ವಿಜೃಂಭಣೆಯಿಂದ ತೆಪ್ಪೋತ್ಸವ
20-10-2017ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯ ತೆಪ್ಪೋತ್ಸವ ಬಹಳ ವಿಜೃಂಭಣೆಯಿಂದ ರಾತ್ರಿ 9.00ಗಂಟೆಗೆ ಜರುಗಿತು.
20-10-2017ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಯ ತೆಪ್ಪೋತ್ಸವ ಬಹಳ ವಿಜೃಂಭಣೆಯಿಂದ ರಾತ್ರಿ 9.00ಗಂಟೆಗೆ ಜರುಗಿತು. ಇದೇ ವೇಳೆಯಲ್ಲಿ ಶ್ರೀ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿಗಳು, ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪ ಕ.ಆ.ಸೇ, ಶ್ರೀ ಬಸವರಾಜು ಉಪಕಾರ್ಯದರ್ಶಿಗಳು, ಮಾಧುರಾಜು ಅಧೀಕ್ಷಕರು, ಬೇಡಗಂಪಣ ಅರ್ಚಕವೃಂದದವರು ಹಾಗು ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು.
ಪರಿಶಿಷ್ಟ ಜಾತಿ ಹಾಗೂ ಪರಿಷ್ಟ ಪಂಗಡಗಳ ರೈತರಿಗೆ ಸಹಾಯ ಧನಕ್ಕಾಗಿ ಆಹ್ವಾನ
ಚಾಮರಾಜನಗರ, ಅ. 22 - ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ಹೊಸದಾಗಿ ಅಂಗಾಶ ಕೃಷಿ ಬಾಳೆ ಸಸಿ ನಾಟಿ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90ರ ಸಹಾಯ ಧನ (ರೂ. 77,222-00 ಪ್ರತಿ ಎಕರೆಗೆ) ಲಭಿಸಲಿದೆ.ಆಸಕ್ತರು ಕೂಡಲೆ ಅಗತ್ಯ ದಾಖಲೆಗಳಾದ ಪಹಣಿ, ಭಾವಚಿತ್ರ, ಚೆಕ್‍ಬಂದಿ, ಜಾತಿ ಪ್ರಮಾಣ ಪತ್ರ, ಎಲೆಕ್ಷನ್ ಐಡಿ ಅಥವಾ ಆಧಾರ್ ಕಾರ್ಡ್ಸ್, ಬ್ಯಾಂಕ್ ಪಾಸ್ ಪುಸ್ತಕ, ಕೂಳವೆ ಬಾವಿ ದೃಢಿಕರಣ ಮುಂತಾದ ದಾಖಲೆಗಳ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಯೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ತೋಟಗಾರಿಕೆ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 22 - ವಿವಿಧ ಕ್ಷೇತ್ರಗಳಾದ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡೆ, ಸಮಾಜ ಸೇವೆಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿದ ವಿಕಲಚೇತನರುಗಳಿಗೆ ವೈಯಕ್ತಿಕ ಪ್ರಶಸ್ತಿ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಿದ್ದು, ಈ ಸಂಬಂಧ ಜಿಲ್ಲೆಯ ಆಸಕ್ತ ವಿಕಲಚೇತನ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಂದ ಅರ್ಜಗಳನ್ನು ಆಹ್ವಾನಿಸಲಾಗಿದೆ.ನಿಗಧಿತ ಅರ್ಜಿ ನಮೂನೆಗಳನ್ನು ನಗರದ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು (ಕೊಠಡಿ ಸಂಖ್ಯೆ. 25 ) ಜಿಲ್ಲಾಡಳಿತ ಭವನ, ಚಾಮರಾಜನಗರ ಇÀವರಿಂದ ಪಡೆದು ಭರ್ತಿಮಾಡಿ ಪೂರಕ ದಾಖಲೆಗಳೊದಿಗೆ ಅ. 28 ರೊಳಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08226 – 223688 ಅಥವಾ 224688 ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅನುದಾನ ಲಭ್ಯ : ಪ್ರಯೋಜನಕ್ಕೆ ಮನವಿ
ಚಾಮರಾಜನಗರ ಅ21 ತೋಟಗಾರಿಕೆ ಇಲಾಖೆಯು ವಿವಿಧÀ ಯೋಜನೆಗಳಡಿ ಸಹಾಯಧನ ನೀಡಲಿದ್ದು ರೈತರು ಬೆಳೆಗಾರರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದೆ .ಹನಿ ನೀರಾವರಿ ಯೋಜನೆಯಡಿ 2017-18 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಶೇ. 90% ರಷ್ಟು ಸಹಾಯಧನವನ್ನು ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಲು ಸಹಾಯಧನ ನೀಡಲಾಗುವುದು.
ಪ್ರತಿ ಫಲಾನುಭವಿ ಕುಟುಂಬಕ್ಕೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ಲಭ್ಯವಿದ್ದು, ಎಲ್ಲಾ ವರ್ಗದ ಅರ್ಹ ರೈತ ಕುಟುಂಬಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಂತೆ ಮತ್ತು ಉಳಿದ 3 ಹೆಕ್ಟೇರ್ ಪ್ರದೇಶಕ್ಕೆ ಶೇ.45 ರ ಮಿತಿಯೊಳಗೆ ಸಹಾಯಧನ ನೀಡಲಾಗುವುದು. ತರಕಾರಿ ಹಾಗೂ ವಾಣಿಜ್ಯ ಹಾಗೂ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್‍ವರೆಗೆ ಸಹಾಯಧನ ನೀಡಲಾಗುವುದು.
ನೀರಿನ ಟ್ಯಾಂಕರ್‍ಗೆ ಸಹಾಯಧನದಡಿ ನೀರಿನ ಟ್ಯಾಂಕರ್‍ಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಎಲ್ಲಾ ವರ್ಗದ ರೈತರು ಸಹಾಯಧನ ಪಡೆಯಲು ಅರ್ಹರಾಗಿದ್ದು, ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ..90 ರಷ್ಟು ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗದ ರೈತರು ಕನಿಷ್ಠ 1 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವುದು ಕಡ್ಡಾಯ ಹಾಗೂ ಸದರಿ ರೈತರ ಹೆಸರಿನಲ್ಲಿ ಕನಿಷ್ಠ 30 ಹೆಚ್. ಪಿ. ಸಾಮಥ್ರ್ಯದ ಟ್ಯ್ರಾಕ್ಟರ್‍ನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಉತ್ಪಾದನೆ ಸುಧಾರಣಾ ಕಾರ್ಯ ನಿಯೋಜನೆಗಾಗಿ ತಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ತೆಂಗಿನ ತೋಟಗಳಲ್ಲಿ ಹಳೆಯ ಮತ್ತು ಅನುತ್ಪಾದಕ ಮರಗಳು, ತೆಂಗಿನ ತೋಟಗಳ ನಿರ್ವಹಣೆ ನಿರ್ಲಕ್ಷ್ಯತೆಯಿಂದ, ಕೀಟ ರೋಗಗಳ ಭಾದೆ, ತೇವಾಂಶ ಮತ್ತು ಪೋಷಕಾಂಶಗಳ ಕೊರತೆ ಹಾಗೂ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಇಳುವರಿ ಕುಂಠಿತವಾಗಿರುತ್ತದೆ. ಸದರಿ ತೆಂಗಿನ ತೋಟಗಳಲ್ಲಿ ಪುನಃ ಹೊಸದಾಗಿ ಸಸಿಗಳನ್ನು ನೆಡುವುದು, ಕಡಿಮೆ ಇಳುವರಿ, ಅನುತ್ಪಾದಕ ಮರಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕೆ ನಿರ್ವಣೆಗೆ ಸಹಾಯಧನ ನೀಡಲಾಗುವುದು.
ಗೇರು ಅಭಿವೃದ್ದಿ ಕಾರ್ಯಕ್ರಮ ಯೋಜನೆಯಡಿ ಗೇರು ಪ್ರದೇಶ ವಿಸ್ತರಣೆ ಕೈಗೊಳ್ಳಲು ಅವಕಾಶವಿದೆ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು, ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗÀಡದ ರೈತರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.
No comments:
Post a Comment