ಕುವೆಂಪು ಅವರದ್ದು ಮೇರು ವ್ಯಕ್ತಿತ್ವ: ಜಿಲ್ಲಾಧಿಕಾರಿ ಬಿ. ರಾಮು
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಮಾನವ ಸೂತ್ರಗಳನ್ನು ನೀಡಿದ ಕುವೆಂಪು ಅವರನ್ನು ಯಾರೊಬ್ಬರಿಗೂ ಹೋಲಿಕೆ ಮಾಡಲಾಗುವುದಿಲ್ಲ. ಕುವೆಂಪು ಅವರಿಗೆ ಕುವೆಂಪು ಅವರೆ ಸಾಟಿ. ಹೀಗಾಗಿ ಅವರು ವಿಶ್ವ ಮಾನವರಾಗಿದ್ದಾರೆಂದು ಜಿಲ್ಲಾಧಿಕಾರಿ ರಾಮು ಅವರು ಅಭಿಪ್ರಾಯಪಟ್ಟರು
ಒಬ್ಬ ವ್ಯಕ್ತಿ ಉನ್ನತ ಮಟ್ಟಕ್ಕೇರಲು ಪ್ರೇರಣೆಗಳು ಕಾರಣವಾಗುತ್ತವೆ. ಮಾನವೀಯತೆ ಮೌಲ್ಯಗಳು ಮನುಷ್ಯರಲ್ಲಿ ಮೈಗೂಡಬೇಕಾಗಿದೆ. ಪೀತಿ ಉತ್ತಮ ಚಿಂತನೆಗಳು ಮೂಡಿಬರಬೇಕಾದರೆ, ಉತ್ತಮ ಪರಂಪರೆಯಿಂದ ವಿಮುಕರಾಗದಂತೆ ಇರಬೇಕಿದೆ ಎಂದು ರಾಮು ಅವರು ಸಲಹೆ ಮಾಡಿದರು.
ಉನ್ನತ ಕಲೆ ವಿಚಾರಗಳತ್ತ ಆಸಕ್ತಿ ಬೆಲೆಸಿಕೊಳ್ಳಬೇಕು. ವಿಶ್ವ ಮಾನವ ಸಂದೇಶವನ್ನು ಮರೆಯಬಾರದು ಬದುಕಿನಲ್ಲಿ ಒಳ್ಳೆಯ ಮೌಲ್ಯ ಆದರ್ಶಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ರಾಮು ಕಿವಿ ಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪದ್ಮಶೇಖರ್ ಅವರು ಕುವೆಂಪು ಅವರ ಕೃತಿಗಳಲ್ಲಿನ ಪಾತ್ರವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಾಣಬಹುದಾಗಿದೆ ಎಂದರು.
ಸ್ತ್ರೀಲೋಕಕ್ಕೆ ನೆಲೆಯನ್ನು ಕಾಣಿಸುವ ಪ್ರಯತ್ನವನ್ನು ಕುವೆಂಪು ಮಾಡಿದ್ದಾರೆ. ಸ್ತ್ರೀತ್ವಕ್ಕೆ ಹೊಸ ವ್ಯಾಖ್ಯಾನ ನೀಡಿದರು. ಮನಸ್ಸು ಅಂತರಂಗ, ಪ್ರೀತಿ, ಶ್ರಮ, ತ್ಯಾಗವನ್ನು ಗುರುತಿಸಿ ಗೌರವಿಸುವ ಅಂಶಗಳು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದೆಂದು ಪದ್ಮ ಶೇಖರ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗ್ರಾಯತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಡಿವೈ.ಎಸ್.ಪಿ. ಜಯಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತವಾರಿ ಸಚಿವರ ಪ್ರವಾಸ
ಚಾಮರಾಜನಗರ, ಡಿ. 29 - ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಅವರು ಡಿಸೆಂಬರ್ 30ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 11.15 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆನಡೆಸುವರು. ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಡಾ. ಬಾಬುಜಗಜೀವನ್‍ರಾಂ ಭವನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆನಡೆಸುವರು. ನಂತರ ಗುಂಡ್ಲುಪೇಟೆ – ಚಾಮರಾಜನಗರ ರಸ್ತೆಯ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವರು. ಮದ್ಯಾಹ್ನ 1.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ವಿಐಪಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವರು. ವಸತಿಗೃಹಗಳನ್ನು ಉದ್ಘಾಟಿಸುವರು. ಮದ್ಯಾಹ್ನ 3ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
No comments:
Post a Comment