ವಾರಾಂತ್ಯ ರಜೆ ವೇಳೆಯೂ ವೈದ್ಯರ ಸೇವೆ ಲಭಿಸಬೇಕು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ...............VSS
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ವೈದ್ಯರ ಸೇವೆ ಹಾಗೂ ಲಭ್ಯತೆ ಕುರಿತು ಮಾಹಿತಿ ಪಡೆದ ರಾಜೇಂದ್ರ ಕುಮಾರ್ ಕಠಾರಿಯಾ ಅವರು ವಾರಾಂತ್ಯ ರಜೆ ಸಂದರ್ಭದಲ್ಲಿ ವೈದ್ಯರು ರೋಗಿಗಳ ಸೇವೆಗೆ ಸಿಗುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ವೈದ್ಯರ ಸೇವೆ ಸದಾ ಸಿಗಬೇಕು. ಈ ಹಿನ್ನೆಲೆಯಲ್ಲಿ ರಜೆ ಹಾಗೂ ವಾರಾಂತ್ಯ ಸಮಯದಲ್ಲಿಯೂ ವೈದ್ಯರು ರೋಗಿಗಳ ಸೇವೆಗೆ ಸ್ಪಂದಿಸುವಂತೆ ನಿಯೋಜಿಸಬೇಕೆಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆಯಡಿ ಯಾವುದೇ ಕೊರತೆಯಾಗದಂತೆ ಜನರಿಗೆ ನೀರು ಪೂರೈಸಬೇಕು. ಲಭ್ಯವಿರುವ ಕುಡಿಯುವ ನೀರಿನ ಮೂಲ ಹಾಗೂ ಯೋಜನೆಯಡಿ ನೀರು ಪೋಲಾಗದಂತೆ ಬಳಕೆ ಮಾಡಿಕೊಳ್ಳಬೇಕು. ನೀರಿನ ಉಪಯೋಗ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಪೋಲು ಆಗದಂತೆ ಸಂರಕ್ಷಿಸುವ ಹೊಣೆಗಾರಿಕೆಯೂ ನಿರ್ವಹಿಸಬೇಕಿದೆ ಎಂದರು.
ಕೈಗಾರಿಕೆ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡಬೇಕು. ಕೈಗಾರಿಕೆ, ಉದ್ಯಮ ಸ್ಥಾಪಿಸಲು ಜಿಲ್ಲೆಗೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಬೇಕು. ವಿದ್ಯುತ್, ರಸ್ತೆ, ನೀರು, ಭೂಮಿ ಇತರೆ ಅವಶ್ಯ ವ್ಯವಸ್ಥೆಗೆ ಆದ್ಯತೆ ಕೊಡಬೇಕು. ಯಾವುದೇ ಕಾರಣಕ್ಕೂ ಅನಗತ್ಯ ನೆಪ ಹೇಳಿ ಕೈಗಾರಿಕೆ, ಉದ್ಯಮ ಸ್ಥಾಪನೆಗೆ ತೊಂದರೆ ನೀಡಬಾರದು ಎಂದು ರಾಜೇಂದ್ರ ಕುಮಾರ್ ಕಠಾರಿಯಾ ತಿಳಿಸಿದರು.
ರಾಜ್ಯ ಸರ್ಕಾರ ಅಕ್ಟೋಬರ್ 2ರಿಂದ ಆರಂಭಿಸಿರುವ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ಅಂಗನವಾಡಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಸ್ಥಳೀಯ ಮಟ್ಟದಲ್ಲಿ ಕಂಡುಬರುವ ತೊಡಕುಗಳನ್ನು ಪರಿಹರಿಸಿ ಯೋಜನೆ ಕಾರ್ಯಕ್ರಮ ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಖುದ್ದು ಗ್ರಾಮಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಯೋಜನೆ ಪ್ರಯೋಜನ ಸಿಗುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದರು.
ಜಿಲ್ಲೆಯ ಕೃಷಿ, ಮಳೆಬೆಳೆ, ಮೇವು ದಾಸ್ತಾನು, ತೋಟಗಾರಿಕೆ, ವಸತಿ ಯೋಜನೆ, ಹಾಸ್ಟೆಲ್‍ಗಳ ಸೌಲಭ್ಯ ಸೇರಿದಂತೆ ವಿವಿಧ ಯೋಜನೆ ಹಾಗೂ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗಳು ವಿವರವಾಗಿ ಪರಾಮರ್ಶಿಸಿದರು.
ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಜಿಲ್ಲೆಯ ಪ್ರಮುಖ ಬೆಳವಣಿಗೆ ಹಾಗೂ ಯೋಜನೆ ಅನುಷ್ಠಾನ ಕುರಿತು ವಿವರಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ತುಂಬಿದ ಚಿಕ್ಕಹೊಳೆ ಜಲಾಶಯಕ್ಕೆ ಜನಪ್ರತಿನಿಧಿಗಳಿಂದ ಬಾಗಿನ ಅರ್ಪಣೆ
ಚಾಮರಾಜನಗರ, ಅ 11. – ತಾಲೂಕಿನ ಪ್ರಮುಖ ಅವಳಿ ಜಲಾಶಯಗಳ ಪೈಕಿ ಒಂದಾದ ಚಿಕ್ಕಹೊಳೆ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಜನಪ್ರತಿನಿಧಿಗಳು ಇಂದು ಬಾಗಿನ ಅರ್ಪಿಸಿದರು.
ಚಿಕ್ಕಹೊಳೆ ಜಲಾಶಯದ ಮುಖ್ಯ ದ್ವಾರದ ಬಳಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಇತರೆ ಗಣ್ಯರು, ಜನಪ್ರತಿನಿಧಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.ಜಲಾಶಯ ತುಂಬಿ ಭೋರ್ಗರೆಯುತ್ತಿರುವ ನೀರಿನ ಬಳಿ ಪೂಜೆ ನೆರವೇರಿಸಿದ ಬಳಿಕ ಜನಪ್ರತಿನಿಧಿಗಳು, ಗಣ್ಯರು ಹರ್ಷಚಿತ್ತರಾಗಿ ಭಕ್ತಿಭಾವದಿಂದ ಜಲಾಶಯಕ್ಕೆ ಅರ್ಪಿಸಿದ ಬಾಗಿನ ಕಾರ್ಯಕ್ರಮಕ್ಕೆ ನೂರಾರು ಗ್ರಾಮಸ್ಥರು ಸಾಕ್ಷೀಕರಿಸಿದರು.
ಸುರಿವ ಮಳೆ ಲೆಕ್ಕಿಸದೆ ಬೆಳಗಿನಿಂದಲೇ ತುಂಬಿ ಹರಿಯುತ್ತಿರುವ ಜಲಾಶಯವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಧಾವಿಸಿದ್ದರು. ಮಹಿಳೆಯರು, ಮಕ್ಕಳು ಸಹ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೂ ಜನರ ದಂಡು ಆಗಮಿಸಿತ್ತು. ಬಹಳ ವರ್ಷಗಳ ನಂತರ ಜಲಾಶಯ ತುಂಬಿರುವ ಸಂತಸವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಬಾಗಿನ ಅರ್ಪಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಬಹಳ ವರ್ಷಗಳ ಬಳಿಕ ಅತೀ ಪ್ರಮುಖ ಚಿಕ್ಕಹೊಳೆ ಜಲಾಶಯ ತುಂಬಿರುವುದು ಈ ಭಾಗದ ಜನತೆಗೆ ಖುಷಿ ತಂದಿದೆ. ತಮಗೂ ಸಹ ಜಲಾಶಯ ಭರ್ತಿಯಾಗಿರುವುದು ಅತೀವ ಸಂತಸ ಉಂಟುಮಾಡಿದೆ. ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಜನರಿಗೆ ನೆಮ್ಮದಿ ತಂದುಕೊಡಲಿ. ಬೆಳೆ ಕೈಗೂಡಿ ಗ್ರಾಮೀಣ ಜನರಿಗೆ ಅನುಕೂಲವಾಗಲಿ ಎಂದು ಆಶಿಸುವುದಾಗಿ ಹೇಳಿದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಮರಿಸ್ವಾಮಿ ಮಾತನಾಡಿ ಕಳೆದ 2010ರಲ್ಲಿ ಜಲಾಶಯ ಭರ್ತಿಯಾಗಿತ್ತು. ಅದಾದ ಬಳಿಕ ಇದೇ ಪ್ರಥಮ ಬಾರಿಗೆ ಜಲಾಶಯ ತುಂಬಿದೆ. 0.372 ಎಂ.ಸಿಎಫ್.ಟಿ. ಸಾಮಥ್ರ್ಯದ ನೀರು ಇದೆ. 500 ಕ್ಯೂಸೆಕ್ಸ್ ಒಳ ಹರಿವು ಇದ್ದು, ಇಷ್ಟೇ ಪ್ರಮಾಣದ ನೀರನ್ನು ಸುರಕ್ಷತೆ ದೃಷ್ಠಿಯಿಂದ ಹೊರಬಿಡಲಾಗುತ್ತಿದೆ ಎಂದರು.
ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಒಂದೇ ದಿನದಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. ಹೀಗಾಗಿ ನೀರನ್ನು ಹೊರಬಿಡಲಾಗುತ್ತಿದ್ದು, ತಗ್ಗುಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ. ಬಂಡಿಗೆರೆ. ಮರಗದಕೆರೆಯಲ್ಲಿ ಕಳೆದ 15 ದಿನದ ಹಿಂದೆ ಕೆರೆಯ ಶೇ. 50ರಷ್ಟು ನೀರು ತುಂಬಿತ್ತು. ಇದೀಗ ಈ ಎರಡು ಕೆರೆಗಳಗೂ ಜಲಾಶÀಯದಿಂದ ನೀರು ಹರಿಸಲಾಗುತ್ತದೆ ಎಂದು ಮರಿಸ್ವಾಮಿ ತಿಳಿಸಿದರು.
ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಂದ್ರಪ್ರಸಾದ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅ. 13ರಂದು ನಗರದ ಕೆಲವೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಅ. 11:- ನಗರದಲ್ಲಿ ನ್ಯಾಯಾಲಯ ರಸ್ತೆ, ಹಳೆಯ ಡಿವೈಎಸ್‍ಪಿ ಪೊಲೀಸ್ ಠಾಣೆಯಿಂದ ಸತ್ತಿ ರಸ್ತೆಯವರೆಗೆ ರಸ್ತೆ ಅಗಲೀಕರಣ ಮಾಡಲು ರಸ್ತೆ ಬದಿಯಲ್ಲಿ ಇರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯು ಅಕ್ಟೋಬರ್ 13ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ರಾಮಸಮುದ್ರ ಫೀಡರ್ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್, ಕೋರ್ಟ್ ರಸ್ತೆ, ಕರಿನಂಜನಪುರ, ಕಾನ್ವೆಂಟ್ ರಸ್ತೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕ ಬಡ್ಡಿ ವಸೂಲಾತಿ ವಿರುದ್ದ ಕಾನೂನು ಕ್ರಮ
ಚಾಮರಾಜನಗರ, ಅ. 11 - ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ನೀಡುವ ಸಾಲದ ಮೇಲೆ ಭದ್ರತೆ ಇರುವ ಸಾಲಗಳಿಗೆ ಸಾಲಿಯಾನ ಶೇ. 14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಸಾಲಿಯಾನ ಶೇ. 16ರ ದರದಂತೆ ಮಾತ್ರ ಬಡ್ಡಿ ಪಡೆಯುವಂತೆ ಸಹಕಾರ ಸಂಘಗಳ ಇಲಾಖೆ ತಿಳಿಸಿದೆ.ನಿಗದಿತ ದರಕ್ಕಿಂತ ಹೆಚ್ಚಿನ ಬಡ್ಡಿ ಪಡೆಯುವುದು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ಪರವಾನಗಿ ರದ್ದುಪಡಿಸುವುದು ಮಾತ್ರವಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೆ ಲೇವಾದೇವಿ, ಗಿರವಿದಾರರು ವ್ಯವಹಾರ ಮಾಡುವ ಸ್ಥಳದಲ್ಲಿ ಬಡ್ಡಿ ದರವನ್ನು ಕಡ್ಡಾಯವಾಗಿ ಪ್ರದರ್ಶಿಸತಕ್ಕದ್ದು. ಪರವಾನಗಿ ಪಡೆಯದೇ ಲೇವಾದೇವಿ ವ್ಯವಹಾರ ನಡೆಸುವಂತಿಲ್ಲ. ಒಂದು ವೇಳೆ ಅಕ್ರಮವಾಗಿ ವ್ಯವಹಾರ ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧವೂ ಸಹ ಲೇವಾದೇವಿ ಕಾಯಿದೆಯಡಿ ಕ್ರಮ ಕೈಗೊಳ್ಳುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಹೆಂಗಸಿನ ಪತ್ತೆಗೆ ಮನವಿ
ಚಾಮರಾಜನಗರ, ಅ. 11:- ನಗರದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 10ರಂದು ರಾತ್ರಿ ಚಾಮರಾಜನಗರ ಸತ್ಯಮಂಗಲ ಮುಖ್ಯ ರಸ್ತೆ ಸೋಮವಾರಪೇಟೆ ಗ್ರಾಮದ ಕರ್ನಾಟಕ ಪಾನೀಯ ನಿಗಮದ ಗೋಡೌನ್ ಹತ್ತಿರದ ರಸ್ತೆಯಲ್ಲಿ ಅಪರಿಚಿತ ಹೆಂಗಸು ರಸ್ತೆ ದಾಟುವಾಗಲೋ, ಫುಟ್‍ಪಾತ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೋ ಯಾವುದೋ ವಾಹನದ ಚಾಲಕನು ಅತಿ ವೇಗವಾಗಿ ಚಲಿಸಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಹೆಂಗಸಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾನೆ.
ಹೆಂಗಸಿಗೆ ತೀವ್ರತರವಾದ ಗಾಯಗಳಾಗಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಅಂದೇ ಮೃತಪಟ್ಟಿರುತ್ತಾಳೆ.
ಮೃತಳು 40 ರಿಂದ 45ರ ವಯೋಮಾನದವಳಾಗಿದ್ದು ಗೋದಿ ಮೈಬಣ್ಣ, ಸಾದಾರಣ ಮೈಕಟ್ಟು, ಕೋಲು ಮುಖ, ಕಪ್ಪು ಕೂದಲು ಹೊಂದಿರುತ್ತಾಳೆ. ಕೆಂಪು ಮತ್ತು ನೀಲಿ ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿರುತ್ತಾಳೆ. ಈಕೆಯ ಕುರಿತು ಮಾಹಿತಿ ತಿಳಿದಿದ್ದಲ್ಲಿ ನಗರದ ಎಸ್ ಪಿ (ದೂ.ಸಂ.08226-222243) ಚಾಮರಾಜನಗರ ಪೊಲೀಸ್ ಇನ್ಸ್‍ಪೆಕ್ಟರ್ (ದೂ.ಸಂ. 08226-222047, ಮೊಬೈಲ್ 9480804645) ಅಥವಾ ಪೊಲೀಸ್ ಕಂಟ್ರೋಲ್ ರೂಂ (ದೂ.ಸಂ. 08226-226383) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿಷನ್ ಡಾಕ್ಯುಮೆಂಟ್ ತಯಾರಿ : ಅಡ್ವಾನ್ಸ್ ಟೀಮ್‍ನಿಂದ ಪೂರ್ವಸಿದ್ದತೆ ಪರಿಶೀಲನೆ
ಚಾಮರಾಜನಗರ, ಅ.11 :- ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಷನ್ 2025 ಡಾಕ್ಯುಮೆಂಟ್ ತಯಾರಿ ಸಂಬಂಧ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಜಿಲ್ಲಾಮಟ್ಟದ ವಿಷನ್ ಡಾಕ್ಯುಮೆಂಟ್ ಕಾರ್ಯಾಗಾರ ಹಮ್ಮಿಕೊಳ್ಳಲಿರುವ ಕುರಿತು ಕೈಗೊಂಡಿರುವ ಪೂರ್ವಸಿದ್ಧತೆಯನ್ನು ಅಡ್ವಾನ್ಸ್ ಟೀಮ್ ಇಂದು ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಡ್ವಾನ್ಸ್ ಟೀಮ್‍ನ ವೇಣುಗೋಪಾಲ್ ಪೊಟ್ಲೂರಿ ಹಾಗೂ ಚೇತನ್ ಗುಪ್ತಾ ಅವರು ಡಾಕ್ಯುಮೆಂಟ್ ತಯಾರಿ ಕಾರ್ಯಾಗಾರಕ್ಕೆ ಪೂರ್ವಭಾವಿಯಾಗಿ ನಡೆಸಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.
ನಗರ ಮೂಲ ಸೌಕರ್ಯ, ಸ್ಮಾರ್ಟ್‍ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳು, ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ, ಮಾಹಿತಿ ಮತ್ತು ತಂತ್ರಜ್ಞಾನ, ಆಡಳಿತ, ಕಾನೂನು ಹಾಗೂ ನ್ಯಾಯ ವಿಷಯ ವಲಯಗಳಿಗೆ ಸಂಬಂದಿಸಿದಂತೆ ಇದುವರೆಗೆ ನಡೆಸಿರುವ ಪೂರ್ವಭಾವಿ ಸಭೆsಗಳ ಬಗ್ಗೆ ವಿವರ ಪಡೆದುಕೊಂಡರು.
ರಾಜ್ಯದ ಸಮಗ್ರ ಬೆಳವಣಿಗೆ ಆಶಯದೊಂದಿಗೆ ಜಿಲ್ಲೆಯ ಅಭಿವೃದ್ಧಿಗೂ ಅವಕಾಶ ಹಾಗೂ ಅಗತ್ಯಕ್ಕೆ ತಕ್ಕಂತೆ ಆಗಬೇಕಿರುವ ಗುರಿಯನ್ನು ಇಟ್ಟುಕೊಂಡು ಕರಡು ರೂಪಿತವಾಗಲಿ. ಇದಕ್ಕಾಗಿ ಎಲ್ಲ ವರ್ಗದ ಜನರು, ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರು, ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಅಭಿಪ್ರಾಯ, ಸಲಹೆ ಮಂಡನೆಯಾಗಲಿ ಎಂದು ಅಡ್ವಾನ್ಸ್ ಟೀಮ್ ಸದಸ್ಯರು ಹೇಳಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ನಗರೀಕರಣ, ಶಿಕ್ಷಣ ಸೇರಿದಂತೆ ಮುಂದಿನ ಏಳು ವರ್ಷಗಳಲ್ಲಿ ಜಿಲ್ಲೆಗೆ ಯಾವ ಯೋಜನೆಗಳು ನೆರವಾಗಬೇಕಿದೆ ಎಂಬುದನ್ನು ಜನರಿಂದಲೇ ಆಲಿಸಿ ರಾಜ್ಯಮಟ್ಟದಲ್ಲಿ ನೀತಿ ಕಾರ್ಯಕ್ರಮ ನಿರೂಪಣೆಗೆ ಸಹಾಯಕವಾಗಲಿರುವ ವಿಷನ್ 2025 ಡಾಕ್ಯುಮೆಂಟ್ ತಯಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಜನರು ಹಾಗೂ ಜನಪ್ರತಿನಿಧಿಗಳಿಂದ ಅಭಿವೃದ್ಧಿ ಕುರಿತು ಉತ್ತಮ ಚಿಂತನೆ, ಸಲಹೆ, ಅಭಿಪ್ರಾಯ ಪಡೆಯಲಾಗುತ್ತದೆ. ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ನೌಕರರ ಸಂಘ ಇನ್ನಿತರ ಸಂಸ್ಥೆಗಳಿಂದ ಪೂರಕ ಪ್ರತಿಕ್ರಿಯೆಗಳನ್ನು ಸಹ ಪಡೆಯಬೇಕು ಎಂದು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
No comments:
Post a Comment