ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನ ಆಚರಣೆ
ಚಾಮರಾಜನಗರ, ಡಿ. 06 - ಜಿಲ್ಲಾಡಳಿತ, ಜಿಲ್ಲಾ ಪಂಚಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ. ರಾಮು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಇಂದು ಡಾ.ಬಿ.ಆರ್. ಅಂಬೇಡ್ಕರ್ ಅವರ 61 ಪರಿನಿರ್ವಾಣ ದಿನವನ್ನು ಆಚರಿಸುವ ಮೂಲಕ ಜಗತ್ತಿನ ಅತೀ ಶ್ರೇಷ್ಠ ಮಾನವತಾವಾದಿಯನ್ನು ಸ್ಮರಣೆ ಮಾಡುತ್ತಿದ್ದೆವೆ. ಅವರ ಆದರ್ಶ, ಸಿದ್ದಾಂತಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕಿದೆ ಎಂದರು.
ಬೇರೆ ಬೇರೆ ದೇಶಗಳಲ್ಲಿ ಅ ದೇಶದ ಮಹಾನ್ ಪುರುಷರನ್ನು ಸ್ಮರಣೆ ಮಾಡಲಾಗುತ್ತÀದೆ. ಆದರೆ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ಇಡೀ ವಿಶ್ವವೇ ನೆನಪು ಮಾಡಿಕೊಳ್ಳುತ್ತಿದೆ. ಅಂಬೇಡ್ಕರ್ ಅವರ ಬಾಲ್ಯದಲ್ಲಿ ಶೋಷಣೆ ಎನ್ನುವುದು ಕಾಲ್ಪನಿಕವಾಗಿರಲಿಲ್ಲ. ಅದನ್ನು ಸ್ವತಹ ಅವರೆ ಅನುಭವಿಸಿ ಬಂದಿದ್ದರಿಂದ ಶೋಷಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಅವರು ಶ್ರಮಿಸಿದರು ಎಂದರು.
ಮಹಾನ್ ಮಾನವತಾವಾದಿಯಾಗಿದ್ದ ಅಂಬೇಡ್ಕರ್ ಅವರು ಆಳುವ ವರ್ಗದವರ ಕಣ್ಣು ತೆರೆಸುವ ಕಾರ್ಯ ಮಾಡಿದರು. ಭಾರತದ ಅತಿ ಶೇಷ್ಠ ಗ್ರಂಥ ಸಂವಿಧಾನ ರಚಿಸಿದರು. ದೇಶದ ಜನತೆ ಹಾಗೂ ವ್ಯವಸ್ಥೆಗಳು ಕಾಲಕಾಲಕ್ಕೆ ಬದಲಾದಂತೆ ಸಂವಿಧಾನ ತಿದ್ದುಪಡಿಯಾದರೆ ತಪ್ಪೇನು ಇಲ್ಲ ಎಂಬುದನ್ನು ಸ್ವತಹ ಅಂಬೇಡ್ಕರ್ ಅವರೇ ಹೇಳಿರುವುದು ಅವರ ದೂರ ದೃಷ್ಟಿಗೆ ಹಿಡಿದ ಕೈಗನ್ನಡಿ ಎಂದು ರಾಮು ಅವರು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ನಗರಸಭೆ ಸದಸ್ಯರಾದ ಎಸ್. ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸತೀಶ್, ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.
ಕರ್ನಾಟಕ ಸರ್ಕಾರ
ಪೊಲೀಸ್ ಅಧೀಕ್ಷಕರವರ ಕಛೇರಿ
ಚಾಮರಾಜನಗರ ಜಿಲ್ಲೆ,
ಚಾ.ನಗರ. ದಿನಾಂಕ: 05-12-2017.
ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದಿನಾಂಕಃ 04.12.2017 ರಂದು ಶ್ರೀ ರಾಮಣ್ಣ ನರಬೆಂಚಿ ರವರು ದೂರು ನೀಡಿದ್ದು, ದೂರಿನಲ್ಲಿ ಕಳೆದ ಒಂದು ವರ್ಷದಿಂದ ಚಾಮರಾಜನಗರ ತಾಲ್ಲೂಕಿನಲ್ಲಿರುವ ಹಳ್ಳಿಗಳಲ್ಲಿ ಮಹಿಳಾ ಗುಂಪು ಮಾಡಿ ಅವರಿಗೆ ಲೋನ್ ಕೊಡುತ್ತಿದ್ದೇವು. ಪ್ರತಿ ತಿಂಗಳು 1 ನೇ ತಾರೀಖಿನಿಂದ 10 ನೇ ತಾರೀಖಿನ ಒಳಗೆ ಹಣವನ್ನು ಸಂಘಗಳಿಂದ ವಸೂಲಿ ಮಾಡಿಕೊಂಡು ಬಂದು ಚಾ.ನಗರ ಟೌನ್‍ನಲ್ಲಿರುವ ಅಕ್ಸಿಸ್ ಬ್ಯಾಂಕ್ ಮತ್ತು ಎಸ್.ಬಿ.ಐ ಬ್ಯಾಂಕ್‍ಗಳಿಗೆ ಡಿಪಾಜಿಟ್ ಮಾಡುತ್ತಿದ್ದು, ಸಾಲವಾಗಿ ನೀಡಿದ್ದ ಹಣವನ್ನು ಮಹಿಳಾ ಸಂಘಗಳಿಂದ ವಸೂಲಿ ಮಾಡಿಕೊಂಡು ಬ್ಯಾಂಕ್ ರಜೆ ಇದ್ದುದ್ದರಿಂದ ಹಣವನ್ನು 17,43,900/- ರೂ ಗಳನ್ನು ಬ್ಯಾಗ್‍ನಲ್ಲಿ ಹಾಕಿ ಅಫೀಸ್ ರೂಂ ನಲ್ಲಿರುವ ಮರದ ಕಬೋರ್ಡ್‍ನಲ್ಲಿ ಇಟ್ಟು ಬೀಗ ಮನೆಗೆ ಹೋದೆ. ದಿನಾಂಕ: 04/12/2017 ರಂದು ಫೈನಾನ್ಸ್ ಅಫೀಸ್‍ಗೆ ಬಂದು ಕಬೋರ್ಡ್‍ನ ಬಾಗಿಲ ಬೀಗವನ್ನು ತೆಗೆದು ನೋಡಲಾಗಿ ಬ್ಯಾಗಿನೊಳಗೆ ಹಾಕಿ ಇಟ್ಟಿದ್ದ ಹಣ, ಬ್ಯಾಗಿನ ಸಮೇತ ಇರಲಿಲ್ಲ. ಯಾರೋ ರಾತ್ರಿ ಸಮಯದಲ್ಲಿ ನಕಲಿ ಕೀ ಬಳಸಿ ಕಬೋರ್ಡ್‍ನಲ್ಲಿ ಇಟ್ಟಿದ್ದ 17,43,900/- ರೂಗಳನ್ನು ಕಳವು ಮಾಡಿಕೊಂಡು ಕಬೋರ್ಡ್‍ಗೆ ಆಥವಾ ಬಾಗಿಲಿಗೆ ಅಫೀಸ್ ರೂಂ ಬಾಗಿಲಿಗೆ ಹಾಗೂ ಅಫೀಸ್ ಮುಂಭಾಗಿಲಿಗೆ ಮತ್ತೆ ಬೀಗ ಹಾಕಿಕೊಂಡು ಹೋಗಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ಇದ್ದ ದೂರಿನ ಮೇರೆಗೆ ಮೊ.ನಂ: 289/2017, ಕಲಂ: 457, 381, 203 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಯಿತು.
ತನಿಖಾ ಕಾಲದಲ್ಲಿ ಕಳ್ಳತನವಾದ ಹಣದ ಬಗ್ಗೆ ಎಲ್ & ಟಿ ಪೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಚ್ ಮ್ಯಾನೇಜರ್ ಹಾಗು ಅಲ್ಲಿನ ನೌಕರರ ಮೇಲೆ ಅನುಮಾನ ಕಂಡು ಬಂದಿದ್ದರಿಂದ ದಿನಾಂಕ:05/12/2017 ರಂದು ಪೊಲೀಸ್ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಯವರಾದ ಸಿಪಿಸಿ-438, 534, 477 ರವರೊಂದಿಗೆ ಈ ಪ್ರಕರಣದ ಬ್ರಾಂಚ್ ಮ್ಯಾನೇಜರ್ ಹಾಗು ರಾಮಣ್ಣ ನರಬೆಂಚಿ ರವರನ್ನು ಕೂಲಂಕುಷವಾಗಿ ವಿಚಾರ ಮಾಡಿದಾಗ ನಾನು ಮತ್ತು ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಪೀಲ್ಡ್ ಲೋನ್ ಅಫೀಸರ್ ಬಂಗಾರನಾಯ್ಕ ರವರು ಸೇರಿ ಹಣ ಕಳ್ಳತನ ಮಾಡಿರುವುದಾಗಿ, ಬಂಗಾರನಾಯ್ಕನಿಗೆ ಅಫೀಸಿನ ಕೀಗಳನ್ನು ಕೊಟ್ಟು, ನಕಲಿ ಕೀ ಮಾಡಿಸಿಕೊಳ್ಳುವಂತೆ ತಿಳಿಸಿದ್ದು, ಅದರಂತೆ ಆತನು ದಿನಾಂಕ: 03/12/2017 ರ ರಾತ್ರಿ ಸಮಯದಲ್ಲಿ ಕಛೇರಿಯ ಬೀಗ ತೆಗೆದು ಒಳ ಹೋಗಿ ಕಬೋರ್ಡ್‍ನಲ್ಲಿ ಇಟ್ಟಿದ್ದ ಹಣವನ್ನು ಬ್ಯಾಗಿನ ಸಮೇತ ಕಳ್ಳತನ ಮಾಡಿರುತ್ತಾನೆ, ನನಗೆ ಹಣದ ಸಮಸ್ಯೆಯಿಂದ ಇಬ್ಬರು ಪ್ಲಾನ್ ಮಾಡಿ ಹಣ ಕಳ್ಳತನ ಮಾಡಿರುವುದಾಗಿ ತಪ್ಪೊಪಿಗೆ ಸ್ವ-ಇಚ್ಚಾ ಹೇಳಿಕೆ ನೀಡಿರುತ್ತಾರೆ.
ಆರೋಪಿಯ ಹೇಳಿಕೆ ಅನುಸಾರವಾಗಿ ಬಂಗಾರನಾಯ್ಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರ ಮಾಡಿದಾಗ ಕೃತ್ಯದ ಬಗ್ಗೆ ತಪ್ಪೊಪಿಕೊಂಡು ಮದುವೆ ಖರ್ಚಿಗಾಗಿ ಹಣ ಕಳ್ಳತನ ಮಾಡಲು ಬ್ರಾಂಚ್ ಮ್ಯಾನೇಜರ್ ಹಾಗು ನಾನು ಪ್ಲಾನ್ ಮಾಡಿರುವುದಾಗಿ, ಕದ್ದ ಹಣವನ್ನು ಬ್ಯಾಗಿನ ಸಮೇತ ತಾತ-ಅಜ್ಜಿ ಮನೆ ಉಗನೇದಹುಂಡಿ ಗ್ರಾಮದಲ್ಲಿ ಇಟ್ಟಿರುವುದಾಗಿ ತಪೊಪ್ಪಿಕೊಂಡಿರುತ್ತಾನೆ.
ಸುಮಾರು 17,34,560 ರೂ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಆರೋಪಿಯ ಪತ್ತೆ ಕಾರ್ಯದಲ್ಲಿ ಶ್ರೀ ಗಂಗಾಧರಸ್ವಾಮಿ, ಡಿವೈಎಸ್‍ಪಿ, ಚಾ.ನಗರ ಉಪವಿಭಾಗ, ತನಿಖಾಧಿಕಾರಿಯಾದ ಶ್ರೀ ಮಹದೇವಯ್ಯ, ಚಾ.ನಗರ ಪಟ್ಟಣ ಪೊಲೀಸ್ ಠಾಣೆ ಸಿಬ್ಬಂದಿಯವರುಗಳಾದ ಶ್ರೀ ಕೃಷ್ಣಮೂರ್ತಿ, ಪಿಸಿ-534, ಶ್ರೀ ವೀರಭದ್ರಪ್ಪ ಪಿಸಿ-438, ಶ್ರೀ ಮಹೇಶ್ ಪಿಸಿ-477 ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು ಸದರಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗಿದೆ.
**********************************************************************
ಗುಂಡ್ಲುಪೇಟೆ : ಡೇ ನಲ್ಮ್ ಯೋಜನೆಯಡಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 06 - ಗುಂಡ್ಲುಪೇಟೆ ಪುರಸಭೆಯು ಪಟ್ಟಣದ ವಿದ್ಯಾವಂತ ಯುವಕ ಯುವತಿಯರಿಗೆ ಪ್ರಸಕ್ತ ಸಾಲಿನಲ್ಲಿ ಡೇ ನಲ್ಮ್ ಯೋಜನೆಯಡಿ ಇಎಸ್‍ಟಿಪಿ ಕಾರ್ಯಕ್ರಮದಡಿ ಟ್ಯಾಕ್ಸಿ ಡ್ರೈವರ್, ಡೀಮೆಸ್ಟಿಕ್ ಬಯೋಮೆಟ್ರಿಕ್ ಡಾಟ ಆಪರೇಟರ್, ಸಿವಿಂಗ್ ಮಿಷನ್ ಆಪರೇಟರ್ ಮತ್ತು ಎಲೆಕ್ಟ್ರೀಷಿಯನ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ 18 ರಿಂದ 36ರ ವಯೋಮಿತಿಯವರು ಅರ್ಜಿಯನ್ನು ಪುರಸಭೆ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 25ರೊಳಗೆ ಕಚೇರಿಗೆ ಸಲ್ಲಿಸಬೇಕು.
ರಾಜ್ಯ ಕೌಶಲ್ಯ ಮಿಷನ್ ಯೋಜನೆಯಡಿ ಅರ್ಜಿ ಸಲ್ಲಿಸಿದವರು ಸಹ ಅರ್ಜಿ ಸಲ್ಲಿಸಬೇಕು. ಕೌಶಲ್ಯ ತರಬೇತಿ ಕಾರ್ಯಕ್ರಮದಡಿ ನೊಂದಾಯಿಸಿರುವ ಕೋಡ್ ನಂಬರ್ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದೊಳಗೆ ಅಪೌಷ್ಠಿಕತೆ ಹೊಂದಿರುವ ಮಕ್ಕಳ ವೈದ್ಯಕೀಯ ತಪಾಸಣೆಗೆ ಸೂಚನೆ
ಚಾಮರಾಜನಗರ, ಡಿ. 06- ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತ್ತಿರುವ ಮಕ್ಕಳ ವೈದ್ಯಕೀಯ ತಪಾಸಣೆ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎನ್ ಕೃಷ್ಣಮೂರ್ತಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಅಂಗನವಾಡಿಗಳಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲದಿರುವುದರಿಂದ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಇದನ್ನು ಸಂಪೂರ್ಣ ನಿಯಂತ್ರಿಸಲು ಪ್ರತಿ 2 ತಿಂಗಳಿಗೊಮ್ಮೆ ಸಂಬಂಧಪಟ್ಟ ತಾಲೂಕು ವೈದ್ಯಾಧಿಕಾರಿಗಳು ಅಂಗನವಾಡಿಗಳಿಗೆ ಕ್ಷೇತ್ರಪ್ರವಾಸ ಮಾಡಿ ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಪರಿಶೀಲಿಸಬೇಕು. ಅಲ್ಲಿ ನೀಡುವ ಬಿಸಿಯೂಟ, ಮಧ್ಯಾಹ್ನದ ಉಪಹಾರ ಗುಣಮಟ್ಟ ಹೊಂದಿರಬೇಕು. ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿರಬೇಕು. ಶೌಚಾಲಯಗಳು ಸ್ವಚ್ಚತೆಯಿಂದ ಕೂಡಿರಬೇಕು. ಗ್ರೌಥ್‍ಚಾರ್ಟ್ ಮೂಲಕ ಪ್ರತಿ ಮಕ್ಕಳನ್ನು ತೂಕ ಮಾಡಿ ಅವರ ಸುರಕ್ಷಿತ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ರಾಜ್ಯವನ್ನು ಹಸಿವು ಮುಕ್ತವನ್ನಾಗಿಸುವ ಸಲುವಾಗಿ ಮುಖ್ಯಮಂತ್ರಿಗಳು, ಮೇಲ್ಮನೆ ಸದಸ್ಯರು, ವಿರೋಧ ಪಕ್ಷದ ನಾಯಕರು ಮತ್ತು ಸಭಾಪತಿಗಳ ಸಮಿತಿ 2017ರ ಜುಲೈ ಮಾಹೆಯಲ್ಲಿ ರಾಜ್ಯ ಆಹಾರ ಆಯೋಗವನ್ನು ರಚಿಸಿದೆ. ಆಯೋಗವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಂಗನವಾಡಿಗಳಲ್ಲಿ ಅಹಾರ ಸುರಕ್ಷತೆ, ಶಾಲೆಗಳಲ್ಲಿ ಬಿಸಿಯೂಟ, ಆಹಾರ ಧಾನ್ಯ ಸಗಟು ಮಳಿಗೆ ಹಾಗೂ ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲಿದೆ ಎಂದರು.
ಜಿಲ್ಲೆಯಲ್ಲಿ ಡಿಸೆಂಬರ್ 4ರಿಂದ ಅಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡವು ಸಂತೇಮರಹಳ್ಳಿ, ಬಿಳಿಗಿರಿರಂಗನಬೆಟ್ಟದ ಮುತ್ತುಗದ ಪೋಡು, ಹೊಸಪೋಡು ಹಾಗೂ ಕೆ.ಗುಡಿಯ ಗಿರಿಜನ ಆಶ್ರಮ ಶಾಲೆ ಹಾಗೂ ಇತರೆಡೆ ಮತ್ತು ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಕೃಷ್ಣಮೂರ್ತಿ ಅವರು ಸಭೆಗೆ ತಿಳಿಸಿದರು.
ಆಯೋಗದ ಸದಸ್ಯರಾದ ವಿ.ಬಿ. ಪಾಟೀಲ್ ಅವರು ಮಾತನಾಡಿ ಅಪೌಷ್ಠಕತೆ ಹೊಂದಿರುವ ಮಕ್ಕಳ ಜಿಲ್ಲಾವಾರು ಅಂಕಿಅಂಶಗಳು ಹಾಗೂ ಮಾಹಿತಿ ಸಮರ್ಪಕವಾಗಿಲ್ಲ. ಸರ್ಕಾರ ಅಂಗನವಾಡಿಗಳ ನಿರ್ವಹಣೆಗೆ ಸಾಕಷ್ಟು ಅನುದಾನವನ್ನು ಸಾಕಷ್ಟು ಅನುದಾನವನ್ನು ನೀಡಿದೆ. ಅದು ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲಾಮಟ್ಟದ ಸಭೆ ಕರೆದು ಜಿಲ್ಲೆಯ ಪ್ರತಿ ಅಂಗನವಾಡಿ, ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು.
ಆಯೋಗದ ಸದಸ್ಯರಾದ ಎಚ್.ವಿ. ಶಿವಶಂಕರ್, ಡಿ.ಜಿ. ಹಸಬಿ, ಬಿ.ಎ.ಮಹಮ್ಮದ್, ಮಂಜುಳಾಬಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ, ಗಾಯತ್ರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಹೆಸರು ನೊಂದಣಿ
ಚಾಮರಾಜನಗರ, ಡಿ. 06 - ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ಪ್ರಸಕ್ತ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಸ್ಪರ್ಧೆಗೆ ಎಸ್‍ಎಂಎಸ್ ಹಾಗೂ ಪೋಸ್ಟ್ ಕಾರ್ಡ್ ಮೂಲಕ ಹೆಸರು ನೊಂದಾಯಿಸಲು ತಿಳಿಸಿದೆ.ಜಿಲ್ಲೆಯ ವಿವಿಧ ಸರ್ಕಾರಿ, ಖಾಸಗಿ, ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಆಹ್ವಾನಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲೆಗಳ ಮುಖ್ಯೋಪಾಧ್ಯಾಯರು ಡಿಸೆಂಬರ್ 10ರೊಳಗೆ ಹೆಸರನ್ನು ನಗರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನೊಂದಾಯಿಸಬೇಕು.
ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾದ ಶಾಲೆಗೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಎಂದು ಪರಿಗಣಿಸಿ ಪ್ರಮಾಣ ಪತ್ರ ಹಾಗೂ 30 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ಜಿಲ್ಲೆಯಲ್ಲಿ 2 ರಿಂದ 10ನೇ ಸ್ಥಾನ ಪಡೆದವರಿಗೆ ಆಯ್ಕೆಯಾದ ಶಾಲೆಗಳಿಗೆ ಹಸಿರು ಮಿತ್ರ ಶಾಲೆ ಎಂದು ಪರಿಗಣಿಸಿ ಪ್ರಮಾಣ ಪತ್ರ, 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ಜಿಲ್ಲೆಯಲ್ಲಿ 12 ರಿಂದ 21ನೇ ಸ್ಥಾನ ಪÀಡೆದು ಆಯ್ಮೆಯಾದವರಿಗೆ ಹಳದಿ ಶಾಲೆ ಎಂದು 10 ಶಾಲೆಗಳನ್ನು ಹೆಸರಿಸಿ ಪ್ರಮಾಣ ಪತ್ರ ಹಾಗೂ ತಲಾ 4 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಹೆಚ್ಚಿನ ವಿವರಗಳಿಗೆ ನಗರದ ವಾಣಿಯರ್ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ (ದೂ.ಸಂ. 08226-223846, ಮೊಬೈಲ್ 9880933020, 9972832618), ಇ-ಮೇಲ್ ಛಿhm@ಞsಠಿಛಿh.gov.iಟಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಾಣೆಯಾದವರ ಪತ್ತೆಗೆ ಮನವಿ
ಚಾಮರಾಜನಗರ, ಡಿ. 0- ತಾಲೂಕಿನ ಮುನೇಶ್ವರ ಕಾಲೋನಿ ಗ್ರಾಮದ ಬಸವಣ್ಣ ಎಂಬುವರು ತಮ್ಮ ಪತ್ನಿ ಮಾದೇವಿ ಅವರು ಆಗಸ್ಟ್ 26ರಂದು ರಾತ್ರಿ ಮೂತ್ರ ವಿಸರ್ಜನೆಗೆಂದು ತೆರಳಿದ್ದು ವಾಪಸ್ಸು ಬಂದಿರುವುದಿಲ್ಲ ಎಂದು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.27 ವರ್ಷದ ಮಾದೇವಿ ಸೋಲಿಗ ಜನಾಂಗದವರಾಗಿದ್ದು ದುಂಡು ಮುಖ, ಎಣ್ಣೆಗೆಂಪು ಬಣ್ಣ ಹೊಂದಿದ್ದು ಹಣೆಯ ಮೇಲೆ ದುಂಡಾಗಿ ಹಚ್ಚೆ ಗುರುತಿದೆ. ಹಸಿರು ಬಣ್ಣದ ಟಾಪ್, ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಮಾಹಿತಿ ದೊರೆತಲ್ಲಿ ನಗರದ ಪೂರ್ವ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಿಗೆ ತಿಳಿಸುವುದು.
ತಾಲೂಕಿನ ಬಂಡೀಗೆರೆ ಗ್ರಾಮದ ವೆಂಕಟಶೆಟ್ಟಿ ಎಂಬುವರು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ನವೆಂಬರ್ 3ರಂದು ಅವರ ಮಗ ಕೃಷ್ಣಶೆಟ್ಟಿ ಎಂಬಾತ ಮನೆಯಿಂದ ಹೊರಗೆ ಹೋದವರು ಹಿಂತಿರುಗಿರುವುದಿಲ್ಲ ಎಂದು ದೂರು ದಾಖಲಿಸಿದ್ದಾರೆ.
30 ವರ್ಷದ ಈತ 5.4 ಅಡಿ ಎತ್ತರ, ಕುರುಚಲು ಗಡ್ಡ ಮತ್ತು ಮೀಸೆ ಇದ್ದು ಕಪ್ಪು ಕೂದಲು, ಕಪ್ಪು ಮೈಬಣ್ಣ, ಬಲ ಕೆನ್ನೆಯಲ್ಲಿ ಕಪ್ಪ ಬಣ್ಣದ ಗಂಟು ಹೊಂದಿರುತ್ತಾರೆ. ಕೈ, ಕಾಲು ಮತ್ತು ಶರೀರ ನಡುಗುತ್ತಿರುತ್ತದೆ. ಈತ ಅರ್ಧ ತೋಲಿನ ನೀಲಿ ಶರ್ಟ್, ಕಪ್ಪು ಬಣ್ಣದ ಟವೆಲ್ ಹಾಕಿರುತ್ತಾರೆ. ಕನ್ನಡ ಮಾತನಾಡುವರು. ಇವರ ಸುಳಿವು ಸಿಕ್ಕಲ್ಲಿ ನಗರದ ಪೂರ್ವ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಿಗೆ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment