ಕಂಡವ್ರ ಹೆಂಡತಿಗೆ ಸಂದೇಶ ಕಳಿಸಿದಾಗ.!..
ಗಾಬರಿಯಾಗಬೇಡಿ.. ಸಾಮಾಜಿಕ ಜಾಲತಾಣಗಳಲ್ಲಿನ ಅವ್ಯವಸ್ಥೆಯಿಂದ ಗತಿಸಿದ, ಗತಿಸುತ್ತಿರುವ ಸತ್ಯ ಘಟನೆಗಳ ವರದಿ.. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಚಿತ್ರಣ. ಇದು ಪ್ರಾಫ್ತರಿಗೆ ಹೊರತು ಅಪ್ರಾಪ್ತರಿಗಲ್ಲ, ಫೇಸ್ ಬುಕ್ ಖಾತೆದಾರರು ವಯಸ್ಕರಾಗಿರುತ್ತಾರೆ. ಇದರಲ್ಲಿ ಕೆಲವರ ಹೆಸರು ಗೌಪ್ಯತೆ ಅಗತ್ಯವಾಗಿರುತ್ತದೆ..
(ಮಾಡದ ತಪ್ಪಿಗೆ, ತಪ್ಪು ಮಾಡಲೇ ಬೇಕು ಎನ್ನುವಂತ ಮನಸ್ಸು ಸೃಷ್ಟಿಯಾಗುವ ಚಿತ್ರತೆ)
(ಇದು ವಾಟ್ಸಾಫ್, ಫೇಸ್ಬುಕ್ ನ ಸತ್ಯ ಕಥೆಗಳ ಅನಾವರಣ... ತಪ್ಪು ಎಲ್ಲರಲ್ಲಿಯೂ ಇರುತ್ತದೆ ತಿದ್ದುಕೊಂಡು ಹೋಗುವುದೇ ಮಾರ್ಗ..)
ಜಾಗತಿಕ ಮಟ್ಟದಲ್ಲಿ ಏನೇಲ್ಲಾ ಬೆಳೆಯುತ್ತಿದ್ದರು ಯುವಕರು ಯುವತಿಯರು ಮಾಯಾ ಜಾಲದಲ್ಲಿ ಸಿಲುಕುತ್ತಿದ್ದಾರೆ. ಮಾಯಾಜಾಲವೋ ಮೋಹ ಜಾಲವೋ ಗೊತ್ತಿಲ್ಲ, ನಕಲಿ ಖಾತೆ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ನತ್ತ ಮುಖ ಮಾಡಿದ ಎಷ್ಟೋ ಜನರು ಯಾರ್ಯಾರಿಗೋ ಮೋಸ ಮಾಡುತ್ತಿದ್ದಾರೆ. ಮಾಡುತ್ತಲೂ ಇದ್ದಾರೆ.. ಇದೆಲ್ಲ ಗೊತ್ತಿರುವುದೇ ಎನ್ನಬೇಡಿ, ಗೊತ್ತಿಲ್ಲದವರಿಗೆ ಅವರ ಪಾಡೇನು ಎಂಬುದಷ್ಟೇ ಮನಸ್ಸು ಪರಿಕ್ಷೀಸಬೇಕಿದೆ..ಇದು ನಮ್ಮ ಅನುಭವ ಹಾಗೂ ನಾಕಂಡ ಸುತ್ತಮುತ್ತ ನಗ್ನ ಸತ್ಯಗಳು..
ಯಾಕೋ ಏನೋ ಸಣ್ಣ ಚಿತ್ರಣ ಮನಸ್ಸು , ಕಣ್ಣ ಮುಂದೆ ಬಂದಿತು. ಆ ಚಿತ್ರಣಕ್ಕೆ ಸಾಮಾಜಿಕ ಜಾಲತಾಣ ಕಾರಣವಾಗಿತ್ತು. ಅದಕ್ಕೆ ಫೇಸ್ ಬುಕ್ ಕಾರಣವಾಗಿತ್ತು. ಅದಕ್ಕೆ ಒಬ್ಬರು ಕಾರಣ ಆಗೋದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಎರಡು ಕೈ ಸೇರಿದರೆ ಚಪ್ಪಾಳೆ ಎಂಬುದು ಸಂಬಂದ ಪಟ್ಟವರು ಅರಿಯಲಾರರು.ಅದೊಂದು ದಿನ ಮಳೆ ಬರುತ್ತಿತ್ತು. ಇದ್ದಕ್ಕಿಂದಂತೆಯೇ ಎಲ್ಲಿಂದಲೋ ಬಂದ ಇಬ್ಬರು ಯುವಕರು ಬಂದು ಒಬ್ಬನಿಗೆ ಮನಸ್ವೇಚ್ಚೆಯಂತೆ ಬೈಯ್ದುಕೊಂಡು, ಹೊಡೆಯುತ್ತಿದ್ದ ಅಲ್ಲಿ ನೆರೆದಿದ್ದವರು ಮೌನವಾಗಿದ್ದರು. ಕಾರಣ ಅಲ್ಲಿ ಒಬ್ಬ ಮಹಿಳೆಯ ವಿಚಾರವನ್ನು ಎಳೆ ತಂದು ಪ್ರಾರಂಬಿಸಿದ್ದೆ ಈ ಮೌನಕ್ಕೆ ಕಾರಣವಾಗಿತ್ತು.ಗಲಾಟೆಯೂ ಆಯಿತು, ಮಳೆಯೂ ನಿಂತೂ ಆಯ್ತು ಮುಂದೆ ಗೊತ್ತೆ ಇದೆಯಲ್ಲ...ಪೋಲೀಸ್ ಠಾಣೆ, ವಿಚಾರಣೆ ದೂರು ದಾಖಲು, ನ್ಯಾಯಾಲಯ ಎಲ್ಲವೂ ಪ್ರಜ್ಞಾವಂತ ನಾಗರೀಕರಿಗೆ ಗೊತ್ತಿರುತ್ತದೆ. ಅವಿದ್ಯಾವಂತರಿಗೆ ಏನು ಇದರ ಬಗ್ಗೆ ತಿಳಿದಿರುವುದಿಲ್ಲ ಎಂದರೆ ತಪ್ಪಾಗಲಾರದು.ನೀವು ಭಾವಿಸಿದಂತೆ ಠಾಣೆಗೆ ದೂರು ಹೋದ ಹಿನ್ನಲೆಯಲ್ಲಿ ಹೇಗೋ ವಿಚಾರಣೆ ಮಾಡಬೇಕಲ್ಲ. ಪ್ರಾರಂಭವಾಯಿತು ವಿಚಾರಣೆ. ದೂರುದಾರ ದೂರು ಕೊಡೋದು ಬಿಟ್ಟು ನನ್ನ ಹೆಂಡತಿಗೆ ನೋವಾಗುವಂತೆ ಸಂದೇಶ ಕಳಿಸಿದ್ದಾನೆ ಅದಕ್ಕೆ ಹೊಡೆದೆ ಎಂದನೋ ಹೊರತು ದೂರು ಕೊಡಲು ಮುಂದಾಗದೇ ಮೂರ್ನಾಲ್ಕು ಗಂಟೆ ಕಾಲ ತಡೆದು ದೂರು ಕೊಟ್ಟ. ಅಲ್ಲಿಗೆ ಅವನ ಕಥೆ ಮುಗಿಯಿತು....(.ಮುಂದುವರೆಯಲಿದೆ).
No comments:
Post a Comment