ಕೆಎಸ್‍ಆರ್‍ಟಿಸಿ : 318 ಮಂದಿ ಪ್ರಯಾಣಿಕರಿಂದ 39,254 ರೂ. ದಂಡ ವಸೂಲಿ
ಚಾಮರಾಜನಗರ, ಡಿ. 16 - ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನವೆಂಬರ್ ಮಾಹೆಯಲ್ಲಿ 1928 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 205 ಪ್ರಕರಣಗಳನ್ನು ಪತ್ತೆ ಹಚ್ಚಿದೆ.ಟಿಕೆಟ್ ಪಡೆಯದೇ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 318 ಮಂದಿ ಪ್ರಯಾಣಿಕರಿಗೆ 39,254 ರೂ. ದಂಡ ವಿಧಿಸಲಾಗಿದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಆಶೋಕ್ ಕುಮಾರ್ ಪÀ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜ. 8ರಿಂದ ನಗರದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ
ಚಾಮರಾಜನಗರ, ಡಿ. 16 - ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿರುವ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ.
ಜಿಲ್ಲೆಯಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಜಿಲ್ಲಾಡಳಿತವು ಬೆಂಗಳೂರಿನ ಇ-ಆಡಳಿತ ಕೇಂದ್ರದ (ಸಿಇಜಿ) ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡುವ ದೃಷ್ಠಿಯಿಂದ 2018ರ ಜನವರಿ 8 ರಿಂದ 12ರವರೆಗೆ ನಗರದ ಸತ್ತಿ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಧಾರ್ ತಿದ್ದುಪಡಿ, ಅಪ್‍ಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಚಾಲನಾ ಪರವಾನಗಿ ಪ್ರತಿ ಅಥವಾ ಇನ್ನಿತರೆ ವಿಳಾಸ ದಾಖಲಾತಿಗಳೊಂದಿಗೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ : ವಿಕಲಚೇತರ ವಾಹನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 16- ಗುಂಡ್ಲುಪೇಟೆ ಪುರಸಭಾ ವತಿಯಿಂದ ಪಟ್ಟಣದಲ್ಲಿ ವಾಸವಿರುವ ವಿಕಲಚೇತನರಿಗೆ ಎಸ್ ಎಫ್ ಸಿ ಶೇ.3ರ ಯೋಜನೆಯಡಿ ಮೂರು ಚಕ್ರದ ಸ್ಕೂಟರ್ ವಿತರಿಸಲಾಗುತ್ತದೆ.ವಿಕಲಚೇತನರು ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಡಿಸೆಂಬರ್ 28ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಪುರಸಭೆ ಕಚೇರಿಯನ್ನು üಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಚಾ.ನಗರ ನಗರಸಭೆ : ಆಸ್ತಿ ತೆರಿಗೆ, ನೀರಿನ ಕಂದಾಯ ಪಾವತಿಸಲು ಸೂಚನೆ
ಚಾಮರಾಜನಗರ, ಡಿ. 16- ಚಾಮರಾಜನಗರದ ನಗರಸಭಾ ವ್ಯಾಪ್ತಿಗೆ ಒಳಪಡುವ ಕಟ್ಟಡ, ನಿವೇಶನಗಳ ಮಾಲೀಕರುಗಳು ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಪಾವತಿಸುವಂತೆ ಸೂಚಿಸಿದೆ.ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ತೊಂದರೆಯಾಗಿರುವುದರಿಂದ ಮಾಲೀಕರುಗಳು ಕೂಡಲೇ ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ಪಾವತಿಸುವಂತೆ ತಿಳಿಸಿದೆ.
ಅಕ್ರಮ ನಲ್ಲಿ ಸಂಪರ್ಕ ಹೊಂದಿರುವವರು ನಿಗಧಿತ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳುವಂತೆಯೂ ನಗರಸಭೆ ಪೌರಾಯುಕ್ತರಾದ ಬಿ. ಫೌಜಿಯಾ ತರನ್ನುಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ : ವಿವಿಧ ಯೋಜನೆಯಡಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 16 - ಕೊಳ್ಳೇಗಾಲ ನಗರಸಭೆಯು ಪಟ್ಟಣದ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಪ್ರಸಕ್ತ ಸಾಲಿನಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ ನಲ್ಮ್ ಅಭಿಯಾನ ಯೋಜನೆಯ ಇಎಸ್‍ಟಿಪಿ ಕೌಶಲ್ಯ ತರಬೇತಿಗೆ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ಸಿವಿಂಗ್ ಮಿಷನ್ ಆಪರೇಟರ್, ಸೆಲ್ಫ್ ಎಂಪ್ಲಾಯ್ಡ ಟೈಲರ್, ಟ್ಯಾಕ್ಸಿ ಡ್ರೈವರ್, ಡೊಮೆಸ್ಟಿಕ್ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ವೆಬ್ ಡೆವಲಪರ್, ಪ್ಲಂಬರ್ (ಜನರಲ್) ಮತ್ತು ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.5ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸಿವಿಂಗ್ ಮಿಷನ್ ಆಪರೇಟರ್ ಹಾಗೂ ಪ್ಲಂಬರ್ (ಜನರಲ್), 8ನೇ ತರಗತಿ ವಿದ್ಯಾರ್ಹತೆಯವರಿಗೆ ಸೆಲ್ಫ್ ಎಂಪ್ಲಾಯ್ಡ ಟೈಲರ್, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯವರಿಗೆ ಟ್ಯಾಕ್ಸಿ ಡ್ರೈವರ್ ಹಾಗೂ ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್, ಪಿಯುಸಿ ವಿದ್ಯಾರ್ಹತೆಯವರಿಗೆ ಡೊಮೆಸ್ಟಿಕ್ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ವೆಬ್ ಡೆವಲಪರ್ ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತ 18 ರಿಂದ 40ರ ವಯೋಮಿತಿಯವರು ಅರ್ಜಿಯನ್ನು ಪುರಸಭೆ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 23ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 23ರಂದು ಗ್ರಾಮೀಣ ಕ್ರೀಡೋತ್ಸವ ಕ್ರೀಟಾಕೂಟ
ಚಾಮರಾಜನಗರ, ಡಿ. 16 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಶ್ರೀ ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮೀಣ ಕ್ರೀಡೋತ್ಸವವನ್ನು ಡಿಸೆಂಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ.ಸ್ಪರ್ಧೆಗಳು ಎರಡು ವಿಭಾಗದಲ್ಲಿ ನಡೆಯಲಿದ್ದು ಪುರುಷರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಗುಂಪು ಸ್ಪರ್ಧೆ ನÀಡೆಸಲಾಗುವುದು. ಪ್ರಥಮ ಬಹುಮಾನವಾಗಿ 5 ಸಾವಿರ ರೂ, ದ್ವಿತೀಯ ಬಹುಮಾನವಾಗಿ 3 ಸಾವಿರ ರೂ. ನೀಡಲಾಗುವುದು.
ತಾಲೂಕಿನ ಚಂದಕವಾಡಿ ಹಾಗೂ ಸಂತೆಮರಹಳ್ಳಿ ಹೋಬಳಿಯ ಆಸಕ್ತ ಶಾಲಾ ಕಾಲೇಜು, ಯುವಕ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಗಳು, ಪುರುಷ ಸ್ವಸಹಾಯ ಸಂಘಗಳು ಭಾಗವಹಿಸಬಹುದು.
ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಪಡಿತರ ಚೀಟಿ ಅಥವಾ ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಘಟಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದಿಂದ ವಿಕಲಚೇತರ ಸಬಲೀಕರಣ ಯೋಜನೆ ಸಮರ್ಪಕ ಅನುಷ್ಠಾನ : ಡಾ. ಗೀತಾ ಮಹದೇವಪ್ರಸಾದ್
ಸಭಾ ಕಾರ್ಯಕ್ರಮಕ್ಕೂ ಮೊದÀಲು ಉಸ್ತುವಾರಿ ಸಚಿವರು, ಶಾಸಕರು, ಇತರೆ ಗಣ್ಯರು ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನಗಳನ್ನು ವಿತರಿಸಿದರು. ವಿಶೇಷಚೇತನರ ಜಾಥಾ ಸಹ ಕಾರ್ಯಕ್ರಮಕ್ಕೂ ಮೊದಲು ನಡೆಯಿತು.
|
ನಗರದ ಜೆ.ಎಚ್. ಪಟೇೀಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸೌಲಭ್ಯಗಳನ್ನು ತಲುಪಿಸುತ್ತಿದೆ. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸುತ್ತಿರುವುದಕ್ಕೆ 2016ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. 2017-18ನೇ ಸಾಲಿನ ಆಯವ್ಯಯದಲ್ಲಿ ವಿಕಲಚೇತನರ ಕಾರ್ಯಕ್ರಮಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.
ಅಂಗವೈಕಲ್ಯತೆ ಇರುವವರನ್ನು ವಿಕಲಚೇತನರೆಂದು ಕರೆಯುವ ಬದಲು ವಿಶೇಷಚೇತನರು ಎಂದು ಕರೆಯಲು ಬಯಸುತ್ತೇನೆ. ಏಕೆಂದರೆ ನಿಮ್ಮೆಲ್ಲರಲ್ಲಿ ವಿಶೇಷಚೇತನ ಅಡಗಿದೆ. ವಿಶೇಷಚೇತನರು ಸಮಾಜದ ಅವಿಭಾಜ್ಯದ ಅಂಗವಾಗಿ ಬಾಳಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಅಂಗವಿಕಲತೆ ಶಾಪವಲ್ಲ. ಅಂಗವೈಕಲ್ಯತೆಯನ್ನು ಮೀರಿ ಹಲವಾರು ವಿಶೇಷಚೇತನರು ಕ್ರೀಡೆ, ಸಾಹಿತ್ಯ, ಚಿತ್ರಕಲೆ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅವರ ಪ್ರತಿಭೆ ಹೊರಹೊಮ್ಮಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿಶೇಷಚೇತನರು ಯಾವುದೇ ಮರ್ಜಿಗೆ ಒಳಪಡದೆ ಅನುಕಂಪ ಅಪೇಕ್ಷಿಸದೆ ತಮ್ಮದೇ ಆದ ಕ್ಷೇತ್ರಗಳಲ್ಲಿ ಧ್ರುವತಾರೆಯಂತೆ ಮಿಂಚುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿಶೇಷಚೇತನರು ಯಾವುದೇ ಕೀಳರಿಮೆ ಹೊಂದದೆ ಏಕಾಗ್ರತೆ ಪರಿಶ್ರಮದಿಂದ ಈಗಾಗಲೇ ವಿವಿಧ ರಂಗಗಳಲ್ಲಿ ಅದ್ವಿತೀಯ ಸಾಧನೆ ಗೈದ ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಅವರದ್ದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ವಿಕಲಚೇತನರು ಅಸಹಾಯಕರಲ್ಲ. ಎಲ್ಲರಂತೆ ಅವರಿಗೂ ಪ್ರತಿಭೆ ಇದೆ. ಅದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಸಹ ಸಾಕಷ್ಟು ಉತ್ತೇಜನಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇದರ ಸದ್ಭಳಕೆ ಮಾಡಿಕೊಂಡು ಮುಂದೆಬರಬೇಕೆಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್ ಮಾತನಾಡಿ ವಿಕಲಚೇತನರಿಗೆ ಪೋಷಕರು ವಿಶೇಷ ಕಾಳಜಿ ತೋರಬೇಕು. ಪೌಷ್ಠಿಕ ಆಹಾರವನ್ನು ನೀಡಬೇಕು. ಪ್ರೀತಿ ವಾತ್ಸಲ್ಯದಿಂದ ಕಂಡು ಅವರ ಚಟುವಟಿಕೆಗಳಿಗೆ ಸದಾ ನೆರವಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ವಿಕಲಚೇತನರು ಸಂಘಟಿತರಾಗಿ ಅವಕಾಶಗಳನ್ನು ಪಡೆಯಲು ಮುಂದೆ ಬರುತ್ತಿರುವುದು ಸಂತಸದ ವಿಷಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿಭಾವಂತರು ಇದ್ದಾರೆ. ಅವರನ್ನು ಗುರುತಿಸಿ ನೆರವಾದರೆ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ತಾವೂ ಸಹ ಆಸಕ್ತಿ ವಹಿಸಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಅನೇಕ ವಿಕಲಚೇತನರು ಕಣ್ಣು ತೆರೆಸುವ ಸಾಧನೆಗಳ ಮೂಲಕ ಮುಂದಾಗಿದ್ದಾರೆ. ನಾವು ಎಲ್ಲರಿಗಿಂತ ಸಮರ್ಥರಾಗಿದ್ದೇವೆ ಎಂಬ ಆತ್ವವಿಶ್ವಾಸ ಬೆಳೆಸಿಕೊಳ್ಳಬೇಕು. ಯಾರೂ ಪರಿಪೂರ್ಣರಲ್ಲ. ಇಲ್ಲದೇ ಇರುವ ಅಂಶಗಳ ಬಗ್ಗೆ ಕೊರಗದೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಉಮಾವತಿ, ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರೇಣುಕ ಮಲ್ಲಿಕಾರ್ಜುನ್, ಮುಖಂಡರಾದ ರಂಗಸ್ವಾಮಿ, ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಇತರರು ಉ¥ಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದÀಲು ಉಸ್ತುವಾರಿ ಸಚಿವರು, ಶಾಸಕರು, ಇತರೆ ಗಣ್ಯರು ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನಗಳನ್ನು ವಿತರಿಸಿದರು. ವಿಶೇಷಚೇತನರ ಜಾಥಾ ಸಹ ಕಾರ್ಯಕ್ರಮಕ್ಕೂ ಮೊದಲು ನಡೆಯಿತು.
ನಗರ, ಪಟ್ಟಣ ಅಭಿವೃದ್ಧಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಉಸ್ತುವಾರಿ ಸಚಿವರ ಸೂಚನೆ
ಚಾಮರಾಜನಗರ, ಡಿ. 16 :- ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹೆದ್ದಾರಿ, ಮುಖ್ಯರಸ್ತೆ, ಕುಡಿಯುವ ನೀರಿನ ಕಾಮಗಾರಿಯೂ ಸೇರಿದಂತೆ ಎಲ್ಲ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರವಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು ಭಾಗಗಳಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಚಾಮರಾಜನಗರ ಪಟ್ಟಣದಲ್ಲಿ ಹಲ ತಿಂಗಳಿಂದ ಹೆದ್ದಾರಿ ಕಾಮಗಾರಿ ಸಾಗಿದೆ. ಈ ಕೆಲಸ ಶೀಘ್ರವಾಗಿ ಪೂರ್ಣಗೊಳಿಸಬೇಕು. ಹಗಲಿರುಳು ಕಾಮಗಾರಿ ನಿರ್ವಹಿಸಬೇಕು ಎಂದರು.
ಕಾಮಗಾರಿ ವಿಳಂಬವಾದರೆ ಜನರಿಗೂ ತೊಂದರೆಯಾಗಲಿದೆ. ವಾಹನ ಸಂಚಾರಕ್ಕೂ ಮತ್ತಷ್ಟು ಅಡಚಣೆಯಾಗುತ್ತದೆ. ಹೀಗಾಗಿ ಹೆಚ್ಚು ಕಾರ್ಮಿಕರು ಹಾಗೂ ಯಂತ್ರಗಳ ನೆರವಿನಿಂದ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಯಾವುದೇ ಅಡಚಣೆಗಳಿದ್ದರೂ ಸ್ಥಳೀಯವಾಗಿ ಇಲಾಖೆಗಳನ್ನು ಸಂಪರ್ಕಿಸಿ ಸಮನ್ವಯ ಸಾಧಿಸಿ ಕಾಮಗಾರಿ ಪೂರೈಸಬೇಕು ಎಂದು ಸಚಿವರು ತಿಳಿಸಿದರು.
ಒಳಚರಂಡಿ, ಮ್ಯಾನ್‍ಹೋಲ್ ನಿರ್ಮಾಣ ಕೆಲಸವನ್ನು ಪೂರ್ಣ ಮಾಡಬೇಕು. ಯಾವ ಭಾಗದಲ್ಲಿ ಅಗತ್ಯವಿದೆ ಎಂಬುದನ್ನು ರಸ್ತೆ ಕೆಲಸದ ಸಮಯದಲ್ಲಿಯೇ ಗುರುತಿಸಬೇಕು. ಅವಶ್ಯವಿರುವ ಕಡೆ ಕಾಮಗಾರಿ ನಿರ್ವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸ್ಥಳ ಪರಿಶೀಲಿಸಿ ಪ್ರಕ್ರಿಯೆ ಆರಂಭಿಸುವಂತೆ ಸಚಿವರು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಪಟ್ಟಣದಲ್ಲಿ ಕೈಗೊಂಡಿರುವ ಕೆಲಸಗಳನ್ನು ಅಪೂರ್ಣ ಮಾಡಬಾರದು. ಕೆಲವೆಡೆ ಕಾಮಗಾರಿ ಆರಂಭಿಸಲು ಯಾವುದೇ ತೊಡಕು ಇಲ್ಲ. ಆದರೂ ವಿಳಂಬ ಮಾಡಲಾಗುತ್ತಿದೆ. ಇನ್ನುಮುಂದೆ ಇದಕ್ಕೆ ಅವಕಾಶ ನೀಡದೆ ವ್ಯಾಪಕವಾಗಿ ಕೆಲಸ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ನಗರದ ರಸ್ತೆಗಳು ಏಕಕಾಲದಲ್ಲಿ ಆರಂಭವಾಗಿರುವುದರಿಂದ ಸಂಚಾರ ಸುಗಮ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಪರ್ಯಾಯ ರಸ್ತೆ ಕೆಲಸವನ್ನು ಮೊದಲು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಗುಂಡ್ಲುಪೇಟೆ, ಯಳಂದೂರು ಸೇರಿದಂತೆ ಸ್ಥಳೀಯ ನಗರ ಸಂಸ್ಥೆಗಳ ಜನಪ್ರತಿನಿಧಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
No comments:
Post a Comment