ಮಾಹಿತಿ ಸಂಪರ್ಕಾಧಿಕಾರಿಗಳಿಗೆ ಮಾಹಿತಿಯೇ ಗೊತ್ತಿಲ್ಲ, ಕೆಲವೆಡೆ ಮಾಹಿತಿಯೇ ಇಲ್ಲ.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕೆಲವು ಠಾಣೆಗಳಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಮಾಹಿತಿ ಹಕ್ಕಿನ ಬಗ್ಗೆ ಗೊತ್ತಿಲ್ಲದಿರುವ ಬಗ್ಗೆ ಮಾಹಿತಿ ಲಬ್ಯವಾಗಿದೆ.ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯಲು ಪೋಲೀಸ್ ವರೀಷ್ಟಾದಿಕಾರಿಗಳಿಗೆ ವ್ಯಕ್ತಿಯೋರ್ವ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದರೆ ಆ ಕಛೇರಿಯಲ್ಲೆ ಮಾಹಿತಿ ಇಲ್ಲ ಎಂಬ ಉತ್ತರ ಸಿಕ್ಕಿದೆ. ಅಷ್ಟೇ ಅಲ್ಲ ವಾಸ್ತವವಾಗಿ ತಪ್ಪು ಮಾಹಿತ ನೀಡಬಾರದೆಂದು
ಬಹುತೇಕ ಠಾಣೆಗಳಿಗೆ ಉಚಿತವಾಗಿ ಮಾಹಿತಿ ನೀಡುವಂತೆ ಅಧಿಕ್ಷರ ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿ ಆದೇಶ ಹೊರಡಿಸಿದರೂ ಕೆಲವೊಂದು ಠಾಣೆಯವರು ಕೊಟ್ಟರೆ ಇನ್ನುಳಿದವರಿಗೆ ಅವರ ಬಗ್ಗೆ ಗೊತ್ತಿಲ್ಲದೇ ಪರದಾಡುತ್ತಿದ್ದಾರೆ.
ಏನಿದು ಮಾಹಿತಿ: ಮಾಹಿತ ಹಕ್ಕು ಕಾರ್ಯಕರ್ತ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ಅಧೀಕ್ಷರ ಕಛೇರಿಗೆ ಮಾಹಿತಿ ಅರ್ಜಿ ಸಲ್ಲಿಸುತ್ತಾರೆ ಅದರಲ್ಲಿ ಸಿಬ್ಬಂದಿಗಳ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಇನ್ನಿತರ ವಿವರ ಕೇಳುತ್ತಾರೆ. ಆದರೆ ಆ ಕಛೇರಿ ಮಾಹಿತಿ ಅದಿಕಾರಿ ಅಸ್ಪಷ್ಟ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಾರೆ.
ಅಸ್ಪಷ್ಟ ಮಾಹಿತಿ ನೀಡಿದ ಅದಿಕಾರಿಯ ಮೇಲೆ ಮೇಲ್ಮನವಿಯನ್ನು ಸಲ್ಲಿಸಿದಾಗ ಕೆಲವೊಂದು ಠಾಣೆಯವರು ಮಾಹಿತಿ ನೀಡಿರುವ ಬಗ್ಗೆ ಉಳಿದವರು ನೀಡದೇ ಮಾಹಿತಿ ಹಕ್ಕು ನಿಯಮಕ್ಕೆ ಚ್ಯುತಿ ತಂದಿದ್ದಲ್ಲದೇ ಕೆಲವರು ಕೇಳಿದ್ದೆ ಒಂದು ಕೊಟ್ಟಿದ್ದೆ ಒಂದು ಮಾಹಿತಿ ನೀಡಿರುವ ಬಗ್ಗೆ ತಿಳಿದುಬರುತ್ತದೆ.
ಐ.ಜಿ.ಗೆ ದೂರು: ಕೇಳಿದ ಮಾಹಿತಿ ಅಪರಿಪೂರ್ಣವಾಗಿದ್ದರೂ ಅದು ರಾಜ್ಯ ಆಯೋಗದತ್ತ ತಲುಪುತ್ತದೆ. ಆದರೆ ಆಯೋಗ ಮಾಹಿತಿ ನೀಡುವಂತೆ, ದಂಢವಿದಿಸುವಂತೆ ಆದೇಶಿಸುತ್ತದೆಯೋ ಹೊರತು ಮತ್ತೇನು ಅಲ್ಲ. ಅದಕ್ಕಾಗಿ ಆಯೋಗ ತಲುಪಬೇಕಾದ ದೂರು ದಕ್ಷಿಣ ವಲಯ ಪೋಲೀಸ್ ಮಹಾನಿರ್ದೇಶಕರಾದ ವಿಪುಲ್ ಕುಮಾರ್ ಅವರ ಕಛೇರಿ ತಲುಪುತ್ತದೆ.
ತಮ್ಮ ಇಲಾಖೆ ಸಾರ್ವಜನಿಕ ಮಾಹಿತಿ ಅದಿಕಾರಿಗಳು 07-09-2017 ರಂದು ಉಚಿತವಾಗಿ ಮಾಹಿತಿ ನೀಡುವಂತೆ ಅದೀಕ್ಷರ ಕಚೇರಿಯಲ್ಲಿನ ಅದಿಕಾರಿ ಸೂಚಿಸಿದರೂ ಕೆಲವು ಠಾಣೆಗಳ ಸಂಪರ್ಕಾದಿಕಾರಿಗಳನ್ನ ಹೊರತು ಪಡಿಸಿದರೆ ಇನ್ನುಳಿದ ಯಾವುದೇ ಯಾವುದೇ ಠಾಣೆಗಳ ಮಾಹಿತಿ ಸಂಪರ್ಕದಿಕಾರಿಗಳು ಮಾಹಿತಿ ನೀಡದೇ ಇರುವುದರಿಂದ ತಾವು ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ಪ್ರಾದಿಕಾರ ನಿಯಮದಡಿ ಇವರ ಮೇಲೆ ಯಾಕೆ ಕ್ರಮಕೈಗೊಳ್ಳಬಾರದು? ಸದರಿ ಕೆಲವು ಠಾಣೆಯ ಮಾಹಿತಿ ಸಂಪರ್ಕದಿಕಾರಿಗಳಿಗೆ ಕೆಲವು ಮಾಹಿತಿಗಳೆ ಗೊತ್ತಿಲ್ಲದೇ ಅಸ್ಷಷ್ಟ ಮಾಹಿತಿಯನ್ನ ಮಾ.ಹಕ್ಕಿನಡಿ ನೀಡಿ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ತಾವು ದಯಮಾಡಿ ಎಲ್ಲಾ ಠಾಣೆಗಳ ಮಾ.ಸಂಪರ್ಕಾದಿಕಾರಿಗಳನ್ನ ಪರಿಶೀಲಿಸಿ ಕರ್ತವ್ಯಲೋಪ. ಬೇಜವಬ್ದಾರಿತನ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.
ಕೆಲವು ಠಾಣೆಗಳಲ್ಲಿ ಗುಂಪುಗಾರಿಕೆಗಳು, ದೂರುದಾರರನ್ನು ಅಸೌಜನ್ಯಯುತವಾಗಿ ನೋಡಿಕೊಳ್ಳುತ್ತಿರುವ ಮಾಹಿತಿ ಲಬ್ಯವಾಗಿದ್ದು ಸಾದ್ಯವಾದರೆ ಎಲ್ಲಾ ಠಾಣೆಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲು, ಠಾಣೇಗಳಲ್ಲಿ ತಪ್ಪಾದರೆ ಅವರ ಚಲನವಲಗಳನ್ನು ಗಮನಿಸಿ ಅವರ ಮೇಲೆ ಕ್ರಮಕೈಗೊಳ್ಳಬೇಕಿದೆ.ಕೆಲವೆಡೆ ಬೀಟ್ ಅವ್ಯವಸ್ಥೆಯಿಂದ ಇರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು ಇಲಾಖೆ ನೀಡಿರುವ ತಪ್ಪು ಮಾಹಿತಿಯನ್ನೆ ನೇರವಾಗಿ ಪ್ರಕಟಿಸಲಾಗುವುದು. ಆ ಖಾಲಿ ಹುದ್ದೆಗಳಿಗೆ ಕಾರಣ ಏನು? ನಿಜಕ್ಕೂ ಆಡಳಿತ ಯಂತ್ರ ಕುಸಿಯುತ್ತಿದಿಯೇ ಎಂಬುದನ್ನು ಪ್ರಕಟಿಸಲಾಗುವುದು… ನಿರೀಕ್ಷಿಸಿ…
No comments:
Post a Comment