Wednesday, 27 December 2017

ಚಾ.ನಗರ : ಪೆಟ್ರೋಲ್ ಬಂಕ್‍ಗಳಲ್ಲಿ ಶೌಚಾಲಯ ಹೊಂದಲು ಸೂಚನೆ (27-12-2017)

   


ಚಾ.ನಗರ : ಪೆಟ್ರೋಲ್ ಬಂಕ್‍ಗಳಲ್ಲಿ ಶೌಚಾಲಯ ಹೊಂದಲು ಸೂಚನೆ 

ಚಾಮರಾಜನಗರ, ಡಿ. 27  ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಬರುವ  ಪೆಟ್ರೋಲ್ ಬಂಕ್‍ಗಳಲ್ಲಿ ಗ್ರಾಹಕರ ಬಳಕೆಗೆ ಶೌಚಾಲಯ ನಿರ್ಮಾಣ ಮಾಡಬೇಕು. ಅಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಎಂಬ ನಾಮಫಲಕ ಹಾಕುವಂತೆ ನಗರಸಭೆ ಸೂಚಿಸಿದೆ.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಚ ಸರ್ವೇಕ್ಷಣೆ-2018ರ ಸಮೀಕ್ಷೆಯನ್ನು ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಿದೆ. ಪೆಟ್ರೋಲ್ ಬಂಕ್‍ನಲ್ಲಿ ಶೌಚಾಲಯ ಹೊಂದಿರಬೇಕು ಹಾಗು ಸಾರ್ವಜನಿಕ ಉಪಯೋಗಕ್ಕೆ ಎಂದು ನಾಮಫಲಕ ಹಾಕಬೇಕು. ಸಾರ್ವಜನಿಕರು ಪೆಟ್ರೋಲ್ ಬಂಕ್‍ನಲ್ಲಿರುವ ಶೌಚಾಲಯವನ್ನು ಉಪಯೋಗಿಸಲು ಅವಕಾಶವಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಗುಂಡ್ಲುಪೇಟೆ : ಜ. 12ರಂದು ಪ.ಜಾ, ಪ.ವಗರ್Àಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಡಿ. 27- ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜನವರಿ 12ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡÉಯಲಿದೆ.
ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ತಮ್ಮ ಸಮಸ್ಯೆ ಕುಂದುಕೊರತೆಗಳ ಬಗ್ಗೆ ಜನವರಿ 5ರ ಒಳಗೆ ಲಿಖಿತವಾಗಿ, ಸ್ಪಷ್ಟವಾಗಿ ಸಮಿತಿಯ ಸದಸ್ಯರಾದ ಸುಭಾಷ್ ಮಾಡ್ರಹಳ್ಳಿ (ಮೊಬೈಲ್ 9743699073), ಮಹದೇವಚಾರಿ ಮೂಖಹಳ್ಳಿ (ಮೊಬೈಲ್ 8762342103), ಶ್ರೀಧರ್ ಕಾರೇಮಾಳ (ಮೊಬೈಲ್ 8762342103) ಅವರುಗಳಿಗೆ ಅಥವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ತಿಳಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದÉ.


ನಾನು ಜಾತಿ ವಾದಿಯಲ್ಲ :ವಾಟಾಳ್ 


    ಚಾಮರಾಜನಗರ, ಡಿ.27- ನಾನು ಜಾತಿ ವಾದಿಯಲ್ಲ ನಾನು ಶಾಸನ ಸಭೆಗೆ ಆಯ್ಕೆಯಾದರೆ ಚಾಮರಾಜನಗರ ಸೇರಿದಂತೆ  ರಾಜ್ಯದ ಉದ್ದಗಲಕ್ಕೂ ಶಾಸಕನಿದ್ದ ಆಗೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
  ಇಂದು ತಾಲೂಕಿನ ಅರಕಲವಾಡಿ  ಗ್ರಾಮದಲ್ಲಿ ನಡೆದ ಗಡಿನಾಡು ಕನ್ನಡಿಗರ ಸಮಾವೇಶದ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ಬೆಂಗಳೂರಿನಲ್ಲಿ ಎರಡು ಬಾರಿ
ಶಾಸಕನಾಗಿದ್ದೇನೆ. ನಾನು ಕಳೆದ 10 ವರ್ಷಗಳಿಂದ ಸೋತಿದ್ದೇನೆ. ಇದು ನನಗೆ ಆದ ಸೋಲಲ್ಲ ಇದು ಕ್ಷೇತ್ರದ ಜನತೆಗೆ ಆದ ನಷ್ಟ ಎಂದು ತಿಳಿಸಿದರು.
   ನಾನು ಕಳೆದ 50 ವರ್ಷಗಳಿಂದ ನಾಡು, ನುಡಿ, ಬಾಷೆ, ಗಡಿನಾಡು, ಹೊರನಾಡು ಬಗ್ಗೆ ನಿತ್ಯ ನಿರಂತರವಾಗಿ ಚಳವಳಿ ಮಾಡುತ್ತಾ ಬಂದಿದ್ದೇನೆ. ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಕಳೆದ 10 ವರ್ಷಗಳಿಂದ ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರದ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಯಾರು ಮಾತನಾಡಿಲ್ಲ. ನಾನು ಶಾಸಕನಾಗಿದ್ದಾಗ ಒಂದು ದಿನವು ಗೈರು ಹಾಜರಾಗದೆ ಸಮಸ್ಯೆಗಳನ್ನು ಸರ್ಕಾರಕ್ಕೆ ತರುತ್ತಿದ್ದೆ. ನಾಡಿನ ಜನತೆ ಎಲ್ಲಾ ಮನೆಗಳ ಟಿವಿ ಗಳಲ್ಲಿ ನೋಡುತ್ತಿದ್ದರು ಎಂದು ವಾಟಾಳ್ ತಿಳಿಸಿದರು.
   ಚಾಮರಾಜನಗರವನ್ನು ಕರ್ನಾಟಕದ ಭೂಪಟದಲ್ಲಿ ದ್ರುವತಾರೆಯಂತೆ ಮಿನುಗಿಸುತ್ತಿದ್ದೆ ನಾನು ಏಕೆ ಸೋತೆ ಎಂದು ಅರ್ಥವಾಗಿಲ್ಲ ಎಲ್ಲಿ ವ್ಯತ್ಯಾಸ ಆಗಿದೆ ಎಂದು ಗೊತ್ತಾಗಿಲ್ಲ ನನ್ನಿಂದ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಮುಂದಿನ ಚುನಾವಣೆಯಲ್ಲಿ ನನಗೆ ಆರ್ಶಿವಾದ ಮಾಡಿ ಎಂದರು.
   ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರವನ್ನು ಹೇಳುವವರು ಕೇಳುವವರು ಯಾರು ಇಲ್ಲ ಜಿಲ್ಲಾಡಳಿತ ವಿಫಲವಾಗಿದೆ. ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಎದುರುತ್ತಿಲ್ಲ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಟಾಳ್ ತಿಳಿಸಿದರು.
   ಅರಕಲವಾಡಿಗೆ ತಾಳ ವಾಡಿ ಅತಿ ಸಮೀಪದಲ್ಲಿದೆ. ರಾಜ್ಯದ ಹಿಂದುಳಿದ ಗಡಿ ಪ್ರದೇಶಗಳು ಅಭಿವೃದ್ದಿಯಾಗಿಲ್ಲ. ಹೊರನಾಡ ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ. ಅರಕಲವಾಡಿ ಕೆರೆ, ಕೊತ್ತಲವಾಡಿ ಕೆರೆಗಳು ಸೇರಿದಂತೆ ಎಲ್ಲಾ ಗ್ರಾವiಗಳಲ್ಲಿರುವ ಎಲ್ಲಾ ಕೆರೆಗಳಿಗೆ ರಾಜಕೀಯ ಮಾಡದೆ ನೀರು ತುಂಬಿಸಬೇಕು ಎಂದು ವಾಟಾಳ್ ಹೇಳಿದರು.
    ಕುಡಿಯುವ ನೀರಿಗಾಗಿ ಮಹಾದಾಯಿ, ಕಳಸಬಂಡೂರಿ ಹಾಗು ಮೇಕೆದಾಟು ಯೋಜನೆ ಪ್ರಾರಂಭಿಸಬೇಕು ಎಂದು ಕಳೆದ 1 ವರ್ಷದಿಂದ  ಉತ್ತರ ಕರ್ನಾಟಕದ ಜನತೆ ನಿರಂತರವಾಗಿ ಚಳವಳಿ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಗೋವಾ ಮುಖ್ಯಮಂತ್ರಿ ಮನೋಹರ್ ಪ್ಯೆರಿಕರ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನಾವಿಸ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಭೆ ಕರೆದು ತಮ್ಮ ಮದ್ಯಸ್ಥಿಕೆಯಲ್ಲಿ ಈ ಸಮಸ್ಯೆ ಬಗೆಹರಿಸಬೇಕು ಎಂದು ವಾಟಾಳ್ ತಿಳಿಸಿದರು.
    ಮಹಾದಾಯಿ-ಕಳಸಬಂಡೂರಿ, ಮೇಕೆದಾಟು ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ವಾಟಾಳ್ ಈ ಯೋಜನೆಗಳ ಸಂಭಂದವಾಗಿ ಡಿ.28ರಂದು ಬೆಂಗಳೂರಿನಲ್ಲಿ ಕರಾಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಅಲ್ಲದೆ ಮುಂದಿನ ಜನವರಿ 10 ರಂದು ಬೃಹತ್ ಸಮಾವೇಶವನ್ನು ಮಾಡುತ್ತಿದ್ದೇವೆ. ಮಹಾದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಈ ಸಮಸ್ಯೆಗೆ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂಬ ವಿಚಾರವಾಗಿ ನಿರ್ಣಯ ಮಾಡುತ್ತೇವೆ. ಅಖಂಡ ಕರ್ನಾಟಕ ಬಂದ್‍ಗೆ 2 ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ವಾಟಾಳ್ ತಿಳಿಸಿದರು.
   ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಮಾಡಬೇಕು ಹಾಗು ಜಾತ್ಯಾತೀತರಿಗೆ ಅಪ್ಪ, ಅಮ್ಮ ಯಾರು ಎಂದು ಗೊತ್ತೆ ಇಲ್ಲ ಎಂದು ಹೇಳಿರುವ ವಿಚಾರವನ್ನು ವಾಟಾಳ್ ಖಂಡಿಸಿದ್ದಾರೆ. ಸಂವಿಧಾನ ತಿದ್ದುಪಡಿ ತಂದರೆ ದೇಶದಾದ್ಯಂತ ಬೆಂಕಿ ಜ್ವಾಲೆ ಹೊತ್ತಿ ಉರಿಯುತ್ತದೆ ಎಂದು ವಾಟಾಳ್ ನುಡಿದರು.
   ಮುಖ್ಯಮಂತ್ರಿಯಾಗಲೀ, ಮಂತ್ರಿಯಾಗಲೀ ಯಾರೆ ಆಗಲಿ ಗೌರವಯುತ ಸ್ಥಾನದಲ್ಲಿರುವವರು ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಕೂಡಲೇ  ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ಕೈಬಿಡಬೇಕು ಎಂದು ವಾಟಾಳ್ ಎಚ್ಚರಿಸಿದರು.
  ರಾಜ್ಯ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ವಾಟಾಳ್ ನಾಗರಾಜ್ ಅವರು ಯಾವುದೇ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ ಇವರು ಜಾತ್ಯಾತೀತ ವ್ಯಕ್ತಿ. ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ಕಾವೇರಿ ನೀರು ತಂದು ಕೊಟ್ಟರು ಎಲ್ಲಾ ವರ್ಗಗಳ ಜನತೆಗೆ ಪಕ್ಷಬೇದ ಮರೆತು ಜನರ ಕಷ್ಟಗಳಿಗೆ ನೋವುಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರ ಇವರನ್ನು ವಿಧಾನ ಪರಿಷತ್‍ಗೆ ನಾಮಕರಣ ಮಾಡಬೇಕಾಗಿತ್ತು ಎಂದು ತಿಳಿಸಿದರು. ಈ ಬಾರಿ ವಾಟಾಳ್ ನಾಗರಾಜ್ ಅವರನ್ನು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸೇರಿದಂತೆ ಜಾತ್ಯಾತೀತವಾಗಿ ವಾಟಾಳ್ ನಾಗರಾಜ್ ಅವರನ್ನು ಬೆಂಬಲಿಸಬೇಕು ಎಂದರು.
  ಇದಕ್ಕೂ ಮೊದಲು  ಅರಕಲವಾಡಿ ಬಸ್ ನಿಲ್ದಾಣದಿಂದ ವೇದಿಕೆ ವರೆಗೆ ವಾಟಾಳ್ ನಾಗರಾಜ್ ಅವರನ್ನು ವರ್ಣರಂಜಿತÀ ಕಲಾ ತಂಡಗಳೊಡನೆ ಮೆರವಣಿಗೆ ಮುಖಾಂತರ ಕರೆತರಲಾಯಿತು.  
  ಈ ಸಂದರ್ಭದಲ್ಲಿ ರವಿಕುಮಾರ್, ದಳಪತಿವೀರತಪ್ಪ, ಡೈರಿ ನಿರ್ದೇಶಕ ಬಸವರಾಜು, ನಾಗಮಲ್ಲಪ್ಪ, ಗುಂಡುರಾವ್, ಡೈರಿ ಮಹದೇವಪ್ಪ, ಕರಿನಾಯಕರು, ಡೈರಿ ಮಹದೇವಪ್ಪ, ನಾಗರಾಜಮೂರ್ತಿ, ಶಿವಕುಮಾರ್, ಕೆಂಪಣ್ಣ, ರಾಜಣ್ಣ, ಹುಂಡಿಬಸವಣ್ಣ, ಸುರೇಶ್‍ನಾಗ್, ಚೆನ್ನಮಲ್ಲಪ್ಪ, ನಿಂಗಶೆಟ್ಟಿ, ಕ್ಯಾಂಟೀನ್‍ಕುಮಾರ್, ನಾರಾಯಣಸ್ವಾಮಿ, ಕಾರ್‍ನಾಗೇಶ್, ರಾಮಯ್ಯ, ರೇವಣ್ಣಸ್ವಾಮಿ, ಶಿವಲಿಂಗಮೂರ್ತಿ,     ಪುಟ್ಟಸಿದ್ದಮ್ಮ, ವೀರಭದ್ರಪ್ಪ, ಮಹೇಶ್ ಇತರರು ಹಾಜರಿದ್ದರು.
 

















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು