ಹಣ ಕದ್ದು ,ಕಳ್ಳತನ ಹೈ ಡ್ರಾಮ ಮಾಡಲು ಹೋಗಿ ಸಿಕ್ಕಿ ಬಿದ್ದ ಮ್ಯಾನೇಜರ್.!.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಎಲ್.& ಎನ್ ಟಿ ಪೈನಾನ್ಸ್ ಕಂಪನಿಯಲ್ಲಿ ಹಣ ಕಳುವಾಗಿದೆ ಎಂಬ ದೂರುದಾರನಾದ ಬ್ಯಾಂಕಿನ ಮ್ಯಾನೆಜರ್ ಹಾಗೂ ಪೀಲ್ಡ್ ಆಫಿಸರ್‍ರನ್ನು ಬಂದಿಸಿರುವ ಘಟನೆ ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿಚಾರಣೆ ಕೈಗೆತ್ತುಕೊಂಡ ಪಟ್ಟಣ ಠಾಣಾ ಪೋಲೀಸರು ಅರ್ದ ದಿನ ಮುಗಿಯುವುದರಳೊಗೆ ಆರೋಪಿಗಳನ್ನು ಬಂದಿಸಿದ್ದಾರೆ. ಇತ್ತ ವಿಚಾರಣಾ ಪೂರ್ಣಗೊಳಸಿ ಅಂತಿಮ ವರದಿ ನೀಡುವ ತನಕ 24 ಗಂಟೆ ಎಂದೆ ಹೇಳಬಹುದಾಗಿದ್ದು ಈಗ ಇವರಿಬ್ಬರು ಪೋಲಿಸರ ಅತಿಥಿಯಾಗಿದ್ದಾರೆ.
ಪಟ್ಟಣ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಮಹದೇವಯ್ಯ ಹಾಗೂ ಸಿಬ್ಬಂದಿ ವರ್ಗ ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
*********************************************************************************
ಶಿವಪುರ ಗ್ರಾಪಂ ಗೆ ಸಿಇಒ ದಿಢೀರ್ ಭೇಟಿ: ಕರ್ತವ್ಯ ಲೋಪ ಎಸಗಿದ ಕಾರ್ಯದರ್ಶಿ ಅಮಾನತು
ಚಾಮರಾಜನಗರ, ಡಿ. 04 - ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿಗೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಅನಿರೀಕ್ಷಿತ ಭೇಟಿ ನೀಡಿದ ವೇಳೆ ಅಲ್ಲಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಸಿದ್ದಯ್ಯ ಅವರು ಹುದ್ದೆಯ ಪ್ರಭಾರವನ್ನು ವಹಿಸದೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಸಿದ್ದಯ್ಯ ಅವರನ್ನು ಸ್ಥಳದಲ್ಲಿಯೆ ಅಮಾನತು ಮಾಡಿದ್ದಾರೆ.ಶಿವಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಸಿದ್ದಯ್ಯ ಅವರನ್ನು ಪುಣಜನೂರು ಗ್ರಾಮ ಪಂಚಾಯಿತಿಯ ಪ್ರಭಾರ ಪಂಚಾಯತಿ ಅಭಿವೃದ್ದಿ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಸಿದ್ದಯ್ಯ ಅವರು ಶಿವಪುರ ಗ್ರಾಮ ಪಂಚಾಯಿತಿ ಪ್ರಭಾರವನ್ನು ಸಂಬಂದ ಪಟ್ಟ ಕಾರ್ಯದರ್ಶಿಗೆ ವಹಿಸಬೇಕಿತ್ತು. ಆದರೆ ಇಂದು ಜಿಪಂ ಸಿಇಒ ದಿಢೀರ್ ಭೇಟಿ ನೀಡಿದ ವೇಳೆ ಸಿದ್ದಯ್ಯ ಅವರು ಪ್ರಭಾರ ವಹಿಸಿಕೊಡದೆ ಇರುವುದು ಕಂಡು ಬಂತು. ಅಲ್ಲದೆ ಸಿದ್ದಯ್ಯ ಅವರು ನರೇಗಾ ಯೋಜನೆ ಹಾಗೂ ಇತರೆ ಯೋಜನೆಗಳಗೆ ಸಂಬಂದಿಸಿದಂತೆ ನಗದು ಪುಸ್ತಕ ಬರೆಯದಿರುವುದು ಕಡತಗಳ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವುದು ಕಂಡು ಬಂತು.
ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿರುವುದಲ್ಲದೆ ಕಡತಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಬೆಳಕಿಗೆ ಬಂದಿತು. ಈ ಹಿನ್ನಲೆಯಲ್ಲಿ ಸಿದ್ದಯ್ಯ ಅವರನ್ನು ತಕ್ಷಣವೆ ಅಮಾನತು ಮಾಡಲು ಜಿಪಂ ಸಿಇಒ ಡಾ.ಕೆ.ಹರೀಶ್ ಕುಮಾರ್ ಸ್ಥಳದಲ್ಲಿಯೆ ಆದೇಶಿಸಿದರು.
ಜಿ.ಪಂ. ನೂತನ ಉಪಾಧ್ಯಕ್ಷರಾಗಿ ಜೆ. ಯೋಗೇಶ್ ಅವಿರೋಧ ಆಯ್ಕೆ
ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಬಸವರಾಜು ಅವರು ರಾಜೀನಾಮೆ ನೀಡಿದ್ದÀ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ಸಂಬಂಧ ಸಭೆ ನಡೆಯಿತು.
ಕಾಂಗ್ರೆಸ್ ಪಕ್ಷದ ಜೆ. ಯೋಗೇಶ್ ಹೊರತುಪಡಿಸಿ ಬೇರೆ ಯÁರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ನಡೆದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರು ಜೆ. ಯೋಗೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು. ಬಳಿಕ ಪ್ರಾದೇಶಿಕ ಆಯುಕ್ತರಾದ ಜಯಂತಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಕುಮಾರ್ ಅವರು ನೂತನ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯೋಗೇಶ್ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಜೆ. ಯೋಗೇಶ್ ಅವರು ತಾವು 2ನೇ ಬಾರಿಗೆ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದೇನೆ. ಇದೀಗ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದಿಸುವುದಾಗಿ ನುಡಿದರು.
ಗ್ರಾಮೀಣ ಭಾಗದ ಜನರ ಆರೋಗ್ಯ, ಶಿಕ್ಷಣ, ಸ್ವಚ್ಚತೆ ವಿಷಯಗಳಿಗೆ ಒತ್ತು ನೀಡಲಿದ್ದೇನೆ. ಕುಡಿಯುವ ನೀರು, ರಸ್ತೆಯಂತಹ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಲಿದ್ದೇನೆ ಎಂದರು.
ಡಿ. 6ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮ
ಚಾಮರಾಜನಗರ, ಡಿ. 05 - ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ಡಿಸೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ತದನಂತರ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ನಮನ ಸಲ್ಲಿಸುವ ಕಾರ್ಯಕ್ರಮವಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಕಲಚೇತನರ ಪ್ರತಿಭೆ ಅನಾವರಣಕ್ಕೆ ಅವಕಾಶ : ಜಿ.ಪಂ. ಅಧ್ಯಕ್ಷರಾದ ಎಂ. ರಾಮಚಂದ್ರ
ಚಾಮರಾಜನಗರ, ಡಿ. 05 - ವಿಕಲಚೇತನರು ಸಹ ಎಲ್ಲರಂತೆ ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ತಿಳಿಸಿದರು.ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಗಣದಲ್ಲಿಂದು ಜಿಲ್ಲಾ ಆಡಳಿತ, ಜಿಲ್ಲಾಪಂಚಾಯತ್, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಸ್ಧಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ವರ್ಧೆ ಕಾರ್ಯಕ್ರಮವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ವೈಕಲ್ಯತೆ ಮರೆತು ಅತ್ಮವಿಶ್ವಾಸ ವೃದ್ದಿಸಿಕೊಂಡು ಗುರಿ ಸಾಧಿಸುವ ಛಲ ಹೊಂದÀಬೇಕು. ಸಮಾಜದಲ್ಲಿ ಎಲ್ಲರಂತೆ ಶಕ್ತರು ಎಂಬುದನ್ನು ಅರಿತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸರ್ಕಾರ ವಿಕಲಚೇತನರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸಂಸದರ ನಿಧಿ ಹಾಗೂ ಇತರೆ ಇಲಾಖೆಗಳ ಮೂಲಕ ಶೇ. 3 ರಷ್ಟು ಅನುದಾನವನ್ನು ವಿಕಲಚೇತನರ ಶ್ರೇಯೋಭಿವೃದ್ದಿಗೆ ಮೀಸಲಿರಿಸಿದೆ. ಇದನ್ನು ಬಳಸಿಕೊಳ್ಳವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ರಾಮಚಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ವಿಕಲಚೇತನರು ತಮ್ಮ ಆತ್ಮಬಲ ಹೆಚ್ಚಿಸಿಕೊಂಡು, ಎಲ್ಲಾ ರಂಗಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಬೇಕು. ತಮ್ಮಲ್ಲಿನ ಕೀಳಿರಿಮೆ ಬಿಟ್ಟು ಎಲ್ಲರಂತೆ ಬದುಕಬೇಕು. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಹೆಚ್ಚುವರಿ ಜಿಲ್ಲಧಿಕಾರಿ ಕೆ. ಎಂ. ಗಾಯತ್ರಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೊಡ್ಡಪ್ಪ ಮೂಲಿಮನಿ, ಯುವ ಸಲಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕ್ರೀಡಾಂಗಣದ ಬಳಿ ಮಕ್ಕಳ ವಿದ್ಯಾಭ್ಯಾಸ, ವಸತಿ, ಪುನರ್ವಸತಿ, ರಕ್ಷಣೆ, ಪೋಷಣೆ, ಅಪ್ತ ಸಮಾಲೋಚನೆ ಸೇವೆ ನೀಡುತ್ತಿರುವ ಚೈಲ್ಡ್ ಲೈನ್ ಮಕ್ಕಳ ಸಹಾಯವಾಣಿ ಕುರಿತ ಮಳಿಗೆÀಯು ಮಾಹಿತಿ ನೀಡುವಲ್ಲಿ ನೆರವಾಯಿತು.
.
No comments:
Post a Comment