Sunday, 8 October 2017

ರಸ್ತೆಯಲ್ಲಿ ಮಲಗಿ ವಾಟಾಳ್¸ಸತ್ಯಾಗ್ರಹ : (08-10-2017)

ರಸ್ತೆಯಲ್ಲಿ ಮಲಗಿ ವಾಟಾಳ್¸ಸತ್ಯಾಗ್ರಹ :


ಚಾಮರಾಜನಗರ, ಅ.08- ನಗರದ ದೊಡ್ಡಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯಲ್ಲಿ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ಕಟ್ಟಡಗಳನ್ನು ಯಾವುದೇ ಕಾರಣಕ್ಕೂ ಒಡೆಯಬಾರದು ಮತ್ತು ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ ರಸ್ತೆ ಮಾಡಬೇಕು, ಒಳಚರಂಡಿ ಬೇಗ ಮುಗಿಯಬೇಕು ಅಲ್ಲದೆ ನಗರದ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ನಗರದಲ್ಲಿ ಇಂದು  ರಸ್ತೆಯಲ್ಲಿ ಮಲಗಿ ಸತ್ಯಾಗ್ರಹ ಮಾಡುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷ ವಾಟಾಳ್ ನಾಗರಾಜ್ ಅವರನ್ನ ಪೋಲಿಸರು ಬಂಧಿಸಿದರು.
 ನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಿಂದ ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ತಮ್ಮ ಬೆಂಬಲಿಗರ ಜೊತೆಗೂಡಿ ಮೆರವಣಿಗೆ ಮೂಲಕ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟಿಸಿದರು.
 ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮೈಸೂರು ಮಹಾನಗರ ಪಾಲಿಕೆ, ಬೆಳಗಾವಿ ಮಹಾನಗರ ಪಾಲಿಕೆ ಅದೇ ರೀತಿ ಚಾಮರಾಜನಗರವನ್ನು ಮಹಾನಗರ ಪಾಲಿಕೆ ಮಾಡಬೇಕು ಇದು ನನ್ನ ಕನಸು ಎಂದ ಅವರು, ಚಂದಕವಾಡಿ, ಮಾದಾಪುರ, ಶಿವಪುರ, ಹರದನಹಳ್ಳಿ, ಮರಿಯಾಲ ವರೆಗೆ ಬರುವ ಎಲ್ಲಾ ಗ್ರಾಮಗಳನ್ನು ಮಹಾನಗರ ಪಾಲಿಕೆಗೆ ಒಳಪಡಿಸಿ ಮಹಾನಗರ ಪಾಲಿಕೆ ಮಾಡಿ ಮೆಯರ್, ಉಪಮೆಯರ್ ಅನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
 ಮೈಸೂರು ದಸರಾ ನಡೆಯುವ ಮಾದರಿಯಲ್ಲಿ ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವ ನಡೆಯಬೇಕು ಈ ವೈಭವ ಮೆರವಣಿಗೆಗೆ ರಾಜ್ಯದ ನಾನಾ ಭಾಗಗ ಳಿಂದ ನೂರಾರು ಕಲಾ ತಂಡಗಳನ್ನು ಕರೆಯಿಸಿ ಇದಕ್ಕೆ ಹೊಸ ಆಯಾಮ ನೀಡಬೇಕು ಎಂದು ಒತ್ತಾಯಿಸಿದರು.
  ಚಾಮರಾಜನಗರದಿಂದ- ಟಿ.ನರಸೀಪುರ, ಚಾಮರಾಜನಗರ-ತಮಿಳುನಾಡು, ಚಾಮರಾಜನಗರ-ನಂಜನಗೂಡು, ಚಾಮರಾಜನಗರ-ಗುಂಡ್ಲುಪೇಟೆ, ಚಾಮರಾಜನಗರ- ಬಿ.ಆರ್.ಹಿಲ್ಸ್ ಈ ಎಲ್ಲಾ ರಸ್ತೆಗಳನ್ನು ಜೋಡಿರಸ್ತೆಯಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದ ವಾಟಾಳ್ ಅವರು ಡಿವಿಯೇಷನ್ ರಸ್ತೆ, ನ್ಯಾಯಾಲಯದ ರಸ್ತೆ, ಜೋಡಿರಸ್ತೆ ಸೇರಿದಂತೆ ನಗರದ ಹಲವು ಕಡೆ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡುವ ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ಕಾಮಗಾರಿಯನ್ನು ಪ್ರಾರಂಬಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು.
   ಯಾವುದೇ ಕಾರಣಕ್ಕೂ ಚಿಕ್ಕಅಂಗಡಿ ಬೀದಿ, ದೊಡ್ಡಅಂಗಡಿ ಬೀದಿಯ ಕಟ್ಟಡವನ್ನು ಒಡೆಯಬಾರದು ಆ ರಸ್ತೆಯನ್ನು ವಾಣಿಜ್ಯ ಬೀದಿ (ಕಮರ್ಷಿಯಲ್ ಸ್ಟ್ರೀಟ್) ಎಂದು ಘೋಷಿಸಿ ಎರಡು ಬದಿಯಲ್ಲಿ ಚರಂಡಿ ಮಾಡಿ ಸುಂದರವಾದ ರಸ್ತೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
   ಚಾಮರಾಜನಗರದಲ್ಲಿ ಒಳಚರಂಡಿ ಕಾಮಗಾರಿ ತಕ್ಷಣವೆ ಮುಗಿಸಬೇಕು. ರಂಗಮಂದಿರ ಕಾಮಗಾರಿ ಬೇಗ ಮುಗಿಯಬೇಕು,  ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು, ನಗರದ ಸವiಗ್ರ ಅಭಿವೃದ್ದಿಗೆ 500 ಕೋಟಿ ಕೊಡಬೇಕು ಶೀಘ್ರವೇ ಶ್ರೀ ಚಾಮರಾಜೇಶ್ವರ ನೂತನ ರಥ ನಿರ್ಮಾಣಕ್ಕೆ ಚಾಲನೆ ಕೊಡಬೇಕು. ಅಲ್ಲದೆ ನಗರ ಪ್ರದೇಶದ ಬಡ ಜನತೆಗೆ 5 ಸಾವಿರ ನಿವೇಶನ ಕೊಡಬೇಕು ಎಂದು ವಾಟಾಳ್ ಸರ್ಕಾರಕ್ಕೆ ಆಗ್ರಹಿಸಿದರು.
ಡ್ರೆಸ್ ಕೋಡ್ ಬೇಡ ವಾಟಾಳ್:
ಮುಜರಾಯಿ ಇಲಾಖೆಯು  ಧರ್ಮಸ್ಥಳ, ಉಡುಪಿ ಸೇರಿದಂತೆ ರಾಜ್ಯದ ನಾನಾ ದೇವಾಲಯಗ ಳಲ್ಲಿ ಜಾರಿಗೆ ತರಲಿರುವ ಡ್ರೆಸ್ ಕೋಡ್ (ವಸ್ತ್ರ ಸಂಹಿತೆ) ಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಉಡುಪಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನನ್ನು ಭೇಟಿ ಮಾಡಲು ಭಕ್ತ ಕನಕದಾಸರು ಹೋದ ರೀತಿಯಲ್ಲೇ ಭಕ್ತಾಧಿಗಳು ತಮಗೆ ಇಚ್ಛೆ ಬಂದ ವಸ್ತ್ರ ಧರಿಸಿಕೊಂಡು ದೇವರ ದರ್ಶನ ಮಾಡಬಹುದು ಇದರ ವಿರುದ್ದವಾಗಿ ಬೆಂಗಳೂರಿನಲ್ಲಿ ಈ ತಿಂಗಳ ಕೊನೆ ವಾರದಲ್ಲಿ ಸೀರೆಯನ್ನು ಉಟ್ಟಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ವಾಟಾಳ್ ತಿಳಿಸಿದರು.
ಕಾರ್ಯಕ್ರಮದಲ್ಲಿ ದಳಪತಿ ವೀರತಪ್ಪ, ಕಾರ್ ನಾಗೇಶ್, ನಾಗರಾಜಮೂರ್ತಿ, ಹಂಡ್ರಕಳ್ಳಿ ರಾಮಣ್ಣ, ಡೈರಿ ಮಹದೇವಪ್ಪ, ಪ್ರೆಂಡ್ಸ್ ಕ್ಯಾಂಟಿನ್ ಕುಮಾರ್, ಶ್ರೀನಿವಾಸಗೌಡ, ಎಂ.ಎಸ್.ಮೂರ್ತಿ, ವರದನಾಯಕ, ವರದರಾಜು, ಶಿವಲಿಂಗಮೂರ್ತಿ, ಆಲೂರು ಅರ್ಜುನ್, ಆಟೊ ಮಣಿ, ಪುರುಶೋತ್ತಮ್, ಕೆಂಪಣ್ಣ, ರಾಜಣ್ಣ, ಲಿಂಗರಾಜು, ಬಿ.ವಿ.ರೇವಣ್ಣಸ್ವಾಮಿ, ಲಿಂಗಣ್ಣನಾಯಕ, ಗೋವಿಂದನಾಯಕ, ಮಹದೇವನಾಯಕ, ವಡ್ಡಗೆರೆ ಮಹೇಶ್, ಮಹದೇವಶೆಟ್ಟಿ, ಗುಜ್ಜಯ್ಯ, ಅಸಾದುಲ್ಲಾ ಷರೀಪ್, ರಾಘವೇಂದ್ರಚಾರ್, ನಾಗರಾಜು, ಸ್ವಾಮಿ, ನಂಜುಂಡಸ್ವಾಮಿ, ಲೋಕೇಶ್, ಚಿನ್ನಸ್ವಾಮಿ, ಗುರುಸಿದ್ದಪ್ಪ, ಗುರುಸ್ವಾಮಿ, ಶಿವಪ್ರಕಾಶ್, ಸಿದ್ದೇಶ್, ಬಸವಣ್ಣ, ಹುಲ್ಲೇಪುರ ಮಹೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು