Saturday, 23 December 2017

ಸಂತ ಪ್ರಾನ್ಸಿಸ್ಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರದ ಕ್ರಿಸ್‍ಮಸ್ (23-12-2017)

ಸಂತ ಪ್ರಾನ್ಸಿಸ್ಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರದ ಕ್ರಿಸ್‍ಮಸ್ 


                    ರಾಮಸಮುದ್ರ ಎಸ್.ವೀರಭದ್ರಸ್ವಾಮಿ---9480030980

ಚಾಮರಾಜನಗರ ಡಿ.- ರಾಮಸಮುದ್ರದಲ್ಲಿರುವ  ಸಂತ ಪ್ರಾನ್ಸಿಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಂತ ಪ್ರಾನ್ಸಿಸ್ ಶಾಲೆಯ ಮುಖ್ಯಸ್ಥರಾದ ಆಗ್ನಲ್ ಅಲ್ಮೇಡಾ ಅವರು ಮಾತನಾಡಿ ಮಕ್ಕಳಲ್ಲಿ  ದೇವರ ಬಗ್ಗೆ ಶ್ರದ್ಧೆ ಮತ್ತು ಇರಬೇಕು. ಪ್ರತಿಯೊಬ್ಬರಿಗೂ ದೇವರು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ಎಂದು ತಿಳಿಸಿದರು.
ಎ¯್ಲರನ್ನು ಪ್ರೀತಿಯಿಂದ ಕಾಣಬೇಕು ಎಲ್ಲಾ ಮಕ್ಕಳು ದೇವರ ಸಮಾನ. ಮಕ್ಕಳಿಗೆ ನಾವು ನೀಡುವ ಉತ್ತಮ ವಿದ್ಯಾಭ್ಯಾಸ ಹಾಗೂ ಒಳ್ಳೆಯ ಗುಣಗಳು ಮುಂದೆ ಅವರನ್ನು ಎತ್ತರದ ಜೀವನದ ಬದುಕಿಗೆ ಕರೆದೊಯುತ್ತದೆ. ಮಕ್ಕಳು ಹಿರಿಂiÀiರಿಗೆ ಗೌರವಿಸುಸುವುದರಿಂದ ಮಕ್ಕಳ ಹಿರಿಮೆ ಹೆಚ್ಚುತ್ತದೆ ಎಂದು ತಿಳಿದರು.
ಶಾಲೆಯ ಪ್ರಾಂಶುಪಾಲ ಬ್ರದರ್ ಜೊಸೆಫ್‍ಮಿಕಿಲಿ, ಬ್ರದರ್‍ರಾಥೊಡ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಯೋಸೆಫ್ ಹಾಗೂ ಶಾಲೆಯ ಶಿಕ್ಷಕಿರು ಹಾಗೂ ಶಿಕ್ಷಕರು ಆಡಳಿತ ವರ್ಗದವರು ಹಾಜರಿದ್ದರು.

ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಪಣತೊಡಿ: ಜಿಲ್ಲಾಧಿಕಾರಿ ಬಿ. ರಾಮು ಸಲಹೆ


ಚಾಮರಾಜನಗರ, ಡಿ. 23 - ಮೈಸೂರನ್ನು ಮಾದರಿಯಾಗಿಟ್ಟುಕೊಂಡು ಚಾಮರಾಜನಗರ ಜಿಲ್ಲೆಯನ್ನು ಸ್ವಚ್ಚ ಜಿಲ್ಲೆಯಾಗಿ ಮಾಡಲು ಪಣತೊಡಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ರೈಲ್ವೆ ಬಡಾವಣೆ 16ನೇ ವಾರ್ಡ್‍ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ನಗರ ಸಭೆ, ಗ್ರೀನ್ ಗ್ರಾಮೀಣ ಅಭಿವೃಧಿ ತರಬೇತಿ ಸಂಸ್ಥೆ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚ್ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಸ್ವಚ್ಚತೆ ಮತ್ತು ಶೌಚಾಲಯದ ಮಹತ್ವದ ಅರಿವು ಕುರಿತು ಮಾತನಾಡಿದರು.



ಅನೈರ್ಮಲ್ಯ ಅನಾರೋಗ್ಯದ ಮೂಲವಾಗಿದ್ದು ಬಯಲು ಶೌಚದಿಂದಾಗಿ ಕ್ರಿಮಿಗಳು ಆಹಾರದೊಂದಿಗೆ ಸೇರಿ ರೋಗಗಳನ್ನು ಹರಡುತ್ತವೆ. ಮಕ್ಕಳು ಶೌಚಾಲಯ ನಿರ್ಮಾಣಕ್ಕಾಗಿ ಪೋಷಕರನ್ನು ಒತ್ತಾಯಿಸಬೇಕು. ಬಯಲು ಶೌಚ, ಅನೈರ್ಮಲ್ಯತೆಯಿಂದ ಆಗುವ ದುಶ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ರಾಮು ಅವರು ತಿಳಿಸಿದರು.
ಕಸವನ್ನು ಮೂಲದಿಂದಲೇ ಹಸಿಕಸ ಹಾಗೂ ಒಣ ಕಸವೆಂದು ಬೇರ್ಪಡಿಸಿ ನಗರಸಭೆ ವಾಹನ ಬಂದಾಗ ನೀಡಬೇಕು. ಈ ಮೂಲಕ ಸಾರ್ವಜನಿಕರು ಸ್ವಚ್ಚ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕೆಂದು ರಾಮು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಕಸ ಉತ್ಪಾದಿಸುವ ಮೂಲದಿಂದಲೇ ಸೂಕ್ತ ರೀತಿಯಲ್ಲಿ ವಿಂಗಣೆ ಮಾಡಿ ಕಸದ ಬುಟ್ಟಿಯಲ್ಲಿ ಹಾಕಬೇಕು. ಸ್ವಚ್ಚತಾ ರಾಯಬಾರಿಗಳಾಗಿ ಚಿತ್ರ ನಟ ಸಂತೊಷ್ ವಿಕ್ಕಿ ಹಾಗೂ ದಿನಬಂಧು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ವಚ್ಚತಾ ಆಪ್ ಬಿಡುಗಡೆಗೊಳಿಸಿ ಮಾತನಾಡಿದ ಚಲನಚಿತ್ರ ನಟ ಸಂತೋಷ್ ವಿಕ್ಕಿ  ಸ್ಮಾರ್ಟ್ ಫೋನ್‍ನಲ್ಲಿ ಗೇಮ್ ಆಡುವ ಬದಲು ಈ ಆಪ್‍ನನ್ನು ಬಳಸಿ ಕಸವಿರುವ ಕಡೆ ಪೋಟೋ ತೆಗೆದು ಅಪ್ ಲೋಡ್ ಮಾಡಿ ಎಂದು ತಿಳಿಸಿದರು.      ದೀನಬಂಧು ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಮಾತನಾಡಿ  ಶುಚಿತ್ವ ಮಕ್ಕಳ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಬಯಲು ಶೌಚ ಸ್ವಯಂಕೃತ ಅಪರಾಧ. ಶೌಚಾಯಲವನ್ನು ಪ್ರತಿಯೊಬ್ಬರೂ ನಿರ್ಮಾಣ ಮಾಡಿಕೊಳ್ಳಬೇಕು. ಸ್ವಚ್ಚತೆ ಬಗ್ಗೆ ಇರುವ ಅಸಡ್ಯತೆ ತೊರೆದು ಮನೆಯ ಸುತ್ತಲೂ ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಮೊದಲ ಆಧ್ಯತೆಯಾಗಬೇಕೆಂದು ತಿಳಿಸಿದರು. 
ಇದಕ್ಕೂ ಮೊದಲೇ  ಜಾಥ ಕಾರ್ಯಕ್ರಮದ ಮೂಲಕ ದಿನಬಂಧು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಹಾಗೂ ಚಲನಚಿತ್ರ ನಟ ಸಂತೋಷ್ ವಿಕ್ಕಿ ಸ್ವಚ್ಚತೆ ಮತ್ತು ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದರು.
 ನಗರ ಸಭೆಯ ಅಧ್ಯಕ್ಷರಾದ ಶೋಭಾರವರು ಕಾರ್ಯಕ್ರದ ಆಧ್ಯಕ್ಷತೆ ವಹಿಸಿ, ಸ್ವಚ್ಚತಾ ಅಭಿಯಾನದ ಪ್ರತಿಜ್ಞಾ ವಿಧಿ ಭೋದನೆ ಮಾಡಿ ಜಿಲ್ಲೆಯ ಸ್ವಚ್ಚತಾ ಅಭಿಯಾನಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ನಗರ ಸಭೆ ಪೌರಾಯುಕ್ತರಾದ ಫೌಜಿಯಾ ತರನಮ್ ನಗರ ಸಭೆ ಮಾಜಿ ಅಧ್ಯಕ್ಷರಾದ ರೇಣಕಾ ಮಲ್ಲಿಕಾರ್ಜನ ಇತರೆ ಜನಪ್ರನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಸೆಂಬರ್ 27,28ರಂದು ಸಾವಯವ ಸಿರಿಧಾನ್ಯ ಮೇಳ ವಸ್ತು ಪ್ರದರ್ಶನ

ಚಾಮರಾಜನಗರ, ಡಿ. 23:- ಡಿಸೆಂಬರ್ 27 ಮತ್ತು 28ರಂದು ಸಾವಯವ ಸಿರಿಧಾನ್ಯ ಮೇಳ ಮತ್ತು ಸಿರಿಧಾನ್ಯದ ವಸ್ತು ಪ್ರದರ್ಶನ ಮೈಸೂರಿನಲ್ಲಿ ಆಯೋಜಿಸಲಾಗಿದೆ.
ಮೈಸೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿನ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಸಾವಯವ ಸಿರಿಧಾನ್ಯ ಮೇಳ ಮತ್ತು ಸಿರಿಧಾನ್ಯದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಚಾಮರಾಜನಗರದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಯಲ್ಲಿ ತಿಳಿಸಿದ್ದಾರೆ.

ಡಿ.26ರಂದು ಚಾಮರಾಜನಗರ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಡಿ. 23 - ಚಾಮರಾಜನಗರ ತಾಲ್ಲುಕಿನ ಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ  ತಾಲ್ಲೂಕಿನ ಅರಕಲವಾಡಿ, ಪುಣಜನೂರು, ಯರಗನಹಳ್ಳಿ, ಬಿಸಲವಾಡಿ, ಸುವರ್ಣನಗರ, ಅಮಚವಾಡಿ, ಫ್ಯಾಕ್ಟರಿ,  ಮಾದಲವಾಡಿ, ಡೊಳ್ಳಿಪುರ, ಹಾಗೂ ಚನ್ನಪ್ಪನಪುರಗಲ್ಲಿ ಡಿಸೆಂಬರ್ 26ರ ಮಂಗಳವಾರ ಬೆಳಿಗ್ಗೆ 10 ಗಂಟೆ ಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.26ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ


       ಚಾಮರಾಜನಗರ, ಡಿ. 23- ನಗರದಲ್ಲಿ ರಸ್ತೆ ಅಗಲಿಕರಣ ಮಾಡಲು ವಿದ್ಯುತ್ ಮಾರ್ಗಗಳನ್ನು ಸ್ಥಳಾತರಿಸುವ ಕಾಮಗಾರಿ ಕಾರ್ಯ ಹಮ್ಮಿಕೊಂಡಿರುವುದರಿಂದ ನಗರದ ರಾಮಸಮುದ್ರ ಫೀಡರ್ ವ್ಯಾಪ್ತಿಯ ಬಿ. ರಾಚಯ್ಯ ಜೋಡಿ ರಸ್ತೆ, ಕೋಟ್ ರೋಡ್, ಹೌಸಿಂಗ್ ಬೋಡ್, ಭಗೀರಥ ಬಡಾವಣೆ, ಜಿಲ್ಲಾಡಳಿತ ಭವನ ಮುಂಭಾಗ, ರಾಮ ಸಮುದ್ರದಲ್ಲಿ ಡಿಸೆಂಬರ್ 26ರ ಮಂಗಳವಾರ ಬೆಳಿಗ್ಗೆ 10 ಗಂಟೆ ಯಿಂದ ಸಾಯಂಕಾಲ 5.30ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ಆಟೋ ಟಿಪ್ಪರ್ ವ್ಯವಸ್ಥೆ: ದೂರು ಸಲ್ಲಿಕೆಗೆ ದೂರವಾಣಿ ಸಂಖ್ಯೆ ವಿವರ


       ಚಾಮರಾಜನಗರ, ಡಿ. 23:-  ಚಾಮರಾಜನಗರ ನಗರಸಭೆಯು ಮನೆ ಮನೆ ಕಸ ಸಂಗ್ರಹ ಮಾಡುವ ಸಲುವಾಗಿ ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಆಟೋಟಿಪ್ಪರ್‍ಗಳ ವ್ಯವಸ್ಥೆ ಮಾಡಿದೆ. ಈ ಆಟೋಟಿಪ್ಪರ್‍ಗಳು ಬರದೇ ಇದ್ದಲ್ಲಿ ಕೂಡಲೇ ಆಟೋ ಟಿಪ್ಪರ್ ಚಾಲಕರು ಹಾಗೂ ಮೇಲ್ವೀಚಾರಕರನ್ನು ಮೊಬೈಲ್ ಮೂಲಕ ಸಂಪರ್ಕಿಸುವಂತೆ ನಗರಸಭೆ ತಿಳಿಸಿದೆ.
ಪ್ರತಿದಿನ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ವಾರ್ಡ್‍ಗಳಲ್ಲಿ ಆಟೋ ಟಿಪ್ಪರ್‍ಗಳು ಸಂಚರಿಸಲಿವೆ. ವಾರ್ಡ್ ನಂ.1ರ ವ್ಯಾಪ್ತಿಗೆ ರಾಜೇಂದ್ರ (ಮೊ:9740883554), 2ನೇ ವಾರ್ಡ್‍ಗೆ ರಂಗಸ್ವಾಮಿ (ಮೊ:9538545841), 3ನೇ ವಾರ್ಡ್‍ಗೆ ಎಂ.ಪ್ರಶಾಂತ್ (ಮೊ:9108393826), 4 ವಾರ್ಡ್‍ಗೆ ಮಣಿ (ಮೊ:9743500610), 5ನೇ ವಾರ್ಡ್‍ಗೆ ಮಣಿ (ಮೊ:9743500610) ಹಾಗೂ ಮಂಜು (ಮೊ:8197977337), 6ನೇ ವಾರ್ಡ್‍ಗೆ ಮಂಜು (ಮೊ:8197977337), 7 ಹಾಗೂ 8ನೇ ವಾರ್ಡ್‍ಗೆ ಮಹದೇವಸ್ವಾಮಿ (ಮೊ:9916616908), 9,12,13,14ನೇ ವಾರ್ಡ್‍ಗೆ ಸುರೇಶ್‍ಕುಮಾರ್ (9741058517), 10ನೇ ವಾರ್ಡ್‍ಗೆ ರಾಕೇಶ (ಮೊ:8618825249), 11ನೇ ವಾರ್ಡ್‍ಗೆ ಶಿವರಾಜೇಂದ್ರ (ಮೊ:7760792250), 15ನೇ ವಾರ್ಡ್‍ಗೆ ಎನ್.ನಾಗೇಶ (ಮೊ:8147676267), 16 ಮತ್ತು 20ನೇ ವಾರ್ಡ್‍ಗೆ ಎಸ್.ವಿಜಯ (ಮೊ:9110496455) ನಿಯೋಜಿತರಾಗಿರುತ್ತಾರೆ.
ವಾರ್ಡ್ ನಂ.17,18,19 ಹಾಗೂ 23ಕ್ಕೆ ಗಣೇಶ (ಮೊ:8792256816), 21,22ನೇ ವಾರ್ಡ್‍ಗೆ ರಾಮಚಂದ್ರ (ಮೊ:9513883606), 24, 25ನೇ ವಾರ್ಡ್‍ಗೆ ಸಿ.ಪಿ.ಮುರುಗೇಶ (ಮೊ:9886855701), 27 ಹಾಗೂ 28ನೇ ವಾರ್ಡ್‍ಗೆ ಶಿವರಾಜು (ಮೊ:7760792250) ನಿಯೋಜಿತರಾಗಿರುತ್ತಾರೆ. ಈ ವಾಹನ ಚಾಲಕರನ್ನು ಸಂಪರ್ಕಿಸಿ, ಕಸ ಸಂಗ್ರಹಿಸಲು ನಾಗರೀಕರು ಮಾಹಿತಿ ನೀಡಬಹುದಾಗಿದೆ.
ಅಲ್ಲದೇ ವಾರ್ಡ್‍ಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ವಾರ್ಡ್ ನಂ.1,2,3,4,5,6 ಮತ್ತು 7ಕ್ಕೆ ಮೇಲ್ವಿಚಾರಕರಾಗಿ ಸಿ.ಪಿ.ಮಾದ (ಮೊ:8792201487), ವಾರ್ಡ್ ನಂ.9,11,12,13,14,15,25ಕ್ಕೆ ಮೇಲ್ವಿಚಾರಕರಾಗಿ ಅಸ್ಲಂ (ಮೊ:96207144125), ವಾರ್ಡ್ ನಂ.8,16,17,18,19,20,21,22,23ಕ್ಕೆ ಮೇಲ್ವಿಚಾರಕರಾಗಿ ವೆಂಕಟೇಶ್ (ಮೊ:9980368353), ವಾರ್ಡ್ ನಂ.10,24,26ಕ್ಕೆ ಮೇಲ್ವಿಚಾರಕರಾಗಿ ಹೆಚ್.ಆರ್ಮುಗಂ (ಮೊ:7975441455), ವಾರ್ಡ್ ನಂ.27,28,29,30,31ಕ್ಕೆ ವೇಲ್ವಿಚಾರಕರಾಗಿ ನಾಗ (ಮೊ:8095349553) ಅವರು ಕಾರ್ಯನಿರ್ವಹಿಸಲಿದ್ದಾರೆ. ಕಸ ಸಂಗ್ರಹಣೆ ಕುರಿತು ದೂರುಗಳನ್ನು ಸಹ ಮೇಲ್ವಿಚಾರಕರಿಗೆ ತಿಳಿಸಬಹುದೆಂದು ನಗರಸಭೆ ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು