ತಾಯಿ ಮತ್ತು ಮಕ್ಕಳ ಆರೈಕೆಗೆ ಗುಂಡ್ಲುಪೇಟೆಯಲ್ಲಿ ನೂತನ ಆಸ್ಪತ್ರೆ
ಚಾಮರಾಜನಗರ, ಡಿ. 13 ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 60 ಹಾಸಿಗೆಗಳ ಸಾಮಥ್ರ್ಯದ ನೂತನ ಆಸ್ಪತ್ರೆ ಕಟ್ಟಡವು ಡಿಸೆಂಬರ್ 14ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಲೋಕಾರ್ಪಣೆಯಾಗುತ್ತಿದೆ.
ನಬಾರ್ಡ್ ಯೋಜನೆಯಡಿ ಅಂದಾಜು ಮೊತ್ತ 1046.00 ಲಕ್ಷ ರೂ. ವೆಚ್ಚದಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಆವಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲಾಗಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವುದು, ಸುರಕ್ಷಿತವಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಿಕೆ, ಗಂಡಾಂತರ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ, ಶಿಶು ಹಾಗೂ ಬಾಣಂತಿ ಆರೈಕೆ, ರಕ್ತ ಹೀನತೆ ತಡೆಗಟ್ಟುವಿಕೆ, ತುರ್ತು ವಾಹನ ವ್ಯವಸ್ಥೆ 24*7 ಅವಧಿಯಲ್ಲಿಯೂ ಶಸ್ತ್ರಚಿಕಿತ್ಸೆಯನ್ನೂ ಒಳಗೊಂಡಂತೆ ವೈದ್ಯಕೀಯ ಔಷಧೋಪಚಾರ, ನುರಿತ ತಜ್ಞವೈದ್ಯರ ಸೇವೆ, ಡಯಾಗ್ನೋಸ್ಟಿಕ್ ಲ್ಯಾಬರೇಟರಿ ಸೇವೆ ನೀಡುವುದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣದ ಉದ್ದೇಶವಾಗಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಸ್ಕ್ಯಾನಿಂಗ್, ಪ್ರಯೋಗಾಲಯ, ಶಸ್ತ್ರಚಿಕಿತ್ಸೆ ಸೇವೆಗಳು ಲಭಿಸಲಿವೆ. ಮಕ್ಕಳ ತಜ್ಞರು, ಪ್ರಸೂತಿ ತಜ್ಞರ ಸೌಲಭ್ಯ ಕಲ್ಪಿಸಲಾಗುತ್ತದೆ. ರಕ್ತ ಶೇಖರಣ ಘಟಕ, ಪ್ರಸವಪೂರ್ವ ಮತ್ತು ಪ್ರಸವ ನಂತರದ ಚಿಕಿತ್ಸಾ ಸೌಲಭ್ಯ ಸಹ ನೀಡಲಾಗುತ್ತದೆ. ಪ್ರಸೂತಿ ಆರೈಕೆ ಮತ್ತು ಪ್ರೋತ್ಸಾಹಧನ ಲಭಿಸಲಿದೆ.
ನೂತನವಾಗಿ ನಿರ್ಮಾಣ ಮಾಡಲಾಗಿರುವ ಆಸ್ಪತ್ರೆ ಕಟ್ಟಡದ ಮೊದಲ ಅಂತಸ್ತಿನಲ್ಲಿ ಹೊರರೋಗಿಗಳ ವಿಭಾಗ, ಹಿರಿಯ ನಾಗರಿಕರ ಚಿಕಿತ್ಸಾ ಕೊಠಡಿ, ಕ್ಷ ಕಿರಣ, ಅಲ್ಟ್ರಾ ಸೌಂಡ್, ಔಷಧ ಉಗ್ರಾಣ, ವಿತರಣೆ, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಮೈನರ್ ಓಟಿ, ಹೊರರೋಗಿಗಳ ದಾಖಲಾತಿ ಕೊಠಡಿಗಳಿವೆ.
ಎಂಟು ಹಾಸಿಗೆ ಸಾಮಥ್ರ್ಯದ ವಿಶೇಷ ವಾರ್ಡ್‍ಗಳು, ಸಾಮಾನ್ಯ ವಾರ್ಡ್ ಬ್ಲಾಕ್, ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸೆ ವಿಭಾಗ ಇನ್ನಿತರ ಅಗತ್ಯ ವಿಭಾಗಗಳಿಗೆ ಪ್ರತೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.
ಡಿ ಗ್ರೂಪ್ ನೌಕರರ ವಸತಿ ಗೃಹಗಳು, ದಾದಿಯರು, ವೈದ್ಯರು, ಡಿ ಗ್ರೂಪ್ ನೌಕರರ ವಸತಿಗೃಹಗಳನ್ನು ಸಹ ನಿರ್ಮಿಸಲಾಗಿದೆ. ಎಲ್ಲಾ ಸಮುಚ್ಚಯದ ಒಟ್ಟು ವಿಸ್ತೀರ್ಣ 4314.25 ಚ.ಮೀ. ಆಗಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ರಾಮಚಂದ್ರ ಉಪಸ್ಥಿತರಿರುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಯಣ್ಣ, ಆರ್. ನರೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು). ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚï.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷರಾದ ಸಿ. ಗಿರೀಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ಎನ್. ನಟೇಶ್, ಉಪಾಧ್ಯಕ್ಷರಾದ ರೂಪ, ಪುರಸಭೆ ಉಪಾಧ್ಯಕ್ಷರಾದ ಜಿ.ಕೆ. ನಾಗೇಂದ್ರ ಹಾಗೂ ಪುರಸಭಾ ಸದಸ್ಯರಾದ ಸುರೇಶ್ ಮುಖ್ಯ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಮಗ್ರ ಆರೋಗ್ಯ ರಕ್ಷಣೆಯತ್ತ ಸರ್ಕಾರದ ಹೆಜ್ಜೆ ಎಂಬ ಆಶಯದೊಂದಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ ಆರೈಕೆಯ ಆಸ್ಪತ್ರೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ಎಚ್. ಪ್ರಸಾದ್ ಮನವಿ ಮಾಡಿದ್ದಾರೆ.
ಡಿ. 14ರಂದು ನಗರಕ್ಕೆ ಕಂದಾಯ ಸಚಿವರ ಭೇಟಿ
ಚಾಮರಾಜನಗರ, ಡಿ. 13 :- ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಡಿಸೆಂಬರ್ 14ರಂದು ಚಾಮರಾಜನಗರಕ್ಕೆ ಭೇಟಿ ನೀಡುವರು.ಮಧ್ಯಾಹ್ನ 3.15 ಗಂಟೆಗೆ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇೀರಿಯಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಕಂದಾಯ ಕಾನೂನು 94ಎ,ಬಿ,ಸಿ ಹಾಗೂ 94ಸಿಸಿ ಅರ್ಜಿಗಳ ವಿಲೇವಾರಿ ಬಗ್ಗೆ ಚರ್ಚಿಸುವರು. ಸಂಜೆ 5 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 14ರಂದು ಅರಿವು ಕಾರ್ಯಕ್ರಮ
ಚಾಮರಾಜನಗರ ಡಿ. 13 - ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 14ರಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಗಳ ಹಕ್ಕುಗಳು ಮತ್ತು ಸರ್ಕಾರದ ಸವಲತ್ತುಗಳ ಕುರಿತು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಗಂಗಾಧರಸ್ವಾಮಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಎಂ. ಶಾಂತಶ್ರೀ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಾಧನಾ ಸಂಸ್ಥೆ ನಿರ್ದೇಶಕರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಡಿ. 14ರಂದು ಸಾರಿಗೆ ಅದಾಲತ್
ಚಾಮರಾಜನಗರ, ಡಿ. 13 - ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಸಾರಿಗೆ ಅದಾಲತ್ ಅನ್ನು ಡಿಸೆಂಬರ್ 14ರಂದು ಮಧ್ಯಾಹ್ನ 3 ಗಂಟೆಗೆ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಸಾರಿಗೆ ಇಲಾಖೆಗೆ ಸಂಬಂಧಿಸಿದ ಕುಂದುಕೊರತೆ, ಸಮಸ್ಯೆಗಳ ಬಗ್ಗೆ ಚರ್ಚಿಸಬಹುದಾಗಿದ್ದು ಅದಾಲತ್ ಉಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿಗೆ ಕಡತ ಸಲ್ಲಿಸಲು ರೈತರಿಗೆ ಮನವಿ
ಚಾಮರಾಜನಗರ ಡಿ. 13 :- ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ (ಡ್ರಿಪ್) ಪ್ರಸಕ್ತ ಸಾಲಿಗೆ ಚಾಮರಾಜನಗರ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತಬಾಂಧವರಿಗೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿದೆ.ಕಾರ್ಯಾದೇಶ ಪಡೆದಿರುವ ರೈತರು ಸರ್ಕಾರದಿಂದ ಅನುಮೋದನೆಯಾಗಿರುವ ಕಂಪನಿ, ಅಧಿಕೃತ ಡೀಲರುಗಳಿಂದ ಐಎಸ್‍ಐ ಗುಣಮಟ್ಟದ ಪರಿಕರಗಳನ್ನು ಅಳವಡಿಸಿಕೊಂಡು ಆರ್ಥಿಕ ವರ್ಷ ಅಂತ್ಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೂಡಲೇ ಸಹಾಯಧನಕ್ಕಾಗಿ ಅರ್ಜಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಿದೆ.
ಇಲ್ಲವಾದಲ್ಲಿ ನೀಡಿರುವ ಕಾರ್ಯಾದೇಶ ತನ್ನಿಂತಾನೇ ರದ್ದಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 17ರಂದು ತಾಲೂಕು, ಗ್ರಾಮ ಪಂಚಾಯಿತಿ ಉಪಚುನಾವಣೆ : ಸಂತೆ, ಜಾತ್ರೆ ನಿಷೇಧ
ಚಾಮರಾಜನಗರ, ಡಿ. 13- ಜಿಲ್ಲೆಯ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 17ರಂದು ಉಪಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಡಿಸೆಂಬರ್ 17ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯ ಚಾಮರಾಜನಗರ, ಕೊಳ್ಳೇÀಗಾಲ ಹಾಗೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಯಾವುದೇ ಸಂತೆ ಹಾಗೂ ಜಾತ್ರೆ ನಡೆಸದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.
ಕೊಳ್ಳೇಗಾಲ : ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ
ವಿಕಲಚೇತನರಿಂದ ಅರ್ಜಿ ಆಹ್ವಾನಚಾಮರಾಜನಗರ, ಡಿ. 13 ಕೊಳ್ಳೇಗಾಲ ತಾಲೂಕಿನ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕಾತಿಗೆ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಪಿ.ಜಿ.ಪಾಳ್ಯ, ಗೋಪಿನಾಥಂ, ಶೆಟ್ಟಳ್ಳಿ, ಮೀಣ್ಯಂ, ಬೈಲೂರು, ದೊಡ್ಡಾಲತ್ತೂರು, ಚಿಕ್ಕಲ್ಲೂರು ಹಾಗೂ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಅಭ್ಯರ್ಥಿಗಳು 18 ರಿಂದ 45ರ ವಯೋಮಾನದವರಾಗಿದ್ದು ಆರೋಗ್ಯವಂತರಾಗಿರಬೇಕು. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿದ್ದು ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಸೇರಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಂಧರಿಗೆ, ಭಾಗಶ: ಶ್ರವಣದೋಷವುಳ್ಳವರಿಗೆ, ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಅಂಗವಿಕಲತೆಯು ಶೇ. 40ಕ್ಕಿಂತ ಹೆಚ್ಚು ಹಾಗೂ 75ಕ್ಕಿಂತ ಕಡಿಮೆ ಇದ್ದು ವೈದ್ಯರಿಂದ ವೈದ್ಯಕೀಯ ಹಾಗೂ ಗುರುತಿನ ಪ್ರಮಾಣ ಪತ್ರ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಿರಬೇಕು. ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು.
ನಿಗದಿತ ಅರ್ಜಿಯನ್ನು ಕೊಳ್ಳೇಗಾಲ ತಾಲೂಕು ಪಂಚಾಯಿತಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 22ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಪಿ. ಕವಿರತ್ನ (ಮೊಬೈಲ್ 9739598574), ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾ. ನಗರಸಭೆ : ಕಟ್ಟಡ, ಶೌಚಾಲಯ ಸ್ವಚ್ಚಗೊಳಿಸಿ ಛಾಯಾಚಿತ್ರ ಸಲ್ಲಿಸಲು ಮನವಿ
ಚಾಮರಾಜನಗರ, ಡಿ. 13 - ಚಾಮರಾಜನಗರ ನಗರಸಭೆ ವ್ಯಾಪ್ತಿಗೆ ಬರುವ ಶಾಲಾಕಾಲೇಜು ನಿರ್ವಾಹಕರು, ಹೋಟೆಲ್ ಮಾಲೀಕರು, ವಸತಿಗೃಹ ಮಾಲೀಕರು, ಖಾಸಗಿ ಆಸ್ಪತ್ರೆ ಮಾಲೀಕರು ಮತ್ತು ಮಾರುಕಟ್ಟೆ ಮಾಲೀಕರು ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಹಸಿ ಹಾಗೂ ಒಣ ಕಸಗಳೆಂದು ವಿಂಗಡಣೆ ಮಾಡಲು ಕಸದ ಬುಟ್ಟಿಗಳನ್ನು ಇಡಲು ಮತ್ತು ಶೌಚಾಲಯ ಸ್ವಚ್ಚತೆಯನ್ನು ಉತ್ತಮವಾಗಿ ನಿರ್ವಹಿಸುವ ಮಾಲೀಕರುಗಳಿಗೆ ಉತ್ತಮ ಶ್ರೇಯಾಂಕ ನೀಡಲು ನಿರ್ಧರಿಸಲಾಗಿದೆ.ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಚ ಸರ್ವೇಕ್ಷಣೆ 2018ರ ಸಮೀಕ್ಷೆಯನ್ನು ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ಕೇಂದ್ರ ಸರ್ಕಾರದ ತಂಡವು ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಶಾಲೆ, ಆಸ್ಪತ್ರೆ, ಹೋಟೆಲ್, ವಸತಿಗೃಹ, ಮಾರುಕಟ್ಟೆಗಳಲ್ಲಿ ಡಿಸೆಂಬರ್ 20ರ ಒಳಗೆ ನಗರಸಭೆ ಆರೋಗ್ಯ ನಿರೀಕ್ಷರು ಪರಿಶೀಲನೆ ಮಾಡಿ ಅಂಕ ನೀಡುವರು. ಆದುದರಿಂದ ಮಾಲೀಕರು ಕಸದ ವಿಂಗಡಣೆಗಾಗಿ ಎರಡು ಕಸದ ಬುಟ್ಟಿಗಳನ್ನು ಇಟ್ಟು ಕಟ್ಟಡದ ಆವರಣ ಮತ್ತು ಶೌಚಾಲಯವನ್ನು ಸ್ವಚ್ಚವಾಗಿಟ್ಟು ಛಾಯಾಚಿತ್ರವನ್ನು ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
No comments:
Post a Comment