ಕೊನೆಗೂ ಐ.ಜಿ ಅವರ ಆದೇಶ ಪಾಲಿಸಿದ ಕೆಲವು ಐ.ಓ.ಗಳು.! ಆಗಿದ್ದರೆ ಎಸ್ಪಿ ಅವರ ಆದೇಶಕ್ಕೆ ಬೆಲೆಯಿಲ್ಲವೇ.? ಇದೇನಾ ಶಂಖದಿಂದ ಬಿದ್ದರೆ ತೀರ್ಥ ಅನ್ನೋದು.!
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಠಾಣೆಗಳಲ್ಲಿ ಮಾಹಿತಿ ಕೇಳಿದರೆ ಬಹುತೇಕವಾಗಿ ತಪ್ಪು ತಪ್ಪು ಮಾಹಿತಿ ನೀಡಬಹುದು ಎಂದು ಪೊಲೀಸ್ ವರೀಷ್ಟಾದಿಕಾರಿಗಳ ಕಚೇರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದರೆ ಅವರ ಆದೇಶವನ್ನು ಕೇಳದಂತಾಗಿದ್ದಾರೆ.ಪೊಲೀಸ್ ಇಲಾಖೆಯಲ್ಲಿನ ಕೆಲವು ಠಾಣೆಗಳಲ್ಲಿ ಹುದ್ದೆಗಳ ಸಂಖ್ಯೆ, ಕೊರತೆ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಅರ್ಜಿ ಸಲ್ಲಿಸಿದರೆ ಏಳೆಂಟು ತಿಂಗಳಾದರೂ ಕೊಡದೇ ಇರುವವರಿಗೆ ಐ.ಜಿ ಆದೇಶದಿಂದ ಮಾಹಿತಿ ಸಿಕ್ಕಿದಂತಾಗಿದೆ.
ಕಾರ್ಯಕರ್ತ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ವರೀಷ್ಟಾದಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದರೆ ಅವರ ಅರ್ಜಿಗೆ ಕೇವಲ ಐದಾರು ಠಾಣೆಯವರು ಮಾಹಿತಿ ನೀಡುತ್ತಾರೆ. ಮತ್ತೊಂದೆಡೆ ಮೊದಲ ಮೇಲ್ಮನವಿ ಹೋದಾಗ ಮತ್ತೆ ಆರು ಠಾಣೆಯವರು ಮಾಹಿತಿ ನೀಡುತ್ತಾರೆ. ಇದೇಂಥಾ ವಿಪರ್ಯಾಸ ನೋಡಿ. ಮೇಲಾದಿಕಾರಿಗಳ ಆಧೇಶವನ್ನು ಪಾಲನೆ ಮಾಡದೇ ಉನ್ನತ ಅಧಿಕಾರಿಗಳ ಆಧೇಶ ಪಾಲಸಿಬೇಕಾದ ಅನಿವಾರ್ಯತೆ ಎದುರಾಗಿದೆ.
ಮೊದಲ ಅರ್ಜಿಗೆ ತಮ್ಮ ಕಚೇರಿಯಲ್ಲಿನ ಮೂರ್ನಾಲ್ಕು ವಿಬಾಗ, ಸಂತೇಮರಳ್ಳಿ ಠಾಣೆ ಚಾಮರಾಜನಗರ ಡಿವೈಸ್ಪಿ ಕಚೇರಿ, ಮಾಹಿತಿ ನೀಡಿದ್ದಾರೆ. ನಂತರ ಮೇಲ್ಮನವಿ ಸಲ್ಲಿಸಿದಾಗ ಕೊಳ್ಳೆಗಾಲ, ವೃತ್ತ, ಚಾಮರಾಜನಗರ ಸಂಚಾರಿ ಠಾಣೆ, ಕುದೇರು, ಮಹಿಳಾ ಠಾಣೆಯವರು ನೀಡುತ್ತಾರೆ.
ಆಯೋಗಕ್ಕೆ ಸಲ್ಲಿಸುವ ಜೊತೆಗೆ ಐ.ಜಿ.ಪಿ ಕಚೇರಿಗೆ ಶಿಸ್ತು ಪ್ರಾದಿಕಾರದಡಿ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದಾಗ ಅಲ್ಲಿಂದ ಬಂದ ಆದೇಶ ನೋಡಿ ಎಲ್ಲರೂ ಸರಾಗವಾಗಿ ಮಾಹಿತಿ ಕಳುಹಿಸಿ ಪರಿಪಾಲನಾ ವರದಿ ಸಲ್ಲಿಸಿದ್ದಾರೆ. ಇದೇಂಥ ವಿಪರ್ಯಾಸ ನೋಡಿ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿಯವರ ಆದೇಶ ಪಾಲಿಸದೇ ದಕ್ಷಿಣ ವಲಯ ಮಹಾನಿರ್ದೇಶಕರ ಆದೇಶ ಪಾಲಸಿಬೇಕಾಗಿದೆ. ಕೊನೆಗೂ ವರೀಷ್ಟರ ಆದೇಶ ಗಾಳಿಗೆ ತೂರಿದವರು ಶಂಖದಿಂದ ಬಿದ್ದರೆ ತೀರ್ಥ ವರ ನೀಡಿದಂತಾಗಿದೆ.
ಪ್ರತಿಯೊಂದಕ್ಕೂ ಐ.ಜಿ.ಪಿ ಅವರ ಆದೇಶಕ್ಕೆ ಕಾಯುವುದಾದರೆ ಇಲ್ಲಿನ ಆಡಳಿತ ವ್ಯವಸ್ಥೆ ಹೇಗಿದೆ ಎಂಬುದು ಗೊತ್ತಾಗುತ್ತಿದೆ. ಕೊನೆಗೂ ನಿಮ್ಮ ಆದೇಶ ಪಾಲಿಸಿ ಮಾಹಿತಿ ನೀಡಲು ಕಾರಣ ಕರ್ತರಾದ ತಮಗೆ ದನ್ಯವಾದಗಳು .
*********************************************************************************
No comments:
Post a Comment