ಫೆಬ್ರವರಿ ಅಂತ್ಯದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಆರ್. ಧ್ರುವನಾರಾಯಣ
ಚಾಮರಾಜನಗರ, ಡಿ. 12 :- ಚಾಮರಾಜನಗರ ಹಾಗೂ ಕೋಳ್ಳೆಗಾಲ ನಗರದಲ್ಲಿ ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಲೋಕ ಸಭಾ ಸದಸ್ಯರಾರ ಆರ್. ಧ್ರುವನಾರಯಣ್ ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿರು.
ಹೆದ್ದಾರಿ ಕಾಮಗಾರಿ ವಿಳಂಬವಾಗಿ ಸಾಗುತ್ತಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಜಿಲ್ಲಾಧಿಕಾರಿಯವರು ಆಗಾಗ್ಗೆ ಸಭೆ ನಡೆಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲು ನಿದೇರ್ಶನ ನೀಡಬೇಕೆಂದು ಎಂದು ಧ್ರುವನಾರಾಯಣ್ ತಿಳಿಸಿದರು.
ಹೆದ್ದಾರಿ ಸೌಕರ್ಯಕ್ಕಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಈ ನೆರವಿನಿದ ಗುಣಮಟ್ಟದ ಕೆಲಸ ನಡೆಯಬೇಕು. ರಸ್ತೆಗಳು ಅಭಿವೃದ್ಧಿಯಾದರೆ ನಗರದ ಪ್ರಗತಿ ಆಗಲಿದೆ ಎಂದರು.
ಇದೇ ವೇಳೆ ಮಾತನಾಡಿದ ಶಾಸಕರದ ಆರ್. ನರೇಂದ್ರ ಅವರು ರಸ್ತೆ ಕಾಮಗಾರಿ ನಡೆಯುವಾಗ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪರ್ಯಾಯ ರಸ್ತೆ ಸಮತಟ್ಟು ಮಾಡಬೇಕು. ಇದರಿಂದ ನಾಗರಿಕರಿಗೆ ಅಪಘಾತವಾಗುವುದು ತಪ್ಪಲಿದೆ ಎಂದರು.
ಬ್ಯಾಂಕುಗಳಲ್ಲಿ ಸಾಲ ಸೌಲ ಸೌಲಭ್ಯ ನೀಡಲು ಹಿದೇಟು ಹಾಕಲಾಗುತ್ತಿದೆ ಎಂಬ ವಿಷಯಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಧ್ರುವನಾರಾಯಣ್ ಅವರು ಸರ್ಕಾರಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ನೀಡುವುದು ಬ್ಯಾಂಕುಗಳ ಜವ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕೆಂದು ಧ್ರುವನಾರಾಯಣ ನಿರ್ದೇಶನ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಲಾಯಿತು.
ಶಾಸಕರಾದ ಎಸ್. ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉಪಾಧ್ಯಕ್ಷರಾದ ಜೆ. ಯೋಗೇಶ್ ಜಿಲ್ಲಾಧಿಕಾರಿಗಳಾದ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಉಪವಿಭಾಗಾಧಿಕಾರಿಗಳಾದ ಫೌಜಿಯಾ ತರನಮ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್. ವಿ. ಚಂದ್ರು, ಎಚ್. ಎನ್. ನಟೇಶ್, ರಾಜು, ಗಿರೀಶ್, ನಂಜುಂಡಯ್ಯ, ಸಮಿತಿ ಸದಸ್ಯರಾದ ಕಾವೇರಿಶಿವಕುಮಾರ್ ಇತರರು ಸಭೆಯಲ್ಲಿ ಹಾಜರಿದ್ದರು.
No comments:
Post a Comment