ಹೊಸ ವರ್ಷದ ಸಡಗರದಲ್ಲಿರುವ, ಕಾರ್ಯಕ್ರಮ ಆಯೋಜಕರೆ ಇದೆ. ನಿಮಗೆ ನೀತಿ ನಿಯಮಗಳು.. ಜೋಪಾನ... ತಪ್ಪಿದರೆ ನೀವೇ ಹೊಣೆ......ವೀರಭದ್ರಸ್ವಾಮಿ. ಎಸ್.
2018 ನೇ ಹೊಸ ವರ್ಷ ಸಂಭ್ರಮಾಚರಣೆ ಸಂಬಂಧ ದಿನಾಂಕ 31.12.2017 ರಾತ್ರಿ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ನಡೆದುಕೊಂಡು ಹೊಸ ವರ್ಷಾಚರಣೆಯು ಯಶಸ್ಚಿಯಾಗಿ ಮತ್ತು ಶಾಂತ ರೀತಿಯಿಂದ ಆಚರಿಸುವ ಸಂಬಂಧ ಸಾರ್ವಜನಿಕರು/ಆಯೋಜಕರು ಅನುಸರಿಸಬೇಕಾದ ಅಥವಾ ಅನುಸರಿಸಬಾರದ ಕ್ರಮಗಳ (ಆಔ’s & ಆಔಓಖಿ’s) ಬಗ್ಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.
ಪೊಲೀಸ್ ಇಲಾಖೆ ವಿದಿಸಿರುವು ಷರತ್ತುಗಳೇನು.?
ಆಯೋಜಕರು / ಸಾರ್ವಜನಿಕರು ಮಾಡಬೇಕಾದ ಕ್ರಮಗಳು
1 ಜಿಲ್ಲೆಯ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು, ಸಂಘಟನೆಗಳು ಮತ್ತು ಸಂಘಗಳು, ಹಮ್ಮಿಕೊಳ್ಳುವ ಔತಣಕೂಟ / ಸಮಾರಂಭಗಳನ್ನು ದಿನಾಂಕ 31.12.2017 ರಂದು ರಾತ್ರಿ ನಿಗಧಿತ ಸಮಯದೊಳಗೆ ಮುಕ್ತಾಯಗೊಳಿಸುವುದು.
2 ಹೊಸ ವರ್ಷದ ಔತಣಕೂಟ/ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯುವುದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳುವುದು ಹಾಗೂ ಈ ಸಂಬಂಧ ಜರುಗುವ ಎಲ್ಲಾ ಆಗು ಹೋಗುಗಳಿಗೂ ಅವರುಗಳೇ ಜವಾಬ್ದಾರರಾಗಿರುತ್ತಾರೆ.
3 ಹೋಟೆಲ್/ಭೋಜನಗೃಹ/ಕ್ಲಬ್‍ಗಳಿಗೆ ಅವರುಗಳೇ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಲಾಗಿದೆ. ಸಿಸಿಟಿವಿ ಅಳವಡಿಸದಿದ್ದಲ್ಲಿ ತಪ್ಪದೇ ಇಂದೇ ಅಳವಡಿಸಲು ಕ್ರಮವಹಿಸುವುದು.
4 ಹೋಟೆಲ್/ರೆಸಾರ್ಟ್/ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ಕನಿಷ್ಠ ಒಂದು ವಾಸಸ್ಥಳವನ್ನು ದೃಢೀಕರಿಸುವ ದಾಖಲೆಯೊಂದಿಗೆ ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸುವುದು.
5 ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್/ಬಟ್ಟಿಂಗ್ಸ್/ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಕಾಯ್ದುಕೊಳ್ಳುವುದು.
6 ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೆಲು ಧ್ವನಿಯಲ್ಲಿ ಬಳಕೆ ಮಾಡುವುದು, ನಿಗಧಿತ ಸಮಯದಲ್ಲಿಯೇ ಕಾರ್ಯಕ್ರಮವನ್ನು ಮುಗಿಸುವುದು.
7 ವಿದೇಶಿಯರು ಹೋಟೆಲ್/ ರೆಸಾರ್ಟ್/ಹೋಮ್‍ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸುವುದು.
8 ಹೊಸವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಅಸ್ಥಿಪಾಸ್ಥಿಗೆ ಹಾನಿ ಉಂಟು ಮಾಡದಂತೆ ಆಚರಣೆ ಮಾಡುವುದು.
10 ಅಬಕಾರಿ ಕಾಯ್ದೆ ಅಡಿಯಲ್ಲಿ, ಪರವಾನಗಿ ಅನ್ವಯ, ಮದ್ಯ ಮಾರಾಟ ವೇಳೆಯನ್ನು ಅನುಸರಿಸುವುದು.
11 ಮಹಿಳೆಯರು/ಹೆಣ್ಣು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸುವುದು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವುದು.
12 ಆಯೋಜಕರು ಈ ಸಂಬಂಧ ನಡೆಸುವ ಸಮಾರಂಭಗಳನ್ನು ತಪ್ಪದೆ ವೀಡಿಯೋ ಚಿತ್ರೀಕರಿಸುವುದು.
13 ಆಯೋಜಕರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡುವುದು.
14 ಹೋಟೆಲ್/ರೆಸಾರ್ಟ್/ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸುವುದು.
15 ಹೊಸ ವರ್ಷ ಅಚರಣೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸುವುದು.
16 ಸಂಚಾರಿ ನೀತಿ ನಿಯಮಗಳನ್ನು ತಪ್ಪದೇ ಪಾಲಿಸುವುದು.
17 ಸ್ಥಳೀಯ ಪೊಲೀಸ್ ಅಧಿಕಾರಿ / ಮೇಲಾಧಿಕಾರಿಗಳು ಸಂದರ್ಭಕ್ಕೆ ಅನುಗುಣವಾಗಿ ನೀಡುವ ಸೂಚನೆಗಳನ್ನು ಪಾಲಿಸುವುದು.
18 ಯಾವುದೇ ತೊಂದರೆ ಉಂಟಾದಲ್ಲಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವುದು.
ಆಯೋಜಕರು / ಸಾರ್ವಜನಿಕರು ಮಾಡಬಾರದ ಕ್ರಮಗಳು (ಆಔಓಖಿ’s)
1 ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.
2 ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲೀ, ದ್ವಿಚಕ್ರ ವಾಹನದಲ್ಲಿ ನಿಗಧಿಗಿಂತ ಹೆಚ್ಚು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ/ ವೀಲಿಂಗ್ ನಡೆಸಬಾರದು.
3 ಅನುಮತಿಯನ್ನು ಪಡೆಯದೇ ಬ್ಯಾನರ್/ಬಂಟ್ಟಿಂಗ್ಸ್/ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
4 ಹೊಸವರ್ಷದ ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡಬಾರದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು.
5 ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು / ಜೂಜಾಟಗಳನ್ನು/ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು.
6 ಯುವಕರು ಮತ್ತು ವಯಸ್ಕರು ರಸ್ತೆಯಲ್ಲಿ ಹೊಸವರ್ಷ ಆಚರಣೆಯ ಕಾರಣದಿಂದ ದುರ್ವರ್ತನೆ ತೋರಬಾರದು.
7 ಸೂಚಿತ ಸ್ಥಳಗಳನ್ನು ಹೊರತುಪಡಿಸಿ ರಸ್ತೆಯಲ್ಲಿ, ಸಾರ್ವಜನಕಿ ಸ್ಥಳದಲ್ಲಿ ಮದ್ಯಪಾನ ಮಾಡಬಾರದು.
8 ಇತರರಿಗೆ ತೊಂದರೆಯಾಗುವ ರೀತಿ ಹಾಗೂ ಕಿರಿಕಿರಿ ಉಂಟಾಗುವಂತೆ ಪಟಾಕಿಗಳನ್ನು ಸುಡಬಾರದು.
9 ಮಹಿಳೆಯರು / ಹೆಣ್ಣು ಮಕ್ಕಳೊಂದಿಗೆ ಅಸಭ್ಯತೆಯಿಂದ ವರ್ತಿಸಬಾರದು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ತೊಂದರೆ ಅಥವಾ ಸಮಸ್ಯೆ ಅಥವಾ ಕಿರಿಕಿರಿ ಉಂಟಾದಲ್ಲಿ ಕೂಡಲೇ ಸರಹದ್ದಿನ/ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡತಕ್ಕದ್ದು.
ಕ್ರ.ಸಂ ಪೊಲೀಸ್ ಅಧಿಕಾರಿಗಳು ಸ್ಥಿರ ದೂರವಾಣಿ
ಸಂಖ್ಯೆ ಮೊಬೈಲ್
ದೂರವಾಣಿ
1 ಪೊಲೀಸ್ ಅಧೀಕ್ಷಕರು 08226-222243 9480804601
2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು 08226-225979 9480804602
3 ಡಿ.ಎಸ್.ಪಿ ಚಾ-ನಗರ 08226-222090 9480804620
4 ಡಿ.ಎಸ್.ಪಿ ಕೊಳ್ಳೇಗಾಲ 08224-252840 9480804621
5 ಜಿಲ್ಲಾ ನಿಯಂತ್ರಣ ಕೊಠಡಿ 08226-222383 9480804600
ಒಟ್ಟಾರೆ ಹೊಸ ವರ್ಷ ಆಚರಣೆಯನ್ನು ಶಾಂತ ರೀತಿಯಲ್ಲಿ ನೆರವೇರುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯೋಗ್ಯವಾದ ರೀತಿಯಲ್ಲಿ ಬಂದೋಬಸ್ತ್ ನಿಯೋಜಿಸಿಕೊಂಡಿದೆ. .... ..... ವೀರಭದ್ರಸ್ವಾಮಿ
***************************************************************************ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಹೆಮ್ಮೆಯ ವಿಚಾರ: ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ, ಡಿ. 29 - ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಹೆಮ್ಮೆಯ ವಿಚಾರ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಅವರಣದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕøತಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಾಮೀಣ ಭಾಗದಿಂದ ಬಂದು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಜಿಲ್ಲೆ ಹಾಗೂ ವಿಭಾಗ ಮಟ್ಟದಲ್ಲಿ ಸಾಧನೆ ಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಶೈಕ್ಷಣಿಕವಾಗಿಯೂ ಇದೇ ಮಾದರಿಯಲ್ಲಿ ಸಾಧನೆಯನ್ನು ತೋರುವುದರ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದರು. ಸಮಯ ಅತ್ಯಂತ ಅಮೂಲ್ಯವಾದ್ದು. ಕಾಲೇಜು ದಿನಗಳಲ್ಲೇ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ಮೂಲಕ ಮುಂದಿನ ಸಿಇಟಿ ಪರೀಕ್ಷೆಗಳಿಗೆ ತಯಾರಾಗಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಕಿವಿಮಾತು ಹೇಳಿದರು. ಕಾಲೇಜಿನ ಅಭಿವೃದ್ಧಿ ಅಧ್ಯಕ್ಷ ರಾಗಿರುವ ತಾವು ಕಾಲೇಜಿನ ಮೂಲ ಸೌಕರ್ಯ ಹೆಚ್ಚಿಸಿ, ಭೋಧಕ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ ಎಂದು ಶಾಸಕರು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸೋಮಶೇಖರ ಬಿಸಲ್ವಾಡಿ ಅವರು ಮಾತನಾಡಿ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಕ್ರೀಡೆಗಳು ಸದೃಢ ದೇಹದÀಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ತಿಳಿಸಿದರು. ಇದೇ ವೇಳೆ ವಯೋನಿವೃತ್ತಿ ಹೊಂದಿದÀ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರೆಜಿನಾ ಪಿ. ಮಲಾಕಿ ಗೌರವಿಸಿ ಸನ್ಮಾನಿಸಲಾಯಿತು. 2016-17ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಸದಸ್ಯರಾದ ಎನ್.ಎಸ್. ರೇಣುಕಾ, ಕಾಲೇಜಿನ ಉಪ ಪ್ರಾಂಶುಪಾಲರಾದ ರಾಚಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಲೀಂ, ಸದಸ್ಯರಾದ ರಂಗಸ್ವಾಮಿ ಸಿ. ಬಸವಾಪುರ ಕಾಲೇಜಿನ ಪ್ರಾಂಶುಪಾಲರಾದ ಡಿ.ಸಿ. ಲಿಂಗರಾಜು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಚಿಕ್ಕಲ್ಲೂರು ಜಾತ್ರೆ: ಮದ್ಯ ಮಾರಾಟ ನಿಷೇಧÀ
ಚಾಮರಾಜನಗರ, ಡಿ. 29 - ಚಿಕ್ಕಲೂರು ಗ್ರಾಮದಲ್ಲಿ ಶ್ರೀ ಘನನೀಲ ಸಿದ್ದಪ್ಪಾಜಿಯವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಗ್ರಾಮದ ಸುತ್ತ ಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಜನವರಿ 2ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 7ರ ಮಧ್ಯರಾತ್ರಿಯವರೆಗೆ ಯಾವುದೇ ರೀತಿಯ ಮದ್ಯ ಮಾರಾಟ, ಅಕ್ರಮ ಸಾಗಾಣಿಕೆ, ದಾಸ್ತಾನು ಮಾಡದಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.ಯಳಂದೂರು ತಾಲ್ಲೂಕಿನ ವಿವಿಧ ಗ್ರಾ.ಪಂ ಶಾಲೆ ಅಂಗನವಾಡಿ ಹಾಸ್ಟೆಲ್‍ಗಳಿಗೆ ಜಿ.ಪಂ ಸಿ.ಇ.ಓ ದಿಢೀರ್ ಭೇಟಿ: ಪರಿಶೀಲನೆ
ಚಾಮರಾಜನಗರ, ಡಿ. 30-ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅವರು ಯಳಂದೂರು ತಾಲ್ಲೂಕಿನ ವಿವಿಧ ಶಾಲೆ, ಅಂಗನವಾಡಿ ,ವಿದ್ಯಾರ್ಥಿನಿಲಯ, ಮತ್ತು ಗ್ರಾಮಪಂಚಾಯತಿಗಳಿಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ದುಗ್ಗಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಸ್ತೂರಬಾ ಬಾಲಿಕಾ ವಸತಿ ಶಾಲೆಗೆ ಭೇಟಿ ನೀಡಿದ ಅವರು ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಈವೇಳೆ ಮುಖ್ಯಶಿಕ್ಷಕರು ಸೇರಿದಂತೆ ಮೂರು ಜನ ಸಹಶಿಕ್ಷಕರು ಏಕಕಾಲದಲ್ಲಿ ರಜೆ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಜೆ ಹಾಕಿರುವ ಶಿಕ್ಷಕರ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆÉ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಕುಂದುಕೊರತೆಯನ್ನು ಆಲಿಸಿದ ಅವರು ನೀರಿನ ಸಮಸ್ಯೆ ಶಿಘ್ರವೇ ಬಗೆಹರಿಸುವುದಾಗಿ ತಿಳಿಸಿದರು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಹಾಗು ಶುಚಿತ್ವಕ್ಕೆ ಒತ್ತು ನೀಡಬೇಕೆಂದು ಶಿಕ್ಷಕರಿಗೆ ಸಿ,ಇ,ಓ ಸೂಚಿಸಿದರು.
ನಂತರ ಆದರ್ಶ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಪಠ್ಯಕ್ಕೆ ಸಂಭಂದಿಸಿದಂತೆ ಪ್ರಶ್ನೆಗಳನ್ನು ಕೇಳಿದರು ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು ಶಿಕ್ಷಕರು ಸಕಾಲಕ್ಕೆ ಶಾಲೆಗೆ ಹಾಜರಾಗುವಂತೆ ಹಾಗು ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ಪಲಿತಾಂಶದಲ್ಲಿ ಶೇಕಡಾ 100% ಸಾಧನೆ ಮಾಡುವಂತೆ ಸೂಚಿಸಿದರು
ಪಲಿತಾಂಶ ಹಾಗು ಗುಣಮಟ್ಟದ ಶಿಕ್ಷಣಕ್ಕಾಗಿ ಸ್ಟೆಪ್ ಎಂಬ ವಿನೂತನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು ಶಿಕ್ಷಕರ ತರಭೇತಿ ಹಾಗು ಮಕ್ಕಳ ಗುಣಮಟ್ಟದ ಕಲಿಕೆಗೆ ಒತ್ತು ನೀಡಲಾಗಿದೆ ಸದ್ಯ ಶಾಲೆಯಲ್ಲಿ ಸ್ವಲ್ಪಮಟ್ಟಿಗೆ ಪೀಠೋಪಕರಣಗಳ ಸಮಸ್ಯಯಿದ್ದು ಶೀಘ್ರವೇ ಅದನ್ನು ಬಗೆಹರಿಸುವುದಾಗಿ ತಿಳಿಸಿದರು.
ದುಗ್ಗಹಟ್ಟಿ ಗ್ರಾಮಪಂಚಾಯತಿ ಕಚೇರಿಗೆ ಭೇಟಿ ನೀಡಿದ ಹರೀಶ್ ಕುಮಾರ್ ರವರು ಗ್ರಾಮೀಣಾಬಿವೃದ್ದಿಯೆಂಬುದು ಚುನಾಯಿತ ಪ್ರತಿನಿಧಿಗಳ, ಅದಿಕಾರಿ ವರ್ಗದವರ ಹಾಗು ಸಾರ್ವಜನಿಕರ ಸಹಕಾರವನ್ನು ಅವಲಂಬಿಸಿದೆ. ನರೇಗಾ, ವಸತಿ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಪಂಚಾಯತಿ ಪಿ,ಡಿ,ಓ ಗೆ ಸೂಚಿಸಿದರು.ಲೋಪ ಎಸಗಿದ್ದಲ್ಲಿ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡಲಾಗುವ ಗೋದಾಮಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ದಾಸ್ತಾನು ವಿವರ ಪಡೆದರು. ಅಂಗನವಾಡಿಗಳಿಗೆ ಪ್ರಸ್ತುತ ಮೂರು ತಿಂಗಳಿಗೊಮ್ಮೆ ಆಹಾರ ಸರಬರಾಜು ಮಾಡಲಾಗುತ್ತಿದ್ದು ಇನ್ನು ಮುಂದೆ ಸಮರ್ಪಕವಾಗಿ ತಿಂಗಳಿಗೊಮ್ಮೆ ವಿತರಣೆ ಮಾಡಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಹೊನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗು ಕಲಿಕೆಗೆ ಸಂಭಂದಿಸಿದಂತೆ ಮಾಹಿತಿ, ಮಾತೃಪೂರ್ಣ ಯೋಜನೆಗೆ ದಾಸ್ತಾನು ಮಾಡಿರುವ ಆಹಾರ ಧಾನ್ಯ ವಿವರ ಪರಿಶೀಲಿಸಿದರು. ಪಡೆದರು. ಗರ್ಬಿಣಿ, ಹಾಗು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.
ನಂತರ ಹೊನ್ನೂರು ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಶೌಚಾಲಯ, ಮನೆಗಳ ನಿರ್ಮಾಣಕ್ಕೆ ಒತ್ತುನೀಡುವಂತೆ ಸೂಚಿಸಿದರು.
ಗ್ರಾಮದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಅವರು ಈ- ಹಾಜರಾತಿಯನ್ನು ಪರಿಶೀಲಿಸಿ ಮಕ್ಕಳು ಹೆಚ್ಚು ಗೈರು ಹಾಜರಾಗದಂತೆ ಕ್ರಮವಹಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು. ನಂತರ ಸಿ,ಇ,ಓ ರವರು ಮಕ್ಕಳಿಗೆ ತಯಾರಿಸಲಾಗಿದ್ದ ಊಟವನ್ನು ಸೇವಿಸುವ ಮೂಲಕ ಗುಣಮಟ್ಟವನ್ನು ಪರೀಕ್ಷಿಸಿದರು. ವಿದ್ಯಾರ್ಥಿನಿಲಯವು ಶುಚಿತ್ವದಿಂದ ಕೂಡಿದ್ದು ಉತ್ತಮ ನಿರ್ವಹಣೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಜರಿದ್ದರು.
ಹೊಸ ವರ್ಷ ಆಚರಣೆ : ಪೊಲೀಸ್ ಇಲಾಖೆಯಿಂದ ಕೆಲ ಸೂಚನೆ
ಚಾಮರಾಜನಗರ, ಡಿ. 30- ಹೊಸ ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತಿರಲು ಸಾರ್ವಜನಿಕರು ಕೆಲ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಜಿಲ್ಲೆಯ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು, ಸಂಘಟನೆಗಳು ಮತ್ತು ಸಂಘಗಳು, ಹಮ್ಮಿಕೊಳ್ಳುವ ಔತಣಕೂಟ, ಸಮಾರಂಭಗಳನ್ನು ಡಿಸೆಂಬರ್ 31 ರ ರಾತ್ರಿ ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕು. ಹೊಸ ವರ್ಷದ ಔತಣಕೂಟ, ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳಬೇಕು. ಎಲ್ಲಾ ಆಗು ಹೋಗುಗಳಿಗೂ ಅವರುಗಳೇ ಜವಾಬ್ದಾರರಾಗಿರುತ್ತಾರೆ.
ಹೋಟೆಲ್, ಭೋಜನಗೃಹ, ಕ್ಲಬ್‍ಗಳಿಗೆ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಲಾಗಿದೆ. ಸಿಸಿಟಿವಿ ಅಳವಡಿಸದಿದ್ದಲ್ಲಿ ತಪ್ಪದೇ ತಕ್ಷಣವೇ ಅಳವಡಿಸಲು ಕ್ರಮವಹಿಸಬೇಕು. ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ವಾಸಸ್ಥಳವನ್ನು ದೃಢೀಕರಿಸುವ ದಾಖಲೆಯೊಂದಿಗೆ ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸಬೇಕು. ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್, ಬಟ್ಟಿಂಗ್ಸ್, ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಕಾಯ್ದುಕೊಳ್ಳಬೇಕು.
ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೆಲು ಧ್ವನಿಯಲ್ಲಿ ಬಳಕೆ ಮಾಡುವುದು, ನಿಗಧಿತ ಸಮಯದಲ್ಲಿಯೇ ಕಾರ್ಯಕ್ರಮವನ್ನು ಮುಗಿಸಬೇಕು. ವಿದೇಶಿಯರು ಹೋಟೆಲ್, ರೆಸಾರ್ಟ್, ಹೋಮ್‍ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸಬೇಕು. ಸಾರ್ವಜನಿಕ ಅಸ್ತಿಪಾಸ್ತಿಗೆ ಹಾನಿ ಉಂಟು ಮಾಡಬಾರದು.
ಅಬಕಾರಿ ಕಾಯ್ದೆ ಅಡಿಯಲ್ಲಿ, ಪರವಾನಗಿ ಅನ್ವಯ, ಮದ್ಯ ಮಾರಾಟ ವೇಳೆಯನ್ನು ಅನುಸರಿಸಬೇಕು. ಮಹಿಳೆಯರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿರಬೇಕು. ಆಯೋಜಕರು ಸಮಾರಂಭಗಳನ್ನು ತಪ್ಪದೆ ವೀಡಿಯೋ ಚಿತ್ರೀಕರಿಸಬೇಕು. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸಬೇಕು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ದ್ವಿಚಕ್ರ ವಾಹನದಲ್ಲಿ ನಿಗಧಿಗಿಂತ ಹೆಚ್ಚು ಜನ ಸವಾರಿ ಮಾಡಬಾರದು, ಸಾಹಸ ಪ್ರದರ್ಶನ, ವೀಲಿಂಗ್ ನಡೆಸಬಾರದು. ಅನುಮತಿಯನ್ನು ಪಡೆಯದೇ ಬ್ಯಾನರ್, ಬಂಟ್ಟಿಂಗ್ಸ್, ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶುಭಾಶಯ ಕೋರುವ ನೆಪದಲ್ಲಿ ರಸ್ತೆಯಲ್ಲಿ ಮನಬಂದಂತೆ ಓಡಾಡಬಾರದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು. ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು, ಜೂಜಾಟಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು. ಸೂಚಿತ ಸ್ಥಳಗಳನ್ನು ಹೊರತುಪಡಿಸಿ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಬಾರದು. ಇತರರಿಗೆ ತೊಂದರೆಯಾಗುವ ರೀತಿ ಹಾಗೂ ಕಿರಿಕಿರಿ ಉಂಟಾಗುವಂತೆ ಪಟಾಕಿಗಳನ್ನು ಸುಡಬಾರದು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ತೊಂದರೆ, ಸಮಸ್ಯೆ, ಕಿರಿಕಿರಿ ಉಂಟಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡತಕ್ಕದ್ದು. ಪೊಲೀಸ್ ಅಧೀಕ್ಷಕರು, 08226-222243, ಮೊ. 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08226-225979, ಮೊ. 9480804602, ಡಿ.ಎಸ್.ಪಿ ಚಾ-ನಗರ, 08226-222090, ಮೊ. 9480804620, ಡಿ.ಎಸ್.ಪಿ ಕೊಳ್ಳೇಗಾಲ, 08224-252840, ಮೊ. 9480804621, ಜಿಲ್ಲಾ ನಿಯಂತ್ರಣ ಕೊಠಡಿ, 08226-222383, ಮೊ. 9480804600
ಹೊಸ ವರ್ಷದ ಸಂಭ್ರಮವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಹೊಸ ವರ್ಷ ಶುಭಾಶಯಗಳನ್ನು ಸರ್ವರಿಗೂ ಪೊಲೀಸ್ ಇಲಾಖೆ ಕೋರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment