Sunday, 24 December 2017

ಮುಂದಾಗಬಹುದಾದ ಅವಘಡ ತಪ್ಪಿಸಿದ ಎಎಸ್ಐ.! 24-12-2017

*ಮುಂದಾಗಬಹುದಾದ ಅವಘಡ ತಪ್ಪಿಸಿದ ಎಎಸ್ಐ.!


 ಸರ್ಕಾರಿ‌ ಬಸ್ ನ ಹಿಂಬಾಗದ ಟೈರ್ ಹೊರಗೆ ಬಂದಿರುವುದು. ಪಕ್ಕದಲ್ಲಿ ಬೇಗ್ ಸಾಹೇಬ್.


        ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ  ..9480030980

*ರಸ್ತೆಯಲ್ಲಿ ಅಪಘಾತವಾದರೆ ಹೆಚ್ಚು ಗಾಯಾಳುಗಳ ಪ್ರಾಣ ರಕ್ಷಣೆ ಮಾಡೋದರಲ್ಲಿ ಆರಕ್ಷಕ ವರ್ಗವೇ ಹೆಚ್ಚು ಹೀಗಿರುವಾಗ ಇಲ್ಲಿ ಆರಕ್ಷಕ ಸಿಬ್ಬಂದಿಯೋರ್ವ ಆಗುವ ಅವಘಡವೊಂದನ್ನ ತಪ್ಪಿಸಿದ್ದಾರೆ ಎಂದರೆ ನಂಬುವಿರಾ ? ಖಂಡಿತ ನಂಬಲೇ ಬೇಕು.
*ಚಾಮರಾಜನಗರ ಸಂಚಾರಿ ಠಾಣಾ ಎ.ಎಸ್.ಐ.ಬೇಗ್ ಎಂಬುವವರೆ ಮುಂದೆ ಆಗುವ ಅವಘಡವೊಂದನ್ನ ತಪ್ಪಿಸಿದ್ದಾರೆ ಎನ್ನಲಾಗಿದೆ.
*ಆಗಿದ್ದೇನು ಮತ್ತು ಮಾಡಿದ್ದೇನು? :- ಚಾಮರಾಜನಗರ ದಿಂದ ಜ್ಯೋತಿಗೌಡನಪುರಕ್ಕೆ ರಾಮಸಮುದ್ರ ಮಾರ್ಗವಾಗಿ ಸರ್ಕಾರಿ ಬಸ್ ತೆರಳುತ್ತಿದ್ದು  ಬಸ್ ನ ಹಿಂಬಾಗದ ಟೈರ್ ಒಂದು ಕಳಚಿ ಬೀಳುತ್ತಿದ್ದನ್ನ ಗಸ್ತಿನಲ್ಲಿದ್ದ ಬೇಗ್ ಅವರು ಗಮನಿಸಿ ರಾಮಸಮುದ್ರ ಠಾಣಾ ಸಮೀಪ ಅಡ್ಡಗಟ್ಟಿ ಚಾಲಕನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಚಾಲಕ ದನ್ಯವಾದ ಅರ್ಪಿಸಿ ನಂತರ ಅಲ್ಲಿದ್ದ ಪ್ರಯಾಣಿಕರನ್ನ ಬೇರೆ ಬಸ್ಸಿಗೆ ಹತ್ತಿಸಿ ಕಳಿಸಿದ್ದಾರೆ.    *ಬಹುಶಃ ಎಲ್ಲರೂ ತಿಳಿದುಕೊಂಡಿರಬಹುದು    ಹೆಚ್ಚು ಅಪಘಾತವಾಗುತ್ತಿರಲಿಲ್ಲ ಎಂದು, ಖಂಡಿತ ನಿಮ್ಮ ಊಹೆ ತಪ್ಪು ಎಂದು ನಾನು ಹೇಳಲು ಬಯಸುತ್ತೇನೆ.
*ಬಸ್ ಸ್ವಲ್ಪ ಸ್ವಲ್ಪ, ಅಲುಗಾಡಿ ಅಲುಗಾಡಿಯೇ, ಚಾಲಕನ ಅರಿವೆಗೆ ಬಾರದೆ ಮುಂದೆ ಹೋಗುತ್ತಿದ್ದರೂ ಹೆಚ್ಚು ಹಳ್ಳ ದಿಣ್ಣೆ ಸಿಕ್ಕರೆ ಪಲ್ಟಿ ಹೊಡೆಯುವುದರಲ್ಲಿಯೂ ಸಂಶಯವೇ ಇಲ್ಲ‌. ತಿಳಿದಿರಲಿ.
*ಬಸ್ ಬೂದಿತಿಟ್ಟು ಕೆರೆ ಏರಿ ಮೇಲೆ ಬಸ್ ಹೋಗುತ್ತಿದ್ದಾಗ ಸ್ವಲ್ಪ ಅಚಾನಕ್ ಆಗಿ ದಾರಿ ತಪ್ಪಿದರೂ ಕೆರೆಗೆ ಬೀಳುವುದರಲ್ಲಿ ಅನುಮಾನವೇ ‌ಇಲ್ಲ.
* ಒಟ್ಟಾರೆ ಬಸ್ಸಿನಲ್ಲಿದ್ದ ೨೫ ಕ್ಕೂ ಹೆಚ್ಚು ಜನರಿಗೆ ಮುಂದೆ ಆಗಬಹುದಾಗಿದ್ದ ಅನಾಹುತವನ್ನ ಅರಿತ ಬೇಗ್ ಅವರ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ ಎನ್ನಬಹುದು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು