ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
49 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ: 4 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತ
ಚಾಮರಾಜನಗರ, ಏ. 25:- ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದ 53 ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿದ್ದು ಉಳಿದ 49 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತಗೊಂಡಿವೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್.ಎಂ.ಮಾದೇಶ್ ಎಂಬುವರು ಸಲ್ಲಿಸಿದ್ದ ನಾಮಪತ್ರ ತಿರಸ್ಕøತಗೊಂಡಿದೆ. ಉಳಿದಂತೆ 15 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು ಅವರ ವಿವರ ಇಂತಿದೆ ಸಿ.ಪುಟ್ಟರಂಗಶೆಟ್ಟಿ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೆ.ಆರ್.ಮಲ್ಲಿಕಾರ್ಜುನಪ್ಪ-ಭಾರತೀಯ ಜನತಾ ಪಾರ್ಟಿ, ಎ.ಎಂ.ಮಲ್ಲಿಕಾರ್ಜುನ ಸ್ವಾಮಿ-ಬಹುಜನ ಸಮಾಜ ಪಾರ್ಟಿ, ಎಸ್.ಗಣೇಶ್- ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ಡಿ.ನಾಗಸುಂದರ-ಭಾರತೀಯ ರಿಪಬ್ಲಿಕನ್ ಪಕ್ಷ, ನಾರಾಯಣ ಸ್ವಾಮಿ.ಜೆ-ಸಾಮಾನ್ಯ ಜನತಾ ಪಾರ್ಟಿ(ಲೋಕ ತಾಂತ್ರಿಕ್), ವಾಟಾಳ್ ನಾಗರಾಜ್-ಕನ್ನಡ ಚಳವಳಿ ವಾಟಾಳ್ ಪಕ್ಷ, ಶ್ರೀಕಂಠಸ್ವಾಮಿ-ಶಿವಸೇನ, ಎಂ.ಆರ್ ಸರಸ್ವತಿ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಎಂ.ಚಿನ್ನಸ್ವಾಮಿ-ಪಕ್ಷೇತರ, ಪ್ರಸನ್ನ ಕುಮಾರ್.ಬಿ- ಪಕ್ಷೇತರ, ಎಂ.ಎಸ್.ಮಲ್ಲಿಕಾರ್ಜುನ್-ಪಕ್ಷೇತರ, ರಂಗಸ್ವಾಮಿ-ಪಕ್ಷೇತರ, ಸುರೇಶ.ಬಿ.ಎನ್-ಪಕ್ಷೇತರ, ಎಂ.ಹೊನ್ನೂರಯ್ಯ-ಪಕ್ಷೇತರ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ಬಿ.ನಿಂಗರಾಜು ಎಂಬುವರು ಸಲ್ಲಿಸಿದ್ದ ನಾಮಪತ್ರ ತಿರಸ್ಕøತಗೊಂಡಿದೆ. ಉಳಿದಂತೆ 8 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದ್ದು ಅವರ ವಿವರ ಇಂತಿದೆ. ಎ.ಆರ್.ಕೃಷ್ಣಮೂರ್ತಿ-ಭಾರತೀಂiÀi ರಾಷ್ಟ್ರೀಂiÀi ಕಾಂಗ್ರೆಸ್, ಜಿ.ಎನ್ ನಂಜುಂಡಸ್ವಾಮಿ-ಭಾರತೀಯ ಜನತಾ ಪಕ್ಷ, ಎನ್.ಮಹೇಶ್-ಬಹುಜನ ಸಮಾಜ ಪಕ್ಷ, ಚಿಕ್ಕಸಾವಕ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅ.), ನಿಂಗರಾಜ್.ಜಿ-ರಿಪಬ್ಲಿಕನ್ ಸೇನೆ, ಲಕ್ಷ್ಮಿಜಯಶಂಕರ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ನಾಗರತ್ನ ಎಂ-ಪಕ್ಷೇತರ, ಎಂ.ರಾಜೇಶ್-ಪಕ್ಷೇತರ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ಎನ್.ಡಿ.ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಂ.ಮನಸ್ ಎಂಬುವರು ಸಲ್ಲಿಸಿದ್ದ ನಾಮಪತ್ರ ತಿರಸ್ಕøತಗೊಂಡಿದೆ. ಉಳಿದಂತೆ 9 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದ್ದು ಅವರ ವಿವರ ಇಂತಿದೆ. ಎಸ್.ಗುರುಪ್ರಸಾದ್-ಬಹುಜನ ಸಮಾಜ ಪಾರ್ಟಿ, ಸಿ.ಎಸ್.ನಿರಂಜನ್ ಕುಮಾರ್-ಭಾರತೀಯ ಜನತಾ ಪಾರ್ಟಿ, ಎಂ.ಸಿ.ಮೋಹನ್ ಕುಮಾರಿ ಉರುಫ್ ಗೀತಾ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಸಿ.ಜೆ ಕಾಂತರಾಜ-ಪ್ರಜಾ ಪರಿವರ್ತನ ಪಾರ್ಟಿ, ಎ.ಜಿ.ರಾಮಚಂದ್ರರಾವ್-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ದುಂಡಯ್ಯ-ಪಕ್ಷೇತರ, ಮಹೇಶ.ಜಿ-ಪಕ್ಷೇತರ, ಬಿ.ಸಿ.ಶೇಖರರಾಜು-ಪಕ್ಷೇತರ, ಬಿ.ಸಿದ್ದಯ್ಯ-ಪಕ್ಷೇತರ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ಎಲ್ಲರ ನಾಮಪತ್ರಗಳು ಕ್ರಮಬದ್ಧವಾಗಿದ್ದು ವಿವರ ಇಂತಿದೆ. ಆರ್.ನರೇಂದ್ರ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಪ್ರೀತನ್ ಕೆ.ಎನ್.-ಭಾರತೀಯ ಜನತಾ ಪಕ್ಷ, ಎಂ.ಆರ್.ಮಂಜುನಾಥ್-ಜನತಾ ದಳ(ಜಾತ್ಯಾತೀತ), ಎಸ್.ಗಂಗಾಧರ-ಲೋಕ್ ಆವಾಜ್ ದಳ್, ಪ್ರದೀಪ್ ಕುಮಾರ್ ಎಂ.-ಆಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಬಿ.ಭಾನುಪ್ರಕಾಶ್-ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ, ಆರ್.ಪಿ.ವಿಷ್ಣುಕುಮಾರ್-ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಮ್, ಡಿ.ಶ್ರೀಕಂಠಸ್ವಾಮಿ-ಸ್ವರಾಜ್ ಇಂಡಿಯಾ, ಜೆ.ಜಯಪ್ರಕಾಶ್- ಪಕ್ಷೇತರ, ಜಾನ್ ಡಾನ್ ಬೋಸ್ಕೋ.ಕೆ-ಪಕ್ಷೇತರ, ಕೆ.ಎಸ್.ಪರಿಮಳ ನಾಗಪ್ಪ-ಪಕ್ಷೇತರ, ಮಹೇಶ-ಪಕ್ಷೇತರ, ಆರ್.ಮಹೇಶ-ಪಕ್ಷೇತರ, ಸಿದ್ದಪ್ಪ.ಆರ್-ಪಕ್ಷೇತರ, ಕೆ.ಸಿದ್ಧರಾಜು-ಪಕ್ಷೇತರ, ಸೆಲ್ವರಾಜ್.ಎಸ್-ಪಕ್ಷೇತರ, ಜ್ಞಾನಪ್ರಕಾಶ್.ಜೆ-ಪಕ್ಷೇತರ,
ಒಟ್ಟಾರೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರÀಗಳಿಂದ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು ಈ ಪೈಕಿ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿದ್ದು ಉಳಿದ 49 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರು, ಜಿಲ್ಲಾ ಪೊಲೀಸ್ ವೀಕ್ಷಕರ ನೇಮಕ
ಚಾಮರಾಜನಗರ, ಏ. 25- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾಣ್ಯ ವೀಕ್ಷಕರು ಹಾಗೂ ಜಿಲ್ಲೆಗೆ ಓರ್ವ ಪೊಲೀಸ್ ವೀಕ್ಷಕರನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡಿದೆ.
ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ವಜೀರ್ ಸಿಂಗ್ ಗೋಯಟ್ ಅವರು ನೇಮಕವಾಗಿದ್ದು, ಇವರು ಮೊಬೈಲ್ ಸಂಖ್ಯೆ:9480580400 ಆಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಲಕ್ಷ್ಮಿನಾರಾಯಣ ಸೋನಿಯವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ:9483287292 ಆಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಮನೋಜ್ ಕುಮಾರ್ ಅವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ:9483647292 ಆಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಡಾ.ಅನಿಲ್ ಕುಮಾರ್ ಸಿಂಗ್ ಅವರು ನೇಮಕವಾಗಿದ್ದು ಇವರ ಮೊಬೈಲ್ ಸಂಖ್ಯೆ: 9483747292 ಆಗಿದೆ. ಜಿಲ್ಲಾ ಪೊಲೀಸ್ ವೀಕ್ಷಕರಾಗಿ ಡಾ.ರವೀಂದ್ರ ಶಿಶ್ವೆ ಅವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ:08082115566 ಆಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚುನಾವಣೆ: ಕೊಳ್ಳೇಗಾಲ ವೀಕ್ಷಕರು
ಚಾಮರಾಜನಗರ, ಏ. 25 - ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಲಕ್ಮಿನಾರಾಯಣ್ ಸೋನಿ ಅವರು ನೇಮಕವಾಗಿದ್ದು, ಕ್ಷೇತ್ರಕ್ಕೆ ಆಗಮಿಸಿದ್ದಾರೆ.ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೂರುಗಳು ಹಾಗೂ ಇತರೆ ಚುನಾವಣೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9483287292 ಸಂಪರ್ಕಿಸಬಹುದಾಗಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಫೌಜಿಯಾ ತರನುಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26ರಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಥಾ
ಚಾಮರಾಜನಗರ, ಏ. 25 - ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸಲಾಗುತ್ತಿದ್ದು, ಇದರ ಅಂಗನವಾಗಿ ಏಪ್ರಿಲ್ 26ರಂದು ನಗರದಲ್ಲಿ ಜಾಥಾ ಏರ್ಪಡಿಸಲಾಗಿದೆ.ಏಪ್ರಿಲ್ 26ರಂದು ಬೆಳಗ್ಗೆ 10 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಬಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ.ನಂದೀಶ್ ಅವರು ಜಾಥಾಗೆ ಚಾಲನೆ ನೀಡುವರು. ನಂತರ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಲಿದೆ.
ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಂಚಾರ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
. ಏ. 27ರಂದು ಮಲೆ ಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ
ಚಾಮರಾಜನಗರ, ಏ. 25 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲೂಕಿ£ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯ ಏಪ್ರಿಲ್ 27ರಂದು ಬೆಳಿಗ್ಗೆ ನಡೆಯಲಿದೆ.ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಹಯೋಗದೊಂದಿಗೆ ಎಣಿಕೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment