ರಂದು ಅರಕಲವಾಡಿಯಲ್ಲಿ ಜನ ಸಂಪರ್ಕ ಸಭೆ : ಸಮಯ ಬದಲು ಚಾಮರಾಜನಗರ ಫೆ.17 (: ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅರಕಲವಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಬಳಿ ಫೆಬ್ರವರಿ 18 ರಂದು ಬೆಳಿಗ್ಗೆ 10 ಗಂಟೆಗೆ ನಿಗಧಿಯಾಗಿದ್ದ ಜನ ಸಂಪರ್ಕ ಸಭೆಯನ್ನು 12.30 ಗಂಟೆಗೆ ಆರಂಭಿಸಲಾಗುತ್ತದೆ. ನಾಗರೀಕರು ಜನ ಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------------------------------------------------- ಮಾ.5 ಕ್ಕೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಮುಂದೂಡಿಕೆ ಚಾಮರಾಜನಗರ ಫೆ.17 ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಏಕಲವ್ಯ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಫೆಬ್ರವರಿ 19 ರಂದು ನಿಗಧಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿ ಮಾರ್ಚ್ 5 ಕ್ಕೆ ನಿಗಧಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸತೀಶ್ ಅವರು ತಿಳಿಸಿದ್ದಾರೆ. ---------------------------------------

17-02-2017 ಚಾಮರಾಜನಗರ: ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಎಸ್ಪಿ ಅವರಿಂದ ಚಾಲನೆ

ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಎಸ್ಪಿ ಅವರಿಂದ ಚಾಲನೆ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ರಾಜ್ಯ ಪೋಲೀಸ್ ಇಲಾಖೆಯಿಂದ ಚಾಮರಾಜನಗರ ಜಿಲ್ಲಾ ಪೋಲಿಸ್ ಇಲಾಖೆಗೆ ಮಂಜೂರಾದ 3 ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಜಿಲ್ಲಾ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಇಂದು ತಮ್ಮ ಕಛೇರಿ ಮುಂಭಾಗ ಚಾಲನೆ ನೀಡಿದರು. ಸದರಿ ಮಂಜೂರಾದ 3 ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನವು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು.ಈಗಾಗಲೇ ಗುಂಡ್ಲುಪೇಟೆಯಲ್ಲಿ ಇರುವ ವಾಹನವನ್ನು ಹನೂರು ಠಾಣಾ ವ್ಯಾಪ್ತಿಗೆ ನಿಯೋಜಿಸಲಾಗುವುದು, ಈಗ ಚಾಲನೆ ನೀಡಲಾಗಿರುವ 3 ವಾಹನಗಳು 24 ಗಂಟೆಗಳು ಕರ್ತವ್ಯನಿರತರಾಘಿದ್ದು 360 ಡಿಗ್ರಿ ಸುತ್ತುವ ಕ್ಯಾಮೆರಾ ಅಪಘಾತ, ಗಾಯಾಳುಗಳನ್ನು ಸಾಗಿಸಲು ಸ್ಟ್ರೇಕ್ಚರ್,ಪಬ್ಲಿಂಗ್ ಅಡ್ರೆಸಿಂಗ ಸಿಸ್ಟಂ,ಸರ್ಚ್‍ಲೈಟ್ ತುರ್ತು ಸಂದರ್ಭಗಳಿಗೆ ಅನುಕೂಲವಾಗುವಂತೆ ಇತ್ಯಾದಿ ಆದುನಿಕ ಸುಪಕರಣಗಳನ್ನು ಹೊಂದಿದೆ ಎಂದು ಮಾದ್ಯಮಗಳಿಗೆ ತಿಳಿಸಿದರು. ಕಾರ್ಯಕ್ರಮ ಚಾಲನಾ ಸಂದರ್ಭದಲ್ಲಿ ಎಎಸ್ಪಿ ಮುತ್ತುರಾಜ್ ಗೌಡ, ಡಿವೈಸ್ಪಿ ಗಂಗಾಧರ ಸ್ವಾಮಿ, ವಾಹನ ವಿಭಾಗದ ಸುಬ್ರಮಣ್ಯ ಸೇರಿದಂತೆ ಇತರ ಅದಿಕಾರಿಗಳು ಹಾಜರಿದ್ದರು ****************************************

16-02-2017 ಚಾಮರಾಜನಗರ, ಫೆ. -ಪತ್ರಕರ್ತರ ಕಾರ್ಯಾಗಾರಕ್ಕೆ ಚಾಲನೆ,ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಪ.ಜಾ. ಪ.ಪಂ ಪತ್ರಕರ್ತರ ಕಾರ್ಯಾಗಾರಕ್ಕೆ ಚಾಲನೆ ಚಾಮರಾಜನಗರ, ಫೆ. 16 - ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಹಮ್ಮಿಕೊಂಡಿರುವ 2 ದಿನಗಳ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಇಂದು ನಗರದಲ್ಲಿ ಚಾಲನೆ ದೊರೆಯಿತು. ನಗರದ ನಿಜಗುಣ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್‍ಮಟ್ಟು ಅವರು ಪತ್ರಕರ್ತರು ಸೂಕ್ಷ್ಮ ಸಹೃದಯ ಉಳ್ಳವರಾಗಿರಬೇಕು. ದೌರ್ಜನ್ಯಕ್ಕೆ ಒಳಗಾದವರು, ಸಂಕಷ್ಟ, ದುಃಖದಲ್ಲಿ ಇರುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಷ್ಟೂ ಉತ್ತಮ ವರದಿ ಬರಲು ಅನುಕೂಲವಾಗುತ್ತದೆ ಎಂದರು. ದಲಿತ ಪತ್ರಕರ್ತರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್, ಲೋಹಿಯಾ, ಗಾಂಧಿ, ವಿವೇಕಾನಂದ ಸೇರಿದಂತೆ ಅನೇಕರ ವಿಚಾರಗಳನ್ನು ಕೃತಿಗಳನ್ನು ಅಧ್ಯಯನ ಮಾಡಬೇಕು. ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸತತ ಆಸಕ್ತಿ ಇರಬೇಕು ಎಂದು ಸಲಹೆ ಮಾಡಿದರು. ಮಾಧ್ಯಮ ಕ್ಷೇತ್ರದಲ್ಲಿ ಇರುವವರು ದೌರ್ಬಲ್ಯಕ್ಕೆ ಒಳಗಾಗಬಾರದು. ಕೆಲವೊಮ್ಮೆ ಅನಗತ್ಯ ಒತ್ತಡವನ್ನು ಸಹಿಸಿಕೊಳ್ಳಬೇಕಿದೆ. ತಮ್ಮ ಪ್ರತಿಭೆಯ ಮೂಲಕ ಉತ್ತರ ಕೊಡಬೇಕು. ಯಾವುದೇ ಕಾರಣಕ್ಕೂ ಹತಾಶರಾಗಬಾರದು ಎಂದರು. ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ಕಾರ್ಯಾಗಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಪ್ರಯೋಜನ ಪಡೆದು ವೃತ್ತಿಯಲ್ಲಿ ಬೆಳವಣಿಗೆ ಹೊಂದಲು ಮುಂದಾಗÀಬೇಕು ಎಂದು ಅಮೀನ್ ಮಟ್ಟು ತಿಳಿಸಿದರು. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪತ್ರಿಕೆಗಳ ಸಂಪಾದಕರದ ಸಂಘದ ಅಧ್ಯಕ್ಷರಾದ ಚಲುವರಾಜು ಮಾತನಾಡಿ ಪರಿಶಿಷ್ಟ ಜಾತಿ ಪಂಗಡಗಳ ಪತ್ರಕರ್ತರಿಗೆ ಇಂತಹ ಕಾರ್ಯಾಗಾರಗಳು ಅವಶ್ಯಕತೆ ಇದೆ. ಅಕಾಡೆಮಿಯು ಪತ್ರಕರ್ತರಿಗೆ ಅನುಕೂಲವಾಗುವ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು. ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾದ ಮುತ್ತುನಾಯ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕಾಡೆಮಿಯ ಕಾರ್ಯದರ್ಶಿ ಎಸ್. ಶಂಕರಪ್ಪ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷರಾದ ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. //////////////////////////////////////////////////////////////////// ಫೆ. 17ರಂದು ಪ.ಜಾ. ಪ.ಪಂ ಪತ್ರಕರ್ತರಿಗೆ 2ನೇ ದಿನದ ಕಾರ್ಯಾಗಾರ ಚಾಮರಾಜನಗರ, ಫೆ. 16 - ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಫೆಬ್ರವರಿ 17ರಂದು ಬೆಳಿಗ್ಗೆ 10 ಗಂಟೆಗೆ ನಗರದ ನಿಜಗುಣ ರೆಸಾರ್ಟ್‍ನಲ್ಲಿ ಹಮ್ಮಿಕೊಂಡಿರುವ 2ನೇ ದಿನದ ಕಾರ್ಯಾಗಾರದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರೂ ಆದ ವಿ.ಎಸ್. ಉಗ್ರಪ್ಪ ಪ್ರಧಾನ ಭಾಷಣ ಮಾಡುವರು. ಬಳಿಕ ಮೊದಲನೇ ಗೋಷ್ಠಿ ನಡೆಯಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಭಾಷ್ಯಂತರ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ. ಮಹದೇವಯ್ಯ ಮಾಧ್ಯಮಗಳಲ್ಲಿ ಭಾಷೆ ಬಳಕೆ ಹಾಗೂ ಸರ್ಕಾರದ ಸವಲತ್ತುಗಳು ಹಾಗೂ ಸದ್ಭಳಕೆ ಕುರಿತು ಚಿಂತಕರಾದ ಕ್ಷೀರಸಾಗರ ವಿಷಯ ಮಂಡಿಸುವರು. ಮಧ್ಯಾಹ್ನ 3 ಗಂಟೆಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ಧ್ರುವನಾರಾಯಣ ಅಧ್ಯಕ್ಷತೆ ವಹಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಉಪಸ್ಥಿತರಿರುವರು. ರಾಯಚೂರು ಈಶಾನ್ಯ ಟೈಮ್ಸ್ ಸಂಪಾದಕರಾದ ಎನ್. ನಾಗರಾಜ ಸಮಾರೋಪ ಭಾಷಣ ಮಾಡುವರು ಎಂದು ಅಕಾಡೆಮಿ ತಿಳಿಸಿದೆ. ----------------------------------------------------------------- ಫೆ. 17ರಂದು ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ ಚಾಮರಾಜನಗರ, ಫೆ. 16 - ತಾಲೂಕು ಆಡಳಿತದ ವತಿಯಿಂದ ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಎಪಿಎಂಸಿ ಕಾರ್ಯಾಲಯದ ಆವರಣದಲ್ಲಿ ಮೇವು ಬ್ಯಾಂಕ್ ಅನ್ನು ಫೆಬ್ರವರಿ 17 ರಿಂದ ಆರಂಭಿಸಲಾಗುತ್ತಿದೆ. ಶಾಸಕರಾದ ಎಸ್. ಜಯಣ್ಣ ಅವರು ಫೆಬವರಿ 17ರಂದು ಬೆಳಿಗ್ಗೆ 10.30 ಗಂಟೆಗೆ ಮೇವು ಕೇಂದ್ರವನ್ನು ಉದ್ಘಾಟಿಸುವರು. ನಾಗರಿಕರು ಮೇವು ಕೇಂದ್ರವನ್ನು ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಕೆ. ಪುರಂಧರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ------------------------------------------------------------ ಫೆ. 18ರಂದು ಅರಕಲವಾಡಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಫೆ. 16- ತಾಲೂಕು ಆಡಳಿತದ ವತಿಯಿಂದ ಸಾರ್ವಜನಿಕರ ಅಹವಾಲು ಆಲಿಸುವ ಸಲುವಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹರದನಹಳ್ಳಿ ಹೋಬಳಿಯ ಅರಕಲವಾಡಿ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಮುಂಭಾಗ ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಗೆ ಜನಸಂಪರ್ಕ ಸಭೆ ಆಯೋಜಿಸಲಾಗಿದೆ. ನಾಗರಿಕರು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ತಹಸೀಲ್ದಾರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Wednesday, 15 February 2017

14-02-2017 ಮತ್ತು 15-02-2017 ಚಾಮರಾಜನಗರ, ಸುದ್ದಿಗಳು

ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭಾನ್ವೇಷಣ ಪರೀಕ್ಷೆ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಮೊದಲ ಬಾರಿಗೆ ಮಕ್ಕಳಲ್ಲಿ ಕನ್ನಡ ಭಾಷೆಯ ಜಾಗೃತಿಗಾಗಿ ಸಾಹಿತಿ ನಾ. ಡಿಸೋಜ ಹಾಗೂ ಕಾದಂಬರಿಕಾರ ಕುಂ. ವೀರಭದ್ರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಕನ್ನಡದ ಮೊದಲ ದೊರೆ ಮಯೂರ ವರ್ಮನ ಸ್ಮರಣೆಯಲ್ಲಿ ಮಯೂರ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಯು ಶಾಲಾ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯಲಿದ್ದು ಈ ಪರೀಕ್ಷೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವತಿಯಿಂದ ರೂ. ಒಂದು ಲಕ್ಷ ಮೌಲ್ಯದ ದುರ್ಘಟನಾ ವಿಮೆ ಸೌಲಭ್ಯವಿರುತ್ತದೆ. ಕರ್ನಾಟಕ ಸರ್ಕಾರದ ಒಂದು ಉದ್ಯಮವಾದ ಕಿಯೋನಿಕ್ಸ್ ವತಿಯಿಂದ ರೂ. 500ಗಳ ಕೂಪನನ್ನು ಉಡುಗೊರೆಯಾಗಿ ನೀಡಲಿದೆ. ಪ್ರತೀ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಮಾಣ ಪತ್ರದೊಂದಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿಜೇತರಾಗುವ ಮಕ್ಕಳಿಗೆ ಮಯೂರ ಅಕ್ಷರ ವೀರ ಪ್ರಶಸ್ತಿ ಹಾಗೂ ರೂ. 1 ಲಕ್ಷ, 50 ಸಾವಿರ, 25 ಸಾವಿರ, ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಪುರಸ್ಕಾರವಾಗಿ ನೀಡಲಾಗುವುದು. ಈ ಪರೀಕ್ಷೆಯು 5 ರಿಂದ 7ನೇ ತರಗತಿ ಹಾಗೂ 5 ರಿಂದ 10ನೇ ತರಗತಿಯ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪುರಸ್ಕಾರಗಳನ್ನು ಸಹ ಪ್ರತ್ಯೇಕವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25. ಕನ್ನಡ ಸಂಶೋಧನೆ ಮತ್ತು ಪ್ರತಿಷ್ಠಾನ (ನೋಂ) ಹಾಗೂ ಈ-ನೆಟ್ ಇನ್ಫಾರ್ಮೆಟಿಕ್ ಸಂಸ್ಥೆ, ಶಿರಾಳಕÉೂಪ್ಪ ಇವರ ನೆರವಿನಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.eಟಿeಣಞಚಿಟಿಟಿಚಿಜಚಿ.ಛಿom, ಸಹಾಯವಾಣಿ 9026131818 ಸಂಪರ್ಕಿಸಬಹುದು ಹಾಗೂ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ, ಕೆನರಾ ಬ್ಯಾಂಕ್ ಮೇಲ್ಮಹಡಿ, ಡಬಲ್ ರೋಡ್, ಚಾಮರಾಜನಗರ (ಮೊಬೈಲ್ 9886775550)ಇಲ್ಲಿ ಮಾಹಿತಿಯನ್ನು ಸಹ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ. ---------------------------- ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಎರಡು ಹಂತಗಳಲ್ಲಿ ಜರುಗಲಿದ್ದು ಮೊದಲನೇ ಹಂತದ ಜಿಲ್ಲಾಮಟ್ಟದ ಲಿಖಿತ ರಸಪ್ರಶ್ನೆ ಸ್ಪರ್ಧೆ ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಜರುಗಲಿದೆ. ಜಿಲ್ಲಾಮಟ್ಟದ ಪರೀಕ್ಷಾ ಕೇಂದ್ರವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಂಯೋಜಕರು ಮತ್ತು ಉಪನಿರ್ದೇಶಕರು ಆಯ್ಕೆ ಮಾಡಲಿದ್ದಾರೆ. ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳ ಒಂದು ಗುಂಪು ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸುವರು. ರಾಜ್ಯಮಟ್ಟದ ಸ್ಪರ್ಧೆಯು ಮಾರ್ಚ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ನಗರದ ಜಿಲ್ಲಾಡಳಿತದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಚೇರಿ, ರಾಜ್ಯ ಸಂಯೋಜಕರಾದ ಆರ್.ಎಸ್. ಪಾಟೀಲ್ (ಮೊ.9448867705) ಹಾಗೂ ಸಹ ಸಂಚಾಲಕರಾದ ಬಿ. ದೊಡ್ಡಬಸಪ್ಪ (ಮೊ. 9880656200) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ------------------------------------------------- ಫೆ. 16, 17ರಂದು ಪ.ಜಾ. ಪ.ಪಂ ಪತ್ರಕರ್ತರಿಗೆ ಕಾರ್ಯಾಗಾರ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಫೆಬ್ರವರಿ 16 ಹಾಗೂ 17ರಂದು 2 ದಿನಗಳ ಕಾರ್ಯಾಗಾರವನ್ನು ನಗರದ ನಿಜಗುಣ ರೆಸಾರ್ಟ್‍ನಲ್ಲಿ ಆಯೋಜಿಸಿದೆ. ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಾಗಾರ ಉದ್ಘಾಟಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್‍ಮಟ್ಟು ಪ್ರಧಾನ ಭಾಷಣ ಮಾಡುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಮುತ್ತು ನಾಯ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ಶಿವಕುಮಾರ್, ರುದ್ರಣ್ಣ ಹರ್ತಿಕೋಟೆ, ಟಿ.ಎಸ್. ರಂಗಣ್ಣ, ಬಿ. ವೆಂಕಟಸಿಂಗ್ ಹಾಗೂ ಕರ್ನಾಟಕ ರಾಜ್ಯ ಎಸ್‍ಸಿ ಎಸ್‍ಟಿ ಪತ್ರಿಕೆಗಳ ಸಂಪಾದಕರದ ಸಂಘದ ಅಧ್ಯಕ್ಷರಾದ ಚಲುವರಾಜು ಉಪಸ್ಥಿತರಿರುವರು. ವಿಚಾರಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪತ್ರಕರ್ತರ ಪ್ರಸ್ತುತ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ಮೋಹನ್ ನಾಗಮ್ಮನವರ್, ಗಿರಿಜನ ಅಭಿವೃದ್ಧಿ ಮತ್ತು ಮಾಧ್ಯಮ ಕುರಿತು ದೀನಬಂಧು ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ವಿಷಯ ಮಂಡಿಸುವರು. ಫೆಬ್ರವರಿ 17ರಂದು ಬೆಳಿಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರೂ ಆದ ವಿ.ಎಸ್. ಉಗ್ರಪ್ಪ ಪ್ರಧಾನ ಭಾಷಣ ಮಾಡುವರು. ಗೋಷ್ಠಿಯಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಭಾಷ್ಯಂತರ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ. ಮಹದೇವಯ್ಯ ಮಾಧ್ಯಮಗಳಲ್ಲಿ ಭಾಷೆ ಬಳಕೆ ಹಾಗೂ ಸರ್ಕಾರದ ಸವಲತ್ತುಗಳು ಹಾಗೂ ಸದ್ಭಳಕೆ ಕುರಿತು ಚಿಂತಕರಾದ ಕ್ಷೀರಸಾಗರ ವಿಷಯ ಮಂಡಿಸುವರು. ಮಧ್ಯಾಹ್ನ 3 ಗಂಟೆಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ಧ್ರುವನಾರಾಯಣ ಅಧ್ಯಕ್ಷತೆ ವಹಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಉಪಸ್ಥಿತರಿರುವರು. ರಾಯಚೂರು ಈಶಾನ್ಯ ಟೈಮ್ಸ್ ಸಂಪಾದಕರಾದ ಎನ್. ನಾಗರಾಜ ಸಮಾರೋಪ ಭಾಷಣ ಮಾಡುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ----------------------------------------------------- ಪ.ಜಾ. ಪ.ಪಂ ಪತ್ರಕರ್ತರಿಗೆ ಕಾರ್ಯಾಗಾರ : ನೋಂದಣಿಗೆ ಮನವಿ ಚಾಮರಾಜನಗರ, ಫೆ. 15 (ಕರ್ನಾಟಕ ವಾರ್ತೆ):- ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಫೆಬ್ರವರಿ 16 ಹಾಗೂ 17ರಂದು 2 ದಿನಗಳ ಕಾರ್ಯಾಗಾರವನ್ನು ನಗರದ ನಿಜಗುಣ ರೆಸಾರ್ಟ್‍ನಲ್ಲಿ ಆಯೋಜಿಸಿದೆ. ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರ ಆರಂಭವಾಗಲಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರು ಹಾಗೂ ಪತ್ರಕರ್ತರಿಗೆ ಏರ್ಪಡಿಸಿರುವ ಎರಡು ದಿನದ ಕಾರ್ಯಾಗಾರಕ್ಕೆ ಆಗಮಿಸುವವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮಾನ್ಯತೆ ಕಾರ್ಡ್ ಹೊಂದಿರದ ಪತ್ರಕರ್ತರಿಗೆ ಪ್ರಯಾಣ ವೆಚ್ಚ ಭರಿಸಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳಾದ ಎಸ್. ಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------------------------------------------------- ತಂಬಾಕು ಸೇವೆನೆ ನಿಷೇಧ ಫಲಕ ಕಡ್ಡಾಯವಾಗಿ ಅಳವಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಸೂಚನೆ ಚಾಮರಾಜನಗರ ಫೆ.14 (ಕರ್ನಾಟಕ ವಾರ್ತೆ) : ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ ನಿಷೇಧ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ನಗರಸಭೆ, ಪುರಸಭೆ ಇನ್ನಿತರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ವಹಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಷೇಧ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ಸೇವೆನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಿಳಿಸುವ ಅಂಶಗಳನ್ನು ಒಳಗೊಂಡಂತೆ ಚಲನಚಿತ್ರ ಮಂದಿರ, ಹೋಟೆಲ್, ಬಾರ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ ನಿಷೇಧಿಸಿರುವ ಬಗ್ಗೆ ಪ್ರಧಾನವಾಗಿ ಫಲಕಗಳನ್ನು ಹಾಕಬೇಕು. ಆನೇಕ ಕಡೆ ತಂಬಾಕು ನಿಷೇಧ ಕುರಿತ ಫಲಕಗಳು ಅಳವಡಿಸದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಭಾರತಿ ತಿಳಿಸಿದರು. ತಂಬಾಕು ಉತ್ಪನ್ನ ಮಾರಾಟ ಮಾಡುವ ಮಾಲೀಕರಿಗೆ ಕೋಟ್ಪಾ ಕಾಯ್ದೆ 2003ರ ಅನುಸಾರವಾಗಿ ಟ್ರೇಡ್ ಲೈಸೆನ್ಸ್ ರದ್ದುಪಡಿಸುವ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ವ್ಯಾಪಾರ ಮಾಡಲು ಪರವಾನಗಿ ನೀಡುವ ನಿಬಂಧನೆಗಳಲ್ಲಿ ಕಾಯ್ದೆ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಜಾರಿಯಲ್ಲಿರುವ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿ ಮಾಡಲು ಅವಶ್ಯಕ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ಕಾಲಕಾಲಕ್ಕೆ ಆಯೋಜಿಸಿ ವರದಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗುವಂತೆ ಅವರು ತಿಳಿಸಿದರು. ನಗರಸಭೆ, ಪುರಸಭೆ ಇನ್ನಿತರ ಸ್ಥಳೀಯ ಸಂಸ್ಥೆಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕಾಯ್ದೆ ಅನುಸಾರ ಹೇಗೆ ಪಾಲನೆಯಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿ ದಾಳಿ ಕಾರ್ಯವನ್ನು ನಡೆಸಬೇಕು. ಕೋಟ್ಪಾ ಕಾಯ್ದೆ ಬಗ್ಗೆ ವಿವಿಧ ಇಲಾಖೆಗಳು ನಡೆಸುವ ಸಭೆಯಲ್ಲಿಯೂ ಚರ್ಚಿಸಬೇಕು. ಪ್ರತಿ ತಿಂಗಳಲ್ಲಿ ಒಂದು ದಿನ ತಂಬಾಕು ವಿರೋಧಿ ದಿನವನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲು ಕ್ರಮವಹಿಸಬೇಕೆಂದು ಭಾರತಿ ಅವರು ತಿಳಿಸಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಡಾ.ಹನುಮಂತರಾಯಪ್ಪ ಮಾತನಾಡಿ ಶಿಕ್ಷಣ ಸಂಸ್ಥೆಗಳು ಸಹ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಜೋಡಿಸಬೇಕಿದೆ. ಶೈಕ್ಷಣಿಕ ಸಂಸ್ಥೆಯ ನೂರು ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಲಾಬಿ ಚಳವಳಿ ಮತ್ತು ಕೆಂಪು ಬಣ್ಣದ ಗೆರೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ತಂಬಾಕು ಸೇವೆನೆ ನಿಷೇಧದ ಬಗ್ಗೆ ಅರಿವು ಮೂಡಿಸಬಹುದು, ಅಲ್ಲದೇ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಬಹುದು ಎಂದು ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ.ಹೆಚ್.ಪ್ರಸಾದ್, ಡಿವೈಎಸ್ಪಿ ಎಸ್.ಇ.ಗಂಗಾಧರಸ್ವಾಮಿ, ತಹಶೀಲ್ದಾರ್ ಚಂದ್ರಮೌಳಿ, ಜಿಲ್ಲಾ ತಂಬಾಕು ನೋಡಲ್ ಅಧಿಕಾರಿ ಡಾ|| ನಾಗರಾಜು, ನಗರಸಭೆ, ಪುರಸಭೆ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. *************************

Monday, 13 February 2017

ಹನೂರಿನಲ್ಲಿ 15ಕ್ಕೆ ಬೃಹತ್ ಜನಾಂದೋಲನ,ನಮ್ಮ ಬೆಟ್ಟ ನಮಗೆ ಬಿಡಿ:

ಗೋ ಪರಿವಾರ- ಮಲೆಮಹದೇಶ್ವರ ಬೆಟ್ಟ ವತಿಯಿಂದ ದಿನಾಂಕ 13-02-2017ರಂದು ಚಾಮರಾಜನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆ ನಮ್ಮ ಬೆಟ್ಟ ನಮಗೆ ಬಿಡಿ: ಹನೂರಿನಲ್ಲಿ 15ಕ್ಕೆ ಬೃಹತ್ ಜನಾಂದೋಲನ ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಪ್ರದೇಶವನ್ನು ರಾಷ್ಟ್ರೀಯ ವನ್ಯಧಾಮವಾಗಿ ಘೋಷಿಸಿದ ಬಳಿಕ, ಬೆಟ್ಟದಲ್ಲಿ ಹಸುಗಳನ್ನು ಮೇಯಿಸಲು ಅರಣ್ಯ ಇಲಾಖೆ ಅವಕಾಶ ನೀಡದಿರುವುದರಿಂದ ಬೆಟ್ಟದ ತಪ್ಪಲಿನ 160ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ಹಸುಗಳ ಜೀವಕ್ಕೆ ಅಪಾಯ ಎದುರಾಗಿದೆ. ಆದ್ದರಿಂದ ಬೆಟ್ಟದಲ್ಲಿ ಹಸುಗಳನ್ನು ಮೇಯಿಸಲು ಅವಕಾಶ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಹನೂರಿನ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಈ ತಿಂಗಳ 15ರಂದು ಬೆಳಿಗ್ಗೆ 10ಕ್ಕೆ ಬೃಹತ್ ಜನಾಂದೋಲನ ಆಯೋಜಿಸಲಾಗಿದೆ. ತಲೆತಲಾಂತರದಿಂದ ಬೆಟ್ಟದಲ್ಲಿ ದೊಡ್ಡಿಗಳನ್ನು ನಿರ್ಮಿಸಿಕೊಂಡು ಜಾನುವಾರುಗಳನ್ನು ಮೇಯಿಸುತ್ತಾ ಬಂದ 15 ಸಾವಿರಕ್ಕೂ ಹೆಚ್ಚು ಗೋಪಾಲಕರು ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳುವರು. ಬೇಸಿಗೆ ಆರಂಭದಲ್ಲೇ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗುತ್ತಿದ್ದು, ಮೇವು ಹಾಗೂ ನೀರಿನ ಕೊರತೆ ವ್ಯಾಪಕವಾಗುತ್ತಿದೆ. ಜಿಲ್ಲೆಯ ಮಂಗಲ, ಗುಂಡ್ಲುಪೇಟೆ ಹಾಗೂ ರಾಮಾಪುರದಲ್ಲಿ ಸರ್ಕಾರ ಗೋಶಾಲೆಗಳನ್ನು ತೆರೆದಿದ್ದರೂ, ಜಾನುವಾರುಗಳು ಹಸಿವಿನಿಂದ ಸಾಯುತ್ತಿರುವ ಬಗ್ಗೆ ವರದಿಗಳು ಬರುತ್ತಲೇ ಇವೆ. ನಮ್ಮ ಕಾರ್ಯಕರ್ತರು ಕಳೆದ ಹತ್ತು ದಿನಗಳಿಂದ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿದಾಗ ಈ ಕರಾಳ ಚಿತ್ರಣ ಅನಾವರಣಗೊಂಡಿದೆ. ಕಳೆದ 10 ದಿನಗಳಲ್ಲೇ ಹಸಿವಿನಿಂದಾಗಿ 15ಕ್ಕೂ ಹೆಚ್ಚು ಜಾನುವಾರುಗಳು ಬೆಟ್ಟದ ತಪ್ಪಲ ಗ್ರಾಮಗಳಲ್ಲೇ ಸತ್ತಿದ್ದು, ಬೇಸಿಗೆ ಹೆಚ್ಚಿದಂತೆಲ್ಲ ಅಪಾಯ ಮತ್ತಷ್ಟು ಹೆಚ್ಚುವ ಭೀತಿ ಇದೆ. ಆದ್ದರಿಂದ ಬೆಟ್ಟದಲ್ಲಿ ದೊಡ್ಡಿಗಳನ್ನು ನಿರ್ಮಿಸಿಕೊಳ್ಳಲು ನಿರ್ಮಿಸಲು ಅವಕಾಶ ಮಾಡಿಕೊಟ್ಟರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎನ್ನುವುದು ಗೋಪಾಲಕರ ಒಕ್ಕೊರಲ ಅಭಿಪ್ರಾಯ. ಆದ್ದರಿಂದ ಹಿಂದೆ ಇದ್ದ ರೀತಿಯಲ್ಲೇ ಬೆಟ್ಟದಲ್ಲಿ ಹಸುಗಳನ್ನು ಮೇಯಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದು ಈ ಸಮಾವೇಶದ ಉದ್ದೇಶ. ಗೋವುಗಳನ್ನು ಮೇಯಿಸಲು ಬೆಟ್ಟಕ್ಕೆ ಒಯ್ಯುವ ಗೋಪಾಲಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆಯೂ ರೈತರು ದೂರಿದ್ದಾರೆ. ಆದ್ದರಿಂದ ತಕ್ಷಣ ಅರಣ್ಯ ಇಲಾಖೆ, ಗೋಪಾಲಕರ ಸಂಕಷ್ಟಕ್ಕೆ ಸ್ಪಂದಿಸಿ ಗೋವುಗಳನ್ನು ಬೆಟ್ಟದಲ್ಲಿ ಮೇಯಿಸಲು ಅವಕಾಶ ಮಾಡಿಕೊಡಬೇಕು. ಗೋಪಾಲಕರು ಹೇಳುವಂತೆ, ಬೆಟ್ಟದ ಬದಿಯಲ್ಲಿ ಮೇವು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಆದರೆ ಬೆಟ್ಟದಲ್ಲಿ 15-20 ಕಿಲೋಮೀಟರ್ ಒಳಕ್ಕೆ ಹೋದರೆ, ಸಾಕಷ್ಟು ನೀರು ಮತ್ತು ಮೇವು ಇದೆ. ಆದರೆ ದೊಡ್ಡಿಗಳನ್ನು ಅರಣ್ಯದಲ್ಲಿ ನಿರ್ಮಿಸಿಕೊಂಡರೆ, ಗೋಪಾಲಕರು ಅರಣ್ಯಕ್ಕೆ ಬೆಂಕಿ ಇಡುತ್ತಾರೆ; ಗಂಧದ ಮರಗಳನ್ನು ಕಡಿಯುತ್ತಾರೆ ಎಂಬಿತ್ಯಾದಿ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಗೋಪಾಲಕರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಆದ್ದರಿಂದ ತಕ್ಷಣ ಇಂಥ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇವೆ. ಬೆಟ್ಟಕ್ಕೆ ಜಾನುವಾರು ಒಯ್ದರೆ ಕಾಡುಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ಬರುತ್ತವೆ ಎಂಬ ವಿತಂಡವಾದವನ್ನೂ ಅರಣ್ಯ ಇಲಾಖೆ ಮುಂದಿಡುತ್ತಿದೆ. ಶತಮಾನಗಳಿಂದ ಕಾಡುಗಳಲ್ಲಿ ಜಾನುವಾರುಗಳನ್ನು ಮೇಯಿಸುತ್ತಾ ಬಂದಿದ್ದು, ಆಗ ಕಾಡುಪ್ರಾಣಿಗಳಿಗೆ ಹಾನಿಯಾಗುತ್ತಿರಲಿಲ್ಲವೇ? ಹಿಂದೆ ಬೇಲಿ ಅಥವಾ ಕಾವಲು ಇಲ್ಲದ ಸಂದರ್ಭದಲ್ಲೂ ಈ ಭಾಗದ ಜನರೇ ಬೆಟ್ಟ ಹಾಗೂ ಕಾಡನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ. ಈಗ ಏಕಾಏಕಿ ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ? ಸರ್ಕಾರದ ಈ ಮೊಂಡು ನೀತಿಯಿಂದಾಗಿ ಶತಮಾನ ಕಾಲದಿಂದ ಈ ಭಾಗದಲ್ಲಿ ಕಾಪಾಡಿಕೊಂಡು ಬಂದ ಅಪರೂಪದ ಬರಗೂರು ತಳಿ, ಆಲಂಬಾಡಿ ಮತ್ತಿತರ ದೇಶಿ ತಳಿಗಳು ವಿನಾಶದ ಅಂಚಿಗೆ ಬಂದಿವೆ. ಕೊಳ್ಳೆಗಾಲ ತಾಲೂಕಿನಲ್ಲೇ 57187 ದೇಸಿ ಗೋವುಗಳು ಹಾಗೂ 38 ಸಾವಿರ ಮಿಶ್ರ ತಳಿ ಹಸುಗಳಿಗೆ ನೀರು- ಮೇವಿನ ಕೊರತೆ ಇದ್ದು, ಹಸಿವಿನಿಂದ ಜಾನುವಾರುಗಳು ಸಾಯುವ ಸ್ಥಿತಿ ಎದುರಾಗಿದೆ. ಸಮಸ್ಯೆ ಇಷ್ಟೊಂದು ಭೀರಕವಾಗಿದ್ದರೂ, ಸರ್ಕಾರ ಈ ಬಗ್ಗೆ ಕಣ್ಣು ತೆರೆದಿಲ್ಲ. ಆಡಳಿತ ವರ್ಗದ ಕಣ್ಣು ತೆರೆಸಿ, ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಈ ಜನಾಂದೋಲನದ ಮುಖ್ಯ ಉದ್ದೇಶ. ಇದು ರಾಜಕೀಯ ರಹಿತ ಸಮಾವೇಶವಾಗಿದ್ದು, ಸಮಾಜದ ವಿವಿಧ ಸಂಘಟನೆಗಳು, ರೈತ ಸಂಘಟನೆಗಳು, ಪಕ್ಷಗಳು ಬೆಂಬಲ ಘೋಷಿಸಿವೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಜಿಲ್ಲೆಯ 22 ಸ್ವಾಮೀಜಿಯವರು ನೇತೃತ್ವ ವಹಿಸುವರು. ಸಮಾವೇಶಕ್ಕೆ ಮುನ್ನ ಹನೂರು ಎಪಿಎಂಸಿ ಆವರಣದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರೈತರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಲು 15 ಸಾವಿರಕ್ಕೂ ಅಧಿಕ ಮಂದಿ ಸಹಿ ಮಾಡಿದ ಮನವಿ ಪತ್ರವನ್ನು ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಪ್ರತಿ ಹಳ್ಳಿಯಿಂದ ಸಹಿ ಮಾಡಿದ ಮನವಿಪತ್ರವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಮಾವೇಶ ಸ್ಥಳಕ್ಕೆ ತರಲಾಗುವುದು. ಹಿನ್ನೆಲೆ ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್-ಶ್ರೀ ಸಂಸ್ಥಾನಗೋಕರ್ಣಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಂನ್ಯಾಸ ಸ್ವೀಕಾರದ ದಿನದಂದೇ ಮಾಡಿದ ಘೋಷಣೆಗಳಲ್ಲಿ ದೇಸೀ ಗೋಸಂತತಿಯ ರಕ್ಷಣೆಯೂ ಒಂದಾಗಿದೆ. ಗೋರಕ್ಷಣೆಯ ಮೊದಲ ಹೆಜ್ಜೆಯಾಗಿ 1998ರ ಏಪ್ರಿಲ್28ರಂದು `ಕಾಮದುಘಾ' ಎಂಬ ಗೋ ರಕ್ಷಣೆಯ ಮಹಾಸಂಕಲ್ಪವನ್ನು ಸ್ವೀಕರಿಸಿದ ಸ್ವಾಮೀಜಿ ಯೋಜನೆಗೆ ಭದ್ರ ಬುನಾದಿ ಹಾಕಿದರು. ಭಾರತದ ಪುಣ್ಯಧರಿತ್ರಿಯಲ್ಲಿ 100ಕ್ಕೂ ಅಧಿಕ ಗೋ ಸಂತತಿ ಇದ್ದು, ನಾಶವಾಗುತ್ತಾ ಬಂದು ಸದ್ಯ 30-35 ರಷ್ಟು ತಳಿಗಳು ಮಾತ್ರ ಉಳಿದುಕೊಂಡಿದೆ. ಸಂತನಂತೆ ಬದುಕಿದ ಮಹಾ ನಂದಿಯ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರದ ಗೋಶಾಲೆಗೆ ಮಹಾನಂದಿ ಗೋಲೋಕ ಎಂದು ಪುನರ್ನಾಮಕರಣ ಮಾಡಲಾಗಿದೆ. ಮಹಾನಂದಿ ಬಾಳಿ ಬೆಳಗಿದ ಗೋಲೋಕ ಗೋಸಂರಕ್ಷಣೆಯ ದಿವ್ಯತಾಣವಾಗುವ ಜತೆಗೆ ಭಾರತೀಯವಾದ 30 ತಳಿಗಳ 300ಕ್ಕೂ ಅಧಿಕ ಗೋವುಗಳನ್ನು ಸಂರಕ್ಷಿಸಿ, ಸಂವರ್ಧಿಸಲಾಗುತ್ತಿದೆ. ಗೋಮಯ ಗೋಮೂತ್ರಗಳಿಂದ ಹಲವಾರು ದಿವ್ಯೌಷಧಿಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇಸಿ ಗೋತಳಿಯನ್ನು ಸಂರಕ್ಷಿಸಿ, ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಮಠ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಸದ್ಯ ಸಪ್ತ ರಾಜ್ಯಗಳಲ್ಲಿ ಮಂಗಲ ಪಾಂಡೆಯ ಪ್ರೇರಣೆಯಲ್ಲಿ ಆಂದೋಲವನ್ನು ಕೈಗೊಂಡು ಗೋಹತ್ಯೆಯನ್ನು ನಿಷೇಧಿಸಬೇಕೆಂದು ಸಹಸ್ರ ಸಂತರ ಸಮ್ಮುಖದಲ್ಲಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಈ ರಥ ಯಾತ್ರೆ ಚಾಮರಾಜನಗರ ಭಾಗದಲ್ಲಿ ಸಂಚರಿಸುವ ಸಮಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆ ಗುಡ್ಡ ಬೇಲಿ ನಿರ್ಮಿಸಿ ಗೋವುಗಳಿಗೆ ಮೇವಿಲ್ಲದೆ ಸಂಕಷ್ಟ ಅನುಭವಿಸುತ್ತದೆ ಎಂಬ ವಿಚಾರ ರೈತರಿಂದ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಅಸಂಘಟಿತ ಸಮುದಾಯವನ್ನು 'ನಮ್ಮ ಬೆಟ್ಟ ನಮಗೆ ಬಿಡಿ' ಆಂದೋಲನದ ಮೂಲಕ ಜತೆಯಾಗಿಸುವ ಕಾರ್ಯಕ್ರಮವನ್ನು ಫೆ.15ಕ್ಕೆ ಹನೂರು ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಹಾಕಿಕೊಂಡಿದ್ದಾರೆ. ಗೋಪಾಲಕರಿಗೆ ಬೆಟ್ಟದಲ್ಲಿ ದೊಡ್ಡಿ ನಿರ್ಮಿಸಿ ನಾಟಿ ತಳಿಗಳನ್ನು ಮೇಯಿಸುವ ಮೂಲಕ ತಳಿ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂಬ ಆಗ್ರಹ ಈ ಆಂದೋಲನದ ಮೂಲಕ ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೋಪರಿವಾರ ಮುಖ್ಯಸ್ಥ ಮಹೇಶ್ ಚಟ್ನಳ್ಳಿ, ಚಾಮರಾಜನಗರ ಜಿಲ್ಲಾ ಗೋಪರಿವಾರ ಸಂಪರ್ಕಾಧಿಕಾರಿ ಜಿ. ಟಿ. ದಿವಾಕರ್, ಚಾಮರಾಜನಗರ ಜಿಲ್ಲಾ ಗೋಪರಿವಾರ ಅಧ್ಯಕ್ಷ ಜಿ ಎಂ ಹೆಗಡೆ, ಚಾಮರಾಜನಗರ ಜಿಲ್ಲಾ ರೈತಸಂಘದ ಸಂಚಾಲಕ ಹೊನ್ನೂರು ಪ್ರಕಾಶ್ ಹಾಜರಿದ್ದರು. ಡಾ. ವೈ. ವಿ. ಕೃಷ್ಣಮೂರ್ತಿ `ಕಾಮದುಘಾ' ಯೋಜನೆ ಕಾರ್ಯದರ್ಶಿ ಶ್ರೀರಾಮಚಂದ್ರಾಪುರಮಠ || ವಂದೇಗೋಮಾತರಮ್|| ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ - ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಮಲೆಮಹದೇಶ್ವರ ಗೋಪರಿವಾರ ಎ 801, ಮಾರುತಿ ಟೆಂಟ್ ಎದುರಿನ ರಸ್ತೆ, ಹನೂರು, ಕೊಳ್ಳೆಗಾಲ ದೂರವಾಣಿ : 94861602150

ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಮಾರಾಮಾರಿ


ಚಾಮರಾಜನಗರ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ವಿಚಾರಣಾ ಖೈದಿ ಗಾಯಗೊಂಡಿದ್ದಾನೆ. ಗಾಯಗೊಂಡ ಖೈದಿ ಮಹಾದೇವ್ ಎಂದು ತಿಳಿದುಬಂದಿದೆ. ಮಹಾದೇವ್ ಮೇಲೆ ಪವನ್, ಕಾರ್ತಿಕ್, ರಾಮು, ಎಂಬ ಖೈದಿ ಕಟಿಂಗ್ ಮಾಡುವ ವಿಚಾರದಲ್ಲಿ ಹಲ್ಲೆ ಮಾಡಿದ್ದಾರೆಂದು ಪಟ್ಟಣ್ಣ ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಮಹಾದೇವ್ ಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ವರದಿ- ರಾಮಸಮುದ್ರ ಎಸ್.ವೀರಭದ್ರಸ್ವಾಮಿ

Sunday, 12 February 2017

11-02-2017 ಚಾಮರಾಜನಗರ ಸುದ್ದಿಗಳು( ಚಂದಕವಾಡಿಯಲ್ಲಿ ಶಾಸಕರಿಂದ ಮೇವು ನಿಧಿ ಕೇಂದ್ರ ಉದ್ಘಾಟನೆ,ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ 233.97 ಕೋಟಿ ಅನುದಾನ : ಸಿ. ಪುಟ್ಟರಂಗಶೆಟ್ಟಿ)

ಚಂದಕವಾಡಿಯಲ್ಲಿ ಶಾಸಕರಿಂದ ಮೇವು ನಿಧಿ ಕೇಂದ್ರ ಉದ್ಘಾಟನೆ ಚಾಮರಾಜನಗರ,ಫೆ,11 - ಬರಗಾಲ ಸಂದರ್ಭದಲ್ಲಿ ಜಾನುವಾರುಗಳ ಮೇವು ಅಭಾವ ಪರಿಸ್ಥಿತಿಯನ್ನು ಪರಿಹರಿಸುವ ಸಲುವಾಗಿ ತಾಲ್ಲೂಕು ಆಡಳಿತ ಇಂದು ಚಂದಕವಾಡಿಯಲ್ಲಿ 4ನೇ ಮೇವು ನಿಧಿ ಕೇಂದ್ರವನ್ನು ಆರಂಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಜಾನುವಾರು ಮಾಲೀಕರಿಗೆ ಮೇವು ವಿತರಿಸುವ ಮೂಲಕ ಮೇವು ನಿಧಿ ಕೇಂದ್ರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈಗಾಗಲೇ ತಾಲ್ಲೂಕಿನಲ್ಲಿ ಮೂರು ಮೇವು ನಿಧಿ ಕೇಂದ್ರವನ್ನು ಆರಂಭಿಸಲಾಗಿದೆ. ಹರವೆ, ಚಂದಕವಾಡಿ, ಕಸಬಾ ಹೋಬಳಿ ವ್ಯಾಪ್ತಿಯ ಜನರಿಗೆ ನೆರವಾಗುವ ಉದ್ಧೇಶದಿಂದ ಮೇವು ನಿಧಿ ಕೇಂದ್ರವನ್ನು ತೆರೆಯಲಾಗಿದೆ. ಪ್ರಸ್ತುತ ಚಂದಕವಾಡಿ ಭಾಗದಲ್ಲಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂದಿನಿಂದ ಮೇವು ನಿಧಿ ಕೇಂದ್ರ ಪ್ರಾರಂಭ ಮಾಡಲಾಗಿದೆ ಎಂದರು. ಪ್ರತಿ ರಾಸುವಿಗೆ 5 ಕೆ.ಜಿ. ಯಂತೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲಾಗುತ್ತಿದೆ. ಪ್ರಸ್ತುತ 10 ದಿನಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ. ಮೇವು ಸಂಗ್ರಹಣೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮೇವು ಬರಲಿದೆ ಇದರಿಂದ ಮೇವು ಅಭಾವ ಪರಿಸ್ಥಿತಿ ನೀಗುವ ವಿಶ್ವಾಸವಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು. ತಾಲ್ಲೂಕಿನಲ್ಲಿ ಗೋಶಾಲೆ ತೆರೆಯಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಹೀಗಾಗಿ ಮೇವು ನಿಧಿ ಕೇಂದ್ರಗಳನ್ನು ಹೆಚ್ಚು ತೆರೆಯಲಾಗುತ್ತಿದೆ. ಕುಡಿಯುವ ನೀರಿನ ಬವಣೆಯು ತಾಲ್ಲೂಕಿನಲ್ಲಿ ಇದ್ದು ಇದರ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಪುಟ್ಟರಂಗಶೆಟ್ಟಿಯವರು ತಿಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಆರ್. ಬಾಲರಾಜು, ತಾ.ಪಂ. ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್.ದಯಾನಿಧಿ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಗ್ರಾ.ಪಂ. ಅಧ್ಯಕ್ಷರಾದ ಸಿದ್ದಪ್ಪಾಜಿ, ತಹಶೀಲ್ದಾರ್ ಕೆ. ಪುರಂದರ, ಇತರರು ಹಾಜರಿದ್ದರು. ----------------------------------------------------------------------------------- ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ 233.97 ಕೋಟಿ ಅನುದಾನ : ಸಿ. ಪುಟ್ಟರಂಗಶೆಟ್ಟಿ ಚಾಮರಾಜನಗರ,ಫೆ,11 ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಮಾದರಿ ನಗರವನ್ನಾಗಿಸಲು 233.97 ಕೋಟಿ. ರೂ. ಅನುದಾನ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು. ತಾಲ್ಲೂಕಿನ ಚಂದಕವಾಡಿಯಲ್ಲಿ ಮೇವು ನಿಧಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಮಾದ್ಯಮ ಪ್ರತಿನಿಧಿಗಳಿಗೆ ಶಾಸಕರು ಈ ಮಾಹಿತಿಯನ್ನು ನೀಡಿದರು. ರಾಜ್ಯದ ಒಟ್ಟು 270 ಸ್ಥಳೀಯ ಸಂಸ್ಥೆಗಳಲ್ಲಿ 10 ನಗರ ಸ್ಥಳೀಯ ಸಂಸ್ಥೆಗಳನ್ನು ಮಾದರ ನಗರವನ್ನಾಗಿಸಲು ಮುಖ್ಯಮಂತ್ರಿಯವರು ಆಯ್ಕೆ ಮಾಡಿದ್ದಾರೆ. ಈ ಪೈಕಿ ಚಾಮರಾಜನಗರವೂ ಸಹ ಸೇರಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪುಟ್ಟರಂಗಶೆಟ್ಟಿ ತಿಳಿಸಿದರು. ಮಾದರಿ ನಗರವನ್ನಾಗಿಸಲು ಚಾಮರಾಜನಗರವನ್ನು ಆಯ್ಕೆ ಮಾಡಿದ್ದು ಇದರಿಂದ ನಾಗರಿಕರಿಗೆ ಮೂಲ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ, ಉದ್ಯಾನವನ, ಆಟದ ಮೈದಾನ ಸೌಲಭ್ಯ ಕಲ್ಪಿಸಲು ಅನುಕೂಲವಾಗಿದೆ. ಸ್ಮಶಾನ ಅಭಿವೃದ್ಧಿಯೂ ಸಹ ಕೈಗೊಳ್ಳಲಾಗುತ್ತದೆ ಎಂದರು. ಒಟ್ಟು 233.97 ಕೋಟಿ. ರೂ. ಅನುದಾನವು ಮಾದರಿ ನಗರ ಯೋಜನೆಗೆ ಬಿಡುಗಡೆಯಾಗಲಿದೆ. ಈ ಪೈಕಿ 24ಘಿ7 ಕುಡಿಯುವ ನೀರು ಸರಬರಾಜು ಯೋಜನೆಗೆ 70.54 ಕೋಟಿ ರೂ. 2ನೇ ಹಂತದ ಒಳಚರಂಡಿಗೆ 20 ಕೋಟಿ ರೂ. 91 ಕಿ.ಮೀ. ರಸ್ತೆ ಅಭಿವೃದ್ಧಿಗೆ 91.13 ಕೋಟಿ ರೂ. ಮಳೆ ನೀರು ಚರಂಡಿ ನಿರ್ಮಾಣಕ್ಕೆ 16.80 ಕೋಟಿ. ರೂ. ವಿದ್ಯುತ್ ದೀಪ, ಪಾರ್ಕ್, ಆಟದ ಮೈದಾನ, ಸ್ಮಶಾನ ಅಭಿವೃದ್ಧಿಗೆ 35.50 ಕೋಟಿ. ರೂ. ವೆಚ್ಚ ಮಾಡಲು ಅವಕಾಶವಿದೆ ಎಂದರು. ಅನುದಾನ ಬಿಡುಗಡೆಗೆ ಈಗಾಗಲೇ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ನಗರಕ್ಕೆ ಅವಶ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಯೋಜನಾ ವರದಿ ಸಿದ್ದಪಡಿಸಲು ತಿಳಿಸಲಾಗಿದೆ. ಚಾಮರಾಜನಗರ ಪಟ್ಟಣವನ್ನು ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು. ------------------------------------------------------------------------------- ಪುಣಜನೂರು ಅಂಗನವಾಡಿಗೆ ಶಾಸಕರ ಭೇಟಿ : ಪೌಷ್ಠಿಕ ಆಹಾರ ಅಸಮರ್ಪಕ ವಿತರಣೆಗೆ ಅಸಮಾಧಾನ ಚಾಮರಾಜನಗರ,ಫೆ,11 – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಾಲ್ಲೂಕಿನ ಪುಣಜನೂರು ಅಂಗನವಾಡಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ವೇಳೆ ಸೋಲಿಗರಿಗೆ ನೀಡಬೇಕಿದ್ದ ಪೌಷ್ಠಿಕ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಂದಕವಾಡಿ ಮೇವು ನೀಧಿ ಕೇಂದ್ರ ಉದ್ಘಾಟಿಸಿದ ಬಳಿಕ ಪುಣಜನೂರಿಗೆ ತೆರಳಿದ ಶಾಸಕರು ಅಲ್ಲಿನ ಅಂಗನವಾಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಮ್ಮ ಅಂಗನವಾಡಿ ಮೂಲಕ ಸೋಲಿಗರಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಪದಾರ್ಥಗಳಾದ ಹುರಳಿ, ರಾಗಿ, ಬೆಲ್ಲ, ನಂದಿನಿ ತುಪ್ಪ, ಹೆಸರು ಕಾಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡದೆ ವಂಚಿಸಲಾಗುತ್ತಿದೆ ಎಂದು ಗಮನಕ್ಕೆ ತಂದರು. ಕೂಡಲೇ ಅಲ್ಲಿಯೇ ಇದ್ದ ಅಂಗನವಾಡಿ ಸಿಬ್ಬಂದಿಯಿಂದ ಮಾಹಿತಿ ಪಡೆದ ಶಾಸಕರು ಅಂಗನವಾಡಿಯಲ್ಲಿ ದಾಸ್ತಾನು ಮಾಡಿರುವ ಪೌಷ್ಠಿಕ ಆಹಾರ ಪೊಟ್ಟಣಗಳನ್ನು ಪರಿಶೀಲಿಸಿದರು. ಪೌಷ್ಠಿಕ ಸಾಮಗ್ರಿಗಳನ್ನು ಯಾವ ಪ್ರಮಾಣದಲ್ಲಿ ತೂಕ ಮಾಡಿ ಪ್ಯಾಕ್ ಮಾಡಲಾಗಿದೆ ಎಂಬುದನ್ನು ವೀಕ್ಷಿಸಿದರು. ಸ್ಥಳೀಯ ಜನರು ಸಹ ನಿಗಧಿತ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ನೀಡುತ್ತಿಲ್ಲ. ಮಳೆಗಾಲ ಸಂದರ್ಭದಲ್ಲಿ ಅರಣ್ಯ ವಾಸಿಗಳಿಗೆ ನೆರವಾಗುವ ಸದುದ್ದೇಶದಿಂದ ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರದಲ್ಲಿ ಅಧಿಕಾರಿಗಳು ತೂಕ ಅಳತೆಯಲ್ಲಿ ವ್ಯತ್ಯಾಸ ಮಾಡಿ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಪುಟ್ಟರಂಗಶೆಟ್ಟಿಯವರು ಪೌಷ್ಠಿಕ ಆಹಾರ ವಿತರಣೆಯಲ್ಲಿ ಸಮರ್ಪಕವಾಗಿ ತೂಕ ಅಳತೆ ಪ್ರಮಾಣವನ್ನು ಪಾಲಿಸದೇ ಇರುವ ಬಗ್ಗೆ ದೂರುಗಳು ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಖುದ್ದು ನಿಂತು ಸರಿಯಾದ ರೀತಿಯಲ್ಲಿ ಜನರಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆಯೇ ಎಂದು ಗಮನ ಹರಿಸಬೇಕಿದೆ ಎಂದು ತೀವ್ರ ಅಸಮಾಧಾನ ತೋರಿದರು. ------------------------------------------------------- ಗ್ರಾ.ಪಂ ಉಪಚುನಾವಣೆ:ಶೇಕಡ 59.48 ಮತದಾನ ಚಾಮರಾಜನಗರ, ಫೆ. 12:- ವಿವಿಧ ಕಾರಣಗಳಿಂದ ತೆರವಾಗಿದ್ದ ಜಿಲ್ಲೆಯ 5 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಇಂದು ನಡೆದ ಉಪ ಚುನಾವಣೆಯಲ್ಲಿ ಶೇ. 59.48 ರಷ್ಟು ಮತದಾನ ನಡೆದಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ (ಹೊಂಗನೂರು) ನಡೆದ ಚುನಾವಣೆಯಲ್ಲಿ ಶೇ. 52.99 ರಷ್ಟು ಕೊಳ್ಳೇಗಾಲ ತಾಲ್ಲೂಕಿನ (ದೊಡ್ಡಾಲತ್ತೂರು ಹಾಗೂ ಮಾರ್ಟಳ್ಳಿ) ಚುನಾವಣೆಯಲ್ಲಿ ಶೇ. 55.10 ರಷ್ಟು ಮತದಾನವಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ (ಕೊತನೂರು) ಶೇ. 74.70 ಹಾಗೂ ಯಳಂದೂರು ತಾಲ್ಲೂಕಿನಲ್ಲಿ (ಬಿಳಿಗಿರಿರಂಗನಬೆಟ್ಟ) ಶೇ. 63.51ರಷ್ಟು ಮತದಾನವಾಗಿದೆಯೆಂದು ಜಿಲ್ಲಾ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. --------------------------------------------------------------------- ಕೆ.ಡಿ.ಪಿ.ಸಭೆ ಮುಂದೂಡಿಕೆ ಚಾಮರಾಜನಗರ, ಫೆ. 11 ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಂದು ನಗರದಲ್ಲಿ ನಿಗದಿಯಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ. ಕರ್ನಾಟಕ ವಿಧಾನ ಮಂಡಲ ಅಧಿವೇಶನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13 ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಕೆ.ಡಿ.ಪಿ ಸಭೆ ಮುಂದೂಡಿಕೆಯಾಗಿದೆ. ಅಲ್ಲದೆ ಅಂದು ಸಚಿವರು ಕೈಗೊಳ್ಳಲಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಕಾರ್ಯಕ್ರಮವನ್ನು ಸಹ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ----------------------------------------------- ಫೆ. 12ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 11 ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಫೆಬ್ರವರಿ 12ರಂದು ಜಿಲ್ಲೆಗೆ ಭೇಟಿ ನೀಡುವರು. ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ, ಅಲ್ಲಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರೆಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ. ಫೆ. 12ರಂದು ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 11 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 3 ಗಂಟೆಗೆ ನಗರದಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಭಾಗವಹಿಸುವವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 12ರಂದು ವಸತಿ ಖಾತೆ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ, ಫೆ. 11 ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಕೃಷ್ಣಪ್ಪ ಅವರು ಫೆಬ್ರವರಿ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಗೆ ಆಗಮಿಸಿ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ದಿವಂಗತ ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಹಾಗೂ ಸೇವಾಪಥ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 13ರಂದು ಸಂತೇಮರಹಳ್ಳಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ ಚಾಮರಾಜನಗರ, ಫೆ. 11):- ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಎಪಿಎಂಸಿ ಕಾರ್ಯಾಲಯದ ಆವರಣದಲ್ಲಿ ಶಾಸಕರಾದ ಜಯಣ್ಣ ಅವರಿಂದ ಮೇವು ಬ್ಯಾಂಕ್ ಅನ್ನು ಫೆಬ್ರವರಿ 13ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಸಾರ್ವಜನಿಕರು ಮೇವು ಬ್ಯಾಂಕ್ ಸದುಪಯೋಗಪಡಿಕೊಳ್ಳುವಂತೆ ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------------------------------

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು