ಡಿ.ಜಿ.ಸಾಹೇಬ್ರೆ, ಆತಂತ್ರ ಸ್ಥಿತಿಯಲ್ಲಿದಿಯೇ ಬೀಟ್ ವ್ಯವಸ್ಥೆ.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಹಾಡುಹಗಲೇ ನಾಪತ್ತೆ/ಅಪಹರಣವಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂದಿಸಿದಂತೆ ಬೀಟ್ ಅವ್ಯವಸ್ಥೆಯಿಂದ ಕೂಡಿದಿಯೇ ಎಂಬುದಕ್ಕೆ ಸಾಕ್ಷಿಯಾಗಿದೆ. *ಚಾಮರಾಜನಗರ ಜೋಡಿರಸ್ತೆ ಅದೂ ಎಸ್ಪಿ ಕಚೇರಿ ಕಮಾನಿನ ಮುಂಬಾಗದಲ್ಲಿರುವ ನಂದಿನಿ ಬುಕ್ ಡಿಪೋ ಮುಂಬಾಗವೇ ಪ್ರಕರಣ ನಡೆದು ಬರೋಬ್ಬರಿ ೧೫ ದಿನಗಳಾಗುತ್ತಾ ಬಂದರೂ ಸುಳಿವು ಮಾತ್ರ ಸಿಗದೇ ಇರುವುದು ವಿಪರ್ಯಾಸವಾಗಿದೆ. *ಓರ್ವ ಸಬ್ ಇನ್ಸಪೆಕ್ಟರ್ ಮಗಳಾದ ಪ್ರಥಮ ಪಿ.ಯು. ವಿದ್ಯಾರ್ಥಿನಿ ಪೂಜಾ ನಾಪತ್ತೆಯಾಗಿದ್ದು ಪತ್ತೆ ಕಾರ್ಯಕ್ಕೆ ವಿವಿದ ತಂಡ ರಚನೆ ಮಾಡಿದ್ದರೂ ಹುಡುಕಾಟ ನಡೆಸಿ ಪತ್ತೆ ಹಚ್ಚಲು ಇಷ್ಟು ದಿನ ಬೇಕೆ? ಇನ್ನ ನಮ್ಮ ಮಕ್ಕಳಾದರೆ ನಮ್ಮ ಕಥೆಯೇನು?ಎಂದು ಸಾರ್ವಜನಿಕರು ಯೋಚಿಸುವಂತಾಗಿದೆ. *ಅಪಹರಣ/ನಾಪತ್ತೆಯಾದ ಜಾಗದಿಂದ ಐದಾರು ಪೊಲೀಸ್ ಬೀಟ್ ಸಿಬ್ಬಂದಿಗಳ ಜವಬ್ದಾರಿ ಇದ್ದರು ಹುಡುಕಾಟ ನಡೆಸಲು ಬೇಜವಬ್ದಾರಿ ತೋರಿದ್ದಾರೆ ಎಂದು ಗೊತ್ತಾಗುತ್ತದೆ. *ಬೀಟ್ ಪೊಲೀಸ್ ಕಛೇರಿ ಲೆಕ್ಕ ತೋರಿದರೂ ಅಲ್ಲಿಯೂ ಸರಿಯಾದ ಕೆಲಸ ನಿರ್ವಹಿಸದೆ ಇರುವುದು ದಾಖಲೆ ಸಮೇತ .ಡಿ.ಜಿ.ಪಿ ದತ್ತಾ ಅವರಿಗೆ ಅಂಚೆ ಮುಖಾಂತರ ಕಳಿಸಲಾಗಿದೆ. *ಕೆಲವು ಠಾಣೆಗಳಲ್ಲಿ ಅಪರಾದ ಪ್ರಕರಣ ಸಂಖ್ಯೆ ಹೆಚ್ಚಳ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಳ್ಳಿ ಎಂಬ ಪುಕ್ಕಟ್ಟೆ ಹಿಂಬರಹ,ಅವರದ್ದೆ ಇಲಾಖೆ ತೇಜೊವದೆ ಮಾಡಿದ ಗುಂಪಿನ ಮೇಲೆ ದೂರು ದಾಖಲಿಸಿದರೂ ಬೇಜವಬ್ದಾರಿತನ, ಸಂಚಾರ ಠಾಣಾ ಅವ್ಯವಸ್ಥೆ, ಇವೆಲ್ಲದರ ಬಗ್ಗೆ ಸವಿವರವಾಗಿ ಪತ್ರದಲ್ಲಿ ತಿಳಿಸಲಾಗಿದೆ. *ಕೆಲವು ಠಾಣೆಗಳಲ್ಲಿ ಹಿಂದಿನ ಎಸ್ಪಿ ಕುಲದೀಪ್ ಜೈನ್ ವರ್ಗಾವಣೆ ಮಾಡಿದರೂ ಕೆಲವೊಂದು ಠಾಣೆಗಳಲ್ಲಿ ಅವರೆ ಕಾರ್ಯನಿರ್ವಹಿಸುತ್ತಿರುವ ದೂರುಗಳು ಕೇಳಿ ಬರುತ್ತಿದೆ. ಮಿಗಿಲಾಗಿ ಇಲಾಖೆಯಲ್ಲಿನ ಖಾಲಿಹುದ್ದೆಗಳ ವಿವರ ಕೇಳಿದರೆ ಜಿಲ್ಲಾ ವರೀಷ್ಟಾದಿಕಾರಿ ಕಚೇರಿಯಲ್ಲೆ ಇಲ್ಲ ಹಿಂಬರಹ ನೀಡಿರುವುದನ್ನ ಇತ್ತೀಚೆಗಷ್ಟೇ ಪ್ರಕಟಿಸಲಾಗಿತ್ತು. *ಕೆಲವು ಠಾಣೆಗಳಲ್ಲಿ ಮೇಲಾದಿಕಾರಿಗಳ ಆದೇಶ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಜಿಲ್ಲಾ ಅದೀಕ್ಷಕರ ಸಾರ್ವಜನಿಕ ಮಾಹಿತಿ ಅದಿಕಾರಿ ಆದೇಶ ಹೊರಡಿಸಿದ್ದರೂ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗುತ್ತಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. *ಜಿಡ್ಡುಗಟ್ಟಿರುವ ಚಾಮರಾಜನಗರ ಕೆಲವು ಠಾಣೆಗಳಲ್ಲಿ ಕೇವಲ ಅದೀಕ್ಷಕರ ಮಾತನ್ನೆ ಕೇಳದಿರುವಾಗ ಇನ್ನ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಾದ ವಿಪುಲ್ ಕುಮಾರ್ ಅವರೆ ಚುರುಕು ಮುಟ್ಟಿಸಬೇಕಾಗಿದೆ.
No comments:
Post a Comment