Saturday, 30 December 2017

ನೀವು ಬಳಸುವ ಮಾಸ್ಕ್ ಬಗ್ಗೆ ಎಚ್ಚರ , ಕಳಪೆಗೆ ಮೋರೆ ಹೋಗದಿರಿ..? ಬಿಲ್ ಕೊಡದೆ ವಂಚಿಸುತ್ತಿದ್ದಾರಾ.. ದೂರು ಸಲ್ಲಿಸಿ.., ಗ್ರಾಹಕ ಎಚ್ಚರ ಎಚ್ಚರ.....

ಮೆಡಿಕಲ್ ಸ್ಟೋರ್ಸ್ ಅಲ್ಲಿ ಏನೇಲ್ಲ ಮಾರಾಟವಾಗುತ್ತದೆ ಗೊತ್ತಾ.? ...ಶೀಘ್ರದಲ್ಲೇ ನಿರಿಕ್ಷೀಸಿ.. ಬಿಗ್ ಶಾಕ್.... ಸುದ್ದಿ ಕೊಡ್ತೇವೆ.ಹೊಸ ವರ್ಷಕ್ಕೆ ..... ಕಾದು ನೋಡಿ ಎಂಬ ಶೀರ್ಷಿಕೆ ಹಾಕಲಾಗಿತ್ತು. ಬಹುತೇಕರು ಅದೇನು ಅಂತ ನೋಡುತ್ತಿದ್ದರು. ಕೇಳುತ್ತಿದ್ದರು. ಆದರೆ ನೀವು ತೆಗೆದುಕೊಳ್ಳೋ ಮಾಸ್ಕ್ ಎಷ್ಟರ ಮಟ್ಟಿಗೆ ಆರೋಗ್ಯ ಕಾಪಾಡುತ್ತದೆ ಎಂಬುದು ಬಹುತೇಕ ನಮಗೆ ಗೋತ್ತೆ ಇಲ್ಲ..  ಆದರೂ ಮಾಹಿತಿ  ಹೇಳ್ತೇವೆ. ಕೇಳಿ ಆದರೆ ನಿಮ್ಮ ಸ್ನೇಹಿತರಿಗೆ ಹೇಳಿ. 


ಬಹುತೇಕ ಕಳಪೆ ಗುಣಮಟ್ಟದ ಪದಾರ್ಥ  ಅದರಲ್ಲೂ (.......???................???), ಮಾರಾಟವಾಗುತ್ತಿದ್ದರೂ ಯಾವೊಬ್ಬ ಅದಿಕಾರಿ ತಲೆ ಕೆಡಿಸಿಕೊಂಡಿಲ್ಲ. ಕೇಳಿದರೆ ನನ್ನ ವ್ಯಾಪ್ತಿಯಲ್ಲ .. ಎನ್ನುವರರೇ ,ಇಲ್ಲಿ ಸಿಗರೇಟ್ ,ಎಣ್ಣೆ ಮಾರಾಟ ಮಾಡಿದರೂ ಕೇಳಬೇಡಿ............... ಎನ್ನಲಾಗಿತ್ತು ಆದರೆ ಖಾಲಿ ಬಿಟ್ಟ ಜಾಗವೇ ನಾವು ಮುಖಕ್ಕೆ ಹಾಕೋ   .............                              ಮಾಸ್ಕ್......

ಚಾಮರಾಜನಗರ ಈಗಾಗಲೇ ಧೂಳುಮಯ ಎತ್ತ ನೋಡಿದರೂ ಮಂಜಿನಂತೆ ಪಸರಿಸೋ ದೂಳು, ಧೂಳು ನಿಗ್ರಹಕ್ಕೆ ಜನ ಸಾಮಾನ್ಯ ದಿನ ಹರ ಸಾಹಸ. ಹೀಗಿರುವಾಗ ಮೆಡಿಕಲ್ಸ್ ಸ್ಟೋರ್ಸ್ ಅಲ್ಲಿ ಬಹುಶಃ ನಿಯಮದ ಪ್ರಕಾರ  ಎಂದರೆ ಈ ಮಾಸ್ಕ್ ಕಳಪೆ ಎನ್ನಬಹುದಾಗಿದೆ. ಇದನ್ನು ಪಡೆಯಲು ನಡೆಸಿದ ಕಾರ್ಯಾಚರಣೆ ಹೀಗಿದೆ ನೋಢಿ...
 ಪೋಲಿಸ್ ಸಿಬ್ಬಂದಿಯೊಬ್ಬರು ತಾವು ದೂಳಿನ ಗೋಳಿನಿಂದ ತಪ್ಪಿಸಿಕೊಳ್ಳಲು ಅಂಗಡಿಯೊಂದರಲ್ಲಿ ಮಾಸ್ಕ್ ಖರೀದಿ ಮಾಡಿದ್ದಾರೆ. ಆದರೆ ಅವರು ಪಡೆದ ಮಾಸ್ಕ್ ಗೆ ಬಿಲ್ ಕೇಳಿದರೆ ಕೊಡಲಿಲ್ಲ.. ಹೋಗಲಿ ಬಿಡಿ ಎಂದು ಮುಂದೆ ಹೋಗು ಹೋಗುತ್ತದೆ ಬಿಗ್ ಶಾಕ್... ಅದೇನು ಅಂತಿರಾ....ಉತ್ಪಾದನಾ ದಿನಾಂಕ... 2018 ಎಲ್ಲಿ ಮುದ್ರಿತವಾಗಬೇಕಿದ್ದ ಮಾಸ್ಕ್ 2017 ನವೆಂಬರ್ ಅಂತ್ಯ, ಡಿಸೆಂಬರ್ ಆರಂಭದಲ್ಲಿ ಮಾರಾಟವಾಗುತ್ತಿರುವುದು...
ಹೇಳಿ ಕೇಳಿ ಮೆಡಿಕಲ್ಸ್ ಸ್ಟೋರ್ ಉತ್ಪಾದನಾ ದಿನಾಂಕ, ಅವದಿ ಮೀರಿದ ದಿನಾಂಕ ನೋಢೋದು ಸಹಜ. ಆದರೆ ಈ ಮಾಸ್ಕ್ ಗೂ ಅವದಿ ಮೀರಿದ ದಿನಾಂಕ  ಇರೋಲ್ಲ  ಸರಿ, ಉತ್ಪಾದನಾ ದಿನ ಇರೋಲ್ವಾಂದ್ರೆ ಇದೆ.. ಮುಂದಿನ ವರ್ಷದ್ದು 2018 ರದ್ದು. ಪ್ರಸ್ತುತ ಸ್ವಾಮಿ ಈಗ 2017 ಡಿಸೆಂಬರ್ ಅಂದ್ರೆ ಮಾಸ್ಕ್ ಬೇಕೋ.. ಬೇಡ್ವೋ ಅಂತಾರೆ.. ಎಲ್ಲಿ ಹೋಗಿದ್ದೀರಾ ಔಷದ ನಿಯಂತ್ರಕ ಅದಿಕಾರಿಗಳೆ... ನೀವು ನಿದ್ದೆ ಮಾಡ್ತಿದೀರಾ ಅನ್ನೋದು ಇದ್ಕಿಂತ ಬೇಕಾ.. ಇನ್ನ ತೆರಿಗೆ ಕಟ್ಟಬೇಕಾಗುತ್ತದೆ  ಎಂದೋ ಏನೋ ರಶೀದಿ ಕೋಡೋದೆ ಇದ್ದರೆ ಗ್ರಾಹಕ ನಿಯಮದಡಿ ವಂಚನೆ ಎಂಧೆ ಪರಿಗಣಿಸಲ್ಪಡುತ್ತದೆ ನೆನಪಿರಲಿ...
 ಮಾಸ್ಕ್ ಪಡೆದ ಗ್ರಾಹಕ ಅದನ್ನು ಹಿಡಿದು ಔಷದ ನಿಯಂತ್ರಕರ ಸಹಾಯಕ ಅದಿಕಾರಿ ಬಳಿ ದೂರು ಕೊಟ್ಟರೆ ಮೌನ  ನಮ್ಮ ವ್ಯಾಪ್ತಿಗೆ ಬರೋಲ್ಲ ಎನ್ನವು ಉಡಾಫೆ ಆದರೆ ಸಿಗರೇಟ್, ಎಣ್ಣೆ, ಸೀಮೆಎಣ್ಣೆ ಮಾರಿದರೂ ಕೇಳಬೇಡ್ರಿ.. ನಿಮಗೆ ಗೊತ್ತು ನನ್ನ ಕೆಸಲ ಅನುಮತಿ ನೀಡೋದಷ್ಟೆ ಅಲ್ಲ... ..................................ಕೆಲಸವೂ ಇದೆ ಎನ್ನೋದನ್ನ ಮರೆತೀದ್ದೀರಾ ಅನ್ನೋದ್ನ ನೇರವಾಗಿ ಹೇಳ್ತೀನಿ ನಿಮ್ಮ ಪಾರ್ಟ್ ಆಫ್ ನೇಚರ್ ವರ್ಕ್ ಏನು ಅನ್ನೋ ಪ್ರಶ್ನೆಗೆ ಉತ್ತರ ನೀಡ್ತೀರಾ ?

ಗ್ರಾಹಕರ ದೂರಿನಲ್ಲಿ ಏನಿದೆ.: -ಇಲಾಖೆ ಅದಿಕಾರಿಯ ನಾಮಾಂಕಿತದಲ್ಲಿ ಪ್ರಾರಂಭವಾದ ಪತ್ರ

ಮಾನ್ಯರೇ,
  ವಿಷಯ: ಕೆಲವು ಮೆಡಿಕಲ್ ಸ್ಟೋರ್ಸ್‍ಗಳಲ್ಲಿ ಕಳಪೆ ಗುಣಮಟ್ಟದ ಮೂಗಿಗೆ ಧರಿಸುವ ಮಾಸ್ಕ್ ಮಾರಾಟದ ಬಗ್ಗೆ ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಾಮರಾಜನಗರ -------------------------------------------- ಕಳಪೆ ಗುಣಮಟ್ಟದ ಮಾಸ್ಕ್ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಅದು ಎಷ್ಟರ ಮಟ್ಟಿಗೆ ಗುಣಮಟ್ಟ ಇದೆ ಎಂದರೆ ನಂಬಲು ಅಸಾದ್ಯವಾಗಿದೆ. 2018  ರ ಜನವರಿ ಮಾಹೆಯಲ್ಲಿ ತಯಾರಾದ ಮಾಸ್ಕ್ ಈಗ 2017 ರ ಡಿಸೆಂಬರ್ ಮಾಹೆಯಲ್ಲಿ ಮಾರಾಟವಾಗುತ್ತಿರುವುದು ಅನುಮಾನ ಮೂಡಿಸುತ್ತಿದೆ. ಆ ಮಾಸ್ಕ್ ಯಾವ ಕಂಪನಿಯದು , ಉತ್ಪಾದನೆಯ ದಿನಾಂಕ, ಬ್ಯಾಚ್ ಸಂಖ್ಯೆ, ಮುಕ್ತಾಯದ ದಿನ ಎಲ್ಲವೂ ನಮೂದಾಗಬೇಕೆಂಬ 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆ ನಿಯಮದಲ್ಲಿದ್ದರೂ   ಖighಣ (guಚಿಡಿಜ) bಟಚಿಛಿಞ ಠಿoಟಟuಣioಟಿ mಚಿsಞ  ಎಂಬ ಕಂಪನಿಯ ಮಾಸ್ಕ್ ಮಾರಾಟವಾಗುತ್ತಿದೆ. ಇಲ್ಲಿ ಎಲ್ಲಾ ನಿಯಮಗಳು ಉಲ್ಲಂಘನೆಯಾಗಿದ್ದು  ಇದರ ಮುಖ ಬೆಲೆ 45 ರೂಪಾಯಿ ಇದ್ದು ಅದನ್ನು 40 ರೂಪಾಯಿಗೆ ಮಾರಾಟ ಮಾಢುತ್ತಿದ್ದಾರೆ. ಒಟ್ಟಾರೆ  1986 ರ ಗ್ರಾಹಕ ಸಂರಕ್ಷಕಾ ಕಾಯ್ದೆಯಡಿ ಗ್ರಾಯಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಇದರ ಸಾಮಾಥ್ರ್ಯ ಹೇಗಿದೆ , ಉತ್ಪಾದನಾ ದಿನಾಂಕ, ಮುಕ್ತಾಯದ ದಿನಾಂಕ ಯಾವಾಗ ಎಂಬುದನ್ನು ತಾವು ಖಾತ್ರಿ ಪಡಿಸಬೇಕಾಗಿದೆ. ಕಳಪೆ, ಉತ್ತಮ ಗುಣಮಟ್ಟದ ಪರಿಶೀಲನೆ ಮಾಡಿ ತಪಾಸಣಾ ವರದಿಯನ್ನು  ಎರಡು ಮೂರು ದಿನದಲ್ಲಿ ಸಿದ್ದಪಡಿಸಿ ವರದಿ ನೀಡಲು ಕೋರುತ್ತೇವೆ. ನೀವು ನೀಡುವ ಅಂತಿಮ ವರದಿಯೂ  ಗ್ರಾಹಕ ಸಂರಕ್ಷಣಾ ನ್ಯಾಯಾಲಯದಲ್ಲಿ ಸಾಕ್ಷಿಯೂ ಆಗಬಹುದು ಎಂದು ತಿಳಿಸಲು ಇಚ್ಚಿಸುತ್ತೇನೆ ಎಂದು 5-12-2017 ರಂದು ದೂರು ನೀಡಿದರ ನೋ ಆನ್ಸರ್...ಇದನ್ನು ಲಿಖಿತವಾಗಿ ಉತ್ತರ ಗ್ರಾಹಕ ನ್ಯಾಯಾಲಯದಲ್ಲಿ ದಾಖಲು ಮಾಡಲು ಬೇಕಾದರೆ ಅಗತ್ಯ ಎಂದು ............... ಅರ್ಜಿಯನ್ನ 26-12-2017 ರಂದು ಅವರಿಗೆ ಸಲ್ಲಿಸಲಾಗಿದೆ. ....

ಮಾಸ್ಕ್ ನ ಗುಣಮಟ್ಟ ಎಷ್ಟು ದಿನ? ಅನ್ನೋದು ಕೇವಲ ವೈದ್ಯರಿಗೆ ಗೊತ್ತು. ಆದರೆ 40, 50 ಕೊಟ್ಟು ಅದನ್ನು ಬಟ್ಟೆ ಹೊಗೆಯುವ ರೀತಿ ಹೊಗೆದು ಹಾಕಿಕೊಂಡರೆ ಆರೋಗ್ಯಕ್ಕಿಂತ ಅನಾರೋಗ್ಯವೇ ಜಾಸ್ತಿ ನೆನಪಿರಲಿ....... 

ಹೆಣ್ಣು ಮಕ್ಕಳು ಬುದ್ದಿವಂತರು: ಮಾಸ್ಕ್ ಬಳಸುವುವವರ ಸಂಖ್ಯೆ ವಿರಳ, ಹಾಗಾಂತ ಅವರು ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಅಂತಲ್ಲ, ಮಾಸ್ಕ್ ಬದಲು ಸ್ಕಾರ್ಪ್ ಬಳಸುತ್ತಿರುವುದು ಮೂಗಿಗೆ ಧೂಳು ಹೋಗುವುದು ಕಡಿಮೆ ಆದರೆ ಅನ್ಯರು ಮಾಸ್ಕ್ ಗೆ ಮೋರೆ ಹೋಗಿ ಕಾಸು ಕೊಟ್ಟು ಅನಾರೋಗ್ಯವನ್ನು ಪಡೆಯುತ್ತಿದ್ದಾರೆ ಎನ್ನಬಹುದು.



ಬೇರೆ ಮಾರ್ಗ.... ಸೂಕ್ತ ಅಂಗಡಿಗಳಲ್ಲಿ ಸಿಗುವ ಬಟ್ಟೆ,  ಸ್ಕಾರ್ಪ್  ಅಥವಾ ಕರವಸ್ತ್ರ ನಿಮಗೆ ಸೂಕ್ತ ..ಕಾರಣ ಇದನ್ನು ಪದೆ ಪದೆ ಹೊಗೆದು ಮೂಗಿಗೆ ಕಟ್ಟಿಕೊಂಡು ಬಳಸಬಹುದು. ಆದರೆ ನೀವು ಹಾಕಿರುವ ಮಾಸ್ಕ್ ಟೈರ್ ಸುಟ್ಟ ವಾಸನೆಯೂ ಬರಬಹುದು ನೆನಪಿರಲಿ..ಗಮನಿಸಿ.. ಮುಂದೆ ಆರೋಗ್ಯ ದೌರ್ಬಾಗ್ಯ ಖಂಡಿತ.


ಏ..ಗ್ರಾಹಕ ರಶೀದಿ ಇಲ್ಲದೇ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣವನನ್ನ ದಾಖಲಸಿಬಹುದು ....ಕೆಲವರು ಬುದ್ದಿವಂತರು, ಬಿಲ್ ಕೊಟ್ಟರೆ ತಾನೆ ಪ್ರಕರಣ ದಾಖಲಿಸೋದು ಕೊಡದೇ ಇದ್ದರೆ ಹೇಗೆ ಮಾಡ್ತಾರೆ ಅನ್ನೋದು ಕೆಲವರ ವಾದ.. ರಶೀದಿ ಇಲ್ಲದೆ ಪ್ರಕರಣ ದಾಖಲಿಸಬಹುದು.ಪ್ರಕರಣ ದಾಖಲಸಿ ನ್ಯಾಯ ಪಡೆದುಕೊಳ್ಳುವ ಹಂಬಲ ಶಕ್ತಿ ನಿಮಗಿದ್ದರೆ... ಹೆಚ್ಚಿನ ಮಾಹಿತಿಗಾಗಿ ನ್ಯಾಯಾಲಯದ ರಸ್ತೆಯಲ್ಲಿರುವ ಗ್ರಾಹಕ ನ್ಯಾಯಾಲಯದ ಬಳಿ ಹೋಗಿ ಆಡಳಿತಾದಿಕಾರಿಗಳ ಸಲಹೆ ಪಡೆದು ಪ್ರಕರಣ ದಾಖಲಿಸಿ...


ಅಂಗಡಿಯಲ್ಲಿ ಔಷದವಿದ್ದು ಇಲ್ಲ ಎಂದು ಉತ್ತರ ನೀಢಿದರೂ, ಕಳಪೆ ಮಟ್ಟದ ಪದಾರ್ಥ ಕೊಟ್ಟರೂ, ಅವದಿ ಮೀರಿದ ಔಷದ ಕೊಟ್ಟರೂ, ರಶೀದಿ ಕೊಡದೇ ಇದ್ದರೂ ಅಕ್ಷಮ್ಯ ಅಪರಾದ... ಗ್ರಾಹಕ  ಎಚ್ಚರ

x

ಹೊಸ ವರ್ಷ ಪಾರ್ಟಿ ಆರೆಂಜ್ ಮಾಢಿರೊವ್ರೆ ಜೋಪಾನ.. ನಿಮಗಿದೆ ಟರ್ಮ್ ಆಫ್ ಕಂಡಿಷನ್ಸ್......... ವಿಶೇಷ.....

ಹೊಸ ವರ್ಷದ ಸಡಗರದಲ್ಲಿರುವ, ಕಾರ್ಯಕ್ರಮ  ಆಯೋಜಕರೆ ಇದೆ. ನಿಮಗೆ ನೀತಿ ನಿಯಮಗಳು.. ಜೋಪಾನ... ತಪ್ಪಿದರೆ ನೀವೇ ಹೊಣೆ......ವೀರಭದ್ರಸ್ವಾಮಿ. ಎಸ್.


.

2018 ನೇ ಹೊಸ ವರ್ಷ ಸಂಭ್ರಮಾಚರಣೆ ಸಂಬಂಧ ದಿನಾಂಕ 31.12.2017 ರಾತ್ರಿ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ನಡೆದುಕೊಂಡು ಹೊಸ ವರ್ಷಾಚರಣೆಯು ಯಶಸ್ಚಿಯಾಗಿ ಮತ್ತು ಶಾಂತ ರೀತಿಯಿಂದ ಆಚರಿಸುವ ಸಂಬಂಧ ಸಾರ್ವಜನಿಕರು/ಆಯೋಜಕರು ಅನುಸರಿಸಬೇಕಾದ ಅಥವಾ ಅನುಸರಿಸಬಾರದ ಕ್ರಮಗಳ (ಆಔ’s & ಆಔಓಖಿ’s) ಬಗ್ಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.


ಪೊಲೀಸ್ ಇಲಾಖೆ ವಿದಿಸಿರುವು ಷರತ್ತುಗಳೇನು.?

ಆಯೋಜಕರು / ಸಾರ್ವಜನಿಕರು ಮಾಡಬೇಕಾದ ಕ್ರಮಗಳು 


1 ಜಿಲ್ಲೆಯ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು, ಸಂಘಟನೆಗಳು ಮತ್ತು ಸಂಘಗಳು, ಹಮ್ಮಿಕೊಳ್ಳುವ ಔತಣಕೂಟ / ಸಮಾರಂಭಗಳನ್ನು ದಿನಾಂಕ 31.12.2017 ರಂದು ರಾತ್ರಿ ನಿಗಧಿತ ಸಮಯದೊಳಗೆ ಮುಕ್ತಾಯಗೊಳಿಸುವುದು.
2 ಹೊಸ ವರ್ಷದ ಔತಣಕೂಟ/ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯುವುದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳುವುದು ಹಾಗೂ ಈ ಸಂಬಂಧ ಜರುಗುವ ಎಲ್ಲಾ ಆಗು ಹೋಗುಗಳಿಗೂ ಅವರುಗಳೇ ಜವಾಬ್ದಾರರಾಗಿರುತ್ತಾರೆ.
3 ಹೋಟೆಲ್/ಭೋಜನಗೃಹ/ಕ್ಲಬ್‍ಗಳಿಗೆ ಅವರುಗಳೇ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಲಾಗಿದೆ.  ಸಿಸಿಟಿವಿ ಅಳವಡಿಸದಿದ್ದಲ್ಲಿ ತಪ್ಪದೇ ಇಂದೇ ಅಳವಡಿಸಲು ಕ್ರಮವಹಿಸುವುದು.
4 ಹೋಟೆಲ್/ರೆಸಾರ್ಟ್/ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ಕನಿಷ್ಠ ಒಂದು ವಾಸಸ್ಥಳವನ್ನು ದೃಢೀಕರಿಸುವ ದಾಖಲೆಯೊಂದಿಗೆ ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸುವುದು.
5 ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್/ಬಟ್ಟಿಂಗ್ಸ್/ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಕಾಯ್ದುಕೊಳ್ಳುವುದು.
6 ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೆಲು ಧ್ವನಿಯಲ್ಲಿ ಬಳಕೆ ಮಾಡುವುದು, ನಿಗಧಿತ ಸಮಯದಲ್ಲಿಯೇ ಕಾರ್ಯಕ್ರಮವನ್ನು ಮುಗಿಸುವುದು.
7 ವಿದೇಶಿಯರು ಹೋಟೆಲ್/ ರೆಸಾರ್ಟ್/ಹೋಮ್‍ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸುವುದು.
8 ಹೊಸವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಅಸ್ಥಿಪಾಸ್ಥಿಗೆ ಹಾನಿ ಉಂಟು ಮಾಡದಂತೆ ಆಚರಣೆ ಮಾಡುವುದು.
10 ಅಬಕಾರಿ ಕಾಯ್ದೆ ಅಡಿಯಲ್ಲಿ, ಪರವಾನಗಿ ಅನ್ವಯ, ಮದ್ಯ ಮಾರಾಟ ವೇಳೆಯನ್ನು ಅನುಸರಿಸುವುದು.
11 ಮಹಿಳೆಯರು/ಹೆಣ್ಣು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸುವುದು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವುದು.
12 ಆಯೋಜಕರು ಈ ಸಂಬಂಧ ನಡೆಸುವ ಸಮಾರಂಭಗಳನ್ನು ತಪ್ಪದೆ ವೀಡಿಯೋ ಚಿತ್ರೀಕರಿಸುವುದು.
13 ಆಯೋಜಕರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡುವುದು.
14 ಹೋಟೆಲ್/ರೆಸಾರ್ಟ್/ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸುವುದು.
15 ಹೊಸ ವರ್ಷ ಅಚರಣೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸುವುದು.
16 ಸಂಚಾರಿ ನೀತಿ ನಿಯಮಗಳನ್ನು ತಪ್ಪದೇ ಪಾಲಿಸುವುದು.
17 ಸ್ಥಳೀಯ ಪೊಲೀಸ್ ಅಧಿಕಾರಿ / ಮೇಲಾಧಿಕಾರಿಗಳು ಸಂದರ್ಭಕ್ಕೆ ಅನುಗುಣವಾಗಿ ನೀಡುವ ಸೂಚನೆಗಳನ್ನು ಪಾಲಿಸುವುದು.
18 ಯಾವುದೇ ತೊಂದರೆ ಉಂಟಾದಲ್ಲಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವುದು.

ಆಯೋಜಕರು / ಸಾರ್ವಜನಿಕರು ಮಾಡಬಾರದ ಕ್ರಮಗಳು (ಆಔಓಖಿ’s)


1 ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.
2 ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲೀ, ದ್ವಿಚಕ್ರ ವಾಹನದಲ್ಲಿ ನಿಗಧಿಗಿಂತ ಹೆಚ್ಚು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ/ ವೀಲಿಂಗ್ ನಡೆಸಬಾರದು.
3 ಅನುಮತಿಯನ್ನು ಪಡೆಯದೇ ಬ್ಯಾನರ್/ಬಂಟ್ಟಿಂಗ್ಸ್/ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.
4 ಹೊಸವರ್ಷದ ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡಬಾರದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು.
5 ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು / ಜೂಜಾಟಗಳನ್ನು/ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು.
6 ಯುವಕರು ಮತ್ತು ವಯಸ್ಕರು ರಸ್ತೆಯಲ್ಲಿ ಹೊಸವರ್ಷ ಆಚರಣೆಯ ಕಾರಣದಿಂದ ದುರ್ವರ್ತನೆ ತೋರಬಾರದು.
7 ಸೂಚಿತ ಸ್ಥಳಗಳನ್ನು ಹೊರತುಪಡಿಸಿ ರಸ್ತೆಯಲ್ಲಿ, ಸಾರ್ವಜನಕಿ ಸ್ಥಳದಲ್ಲಿ ಮದ್ಯಪಾನ ಮಾಡಬಾರದು.
8 ಇತರರಿಗೆ ತೊಂದರೆಯಾಗುವ ರೀತಿ ಹಾಗೂ ಕಿರಿಕಿರಿ ಉಂಟಾಗುವಂತೆ ಪಟಾಕಿಗಳನ್ನು ಸುಡಬಾರದು.
9 ಮಹಿಳೆಯರು / ಹೆಣ್ಣು ಮಕ್ಕಳೊಂದಿಗೆ ಅಸಭ್ಯತೆಯಿಂದ ವರ್ತಿಸಬಾರದು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ತೊಂದರೆ ಅಥವಾ ಸಮಸ್ಯೆ ಅಥವಾ ಕಿರಿಕಿರಿ ಉಂಟಾದಲ್ಲಿ ಕೂಡಲೇ ಸರಹದ್ದಿನ/ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡತಕ್ಕದ್ದು.

ಕ್ರ.ಸಂ ಪೊಲೀಸ್ ಅಧಿಕಾರಿಗಳು ಸ್ಥಿರ ದೂರವಾಣಿ
ಸಂಖ್ಯೆ ಮೊಬೈಲ್
ದೂರವಾಣಿ
1 ಪೊಲೀಸ್ ಅಧೀಕ್ಷಕರು 08226-222243 9480804601
2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು 08226-225979 9480804602
3 ಡಿ.ಎಸ್.ಪಿ ಚಾ-ನಗರ 08226-222090 9480804620
4 ಡಿ.ಎಸ್.ಪಿ ಕೊಳ್ಳೇಗಾಲ 08224-252840 9480804621
5 ಜಿಲ್ಲಾ ನಿಯಂತ್ರಣ ಕೊಠಡಿ 08226-222383 9480804600

ಒಟ್ಟಾರೆ ಹೊಸ ವರ್ಷ ಆಚರಣೆಯನ್ನು ಶಾಂತ ರೀತಿಯಲ್ಲಿ ನೆರವೇರುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯೋಗ್ಯವಾದ ರೀತಿಯಲ್ಲಿ ಬಂದೋಬಸ್ತ್ ನಿಯೋಜಿಸಿಕೊಂಡಿದೆ. ....        .....       ವೀರಭದ್ರಸ್ವಾಮಿ
***************************************************************************

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಹೆಮ್ಮೆಯ ವಿಚಾರ: ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ, ಡಿ. 29 - ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಹೆಮ್ಮೆಯ ವಿಚಾರ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಅವರಣದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕøತಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಾಮೀಣ ಭಾಗದಿಂದ ಬಂದು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಜಿಲ್ಲೆ ಹಾಗೂ ವಿಭಾಗ ಮಟ್ಟದಲ್ಲಿ ಸಾಧನೆ ಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಶೈಕ್ಷಣಿಕವಾಗಿಯೂ ಇದೇ ಮಾದರಿಯಲ್ಲಿ ಸಾಧನೆಯನ್ನು ತೋರುವುದರ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದರು. ಸಮಯ ಅತ್ಯಂತ ಅಮೂಲ್ಯವಾದ್ದು. ಕಾಲೇಜು ದಿನಗಳಲ್ಲೇ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ಮೂಲಕ ಮುಂದಿನ ಸಿಇಟಿ ಪರೀಕ್ಷೆಗಳಿಗೆ ತಯಾರಾಗಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಕಿವಿಮಾತು ಹೇಳಿದರು. ಕಾಲೇಜಿನ ಅಭಿವೃದ್ಧಿ ಅಧ್ಯಕ್ಷ ರಾಗಿರುವ ತಾವು ಕಾಲೇಜಿನ ಮೂಲ ಸೌಕರ್ಯ ಹೆಚ್ಚಿಸಿ, ಭೋಧಕ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ ಎಂದು ಶಾಸಕರು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸೋಮಶೇಖರ ಬಿಸಲ್ವಾಡಿ ಅವರು ಮಾತನಾಡಿ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಕ್ರೀಡೆಗಳು ಸದೃಢ ದೇಹದÀಲ್ಲಿ ಸದೃಢ ಮನಸ್ಸು ಇರುತ್ತದೆ ಎಂದು ತಿಳಿಸಿದರು. ಇದೇ ವೇಳೆ ವಯೋನಿವೃತ್ತಿ ಹೊಂದಿದÀ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರೆಜಿನಾ ಪಿ. ಮಲಾಕಿ ಗೌರವಿಸಿ ಸನ್ಮಾನಿಸಲಾಯಿತು. 2016-17ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಸದಸ್ಯರಾದ ಎನ್.ಎಸ್. ರೇಣುಕಾ, ಕಾಲೇಜಿನ ಉಪ ಪ್ರಾಂಶುಪಾಲರಾದ ರಾಚಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಲೀಂ, ಸದಸ್ಯರಾದ ರಂಗಸ್ವಾಮಿ ಸಿ. ಬಸವಾಪುರ ಕಾಲೇಜಿನ ಪ್ರಾಂಶುಪಾಲರಾದ ಡಿ.ಸಿ. ಲಿಂಗರಾಜು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿಕ್ಕಲ್ಲೂರು ಜಾತ್ರೆ: ಮದ್ಯ ಮಾರಾಟ ನಿಷೇಧÀ

ಚಾಮರಾಜನಗರ, ಡಿ. 29 - ಚಿಕ್ಕಲೂರು ಗ್ರಾಮದಲ್ಲಿ ಶ್ರೀ ಘನನೀಲ ಸಿದ್ದಪ್ಪಾಜಿಯವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಗ್ರಾಮದ ಸುತ್ತ ಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಜನವರಿ 2ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 7ರ ಮಧ್ಯರಾತ್ರಿಯವರೆಗೆ ಯಾವುದೇ ರೀತಿಯ ಮದ್ಯ ಮಾರಾಟ, ಅಕ್ರಮ ಸಾಗಾಣಿಕೆ, ದಾಸ್ತಾನು ಮಾಡದಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.




ಯಳಂದೂರು ತಾಲ್ಲೂಕಿನ ವಿವಿಧ ಗ್ರಾ.ಪಂ ಶಾಲೆ ಅಂಗನವಾಡಿ ಹಾಸ್ಟೆಲ್‍ಗಳಿಗೆ ಜಿ.ಪಂ ಸಿ.ಇ.ಓ ದಿಢೀರ್ ಭೇಟಿ: ಪರಿಶೀಲನೆ



    ಚಾಮರಾಜನಗರ, ಡಿ. 30-ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅವರು ಯಳಂದೂರು ತಾಲ್ಲೂಕಿನ ವಿವಿಧ ಶಾಲೆ, ಅಂಗನವಾಡಿ ,ವಿದ್ಯಾರ್ಥಿನಿಲಯ, ಮತ್ತು  ಗ್ರಾಮಪಂಚಾಯತಿಗಳಿಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ದುಗ್ಗಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಸ್ತೂರಬಾ ಬಾಲಿಕಾ ವಸತಿ ಶಾಲೆಗೆ ಭೇಟಿ ನೀಡಿದ ಅವರು ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಈವೇಳೆ ಮುಖ್ಯಶಿಕ್ಷಕರು ಸೇರಿದಂತೆ ಮೂರು ಜನ ಸಹಶಿಕ್ಷಕರು ಏಕಕಾಲದಲ್ಲಿ ರಜೆ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಜೆ ಹಾಕಿರುವ ಶಿಕ್ಷಕರ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆÉ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಕುಂದುಕೊರತೆಯನ್ನು ಆಲಿಸಿದ ಅವರು ನೀರಿನ ಸಮಸ್ಯೆ ಶಿಘ್ರವೇ ಬಗೆಹರಿಸುವುದಾಗಿ ತಿಳಿಸಿದರು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಹಾಗು ಶುಚಿತ್ವಕ್ಕೆ ಒತ್ತು ನೀಡಬೇಕೆಂದು ಶಿಕ್ಷಕರಿಗೆ ಸಿ,ಇ,ಓ ಸೂಚಿಸಿದರು.

ನಂತರ ಆದರ್ಶ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಪಠ್ಯಕ್ಕೆ ಸಂಭಂದಿಸಿದಂತೆ ಪ್ರಶ್ನೆಗಳನ್ನು ಕೇಳಿದರು ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು ಶಿಕ್ಷಕರು ಸಕಾಲಕ್ಕೆ ಶಾಲೆಗೆ ಹಾಜರಾಗುವಂತೆ ಹಾಗು ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ಪಲಿತಾಂಶದಲ್ಲಿ  ಶೇಕಡಾ 100% ಸಾಧನೆ ಮಾಡುವಂತೆ ಸೂಚಿಸಿದರು

ಪಲಿತಾಂಶ ಹಾಗು ಗುಣಮಟ್ಟದ ಶಿಕ್ಷಣಕ್ಕಾಗಿ ಸ್ಟೆಪ್ ಎಂಬ ವಿನೂತನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು ಶಿಕ್ಷಕರ ತರಭೇತಿ ಹಾಗು ಮಕ್ಕಳ ಗುಣಮಟ್ಟದ ಕಲಿಕೆಗೆ ಒತ್ತು ನೀಡಲಾಗಿದೆ ಸದ್ಯ ಶಾಲೆಯಲ್ಲಿ ಸ್ವಲ್ಪಮಟ್ಟಿಗೆ  ಪೀಠೋಪಕರಣಗಳ ಸಮಸ್ಯಯಿದ್ದು ಶೀಘ್ರವೇ ಅದನ್ನು ಬಗೆಹರಿಸುವುದಾಗಿ ತಿಳಿಸಿದರು.

ದುಗ್ಗಹಟ್ಟಿ ಗ್ರಾಮಪಂಚಾಯತಿ ಕಚೇರಿಗೆ ಭೇಟಿ ನೀಡಿದ ಹರೀಶ್ ಕುಮಾರ್ ರವರು ಗ್ರಾಮೀಣಾಬಿವೃದ್ದಿಯೆಂಬುದು ಚುನಾಯಿತ ಪ್ರತಿನಿಧಿಗಳ, ಅದಿಕಾರಿ ವರ್ಗದವರ ಹಾಗು ಸಾರ್ವಜನಿಕರ ಸಹಕಾರವನ್ನು ಅವಲಂಬಿಸಿದೆ. ನರೇಗಾ, ವಸತಿ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು  ಪಂಚಾಯತಿ  ಪಿ,ಡಿ,ಓ ಗೆ ಸೂಚಿಸಿದರು.ಲೋಪ ಎಸಗಿದ್ದಲ್ಲಿ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.

 ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡಲಾಗುವ ಗೋದಾಮಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ದಾಸ್ತಾನು ವಿವರ ಪಡೆದರು. ಅಂಗನವಾಡಿಗಳಿಗೆ ಪ್ರಸ್ತುತ ಮೂರು ತಿಂಗಳಿಗೊಮ್ಮೆ ಆಹಾರ ಸರಬರಾಜು ಮಾಡಲಾಗುತ್ತಿದ್ದು ಇನ್ನು ಮುಂದೆ ಸಮರ್ಪಕವಾಗಿ ತಿಂಗಳಿಗೊಮ್ಮೆ ವಿತರಣೆ ಮಾಡಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ತಾಕೀತು ಮಾಡಿದರು.

ನಂತರ ಹೊನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗು ಕಲಿಕೆಗೆ ಸಂಭಂದಿಸಿದಂತೆ ಮಾಹಿತಿ, ಮಾತೃಪೂರ್ಣ ಯೋಜನೆಗೆ ದಾಸ್ತಾನು ಮಾಡಿರುವ ಆಹಾರ ಧಾನ್ಯ ವಿವರ ಪರಿಶೀಲಿಸಿದರು. ಪಡೆದರು. ಗರ್ಬಿಣಿ, ಹಾಗು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ  ಅರಿವು ಮೂಡಿಸುವಂತೆ ತಿಳಿಸಿದರು.

ನಂತರ ಹೊನ್ನೂರು ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಶೌಚಾಲಯ, ಮನೆಗಳ ನಿರ್ಮಾಣಕ್ಕೆ ಒತ್ತುನೀಡುವಂತೆ ಸೂಚಿಸಿದರು.

ಗ್ರಾಮದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಅವರು  ಈ- ಹಾಜರಾತಿಯನ್ನು  ಪರಿಶೀಲಿಸಿ ಮಕ್ಕಳು ಹೆಚ್ಚು ಗೈರು ಹಾಜರಾಗದಂತೆ ಕ್ರಮವಹಿಸಿ ಗುಣಮಟ್ಟದ ಶಿಕ್ಷಣಕ್ಕೆ  ಆದ್ಯತೆ ನೀಡುವಂತೆ ತಿಳಿಸಿದರು. ನಂತರ ಸಿ,ಇ,ಓ ರವರು ಮಕ್ಕಳಿಗೆ ತಯಾರಿಸಲಾಗಿದ್ದ ಊಟವನ್ನು ಸೇವಿಸುವ ಮೂಲಕ ಗುಣಮಟ್ಟವನ್ನು  ಪರೀಕ್ಷಿಸಿದರು. ವಿದ್ಯಾರ್ಥಿನಿಲಯವು ಶುಚಿತ್ವದಿಂದ ಕೂಡಿದ್ದು ಉತ್ತಮ ನಿರ್ವಹಣೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಜರಿದ್ದರು.



 

ಹೊಸ ವರ್ಷ ಆಚರಣೆ : ಪೊಲೀಸ್ ಇಲಾಖೆಯಿಂದ ಕೆಲ ಸೂಚನೆ


    ಚಾಮರಾಜನಗರ, ಡಿ. 30- ಹೊಸ ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತಿರಲು ಸಾರ್ವಜನಿಕರು ಕೆಲ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

   ಜಿಲ್ಲೆಯ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು, ಸಂಘಟನೆಗಳು ಮತ್ತು ಸಂಘಗಳು, ಹಮ್ಮಿಕೊಳ್ಳುವ ಔತಣಕೂಟ, ಸಮಾರಂಭಗಳನ್ನು ಡಿಸೆಂಬರ್ 31 ರ ರಾತ್ರಿ ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕು. ಹೊಸ ವರ್ಷದ ಔತಣಕೂಟ, ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳಬೇಕು. ಎಲ್ಲಾ ಆಗು ಹೋಗುಗಳಿಗೂ ಅವರುಗಳೇ ಜವಾಬ್ದಾರರಾಗಿರುತ್ತಾರೆ.

  ಹೋಟೆಲ್, ಭೋಜನಗೃಹ, ಕ್ಲಬ್‍ಗಳಿಗೆ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಲಾಗಿದೆ.  ಸಿಸಿಟಿವಿ ಅಳವಡಿಸದಿದ್ದಲ್ಲಿ ತಪ್ಪದೇ ತಕ್ಷಣವೇ ಅಳವಡಿಸಲು ಕ್ರಮವಹಿಸಬೇಕು. ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ವಾಸಸ್ಥಳವನ್ನು ದೃಢೀಕರಿಸುವ ದಾಖಲೆಯೊಂದಿಗೆ ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸಬೇಕು. ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್, ಬಟ್ಟಿಂಗ್ಸ್, ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಕಾಯ್ದುಕೊಳ್ಳಬೇಕು.

   ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೆಲು ಧ್ವನಿಯಲ್ಲಿ ಬಳಕೆ ಮಾಡುವುದು, ನಿಗಧಿತ ಸಮಯದಲ್ಲಿಯೇ ಕಾರ್ಯಕ್ರಮವನ್ನು ಮುಗಿಸಬೇಕು. ವಿದೇಶಿಯರು ಹೋಟೆಲ್, ರೆಸಾರ್ಟ್, ಹೋಮ್‍ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸಬೇಕು. ಸಾರ್ವಜನಿಕ ಅಸ್ತಿಪಾಸ್ತಿಗೆ ಹಾನಿ ಉಂಟು ಮಾಡಬಾರದು.

   ಅಬಕಾರಿ ಕಾಯ್ದೆ ಅಡಿಯಲ್ಲಿ, ಪರವಾನಗಿ ಅನ್ವಯ, ಮದ್ಯ ಮಾರಾಟ ವೇಳೆಯನ್ನು ಅನುಸರಿಸಬೇಕು. ಮಹಿಳೆಯರೊಂದಿಗೆ   ಸಭ್ಯತೆಯಿಂದ ವರ್ತಿಸಬೇಕು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿರಬೇಕು. ಆಯೋಜಕರು ಸಮಾರಂಭಗಳನ್ನು ತಪ್ಪದೆ ವೀಡಿಯೋ ಚಿತ್ರೀಕರಿಸಬೇಕು. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸಬೇಕು.

  ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ದ್ವಿಚಕ್ರ ವಾಹನದಲ್ಲಿ ನಿಗಧಿಗಿಂತ ಹೆಚ್ಚು ಜನ ಸವಾರಿ ಮಾಡಬಾರದು, ಸಾಹಸ ಪ್ರದರ್ಶನ, ವೀಲಿಂಗ್ ನಡೆಸಬಾರದು.  ಅನುಮತಿಯನ್ನು ಪಡೆಯದೇ ಬ್ಯಾನರ್, ಬಂಟ್ಟಿಂಗ್ಸ್, ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶುಭಾಶಯ ಕೋರುವ ನೆಪದಲ್ಲಿ ರಸ್ತೆಯಲ್ಲಿ ಮನಬಂದಂತೆ ಓಡಾಡಬಾರದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು. ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು, ಜೂಜಾಟಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು. ಸೂಚಿತ ಸ್ಥಳಗಳನ್ನು ಹೊರತುಪಡಿಸಿ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಬಾರದು. ಇತರರಿಗೆ ತೊಂದರೆಯಾಗುವ ರೀತಿ ಹಾಗೂ ಕಿರಿಕಿರಿ ಉಂಟಾಗುವಂತೆ ಪಟಾಕಿಗಳನ್ನು ಸುಡಬಾರದು.


   ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ತೊಂದರೆ, ಸಮಸ್ಯೆ, ಕಿರಿಕಿರಿ ಉಂಟಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮತ್ತು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡತಕ್ಕದ್ದು. ಪೊಲೀಸ್ ಅಧೀಕ್ಷಕರು, 08226-222243, ಮೊ. 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08226-225979,  ಮೊ. 9480804602, ಡಿ.ಎಸ್.ಪಿ ಚಾ-ನಗರ, 08226-222090, ಮೊ. 9480804620, ಡಿ.ಎಸ್.ಪಿ ಕೊಳ್ಳೇಗಾಲ, 08224-252840, ಮೊ. 9480804621, ಜಿಲ್ಲಾ ನಿಯಂತ್ರಣ ಕೊಠಡಿ, 08226-222383, ಮೊ. 9480804600


    ಹೊಸ ವರ್ಷದ ಸಂಭ್ರಮವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಹೊಸ ವರ್ಷ ಶುಭಾಶಯಗಳನ್ನು ಸರ್ವರಿಗೂ ಪೊಲೀಸ್ ಇಲಾಖೆ ಕೋರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 






   







Friday, 29 December 2017

ಕುವೆಂಪು ಅವರದ್ದು ಮೇರು ವ್ಯಕ್ತಿತ್ವ: ಜಿಲ್ಲಾಧಿಕಾರಿ ಬಿ. ರಾಮು (29-12-2017)


ಕುವೆಂಪು ಅವರದ್ದು  ಮೇರು ವ್ಯಕ್ತಿತ್ವ: ಜಿಲ್ಲಾಧಿಕಾರಿ ಬಿ. ರಾಮು


ಚಾಮರಾಜನಗರ, ಡಿ. 29 - ವಿಶ್ವ ಮಾನವ ಸಂದೇಶವನ್ನು ಮಾನವ ಕುಲಕ್ಕೆ ನೀಡಿದ ರಾಷ್ಟ್ರ ಕವಿ ಕುವೆಂಪು ಅವರದ್ದು ಮೇರು ವ್ಯಕ್ತಿತ್ವ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಮಾನವ ಸೂತ್ರಗಳನ್ನು ನೀಡಿದ ಕುವೆಂಪು ಅವರನ್ನು ಯಾರೊಬ್ಬರಿಗೂ ಹೋಲಿಕೆ ಮಾಡಲಾಗುವುದಿಲ್ಲ. ಕುವೆಂಪು ಅವರಿಗೆ ಕುವೆಂಪು ಅವರೆ ಸಾಟಿ. ಹೀಗಾಗಿ ಅವರು ವಿಶ್ವ ಮಾನವರಾಗಿದ್ದಾರೆಂದು ಜಿಲ್ಲಾಧಿಕಾರಿ ರಾಮು ಅವರು ಅಭಿಪ್ರಾಯಪಟ್ಟರು
ಒಬ್ಬ ವ್ಯಕ್ತಿ ಉನ್ನತ ಮಟ್ಟಕ್ಕೇರಲು ಪ್ರೇರಣೆಗಳು ಕಾರಣವಾಗುತ್ತವೆ. ಮಾನವೀಯತೆ ಮೌಲ್ಯಗಳು ಮನುಷ್ಯರಲ್ಲಿ ಮೈಗೂಡಬೇಕಾಗಿದೆ. ಪೀತಿ ಉತ್ತಮ ಚಿಂತನೆಗಳು ಮೂಡಿಬರಬೇಕಾದರೆ, ಉತ್ತಮ ಪರಂಪರೆಯಿಂದ ವಿಮುಕರಾಗದಂತೆ ಇರಬೇಕಿದೆ ಎಂದು ರಾಮು ಅವರು ಸಲಹೆ ಮಾಡಿದರು.
ಉನ್ನತ ಕಲೆ ವಿಚಾರಗಳತ್ತ ಆಸಕ್ತಿ ಬೆಲೆಸಿಕೊಳ್ಳಬೇಕು. ವಿಶ್ವ ಮಾನವ ಸಂದೇಶವನ್ನು ಮರೆಯಬಾರದು ಬದುಕಿನಲ್ಲಿ ಒಳ್ಳೆಯ ಮೌಲ್ಯ ಆದರ್ಶಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ರಾಮು ಕಿವಿ ಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪದ್ಮಶೇಖರ್ ಅವರು ಕುವೆಂಪು ಅವರ ಕೃತಿಗಳಲ್ಲಿನ ಪಾತ್ರವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಾಣಬಹುದಾಗಿದೆ ಎಂದರು.
ಸ್ತ್ರೀಲೋಕಕ್ಕೆ ನೆಲೆಯನ್ನು ಕಾಣಿಸುವ ಪ್ರಯತ್ನವನ್ನು ಕುವೆಂಪು ಮಾಡಿದ್ದಾರೆ. ಸ್ತ್ರೀತ್ವಕ್ಕೆ ಹೊಸ ವ್ಯಾಖ್ಯಾನ ನೀಡಿದರು. ಮನಸ್ಸು ಅಂತರಂಗ, ಪ್ರೀತಿ, ಶ್ರಮ, ತ್ಯಾಗವನ್ನು ಗುರುತಿಸಿ ಗೌರವಿಸುವ ಅಂಶಗಳು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದೆಂದು ಪದ್ಮ ಶೇಖರ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗ್ರಾಯತ್ರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಡಿವೈ.ಎಸ್.ಪಿ. ಜಯಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ಜಿಲ್ಲಾ ಉಸ್ತವಾರಿ ಸಚಿವರ ಪ್ರವಾಸ

ಚಾಮರಾಜನಗರ, ಡಿ. 29 - ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಅವರು ಡಿಸೆಂಬರ್ 30ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
 ಬೆಳಿಗ್ಗೆ 11.15 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆನಡೆಸುವರು. ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಡಾ. ಬಾಬುಜಗಜೀವನ್‍ರಾಂ ಭವನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆನಡೆಸುವರು. ನಂತರ ಗುಂಡ್ಲುಪೇಟೆ – ಚಾಮರಾಜನಗರ ರಸ್ತೆಯ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವರು. ಮದ್ಯಾಹ್ನ 1.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ವಿಐಪಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವರು. ವಸತಿಗೃಹಗಳನ್ನು ಉದ್ಘಾಟಿಸುವರು. ಮದ್ಯಾಹ್ನ 3ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Thursday, 28 December 2017

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಸೆಕ್ಟರ್ ಆಫೀಸರ್‍ಗಳ ನಿಯೋಜನೆ,ಗುಂಡ್ಲುಪೇಟೆಯಲ್ಲಿ ಡಿ. 29ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ (28-12-2017)




ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಸೆಕ್ಟರ್ ಆಫೀಸರ್‍ಗಳ  ನಿಯೋಜನೆ

ಚಾಮರಾಜನಗರ, ಡಿ. :- ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ದೇವಸ್ಥಾನದ ಪರಿಧಿ/ಜಾತ್ರಾ ಪ್ರದೇಶದಲ್ಲಿ ಜನವರಿ 2 ರಿಂದ 7ರ ಮಧ್ಯರಾತ್ರಿಯವರೆಗೆ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಹಾಗೂ ಹೈಕೋರ್ಟ್ ನಿರ್ದೇಶನದಂತೆ ಪ್ರಾಣಿ ಬಲಿಯನ್ನು ತಡೆಗಟ್ಟಿ, ಪ್ರಾಣಿ ಬಲಿ ನಿಷೇಧದ ಬಗ್ಗೆ ತಿಳಿವಳಿಕೆ ಸಂಬಂಧ ನಿರ್ವವಣೆಗೆ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.

ಪ್ರಾಣಿಬಲಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧ ಕುರಿತು ನಾಗರಿಕರಿಗೆ ತಿಳಿವಳಿಕೆ ನೀಡುವ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶ ಮಾಡುವ ಸಲುವಾಗಿ ಸೆಕ್ಟರ್ ಆಫೀಸರ್‍ಗಳನ್ನು ನಿಯೋಜಿಸಲಾಗಿದೆ. 

ಉಪವಿಭಾಗಾಧಿಕಾರಿ ಕೊಳ್ಳೇಗಾಲ ತಹಸೀಲ್ದಾರ್ ಅವರೊಂದಿಗೆ ಹೆಚ್ಚುವರಿಯಾಗಿ ಸೆಕ್ಟರ್ ಆಫೀಸರ್‍ಗಳನ್ನಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮೊದಲನೇ ಪಾಳಿಯಲ್ಲಿ (ಬೆಳಿಗ್ಗೆ 8ರಿಂದ ಮಧ್ಯಾಹ್ನ 2ಗಂಟೆಯವರೆಗೆ) ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ತೆರೆದ ಸುತ್ತಮುತ್ತಲಿನ ಪ್ರದೇಶಕ್ಕೆÉ್ಕ ಕೊಳ್ಳೇಗಾಲದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹಳೆ ಮಠದ ಸುತ್ತಮುತ್ತಲ ಪ್ರದೇಶಕ್ಕೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನೀಯರ್, ಸಿದ್ದಪಾಜಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲ ನಗರಸಭೆ ಪೌರಾಯುಕ್ತರು ಹಾಗೂ ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಗೆ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸೆಕ್ಟರ್ ಆಫೀಸರ್‍ಗಳನ್ನಾಗಿ ನಿಯೋಜಿಸಲಾಗಿದೆ. 

ಎರಡನೇ ಪಾಳಿಯಲ್ಲಿ ( ಮಧ್ಯಾಹ್ನ 2ಗಂಟೆಯಿಂದ ರಾತ್ರಿ 10ರವರೆಗೆ) ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ತೆರೆದ ಸುತ್ತಮುತ್ತಲಿನ ಪ್ರದೇಶಕ್ಕೆÉ್ಕ ಕೊಳ್ಳೇಗಾಲದ ಕಾವೇರಿ ನಿರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನೀಯರ್, ಹಳೆ ಮಠದ ಸುತ್ತಮುತ್ತಲ ಪ್ರದೇಶಕ್ಕೆ ಚಾಮರಾಜನಗರದ ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿಯಂತ್ರಕರು ಸಿದ್ದಪಾಜಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆ ಚಾಮರಾಜನಗರ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರು ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕರು ಹಾಗೂ ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಗೆ ಲೆಕ್ಕ ಪರಿಶೀಲನಾ ವರ್ತುಲದ ಹಿರಿಯ ಉಪನಿರ್ದೇಶಕರನ್ನು  ಸೆಕ್ಟರ್ ಆಫೀಸರ್‍ಗಳನ್ನಾಗಿ ನಿಯೋಜಿಸಲಾಗಿದೆ. 

ಮೂರನೇ ಪಾಳಿಯಲ್ಲಿ (ರಾತ್ರಿ 10ಗಂಟೆಯಿಂದ ಬೆಳಿಗ್ಗೆ 8ಗಂಟೆಯವರೆಗೆ) ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ತೆರೆದ ಸುತ್ತಮುತ್ತಲಿನ ಪ್ರದೇಶಕ್ಕೆÉ್ಕ ಚಾಮರಾಜನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಳೆ ಮಠದ ಸುತ್ತಮುತ್ತಲ ಪ್ರದೇಶಕ್ಕೆ ಚಾಮರಾಜನಗರದ 1ನೇ ಪಿ.ಡಬ್ಲ್ಯೂ.ಡಿ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಿದ್ದಪಾಜಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲದ ಉಡುತೋರೆ ಹಳ್ಳ ವಿಭಾಗÀದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲದ ಅಜ್ಜಿಪುರ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನೀಯರ್, ಹಾಗೂ ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶದ ವ್ಯಾಪ್ತಿಗೆ ಕೊಳ್ಳೇಗಾಲದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುರನ್ನು ಸೆಕ್ಟರ್ ಆಫೀಸರ್‍ಗಳನ್ನಾಗಿ ನಿಯೋಜಿಸಲಾಗಿದೆ. 

 


ಗುಂಡ್ಲುಪೇಟೆಯಲ್ಲಿ ಡಿ. 29ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ


ಚಾಮರಾಜನಗರ, ಡಿ. 28 :- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ಟೌನ್ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಕೆ.ಎಲ್. ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಫೌಜಿಯಾ ತರುನ್ನುಂ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಗೌರಮ್ಮಣ್ಣಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಮಾದಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಗುಂಡ್ಲುಪೇಟೆ ಬಿಇಓ ಹಾಲತಿ ಸೋಮಶೇಖರ್ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.



ಡಿ. 29ರಂದು ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಮಾನವ ದಿನಾಚಾರಣೆ


ಚಾಮರಾಜನಗರ, ಡಿ. 28 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.  ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ರಾಷ್ಟ್ರ ಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.

ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪದ್ಮಶೇಖರ್ ಅವರು ವಿಶೇಷ ಉಪನ್ಯಾಸ ನೀಡುವರು.

ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ರಾಷ್ಟ್ರಕವಿ ಕುವೆಂಪು ಅವರ ಕುರಿತಂತೆ ಎಸ್.ಜಿ. ಮಹಾಲಿಂಗಸ್ವಾಮಿ ಮತ್ತು ತಂಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಮೈಸೂರಿನ ಜಿ. ಗಂಗಾಧರ್ ನಿರ್ದೇಶನದಲ್ಲಿ, ಮಂಡ್ಯದ ಸದ್ವಿದ್ಯಾ ತಂಡವು ಕುವೆಂಪು ವಿರಚಿತ ಜಲಗಾರ ನಾಟಕವನ್ನು ಅಭಿನಯಿಸಲಿದೆ

ಡಿ. 29ರಂದು ಜಿ.ಪಂ. ಸಾಮಾನ್ಯ ಸಭೆ


ಚಾಮರಾಜನಗರ, ಡಿ. 28- ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.



ಡಿ. 29ರಂದು ವಿದ್ಯುತ್ ವ್ಯತ್ಯಯ


ಚಾಮರಾಜನಗರ, ಡಿ. 28 - ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಡಿಸೆಂಬರ್ 29ರಂದು ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಪಣ್ಯದಹುಂಡಿ, ಬದನಗುಪ್ಪೆ, ಬೆಂಡರವಾಡಿ, ಇಂಡಸ್ಟ್ರಿಯಲ್, ಮರಿಯಾಲ, ಚಿಕ್ಕ ಹೊಮ್ಮ, ತೊರವಳ್ಳಿ, ಎನ್ ಜೆ ವೈ ಕೆಲ್ಲಂಬಳ್ಳಿ, ದಾಸನೂರು, ಬೇಡರಪುರ, ದೊಡ್ಡ ಹೊಮ್ಮ ಹಾಗೂ ಸುತ್ತಮುತ್ತಲಿನÀ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

 ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.









                                                    

Wednesday, 27 December 2017

ಚಾ.ನಗರ : ಪೆಟ್ರೋಲ್ ಬಂಕ್‍ಗಳಲ್ಲಿ ಶೌಚಾಲಯ ಹೊಂದಲು ಸೂಚನೆ (27-12-2017)

   


ಚಾ.ನಗರ : ಪೆಟ್ರೋಲ್ ಬಂಕ್‍ಗಳಲ್ಲಿ ಶೌಚಾಲಯ ಹೊಂದಲು ಸೂಚನೆ 

ಚಾಮರಾಜನಗರ, ಡಿ. 27  ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಬರುವ  ಪೆಟ್ರೋಲ್ ಬಂಕ್‍ಗಳಲ್ಲಿ ಗ್ರಾಹಕರ ಬಳಕೆಗೆ ಶೌಚಾಲಯ ನಿರ್ಮಾಣ ಮಾಡಬೇಕು. ಅಲ್ಲದೆ ಸಾರ್ವಜನಿಕರ ಉಪಯೋಗಕ್ಕೆ ಎಂಬ ನಾಮಫಲಕ ಹಾಕುವಂತೆ ನಗರಸಭೆ ಸೂಚಿಸಿದೆ.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಚ ಸರ್ವೇಕ್ಷಣೆ-2018ರ ಸಮೀಕ್ಷೆಯನ್ನು ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಲಿದೆ. ಪೆಟ್ರೋಲ್ ಬಂಕ್‍ನಲ್ಲಿ ಶೌಚಾಲಯ ಹೊಂದಿರಬೇಕು ಹಾಗು ಸಾರ್ವಜನಿಕ ಉಪಯೋಗಕ್ಕೆ ಎಂದು ನಾಮಫಲಕ ಹಾಕಬೇಕು. ಸಾರ್ವಜನಿಕರು ಪೆಟ್ರೋಲ್ ಬಂಕ್‍ನಲ್ಲಿರುವ ಶೌಚಾಲಯವನ್ನು ಉಪಯೋಗಿಸಲು ಅವಕಾಶವಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಗುಂಡ್ಲುಪೇಟೆ : ಜ. 12ರಂದು ಪ.ಜಾ, ಪ.ವಗರ್Àಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಡಿ. 27- ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜನವರಿ 12ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡÉಯಲಿದೆ.
ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ತಮ್ಮ ಸಮಸ್ಯೆ ಕುಂದುಕೊರತೆಗಳ ಬಗ್ಗೆ ಜನವರಿ 5ರ ಒಳಗೆ ಲಿಖಿತವಾಗಿ, ಸ್ಪಷ್ಟವಾಗಿ ಸಮಿತಿಯ ಸದಸ್ಯರಾದ ಸುಭಾಷ್ ಮಾಡ್ರಹಳ್ಳಿ (ಮೊಬೈಲ್ 9743699073), ಮಹದೇವಚಾರಿ ಮೂಖಹಳ್ಳಿ (ಮೊಬೈಲ್ 8762342103), ಶ್ರೀಧರ್ ಕಾರೇಮಾಳ (ಮೊಬೈಲ್ 8762342103) ಅವರುಗಳಿಗೆ ಅಥವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ತಿಳಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದÉ.


ನಾನು ಜಾತಿ ವಾದಿಯಲ್ಲ :ವಾಟಾಳ್ 


    ಚಾಮರಾಜನಗರ, ಡಿ.27- ನಾನು ಜಾತಿ ವಾದಿಯಲ್ಲ ನಾನು ಶಾಸನ ಸಭೆಗೆ ಆಯ್ಕೆಯಾದರೆ ಚಾಮರಾಜನಗರ ಸೇರಿದಂತೆ  ರಾಜ್ಯದ ಉದ್ದಗಲಕ್ಕೂ ಶಾಸಕನಿದ್ದ ಆಗೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
  ಇಂದು ತಾಲೂಕಿನ ಅರಕಲವಾಡಿ  ಗ್ರಾಮದಲ್ಲಿ ನಡೆದ ಗಡಿನಾಡು ಕನ್ನಡಿಗರ ಸಮಾವೇಶದ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ಬೆಂಗಳೂರಿನಲ್ಲಿ ಎರಡು ಬಾರಿ
ಶಾಸಕನಾಗಿದ್ದೇನೆ. ನಾನು ಕಳೆದ 10 ವರ್ಷಗಳಿಂದ ಸೋತಿದ್ದೇನೆ. ಇದು ನನಗೆ ಆದ ಸೋಲಲ್ಲ ಇದು ಕ್ಷೇತ್ರದ ಜನತೆಗೆ ಆದ ನಷ್ಟ ಎಂದು ತಿಳಿಸಿದರು.
   ನಾನು ಕಳೆದ 50 ವರ್ಷಗಳಿಂದ ನಾಡು, ನುಡಿ, ಬಾಷೆ, ಗಡಿನಾಡು, ಹೊರನಾಡು ಬಗ್ಗೆ ನಿತ್ಯ ನಿರಂತರವಾಗಿ ಚಳವಳಿ ಮಾಡುತ್ತಾ ಬಂದಿದ್ದೇನೆ. ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಕಳೆದ 10 ವರ್ಷಗಳಿಂದ ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರದ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಯಾರು ಮಾತನಾಡಿಲ್ಲ. ನಾನು ಶಾಸಕನಾಗಿದ್ದಾಗ ಒಂದು ದಿನವು ಗೈರು ಹಾಜರಾಗದೆ ಸಮಸ್ಯೆಗಳನ್ನು ಸರ್ಕಾರಕ್ಕೆ ತರುತ್ತಿದ್ದೆ. ನಾಡಿನ ಜನತೆ ಎಲ್ಲಾ ಮನೆಗಳ ಟಿವಿ ಗಳಲ್ಲಿ ನೋಡುತ್ತಿದ್ದರು ಎಂದು ವಾಟಾಳ್ ತಿಳಿಸಿದರು.
   ಚಾಮರಾಜನಗರವನ್ನು ಕರ್ನಾಟಕದ ಭೂಪಟದಲ್ಲಿ ದ್ರುವತಾರೆಯಂತೆ ಮಿನುಗಿಸುತ್ತಿದ್ದೆ ನಾನು ಏಕೆ ಸೋತೆ ಎಂದು ಅರ್ಥವಾಗಿಲ್ಲ ಎಲ್ಲಿ ವ್ಯತ್ಯಾಸ ಆಗಿದೆ ಎಂದು ಗೊತ್ತಾಗಿಲ್ಲ ನನ್ನಿಂದ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಮುಂದಿನ ಚುನಾವಣೆಯಲ್ಲಿ ನನಗೆ ಆರ್ಶಿವಾದ ಮಾಡಿ ಎಂದರು.
   ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರವನ್ನು ಹೇಳುವವರು ಕೇಳುವವರು ಯಾರು ಇಲ್ಲ ಜಿಲ್ಲಾಡಳಿತ ವಿಫಲವಾಗಿದೆ. ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಎದುರುತ್ತಿಲ್ಲ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಟಾಳ್ ತಿಳಿಸಿದರು.
   ಅರಕಲವಾಡಿಗೆ ತಾಳ ವಾಡಿ ಅತಿ ಸಮೀಪದಲ್ಲಿದೆ. ರಾಜ್ಯದ ಹಿಂದುಳಿದ ಗಡಿ ಪ್ರದೇಶಗಳು ಅಭಿವೃದ್ದಿಯಾಗಿಲ್ಲ. ಹೊರನಾಡ ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ. ಅರಕಲವಾಡಿ ಕೆರೆ, ಕೊತ್ತಲವಾಡಿ ಕೆರೆಗಳು ಸೇರಿದಂತೆ ಎಲ್ಲಾ ಗ್ರಾವiಗಳಲ್ಲಿರುವ ಎಲ್ಲಾ ಕೆರೆಗಳಿಗೆ ರಾಜಕೀಯ ಮಾಡದೆ ನೀರು ತುಂಬಿಸಬೇಕು ಎಂದು ವಾಟಾಳ್ ಹೇಳಿದರು.
    ಕುಡಿಯುವ ನೀರಿಗಾಗಿ ಮಹಾದಾಯಿ, ಕಳಸಬಂಡೂರಿ ಹಾಗು ಮೇಕೆದಾಟು ಯೋಜನೆ ಪ್ರಾರಂಭಿಸಬೇಕು ಎಂದು ಕಳೆದ 1 ವರ್ಷದಿಂದ  ಉತ್ತರ ಕರ್ನಾಟಕದ ಜನತೆ ನಿರಂತರವಾಗಿ ಚಳವಳಿ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರಮೋದಿಯವರು ಗೋವಾ ಮುಖ್ಯಮಂತ್ರಿ ಮನೋಹರ್ ಪ್ಯೆರಿಕರ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನಾವಿಸ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಭೆ ಕರೆದು ತಮ್ಮ ಮದ್ಯಸ್ಥಿಕೆಯಲ್ಲಿ ಈ ಸಮಸ್ಯೆ ಬಗೆಹರಿಸಬೇಕು ಎಂದು ವಾಟಾಳ್ ತಿಳಿಸಿದರು.
    ಮಹಾದಾಯಿ-ಕಳಸಬಂಡೂರಿ, ಮೇಕೆದಾಟು ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ವಾಟಾಳ್ ಈ ಯೋಜನೆಗಳ ಸಂಭಂದವಾಗಿ ಡಿ.28ರಂದು ಬೆಂಗಳೂರಿನಲ್ಲಿ ಕರಾಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಅಲ್ಲದೆ ಮುಂದಿನ ಜನವರಿ 10 ರಂದು ಬೃಹತ್ ಸಮಾವೇಶವನ್ನು ಮಾಡುತ್ತಿದ್ದೇವೆ. ಮಹಾದಾಯಿ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಈ ಸಮಸ್ಯೆಗೆ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂಬ ವಿಚಾರವಾಗಿ ನಿರ್ಣಯ ಮಾಡುತ್ತೇವೆ. ಅಖಂಡ ಕರ್ನಾಟಕ ಬಂದ್‍ಗೆ 2 ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ವಾಟಾಳ್ ತಿಳಿಸಿದರು.
   ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಮಾಡಬೇಕು ಹಾಗು ಜಾತ್ಯಾತೀತರಿಗೆ ಅಪ್ಪ, ಅಮ್ಮ ಯಾರು ಎಂದು ಗೊತ್ತೆ ಇಲ್ಲ ಎಂದು ಹೇಳಿರುವ ವಿಚಾರವನ್ನು ವಾಟಾಳ್ ಖಂಡಿಸಿದ್ದಾರೆ. ಸಂವಿಧಾನ ತಿದ್ದುಪಡಿ ತಂದರೆ ದೇಶದಾದ್ಯಂತ ಬೆಂಕಿ ಜ್ವಾಲೆ ಹೊತ್ತಿ ಉರಿಯುತ್ತದೆ ಎಂದು ವಾಟಾಳ್ ನುಡಿದರು.
   ಮುಖ್ಯಮಂತ್ರಿಯಾಗಲೀ, ಮಂತ್ರಿಯಾಗಲೀ ಯಾರೆ ಆಗಲಿ ಗೌರವಯುತ ಸ್ಥಾನದಲ್ಲಿರುವವರು ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಕೂಡಲೇ  ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ಕೈಬಿಡಬೇಕು ಎಂದು ವಾಟಾಳ್ ಎಚ್ಚರಿಸಿದರು.
  ರಾಜ್ಯ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ವಾಟಾಳ್ ನಾಗರಾಜ್ ಅವರು ಯಾವುದೇ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ ಇವರು ಜಾತ್ಯಾತೀತ ವ್ಯಕ್ತಿ. ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ಕಾವೇರಿ ನೀರು ತಂದು ಕೊಟ್ಟರು ಎಲ್ಲಾ ವರ್ಗಗಳ ಜನತೆಗೆ ಪಕ್ಷಬೇದ ಮರೆತು ಜನರ ಕಷ್ಟಗಳಿಗೆ ನೋವುಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರ ಇವರನ್ನು ವಿಧಾನ ಪರಿಷತ್‍ಗೆ ನಾಮಕರಣ ಮಾಡಬೇಕಾಗಿತ್ತು ಎಂದು ತಿಳಿಸಿದರು. ಈ ಬಾರಿ ವಾಟಾಳ್ ನಾಗರಾಜ್ ಅವರನ್ನು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸೇರಿದಂತೆ ಜಾತ್ಯಾತೀತವಾಗಿ ವಾಟಾಳ್ ನಾಗರಾಜ್ ಅವರನ್ನು ಬೆಂಬಲಿಸಬೇಕು ಎಂದರು.
  ಇದಕ್ಕೂ ಮೊದಲು  ಅರಕಲವಾಡಿ ಬಸ್ ನಿಲ್ದಾಣದಿಂದ ವೇದಿಕೆ ವರೆಗೆ ವಾಟಾಳ್ ನಾಗರಾಜ್ ಅವರನ್ನು ವರ್ಣರಂಜಿತÀ ಕಲಾ ತಂಡಗಳೊಡನೆ ಮೆರವಣಿಗೆ ಮುಖಾಂತರ ಕರೆತರಲಾಯಿತು.  
  ಈ ಸಂದರ್ಭದಲ್ಲಿ ರವಿಕುಮಾರ್, ದಳಪತಿವೀರತಪ್ಪ, ಡೈರಿ ನಿರ್ದೇಶಕ ಬಸವರಾಜು, ನಾಗಮಲ್ಲಪ್ಪ, ಗುಂಡುರಾವ್, ಡೈರಿ ಮಹದೇವಪ್ಪ, ಕರಿನಾಯಕರು, ಡೈರಿ ಮಹದೇವಪ್ಪ, ನಾಗರಾಜಮೂರ್ತಿ, ಶಿವಕುಮಾರ್, ಕೆಂಪಣ್ಣ, ರಾಜಣ್ಣ, ಹುಂಡಿಬಸವಣ್ಣ, ಸುರೇಶ್‍ನಾಗ್, ಚೆನ್ನಮಲ್ಲಪ್ಪ, ನಿಂಗಶೆಟ್ಟಿ, ಕ್ಯಾಂಟೀನ್‍ಕುಮಾರ್, ನಾರಾಯಣಸ್ವಾಮಿ, ಕಾರ್‍ನಾಗೇಶ್, ರಾಮಯ್ಯ, ರೇವಣ್ಣಸ್ವಾಮಿ, ಶಿವಲಿಂಗಮೂರ್ತಿ,     ಪುಟ್ಟಸಿದ್ದಮ್ಮ, ವೀರಭದ್ರಪ್ಪ, ಮಹೇಶ್ ಇತರರು ಹಾಜರಿದ್ದರು.
 

















Tuesday, 26 December 2017

ಮೆಡಿಕಲ್ ಸ್ಟೋರ್ಸ್ ಅಲ್ಲಿ ಏನೇಲ್ಲ ಮಾರಾಟವಾಗುತ್ತದೆ ಗೊತ್ತಾ.? ...ಶೀಘ್ರದಲ್ಲೇ ನಿರಿಕ್ಷೀಸಿ.. ಬಿಗ್ ಶಾಕ್.... ಸುದ್ದಿ ಕೊಡ್ತೇವೆ.ಹೊಸ ವರ್ಷಕ್ಕೆ ..... ಕಾದು ನೋಡಿ

ಮೆಡಿಕಲ್ ಸ್ಟೋರ್ಸ್ ಅಲ್ಲಿ ಏನೇಲ್ಲ ಮಾರಾಟವಾಗುತ್ತದೆ ಗೊತ್ತಾ.?



ಚಾಮರಾಜನಗರದ ಬಹುತೇಕ ಮೆಡಿಕಲ್ ಸ್ಟೋರ್ಸ್ ಗಳಲ್ಲಿ ಇನ್ನೇನಿರುತ್ತದೆ ಔಷದ ಅನ್ನುತ್ತೀರಾ.? ಜೊತೆಗೆ ಇನ್ನು ಇದೆ.. ಅದೇ...............



ಬಹುತೇಕ ಕಳಪೆ ಗುಣಮಟ್ಟದ ಪದಾರ್ಥ  ಅದರಲ್ಲೂ (.......???................???), ಮಾರಾಟವಾಗುತ್ತಿದ್ದರೂ ಯಾವೊಬ್ಬ ಅದಿಕಾರಿ ತಲೆ ಕೆಡಿಸಿಕೊಂಡಿಲ್ಲ. ಕೇಳಿದರೆ ನನ್ನ ವ್ಯಾಪ್ತಿಯಲ್ಲ .. ಎನ್ನುವರರೇ ,ಇಲ್ಲಿ ಸಿಗರೇಟ್ ,ಎಣ್ಣೆ ಮಾರಾಟ ಮಾಡಿದರೂ ಕೇಳಬೇಡಿ...............
ಶೀಘ್ರದಲ್ಲೇ ನಿರಿಕ್ಷೀಸಿ............. ಹೊಸ ವರ್ಷದತ್ತ ಹೆಜ್ಜೆ ಇಡುತ್ತಿರುವ ರಾಜ್ಯದ ಜನತೆ ಅದರಲ್ಲೂ ಚಾಮರಾಜನಗರ ಜನತೆಗೆ ಬಿಗ್ ಶಾಕ್.... ಸುದ್ದಿ ಕೊಡ್ತೇವೆ...... ಕಾದು ನೋಡಿ
ರಾಮಸಮುದ್ರ  ಎಸ್.ವೀರಭದ್ರಸ್ವಾಮಿ...............9480030980


continue story................
01-01-2017......
ಚಾಮರಾಜನಗರ ಈಗಾಗಲೇ ಧೂಳುಮಯ ಎತ್ತ ನೋಡಿದರೂ ಮಂಜಿನಂತೆ ಪಸರಿಸೋ ದೂಳು, ಧೂಳು ನಿಗ್ರಹಕ್ಕೆ ಜನ ಸಾಮಾನ್ಯ ದಿನ ಹರ ಸಾಹಸ. ಹೀಗಿರುವಾಗ ಮೆಡಿಕಲ್ಸ್ ಸ್ಟೋರ್ಸ್ ಅಲ್ಲಿ ಬಹುಶಃ ನಿಯಮದ ಪ್ರಕಾರ  ಎಂದರೆ ಈ ಮಾಸ್ಕ್ ಕಳಪೆ ಎನ್ನಬಹುದಾಗಿದೆ. ಇದನ್ನು ಪಡೆಯಲು ನಡೆಸಿದ ಕಾರ್ಯಾಚರಣೆ ಹೀಗಿದೆ ನೋಢಿ...
 ಪೋಲಿಸ್ ಸಿಬ್ಬಂದಿಯೊಬ್ಬರು ತಾವು ದೂಳಿನ ಗೋಳಿನಿಂದ ತಪ್ಪಿಸಿಕೊಳ್ಳಲು ಅಂಗಡಿಯೊಂದರಲ್ಲಿ ಮಾಸ್ಕ್ ಖರೀದಿ ಮಾಡಿದ್ದಾರೆ. ಆದರೆ ಅವರು ಪಡೆದ ಮಾಸ್ಕ್ ಗೆ ಬಿಲ್ ಕೇಳಿದರೆ ಕೊಡಲಿಲ್ಲ.. ಹೋಗಲಿ ಬಿಡಿ ಎಂದು ಮುಂದೆ ಹೋಗು ಹೋಗುತ್ತದೆ ಬಿಗ್ ಶಾಕ್... ಅದೇನು ಅಂತಿರಾ....ಉತ್ಪಾದನಾ ದಿನಾಂಕ... 2018 ಎಲ್ಲಿ ಮುದ್ರಿತವಾಗಬೇಕಿದ್ದ ಮಾಸ್ಕ್ 2017 ನವೆಂಬರ್ ಅಂತ್ಯ, ಡಿಸೆಂಬರ್ ಆರಂಭದಲ್ಲಿ ಮಾರಾಟವಾಗುತ್ತಿರುವುದು...
ಹೇಳಿ ಕೇಳಿ ಮೆಡಿಕಲ್ಸ್ ಸ್ಟೋರ್ ಉತ್ಪಾದನಾ ದಿನಾಂಕ, ಅವದಿ ಮೀರಿದ ದಿನಾಂಕ ನೋಢೋದು ಸಹಜ. ಆದರೆ ಈ ಮಾಸ್ಕ್ ಗೂ ಅವದಿ ಮೀರಿದ ದಿನಾಂಕ  ಇರೋಲ್ಲ  ಸರಿ, ಉತ್ಪಾದನಾ ದಿನ ಇರೋಲ್ವಾಂದ್ರೆ ಇದೆ.. ಮುಂದಿನ ವರ್ಷದ್ದು 2018 ರದ್ದು. ಪ್ರಸ್ತುತ ಸ್ವಾಮಿ ಈಗ 2017 ಡಿಸೆಂಬರ್ ಅಂದ್ರೆ ಮಾಸ್ಕ್ ಬೇಕೋ.. ಬೇಡ್ವೋ ಅಂತಾರೆ.. ಎಲ್ಲಿ ಹೋಗಿದ್ದೀರಾ ಔಷದ ನಿಯಂತ್ರಕ ಅದಿಕಾರಿಗಳೆ... ನೀವು ನಿದ್ದೆ ಮಾಡ್ತಿದೀರಾ ಅನ್ನೋದು ಇದ್ಕಿಂತ ಬೇಕಾ.. ಇನ್ನ ತೆರಿಗೆ ಕಟ್ಟಬೇಕಾಗುತ್ತದೆ  ಎಂದೋ ಏನೋ ರಶೀದಿ ಕೋಡೋದೆ ಇದ್ದರೆ ಗ್ರಾಹಕ ನಿಯಮದಡಿ ವಂಚನೆ ಎಂಧೆ ಪರಿಗಣಿಸಲ್ಪಡುತ್ತದೆ ನೆನಪಿರಲಿ...
 ಮಾಸ್ಕ್ ಪಡೆದ ಗ್ರಾಹಕ ಅದನ್ನು ಹಿಡಿದು ಔಷದ ನಿಯಂತ್ರಕರ ಸಹಾಯಕ ಅದಿಕಾರಿ ಬಳಿ ದೂರು ಕೊಟ್ಟರೆ ಮೌನ  ನಮ್ಮ ವ್ಯಾಪ್ತಿಗೆ ಬರೋಲ್ಲ ಎನ್ನವು ಉಡಾಫೆ ಆದರೆ ಸಿಗರೇಟ್, ಎಣ್ಣೆ, ಸೀಮೆಎಣ್ಣೆ ಮಾರಿದರೂ ಕೇಳಬೇಡ್ರಿ.. ನಿಮಗೆ ಗೊತ್ತು ನನ್ನ ಕೆಸಲ ಅನುಮತಿ ನೀಡೋದಷ್ಟೆ ಅಲ್ಲ... ..................................ಕೆಲಸವೂ ಇದೆ ಎನ್ನೋದನ್ನ ಮರೆತೀದ್ದೀರಾ ಅನ್ನೋದ್ನ ನೇರವಾಗಿ ಹೇಳ್ತೀನಿ ನಿಮ್ಮ ಪಾರ್ಟ್ ಆಫ್ ನೇಚರ್ ವರ್ಕ್ ಏನು ಅನ್ನೋ ಪ್ರಶ್ನೆಗೆ ಉತ್ತರ ನೀಡ್ತೀರಾ ?

ಗ್ರಾಹಕರ ದೂರಿನಲ್ಲಿ ಏನಿದೆ.: -ಇಲಾಖೆ ಅದಿಕಾರಿಯ ನಾಮಾಂಕಿತದಲ್ಲಿ ಪ್ರಾರಂಭವಾದ ಪತ್ರ

ಮಾನ್ಯರೇ,
   ವಿಷಯ: ಕೆಲವು ಮೆಡಿಕಲ್ ಸ್ಟೋರ್ಸ್‍ಗಳಲ್ಲಿ ಕಳಪೆ ಗುಣಮಟ್ಟದ ಮೂಗಿಗೆ ಧರಿಸುವ ಮಾಸ್ಕ್ ಮಾರಾಟದ ಬಗ್ಗೆ ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಚಾಮರಾಜನಗರ -------------------------------------------- ಕಳಪೆ ಗುಣಮಟ್ಟದ ಮಾಸ್ಕ್ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಅದು ಎಷ್ಟರ ಮಟ್ಟಿಗೆ ಗುಣಮಟ್ಟ ಇದೆ ಎಂದರೆ ನಂಬಲು ಅಸಾದ್ಯವಾಗಿದೆ. 2018  ರ ಜನವರಿ ಮಾಹೆಯಲ್ಲಿ ತಯಾರಾದ ಮಾಸ್ಕ್ ಈಗ 2017 ರ ಡಿಸೆಂಬರ್ ಮಾಹೆಯಲ್ಲಿ ಮಾರಾಟವಾಗುತ್ತಿರುವುದು ಅನುಮಾನ ಮೂಡಿಸುತ್ತಿದೆ. ಆ ಮಾಸ್ಕ್ ಯಾವ ಕಂಪನಿಯದು , ಉತ್ಪಾದನೆಯ ದಿನಾಂಕ, ಬ್ಯಾಚ್ ಸಂಖ್ಯೆ, ಮುಕ್ತಾಯದ ದಿನ ಎಲ್ಲವೂ ನಮೂದಾಗಬೇಕೆಂಬ 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆ ನಿಯಮದಲ್ಲಿದ್ದರೂ   ಖighಣ (guಚಿಡಿಜ) bಟಚಿಛಿಞ ಠಿoಟಟuಣioಟಿ mಚಿsಞ  ಎಂಬ ಕಂಪನಿಯ ಮಾಸ್ಕ್ ಮಾರಾಟವಾಗುತ್ತಿದೆ. ಇಲ್ಲಿ ಎಲ್ಲಾ ನಿಯಮಗಳು ಉಲ್ಲಂಘನೆಯಾಗಿದ್ದು  ಇದರ ಮುಖ ಬೆಲೆ 45 ರೂಪಾಯಿ ಇದ್ದು ಅದನ್ನು 40 ರೂಪಾಯಿಗೆ ಮಾರಾಟ ಮಾಢುತ್ತಿದ್ದಾರೆ. ಒಟ್ಟಾರೆ  1986 ರ ಗ್ರಾಹಕ ಸಂರಕ್ಷಕಾ ಕಾಯ್ದೆಯಡಿ ಗ್ರಾಯಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಇದರ ಸಾಮಾಥ್ರ್ಯ ಹೇಗಿದೆ , ಉತ್ಪಾದನಾ ದಿನಾಂಕ, ಮುಕ್ತಾಯದ ದಿನಾಂಕ ಯಾವಾಗ ಎಂಬುದನ್ನು ತಾವು ಖಾತ್ರಿ ಪಡಿಸಬೇಕಾಗಿದೆ. ಕಳಪೆ, ಉತ್ತಮ ಗುಣಮಟ್ಟದ ಪರಿಶೀಲನೆ ಮಾಡಿ ತಪಾಸಣಾ ವರದಿಯನ್ನು  ಎರಡು ಮೂರು ದಿನದಲ್ಲಿ ಸಿದ್ದಪಡಿಸಿ ವರದಿ ನೀಡಲು ಕೋರುತ್ತೇವೆ. ನೀವು ನೀಡುವ ಅಂತಿಮ ವರದಿಯೂ  ಗ್ರಾಹಕ ಸಂರಕ್ಷಣಾ ನ್ಯಾಯಾಲಯದಲ್ಲಿ ಸಾಕ್ಷಿಯೂ ಆಗಬಹುದು ಎಂದು ತಿಳಿಸಲು ಇಚ್ಚಿಸುತ್ತೇನೆ ಎಂದು 5-12-2017 ರಂದು ದೂರು ನೀಡಿದರ ನೋ ಆನ್ಸರ್...ಇದನ್ನು ಲಿಖಿತವಾಗಿ ಉತ್ತರ ಗ್ರಾಹಕ ನ್ಯಾಯಾಲಯದಲ್ಲಿ ದಾಖಲು ಮಾಡಲು ಬೇಕಾದರೆ ಅಗತ್ಯ ಎಂದು ............... ಅರ್ಜಿಯನ್ನ 26-12-2017 ರಂದು ಅವರಿಗೆ ಸಲ್ಲಿಸಲಾಗಿದೆ. ....

ಮಾಸ್ಕ್ ನ ಗುಣಮಟ್ಟ ಎಷ್ಟು ದಿನ? ಅನ್ನೋದು ಕೇವಲ ವೈದ್ಯರಿಗೆ ಗೊತ್ತು. ಆದರೆ 40, 50 ಕೊಟ್ಟು ಅದನ್ನು ಬಟ್ಟೆ ಹೊಗೆಯುವ ರೀತಿ ಹೊಗೆದು ಹಾಕಿಕೊಂಡರೆ ಆರೋಗ್ಯಕ್ಕಿಂತ ಅನಾರೋಗ್ಯವೇ ಜಾಸ್ತಿ ನೆನಪಿರಲಿ....... 

ಹೆಣ್ಣು ಮಕ್ಕಳು ಬುದ್ದಿವಂತರು: ಮಾಸ್ಕ್ ಬಳಸುವುವವರ ಸಂಖ್ಯೆ ವಿರಳ, ಹಾಗಾಂತ ಅವರು ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಅಂತಲ್ಲ, ಮಾಸ್ಕ್ ಬದಲು ಸ್ಕಾರ್ಪ್ ಬಳಸುತ್ತಿರುವುದು ಮೂಗಿಗೆ ಧೂಳು ಹೋಗುವುದು ಕಡಿಮೆ ಆದರೆ ಅನ್ಯರು ಮಾಸ್ಕ್ ಗೆ ಮೋರೆ ಹೋಗಿ ಕಾಸು ಕೊಟ್ಟು ಅನಾರೋಗ್ಯವನ್ನು ಪಡೆಯುತ್ತಿದ್ದಾರೆ ಎನ್ನಬಹುದು.



ಬೇರೆ ಮಾರ್ಗ.... ಸೂಕ್ತ ಅಂಗಡಿಗಳಲ್ಲಿ ಸಿಗುವ ಬಟ್ಟೆ,  ಸ್ಕಾರ್ಪ್  ಅಥವಾ ಕರವಸ್ತ್ರ ನಿಮಗೆ ಸೂಕ್ತ ..ಕಾರಣ ಇದನ್ನು ಪದೆ ಪದೆ ಹೊಗೆದು ಮೂಗಿಗೆ ಕಟ್ಟಿಕೊಂಡು ಬಳಸಬಹುದು. ಆದರೆ ನೀವು ಹಾಕಿರುವ ಮಾಸ್ಕ್ ಟೈರ್ ಸುಟ್ಟ ವಾಸನೆಯೂ ಬರಬಹುದು ನೆನಪಿರಲಿ..ಗಮನಿಸಿ.. ಮುಂದೆ ಆರೋಗ್ಯ ದೌರ್ಬಾಗ್ಯ ಖಂಡಿತ.


ಏ..ಗ್ರಾಹಕ ರಶೀದಿ ಇಲ್ಲದೇ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣವನನ್ನ ದಾಖಲಸಿಬಹುದು ....ಕೆಲವರು ಬುದ್ದಿವಂತರು, ಬಿಲ್ ಕೊಟ್ಟರೆ ತಾನೆ ಪ್ರಕರಣ ದಾಖಲಿಸೋದು ಕೊಡದೇ ಇದ್ದರೆ ಹೇಗೆ ಮಾಡ್ತಾರೆ ಅನ್ನೋದು ಕೆಲವರ ವಾದ.. ರಶೀದಿ ಇಲ್ಲದೆ ಪ್ರಕರಣ ದಾಖಲಿಸಬಹುದು.ಪ್ರಕರಣ ದಾಖಲಸಿ ನ್ಯಾಯ ಪಡೆದುಕೊಳ್ಳುವ ಹಂಬಲ ಶಕ್ತಿ ನಿಮಗಿದ್ದರೆ... ಹೆಚ್ಚಿನ ಮಾಹಿತಿಗಾಗಿ ನ್ಯಾಯಾಲಯದ ರಸ್ತೆಯಲ್ಲಿರುವ ಗ್ರಾಹಕ ನ್ಯಾಯಾಲಯದ ಬಳಿ ಹೋಗಿ ಆಡಳಿತಾದಿಕಾರಿಗಳ ಸಲಹೆ ಪಡೆದು ಪ್ರಕರಣ ದಾಖಲಿಸಿ...


ಅಂಗಡಿಯಲ್ಲಿ ಔಷದವಿದ್ದು ಇಲ್ಲ ಎಂದು ಉತ್ತರ ನೀಢಿದರೂ, ಕಳಪೆ ಮಟ್ಟದ ಪದಾರ್ಥ ಕೊಟ್ಟರೂ, ಅವದಿ ಮೀರಿದ ಔಷದ ಕೊಟ್ಟರೂ, ರಶೀದಿ ಕೊಡದೇ ಇದ್ದರೂ ಅಕ್ಷಮ್ಯ ಅಪರಾದ... ಗ್ರಾಹಕ  ಎಚ್ಚರ

x

ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ,ಡಿ.27 ರಂದು ನಗರದಲ್ಲಿ ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನಡಿ. 29ರಂದು ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಮಾನವ ದಿನಾಚಾರಣೆ (26-12-2017)

    ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಡಿ. 26 :- ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ  ಹಾಗೂ ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜಿಲ್ಲೆಯ ಆಸಕÀ್ತ ಹಾಗೂ ಅರ್ಹ ಶಿಕ್ಷಕರು ವರ್ಗಾವಣೆ ಬಯಸಿದಲ್ಲಿ ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಡಿಸೆಂಬರ್ 29ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜನವರಿ 10ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ. ಜನವರಿ 12ರಂದು ಅರ್ಜಿ ಸಲ್ಲಿಸಿದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ನೀಡಿ ಸ್ವೀಕೃತಿ ಪಡೆಯಬೇಕು. ಜನವರಿ 19ರಂದು ಕೋರಿಕೆ ವರ್ಗಾವಣೆ ಬಯಸಿರುವ ಶಿಕ್ಷಕರ ಆದ್ಯತಾ ಪಟ್ಟಿಯನ್ನು ವೆಬ್ ಸೈಟïನಲ್ಲಿ ಪ್ರಕಟಿಸಲಾಗÀುವುದÀು. ಜನವರಿ 24ರಂದು ಕೋರಿಕೆ ಹಾಗೂ ಪರಸ್ಪರ ವರ್ಗಾವಣೆ ಸಂಬಂಧ ತಾತ್ಕಾಲಿಕ ಆದ್ಯತಾ ಪಟ್ಟಿಯ ಕುರಿತು  ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನ.
ಫೆಬ್ರವರಿ 6ರಂದು ಕೋರಿಕೆ ವರ್ಗಾವಣೆ ಬಯಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪಟ್ಟಿಯನ್ನು (ಘಟಕದ ಹೊರಗೆ) ಪ್ರಕಟಿಸಲಾಗುವುದು. ಫೆಬ್ರವರಿ 8 ರಿಂದ 12ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಘಟಕದ ಒಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಗುವುದು. ಫೆಬ್ರವರಿ 21 ರಿಂದ 24ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ ಒಳಗಿನ ಅಂತರ ಜಿಲ್ಲಾ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಫೆಬ್ರವರಿ 25 ರಿಂದ 28ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅಂತರ ವಿಭಾಗ ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗುವುದು. ಮಾರ್ಚ್ 1 ರಿಂದ 3ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ನೋಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಡಿ. 27ರಂದು ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಡಿ. 26- ಚಾಮರಾಜನಗರ ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಡಿಸೆಂಬರ್ 27ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಎನ್‍ಜೆವೈ ಉತ್ತವಳ್ಳಿ, ಮೂಡ್ನಕೂಡು, ಎನ್‍ಜೆವೈ ಹೆಗ್ಗವಾಡಿ, ಮುಕಡಹಳ್ಳಿ, ತಮ್ಮಡಹಳ್ಳಿ, ಉಡಿಗಾಲ, ದೇವಲಪುರ, ಕಲ್ಪುರ ಹಾಗೂ ನಂಜದೇವನಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
 ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಡಿ. 29ರಂದು ಜಿ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಡಿ. 26 - ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಡಿ. 28ರಂದು ಹನೂರಿನಲ್ಲಿ ಜನಸಂಪರ್ಕ ಸಭೆ

ಚಾಮರಾಜನಗರ, ಡಿ. 26  ಕೊಳ್ಳೇಗಾಲ ತಾಲೂಕು ಹನೂರು ಹೋಬಳಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿಸೆಂಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ನೀಡಿ ಜನಸಂಪರ್ಕ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದÉ.

ಮಹಿಳಾ ಸಂಸ್ಕøತಿ ಉತ್ಸವ : ಕಲಾ ಪ್ರದರ್ಶಕರಿಂದ ಮಾಹಿತಿ ಆಹ್ವಾನ
ಚಾಮರಾಜನಗರ, ಡಿ. 26- ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮಹಿಳೆಯರನ್ನು ಸಾಂಸ್ಕøತಿಕವಾಗಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಜನವರಿ 20 ಹಾಗೂ 21ರಂದು ಕೊಳ್ಳೇಗಾಲ ಪಟ್ಟಣದ ಎಂಜಿಎಸ್‍ವಿ ಕಾಲೇಜು ಆವರಣದಲ್ಲಿ ಮಹಿಳಾ ಸಂಸ್ಕøತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.
ಜಿಲ್ಲೆಯ ಆಸಕ್ತ ಮಹಿಳಾ ಕಲಾವಿದರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉತ್ಸವದಲ್ಲಿ ಭಾಗವಹಿಸಿ ಅವರ ಕಲೆಯನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಪ್ರದರ್ಶಿಸುವ ಕಲಾ ಪ್ರಕಾರ ಹಾಗೂ ತಂಡದ ಸದಸ್ಯರ ಸವಿವರ ಮಾಹಿತಿಯನ್ನು ಜನವರಿ 4ರಂದು ಸಂಜೆ 5 ಗಂಟೆಯೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನೊಂದಾಯಿಸಿಕೊಳ್ಳಲು ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯನ್ನು ಪ್ರದರ್ಶಿಸುವ ಬಗ್ಗೆ ನಂತರ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಡಿ. 29ರಂದು ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ವಿಶ್ವ ಮಾನವ ದಿನಾಚಾರಣೆ

ಚಾಮರಾಜನಗರ, ನ. 09 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.  ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ರಾಷ್ಟ್ರ ಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಯದ ಕುಲಪತಿಗಳಾದ ಪ್ರೊ. ಪದ್ಮಶೇಖರ್ ಅವರು ವಿಶೇಷ ಉಪನ್ಯಾಸ ನೀಡುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಷ್ಟ್ರ ಕವಿ ಕುವೆಂಪು ಅವರ ಕುರಿತಂತೆ ಎಸ್.ಜಿ. ಮಹಾಲಿಂಗಸ್ವಾಮಿ ಮತ್ತು ತಂಡ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಮೈಸೂರಿನ ಜಿ. ಗಂಗಾಧರ್ ನಿರ್ದೇಶನದಲ್ಲಿ, ಮಂಡ್ಯದ ಸದ್ವಿದ್ಯಾ ತಂಡವು ಕುವೆಂಪು ಅವರು ವಿರಚಿತ ಜಲಗಾರ ನಾಟಕವನ್ನು ಅಭಿನಯಿಸಲಿದೆ.

ಡಿ. 27ರಂದು ನಗರದಲ್ಲಿ ಸಾಧಕರೊಂದಿಗೆ ಸಂವಾದ, ಕವಿಗೋಷ್ಠಿ ಕಾರ್ಯಕ್ರಮ

ಚಾಮರಾಜನಗರ, ಡಿ. 21 - ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜೆಎಸ್‍ಎಸ್ ಮಹಿಳಾ ಕಾಲೇಜು ಇವರ ಸಹಯೋಗದೊಂದಿಗೆ ಡಿಸೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಡಾ. ಕೃಷ್ಣಮೂರ್ತಿ ಹನೂರು ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎ.ಜಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಜೆಎಸ್‍ಎಸ್ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಧಕರಾದ ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರೂ ಆದ ಪ್ರೊ. ಮಲೆಯೂರು ಗುರುಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿ. ನಾಗಣ್ಣ ಅಧ್ಯಕ್ಷತೆ ವಹಿಸುವರು. ಕವಿ ಸೋಮಶೇಖರ ಬಿಸಲ್ವಾಡಿ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಎಂ. ಪುಟ್ಟತಾಯಮ್ಮ, ಚಾ.ಶ್ರೀ. ಜಗದೀಶ್, ಗುಂ.ಪು. ದೇವರಾಜು, ಗು.ಬಿ. ರಮೇಶ್, ಎನ್. ಮಹೇಶ್, ಡಾ. ಕೆ. ಲಕ್ಷ್ಮಿ ಪ್ರೇಮಕುಮಾರ್, ಸಿ. ಶಂಕರ್ ಅಂಕನಶೆಟ್ಟಿಪುರ, ಗಿರೀಶ್ ಹರವೆ, ಸಿ. ಸಿದ್ದರಾಜು, ಬಾಳಗುಣಸೆ ಮಂಜುನಾಥ, ಬಿ.ಎಸ್. ಗವಿಸ್ವಾಮಿ, ಮದ್ದೂರು ದೊರೆಸ್ವಾಮಿ, ಜಿ.ಡಿ. ದೊಡ್ಡಯ್ಯ, ನಂಜುಂಡಸ್ವಾಮಿ ಹರದನಹಳ್ಳಿ, ಎಂ. ರಾಜೇಂದ್ರ ಪ್ರಸಾದ್, ಕಾಳಿಂಗಸ್ವಾಮಿ ಸಿದ್ದಾರ್ಥ ಹಾಗೂ ನಾಟಕ ಭಾರ್ಗವ ಕೆಂಪರಾಜು ಆಹ್ವಾನಿತ ಕವಿಗಳಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡಿ.27 ರಂದು ನಗರದಲ್ಲಿ  ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ

      ಚಾಮರಾಜನಗರ ನ.25.- ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಡಿಸೆಂಬರ್ 27 ರಂದು ಸಂಜೆ 6.30  ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕ, ಗಾಯಕಿಯರು ಭಾಗವಹಿಸಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ನಾದಮಯ ಈ ಲೋಕವೆಲ್ಲಾ, ಕರೆದರೂ ಕೇಳದೆ, ಏರಿ ಮೇಲೆ ಏರಿ ಮೇಲೆ, ನನ್ನದೆಯ ಕೋಗಿಲೆಯ, ಕುಲದಲ್ಲಿ ಕೀಳ್ಯಾವುದೋ, ನಾನಿರುವುದೆ ನಿಮಗಾಗಿ, ಎಲ್ಲೆಲ್ಲಿ ನೋಡಲಿ ನಿನನ್ನೆ ಕಾಣುವೇ, ಯಾರೇ ನೀನು ರೋಜಾ ಹೂವೆ, ತನಂ ನಂ ತನಂ ನಂ, ಬೊಂಬೆ ಹೇಳತೈತೆ, ಊರಕಣ್ಣು ಮಾರಿಕಣ್ಣು, ಬೆಳ್ಳಿ ಮೂಡಿತು, ಈ ಶತಮಾನದ ಮಾದರಿ ಹೆಣ್ಣು, ಸೇರಿದಂತೆ ಇನ್ನು ಮುಂತಾದ ಪ್ರಸಿದ್ಧ ಚಲನಚಿತ್ರಗೀತೆಗಳನ್ನು ಗಾಯಕರು ಹಾಡಲಿದ್ದಾರೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ. ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು.
      ಮೈಸೂರಿನ ಹೆಸರಾಂತ ಸುನಿತ ಚಂದ್ರಕುಮಾರ್ ಅವರ ನಿರ್ವಹಣೆಯಲ್ಲಿ   ರಘುಲೀಲಾ ಸಂಗೀತಾ ಮಂದಿರ ಕಲಾವಿದರು  ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
 ಕಲಾವಿದರಾದ ಶ್ರೇಯಾ ಕೆ.ಭಟ್, ಸಿಂಚನ ಸಿ, ವಸುಧಾಶಾಸ್ತ್ರಿ, ಅಕ್ಷರ ಪ್ರಸಾದ್, ನವನೀತ ಕೃಷ್ಣ, ಕಾರ್ತಿಕ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
   ವಾದ್ಯ ವೃಂದದಲ್ಲಿ ಮ್ಯಾಂಡೋಲಿನ-ಸಿ. ವಿಶ್ವನಾಥ್, ಕೊಳಲು-ಸಮೀರ್‍ರಾವ್, ಗಿಟಾರ್-ಪ್ರದೀಪ್ ಕಿಗ್ಗಾಲ್, ಕೀಬೋರ್ಡ್-ಪುರುಷೋತ್ತಮ್, ತಬಲ-ಆತ್ಮಾರಾಮ್, ರಿದಮ್‍ಪ್ಯಾಡ್-ವಿನಯ್ ರಂಗಧೋಳ್ ಇರಲಿದ್ದಾರೆ.  ಭಾರತಿ ಕುಲಶೇಖರ್ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.
   
      ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.













Monday, 25 December 2017

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆ (24-12-2017) # veerabhadra swamy


ಡಿ.27 ರಂದು ನಗರದಲ್ಲಿ  ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ

      ಚಾಮರಾಜನಗರ ನ.25.- ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಡಿಸೆಂಬರ್ 27 ರಂದು ಸಂಜೆ 6.30  ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕ, ಗಾಯಕಿಯರು ಭಾಗವಹಿಸಿ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ನಾದಮಯ ಈ ಲೋಕವೆಲ್ಲಾ, ಕರೆದರೂ ಕೇಳದೆ, ಏರಿ ಮೇಲೆ ಏರಿ ಮೇಲೆ, ನನ್ನದೆಯ ಕೋಗಿಲೆಯ, ಕುಲದಲ್ಲಿ ಕೀಳ್ಯಾವುದೋ, ನಾನಿರುವುದೆ ನಿಮಗಾಗಿ, ಎಲ್ಲೆಲ್ಲಿ ನೋಡಲಿ ನಿನನ್ನೆ ಕಾಣುವೇ, ಯಾರೇ ನೀನು ರೋಜಾ ಹೂವೆ, ತನಂ ನಂ ತನಂ ನಂ, ಬೊಂಬೆ ಹೇಳತೈತೆ, ಊರಕಣ್ಣು ಮಾರಿಕಣ್ಣು, ಬೆಳ್ಳಿ ಮೂಡಿತು, ಈ ಶತಮಾನದ ಮಾದರಿ ಹೆಣ್ಣು, ಸೇರಿದಂತೆ ಇನ್ನು ಮುಂತಾದ ಪ್ರಸಿದ್ಧ ಚಲನಚಿತ್ರಗೀತೆಗಳನ್ನು ಗಾಯಕರು ಹಾಡಲಿದ್ದಾರೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ. ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು.
      ಮೈಸೂರಿನ ಹೆಸರಾಂತ ಸುನಿತ ಚಂದ್ರಕುಮಾರ್ ಅವರ ನಿರ್ವಹಣೆಯಲ್ಲಿ   ರಘುಲೀಲಾ ಸಂಗೀತಾ ಮಂದಿರ ಕಲಾವಿದರು  ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
 ಕಲಾವಿದರಾದ ಶ್ರೇಯಾ ಕೆ.ಭಟ್, ಸಿಂಚನ ಸಿ, ವಸುಧಾಶಾಸ್ತ್ರಿ, ಅಕ್ಷರ ಪ್ರಸಾದ್, ನವನೀತ ಕೃಷ್ಣ, ಕಾರ್ತಿಕ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
   ವಾದ್ಯ ವೃಂದದಲ್ಲಿ ಮ್ಯಾಂಡೋಲಿನ-ಸಿ. ವಿಶ್ವನಾಥ್, ಕೊಳಲು-ಸಮೀರ್‍ರಾವ್, ಗಿಟಾರ್-ಪ್ರದೀಪ್ ಕಿಗ್ಗಾಲ್, ಕೀಬೋರ್ಡ್-ಪುರುಷೋತ್ತಮ್, ತಬಲ-ಆತ್ಮಾರಾಮ್, ರಿದಮ್‍ಪ್ಯಾಡ್-ವಿನಯ್ ರಂಗಧೋಳ್ ಇರಲಿದ್ದಾರೆ.  ಭಾರತಿ ಕುಲಶೇಖರ್ ಅವರು ಕಾರ್ಯಕ್ರಮ ನಿರೂಪಿಸಲಿದ್ದಾರೆ.ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.  



ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪರಿಶೀಲನೆ  

ಚಾಮರಾಜನಗರ;ಡಿ-24  ಉತ್ತೂರು ಏತ ಯೋಜನೆಯಡಿ ಚಾಮರಾಜನಗರ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪರಿಶೀಲನೆಯನ್ನು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೊದಲು ಅರಕಲವಾಡಿ ಕೆರೆಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳಿಂದ ಯೋಜನೆ ಕಾಮಗಾರಿ ಬಗ್ಗೆ ವಹಿಸಲಾಗಿರುವ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆರೆಗೆ ನೀರು ತುಂಬಿಸುವ ಮಾರ್ಗಗಳು ಹಾಗೂ ಇತರೆ ಅವಶ್ಯಕ ಪ್ರಕ್ರಿಯೆ ಕುರಿತು ವಿವರ ಪಡೆದುಕೊಂಡರು.
ಕೆರೆಗೆ ನೀರು ತುಂಬಿಸುವ ಕೆಲಸ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ತ್ವರಿತವಾಗಿ ಕಾಮಗಾರಿ ನಡೆಸಬೇಕು. ಈ ಮೂಲಕ ಗ್ರಾಮೀಣರಿಗೆ ನೆರವಾಗಬೇಕೆಂದು ಶಾಸಕರು ಸೂಚಿಸಿದರು. ಇದೇ ವೇಳೆ ಗ್ರಾಮಸ್ಥರು ಮಾಡಿಕೊಂಡ ಮನವಿಯನ್ನು ಶಾಸಕರು ಆಲಿಸಿದರು.
ಬಳಿಕ ಸುವರ್ಣನಗರ ಕೆರೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿಯೂ ಕಾಮಗಾರಿ ಕೈಗೊಳ್ಳುವ ಸಂಬಂಧ ನಡೆಸಿರುವ ಸಿದ್ದತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ತಿಳಿಸಿದ ಶಾಸಕರು ವಿಳಂಬಮಾಡದೆ ಈ ಭಾಗದಲ್ಲಿ ಕಾಮಗಾರಿ ನಡೆಯಬೇಕು ಎಂದು ತಿಳಿಸಿದರು.
ಬಳಿಕ ನೀರಿನ ಬೃಹತ್ ಪೈಪ್‍ಗಳನ್ನು ದಾಸ್ತಾನು ಮಾಡಿರುವ ಯಾರ್ಡ್‍ಗೆ ಭೇಟಿ ನೀಡಿ ಪೈಪ್ ಅಳವಡಿಕೆಗೆ ಮೊದಲು ಕೈಗೊಂಡಿರುವ ಪೂರ್ವಸಿದ್ದತಾ ಕಾಮಗಾರಿಯನ್ನು ಹಲಹೊತ್ತು ನಿಂತು ಪರಿವೀಕ್ಷಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು ಆಲಂಬೂರು ಏತ ಯೋಜನೆಯ 3ನೇ ಹಂತದಲ್ಲಿರುವ ಉತ್ತೂರು ಕೆರೆಯಿಂದ ಪಂಪ್ ಮಾಡಿ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗೆ ನೀರು ತುಂಬಿಸಲಾಗುತ್ತದೆ. ಇದೇ ಯೋಜನೆಯಡಿ ಗುಂಡ್ಲುಪೇಟೆ ತಾಲ್ಲೂಕಿನ 9 ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ ಎಂದರು.
ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಪೈಪ್‍ಗಳಿಗೆ ಇನ್‍ಲೈನಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಇನ್ನು 3 ತಿಂಗಳಲ್ಲಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟು 53 ಕೋಟಿ ರೂ ವೆಚ್ಚದಲ್ಲಿ ಉತ್ತೂರು ಏತ ಯೋಜನೆಯಡಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಬಗರ್ ಹುಕುಂ ಸಾಗುವಳಿ ಸಮಿತಿಯ ಸದಸ್ಯರಾದ ಸೋಮಲಿಂಗಪ್ಪ, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನೀಯರ್ ರಾಜೇಂದ್ರ ಪ್ರಸಾದ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sunday, 24 December 2017

ಮುಂದಾಗಬಹುದಾದ ಅವಘಡ ತಪ್ಪಿಸಿದ ಎಎಸ್ಐ.! 24-12-2017

*ಮುಂದಾಗಬಹುದಾದ ಅವಘಡ ತಪ್ಪಿಸಿದ ಎಎಸ್ಐ.!


 ಸರ್ಕಾರಿ‌ ಬಸ್ ನ ಹಿಂಬಾಗದ ಟೈರ್ ಹೊರಗೆ ಬಂದಿರುವುದು. ಪಕ್ಕದಲ್ಲಿ ಬೇಗ್ ಸಾಹೇಬ್.


        ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ  ..9480030980

*ರಸ್ತೆಯಲ್ಲಿ ಅಪಘಾತವಾದರೆ ಹೆಚ್ಚು ಗಾಯಾಳುಗಳ ಪ್ರಾಣ ರಕ್ಷಣೆ ಮಾಡೋದರಲ್ಲಿ ಆರಕ್ಷಕ ವರ್ಗವೇ ಹೆಚ್ಚು ಹೀಗಿರುವಾಗ ಇಲ್ಲಿ ಆರಕ್ಷಕ ಸಿಬ್ಬಂದಿಯೋರ್ವ ಆಗುವ ಅವಘಡವೊಂದನ್ನ ತಪ್ಪಿಸಿದ್ದಾರೆ ಎಂದರೆ ನಂಬುವಿರಾ ? ಖಂಡಿತ ನಂಬಲೇ ಬೇಕು.
*ಚಾಮರಾಜನಗರ ಸಂಚಾರಿ ಠಾಣಾ ಎ.ಎಸ್.ಐ.ಬೇಗ್ ಎಂಬುವವರೆ ಮುಂದೆ ಆಗುವ ಅವಘಡವೊಂದನ್ನ ತಪ್ಪಿಸಿದ್ದಾರೆ ಎನ್ನಲಾಗಿದೆ.
*ಆಗಿದ್ದೇನು ಮತ್ತು ಮಾಡಿದ್ದೇನು? :- ಚಾಮರಾಜನಗರ ದಿಂದ ಜ್ಯೋತಿಗೌಡನಪುರಕ್ಕೆ ರಾಮಸಮುದ್ರ ಮಾರ್ಗವಾಗಿ ಸರ್ಕಾರಿ ಬಸ್ ತೆರಳುತ್ತಿದ್ದು  ಬಸ್ ನ ಹಿಂಬಾಗದ ಟೈರ್ ಒಂದು ಕಳಚಿ ಬೀಳುತ್ತಿದ್ದನ್ನ ಗಸ್ತಿನಲ್ಲಿದ್ದ ಬೇಗ್ ಅವರು ಗಮನಿಸಿ ರಾಮಸಮುದ್ರ ಠಾಣಾ ಸಮೀಪ ಅಡ್ಡಗಟ್ಟಿ ಚಾಲಕನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಚಾಲಕ ದನ್ಯವಾದ ಅರ್ಪಿಸಿ ನಂತರ ಅಲ್ಲಿದ್ದ ಪ್ರಯಾಣಿಕರನ್ನ ಬೇರೆ ಬಸ್ಸಿಗೆ ಹತ್ತಿಸಿ ಕಳಿಸಿದ್ದಾರೆ.    *ಬಹುಶಃ ಎಲ್ಲರೂ ತಿಳಿದುಕೊಂಡಿರಬಹುದು    ಹೆಚ್ಚು ಅಪಘಾತವಾಗುತ್ತಿರಲಿಲ್ಲ ಎಂದು, ಖಂಡಿತ ನಿಮ್ಮ ಊಹೆ ತಪ್ಪು ಎಂದು ನಾನು ಹೇಳಲು ಬಯಸುತ್ತೇನೆ.
*ಬಸ್ ಸ್ವಲ್ಪ ಸ್ವಲ್ಪ, ಅಲುಗಾಡಿ ಅಲುಗಾಡಿಯೇ, ಚಾಲಕನ ಅರಿವೆಗೆ ಬಾರದೆ ಮುಂದೆ ಹೋಗುತ್ತಿದ್ದರೂ ಹೆಚ್ಚು ಹಳ್ಳ ದಿಣ್ಣೆ ಸಿಕ್ಕರೆ ಪಲ್ಟಿ ಹೊಡೆಯುವುದರಲ್ಲಿಯೂ ಸಂಶಯವೇ ಇಲ್ಲ‌. ತಿಳಿದಿರಲಿ.
*ಬಸ್ ಬೂದಿತಿಟ್ಟು ಕೆರೆ ಏರಿ ಮೇಲೆ ಬಸ್ ಹೋಗುತ್ತಿದ್ದಾಗ ಸ್ವಲ್ಪ ಅಚಾನಕ್ ಆಗಿ ದಾರಿ ತಪ್ಪಿದರೂ ಕೆರೆಗೆ ಬೀಳುವುದರಲ್ಲಿ ಅನುಮಾನವೇ ‌ಇಲ್ಲ.
* ಒಟ್ಟಾರೆ ಬಸ್ಸಿನಲ್ಲಿದ್ದ ೨೫ ಕ್ಕೂ ಹೆಚ್ಚು ಜನರಿಗೆ ಮುಂದೆ ಆಗಬಹುದಾಗಿದ್ದ ಅನಾಹುತವನ್ನ ಅರಿತ ಬೇಗ್ ಅವರ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ ಎನ್ನಬಹುದು.

Saturday, 23 December 2017

ಸಂತ ಪ್ರಾನ್ಸಿಸ್ಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರದ ಕ್ರಿಸ್‍ಮಸ್ (23-12-2017)

ಸಂತ ಪ್ರಾನ್ಸಿಸ್ಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರದ ಕ್ರಿಸ್‍ಮಸ್ 


                    ರಾಮಸಮುದ್ರ ಎಸ್.ವೀರಭದ್ರಸ್ವಾಮಿ---9480030980

ಚಾಮರಾಜನಗರ ಡಿ.- ರಾಮಸಮುದ್ರದಲ್ಲಿರುವ  ಸಂತ ಪ್ರಾನ್ಸಿಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಂತ ಪ್ರಾನ್ಸಿಸ್ ಶಾಲೆಯ ಮುಖ್ಯಸ್ಥರಾದ ಆಗ್ನಲ್ ಅಲ್ಮೇಡಾ ಅವರು ಮಾತನಾಡಿ ಮಕ್ಕಳಲ್ಲಿ  ದೇವರ ಬಗ್ಗೆ ಶ್ರದ್ಧೆ ಮತ್ತು ಇರಬೇಕು. ಪ್ರತಿಯೊಬ್ಬರಿಗೂ ದೇವರು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ಎಂದು ತಿಳಿಸಿದರು.
ಎ¯್ಲರನ್ನು ಪ್ರೀತಿಯಿಂದ ಕಾಣಬೇಕು ಎಲ್ಲಾ ಮಕ್ಕಳು ದೇವರ ಸಮಾನ. ಮಕ್ಕಳಿಗೆ ನಾವು ನೀಡುವ ಉತ್ತಮ ವಿದ್ಯಾಭ್ಯಾಸ ಹಾಗೂ ಒಳ್ಳೆಯ ಗುಣಗಳು ಮುಂದೆ ಅವರನ್ನು ಎತ್ತರದ ಜೀವನದ ಬದುಕಿಗೆ ಕರೆದೊಯುತ್ತದೆ. ಮಕ್ಕಳು ಹಿರಿಂiÀiರಿಗೆ ಗೌರವಿಸುಸುವುದರಿಂದ ಮಕ್ಕಳ ಹಿರಿಮೆ ಹೆಚ್ಚುತ್ತದೆ ಎಂದು ತಿಳಿದರು.
ಶಾಲೆಯ ಪ್ರಾಂಶುಪಾಲ ಬ್ರದರ್ ಜೊಸೆಫ್‍ಮಿಕಿಲಿ, ಬ್ರದರ್‍ರಾಥೊಡ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಯೋಸೆಫ್ ಹಾಗೂ ಶಾಲೆಯ ಶಿಕ್ಷಕಿರು ಹಾಗೂ ಶಿಕ್ಷಕರು ಆಡಳಿತ ವರ್ಗದವರು ಹಾಜರಿದ್ದರು.

ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಪಣತೊಡಿ: ಜಿಲ್ಲಾಧಿಕಾರಿ ಬಿ. ರಾಮು ಸಲಹೆ


ಚಾಮರಾಜನಗರ, ಡಿ. 23 - ಮೈಸೂರನ್ನು ಮಾದರಿಯಾಗಿಟ್ಟುಕೊಂಡು ಚಾಮರಾಜನಗರ ಜಿಲ್ಲೆಯನ್ನು ಸ್ವಚ್ಚ ಜಿಲ್ಲೆಯಾಗಿ ಮಾಡಲು ಪಣತೊಡಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ರೈಲ್ವೆ ಬಡಾವಣೆ 16ನೇ ವಾರ್ಡ್‍ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ನಗರ ಸಭೆ, ಗ್ರೀನ್ ಗ್ರಾಮೀಣ ಅಭಿವೃಧಿ ತರಬೇತಿ ಸಂಸ್ಥೆ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚ್ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಸ್ವಚ್ಚತೆ ಮತ್ತು ಶೌಚಾಲಯದ ಮಹತ್ವದ ಅರಿವು ಕುರಿತು ಮಾತನಾಡಿದರು.



ಅನೈರ್ಮಲ್ಯ ಅನಾರೋಗ್ಯದ ಮೂಲವಾಗಿದ್ದು ಬಯಲು ಶೌಚದಿಂದಾಗಿ ಕ್ರಿಮಿಗಳು ಆಹಾರದೊಂದಿಗೆ ಸೇರಿ ರೋಗಗಳನ್ನು ಹರಡುತ್ತವೆ. ಮಕ್ಕಳು ಶೌಚಾಲಯ ನಿರ್ಮಾಣಕ್ಕಾಗಿ ಪೋಷಕರನ್ನು ಒತ್ತಾಯಿಸಬೇಕು. ಬಯಲು ಶೌಚ, ಅನೈರ್ಮಲ್ಯತೆಯಿಂದ ಆಗುವ ದುಶ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ರಾಮು ಅವರು ತಿಳಿಸಿದರು.
ಕಸವನ್ನು ಮೂಲದಿಂದಲೇ ಹಸಿಕಸ ಹಾಗೂ ಒಣ ಕಸವೆಂದು ಬೇರ್ಪಡಿಸಿ ನಗರಸಭೆ ವಾಹನ ಬಂದಾಗ ನೀಡಬೇಕು. ಈ ಮೂಲಕ ಸಾರ್ವಜನಿಕರು ಸ್ವಚ್ಚ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕೆಂದು ರಾಮು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಕಸ ಉತ್ಪಾದಿಸುವ ಮೂಲದಿಂದಲೇ ಸೂಕ್ತ ರೀತಿಯಲ್ಲಿ ವಿಂಗಣೆ ಮಾಡಿ ಕಸದ ಬುಟ್ಟಿಯಲ್ಲಿ ಹಾಕಬೇಕು. ಸ್ವಚ್ಚತಾ ರಾಯಬಾರಿಗಳಾಗಿ ಚಿತ್ರ ನಟ ಸಂತೊಷ್ ವಿಕ್ಕಿ ಹಾಗೂ ದಿನಬಂಧು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ವಚ್ಚತಾ ಆಪ್ ಬಿಡುಗಡೆಗೊಳಿಸಿ ಮಾತನಾಡಿದ ಚಲನಚಿತ್ರ ನಟ ಸಂತೋಷ್ ವಿಕ್ಕಿ  ಸ್ಮಾರ್ಟ್ ಫೋನ್‍ನಲ್ಲಿ ಗೇಮ್ ಆಡುವ ಬದಲು ಈ ಆಪ್‍ನನ್ನು ಬಳಸಿ ಕಸವಿರುವ ಕಡೆ ಪೋಟೋ ತೆಗೆದು ಅಪ್ ಲೋಡ್ ಮಾಡಿ ಎಂದು ತಿಳಿಸಿದರು.      ದೀನಬಂಧು ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಮಾತನಾಡಿ  ಶುಚಿತ್ವ ಮಕ್ಕಳ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಬಯಲು ಶೌಚ ಸ್ವಯಂಕೃತ ಅಪರಾಧ. ಶೌಚಾಯಲವನ್ನು ಪ್ರತಿಯೊಬ್ಬರೂ ನಿರ್ಮಾಣ ಮಾಡಿಕೊಳ್ಳಬೇಕು. ಸ್ವಚ್ಚತೆ ಬಗ್ಗೆ ಇರುವ ಅಸಡ್ಯತೆ ತೊರೆದು ಮನೆಯ ಸುತ್ತಲೂ ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಮೊದಲ ಆಧ್ಯತೆಯಾಗಬೇಕೆಂದು ತಿಳಿಸಿದರು. 
ಇದಕ್ಕೂ ಮೊದಲೇ  ಜಾಥ ಕಾರ್ಯಕ್ರಮದ ಮೂಲಕ ದಿನಬಂಧು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಜಯದೇವ್ ಹಾಗೂ ಚಲನಚಿತ್ರ ನಟ ಸಂತೋಷ್ ವಿಕ್ಕಿ ಸ್ವಚ್ಚತೆ ಮತ್ತು ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದರು.
 ನಗರ ಸಭೆಯ ಅಧ್ಯಕ್ಷರಾದ ಶೋಭಾರವರು ಕಾರ್ಯಕ್ರದ ಆಧ್ಯಕ್ಷತೆ ವಹಿಸಿ, ಸ್ವಚ್ಚತಾ ಅಭಿಯಾನದ ಪ್ರತಿಜ್ಞಾ ವಿಧಿ ಭೋದನೆ ಮಾಡಿ ಜಿಲ್ಲೆಯ ಸ್ವಚ್ಚತಾ ಅಭಿಯಾನಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ನಗರ ಸಭೆ ಪೌರಾಯುಕ್ತರಾದ ಫೌಜಿಯಾ ತರನಮ್ ನಗರ ಸಭೆ ಮಾಜಿ ಅಧ್ಯಕ್ಷರಾದ ರೇಣಕಾ ಮಲ್ಲಿಕಾರ್ಜನ ಇತರೆ ಜನಪ್ರನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಸೆಂಬರ್ 27,28ರಂದು ಸಾವಯವ ಸಿರಿಧಾನ್ಯ ಮೇಳ ವಸ್ತು ಪ್ರದರ್ಶನ

ಚಾಮರಾಜನಗರ, ಡಿ. 23:- ಡಿಸೆಂಬರ್ 27 ಮತ್ತು 28ರಂದು ಸಾವಯವ ಸಿರಿಧಾನ್ಯ ಮೇಳ ಮತ್ತು ಸಿರಿಧಾನ್ಯದ ವಸ್ತು ಪ್ರದರ್ಶನ ಮೈಸೂರಿನಲ್ಲಿ ಆಯೋಜಿಸಲಾಗಿದೆ.
ಮೈಸೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿನ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಸಾವಯವ ಸಿರಿಧಾನ್ಯ ಮೇಳ ಮತ್ತು ಸಿರಿಧಾನ್ಯದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಚಾಮರಾಜನಗರದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಯಲ್ಲಿ ತಿಳಿಸಿದ್ದಾರೆ.

ಡಿ.26ರಂದು ಚಾಮರಾಜನಗರ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಡಿ. 23 - ಚಾಮರಾಜನಗರ ತಾಲ್ಲುಕಿನ ಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ  ತಾಲ್ಲೂಕಿನ ಅರಕಲವಾಡಿ, ಪುಣಜನೂರು, ಯರಗನಹಳ್ಳಿ, ಬಿಸಲವಾಡಿ, ಸುವರ್ಣನಗರ, ಅಮಚವಾಡಿ, ಫ್ಯಾಕ್ಟರಿ,  ಮಾದಲವಾಡಿ, ಡೊಳ್ಳಿಪುರ, ಹಾಗೂ ಚನ್ನಪ್ಪನಪುರಗಲ್ಲಿ ಡಿಸೆಂಬರ್ 26ರ ಮಂಗಳವಾರ ಬೆಳಿಗ್ಗೆ 10 ಗಂಟೆ ಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.26ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ


       ಚಾಮರಾಜನಗರ, ಡಿ. 23- ನಗರದಲ್ಲಿ ರಸ್ತೆ ಅಗಲಿಕರಣ ಮಾಡಲು ವಿದ್ಯುತ್ ಮಾರ್ಗಗಳನ್ನು ಸ್ಥಳಾತರಿಸುವ ಕಾಮಗಾರಿ ಕಾರ್ಯ ಹಮ್ಮಿಕೊಂಡಿರುವುದರಿಂದ ನಗರದ ರಾಮಸಮುದ್ರ ಫೀಡರ್ ವ್ಯಾಪ್ತಿಯ ಬಿ. ರಾಚಯ್ಯ ಜೋಡಿ ರಸ್ತೆ, ಕೋಟ್ ರೋಡ್, ಹೌಸಿಂಗ್ ಬೋಡ್, ಭಗೀರಥ ಬಡಾವಣೆ, ಜಿಲ್ಲಾಡಳಿತ ಭವನ ಮುಂಭಾಗ, ರಾಮ ಸಮುದ್ರದಲ್ಲಿ ಡಿಸೆಂಬರ್ 26ರ ಮಂಗಳವಾರ ಬೆಳಿಗ್ಗೆ 10 ಗಂಟೆ ಯಿಂದ ಸಾಯಂಕಾಲ 5.30ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ಆಟೋ ಟಿಪ್ಪರ್ ವ್ಯವಸ್ಥೆ: ದೂರು ಸಲ್ಲಿಕೆಗೆ ದೂರವಾಣಿ ಸಂಖ್ಯೆ ವಿವರ


       ಚಾಮರಾಜನಗರ, ಡಿ. 23:-  ಚಾಮರಾಜನಗರ ನಗರಸಭೆಯು ಮನೆ ಮನೆ ಕಸ ಸಂಗ್ರಹ ಮಾಡುವ ಸಲುವಾಗಿ ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಆಟೋಟಿಪ್ಪರ್‍ಗಳ ವ್ಯವಸ್ಥೆ ಮಾಡಿದೆ. ಈ ಆಟೋಟಿಪ್ಪರ್‍ಗಳು ಬರದೇ ಇದ್ದಲ್ಲಿ ಕೂಡಲೇ ಆಟೋ ಟಿಪ್ಪರ್ ಚಾಲಕರು ಹಾಗೂ ಮೇಲ್ವೀಚಾರಕರನ್ನು ಮೊಬೈಲ್ ಮೂಲಕ ಸಂಪರ್ಕಿಸುವಂತೆ ನಗರಸಭೆ ತಿಳಿಸಿದೆ.
ಪ್ರತಿದಿನ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ವಾರ್ಡ್‍ಗಳಲ್ಲಿ ಆಟೋ ಟಿಪ್ಪರ್‍ಗಳು ಸಂಚರಿಸಲಿವೆ. ವಾರ್ಡ್ ನಂ.1ರ ವ್ಯಾಪ್ತಿಗೆ ರಾಜೇಂದ್ರ (ಮೊ:9740883554), 2ನೇ ವಾರ್ಡ್‍ಗೆ ರಂಗಸ್ವಾಮಿ (ಮೊ:9538545841), 3ನೇ ವಾರ್ಡ್‍ಗೆ ಎಂ.ಪ್ರಶಾಂತ್ (ಮೊ:9108393826), 4 ವಾರ್ಡ್‍ಗೆ ಮಣಿ (ಮೊ:9743500610), 5ನೇ ವಾರ್ಡ್‍ಗೆ ಮಣಿ (ಮೊ:9743500610) ಹಾಗೂ ಮಂಜು (ಮೊ:8197977337), 6ನೇ ವಾರ್ಡ್‍ಗೆ ಮಂಜು (ಮೊ:8197977337), 7 ಹಾಗೂ 8ನೇ ವಾರ್ಡ್‍ಗೆ ಮಹದೇವಸ್ವಾಮಿ (ಮೊ:9916616908), 9,12,13,14ನೇ ವಾರ್ಡ್‍ಗೆ ಸುರೇಶ್‍ಕುಮಾರ್ (9741058517), 10ನೇ ವಾರ್ಡ್‍ಗೆ ರಾಕೇಶ (ಮೊ:8618825249), 11ನೇ ವಾರ್ಡ್‍ಗೆ ಶಿವರಾಜೇಂದ್ರ (ಮೊ:7760792250), 15ನೇ ವಾರ್ಡ್‍ಗೆ ಎನ್.ನಾಗೇಶ (ಮೊ:8147676267), 16 ಮತ್ತು 20ನೇ ವಾರ್ಡ್‍ಗೆ ಎಸ್.ವಿಜಯ (ಮೊ:9110496455) ನಿಯೋಜಿತರಾಗಿರುತ್ತಾರೆ.
ವಾರ್ಡ್ ನಂ.17,18,19 ಹಾಗೂ 23ಕ್ಕೆ ಗಣೇಶ (ಮೊ:8792256816), 21,22ನೇ ವಾರ್ಡ್‍ಗೆ ರಾಮಚಂದ್ರ (ಮೊ:9513883606), 24, 25ನೇ ವಾರ್ಡ್‍ಗೆ ಸಿ.ಪಿ.ಮುರುಗೇಶ (ಮೊ:9886855701), 27 ಹಾಗೂ 28ನೇ ವಾರ್ಡ್‍ಗೆ ಶಿವರಾಜು (ಮೊ:7760792250) ನಿಯೋಜಿತರಾಗಿರುತ್ತಾರೆ. ಈ ವಾಹನ ಚಾಲಕರನ್ನು ಸಂಪರ್ಕಿಸಿ, ಕಸ ಸಂಗ್ರಹಿಸಲು ನಾಗರೀಕರು ಮಾಹಿತಿ ನೀಡಬಹುದಾಗಿದೆ.
ಅಲ್ಲದೇ ವಾರ್ಡ್‍ಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ವಾರ್ಡ್ ನಂ.1,2,3,4,5,6 ಮತ್ತು 7ಕ್ಕೆ ಮೇಲ್ವಿಚಾರಕರಾಗಿ ಸಿ.ಪಿ.ಮಾದ (ಮೊ:8792201487), ವಾರ್ಡ್ ನಂ.9,11,12,13,14,15,25ಕ್ಕೆ ಮೇಲ್ವಿಚಾರಕರಾಗಿ ಅಸ್ಲಂ (ಮೊ:96207144125), ವಾರ್ಡ್ ನಂ.8,16,17,18,19,20,21,22,23ಕ್ಕೆ ಮೇಲ್ವಿಚಾರಕರಾಗಿ ವೆಂಕಟೇಶ್ (ಮೊ:9980368353), ವಾರ್ಡ್ ನಂ.10,24,26ಕ್ಕೆ ಮೇಲ್ವಿಚಾರಕರಾಗಿ ಹೆಚ್.ಆರ್ಮುಗಂ (ಮೊ:7975441455), ವಾರ್ಡ್ ನಂ.27,28,29,30,31ಕ್ಕೆ ವೇಲ್ವಿಚಾರಕರಾಗಿ ನಾಗ (ಮೊ:8095349553) ಅವರು ಕಾರ್ಯನಿರ್ವಹಿಸಲಿದ್ದಾರೆ. ಕಸ ಸಂಗ್ರಹಣೆ ಕುರಿತು ದೂರುಗಳನ್ನು ಸಹ ಮೇಲ್ವಿಚಾರಕರಿಗೆ ತಿಳಿಸಬಹುದೆಂದು ನಗರಸಭೆ ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Friday, 22 December 2017

ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ ಕಾರ್ಯಕ್ರಮ: ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ (22-12-2017)


ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ ಕಾರ್ಯಕ್ರಮ: ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ 

ಚಾಮರಾಜನಗರ, ಡಿ. 22 - ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶÀಂಕುಸ್ಥಾಪನೆ ನೆರವೆರಿಸಲು ಮುಖ್ಯ ಮಂತ್ರಿಯವರು ಜನವರಿ 10 ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಮತ್ತು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮುಖ್ಯ ಮಂತ್ರಿಯವರು ಭೇಟಿ ನೀಡುತ್ತಿರುವ ಸಂಬಂಧ ಕಾರ್ಯಕ್ರಮ ಆಯೋಜನೆ ಇನ್ನಿತರ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಮಹದೇವಪ್ರಸಾದ್ ಅವರು ಮಾತನಾಡಿ ಮುಖ್ಯ ಮಂತ್ರಿಯವರು ಜಿಲ್ಲೆಗೆ ಭೇಟಿನೀಡುವ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಂಡಿರಬೇಕು. ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಅಭಿವೃದ್ಧಿ ಕೆಲಸ ಹಾಗೂ ಶಂಕುಸ್ಥಾಪನೆ ನೆರವೇರಿಸಬೇಕಿರುವ ಕಾಮಗಾರಿ ಪಟ್ಟಿಯನ್ನು ತಯಾರಿಸಿ ಇದಕ್ಕೆ ಕೈಗೊಳ್ಳಬೇಕಿರುವ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರ್ವಹಿಸಬೇಕೆಂದು ಸೂಚಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯ ಮಂತ್ರಿಯವರು ಉದ್ಘಾಟಿಸಲು ಅಗತ್ಯ ಏರ್ಪಾಡುಗಳನ್ನು ಮಾಡಬೇಕು ಎಂದರು.

ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ ಹೊಸ ತಾಲ್ಲೂಕಾಗಿ ಹನೂರು ಘೋಷಣೆ, ಹನೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಡಿ.ಸಿ.ಸಿ ಬ್ಯಾಂಕ್ ಉದ್ಘಾಟನೆಯನ್ನು ಹನೂರು ಪಟ್ಟಣದಲ್ಲಿ ಮುಖ್ಯ ಮಂತ್ರಿಗಳಿಂದ ನೆರವೇರಿಸಲಾಗುತ್ತದೆ. ಅಲ್ಲದೇ ಇನ್ನೂ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮುಖ್ಯ ಮಂತ್ರಿಯವರು ಜನವರಿ 10 ರಂದು ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಜನವರಿ 11 ರಂದು ಬೆಳಿಗ್ಗೆ ಮಲೈಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಹಲವು ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂಬಂಧ ಎಲ್ಲಾ ಸಿದ್ದತೆಗಳನ್ನು ತ್ವರಿತವಾಗಿ ಅಧಿಕಾರಿಗಳು ಪೂರ್ಣಗೊಳಿಸಬೇಕು ಎಂದರು.

ಶಾಸಕರಾದ ಎಸ್.ಜಯಣ್ಣ ಅವರು ಮಾತನಾಡಿ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ, ಡಾ|| ಬಿ.ಆರ್.ಅಂಬೇಡ್ಕರ್ ಭವನ, ನಗರಸಭೆ ಕಟ್ಟಡ, ಪ್ರವಾಸಿ ಮಂದಿರ ಉದ್ಘಾಟನೆ ಇತರೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧಿಕಾರಿಗಳು ಇದಕ್ಕೆ ಪೂರಕವಾಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಮುಖ್ಯ ಮಂತ್ರಿಯವರು ಚಾಮರಾಜನಗರ, ಕೊಳ್ಳೇಗಾಲ, ಹನೂರು ಹಾಗೂ ಮಹದೇಶ್ವರ ಬೆಟ್ಟಕ್ಕೆ ಭೇಟಿನೀಡಿ ನೆರವೇರಿಸಲಿರುವ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಗಳಿಗೆ ಅವಶ್ಯವಿರುವ ಎಲ್ಲಾ ಸಿದ್ದತೆಗಳು ಸಕಾಲಕ್ಕೆ ಪೂರ್ಣಗೊಳ್ಳಬೇಕು. ಪ್ರತಿ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯವನ್ನು ಮುಖ್ಯ ಮಂತ್ರಿಯವರ ಕಾರ್ಯಕ್ರಮದಲ್ಲಿ ವಿತರಿಸಲು ಬೇಕಿರುವ ಪ್ರಕ್ರಿಯೆ ಕೈಗೊಳ್ಳಬೇಕು. ಇನ್ನಿತರ ಪ್ರಮುಖ ಯೋಜನೆ ಅನುಷ್ಠಾನ ಸಂಬಂಧ ಕಾರ್ಯಗತಗೊಳಿಸಲು ಸಿದ್ದರಾಗಿರಬೇಕೆಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಜೆ.ಯೋಗೇಶ್, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಶಿವಮ್ಮ, ಚೆನ್ನಪ್ಪ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ಉಪವಿಭಾಗಾಧಿಕಾರಿ ಫೌಜೀಯ ತರನಂ, ಇತರೆ ಜನಪ್ರನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಚಿಕ್ಕಲ್ಲೂರು ಜಾತ್ರೆ ಪೂರ್ವ ಸಿದ್ಧತಾ ಸಭೆ: ಅವಶ್ಯ ಸೌಕರ್ಯ ಕಲ್ಪಿಸಲು ಸೂಚನೆ 


ಚಾಮರಾಜನಗರ, ಡಿ. 22 - ಕೊಳ್ಳೇಗಾಲ ತಾಲ್ಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಚಿಕ್ಕಲ್ಲ್ಲೂರಿನಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥ್ಥೆಗಳನ್ನು ಕಲ್ಪಿಸಲು ಸಕ್ಕರೆ, ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಹಾಗೂ ಶಾಸಕರಾದ ಆರ್.ನÀರೇಂದ್ರ ಅವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ನಗರದÀ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವರು ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಏರ್ಪಾಡುಗಳನ್ನು ತ್ವರಿತವಾಗಿ ಮಾಡುವಂತೆ ಸೂಚಿಸಿದರು.

ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಲಿದೆ. ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಶೌಚಾಲಯ ಇನ್ನಿತರ ಅಗತ್ಯ ಸೌ¯ಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು ಭಕ್ತಾಧಿಗಳು ವಾಸ್ತವ್ಯ ಹೂಡುವ ಸ್ಥಳಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಈಗಲೇ ಅವಶ್ಯವಿರುವ ಕೆಲಸವನ್ನು ಪೂರ್ಣಗೊಳಿಸಬೇಕು ಎಂದರು.

ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಸುಗಮ ಸಂಚಾರಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ವಾಹನ ನಿಲುಗಡೆಗೆ ಜಾಗ ಗುರುತಿಸಿ ವಾಹನ ಸವಾರರಿಗೆ ಮಾಹಿತಿ ನೀಡಲು ಫಲಕಗಳನ್ನು ಅಳವಡಿಸಬೇಕು. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಭಕ್ತಾಧಿಗಳಿಗೆ ಕೊರತೆಯಾಗದಂತೆ ಬಸ್‍ಗಳನ್ನು ನಿಯೋಜಿಸಬೇಕು. ಕೊಳ್ಳೇಗಾಲ, ಹನೂರು ಪಟ್ಟಣದಿಂದಲೂ ಹೆಚ್ಚು ಬಸ್ಸುಗಳು ಹೋಗಿ ಬರಲು ಅವಶ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

ವೈದ್ಯರು ಜಾತ್ರಾ ಸಂದರ್ಭದಲ್ಲಿ 24*7 ಅವಧಿಯಲ್ಲಿಯೂ ಲಭ್ಯರಿರಬೇಕು. ಸ್ವಚ್ಛತಾ ಕೆಲಸಗಳು ಸುಗಮವಾಗಿ ಸಾಗಬೇಕು. ರಸ್ತೆ ದುರಸ್ಥಿ ಸೇರಿದಂತೆ ಇತರೆ ಕಾಮಗಾರಿಗಳು ತ್ವರಿತಗÀತಿಯಲ್ಲಿ ಪೂರ್ಣವಾಗಬೇಕು. ಡಿಸೆಂಬರ್ 28 ರಿಂದಲೇ ಭಕ್ತಾಧಿಗಳು ಚಿಕ್ಕಲ್ಲೂರು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ. ಇದಕ್ಕೂ ಮೊದಲೇ ಎಲ್ಲಾ ಸಿದ್ಧತೆಗಳನ್ನು ನಿರ್ವಹಿಸಿ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ನರೇಂದ್ರ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿದ್ದು, ಇದರ ಕಟ್ಟನಿಟ್ಟಿನ ಅನುಷ್ಠಾನಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಭಕ್ತಾಧಿಗಳಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಮುಂದಾಗಬೇಕೆಂದು ನಿರ್ದೇಶÀನ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಜೆ.ಯೋಗೇಶ್, ಕೊಳ್ಳೇಗಾಲ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಶಿವಮ್ಮ, ಚೆನ್ನಪ್ಪ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ಉಪವಿಭಾಗಾಧಿಕಾರಿ ಫೌಜೀಯ ತರನಂ, ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲ್ಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಡಿ. 23ರಂದು ನೇರ ಫೋನ್-ಇನ್ ಕಾರ್ಯಕ್ರಮ


ಚಾಮರಾಜನಗರ, ಡಿ. 19 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 23ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

      ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಡಿ. 23ರಂದು ಪ.ಜಾ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘುವಾಹನ ಚಾಲನಾ ತರಬೇತಿಗೆ ಸಂದರ್ಶನ

ಚಾಮರಾಜನಗರ, ಡಿ. 19 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಡಿಸೆಂಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಲಘು ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 28 ರಂದು ವಿಕಲಚೇತನ ಮಕ್ಕಳ ಕ್ರೀಡಾಕೂಟ 


ಚಾಮರಾಜನಗರ, ಡಿ. 22 :- ಸಾರ್ವಜನಿಕ ಶಿಕ್ಷಣ ಇಲಾಖೆಯು 2017-18 ನೇ ಸಾಲಿನ ವಿಕಲಚೇತನ ಶಾಲಾ ವಿದ್ಯಾರ್ಥಿಗಳಿಗೆÉ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಿದೆ.

ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಗಣದಲ್ಲಿ ಡಿಸೆಂಬರ್ 28 ರಂದು 14 ರಿಂದ 17 ವಯೋಮಿತಿಯೊಳಗಿನ  ವಿಕಲಚೇತನ ಮಕ್ಕಳ ಜಿಲ್ಲಾ ಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕೀಡಾಕೂಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ಶಾಲೆಯಿಂದ ಶಾಲಾ ದಾಖಲಾತಿ ದೃಢೀಕರಣ ಪತ್ರ ಹಾಗೂ ವೈದ್ಯಕೀಯ ದೃಢಿಕರಣ ಪತ್ರ ಹಾಗೂ ಕ್ರೀಡಾ ಅರ್ಹತಾ ನಮೂನೆ ತರಬೇಕು. ಮುಖ್ಯ ಶಿಕ್ಷಕರು ಮಕ್ಕಳನ್ನು ಜವಬ್ದಾರಿಯುತವಾಗಿ ಕೀಡಾಕೂಟಕ್ಕೆ ಕಳುಹಿಸಿಕೊಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಬಸ್ ಪಾಸ್ ಅವಧಿ ವಿಸ್ತರಣೆ


ಚಾಮರಾಜನಗರ, ಡಿ. 22:- 2017 ನೇ ಸಾಲಿನಲ್ಲಿ ವಿತರಿಸಿದ ವಿಕಲಚೇತನರ ಬಸ್ ಪಾಸ್ ಆವಧಿಯನ್ನು ಫೆಬ್ರವರಿ 28ರ ವರೆಗೆ ವಿಸ್ತರಿಸಲಾಗಿದೆ.
       
       ಪ್ರತಿ ವರ್ಷದಂತೆ 2018ನೇ ಸಾಲಿನಲ್ಲಿಯೂ ರಿಯಾಯಿತಿ ದರದ ಪಾಸುಗಳನ್ನು ವಿತರಿಸಲಾಗುವುದು. ಪ್ರಸೃತ ಯಾವುದೇ ತೊಂದರೆಯಾಗದಂತೆ 2017 ನೇ ಸಾಲಿನ ಪಾಸುಗಳ ಅವಧಿಯನ್ನು ಫಬ್ರವರಿ 28ರ ವರೆಗೂ ವಿಸ್ತರಿಸಲಾಗಿದೆ  ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಿಯ ನಿಯಂತ್ರ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 21 December 2017

ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ ,ಜಿಲ್ಲಾ ಉಸ್ತುವಾರಿ ಸಚಿವರಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಶೀಲನೆ : ತ್ವರಿತ ಪೂರ್ಣಗೊಳಿಸಲು ಸೂಚನೆ, ಮತದಾನದ ಹಕ್ಕು ಮಹತ್ವ ಅರಿಯಲು ಯುಜನರಿಗೆ ಸಲಹೆ (21-12-2017)

ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ  ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ      

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದರು.

ಪಟ್ಟಣದಲ್ಲಿರುವ ವಿವಿಧ ವಿದ್ಯಾರ್ಥಿ ಸಂಘ ಎಬಿವಿಪಿ ಹಾಗೂ ಬಿವಿಎಸ್ ಪ್ರತಿಭಟಿಸಿ ಅಪರ ಜಿಲ್ಲಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಚಾಮರಾಜನಗರ ಚಾಮರಾಜೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟು ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತಭವನದ ತಲುಪಿ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರ ಎಸಗಿದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿದ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಬಾಗವಹಿಸಿದ್ದರು
_______________________________________________________________________________
   


ಜಿಲ್ಲಾ ಉಸ್ತುವಾರಿ ಸಚಿವರಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಶೀಲನೆ : ತ್ವರಿತ ಪೂರ್ಣಗೊಳಿಸಲು ಸೂಚನೆ


ಚಾಮರಾಜನಗರ, ಡಿ. 21 - ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕÀುಮÁರಿ ಉರುಫ್ ಗೀತಾ ಮಹದೇವಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತೂರು ಏತ ಯೋಜನೆ ಹಾಗೂ ಗಾಂಧಿ ಗ್ರಾಮ ಏತ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಉಸ್ತುವಾರಿ ಸಚಿವರು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಉತ್ತೂರು ಏತ ಯೋಜನೆಯಡಿ ಉತ್ತೂರಿನ ಕೆರೆ ಬಳಿ ನಿರ್ಮಾಣವಾಗುತ್ತಿರುವ ಪಂಪ್ ಹೌಸ್‍ಗೆ ಮೊದಲು ಭೇಟಿ ನೀಡಿದ ಉಸ್ತುವಾರಿ ಸಚಿವರು ಅಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು. ಯಾವ ಸಮಂiÀiದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಿರ್ಮಾಣ ಕಾರ್ಯ ಹೇಗೆ ಸಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು ವಿಳಂಬ ಮಾಡದೆ ಕಾಮಗಾರಿ ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಕುರಿತು ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ. ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಕಾಲಮಿತಿಯೊಳಗೆ ಮುಗಿಸಬೇಕು. ಗ್ರಾಮೀಣರ ಅನುಕೂಲಕ್ಕೆ ನೀರು ತುಂಬಿಸುವ ಕೆಲಸ ಬೇಗ ನಡೆಸಬೇಕೆಂದು ಸಚಿವರು ಸೂಚಿಸಿದರು.
ಉತ್ತೂರು ಭಾಗದಲ್ಲಿ ಹಾದುಹೋಗಿರುವ ಪೈಪ್ ಲೈನ್ ಕಾಮಗಾರಿಯನ್ನು ಸಹ ಸಚಿವರು ವೀಕ್ಷಿಸಿದರು. ಕೆಲಸ ಬಾಕಿ ಇರುವ ಕಡೆ ಅತಿ ಶೀಘ್ರವಾಗಿ ಪೈಪ್‍ಗಳ ಜೋಡಣೆ ಕಾರ್ಯವನ್ನು ಕೈಗೊಳ್ಳುವಂತೆ ಸಹ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಗಾಂಧಿಗ್ರಾಮ ಏತ ಯೋಜನೆ ವ್ಯಾಪ್ತಿಯ ಕಮ್ಮರಹಳ್ಳಿ ಕೆರೆ ಬಳಿ ನಿರ್ಮಾಣವಾಗಿರುವ ಪಂಪ್ ಹೌಸ್‍ಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಯನ್ನು ಪರಿಶೀಲಿಸಿದರು. ಉಳಿದ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಗಾಂಧಿಗ್ರಾಮದ ಬಳಿ ಕಬಿನಿ ನದಿಯಿಂದ ನೀರು ಪೂರೈಸಲು ನಿರ್ಮಾಣ ಮಾಡಲಾಗಿರುವ ಜಾಕ್‍ವೆಲ್ (ಮೂಲಸ್ಥಾವರ) ಸ್ಥಳಕ್ಕೆ ಭೇಟಿ ಕೊಟ್ಟು ವ್ಯಾಪಕವಾಗಿ ಪರಿಶೀಲಿಸಿದರು. ವಿಳಂಬ ಮಾಡದೆ ತುರ್ತಾಗಿ ನೀರು ತುಂಬಿಸುವ ಕೆಲಸಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಇದೇವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವರು ಉತ್ತೂರು ಏತ ಯೋಜನೆಯಡಿ ಒಟ್ಟು 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 53 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ. ಮುಂಬರುವ ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಹೀಗಾಗಿ ಕಾಮಗಾರಿಯನ್ನು ಪರಿಶೀಲಿಸಲಾಗಿದೆ. ಚಾಮರಾಜನಗರ ತಾಲೂಕಿನ ಎರಡು ಹಾಗೂ ಗುಂಡ್ಲುಪೇಟೆ ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗಾಂಧಿಗ್ರಾಮ ಏತ ಯೋಜನೆಯಡಿ ಕಬಿನಿ ನದಿಯಿಂದ ನೀರೆತ್ತಿ ಗುಂಡ್ಲುಪೇಟೆ ತಾಲೂಕುಗಳ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಎರಡು ಹಂತಗಳ ಪೈಪ್ ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪಂಪ್ ಹೌಸ್ ಕಾಮಗಾರಿಯು ಸಹ ಮುಗಿದಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್, ಸಹಾಯಕ ಎಂಜಿನಿಯರ್ ಮಹೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.


ಪದವಿ ಅಂಕಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಲು ಸೂಚನೆ

ಚಾಮರಾಜನಗರ, ಡಿ. 21 :- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪರೀಕ್ಷಾಪೂರ್ವ ತರಬೇತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿಲ್ಲ.
ಬದಲಾಗಿ ಅಭ್ಯರ್ಥಿಗಳು ಪದವಿಯಲ್ಲಿ ಗಳಿಸಿರುವ ಅಂಕಗಳು ಮತು ಪ್ರವರ್ಗವಾರು ಮೀಸಲಾತಿಯನ್ವಯ ಆಯ್ಕೆ ಮಾಡಲಿರುವುದರಿಂದ ಅಭ್ಯರ್ಥಿಗಳು ಪದವಿಯಲ್ಲಿ ಗಳಿಸಿರುವ ಅಂಕಗಳ ಮಾಹಿತಿಯನ್ನು ಆನ್ ಲೈನ್ ಮೂಲಕ ಡಿಸೆಂಬರ್ 27ರೊಳಗೆ ನಮೂದಿಸಲು ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡುವಂತೆ ಅಥವಾ ಸಹಾಯವಾಣಿ 080-65970004 ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 27ರಂದು ನಗರದಲ್ಲಿ ಸಾಧಕರೊಂದಿಗೆ ಸಂವಾದ, ಕವಿಗೋಷ್ಠಿ ಕಾರ್ಯಕ್ರಮ

ಚಾಮರಾಜನಗರ, ಡಿ. 21 - ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜೆಎಸ್‍ಎಸ್ ಮಹಿಳಾ ಕಾಲೇಜು ಇವರ ಸಹಯೋಗದೊಂದಿಗೆ ಡಿಸೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಡಾ. ಕೃಷ್ಣಮೂರ್ತಿ ಹನೂರು ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎ.ಜಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಜೆಎಸ್‍ಎಸ್ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಧಕರಾದ ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರೂ ಆದ ಪ್ರೊ. ಮಲೆಯೂರು ಗುರುಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿ. ನಾಗಣ್ಣ ಅಧ್ಯಕ್ಷತೆ ವಹಿಸುವರು. ಕವಿ ಸೋಮಶೇಖರ ಬಿಸಲ್ವಾಡಿ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಎಂ. ಪುಟ್ಟತಾಯಮ್ಮ, ಚಾ.ಶ್ರೀ. ಜಗದೀಶ್, ಗುಂ.ಪು. ದೇವರಾಜು, ಗು.ಬಿ. ರಮೇಶ್, ಎನ್. ಮಹೇಶ್, ಡಾ. ಕೆ. ಲಕ್ಷ್ಮಿ ಪ್ರೇಮಕುಮಾರ್, ಸಿ. ಶಂಕರ್ ಅಂಕನಶೆಟ್ಟಿಪುರ, ಗಿರೀಶ್ ಹರವೆ, ಸಿ. ಸಿದ್ದರಾಜು, ಬಾಳಗುಣಸೆ ಮಂಜುನಾಥ, ಬಿ.ಎಸ್. ಗವಿಸ್ವಾಮಿ, ಮದ್ದೂರು ದೊರೆಸ್ವಾಮಿ, ಜಿ.ಡಿ. ದೊಡ್ಡಯ್ಯ, ನಂಜುಂಡಸ್ವಾಮಿ ಹರದನಹಳ್ಳಿ, ಎಂ. ರಾಜೇಂದ್ರ ಪ್ರಸಾದ್, ಕಾಳಿಂಗಸ್ವಾಮಿ ಸಿದ್ದಾರ್ಥ ಹಾಗೂ ನಾಟಕ ಭಾರ್ಗವ ಕೆಂಪರಾಜು ಆಹ್ವಾನಿತ ಕವಿಗಳಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



ಮತದಾನದ ಹಕ್ಕು ಮಹತ್ವ ಅರಿಯಲು ಯುಜನರಿಗೆ ಸಲಹೆ

  ಚಾಮರಾಜನಗರ, ಡಿ.21 - ದೇಶದ ದಿಕ್ಸೂಚಿ ಬರೆಯುವುದು ಯುವ ಜನರ ಕೈಯಲ್ಲಿದೆ. ಮತದಾನದ ಹಕ್ಕು ಮಹತ್ವವನ್ನು ಯುವ ಜನರು ಅರಿಯಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆ.ಡಿ.ಪಿ. ಸಭಾಂಗಣದಲ್ಲಿ ಇಂದು ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


 ಯುವ ಜನತೆ ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಯುವ ಜನರು ಜಾಗೃತರಾಗುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
    ಇಂದು ಅನೇಕ ಅಂಶಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ. ಒಳ್ಳೆಯ ವಿಷಯ ವಿಶ್ಲೇಷಿಸುವ, ವಿಚಾರ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಕಿವಿ ಮಾತು ಹೇಳಿದರು.
     ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಭಾವಿ ಮತದಾರರಾದ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ಮಹತ್ವ ಕುರಿತು ಅರಿವು ಮೂಡಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
     ವಿವಿಧ ಶಾಲೆ ಹಾಗೂ ಕಾಲೇಜುಗಳಿಂದ ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ 24 ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.
    ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿದರು.
     ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಎನ್. ಕುಸುಮ ಮತ್ತು ಆರ್. ಮಹೇಶ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
     ಅಮಚವಾಡಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿವಪ್ರಸಾದ್ ಮತ್ತು ಬಿ. ಸುಮಿತ್ರ ದ್ವಿತೀಯ ಸ್ಥಾನವನ್ನು ಪಡೆದರೆ, ತೃತೀಯ ಸ್ಥಾನ ಸಮನಾಗಿ ಗುಂಡ್ಲುಪೇಟೆಯ ಕೆ.ಎಸ್. ನಾಗರತ್ನಮ್ಮ  ಪದವಿ ಪೂರ್ವ ಕಾಲೇಜಿನ ನಾಗರಾಜು ಮತ್ತು ಬಿ.ಎಸ್. ಮಧು ಹಾಗೂ ಆದರ್ಶ ವಿದ್ಯಾಲಯದ ಅಂಜಲಿ ಮತ್ತು ಹೇಮಂತ್ ಕುಮಾರ್ ಪಡೆದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.
    ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರೆಜಿನ ಮೆಲಾಕಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
















01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು