Monday, 16 October 2017

ಸಚಿವ ಅನಂತ ಕುಮಾರ್ ಅವರೇ ಮುದ್ರಾ ಯೋಜನೆ ಚಾಮರಾಜನಗರದ ಜನರಿಗೆಷ್ಟು ನೀಡಿದ್ದೀರಾ? ಎಂಬುದನ್ನು ಬಹಿರಂಗ ಪಡಿಸಬಲ್ಲ ತಾಕತ್ತಿದಯಾ?ದೀಪಾವಳಿ: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮನವಿ (16-10-2017)


ಸಚಿವ ಅನಂತ ಕುಮಾರ್ ಅವರೇ ಮುದ್ರಾ ಯೋಜನೆ ಚಾಮರಾಜನಗರದ ಜನರಿಗೆಷ್ಟು ನೀಡಿದ್ದೀರಾ? ಎಂಬುದನ್ನು ಬಹಿರಂಗ ಪಡಿಸಬಲ್ಲ ತಾಕತ್ತಿದಯಾ?

ವಿ.ಎಸ್.ಎಸ್. ನೆಟ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೋಜನೆಯಡಿ ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ನೀಡಲಾಗಿದ್ದು, ಮುದ್ರಾ ಯೋಜನೆಯಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಲಭಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರರು, "ಕಳೆದ 70 ವರ್ಷಗಳ ಇತಿಹಾಸದಲ್ಲಿ ಮುದ್ರಾ ಯೋಜನೆ ದೇಶದ ಅತಿದೊಡ್ಡ ಸಾಲ ವಿತರಣಾ ಯೋಜನೆಯಾಗಿದ್ದು, ದೇಶದಾದ್ಯಂತ ಈವರೆಗೆ ಒಟ್ಟು 8.4 ಕೋಟಿ ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಕರ್ನಾಟಕದಲ್ಲಿ ಈವರೆಗೆ 27.29 ಲಕ್ಷ ಜನರಿಗೆ ಸಾಲ ವಿತರಿಸಲಾಗಿದೆ" ಎಂದು ಹೇಳಿದ್ದಾರೆ.ಆದರೆ ಚಾಮರಾಜನಗರ ಜನತೆಗೆಷ್ಟು ಎಂಬುದರ ಮಾಹಿತಿ ನೀಡಲು ನಿಮ್ಮಿಂದ ಸಾದ್ಯನಾ? ಅಥವಾ  ಮಾಹಿತಿ ಹಕ್ಕಿನಡಿ ಬಹಿರಂಗ ಪಡಿಸಲು ಯಾರಿಗಾದರೂ ತಾಕತ್ತಿದಿಯಾ?
ಹೆಸರಿಗೆ ಮುದ್ರಾ ಬಳಸಿಕೊಂಡಿರುವವರು ಬಹುತೇಕ ಶ್ರೀಮಂತರೇ ಹೊರತು ಬಡವರಲ್ಲ, ನಿರುದ್ಯೋಗಿ ಯುವಕರಲ್ಲ.? ಎಂಬುದು ಕಟು ಸತ್ಯ 

ದೀಪಾವಳಿ: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮನವಿ

ಚಾಮರಾಜನಗರ, ಅ. 16:- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಕೇಂದ್ರ ಪರಿಸರ ಸಚಿವಾಲಯವು ಶಬ್ದ ಮಾಲಿನ್ಯ ನಿಯಂತ್ರಿಸಲು ಪರಿಸರ ಸಂರಕ್ಷಣಾ ಕಾಯಿದೆಯಡಿ ಪಟಾಕಿಗೆ ಸಂಬಂಧಿಸಿದ ಮಾನಕಗಳನ್ನು ಅನುಷ್ಠಾನಗೊಳಿಸಲು ಕ್ರಮಗಳನ್ನು ಸೂಚಿಸಿದೆ.
ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಡಿಬಿಗಿಂತ ಅಧಿಕ ಶಬ್ದ ಉಂಟುಮಾಡುವ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಹಾಗೂ ಶಬ್ಧ ಮಾಲಿನ್ಯ ಮಟ್ಟ ಶೇ. 10 ರಿಂದ 15ರಷ್ಟು ಹೆಚ್ಚಾಗುತ್ತದೆ. ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲದಿಂದ ಅನಾರೋಗ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಶಬ್ದಮಾಲಿನ್ಯಕ್ಕೆ ಅವಕಾಶವಾಗದಂತೆ ದೀಪಾವಳಿ ಹಬ್ಬವನ್ನು ಆಚರಿಸಬೇಕೆಂದು ಎಂದು ಪರಿಸರ ಅಧಿಕಾರಿ ಕೆ.ಎಲ್. ಸವಿತ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕ್ಲಸ್ಟರ್ ಅಭಿವೃದ್ಧಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಅ. 16 :- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಪರಿಶಿಷ್ಟ ಹಾತಿ ಹಾಗೂ ಪರಿಶಿಷ್ಟ ಪಂಗಡದ ಕೈಗಾರಿಕೋದ್ಯಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ (ಎಂಎಸ್ ಇ-ಸಿಡಿಪಿ) ಯೋಜನೆಯನ್ವಯ ಸಹಾಯ ಪಡೆಯಲು ಉಚಿತವಾಗಿ ಸೇವೆ ನೀಡಲು ಉದ್ದೇಶಿಸಲಾಗಿದೆ.
20ರ ವಯೋಮಾನದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೈಗಾರಿಕೋದ್ಯಮಿಗಳು ಕೂಡಿಕೊಂಡು ಕ್ಲಸ್ಟರ್ ರಚಿಸಬೇಕಾಗುತ್ತದೆ. ಯೋಜನೆಯ ಕನಿಷ್ಟ ಶೇ.10ರವರೆಗೆ ವಂತಿಗೆಯನ್ನು ಭರಿಸಬೇಕಾಗಿದೆ. ಅಲ್ಲದೆ ಸ್ವಂತ ಕಟ್ಟಡ ಅಥವಾ ಕನಿಷ್ಟ 15 ವರ್ಷಗಳ ಅವಧಿಗೆ ಬಾಡಿಗೆ ಕಟ್ಟಡ ಹೊಂದಿರಬೇಕಾಗುತ್ತದೆ.
ಆಸಕ್ತರು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿಯಲ್ಲಿ ಪಡೆದುಭರ್ತಿ ಮಾಡಿ ಅಕ್ಟೋಬರ್ 28ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ ಸಂಖ್ಯೆ 08226-226346, ಮೊಬೈಲ್ 7760145784 ಅಥವಾ ತಿತಿತಿ.ಛಿeಜoಞಜತಿಜ.iಟಿ ಸಂಪರ್ಕಿಸುವಂತೆ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿಗೆ ಅರ್ಜಿ ಆಹ್ವಾನ


ಚಾಮರಾಜನಗರ, ಅ. 16- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಸ್ವ ಉದ್ಯೋಗ ಮಾಡಬಯಸುವ ಯುವಕ ಯುವತಿಯರಿಗೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಉಚಿತವಾಗಿದ್ದು 25 ರಿಂದ 45ರ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಕನಿಷ್ಟ ಪದವಿ ಹೊಂದಿರಬೇಕು. ಅನುಭವ ಹೊಂದಿದ ಹಾಗೂ ಎಂಬಿಎ, ಎಂಎಸ್ ಡಬ್ಲ್ಯೂ ಪದವಿ ಹೊಂದಿದವರಿಗೆ ಆದ್ಯತೆ.
ಆಸಕ್ತರು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 28ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ ಸಂಖ್ಯೆ 08226-226346, ಮೊಬೈಲ್ 7760145784 ಅಥವಾ ತಿತಿತಿ.ಛಿeಜoಞಜತಿಜ.iಟಿ ಸಂಪರ್ಕಿಸುವಂತೆ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

      ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಅ. 16 - ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಅಕ್ಟೋಬರ್ 17ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಉತ್ತೂರು ಕೆರೆ ಕಾಮಗಾರಿ ವೀಕ್ಷಣೆ ಮಾಡಲಿರುವ ಸಚಿವರು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ಸಂಜೆ 6 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು