ವಿಷನ್ ಡಾಕ್ಯುಮೆಂಟ್ : ಕೃಷಿ, ತೋಟಗಾರಿಕೆ ಸೇರಿ ಗ್ರಾಮೀಣ ಅಭಿವೃದ್ಧಿ ವಿಷಯಗಳ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಅನಿಸಿಕೆ ಪ್ರಸ್ತಾಪ
ಚಾಮರಾಜನಗರ, ಅ. 04 ಮುಂದಿನ 7 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ವಿಷನ್ 2025 ಡಾಕ್ಯುಮೆಂಟ್ ಬಗ್ಗೆ ನೀಲನಕ್ಷೆ ತಯಾರಿಸುವ ಕುರಿತು ಕೃಷಿ ಮತ್ತು ಇತರೆ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಇಂದು ಜಿಲ್ಲಾ ಕೇಂದ್ರದಲ್ಲಿ ನಡೆಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಇರುವ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಕೃಷಿ ಮಾರುಕಟ್ಟೆ, ಹಾಲು ಉತ್ಪಾದನೆ ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ರೂಪಿಸಬೇಕಾಗಿರುವ ವಿಷನ್ ಡಾಕ್ಯುಮೆಂಟ್ ತಯಾರಿಕೆಗಾಗಿ ಮಾಹಿತಿ ಸಂಗ್ರಹಣೆ ಕಾರ್ಯವು ನಡೆಯಿತು.
ರಾಜ್ಯದ ಮುಂದಿನ 7 ವರ್ಷಗಳ ಅವಧಿಯಲ್ಲಿ ಸಂಬಂಧಪಟ್ಟ ಕ್ಷೇತ್ರಗಳು ಹಾಗೂ ಇದರ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳನ್ನು ರೂಪಿಸಬೇಕು ಯಾವ ಅಂಶಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಅಭಿಪ್ರಾಯಗಳನ್ನು ಪೂರ್ವಭಾವಿ ಸಭೆಯಲ್ಲಿ ಆಲಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ, ಗುರಿ ಸಾಧನೆ, ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಾಗಿರುವ ಅಂಶಗಳು, ಮೌಲ್ಯ ಸರಪಳಿಯಲ್ಲಿ ಹೂಡಿಕೆ ಉತ್ತೇಜನಕ್ಕಾಗಿ ಅಗತ್ಯವಿರುವ ಕ್ರಮಗಳು, ಸೂಕ್ಷ್ಮ ನೀರಾವರಿ (ಹನಿ ನೀರಾವರಿ ಹಾಗೂ ಸಿಂಪಡಿಸುವಿಕೆ) ಉತ್ತೇಜನಕ್ಕೆ ಯಾವ ಮಾದರಿ ಅಳವಡಿಸಿಕೊಳ್ಳಬೇಕು, ಆಹಾರ ಸಂಸ್ಕರಣೆ, ಮೂಲ ಸೌಕರ್ಯ ಹೂಡಿಕೆ, ರೈತರ ನೋಂದಣಿ, ಹಾಲು ಉತ್ಪಾದನೆ, ಪಶುಪಾಲನೆ, ಮೀನು ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆಯುವಿಕೆ, ಸಾವಯವ ಕೃಷಿ ವಿಸ್ತರಣೆಗೆ ಅನುಸರಿಸಬೇಕಿರುವ ಕ್ರಮಗಳ ಕುರಿತು ಪ್ರಶ್ನಾವಳಿಗಳನ್ನು ಪೂರ್ವಭಾವಿ ಸಭೆಯಲ್ಲಿ ನೀಡಲಾಯಿತು.
ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಮಾತನಾಡಿ ಕರ್ನಾಟಕ ರಾಜ್ಯದ ಸರ್ವಾಂಗೀಣ ಪ್ರಗತಿ ಉದ್ದೇಶವನ್ನಿಟ್ಟುಕೊಂಡು ರಾಜ್ಯ ಸರ್ಕಾರ ವಿಷನ್ 2025 ಡಾಕ್ಯುಮೆಂಟ್ ಕಾರ್ಯಕ್ರಮ ಹೆಸರಿನಲ್ಲಿ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯಗಳ ಬಗ್ಗೆ ಯೋಜನೆ ಸಿದ್ಧಪಡಿಸಲು ಕಾರ್ಯಾರಂಭ ಮಾಡಿದೆ. ಇದಕ್ಕಾಗಿ ಕೃಷಿ ಸೇರಿದಂತೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಕ್ಷೇತ್ರಗಳಲ್ಲಿ ಆಗಬೇಕಿರುವ ಮಾರ್ಪಾಡು, ಸೇರಿಸಬೇಕಾದ ಉತ್ತಮ ಅಂಶಗಳು, ಅಭಿವೃದ್ಧಿ ಬೆಳವಣಿಗೆಗೆ ಅಗತ್ಯವಿರುವ ಕಾರ್ಯಕ್ರಮ ಇನ್ನಿತರ ಎಲ್ಲಾ ವಿಷಯಗಳ ಅಭಿಪ್ರಾಯಗಳನ್ನು ಆಯಾ ಕ್ಷೇತ್ರದಲ್ಲಿ ತೊಡಗಿರುವವರಿಂದ ಪಡೆಯಲಾಗುತ್ತದೆ ಎಂದರು.
ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಇಂದಿನ ಸಭೆಯಲ್ಲಿ ಅಭಿಪ್ರಾಯ ಮಂಡನೆಗೆ ಅವಕಾಶವಾಗದಿದ್ದಲ್ಲಿ ಲಿಖಿತವಾಗಿ ಆಯಾ ಇಲಾಖೆಗೆ ನೀಡಬಹುದಾಗಿದೆ. ಮುಂದೆಯೂ ಸಹ ಮತ್ತಷ್ಟು ಸಭೆಗಳು ನಡೆಯಲಿವೆ. ಡಾಕ್ಯುಮೆಂಟ್ ತಯಾರಿ ಸಂಬಂಧ ಸಿದ್ಧತೆ ಪರಿಶೀಲನೆಗಾಗಿ ಜಿಲ್ಲೆಗೆ ಅಕ್ಟೋಬರ್ 11ರಂದು ಅಡ್ವಾನ್ಸ್ಡ್ ಟೀಂ ಬರಲಿದೆ. ಅಕ್ಟೋಬರ್ 30ರಂದು ಮುಖ್ಯ ಡಾಕ್ಯುಮೆಂಟ್ ಕಾರ್ಯಾಗಾರ ನಡೆಯಲಿದೆ ಎಂದು ತಿರುಮಲೇಶ್ ತಿಳಿಸಿದರು.
ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿದ್ದ ಮುಖಂಡರು, ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಾಗೂ ಡಾಕ್ಯುಮೆಂಟ್ ತಯಾರಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮುಖಂಡರಾದ ಚನ್ನಬಸಪ್ಪ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ರವಿಶಂಕರ್, ಮಾದೇಶ್, ರಾಜಣ್ಣ, ಇನ್ನಿತರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ಹಿರಿಯ ನಾಗರಿಕರ ಸೇವೆ, ಅನುಭವ, ಸಲಹೆ ಅಗತ್ಯ : ಜಿ.ಪಂ. ಅಧ್ಯಕ್ಷ ಎಂ. ರಾಮಚಂದ್ರ
ಚಾಮರಾಜನಗರ, ಅ. 04- ಹಿರಿಯ ನಾಗರಿಕರ ಅಮೂಲ್ಯ ಸೇವೆ, ಕೊಡುಗೆ ಸೇರಿದಂತೆ ಹೊಂದಿರುವ ಅಪಾರವಾದ ಅನುಭವದ ಪ್ರಯೋಜನ ಪ್ರಸ್ತುತ ಸಂದರ್ಭಗಳಿಗೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಭಿಪ್ರಾಯಪಟ್ಟರು.ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರನ್ನು ಈ ಹಿಂದೆ ಪೂಜ್ಯ ಸ್ಥಾನದಲ್ಲಿ ಇಟ್ಟು ಗೌರವಿಸಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಸಲಹೆಗಳಿಗೆ ಹೆಚ್ಚು ಕಿವಿಗೊಡುತ್ತಿಲ್ಲ. ಹಿರಿಯ ನಾಗರಿಕರ ಸೇವೆ, ಅನುಭವ ಇಂದಿನ ಸಂದರ್ಭಕ್ಕೆ ಮಾರ್ಗದರ್ಶಕವಾಗಿದೆ. ಹೀಗಾಗಿ ಹಿರಿಯ ನಾಗರಿಕರನ್ನು ಕಡೆಗಣಿಸದೆ ಅವರ ಅಭಿಪ್ರಾಯ ಸಲಹೆಗಳನ್ನು ಪಡೆಯಬೇಕಿದೆ ಎಂದು ರಾಮಚಂದ್ರ ತಿಳಿಸಿದರು.
ಶ್ರೀಮಂತ ಸಂಸ್ಕøತಿ ಪರಂಪರೆ ಆಚರಣೆಗೆ ಹೆಸರಾದ ನಮ್ಮ ದೇಶದಲ್ಲಿ ಇತ್ತೀಚೆಗೆ ಪಾಶ್ಚಿಮಾತ್ಯ ಅನುಕರಣೆಗಳು ಸಹ ಹೆಚ್ಚಾಗಿವೆ. ವಿದ್ಯಾವಂತರಾದಂತೆಲ್ಲಾ ಕುಟುಂಬದ ಹಿರಿಯರಿಗೂ ಆಶ್ರಯ ನೀಡಿ ಪ್ರೀತಿಯಿಂದ ನೋಡಿಕೊಳ್ಳದಿರುವ ವಾತಾವರಣ ಕೆಲವೆಡೆ ಕಂಡುಬರುತ್ತಿದೆ. ಒತ್ತಡದ ಕಾರಣದಿಂದ ವೃದ್ಧಾಶ್ರಮಕ್ಕೆ ಹಿರಿಯರನ್ನು ಕಳುಹಿಸುವ ಪ್ರವೃತ್ತಿ ನಿಲ್ಲಬೇಕಿದೆ. ಪ್ರೀತಿ ವಾತ್ಸಲ್ಯದಿಂದ ಮುಪ್ಪಿನ ಕಾಲದಲ್ಲಿ ಹಿರಿಯರಿಗೆ ಆಸರೆಯಾಗಿ ನಿಲ್ಲಬೇಕಿದೆ ಎಂದು ರಾಮಚಂದ್ರ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ ಅವರು ಹಿರಿಯರನ್ನು ಪ್ರೀತಿ ಆದರದಿಂದ ಪೋಷಣೆ ಮಾಡಬೇಕು. ಕಷ್ಟಪಟ್ಟು ಮಕ್ಕಳ ಬೆಳವಣಿಗೆಗೆ ಕಾರಣರಾದ ಹಿರಿಯ ಪೋಷಕರಿಗೆ ಗೌರವ ನೀಡಬೇಕು. ಒಂಟಿತನ ಕಾಡದಂತೆ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ ಸದಾಶಿವಮೂರ್ತಿ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಹಲವೆಡೆ ಹೃದಯ ವೈಶಾಲ್ಯತೆ ಕಳೆದುಕೊಂಡ ನಿದರ್ಶನಗಳು ನೋಡುತ್ತಿದ್ದೇವೆ. ಮಕ್ಕಳು ಹಿರಿಯರನ್ನು ನಿರ್ಲಕ್ಷ ಮಾಡುವ ಪ್ರಕರಣಗಳು ಕಂಡುಬರುತ್ತಿವೆ. ಇಡೀ ಜೀವನವನ್ನೇ ಮಕ್ಕಳ ಏಳಿಗೆಗೆ ಮುಡುಪಾಗಿಟ್ಟ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಸಂಸ್ಕøತಿ ಮುಂದುವರೆಯಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗರಾಜ್ (ಕಮಲ್) ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಜ್ಞಾನ ಹೊಂದಿರುವ ಹಿರಿಯ ನಾಗರಿಕರು ಇದ್ದಾರೆ. ಸಮಾಜದ ಒಳಿತಿಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಅನುಭವದ ಜ್ಞಾನ ಎಲ್ಲರಿಗೂ ಅಗತ್ಯವಾಗಿ ಬೇಕು. ಹೀಗಾಗಿ ಯಾರನ್ನೂ ಸಹ ನಿರ್ಲಕ್ಷ್ಯ ಮಾಡದೆ ಹಿರಿಯರ ಅನುಭವ ಪ್ರಯೋಜನ ಪಡೆಯಬೇಕು ಎಂದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್ ಮಾತನಾಡಿ ಹಿರಿಯ ನಾಗರಿಕರು ಸದಾ ಉತ್ಸಾಹಿಗಳಾಗಿರಬೇಕು. ವಯಸ್ಸಾಗುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬ ಸಕಾರಾತ್ಮಕ ಮನೋಭಾವನೆ ಹೊಂದಬೇಕು. ಸ್ವಾವಲಂಬಿಗಳಾಗಿ ಬದುಕಲು ಸರ್ಕಾರ ಸಾಕಷ್ಟು ಯೋಜನೆ ಹಾಗೂ ನೆರವು ಕಾರ್ಯಕ್ರಮ ರೂಪಿಸಿದೆ. ಇವುಗಳ ಬಳಕೆ ಮಾಡಿಕೊಂಡು ಸುಖೀ ಜೀವನ ನಡೆಸಬೇಕೆಂದು ಸಲಹೆ ಮಾಡಿದರು.
ಇದೇ ವೇಳೆ ಸಾಹಿತ್ಯ ಕ್ಷೇತ್ರದಲ್ಲಿ ಜಗದೀಶ್, ಕ್ರೀಡಾ ಕ್ಷೇÀತ್ರದಲ್ಲಿ ನಾರಾಯಣ ಜಟ್ಟಪ್ಪ ಉರುಫ್ ಪುಟ್ಟಣ್ಣ ಹಾಗೂ ಕಲಾ ಕ್ಷೇತ್ರದಲ್ಲಿನ ಸಾಧನೆಗೆ ಪುಟ್ಟಬಸವನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಮ್ಮ, ಯೋಗೇಶ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜು, ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮೂಲಿಮನಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಪೃಥ್ವಿದಾಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಗರದಲ್ಲಿ ಅ. 5ರಂದು ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಮುಂದೂಡಿಕೆ
ಚಾಮರಾಜನಗರ, ಅ. 04 :- ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಅಕ್ಟೋಬರ್ 5ರಂದು ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಬೆಂಗಳೂರಿನಲ್ಲಿ ಅಕ್ಟೋಬರ್ 5ರಂದು ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿರುವುದರಿಂದ ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ನಡೆಯಬೇಕಿದ್ದ ವಾಲ್ಮೀಕಿ ಜಯಂತಿಯನ್ನು ಮತ್ತೊಂದು ದಿನ ಆಚರಣೆ ಮಾಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಏರ್ಪಡಿಸಲು ಮತ್ತೊಂದು ದಿನಾಂಕವನ್ನು ಗೊತ್ತುಪಡಿಸುವುದಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ಅ. 04 :- ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಕ್ಟೋಬರ್ 6 ರಿಂದ 30ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.ಅಕ್ಟೋಬರ್ 6ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, ಅಕ್ಟೋಬರ್ 12ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು.
ಅಕ್ಟೋಬರ್ 21ರಂದು ಯಳಂದೂರು ಸರ್ಕಾರಿ ಅತಿಥಿಗೃಹ, 25ರಂದು ಕೊಳ್ಳೇಗಾಲ ಸರ್ಕಾರಿ ಅತಿಥಿಗೃಹ ಹಾಗೂ 30ರಂದು ಹನೂರಿನ ಸರ್ಕಾರಿ ಅತಿಥಿಗೃಹದಲ್ಲಿ ದೂರುಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ವಿಷನ್ 2025 : ಅ. 6ರಂದು ಕೈಗಾರಿಕೆ ಅಭಿವೃದ್ಧಿ, ಉದ್ಯೋಗ ಕೌಶಲ್ಯ ಕ್ಷೇತ್ರ ವಿಷಯ ಕುರಿತು ಸಭೆ : ಆಹ್ವಾನÀ
ಚಾಮರಾಜನಗರ, ಅ. 04 - ರಾಜ್ಯದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ವಿಷನ್ 2025 ಡಾಕ್ಯುಮೆಂಟ್ಸ್ ಎಂಬ ನೀಲ ನಕ್ಷೆ ತಯಾರಿಕೆ ಬಗ್ಗೆ ಕೈಗಾರಿಕಾಭಿವೃದ್ಧಿ, ಸೇವೆ, ಉದ್ಯೋಗ ಮತ್ತು ಕೌಶಲ್ಯ ತರಬೇತಿ ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಹಾಗೂ ಬಯೋಟೆಕ್ನಾಲಜಿ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಲು ಅಕ್ಟೋಬರ್ 6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಸಭೆ ಏರ್ಪಡಿಸಲಾಗಿದೆ.
ಬಂಡವಾಳ ಹೂಡಿಕೆದಾರರು (ಪ್ರವಾಸೋದ್ಯಮ, ಐಟಿಬಿಟಿ ಒಳಗೊಂಡಂತೆ) ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಸಂಸ್ಥೆಗಳು, ಕೌಶಲ್ಯ ತರಬೇತಿ ಸಂಸ್ಥೆಗಳು, ಯುವಜನರು, ತಾಂತ್ರಿಕ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಸಂಬಂಧ ವಿಷಯದಲ್ಲಿ ಆಸಕ್ತಿ ಇರುವ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾದ ಎಂ.ಎನ್. ಮುರುಳೀಧರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹುಡುಗಿ ನಾಪತ್ತೆ : ಮಾಹಿತಿ ನೀಡಲು ಮನವಿ
ಚಾಮರಾಜನಗರ, ಅ. 04 - ನಗರದ ಮಹಿಳಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿವಸ್ವಾಮಿ ಎಂಬುವರ ಮಗಳಾದ ಎಚ್.ಎಸ್. ಪೂಜಾ ಕಾಣೆಯಾಗಿರುವ ವಿದ್ಯಾರ್ಥಿನಿ. ದುಂಡು ಮುಖ, ಬಿಳಿ ಬಣ್ಣ, ಸಾದಾರಣ ಶರೀರ, ಎಡ ಕಾಲಿನಲ್ಲಿ 6 ಬೆರಳಿದೆ. ಕನ್ನಡ ಮತ್ತು ಇಂಗ್ಲೀಷ್ ಮಾತನಾಡಬಲ್ಲ ಈಕೆ ಕಡು ಕಂದು ಬಣ್ಣದ ಲೆಗಿನ್ಸ್ ಮತ್ತು ತಿಳಿ ಹಳದಿ ಬಣ್ಣದ ಟಾಪ್ ಧರಿಸಿದ್ದಾರೆ. ಈಕೆಯ ಮಾಹಿತಿ ದೊರೆತಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 04- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ಸಾಮಾನ್ಯ ವಿದ್ಯಾರ್ಥಿ ನಿಲಯಗಳು, ವೃತ್ತಿಪರ, ಸ್ನಾತಕೋತ್ತರ, ನರ್ಸಿಂಗ್ ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಜನಾಂಗದ ಜಾತಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 10 ಕಡೆಯ ದಿನವಾಗಿದೆ. ವಿದ್ಯಾರ್ಥಿ ನಿಲಯಗಳ ವಿವರ, ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಇನ್ನಿತರ ಮಾಹಿತಿಗಾಗಿ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳು ಉಂಟಾದಲ್ಲಿ bಛಿತಿhosಣeಟಚಿಜmissioಟಿ@gmಚಿiಟ.ಛಿom ಗೆ ಇ ಮೇಲ್ ಮುಖಾಂತರ ಅಥವಾ ಜಿಲ್ಲಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 080-65970006 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 04 - ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಲಿರುವ ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 13 ಕಡೆಯ ದಿನವಾಗಿದೆ.2017-18ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಪದವಿ, ಪಿಎಚ್‍ಡಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ವಿವರಗಳಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ದೂರವಾಣಿ ಸಂಖ್ಯೆ 080-65970004 ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 7ರಂದು ಜಿ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಅ. 04 - ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರದಸ, ದ್ವಿದಸ, ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಚಾಮರಾಜನಗರ, ಅ. 04 - ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಿರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ (ಸ್ಟಡಿ ಸರ್ಕಲ್) ಯಲ್ಲಿ ಅಕ್ಟೋಬರ್ 10 ರಿಂದ 25ರವರೆಗೆ ಏರ್ಪಡಿಸಿದೆ.ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 3ರಿಂದ ಹೆಸರನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸ್ವವಿವರದೊಂದಿಗೆ ನೋಂದಾಯಿಸಿ ಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ಉದ್ಯೋಗಾಧಿಕಾರಿ ಅವರ ದೂರವಾಣಿ ಸಂಖ್ಯೆ. 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment