ಚಾಮರಾಜನಗರದ ಕೆಲವೆಡೆ ಬಿಳಿ ಬಣ್ಣದ ಸಮವಸ್ತ್ರ ನೀವೇ ನಿಷೇದಿಸಿಕೊಂಡರೆ ಒಳಿತು.!
ಸಂಚಾರಿ ಪೋಲೀಸರ
ಬಿಳಿ ಸಮವಸ್ತ್ರ ದೂಳಿನ ಗೋಳಿನಿಂದ ಖಾಕಿ ಸಮವಸ್ತ್ರವಾಗುತ್ತಿದೆ
ಸಂಚಾರಿ ಪೋಲೀಸರ
ಚಾಮರಾಜನಗರ: ಅರೇ ಇದೇನಿದು ಬಿಳಿಬಣ್ಣದ ಸಮವಸ್ತ್ರ ನಿಷೇಧಿಸಿ ಅಂತಿದೀರಾ ಖಂಡಿತಾ ಕೆಲವರಿಗೆ ಮಾತ್ರಷ್ಟೆ ಅನ್ವಯವಾಗಬೇಕಿದೆ. ಹೌದು ಚಾಮರಾಜನಗರ ಬಹುತೇಕವಾಗಿ ರಸ್ತೆ ಅಗೆದು ರಸ್ತೆ ಅಗಲೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ.ಈ ದೂಳು ಗಾಳಿಗೆ ಹಾರಿ ಜನರು ಹಾಕೋ ಅದರಲ್ಲೂ ಬಿಳಿ ಬಣ್ಣದ ಷರಾಯಿ ಮೇಲಂತೂ ಕೇಳೋ ಹಾಗಿಲ್ಲ. ಇನ್ನ ಸಂಚಾರ ಠಾಣಾ ಸಿಬ್ಬಂದಿ ಬಿಳಿ ಬಣ್ಣದ ಸಮವಸ್ತ್ರ ಮುಂಜಾನೆ ಧರಿಸಿ ನಿಂತರೆ ಸಂಜೆವರೆಗೆ ಖಾಕಿ ಬಣ್ಣವೆ ತಲುಪುತ್ತಿದೆ.ಇವರಿಗೆ ತಾತ್ಕಾಲಿಕವಾಗಿ ನಿಷೇದಿಸಿದರೆ ಸೂಕ್ತ.
ಜನ ನಾವೇನು ನಮಗೇನು ಬರೋಲ್ವೆ ಅನ್ನ ಬೇಡಿ, ಕೇವಲ 10 ನಿಮಿಷಕ್ಕೂ ಹೆದರಿ ಹೋಗೋ ನಾವು , 6 ರಿಂದ 8 ತಾಸುಗಳ ಕಾಲ ನಿಂತುಕೊಂಡು ಕಾಲ ಅದು ಧೂಳಲ್ಲೆ ಕಾಲಕಳೆಯಬೇಕು
ಸಂಚಾರಿ ಠಾಣಾ ಕರ್ತವ್ಯ ನಿರತ ಪೇದೆ ನೋಡಿದರೆ ಜನರು ಇದೇನು ಸರ್ ಷರ್ಟ್ ಹೀಗಾಗಿದೆ ಎನ್ನುವಂತಾಗಿದೆ. ಕೆಲವರು ಈಗಾಗಲೇ ಯಾರಿಗೆ ಬೇಕು ಈ ಕೆಲಸ ಎನ್ನುವಷ್ಟರ ಮಟ್ಟಿಗೆ ಪಟ್ಟಣದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಗೋಳು ಹೇಳ ತೀರದಂತಾಗಿದೆ. ವಿಶೇಷ ಎಂದರೆ ಪೊಲೀಸ್ ಕ್ಯಾಂಟಿನ್ ಅಲ್ಲಿ ಮೂಗಿಗೆ ಕಟ್ಟುವ ಮಾಸ್ಕ್ ಇಲ್ಲ ಎಂಬುದು ಮಹತ್ವದ ವಿಚಾರ ಹಾಗೂ ವಿಪರ್ಯಾಸ.
ಸಾಮಾಜಿಕ ನಮ್ಮ ಕಳಕಳಿ-ಪ್ರಮುಖ ವೃತ್ತಗಳಲ್ಲಿ ಎರಡು ಶಿಪ್ಟ್ ನಡೆಯುವ ಜಾಗದಲ್ಲಿ 3 ಗಂಟೆಗೊಮ್ಮೆಯಂತೆ ನಾಲ್ಕು ಶಿಪ್ಟ್ ಇರಲಿ. ಸಂಚಾರ ಠಾಣಾ ಸಿಬ್ಬಂದಿಗಳಿಗೆ ಆಗಾಗ ಹೆಚ್ಚಿನ ಆರೋಗ್ಯ ತಪಾಷಣೆ ಇಲಾಖೆಯಿಂದ ನಡೆಯಲಿ. ದೂಳಿನ ಕಣ ಹೆಚ್ಚು ಮೂಗು ಸೇರುವುದರಿಂದ ಅವರಿಗೆ ಸುರಕ್ಷಿತ ಮಾಸ್ಕ್ ನೀಡುವಂತಾಗಬೇಕು.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ (9480030980)
ವಿಷನ್2025: ಗ್ರಾಮೀಣಾಭಿವೃದ್ಧಿ ಕುರಿತು ಜನಪ್ರತಿನಿಧಿಗಳಿಂದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಮಂಡನೆ
ಚಾಮರಾಜನಗರ, ಅ. 19 - ಮುಂದಿನ 7 ವರ್ಷಗಳಲ್ಲಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಸಮಗ್ರ ಪ್ರಗತಿ ಸಂಬಂಧ ವಿಷನ್ 2025ರ ಡಾಕ್ಯುಮೆಂಟ್ ತಯಾರಿ ಕುರಿತು ನಗರದಲ್ಲಿ ಇಂದು ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ, ತಾಲ್ಲೂಕು, ಇತರೆ ಪಂಚಾಯತ್ ಪ್ರತಿನಿಧಿಗಳು ಪಾಲ್ಗೊಂಡು ಮುಂದಿನ ಅವಧಿಯಲ್ಲಿ ಗ್ರಾಮೀಣ ಅಭಿವೃದಿ ಹೇಗಿರಬೇಕು ಎಂಬ ಬಗ್ಗೆ ಅಭಿಪ್ರಾಯಗಳು ಹಾಗೂ ಸಲಹೆ ಗಳನ್ನು ಮುಂದಿಟ್ಟರು.ಗ್ರಾಮ ಸಭೆಗಳು ಸರಿಯಾದ ವೇಳೆಗೆ ನಡೆಯಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೇ ಪಾರದರ್ಶವಾಗಿ ನಡೆಯುವಂತೆ ಕ್ರಮ ಅನುಸರಿಸಬೇಕು. ಯಾವುದೇ ಹಸ್ತಕ್ಷೇಪ ಇರಬಾರದು. ಎಲ್ಲ ಕಾಲೋನಿಗಳಿಗು ಮೂಲಸೌಕರ್ಯ ಸಮಾನವಾಗಿ ತಲುಪಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತ್ತವಾಯಿತು
ಸಮಗ್ರ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಹಾಗೂ ನಗರಕ್ಕೆ ಸಂಪರ್ಕಿಸುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ, ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಸಲಹೆಗಳು ಪೂರ್ವಭಾವಿ ಸಭೆಯಲ್ಲಿ ಕೇಳಿಬಂದವು.
ಸಭೆ ಉದ್ಗಾಟಿಸಿ ಮಾತನಾಡಿದ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ|| ಕೆ.ಹರೀಶ್ ಕುಮಾರ್ ಮಾತಾನಾಡಿ ಗ್ರಾಮೀಣ ಭಾಗದ ಜನರ ನಿರೀಕ್ಷೆಗಳು ಹಾಗೂ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಏಳು ವರ್ಷಗಳ ಅವದಿಯಲ್ಲಿ ಪ್ರಗತಿಯಾಗುವ ದಿಸೆಯಲ್ಲಿ ಕರಡು ರೂಪಿತವಾಗಬೇಕಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು,ಜಿಲ್ಲಾ ಪಂಚಾಯತ್ ಸ್ಥಾಯಿಸಮಿತಿ ಅದ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ,ಕೆರೆಹಳ್ಳಿನವೀನ್,ಬಿ,ಕೆ,ಬೊಮ್ಮಯ್ಯ,ಸದಸ್ಯರಾದ ಸಿ.ಎನ್.ಬಾಲರಾಜು,ಚನ್ನಪ್ಪ,ಮರಗದಮಣಿ,ಶಿವಮ್ಮ,ನಿವೃತ್ತ ಪ್ರೋ.ಅಚ್ಯುತರಾವ್ ಇತರರು ಉಪಸ್ಥಿತರಿದ್ದರು.
ಅಕ್ರಮ ಗಾಂಜಾ ಗಿಡಗಳನ್ನು ಬೆಳೆದ ಆರೋಪಿಗೆ 2 ವರ್ಷ ಸಜೆ ವಿಧಿಸಿ ನ್ಯಾಯಾಲಯದ ತೀರ್ಪು
ಚಾಮರಾಜನಗರ, ಅ. 19 - ಕೊಳ್ಳೇಗಾಲ ತಾಲೂಕು ಪುಟ್ಟೀರಮ್ಮನದೊಡ್ಡಿ ಗ್ರಾಮದ ಸಿದ್ದಶೆಟ್ಟಿಯವರ ಮಗ ಮಾದೇಶ ಎಂಬ ಆರೋಪಿಯು ತನ್ನ ತಾಯಿಯ ಹೆಸರಿನಲ್ಲಿರುವ ಸರ್ವೇ ನಂ. 526ರ ಜಮೀನಿನಲ್ಲಿ ಜೋಳ ಮತ್ತು ಅವರೆ ಫಸಲಿನ ನಡುವೆ 30 ಕೆ.ಜಿ. ತೂಕದ 59 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಅಮರ್‍ನಾರಾಯಣ ಅವರು ದಿನಾಂಕ: 13-11-2013ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತಮಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.ಪ್ರಕರಣವನ್ನು ಪರಿಶೀಲಿಸಿದ ಪ್ರಧಾನ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್,ಮಳವಳ್ಳಿ ಅವರು ಆರೋಪಿಯು ಹೆಚ್ಚಿನ ಹಣ ಸಂಪಾದನೆಗಾಗಿ ಅಕ್ರಮವಾಗಿ ಗಾಂಜಾಸೊಪ್ಪನ್ನು ಬೆಳೆದಿರುವುದು ನ್ಯಾಯಾಲಯದಲ್ಲಿ ರುಜುವಾತಾಗಿರುವುದರಿಂದ 2 ವರ್ಷ ಸಜೆ ಹಾಗೂ 1,000 ಸಾವಿರ ರೂ.ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಅಕ್ಟೋಬರ್ 23ರಂದು ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ
ಚಾಮರಾಜನಗರ, ಅ. 19- ಜಿಲ್ಲಾಡಳಿತವತಿಯಿಂದ ಜಿಲ್ಲಾಕೇಂದ್ರದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು ಅಂದು ನಡೆಯುವ ಸಭೆಗೆ ಹಾಜರಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ತಮ್ಮ ಸಲಹೆಗಳನ್ನು ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಅ. 23ರಂದು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಆಚರಣೆಯ ಪೂರ್ವಭಾವಿ ಸಭೆ
ಚಾಮರಾಜನಗರ, ಅ. 19 - ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಸಮುದಾಯದ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಅಂದು ನಡೆಯುವ ಸಭೆಗೆ ಹಾಜರಾಗಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಭಕ್ತ ಕನಕದಾಸರ ಜಯಂತಿ ಆಚರಣೆ ಕುರಿತು ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಅ. 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ
ಚಾಮರಾಜನಗರ, ಅ. 19 :- ಪೊಲೀಸ್ ಇಲಾಖೆವತಿಯಿಂದ ಅಕ್ಟೋಬರ್ 21ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಜಯ್‍ಲಾಲ್ ಮೀನಾ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪೆರೆಡ್ ಕಮಾಮಡರ್ ರಿಂದ ವಂದನೆ ಸಲ್ಲಿಸುವಿಕೆ, ಮುಖ್ಯ ಅತಿಥಿಗಳಿಂದ ಹಾಗೂ ಆಹ್ವಾನಿತರಿಂದ ಹುತಾತ್ಮರಿಗೆ ಪುಷ್ಪಗುಚ್ಚ ಸಮಪ್ಣೆ, ಕಮಾಂಡರ್‍ರಿಂದ ವಾಲೀ ಫೈರಿಂಗ್, ಹುತಾತ್ಮರ ನಾಮ ವಾಚನ, 2 ನಿಮಿಷಗಳ ಮೌನ ಆಚರಣೆ, ಮುಖ್ಯ ಅತಿಥಿಗಳ ಭಾಷಣ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 23ರಿಂದ 26ರವರೆಗೆ ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ
ಚಾಮರಾಜನಗರ, ಅ. 19 :- ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅಧಿಕೃತ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರಿಂದ ದೂರುಗಳನ್ನು ಪಡೆಯಲು ಅಕ್ಟೋಬರ್ 23ರಿಂದ 26ರವರೆಗೆ ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ದೂರುಗಳನ್ನು ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸಲಿದ್ದಾರೆ.ಅ. 23ರಂದು ಯಳಂದೂರು, 24ರಂದು ಕೊಳ್ಳೇಗಾಲ, 25ರಂದು ಚಾಮರಾಜನಗರ ಮತ್ತು 26ರಂದು ಗುಂಡ್ಲುಪೇಟೆಯ ಸರ್ಕಾರಿ ಅತಿತಿಗೃಹದಲ್ಲಿ ದೂರುಗಳನ್ನು ನಾಗರಿಕರಿಂದ ಪಡೆಯುವರು. ಸಾರ್ವಜನಿಕರು ಲೋಕಾಯುಕ್ತ ಕಾಯ್ದೆಯಡಿ ಭರ್ತಿಮಾಡಿದ ಮತ್ತು ನೋಟರಿಯಿಂದ ಅಪಿಡೆವಿಟ್ ಮಾಡಿಸಿದ ಅರ್ಜಿಗಳನ್ನು ನಿಗದಿತ ನಮೂನೆ-1 ಮತ್ತು 2ರಲ್ಲಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.
No comments:
Post a Comment