ಒತ್ತಡಮುಕ್ತ ಬದುಕಿಗೆ ಮಾನಸಿಕ ಆರೋಗ್ಯ ಅಗತ್ಯ : ಆರ್.ಪಿ. ನಂದೀಶ್
ಜಿಲ್ಲಾಡಳಿತ ಭವನದ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಇದೆ. ಇಂದಿನ ಪರಿಸ್ಥಿತಿಯಲ್ಲಿ ಪೊಲೀಸ್, ವೈದ್ಯರು, ವಕೀಲರು ಹಾಗೂ ಮಾಧ್ಯಮದವರಿಗೆ ಹೆಚ್ಚಿನ ಒತ್ತಡವಿದೆ. ಮೂರರಿಂದ ನಾಲ್ಕು ಮಂದಿಯ ಕೆಲಸವನ್ನು ಒಬ್ಬ ವ್ಯಕ್ತಿ ನಿರ್ವಹಿಸುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಆಗ ನೌಕರರ ಆರೋಗ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಅದ್ದರಿಂದ ಕೆಲಸ ಮಾಡುವ ವಾತವರಣ ಒತ್ತಡಮುಕ್ತಕ್ಕೆ ಪೂರಕವಾಗಿರಬೇಕು. ಎಂದರು.
ವಿಶ್ವದಲ್ಲಿ 30 ಕೋಟಿ ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಶ್ವಸಂಸ್ಥೆ ಜನರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿವರ್ಷ ಅ. 10ರಂದು ಮಾನಸಿಕ ಆರೋಗ್ಯ ದಿನ ಆಚರಿಸುವ ಮೂಲಕ ಎಲ್ಲರು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಲಹೆ ಮಾಡಿದೆ ಎಂದು ನಂದೀಶ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಅವರು ಮಾತನಾಡಿ ಮಾನಸಿಕ ಅಸ್ವಸ್ಥತೆ ಸಾಮಾಜಿಕ ಪಿಡುಗಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಮಾನಸಿಕ ರೋಗಕ್ಕೆ ಹೆಚ್ಚು ಜನರು ತುತ್ತಾಗುತ್ತಿದ್ದಾರೆ. ಒತ್ತಡ ನಿವಾರಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಮನೋಚೈತನ್ಯದಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪ್ರತಿ ಜಿಲ್ಲೆಯಲ್ಲಿಯು ಮಾನಸಿಕ ಆರೋಗ್ಯಕೇಂದ್ರಗಳನ್ನು ತೆರೆದು ಸಲಹೆ, ಮಾರ್ಗದರ್ಶನ ನೀಡಲು ಮನೋರೋಗತಜ್ಞರನ್ನು ನಿಯೋಜಿಸಿದೆ ಎಂದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್‍ಕುಮಾರ್ ಮಾತನಾಡಿ ಒತ್ತಡವಿಲ್ಲದ ವ್ಯಕ್ತಿಯಿಲ್ಲ. ಹೆಚ್ಚಿನ ಒತ್ತಡಕ್ಕೊಳಗಾಗುವ ವ್ಯಕ್ತಿಗಳು ಧೂಮಪಾನ, ಮದ್ಯಪಾನದಿಂದ ಖಿನ್ನತೆಗೊಳಗಾಗುತ್ತಾರೆ. ರಕ್ತದೊತ್ತಡ ಹಾಗೂ ಮಧುಮೇಹ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಮಾನಸಿಕ ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಕಷ್ಟಸಾಧ್ಯ. ಒತ್ತಡಮುಕ್ತÀರಾಗಿ ಕೆಲಸ ಮಾಡಲು ವಾತವರಣ ಉತ್ತಮವಾಗಿರಬೇಕು. ಮಾನಸಿಕ ಆರೋಗ್ಯಕ್ಕೆ ಸಮುದಾಯದ ಸಹಭಾಗಿತ್ವ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ. ರಾಜು ಮಾತನಾಡಿ ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ ಒಬ್ಬರು ಮಾನಸಿಕ ತಜ್ಞರಿದ್ದಾರೆ. ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ಮಂಗಳವಾರ ಮಾನಸಿಕ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಲು ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸರು, ವೈದ್ಯರು ಹಾಗೂ ಸುಶ್ರೂಷಕಿಯರಿಗೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಕೌನ್ಸಿಲಿಂಗ್ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞರಾದ ಡಾ. ಸುಷ್ಮಾ ಅವರು ಮಾನಸಿಕ ಆರೋಗ್ಯದ ಕುರಿತು ವಿವರವಾಗಿ ತಿಳಿಸಿದರು. ನರ್ಸಿಂಗ್ ಶಾಲೆಯ ಪ್ರಾಂಶುಪಾಲರಾದ ಮಹಮದ್ ಖದರತ್ ಉಲ್ಲಾ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು, ಅರಕ್ಷರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಾಂಜಾ ಬೆಳೆದ ಇಬ್ಬರು ವ್ಯಕ್ತಿಗಳಿಗೆ ಸಜೆ
ಚಾಮರಾಜನಗರ, ಅ. 13 - ಅಕ್ರಮವಾಗಿ ಗಾಂಜಾ ಬೆಳೆದ ಇಬ್ಬರು ವ್ಯಕ್ತಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.ಕೊಳ್ಳೇಗಾಲ ತಾಲೂಕಿನ ಜಿ.ಕೆ. ಹೊಸೂರು ಗ್ರಾಮದ ಸಿದ್ದಪ್ಪ ಎಂಬುವವರು ಗಂಗಾದರನ ಕಟ್ಟೆಗೆ ಸೇರಿದ 5 ಎಕರೆ ಜಮೀನಿಗೆ ಪಂಪ್ ಸೆಟ್‍ನಿಂದ ನೀರು ಹಾಯಿಸಿಕೊಂಡು ಕಬ್ಬು ಹಾಗೂ ಮೆಣಸಿನ ಫಸಲಿನ ಜತೆ 400 ಕೆಜಿ ತೂಕದ 50 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದನ್ನು ಪತ್ತೆ ಹಚ್ಚಿ 2012ರ ಅಕ್ಟೋಬರ್ 12ರಂದು ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆದು ಹೆಚ್ಚಿನ ಹಣ ಸಂಪಾದನೆ ಆಸೆಗಾಗಿ ಗಾಂಜಾ ಸೊಪ್ಪು ಬೆಳೆದಿರುವ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಸಿದ್ದಪ್ಪನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಎರಡೂವರೆ ವರ್ಷ ಸಜೆ ಹಾಗೂ 5000 ರೂ. ದಂಡ ವಿಧಿಸಿ ಅಕ್ಟೋಬರ್ 12ರಂದು ತೀರ್ಪು ನೀಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಕೃಷ್ಣಶೆಟ್ಟಿ ಎಂಬಾತ ತನ್ನ ಜಮೀನಿನಲ್ಲಿ ಜೋಳದ ಫಸಲಿನ ಜತೆ ಹೆಚ್ಚಿನ ಹಣ ಸಂಪಾದನೆ ದೃಷ್ಠಿಯಿಂದ 50 ಕೆಜಿ ತೂಕದ 20 ಗಾಂಜಾ ಗಿಡಗಳನ್ನು ಬೆಳೆದಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಕೃಷ್ಣಶೆಟ್ಟಿ ಎಂಬಾತನಿಗೆ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು 2 ವರ್ಷ ಸಜೆ ಹಾಗೂ 2 ಸಾವಿರ ರೂ ದಂಡ ವಿಧಿಸಿ ಅಕ್ಟೋಬರ್ 11ರಂದು ತೀರ್ಪು ನೀಡಿದ್ದಾರೆ.
ಅ. 16ರಂದು ಜಾಗತಿಕ ಕೈತೊಳೆಯುವ ದಿನ ಕಾರ್ಯಕ್ರಮ
ಚಾಮರಾಜನಗರ, ಅ. 13 :- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಜಾಗತಿಕ ಕೈ ತೊಳೆಯುವ ದಿನ ಕಾರ್ಯಕ್ರಮ ನಡೆಯಲಿದೆ.
ಡಿವೈಎಸ್‍ಪಿ ಎಸ್.ಇ. ಗಂಗಾಧರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಸುಮತಿ ಅವರು ಅಧ್ಯಕ್ಷತೆ ವಹಿಸುವರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಗೌರವಾಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನ, ಸಾಧನ ಸಂಸ್ಥೆ ನಿರ್ದೇಶಕರಾದ ಟಿ.ಜೆ. ಸುರೇಶ್, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ. ಬಂಗಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾಸಿರಿ, ಶುಲ್ಕ ವಿನಾಯಿತಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಅ. 13 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ರಿಯಾಯಿತಿ, ವಿದ್ಯಾಸಿರಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 19ರವರೆಗೆ ವಿಸ್ತರಿಸಲಾಗಿದೆ.ಸ್ನಾತಕೋತ್ತರ ಕೋರ್ಸುಗಳಾದ ಎಂಬಿಎ, ಎಂಸಿಎ, ಎಂಟೆಕ್ ಮುಂತಾದ ತಾಂತ್ರಿಕ ಕೋರ್ಸುಗಳ ದಾಖಲಾತಿ ಪ್ರಕ್ರಿಯೆ ಕಾರ್ಯ ಪೂರ್ಣಗೊಳ್ಳದಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ.
ಅರ್ಜಿಯನ್ನು ಆನ್ ಲೈನ್ ಮೂಲಕ ಞಚಿಡಿeeಠಿಚಿss.ಛಿgg.gov.iಟಿ ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಹಾಗೂ ಸಹಾಯವಾಣಿ ಸಂಖ್ಯೆ 080-65970005, 080-65970006 ಸಂಪರ್ಕಿಸಿಯೂ ಪಡೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 14ರಂದು ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಸಚಿವರ ಪ್ರವಾಸ
ಚಾಮರಾಜನಗರ, ಅ. 13 - ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಡಾ.ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್) ಅವರು ಅಕ್ಟೋಬರ್ 14ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಾರ್ವಜನಿಕರನ್ನು ಭೇಟಿ ಮಾಡುವರು. ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಅರಿಶಿನ ಬೆಳೆ ರೋಗ: ತೋಟಗಾರಿಕೆ ಇಲಾಖೆ ಸಲಹೆ
ಚಾಮರಾಜನಗರ, ಅ. 13 :- ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಅರಿಶಿನ ಬೆಳೆಗಳ ತಾಕುಗಳಲ್ಲಿ ಮಣ್ಣಿನ ತೇವಾಂಶ ಹೆಚ್ಚಾಗಿದೆ. ಇದರಿಂದ ಅರಿಶಿನ ಗೆಡ್ಡೆ ಮತ್ತು ಬೇರು ಕೊಳೆಯುವ ರೋಗ ಕಂಡುಬರುತ್ತಿರುವುದರಿಂದ ತೋಟಗಾರಿಕಾ ಇಲಾಖೆಯು ಕೆಲವು ಮಾಹಿತಿ ಹಾಗೂ ಸಲಹೆ ನೀಡಿದೆ.
ಬೆಳೆ ಹತೋಟಿಗೆ ನಿಂತ ನೀರನ್ನು ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಅಥವಾ ಬಸಿ ಕಾಲುವೆಗಳನ್ನು ಮಾಡಬೇಕು. ಸಾಪ್ 2 ಗ್ರಾಂ 1 ಲೀಟರ್ ಅಥವಾ ಕಾಪ್ಪರ್ ಆಕ್ಸಿ ಕ್ಲೋರೈಡ್ (ಸಿಓಸಿ) 3 ಗ್ರಾಂ.ನ್ನು ಪ್ರತಿ 1 ಲೀಟರ್ ನೀರಿಗೆ ಬೆರೆಸಿ ದ್ರಾವಣವನ್ನು ಗಿಡಗಳ ಬುಡಕ್ಕೆ ತೋಯಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಹಿರಿಯ ತೋಟಗಾರಿಕೆ ನಿರ್ದೇಶಕರು, ಚಾಮರಾಜನಗರ (ದೂ.ಸಂ. 08226-223049), ಗುಂಡ್ಲುಪೇಟೆ (ದೂ.ಸಂ. 08229-222851), ಕೊಳ್ಳೇಗಾಲ (08224-253449), ಯಳಂದೂರು (ದೂ.ಸಂ.08226-240600) ಹಾಗೂ ನಗರದ ತೋಟಗಾರಿಕೆ ಮಾಹಿತಿ ಕೇಂದ್ರದ ವಿಷಯ ತಜ್ಞರಾದ ಕೆಂಪೇಗೌಡ (ಮೊಬೈಲ್ ಸಂಖ್ಯೆ 9880045947) ಇವರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುವರ್ಣಾವತಿ ಜಲಾಶಯಕ್ಕೆ ಲೋಕಸಭಾ ಸದಸ್ಯರು, ಶಾಸಕರಿಂದ ಬಾಗಿನ ಅರ್ಪಣೆ
ಚಾಮರಾಜನಗರ, ಅ. 12:- ಚಾಮರಾಜನಗರ ತಾಲೂಕಿನ ಅವಳಿ ಜಲಾಶಯಗಳ ಪೈಕಿ ಪ್ರಮುಖ ಜಲಾಶಯವಾದ ಸುವರ್ಣಾವತಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಇಂದು ಬಾಗಿನ ಅರ್ಪಿಸಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಇತರೆ ಗಣ್ಯರು ಕಳೆದ 7 ವರ್ಷಗಳ ಬಳಿಕ ತುಂಬಿರುವ ಸುವರ್ಣಾವತಿ ಜಲಾಶಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಾಗಿನ ಅರ್ಪಿಸಿದರು.ಬಳಿಕ ಮಾತನಾಡಿದ ಆರ್. ಧ್ರುವನಾರಾಯಣ ಅವರು ಸುವರ್ಣಾವತಿ ಜಲಾಶಯ ಏಳು ವರ್ಷಗಳ ನಂತರ ಮೊದಲ ಬಾರಿಗೆ ತುಂಬಿದೆ. 10.2 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯ ಭರ್ತಿಯಾಗಿರುವುದು ಈ ಭಾಗಕ್ಕೆ ಅನುಕೂಲವಾಗಿದೆ. ಕುಡಿಯುವ ನೀರು ಅಭಾವ, ಬರಗಾಲ ಬವಣೆಯಿಂದ ತತ್ತರಿಸಿದ್ದ ಜನತೆಗೆ ಜಲಾಶಯ ತುಂಬಿರುವುದು ಹರ್ಷ ತಂದಿದೆ ಎಂದರು.
ಸುವರ್ಣಾವತಿ ಜಲಾಶಯದಿಂದ 13 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗಲಿದೆ. ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಬೇಕಿದೆ. ಜನರ ಅಗತ್ಯಕ್ಕೆ ಸ್ಪಂದನೆ ಸಿಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಸುವರ್ಣಾವತಿ ಜಲಾಶಯ ಹಾಗೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯವನ್ನು ಕೆಆರ್‍ಎಸ್ ಬೃಂದಾವನ ಮಾದರಿಯಲ್ಲಿ ಮಿನಿ ಉದ್ಯಾನವನವನ್ನಾಗಿ ಪರಿವರ್ತಿಸಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೊಳ್ಳಲು ಪ್ರಸ್ತಾವ ಇಡಲಾಗಿತ್ತು. ಆದರೆ ಯಾರೂ ಇನ್ನು ಮುಂದೆ ಬಂದಿಲ್ಲ. ಈ ಬಗ್ಗೆ ಮತ್ತೆ ಅಗತ್ಯ ಕ್ರಮ ವಹಿಸಲು ಚಿಂತನೆ ನಡೆಸಲಾಗುತ್ತದೆ ಎಂದರು.
ಪ್ರಸ್ತುತ ಜಲಾಶಯ ಬಳಿ ತೋಟಗಾರಿಕೆ ಇಲಾಖೆಯಿಂದ ಫಾರಂ ಅಭಿವೃದ್ಧಿ ಪಡಿಸುವಂತೆ ಸೂಚಿಸಲಾಗಿದೆ. ವಿವಿಧ ತೋಟಗಾರಿಕೆ ಚಟುವಟಿಕೆಗಳ ಮೂಲಕ ಮಾದರಿ ಫಾರಂ ಆಗಿ ಕೈಗೊಳ್ಳಲು ಅವಶ್ಯವಿರುವ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಧ್ರುವನಾರಾಯಣ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ 71 ಕೆರೆಗಳಿಗೆ ನೀರು ತುಂಬಿಸುತ್ತಿದ್ದೇವೆ. ಬೆಂಡರವಾಡಿ, ಕೆರೆಹಳ್ಳಿ ಕೆರೆ, ಉಡಿಗಾಲ ಸೇರಿದಂತೆ ನಾನಾ ಭಾಗಗಳಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನದಿಂದಾಗಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಕುಡಿಯುವ ನೀರು ಪೂರೈಕೆ, ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಉಮೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಚಾಮರಾಜನಗರ ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾಧಿಕಾರಿ ಬಿ. ರಾಮು, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆದರ್ಶ ಗ್ರಾಮ ಯೋಜನೆಗೆ ದೊಡ್ಡಮೋಳೆ : ಸರ್ವಾಂಗೀಣ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಧ್ರುವನಾರಾಯಣ ಸೂಚನೆ
ಚಾಮರಾಜನಗರ, ಅ. 13:- ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒಂದು ವಾರದೊಳಗೆ ಕ್ರಿಯಾ ಯೋಜನೆ ತಯಾರಿಸುವಂತೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅಧಿಕಾರಿಗಳಿಗೆ ತಿಳಿಸಿದರು.ತಾಲೂಕಿನ ದೊಡ್ಡಮೋಳೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಇಂದು ನಡೆದ ಆದರ್ಶ ಗ್ರಾಮ ಯೋಜನೆ ಕುರಿತ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸೌಲಭ್ಯಗಳಲ್ಲಿ ಅತ್ಯಂತ ಹಿಂದುಳಿದ ಗ್ರಾಮವಾದ ದೊಡ್ಡಮೋಳೆಯು ಈ ಸಾಲಿನಲ್ಲಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದೇನೆ. ಇಲ್ಲಿನ ಶಿಕ್ಷಣ, ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ, ಆರೋಗ್ಯ ಪೂರಕ ಕಾರ್ಯಕ್ರಮಗಳನ್ನು ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಧ್ರುವನಾರಾಯಣ ತಿಳಿಸಿದರು.
ಗ್ರಾಮದಲ್ಲಿ ವ್ಯಾಪಕವಾಗಿ ಪರಿಶೀಲಿಸಿ ಇನ್ನೂ ಯಾವ ಸೌಲಭ್ಯಗಳು ಗ್ರಾಮಕ್ಕೆ ಬೇಕಿದೆ ಎಂಬ ಬಗ್ಗೆ ಅಧಿಕಾರಿಗಳೇ ಖುದ್ದು ಮನನ ಮಾಡಿಕೊಳ್ಳಬೇಕು. ಜನರ ನಿರೀಕ್ಷೆಗೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳನ್ನು ತಲುಪಿಸಿ ಮಾದರಿ ಗ್ರಾಮವನ್ನಾಗಿ ಪ್ರಗತಿಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸರ್ಕಾರದ ಯೋಜನೆ ಅನುದಾನದ ಜತೆಗೆ ಸಿಎಸ್‍ಆರ್ ಅನುದಾನದ ಮೂಲಕವೂ ಬ್ಯಾಂಕುಗಳು, ಹಿರಿಯ ಅಧಿಕಾರಿಗಳು ಮನವೊಲಿಸಿ ಆದರ್ಶ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಜಿಸಬೇಕು. ಬದ್ಧತೆಯಿಂದ ಎಲ್ಲಾ ಸೌಲಭ್ಯಗಳು ಪೂರೈಕೆಯಾದರೆ ಮಾತ್ರ ಉದ್ದೇಶ ಈಡೇರುತ್ತದೆ ಎಂದು ಧ್ರುವನಾರಾಯಣ ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್‍ಗಳನ್ನು ನೀಡಬೇಕು. ಮೂಲ ಸೌಕರ್ಯಗಳು ಸಮರ್ಪಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಗ್ರಂಥಾಲಯ, ಶಾಲೆ, ಆಸ್ಪತ್ರೆ, ಅಂಚೆಕಚೇರಿ ಸೇರಿದಂತೆ ಜನರು ಅಪೇಕ್ಷಿಸುವ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಸಾಕಷ್ಟು ಸಭೆಗಳ ಮೂಲಕ ಜನರ ಗಮನಕ್ಕೆ ತಂದು ಅನುಷ್ಠಾನ ಮಾಡುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಧ್ರುವನಾರಾಯಣ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ದೊಡ್ಡಮೋಳೆ ಗ್ರಾಮಕ್ಕೆ ಪ್ರೌಢಶಾಲೆ ಅಗತ್ಯವಿದೆ ಎಂದು ಈ ಹಿಂದೆಯೂ ಮನವಿ ಬಂದಿದೆ. ಶಾಲೆ ಮಂಜೂರಾತಿಗೆ ತೊಂದರೆ ಇಲ್ಲ. ಆದರೆ ಗ್ರಾಮದಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲ. ಖಾಸಗಿಯಾಗಿಯೂ ಭೂಮಿ ಕೊಡುವವರು ಮುಂದೆ ಬಂದಿಲ್ಲ. ಈ ಸಮಸ್ಯೆ ಪರಿಹಾರವಾದರೆ ಶಾಲೆ ಇಲ್ಲಿಯೇ ಪ್ರಾರಂಭಿಸಲು ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೂ ಪೂರಕವಾಗಿ ಸ್ಪಂದಿಸಲು ಸಿದ್ಧರಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾಗಿರುವ ದೊಡ್ಡಮೋಳೆಯ ಅಭಿವೃದ್ಧಿಗೆ ಸ್ಥಳೀಯ ಜನರ ಸಲಹೆ ಅಭಿಪ್ರಾಯ ಪಡೆಯಲಾಗುತ್ತದೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಬೇಡಿಕೆಗಳಿಗೆ ಅನುಸಾರವಾಗಿ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಿದ್ದೇವೆ. ಶಿಕ್ಷಣ, ಆರೋಗ್ಯ ಮೂಲಸೌಕರ್ಯ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಅದರ್ಶ ಗ್ರಾಮ ಯೋಜನೆ ಅನುಷ್ಠಾನಕ್ಕೆ ರೂಪಿಸಲಾಗಿರುವ ಮಾರ್ಗದರ್ಶಿ ನಿಯಮಗಳ ಅನುಸಾರವೇ ಪ್ರಕ್ರಿಯೆ ನಡೆಯಲಿದೆ. ಹಂತಹಂತವಾಗಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ಜಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಸಂಸದರಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆಯೂ ನಡೆಯಲಿದೆ. ಕಾಲಕಾಲಕ್ಕೆ ಸಂಸದರಿಂದ ಸಲಹೆ, ಮಾರ್ಗದರ್ಶನ ಪಡೆದು ಪೂರ್ಣ ಪ್ರಮಾಣದಲ್ಲಿ ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಲು ಬದ್ಧರಾಗಿರುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್. ವಿ. ಚಂದ್ರು, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಉಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಧಾ, ಉಪಾಧ್ಯಕ್ಷರಾದ ಸುಧಾ, ತಾಲೂಕು ಪಂಚಾಯತ್ ಸದಸ್ಯರಾದ ಪುಟ್ಟಸ್ವಾಮಿ, ಮುಖಂಡರಾದ ದೊರೆಸ್ವಾಮಿ, ಕುಮಾರನಾಯ್ಕ, ಚಿಕ್ಕಮಹದೇವು, ಬ್ಯಾಡಮೂಡ್ಲು ಬಸವಣ್ಣ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅ. 15ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಅ. 13 :– ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಅಕ್ಟೋಬರ್ 15ರಂದು ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಚಾಮರಾಜನಗರ, ರಾಮಸಮುದ್ರ, ಸೋಮವಾರಪೇಟೆ, ಬೇಡರಪುರ, ಶಿವಪುರ, ಕೋಡಿಮೇಳೆ, ಕಾಗಲವಾಡಿ, ಹರದನಹಳ್ಳಿ, ಟಿ.ಕೆ. ಮೋಳೆ, ಗೂಳಿಪುರ ಹಾಗೂ ಎನ್ ಜೆ ವೈ ಮಾದಾಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಮದವರು ನಿಗಮದೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment