Tuesday, 26 December 2017

ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ,ಡಿ.27 ರಂದು ನಗರದಲ್ಲಿ ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನಡಿ. 29ರಂದು ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಮಾನವ ದಿನಾಚಾರಣೆ (26-12-2017)

    ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಡಿ. 26 :- ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ  ಹಾಗೂ ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಿಲ್ಲೆಯ ಆಸಕÀ್ತ ಹಾಗೂ ಅರ್ಹ ಶಿಕ್ಷಕರು ವರ್ಗಾವಣೆ ಬಯಸಿದಲ್ಲಿ ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಡಿಸೆಂಬರ್ 29ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜನವರಿ 10ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ. ಜನವರಿ 12ರಂದು ಅರ್ಜಿ ಸಲ್ಲಿಸಿದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ನೀಡಿ ಸ್ವೀಕೃತಿ ಪಡೆಯಬೇಕು. ಜನವರಿ 19ರಂದು ಕೋರಿಕೆ ವರ್ಗಾವಣೆ ಬಯಸಿರುವ ಶಿಕ್ಷಕರ ಆದ್ಯತಾ ಪಟ್ಟಿಯನ್ನು ವೆಬ್ ಸೈಟïನಲ್ಲಿ ಪ್ರಕಟಿಸಲಾಗÀುವುದÀು. ಜನವರಿ 24ರಂದು ಕೋರಿಕೆ ಹಾಗೂ ಪರಸ್ಪರ ವರ್ಗಾವಣೆ ಸಂಬಂಧ ತಾತ್ಕಾಲಿಕ ಆದ್ಯತಾ ಪಟ್ಟಿಯ ಕುರಿತು  ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನ.
ಫೆಬ್ರವರಿ 6ರಂದು ಕೋರಿಕೆ ವರ್ಗಾವಣೆ ಬಯಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪಟ್ಟಿಯನ್ನು (ಘಟಕದ ಹೊರಗೆ) ಪ್ರಕಟಿಸಲಾಗುವುದು. ಫೆಬ್ರವರಿ 8 ರಿಂದ 12ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಘಟಕದ ಒಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಗುವುದು. ಫೆಬ್ರವರಿ 21 ರಿಂದ 24ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ ಒಳಗಿನ ಅಂತರ ಜಿಲ್ಲಾ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಫೆಬ್ರವರಿ 25 ರಿಂದ 28ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅಂತರ ವಿಭಾಗ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗುವುದು. ಮಾರ್ಚ್ 1 ರಿಂದ 3ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ನೋಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಡಿ. 27ರಂದು ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಡಿ. 26- ಚಾಮರಾಜನಗರ ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಡಿಸೆಂಬರ್ 27ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಎನ್‍ಜೆವೈ ಉತ್ತವಳ್ಳಿ, ಮೂಡ್ನಕೂಡು, ಎನ್‍ಜೆವೈ ಹೆಗ್ಗವಾಡಿ, ಮುಕಡಹಳ್ಳಿ, ತಮ್ಮಡಹಳ್ಳಿ, ಉಡಿಗಾಲ, ದೇವಲಪುರ, ಕಲ್ಪುರ ಹಾಗೂ ನಂಜದೇವನಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
 ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಡಿ. 29ರಂದು ಜಿ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಡಿ. 26 - ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಡಿ. 28ರಂದು ಹನೂರಿನಲ್ಲಿ ಜನಸಂಪರ್ಕ ಸಭೆ

ಚಾಮರಾಜನಗರ, ಡಿ. 26  ಕೊಳ್ಳೇಗಾಲ ತಾಲೂಕು ಹನೂರು ಹೋಬಳಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿಸೆಂಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ನೀಡಿ ಜನಸಂಪರ್ಕ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದÉ.

ಮಹಿಳಾ ಸಂಸ್ಕøತಿ ಉತ್ಸವ : ಕಲಾ ಪ್ರದರ್ಶಕರಿಂದ ಮಾಹಿತಿ ಆಹ್ವಾನ
ಚಾಮರಾಜನಗರ, ಡಿ. 26- ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮಹಿಳೆಯರನ್ನು ಸಾಂಸ್ಕøತಿಕವಾಗಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಜನವರಿ 20 ಹಾಗೂ 21ರಂದು ಕೊಳ್ಳೇಗಾಲ ಪಟ್ಟಣದ ಎಂಜಿಎಸ್‍ವಿ ಕಾಲೇಜು ಆವರಣದಲ್ಲಿ ಮಹಿಳಾ ಸಂಸ್ಕøತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
ಜಿಲ್ಲೆಯ ಆಸಕ್ತ ಮಹಿಳಾ ಕಲಾವಿದರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉತ್ಸವದಲ್ಲಿ ಭಾಗವಹಿಸಿ ಅವರ ಕಲೆಯನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಪ್ರದರ್ಶಿಸುವ ಕಲಾ ಪ್ರಕಾರ ಹಾಗೂ ತಂಡದ ಸದಸ್ಯರ ಸವಿವರ ಮಾಹಿತಿಯನ್ನು ಜನವರಿ 4ರಂದು ಸಂಜೆ 5 ಗಂಟೆಯೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನೊಂದಾಯಿಸಿಕೊಳ್ಳಲು ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯನ್ನು ಪ್ರದರ್ಶಿಸುವ ಬಗ್ಗೆ ನಂತರ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಡಿ. 29ರಂದು ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಮಾನವ ದಿನಾಚಾರಣೆ

ಚಾಮರಾಜನಗರ, ನ. 09 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.  ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ರಾಷ್ಟ್ರ ಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಯದ ಕುಲಪತಿಗಳಾದ ಪ್ರೊ. ಪದ್ಮಶೇಖರ್ ಅವರು ವಿಶೇಷ ಉಪನ್ಯಾಸ ನೀಡುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಷ್ಟ್ರ ಕವಿ ಕುವೆಂಪು ಅವರ ಕುರಿತಂತೆ ಎಸ್.ಜಿ. ಮಹಾಲಿಂಗಸ್ವಾಮಿ ಮತ್ತು ತಂಡ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಮೈಸೂರಿನ ಜಿ. ಗಂಗಾಧರ್ ನಿರ್ದೇಶನದಲ್ಲಿ, ಮಂಡ್ಯದ ಸದ್ವಿದ್ಯಾ ತಂಡವು ಕುವೆಂಪು ಅವರು ವಿರಚಿತ ಜಲಗಾರ ನಾಟಕವನ್ನು ಅಭಿನಯಿಸಲಿದೆ.

ಡಿ. 27ರಂದು ನಗರದಲ್ಲಿ ಸಾಧಕರೊಂದಿಗೆ ಸಂವಾದ, ಕವಿಗೋಷ್ಠಿ ಕಾರ್ಯಕ್ರಮ

ಚಾಮರಾಜನಗರ, ಡಿ. 21 - ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜೆಎಸ್‍ಎಸ್ ಮಹಿಳಾ ಕಾಲೇಜು ಇವರ ಸಹಯೋಗದೊಂದಿಗೆ ಡಿಸೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಡಾ. ಕೃಷ್ಣಮೂರ್ತಿ ಹನೂರು ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎ.ಜಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಜೆಎಸ್‍ಎಸ್ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಧಕರಾದ ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರೂ ಆದ ಪ್ರೊ. ಮಲೆಯೂರು ಗುರುಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿ. ನಾಗಣ್ಣ ಅಧ್ಯಕ್ಷತೆ ವಹಿಸುವರು. ಕವಿ ಸೋಮಶೇಖರ ಬಿಸಲ್ವಾಡಿ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಎಂ. ಪುಟ್ಟತಾಯಮ್ಮ, ಚಾ.ಶ್ರೀ. ಜಗದೀಶ್, ಗುಂ.ಪು. ದೇವರಾಜು, ಗು.ಬಿ. ರಮೇಶ್, ಎನ್. ಮಹೇಶ್, ಡಾ. ಕೆ. ಲಕ್ಷ್ಮಿ ಪ್ರೇಮಕುಮಾರ್, ಸಿ. ಶಂಕರ್ ಅಂಕನಶೆಟ್ಟಿಪುರ, ಗಿರೀಶ್ ಹರವೆ, ಸಿ. ಸಿದ್ದರಾಜು, ಬಾಳಗುಣಸೆ ಮಂಜುನಾಥ, ಬಿ.ಎಸ್. ಗವಿಸ್ವಾಮಿ, ಮದ್ದೂರು ದೊರೆಸ್ವಾಮಿ, ಜಿ.ಡಿ. ದೊಡ್ಡಯ್ಯ, ನಂಜುಂಡಸ್ವಾಮಿ ಹರದನಹಳ್ಳಿ, ಎಂ. ರಾಜೇಂದ್ರ ಪ್ರಸಾದ್, ಕಾಳಿಂಗಸ್ವಾಮಿ ಸಿದ್ದಾರ್ಥ ಹಾಗೂ ನಾಟಕ ಭಾರ್ಗವ ಕೆಂಪರಾಜು ಆಹ್ವಾನಿತ ಕವಿಗಳಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡಿ.27 ರಂದು ನಗರದಲ್ಲಿ  ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ

      ಚಾಮರಾಜನಗರ ನ.25.- ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಡಿಸೆಂಬರ್ 27 ರಂದು ಸಂಜೆ 6.30  ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕ, ಗಾಯಕಿಯರು ಭಾಗವಹಿಸಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ನಾದಮಯ ಈ ಲೋಕವೆಲ್ಲಾ, ಕರೆದರೂ ಕೇಳದೆ, ಏರಿ ಮೇಲೆ ಏರಿ ಮೇಲೆ, ನನ್ನದೆಯ ಕೋಗಿಲೆಯ, ಕುಲದಲ್ಲಿ ಕೀಳ್ಯಾವುದೋ, ನಾನಿರುವುದೆ ನಿಮಗಾಗಿ, ಎಲ್ಲೆಲ್ಲಿ ನೋಡಲಿ ನಿನನ್ನೆ ಕಾಣುವೇ, ಯಾರೇ ನೀನು ರೋಜಾ ಹೂವೆ, ತನಂ ನಂ ತನಂ ನಂ, ಬೊಂಬೆ ಹೇಳತೈತೆ, ಊರಕಣ್ಣು ಮಾರಿಕಣ್ಣು, ಬೆಳ್ಳಿ ಮೂಡಿತು, ಈ ಶತಮಾನದ ಮಾದರಿ ಹೆಣ್ಣು, ಸೇರಿದಂತೆ ಇನ್ನು ಮುಂತಾದ ಪ್ರಸಿದ್ಧ ಚಲನಚಿತ್ರಗೀತೆಗಳನ್ನು ಗಾಯಕರು ಹಾಡಲಿದ್ದಾರೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ. ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು.
      ಮೈಸೂರಿನ ಹೆಸರಾಂತ ಸುನಿತ ಚಂದ್ರಕುಮಾರ್ ಅವರ ನಿರ್ವಹಣೆಯಲ್ಲಿ   ರಘುಲೀಲಾ ಸಂಗೀತಾ ಮಂದಿರ ಕಲಾವಿದರು  ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
 ಕಲಾವಿದರಾದ ಶ್ರೇಯಾ ಕೆ.ಭಟ್, ಸಿಂಚನ ಸಿ, ವಸುಧಾಶಾಸ್ತ್ರಿ, ಅಕ್ಷರ ಪ್ರಸಾದ್, ನವನೀತ ಕೃಷ್ಣ, ಕಾರ್ತಿಕ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
   ವಾದ್ಯ ವೃಂದದಲ್ಲಿ ಮ್ಯಾಂಡೋಲಿನ-ಸಿ. ವಿಶ್ವನಾಥ್, ಕೊಳಲು-ಸಮೀರ್‍ರಾವ್, ಗಿಟಾರ್-ಪ್ರದೀಪ್ ಕಿಗ್ಗಾಲ್, ಕೀಬೋರ್ಡ್-ಪುರುಷೋತ್ತಮ್, ತಬಲ-ಆತ್ಮಾರಾಮ್, ರಿದಮ್‍ಪ್ಯಾಡ್-ವಿನಯ್ ರಂಗಧೋಳ್ ಇರಲಿದ್ದಾರೆ.  ಭಾರತಿ ಕುಲಶೇಖರ್ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
   
      ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.













No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು