ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018-
ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಅವಕಾಶ
ಚಾಮರಾಜನಗರ, ಏ. 26 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನೇಮಕವಾಗಿರುವ ಚುನಾವಣಾ ಸಾಮಾನ್ಯ ವೀಕ್ಷಕರನ್ನು ಸಾರ್ವಜನಿಕರು ಭೇಟಿ ಮಾಡಲು ಅವಕಾಶವಿದ್ದು ಭೇಟಿಯ ಸ್ಥಳ ಹಾಗೂ ಸಮಯವನ್ನು ನಿಗದಿ ಮಾಡಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ವಜೀರ್ ಸಿಂಗ್ ಗೋಯಟ್ ಅವರನ್ನು ಕೊಳ್ಳೇಗಾಲ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು. ಇವರ ಮೊಬೈಲ್ ಸಂಖ್ಯೆ 9480580400 ಆಗಿರುತ್ತದೆ.ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಲಕ್ಷ್ಮಿನಾರಾಯಣ ಸೋನಿ ಅವರನ್ನು ಕೊಳ್ಳೇಗಾಲ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ. ಇವರ ಮೊಬೈಲ್ ಸಂಖ್ಯೆ 9483287292 ಆಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಮನೋಜ್ ಕುಮಾರ್ ಅವರನ್ನು ಚಾಮರಾಜನಗರÀ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸಂಜೆ 4 ರಿಂದ 5 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ. ಇವರ ಮೊಬೈಲ್ ಸಂಖ್ಯೆ 9483647292 ಆಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಅನಿಲ್ ಕುಮಾರ್ ಅವರನ್ನು ಗುಂಡ್ಲುಪೇಟೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ ಇವರ ಮೊಬೈಲ್ ಸಂಖ್ಯೆ 9483747292, 09451597287 ಆಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕರಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಅಂಚೆ ಮತಪತ್ರ ವಿತರಣೆಗೆ ನೋಡಲ್ ಅಧಿಕಾರಿಗಳ ನೇಮಕ
ಚಾಮರಾಜನಗರ, ಏ. 26 - ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತಪತ್ರ ಸೌಲಭ್ಯ ಕೇಂದ್ರ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಅಂಚೆ ಮತಪತ್ರಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಾಗಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಮಹೇಶ್ ಕುಮಾರ್ ಎಸ್.ಎಲ್. ಅವರನ್ನು ನೇಮಕ ಮಾಡಲಾಗಿದ್ದು ಅವರ ಮೊಬೈಲ್ ಸಂಖ್ಯೆ 9945629106 ಆಗಿದೆ.ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ನೋಡಲ್ ಅಧಿಕಾರಿಯಾಗಿ ಶ್ರೀಕಾಂತ್ ಮಂಜುನಾಥ ಹೆಗಡೆ ಅವರನ್ನು ನೇಮಕ ಮಾಡಿದ್ದು ಅವರ ಮೊಬೈಲ್ ಸಂಖ್ಯೆ 9901220861 ಆಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ನೋಡಲ್ ಅಧಿಕಾರಿಯಾಗಿ ಸುಂದರ್ ಅವರು ನೇಮಕಗೊಂಡಿದ್ದು ಅವರ ಮೊಬೈಲ್ ಸಂಖ್ಯೆ 9972720386 ಆಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನೋಡಲ್ ಅಧಿಕಾರಿಯಾಗಿ ಅಜೇತರವಿ ಅವರನ್ನು ನೇಮಕ ಮಾಡಲಾಗಿದ್ದು ಅವರ ಮೊಬೈಲ್ ಸಂಖ್ಯೆ 9448401941 ಆಗಿದೆ.
ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತಪತ್ರ ಸೌಲಭ್ಯ ಕೇಂದ್ರ ತೆರೆಯಲಾಗಿದ್ದು ನಮೂನೆ 12ರನ್ನು ಚುನಾವಣಾ ಕರ್ತವ್ಯನಿರತ ಅಧಿಕಾರಿ ಸಿಬ್ಬಂದಿಗಳು ಪಡೆದುಕೊಳ್ಳಬೇಕು. ತಮ್ಮ ವಿಧಾನಸಭಾ ಕ್ಷೇತ್ರದ ಭಾಗದ ಸಂಖ್ಯೆ, ಕ್ರಮ ಸಂಖ್ಯೆಯನ್ನು ಪಡೆಯಬಹುದು. ಅಲ್ಲದೆ 9731979899 ನಂಬರಿಗೆ ಏಂಇPIಅ(sಠಿಚಿಛಿe) ಮತದಾರರ ಗುರುತಿನ ಚೀಟಿಯ ಸಂಖ್ಯೆ (ಎಪಿಕ್) ನಮೂದಿಸಿ ಎಸ್ ಎಂ ಎಸ್ ಮಾಡಿಯೂ ಮಾಹಿತಿ ಪಡೆಯಬಹುದು.
ಇಂಟರ್‍ನೆಟ್ ಮೂಲಕ hಣಣಠಿ://eಟeಛಿಣoಡಿoಟseಚಿಡಿಛಿh.iಟಿ ಟೈಪ್ ಮಾಡಿ seಚಿಡಿಛಿh bಥಿ ಇPIಅ ಓumbeಡಿ ಔಠಿಣioಟಿ ಅಟiಛಿಞ ಮಾಡಿಯೂ ಮಾಹಿತಿ ಪಡೆಯಬಹುದು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರು, ಜಿಲ್ಲಾ ಪೊಲೀಸ್ ವೀಕ್ಷಕರ ನೇಮಕ
ಚಾಮರಾಜನಗರ, ಏ. 26 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಜಿಲ್ಲೆಗೆ ಓರ್ವ ಪೊಲೀಸ್ ವೀಕ್ಷಕರನ್ನು ಭಾರತ ಚುನಾವಣಾ ಆಯೋಗವು ನೇಮಕ ಮಾಡಿದೆ.ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ವಜೀರ್ ಸಿಂಗ್ ಗೋಯಟ್ ಅವರು ನೇಮಕವಾಗಿದ್ದು, ಇವರು ಮೊಬೈಲ್ ಸಂಖ್ಯೆ 9480580400 ಆಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಲಕ್ಷ್ಮಿನಾರಾಯಣ ಸೋನಿಯವರು ನೇಮಕವಾಗಿದ್ದು ಇವರ ಮೊಬೈಲ್ ಸಂಖ್ಯೆ 9483287292 ಆಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಮನೋಜ್ ಕುಮಾರ್ ಅವರು ನೇಮಕವಾಗಿದ್ದು, ಇವರ ಮೊಬೈಲ್ ಸಂಖ್ಯೆ 9483647292 ಆಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಅನಿಲ್ ಕುಮಾರ್ ಅವರು ನೇಮಕವಾಗಿದ್ದು ಇವರ ಮೊಬೈಲ್ ಸಂಖ್ಯೆ 9483747292, 09451597287 ಆಗಿದೆ. ಜಿಲ್ಲಾ ಪೊಲೀಸ್ ವೀಕ್ಷಕರಾಗಿ ಡಾ. ರವೀಂದ್ರ ಶಿಶ್ವೆ ಅವರು ನೇಮಕವಾಗಿದ್ದು ಇವರ ಮೊಬೈಲ್ ಸಂಖ್ಯೆ 08082115566 ಆಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
No comments:
Post a Comment