ವಿಧಾನಸಭಾ ಚುನಾವಣೆ – 2018
ಮೊಬೈಲ್, ವಾಸ್ತವ್ಯ ವಿಳಾಸ ನೀಡಲು ಶಿಕ್ಷಕರು, ಸಿಬ್ಬಂದಿ ವರ್ಗಕ್ಕೆ ಸೂಚನೆ
ಚಾಮರಾಜನಗರ, ಏ. 09 - ಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ತಮ್ಮ ಮೊಬೈಲ್ ಸಂಖ್ಯೆ, ವಾಸ್ತವ್ಯ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಚುನಾವಣೆಗೆ ನಿಯೋಜಿತರಾಗಿರುವವರು ತರಬೇತಿ, ಇನ್ನಿತರ ಪ್ರಕ್ರಿಯೆಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.2018ರ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಎಲ್ಲ ನೌಕರರು ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ಭಾಗವಹಿಸಬೇಕಾಗಿರುತ್ತದೆ. ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ನಂತರ ಜಿಲ್ಲೆಯ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗುತ್ತದೆ. ಆದಾಗ್ಯೂ ಸಹ ಚುನಾವಣಾ ಕಾರ್ಯಗಳಿಗೆ ಎಲ್ಲ ಸಿಬ್ಬಂದಿ ವರ್ಗದವರು ತೊಡಗಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ತಮ್ಮ ಪ್ರಸ್ತುತ ವಾಸ್ತವ್ಯದ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಸಂಬಂಧಿಸಿದ ಕ್ಲಸ್ಟರ್‍ನ ಬಿಆರ್‍ಪಿ, ಸಿಆರ್‍ಪಿ ಬಳಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ – 2018
ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಜಾಗೃತಿಗೆ ಅಧಿಕಾರಿಗಳ ನಿಯೋಜನೆ
ಚಾಮರಾಜನಗರ, ಏ. 09- ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಮ್) ಮತ್ತು ವಿವಿಪ್ಯಾಟ್ ಯಂತ್ರಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಈ ಕೆಳಕಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವಿಧಾನ ಸಭಾ ಕ್ಷೇತ್ರವಾರು ನಿಯೋಜನೆಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಅಧ್ಯಕ್ಷರು ಆದ ಡಾ.ಕೆ.ಹರೀಶ್ ಕುಮಾರ್ ಆದೇಶಿಸಿದ್ದಾರೆ.ಚಾಮರಾಜನಗರ ವಿಧಾನಸಭಾ ಕ್ಷೇತ್ರ: ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಉಡಿಗಾಲ ಗ್ರಾಮ ಪಂಚಾಯಿತಿ, ಎಂ.ಎಸ್.ಚಂದ್ರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜ್ಯೋತೀಗೌಡನಪುರ ಗ್ರಾಮ ಪಂಚಾಯಿತಿ, ಜುನೇದ್ ಅಹಮದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೆಬ್ಬಸೂರು ಗ್ರಾಮ ಪಂಚಾಯಿತಿ,
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ: ರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಬಳೆ ಗ್ರಾಮ ಪಂಚಾಯಿತಿ, ಗಂಗಾಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುಂಬಳ್ಳಿ ಗ್ರಾಮ ಪಂಚಾಯಿತಿ, ರಾಮೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ : ಮೋಹನ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬರಗಿ ಗ್ರಾಮ ಪಂಚಾಯಿತಿ, ಮೋಹನ್.ಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಂಡೀಪುರ ಗ್ರಾಮ ಪಂಚಾಯಿತಿ, ಕುಮಾರಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಂಗಳ ಗ್ರಾಮ ಪಂಚಾಯಿತಿ.
ಹನೂರು ವಿಧಾನಸಭಾ ಕ್ಷೇತ್ರ : ನವೀತ ತೇಜೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಂಡಳ್ಳಿ ಗ್ರಾಮ ಪಂಚಾಯಿತಿ. ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಜ್ಜೀಪುರ ಗ್ರಾಮ ಪಂಚಾಯಿತಿ, ಮರಿಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ.
ಏ. 10ರಂದು ನಗರದಲ್ಲಿ ಕ್ಯಾಂಡಲ್ ಲೈಟ್ ಜಾಥಾ
ಚಾಮರಾಜನಗರ, ಏ. 09 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ನಿಮಿತ್ತ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಏಪ್ರಿಲ್ 10ರಂದು ಸಂಜೆ 6 ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಕ್ಯಾಂಡಲ್ ಲೈಟ್ ಜಾಥಾ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿüಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಕೆ. ಹರೀಶ್ ಕುಮಾರ್ ಅವರÀ ಅಧ್ಯಕ್ಷತೆಯಲ್ಲಿ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಾಥಾದಲ್ಲಿ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರು ಆದ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ – 2018
ಭದ್ರತಾ ಕಾಯ್ಕೆಯಡಿ 12 ಪ್ರಕರಣಗಳು ದಾಖಲು: 4 ಅಬಕಾರಿ ಪ್ರಕರಣ ದಾಖಲುಚಾಮರಾಜನಗರ, ಏ. 0 ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪೊಲೀಸ್ ಇಲಾಖೆಯು ಏಪ್ರಿಲ್ 8ರಂದು ಮುಂಜಾಗ್ರತ ಕ್ರಮ ಜರುಗಿಸಿದ್ದು, ಭದ್ರತಾ ಕಾಯ್ದೆಯಡಿ 12 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಅಬಕಾರಿ ಕಾಯ್ದೆಯಡಿ ಒಟ್ಟು 4 ಪ್ರಕರಣ ದಾಖಲಾಗಿದೆ. ರಾಮಾಪುರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಒಟ್ಟು 5010 ರೂ. ಮೌಲ್ಯದ 16.2ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ವಾಹನ ಕಳವು : ಆರೋಪಿಗೆ ಶಿಕ್ಷೆ
ಚಾಮರಾಜನಗರ, ಏ. 09 :- ನಕಲಿ ಕೀ ಬಳಸಿ ವಾಹನ ಕಳವು ಮಾಡಿದ ವ್ಯಕ್ತಿಯೊಬ್ಬರಿಗೆ 2 ವರ್ಷಗಳ ಕಾಲ ಕಾರಾಗೃಹ ವಾಸ ವಿಧಿಸಿ ಪ್ರಧಾನ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ತೀರ್ಪು ನೀಡಿದೆ.ಮೇಗಲಹುಂಡಿ ಗ್ರಾಮದ ಗೋಪಾಲ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ಕೀಳಲಿಪುರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ 2016ರ ಮೇ 31ರಂದು ಪಿರ್ಯಾದುದಾರರಾದ ಮಲೆಯೂರು ಗ್ರಾಮದ ಲೇ. ಮಾದಶೆಟ್ಟಿ ಅವರ ಮಗ ಶಿವಣ್ಣ ಶೆಟ್ಟಿ ಅವರು ಅವರ ಟಾಟಾ ಎಸ್ ವಾಹನವನ್ನು ನಿಲ್ಲಿಸಿದ್ದರು.
ಸಂಜೆ 5.15ರ ಸಮಯದಲ್ಲಿ ಗೋಪಾಲ ಮತ್ತು ಮೈಸೂರಿನ ಅಮಾನುಲ್ಲಾ ಅವರು ಬೇರೆ ಕೀ ಬಳಸಿ ಟಾಟಾ ಎಸ್ ವಾಹನದ ಬೀಗ ತೆಗೆದು ವಾಹನವನ್ನು ಕಳವು ಮಾಡಿದ್ದರು.
ಗೋಪಾಲ ಅವರು 2016ರ ಜೂನ್ 8ರಂದು ಕಳವು ವಾಹನ ಟಾಟಾ ಎಸ್.ನಲ್ಲಿ ಫ್ಯಾಷನ್ ಪ್ರೋ ಬೈಕ್ ಹಾಕಿಕೊಂಡು ತಮಿಳುನಾಡಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ ನಗರದ ಗ್ರಾಮಾಂತರ ಪೋಲೀಸರು ಗೋಪಾಲ ಅವರನ್ನು ವಾಹನಗಳ ಸಹಿತ ವಶಕ್ಕೆ ತೆಗೆದುಕೊಂಡಿದ್ದರು. ಆರೋಪಿತರು ನಕಲಿ ಕೀ ಉಪಯೋಗಿಸಿ ಕಳ್ಳತನ ಮಾಡಿ ನಂತರ ನಕಲಿ ಕೀಯನ್ನು ನಾಶಪಡಿಸಿರುವುದು ತನಿಖೆಯಲ್ಲಿ ದೃಢಪಟ್ಟಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಆರೋಪಿ ಗೋಪಾಲನಿಗೆ 2 ವರ್ಷಗಳ ಕಾಲ ಕಾರಾಗೃಹ ವಾಸ ವಿಧಿಸಿ ಪ್ರಧಾನ ಸಿಜೆ ಮತ್ತು ಜೆಎಂಎಫ್‍ಸಿ (ಕಿರಿಯ ಶ್ರೇಣಿ) ನ್ಯಾಯಾಧೀಶರಾದ ವಿ. ದೀಪಾ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಸಿ. ಮಹೇಶ್ ಅವರು ವಾದ ಮಂಡಿಸಿದ್ದರು.
ಮನೆ ಕಳವು ಯತ್ನ : ಇಬ್ಬರಿಗೆ ಶಿಕ್ಷೆ
ಚಾಮರಾಜನಗರ, ಏ. 09 - ನಗರದ ಬಡಾವಣೆಯೊಂದರ ಮನೆಯ ಬಾಗಿಲಿ ಮೀಟಿ ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರಿಗೆ ಪ್ರಧಾನ ಸಿಜೆ ಮತ್ತು ಸಿಜೆಎಂ (ಹಿ.ಶ್ರೇ) ನ್ಯಾಯಾಲಯ 10 ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ತಮಿಳುನಾಡಿದ ಸುರೇಶ ಅಲಿಯಾಸ್ ಸುರೇಶಕುಮಾರ ಅಲಿಯಾಸ್ ಸೂರಿ ಹಾಗೂ ಕರ್ಪಸ್ವಾಮಿ ಕಳ್ಳತನ ಮಾಡಲು ಯತ್ನಿಸಿ ಶಿಕ್ಷೆಗೆ ಗುರಿಯಾದವರು.
ನಗರದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಪುರ ಬಡಾವಣೆಯ ಶ್ರೀ ರಾಘವೇಂದ್ರ ಮಠದ ಬಳಿ ವಾಸವಿರುವ ಸುರೇಶ್ ಅವರು ಅವರ ವಾಸದ ಮನೆಗೆ 2017ರ ಜೂನ್ 9ರಂದು ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ತಮಿಳುನಾಡಿಗೆ ತೆರಳಿದ್ದರು.
2017ರ ಅಕ್ಟೋಬರ್ 9ರಂದು ಮಧ್ಯರಾತ್ರಿ 1.30ರ ಸಮಯದಲ್ಲಿ ಸುರೇಶ ಅಲಿಯಾಸ್ ಸುರೇಶ ಕುಮಾರ ಅಲಿಯಾಸ್ ಸೂರಿ ಮತ್ತು ಕರ್ಪಸ್ವಾಮಿ ಕಬ್ಬಿಣದ ರಾಡಿನಿಂದ ಬಾಗಿಲನ್ನು ಮೀಟಿ ತೆಗೆದು ಒಳಹೋಗಿದ್ದಾರೆ. ರೂಮಿನಲ್ಲಿದ್ದ ಬೀರುವಿನ ಬಾಗಿಲನ್ನು ರಾಡಿನಿಂದ ಮೀಟಿ ತೆಗೆದು ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದಿದ್ದರಿಂದ ಮನೆಯಿಂದ ಆರೋಪಿಗಳು ಹೊರಬಂದು ಮಾರ್ಗಮಧ್ಯ ಕಬ್ಬಿಣದ ರಾಡನ್ನು ಬಿಸಾಡಿ ಹೋಗಿದ್ದರು.
ಬಾಗಿಲನ್ನು ಮೀಟಿ ಕಳ್ಳತನಕ್ಕೆ ಯತ್ನಿಸಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಸುರೇಶ ಅಲಿಯಾಸ್ ಸುರೇಶಕುಮಾರ ಅಲಿಯಾಸ್ ಸೂರಿ ಮತ್ತು ಕರ್ಪಸ್ವಾಮಿ ಅವರಿಗೆ 10 ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ 1000 ರೂ. ದಂಡ ವಿಧಿಸಿ ಪ್ರಧಾನ ಸಿಜೆ ಮತ್ತು ಸಿಜೆಎಂ (ಹಿ.ಶ್ರೇ) ನ್ಯಾಯಾಧೀಶರಾದ ಎಲ್.ಜೆ. ಭವಾನಿ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭೀಯೋಜಕರಾದ ಜಯಶ್ರೀ ಎಸ್ ಶೆಣೈ ಅವರು ವಾದ ಮಂಡಿಸಿದ್ದರು.
ಏ. 10ರಂದು ಬಸವೇಶ್ವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
ಚಾಮರಾಜನಗರ, ಏ. 09 - ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಸಂಬಂಧ ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 10 ರಂದು ಮಧ್ಯಾಹ್ನ 12 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ.ಸಮುದಾಯ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು ಸಭೆಗೆ ಹಾಜರಾಗಿ ಬಸವೇಶ್ವರ ಜಯಂತಿ ಆಚರಣೆ ಸಂಬಂಧ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿ ಪ್ರಕಟಣೆ ಕೋರಿದೆ.
No comments:
Post a Comment