“ವಿಷನ್ 2025” ಕರ್ನಾಟಕ ರಾಜ್ಯ ಹಾಗೂ ಚಾಮರಾಜನಗರ ಜಿಲ್ಲೆ ಅಭುವೃದ್ದಿ ಮುನ್ನೋಟ ...........VSS
1) ನಗರ ಮೂಲಭೂತ ಸೌಕರ್ಯ/ಸ್ಮಾರ್ಟ್ ಸಿಟಿ: ಚಾಮರಾಜನಗರದಲ್ಲಿ ಒತ್ತುವರಿಯಾರಿಯಾದ ರಸ್ತೆ ತೆರವು ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡುವುದು, ಪದೇ ಪದೇ ರಸ್ತೆಅಗೆಯುವುದು ನಿಲ್ಲಿಸಿ ರಸ್ತೆ ಮಾಡುವ ಮುನ್ನ ಎಲ್ಲಾ ಅದಿಕಾರಿಗಳ ಸಂಯೋಜಕತ್ವದಲ್ಲಿ ಸಬೆ ಕರೆದು ಅಂತಿಮಗೊಳಿಸಿವುದು. ಮನೆಮುಂದೆ ಉತ್ತಮ ರಸ್ತೆಗಳನ್ನು ಅಗೆದು ಯಾರು ಗುಂಡಿಗಳನ್ನು ಮಾಡುತ್ತಾರೋ ಅವರನ್ನೆ ಹೊಣೆಗಾರಿಕೆ ಮಾಡಿ ಶಿಕ್ಷೆಗೆ ಗುರಿಪಡಿಸುವುದು.
2) ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವಂತೆ ಕಾನೂನಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಬೇಕು. ಬಹುತೇಕ ಆಸ್ಪತ್ರೆಗಳಲ್ಲಿ ನಾಮಾಕಾವಸ್ಥೆಗೆ ಎಲ್ಲ ವೈದ್ಯರಿದ್ದರೂ ಚಿಕಿತ್ಸೆಗೆ ಮಾತ್ರ ಸಿಗುವುದಿಲ್ಲ. ಅವರು ಕಡ್ಡಾಯವಾಗಿ ಹಾಜರಾಗಬೇಕು ಜೊತೆಗೆ ಗಂಟೆಗೊಮ್ಮೆ ತಮ್ಮ ಹಸ್ತ್ರ ಮುದ್ರಿಕೆ (ಥಮ್ ಇಂಪೆಷನ್) ಹಾಕುವ ವ್ಯವಸ್ಥೆ ಜಾರಿಯಾಗಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ವೈದ್ಯರ ಮೇಲೆ ಅಮಾನತು ಮಾಡುವುದು ಹಾಗೂ ಆ ಅವದಿಯಲ್ಲಿ ಸಿಗುವ ಅರ್ದ ವೇತನವನ್ನು ನಿಲ್ಲಿಸುವುದು. ಜಿಲ್ಲಾ ಕೇಂದ್ರದಲ್ಲಿ ವೈದ್ಯರು ಉಳಿಯುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದು. ಕಡ್ಡಾಯ ಶಿಕ್ಷಣದಂತೆ ಎಲ್ಲಾ ಮಕ್ಕಳ ಅನುಕೂಲಕ್ಕಾಗಿ ಏಕರೂಪ ಶಿಕ್ಷಣ ನೀತಿ ಜಾರಿ ಮಾಡುವುದು. ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಷನ್ ಹಾವಳಿ ತಡೆಗೆ ವಿಶೇಷ ಪ್ರಾದಿಕಾರ ರಚಿಸುವುದು ಹಾಗೂ ಡೋನೆಷನ್ ಪಡೆಯುವ ಶಾಲೆಗಳ ಅಮಾನ್ಯ ಮಾಢುವುದು.
3) ಕೃಷಿ ಮತ್ತು ಅಲೈಡ್, ಗ್ರಾಮೀಣಾಭಿವೃದ್ದಿ: ಬಹುತೇಕರು ಕೃಷಿ ಅವಲಂಬಿತರಾಗಿರುವ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರವನ್ನು ನೇರ ಕಂಪನಿಯಿಂದ ಪಡೆದು ನೇರ ರೈತನ ಮನೆ ಬಾಗಿಲಿಗೆ ತಲುಪಿಸುವುದು. ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಗೊಬ್ಬರ ತಯಾರು ಮಾಡಿ ಉತ್ತಮ ಬೆಳೆ ಬೆಳೆದವರಿಗೆ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸುವುದು
4) ಕೈಗಾರಿಕಾ ಅಬಿವೃದ್ದಿ ಸೇವೆಗಳು, ಉದ್ಯೋಗ ಮತ್ತು ಕೌಶಲ್ಯಭಿವೃದ್ದಿ, ಮಾಹಿತಿ ತಂತ್ರಜ್ಞಾನ: ಜಿಲ್ಲೆಯಲ್ಲಿ ಕೈಗಾರಿಗೆಳು ಇಲ್ಲದೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಅದನ್ನು ನಿವಾರಿಸಿಲು ಗುಡಿ ಕೈಗಾರಿಗೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಕರಕುಶಲ ಪದಾರ್ಥಗಳಿಗೆ ಉತ್ತಮ ಬೆಲೆ ಕೊಡಿಸಿಕೊಡುವಂತಾಗಬೇಕು. ಕಾಡಂಚಿನಂಚಿನ ಗ್ರಾಮಗಳು ಹಾಗೂ ಕಾಡುಗಳಲ್ಲಿ ಸೋಲಿಗರನ್ನು ಬಳಸಿಕೊಂಡು ನರೇಗಾ ಹಾಗೂ ಇನ್ನಿತರ ರಾಜ್ಯ ಸರ್ಕಾರದ ಯೋಜನೆಯಡಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಅವರಿಗೆ ಉನ್ನತ ಶಿಕ್ಷಣ ನೀಡಿ ಅವರಲ್ಲಿ ಸಿಗುವ ಕೌಶಲ್ಯವನ್ನ ಸದುಪಯೋಗಪಡಿಸಿಕೊಳ್ಳುವುದು.
5) ಆಡಳಿತ, ಕಾನೂನು ಮತ್ತು ನ್ಯಾಯ: ಪ್ರತಿಯೊಂದು ಪ್ರಾದಿಕಾರಕ್ಕೂ ಜಿಲ್ಲಾದಿಕಾರಿ ಅದ್ಯಕ್ಷರಾಗಿದ್ದ ಜಿಲ್ಲಾದಿಕಾರಿಗಳ ಆಡಳಿತವನ್ನು ಇನ್ನ ಕಠಿಣಗೊಳಿಸುವುದು. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅದಿಕಾರಿಗಳು ಉಳಿಯುವಂತೆ ಸೂಚನೆ ನೀಡುವುದು ಹಾಗೂ ಅವರಿಗೆ ಸುವ್ಯವಸ್ಥಿತಿ ಮನೆ ನೀಡುವುದು. ಮಾಹಿತಿ ಹಕ್ಕು ಕಾಯ್ದೆ ಪ್ರಬಲಗೊಳಿಸುವುದು ಅದರಲ್ಲೂ 4.1(ಎ) ಮತ್ತು 4.1(ಬಿ) ಸುಸ್ಥಿತಿಯಲ್ಲಿಡುವಂತೆ ನೋಡಿಕೊಳ್ಳುವುದು. ಅದಿಕಾರ ದುಪಯೋಗಪಡಿಸಿಕೊಂಡ ಅದಿಕಾರಿಗಳನ್ನು ಅಮಾನತು ಮಾಡುವ ಬದಲು ವಜಾ ಮಾಡುವಂತೆ ಹೆಚ್ಚಿ ಪರಮಾದಿಕಾರ ಪಡೆಯುವುದು
ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಗಳಿಗೆ ಮೇಲಾದಿಕಾರಿಗಳು ನೀಡುವ ಕಿರುಕುಳ ತಡೆಯುವ ನಿಟ್ಟಿನಲ್ಲಿ ವಿಶೇಷ ಘಟಕ ತೆರೆಯುವುದು. ಸೂಕ್ತ ನ್ಯಾಯ ನೀಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿನ ನ್ಯಾಯಾದೀಶರನ್ನು ಅದ್ಯಕ್ಷರನ್ನಾಗಿ ಮಾಡಿ ತಪ್ಪು ಮಾಡಿದ ಮೇಲಾದಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವುದು.
ಜಾತಿ ನಿಂದನೆ, ವರದಕ್ಷಿಣೆಯಂತಹ ಸುಳ್ಳು ಪ್ರಕರಣ ನೀಡುವ ದೂರುದಾರರ ಮೇಲೆ ಕ್ರಮ ತೆಗೆದುಕೊಂಡು ಕಠಿಣ ಶಿಕ್ಷೆ ಜರುಗಿಸುವುದು.
ಇಂದ, ಎಸ್.ವೀರಭದ್ರಸ್ವಾಮಿ
ಚಾಮರಾಜನಗರ-
ಪೋ-9480030980
•
No comments:
Post a Comment